ಅನುದಿನದ ಮನ್ನಾ
ದಿನ 14:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ.
Sunday, 24th of December 2023
3
2
424
Categories :
ಉಪವಾಸ ಮತ್ತು ಪ್ರಾರ್ಥನೆ (Fasting and prayer)
ನನಗೆ ದಯೆಯು ದೊರಕುವುದು.
"ಅದಲ್ಲದೆ ಈ ನನ್ನ ಜನರಿಗೆ ಐಗುಪ್ತ್ಯರ ದಯೆ ದೊರಕುವಂತೆ ಮಾಡುವೆನು; ಆದದರಿಂದ ನೀವು ಹೊರಡುವಾಗ ಬರಿಗೈಲಿ ಹೋಗುವದಿಲ್ಲ."(ವಿಮೋಚನಕಾಂಡ 3:21).
ದಯೆ ಎಂಬುದು ದೇವರು ಮನುಷ್ಯನಿಗೆ ಅಥವಾ ಮನುಷ್ಯನು ಮನುಷ್ಯನಿಗೆ ತೋರಿಸುವ ಕರುಣೆಯ ಪ್ರಕ್ರಿಯೆಯಾಗಿದೆ. ಪ್ರತಿಯೊಬ್ಬ ಮನುಷ್ಯನಿಗೂ ಒಳಿತು ಮತ್ತು ಕರುಣೆಯ ಅಗತ್ಯವಿದೆ. ಮನುಷ್ಯರು ಆಶೀರ್ವಾದದ ವಾಹಕರಾಗಿದ್ದಾರೆ. ದೇವರ ದೃಷ್ಟಿಯಲ್ಲಿ ಒಬ್ಬರಿಗೆ ದಯೆ ದೊರಕಿದ್ದಾದರೆ ಮನುಷ್ಯರೂ ಸಹ ಅವರಿಗೆ ದಯೆ ತೋರಿಸಲು ಆರಂಭಿಸುತ್ತಾರೆ. "ನಾನು ಈ ಜನರಿಗೆ ದಯೆ ತೋರಿಸುವವರಾಗಿದ್ದೇನೆ" ಎಂದು ದೇವರ ಆಡಿರುವಂತಹ ವಾಕ್ಯವು ದೇವರೇ ದಯೆಯನ್ನು ತೋರಿಸುವವನು ಎಂಬುದನ್ನು ಪ್ರಕಟ ಮಾಡುತ್ತದೆ.
ಈ ದಿನ ನೀವು ದೇವರ ದಯೆಗಾಗಿ ಮೊರೆ ಇಡಬೇಕೆಂದು ನಾನು ಬಯಸುತ್ತೇನೆ. ದೇವರು ನಿಮಗೆ ದಯೆ ತೋರಿಸಬೇಕೆಂದು ಅಂದು ಕೊಂಡರೆ ನಿಮಗೆ ದಯೆ ತೋರಿಸಲು ದೇವರು ಯಾರನ್ನು ಬೇಕಾದರೂ ಸಿದ್ಧಗೊಳಿಸಬಹುದು. ಅವರು ನಿಮಗೆ ಪರಿಚಯಸ್ಥರು ಅಥವಾ ನಿಮ್ಮ ಸ್ನೇಹಿತರಷ್ಟೇ ಆಗಿರಬೇಕು ಎಂದೇನಿಲ್ಲ. ನಿಮಗೆ ಪರಿಚಯವೇ ಇಲ್ಲದವರನ್ನು ಅಷ್ಟೇ ಏಕೆ ನಿಮ್ಮ ವೈರಿಗಳನ್ನೇ ನಿಮಗೆ ದಯ ತೋರಿಸುವಂತೆ ಮಾಡಲುದೇವರು ಶಕ್ತನು. ನೀವು ದಯೆಯನ್ನು ಹೊಂದುಕೊಳ್ಳುವಿರಿ ಎಂದು ಯೇಸು ನಾಮದಲ್ಲಿ ನಿಮ್ಮ ಜೀವಿತದ ಮೇಲೆ ನಾನು ಅಜ್ಞಾಪಿಸುತ್ತೇನೆ.
ಇಂದು ಅನೇಕರ ಜೀವಿತವು ಆತ್ಮಿಕವಾಗಿಯೂ ಭೌತಿಕವಾಗಿಯೂ ದೋಚಲ್ಪಟ್ಟು ಅಥವಾ ಮೋಸ ಹೋಗಿ ಬರಿದಾಗಿಬಿಟ್ಟಿದೆ.
ಇಸ್ರೇಯೇಲರು ಬರಿ ಕೈಯಲ್ಲಿಯೇ ಐಗುಪ್ತವನ್ನುಬಿಟ್ಟು ಬರಬಹುದಿತ್ತು ಆದರೆ ದೇವರ ದಯೆ ಅವರಿಗೆ ಸಿಕ್ಕಿದ್ದರಿಂದ ಅವರು ಸಂಪತ್ ಭರಿತರಾಗಿ ಮಹಿಮೆಯಿಂದ ಕೂಡಿದವರಾಗಿ ಆಸ್ತಿವಂತರಾಗಿ ಐಗುಪ್ತದಿಂದ ಹೊರಬಂದರು.
ಮನುಷ್ಯನ ಜೀವಿತದಲ್ಲಿ ದೇವರ ದಯೆ ಮಾಡಬಹುದಾದ ಕಾರ್ಯವೇನು?
1. ದೇವರ ದಯೆಯು ನಿಮ್ಮ ಮೇಲೆ ಉಂಟಾದರೆ ನೀವು ಜನರ ಗಮನ ಸೆಳೆಯುತ್ತೀರಿ.
ದೇವರ ದಯೆಯು ನಿಮ್ಮ ಬಗ್ಗೆ ಅವರಿಗೆ ಧನಾತ್ಮಕ ಭಾವನೆ ಮೂಡಿಸುವಂತೆ ಅವರಲ್ಲಿ ಕಾರ್ಯವನ್ನು ಮಾಡುತ್ತದೆ.
"ರೂತಳು ಅವನಿಗೆ ಸಾಷ್ಟಾಂಗನಮಸ್ಕಾರಮಾಡಿ - ಪರದೇಶಿಯಾದ ನನ್ನಲ್ಲಿ ಇಷ್ಟು ಕಟಾಕ್ಷವೇಕೆ ಅನ್ನಲು"(ರೂತಳು 2:10).
2. ದೇವರ ದಯೆಯು ಅಭಿವೃದ್ದಿಗೆ ಭರವಸೆಯಾಗಿದೆ.
"ಅವರು ಹಿಗ್ಗುವ ಬಲವು ನೀನೇ. ನಿನ್ನ ಕರುಣಾಕಟಾಕ್ಷದಿಂದ ನಮ್ಮ ಕೊಂಬು ಎತ್ತಲ್ಪಟ್ಟಿರುವದು."(ಕೀರ್ತನೆಗಳು 89:17).
3. ನಮಗೆ ಸುರಕ್ಷತೆಯ ಅವಶ್ಯಕತೆ ಇದೆ ಎಂದು ನಾವು ಸಹಾಯಕ್ಕಾಗಿ ಮೊರೆ ಇಡುವಾಗಲೆಲ್ಲ ದೇವರ ದಯೆಯು ನಮಗೆ ಸಹಾಯವನ್ನು ಒದಗಿಸುತ್ತದೆ. ಎಷ್ಟು ಹೆಚ್ಚು ಹೆಚ್ಚಾದ ದೈವಿಕ ದಯೆಯೋ ಅಷ್ಟೇ ಹೆಚ್ಚು ಹೆಚ್ಚಾದ ಸಹಾಯವು ನಮಗೆ ದೊರಕುತ್ತದೆ.
"ಯೆಹೋವನೇ, ನನ್ನನ್ನು ನೆನಪುಮಾಡಿಕೊಂಡು ನಿನ್ನ ಪ್ರಜೆಗೆ ತೋರಿಸುವ ದಯೆಯನ್ನು ನನಗೂ ತೋರಿಸು. ನನ್ನನ್ನು ರಕ್ಷಿಸಲಿಕ್ಕೆ ಬಾ,"(ಕೀರ್ತನೆಗಳು 106:4).
4. ವೈವಾಹಿಕ ಸಂಬಂಧಗಳನ್ನು ಸುಭದ್ರಗೊಳಿಸಿಕೊಳ್ಳಲು ದೇವರ ದಯೆಯ ಅಗತ್ಯವಿದೆ.
ನಿಮಗೆ ಉತ್ತಮವಾದ ಬಾಳ ಸಂಗಾತಿಯು ದೊರಕುವಂಥದ್ದು ದೇವರ ದಯೆಯಿಂದಲೇ ಹೊರತು ನಿಮ್ಮ ಅಂದ ಚಂದ ಐಶ್ವರ್ಯ ಅಥವಾ ನಿಮ್ಮ ಶಾರೀರಿಕ ಹೊರತೋರಿಕೆಯಿಂದಲ್ಲ.
"ಪತ್ನೀಲಾಭವು ರತ್ನಲಾಭ, ಅದು ಯೆಹೋವನ ಅನುಗ್ರಹವೇ."(ಜ್ಞಾನೋಕ್ತಿಗಳು 18:22).
5. ದೇವರ ದಯೆ ಇದ್ದರೆ ಮಾತ್ರ ನೀವು ದೇವರಲ್ಲಿ ಏನನ್ನಾದರೂ ಪ್ರಾರ್ಥಿಸಬಹುದು.
ದೇವರ ದಯೆಯೇ ನಿಮ್ಮ ಪ್ರಾರ್ಥನೆಗಳಿಗೆ ಉತ್ತರವನ್ನು ಅನುಗ್ರಹಿಸುವಂತದ್ದು. ದೇವರ ದಯೆಯೂ ಇಲ್ಲವಾದರೆ ನಿಮ್ಮ ವಿಜ್ಞಾಪನೆಗಳಿಗೆ ಉತ್ತರಗಳು ಅನುಗ್ರಹವಾಗುವುದಿಲ್ಲ. ಪ್ರಾರ್ಥನೆಯಲ್ಲಿ ದೇವರ ದಯೆಗೆ ಬಹುದೊಡ್ಡ ಮಹತ್ವವಿದೆ.
"ಅವನು ಆತನಿಗೆ - ಸ್ವಾಮೀ, ದಯವಿರಲಿ; ನನ್ನೊಂದಿಗೆ ಮಾತಾಡುತ್ತಿರುವ ತಾವು ಸ್ವಾವಿುಯವರೇ ಆಗಿದ್ದೀರೆಂಬದಕ್ಕೆ ನನಗೊಂದು ಗುರುತನ್ನು ಅನುಗ್ರಹಿಸಬೇಕು."(ನ್ಯಾಯಸ್ಥಾಪಕರು 6:17).
6. ದೇವರ ದಯೆಯೇ ನಿಮ್ಮನ್ನು ದೇವರ ಕೃಪೆಯಲ್ಲಿ ಆನಂದಿಸುವಂತೆ ಮಾಡುತ್ತದೆ.
ನೀವು ದೇವರ ಕೃಪೆ ಕರುಣೆ ದಯೆ ಮತ್ತು ದೇವರ ಪ್ರೀತಿ ಹೇಗೆ ಕಾರ್ಯನಿರ್ವಹಿಸುತ್ತದೆ ಎಂದು ಅರಿತುಕೊಂಡಿದ್ದರೆ ಮಾತ್ರ ನೀವು ದೇವರಲ್ಲಿರುವ ಎಲ್ಲಾ ಒಳಿತನ್ನು ಆನಂದಿಸಬಹುದು. ದೇವರ ದಯೆ ಇಲ್ಲದೆ ಕರುಣೆಯು ನಿಮಗೆ ಲಭಿಸುವುದಿಲ್ಲ. ಮತ್ತು ಕರುಣೆಯ ಅನುಪಸ್ಥಿತಿಯು ನಿಮ್ಮನ್ನು ನ್ಯಾಯ ತೀರ್ಪಿಗೆ ಗುರಿ ಮಾಡುತ್ತದೆ. ಕರುಣೆಯು ನ್ಯಾಯ ತೀರ್ಪನ್ನು ಗೆದ್ದು ಹಿಗ್ಗುತ್ತದೆ.
"ವಿದೇಶೀಯರು ನಿನ್ನ ಪೌಳಿಗೋಡೆಗಳನ್ನು ಕಟ್ಟುವರು, ಅವರ ಅರಸರು ನಿನ್ನನ್ನು ಸೇವಿಸುವರು; ನನ್ನ ಕೋಪದಿಂದ ನಿನ್ನನ್ನು ಹೊಡೆದುಬಿಟ್ಟು ನನ್ನ ಕೃಪೆಯಿಂದ ನಿನ್ನನ್ನು ಕರುಣಿಸಿದ್ದೇನಷ್ಟೆ."(ಯೆಶಾಯ 60:10)
ದೇವರ ದಯೆಯನ್ನು ಆನಂದಿಸಿದ ಸತ್ಯವೇದ ಆಧಾರಿತ ಉದಾಹರಣೆಗಳು.
1. ನಮ್ಮ ಕರ್ತನಾದ ಯೇಸು.
ಲೂಕ 2:52ರ ಪ್ರಕಾರ ಜ್ಞಾನದಲ್ಲಿಯೂ ದಯೆಯಲ್ಲಿಯೂ ಆತ ಬೆಳವಣಿಗೆಯನ್ನು ಹೊಂದಿದ್ದನ್ನು ನಾವು ಸ್ಪಷ್ಟವಾಗಿ ಕಾಣಬಹುದು. ಭೂಮಿಯ ಮೇಲೆ ತನ್ನ ಉದ್ದೇಶವನ್ನು ನೆರವೇರಿಸಲು ನಮ್ಮ ಕರ್ತನಾದ ಯೇಸುವಿಗೇ ದಯೆಯ ಅಗತ್ಯವಿದ್ದರೆ, ಅದರ ಅಗತ್ಯ ನಮಗಿಲ್ಲ ಎನ್ನುವುದಕ್ಕೆ ಇನ್ನು ನೀವ್ಯಾರು? ಮನುಷ್ಯರ ಜೀವನಕ್ಕೆ ದಯೆಯು ಅತ್ಯಾವಶ್ಯಕ. ಇದುವೇ ಮನುಷ್ಯನ ಜೀವಿತವನ್ನು ಸುಲಭವಾಗಿ ನಡೆಸಲು ಸಾಧ್ಯ ಮಾಡುವಂತದ್ದು.
2. ಯೇಸುವಿನ ತಾಯಿಯಾದ ಮರಿಯಳು.
ದೇವರ ದಯೆಯಿಂದಲೇ ಮರಿಯಳು ಆರಿಸಲ್ಪಟ್ಟವಳಾದಳು. ಆ ಕಾಲದಲ್ಲಿ ಆ ಪಟ್ಟಣದಲ್ಲಿ ಅನೇಕ ಮಂದಿ ಕನ್ಯೆಯರು ಇದ್ದರು. ಆದರೂ ಮರಿಯಳೇ ಯೇಸುವಿನ ತಾಯಿಯಾಗುವಂತೆ ಆಯ್ಕೆಮಾಡಿದ್ದು ದೇವರ ದಯೆ ಅವಳಿಗೆ ದೊರಕಿದ್ದರಿಂದಲೇ. ಆ ಕನ್ಯೆಯರು ಸಹ ದೇವರ ದಯೆ ಹೊಂದಿದವರೇ ಆಗಿದ್ದರು ಆದರೂ ಶಾಸ್ತ್ರವು ಮರಿಯಳನ್ನು ದೇವರಿಂದ ಅಧಿಕವಾದ ದಯೆ ಹೊಂದಿದವಳೇ ಎಂದು ಕರೆಯದಿದೆ. (ಲೂಕ 1:28,30). ನೀವು ಸಹ ಯೇಸು ನಾಮದಲ್ಲಿ ದೇವರ ಅಧಿಕವಾದ ದಯೆಗೆ ಪಾತ್ರರಾಗುವಿರಿ.
ದೇವರ ದಯೆಯನ್ನು ಆನಂದಿಸಲು ಏನು ಮಾಡಬೇಕು?
1. ದೇವರ ವಾಕ್ಯವನ್ನು ಕೈಗೊಂಡು ನಡೆಯಿರಿ.
ದೇವರ ವಾಕ್ಯಕ್ಕೆ ನೀವು ಎಷ್ಟು ವಿಧೇಯರಾಗಿ ನಡೆದುಕೊಳ್ಳುತ್ತಿದ್ದೀರೋ ಅದೇ ನೀವು ದೇವರ ದಯೆಯನ್ನು ಎಷ್ಟರಮಟ್ಟಿಗೆ ಆನಂದಿಸುವಿರಿ ಎಂಬುದನ್ನು ನಿರ್ಧರಿಸುತ್ತದೆ.
"ಕಂದಾ, ನನ್ನ ಉಪದೇಶವನ್ನು ಮರೆಯಬೇಡ, ನನ್ನ ಆಜ್ಞೆಗಳನ್ನು ಮನಃಪೂರ್ವಕವಾಗಿ ನಡಿಸು. [2] ಅವು ನಿನ್ನ ದಿನಗಳನ್ನು ಹೆಚ್ಚಿಸಿ ನಿನ್ನ ಆಯುಷ್ಯವನ್ನು ವೃದ್ಧಿಗೊಳಿಸಿ ನಿನಗೆ ಸುಕ್ಷೇಮವನ್ನುಂಟುಮಾಡುವವು. [3] ಪ್ರೀತಿಸತ್ಯತೆಗಳು ನಿನ್ನನ್ನು ಬಿಡದಿರಲಿ, ಅವುಗಳನ್ನು ನಿನ್ನ ಕೊರಳಿಗೆ ಕಟ್ಟು, ನಿನ್ನ ಹೃದಯದ ಹಲಗೆಯಲ್ಲಿ ಅವುಗಳನ್ನು ಬರೆ; [4] ಇದರಿಂದ ನೀನು ದೇವರ ಮತ್ತು ಮನುಷ್ಯರ ದಯೆಯನ್ನೂ ಸಮ್ಮತಿಯನ್ನೂ ಪಡೆದುಕೊಳ್ಳುವಿ."
(ಜ್ಞಾನೋಕ್ತಿಗಳು 3:1-4).
2. ದೀನತೆಯಿಂದ ಪ್ರವರ್ತಿಸಿ.
ದೇವರ ಕೃಪೆಗೆ ಇರುವ ಇನ್ನೊಂದು ಹೆಸರೇ 'ದಯೆ'. ದೀನತ್ವವು ದೇವರ ದಯೆಗೆ ಪಾತ್ರರಾಗುವಂತೆ ಮಾಡುತ್ತದೆ. ಅಹಂಕಾರಿಯಾದ ಮನುಷ್ಯನು ನಾನು ಸರ್ವ ಸ್ವತಂತ್ರನು ಮತ್ತು ಸಾಮರ್ಥ್ಯ ಉಳ್ಳವನಾದರಿಂದ ನಾನು ವಿಜಯ ಖ್ಯಾತಿ ಮತ್ತು ಸಂಪತ್ತು ಹೊಂದಿದ್ದೇನೆ ಎಂದು ನೆಬುಕಾದ್ನೇಚ್ಚರನ ತರಹದ ಮನುಷ್ಯರು ತಿಳಿದುಕೊಂಡು ಇವೆಲ್ಲ ದೇವರ ದಯೆಯಿಂದ ದೊರಕಿದ್ದು ಎಂಬುದನ್ನು ಮರೆತುಬಿಡುತ್ತಾರೆ. ಎಚ್ಚರ ಅಹಂಕಾರವು ದೇವರ ದಯೆಯಿಂದ ನಿಮ್ಮನ್ನು ವಂಚಿಸುತ್ತದೆ.
"ಯಾರು ಧರ್ಮವನ್ನು ತಿರಸ್ಕರಿಸುವರೋ ಅವರನ್ನು ಆತನು ತಿರಸ್ಕರಿಸುವನು. ದೀನರಿಗಾದರೋ ಕೃಪೆಯನ್ನು ಅನುಗ್ರಹಿಸುವನು.(ಜ್ಞಾನೋಕ್ತಿಗಳು 3:34).
3. ಇತರರಿಗೆ ಒಳ್ಳೆಯದನ್ನೇ ಮಾಡಿರಿ.
ನಿಮ್ಮ ಕರುಣೆಯು ಕೇವಲ ನಿಮ್ಮನ್ನು ಪ್ರೀತಿಸುವವರಿಗೆ ಅಥವಾ ನಿಮಗೆ ಒಳ್ಳೆಯದನ್ನು ಮಾಡುವವರಿಗೆ ಮಾತ್ರ ಸೀಮಿತವಾಗಿರಬಾರದು. ನೀವು ನಿಮ್ಮ ಪರಲೋಕದಲ್ಲಿರುವ ತಂದೆಯ ಹಾಗೆ ಪರಿಪೂರ್ಣರಾಗಿ ಇರಬೇಕು. ನಿಮ್ಮ ಪ್ರೀತಿಯು ಬೇಷರತ್ತಾಗಿ ಇರಬೇಕು.
"ಯೆಹೋವನು ಒಳ್ಳೆಯವನಿಗೆ ದಯೆಮಾಡುವನು; ಕುಯುಕ್ತಿಯುಳ್ಳವನನ್ನು ಕೆಟ್ಟವನೆಂದು ನಿರ್ಣಯಿಸುವನು."(ಜ್ಞಾನೋಕ್ತಿಗಳು 12:2).
"ನಿನ್ನ ನೆರೆಯವನನ್ನು ಪ್ರೀತಿಸಿ ನಿನ್ನ ವೈರಿಯನ್ನು ಹಗೆಮಾಡಬೇಕೆಂದು ಹೇಳಿಯದೆ ಎಂಬದಾಗಿ ಕೇಳಿದ್ದೀರಷ್ಟೆ. 44 ಆದರೆ ನಾನು ನಿಮಗೆ ಹೇಳುವದೇನಂದರೆ - ನಿಮ್ಮ ವೈರಿಗಳನ್ನು ಪ್ರೀತಿಸಿರಿ; ನಿಮ್ಮನ್ನು ಹಿಂಸೆ ಪಡಿಸುವವರಿಗೋಸ್ಕರ ದೇವರನ್ನು ಪ್ರಾರ್ಥಿಸಿರಿ. 45 ಹೀಗೆ ಮಾಡಿದರೆ, ನೀವು ಪರಲೋಕದಲ್ಲಿರುವ ನಿಮ್ಮ ತಂದೆಗೆ ಮಕ್ಕಳಾಗುವಿರಿ. ಆತನು ಕೆಟ್ಟವರ ಮೇಲೆಯೂ ಒಳ್ಳೆಯವರ ಮೇಲೆಯೂ ತನ್ನ ಸೂರ್ಯನು ಮೂಡುವಂತೆ ಮಾಡುತ್ತಾನೆ; ನೀತಿವಂತರ ಮೇಲೆಯೂ ಅನೀತಿವಂತರ ಮೇಲೆಯೂ ಮಳೆಸುರಿಸುತ್ತಾನೆ. 46 ನಿಮಗೆ ಪ್ರೀತಿ ತೋರಿಸುವವರನ್ನೇ ನೀವು ಪ್ರೀತಿಸಿದರೆ ಫಲವೇನು? ಭ್ರಷ್ಟರೂ ಹಾಗೆ ಮಾಡುವದಿಲ್ಲವೇ. 47ನಿಮ್ಮ ಸಹೋದರರಿಗೆ ಮಾತ್ರ ನೀವು ಮರ್ಯಾದೆಕೊಟ್ಟರೆ ಏನು ಹೆಚ್ಚು ಮಾಡಿದ ಹಾಗಾಯಿತು? ಅನ್ಯಜನಗಳು ಸಹ ಹಾಗೆ ಮಾಡುವದಿಲ್ಲವೇ. 48ಆದದರಿಂದ ಪರಲೋಕದಲ್ಲಿರುವ ನಿಮ್ಮ ತಂದೆಯು ಯಾವ ದೋಷವೂ ಇಲ್ಲದವನಾಗಿರುವಂತೆ ನೀವೂ ದೋಷವಿಲ್ಲದವರಾಗಿರ್ರಿ."
(ಮತ್ತಾಯ 5:43-48)
4.ದೇವರ ದಯೆಗಾಗಿ ಪ್ರಾರ್ಥಿಸಬೇಕು.
ದೇವರ ದಯೆ ಎಂಬುದು ದೈವಿಕವಾದ ಆಶೀರ್ವಾದದ ಒಂದು ರೂಪವಾಗಿದೆ. ನೀವು ಯಾವ ಪರಿಸ್ಥಿತಿಯಲ್ಲಾದರೂ ಸರಿಯೇ ಅದಕ್ಕಾಗಿ ಪ್ರಾರ್ಥಿಸಬಹುದು ಮತ್ತು ದೇವರು ಎಲ್ಲಾ ಮನುಷ್ಯರ ನಡುವೆ ನಿಮಗೆ ದಯೆ ತೋರಿಸಲು ಇಚ್ಛೆ ಉಳ್ಳವನಾಗಿದ್ದಾನೆ.
ಹೆಚ್ಚಿನ ಅಧ್ಯಯನಕ್ಕಾಗಿ: ಆದಿಕಾಂಡ 6:8, 1ಸಮುವೆಲ16:2 ಅಪೋಸ್ತಲ ಕೃತ್ಯ 7:10
ಪ್ರಾರ್ಥನೆಗಳು
ಈ ಪ್ರಾರ್ಥನಾ ಕ್ಷಿಪಣಿಗಳು ನಿಮ್ಮ ಹೃದಯದ ಆಳದಿಂದ ಬರುವವರೆಗೂ ಪುನರಾವರ್ತನೆ ಮಾಡಿರಿ. ಆನಂತರವೇ ಮುಂದಿನ ಪ್ರಾರ್ಥನಾ ಅಂಶಕ್ಕೆ ಹೋಗಿರಿ. ಒಂದೊಂದು ಪ್ರಾರ್ಥನಾ ಅಂಶಗಳನ್ನು ವ್ಯಕ್ತಿಗತ ಮಾಡಿಕೊಂಡು ಪ್ರತಿಯೊಂದಕ್ಕೂ ಕನಿಷ್ಠ ಪಕ್ಷ ಒಂದೊಂದು ನಿಮಿಷವಾದರೂ ಮುಡಿಪಾಗಿಡಿ. ಮುಂದಿನ ಪ್ರಾರ್ಥನಾ ಅಂಶಕ್ಕೆ ಹೋಗುವ ಮೊದಲು ನಿಜವಾಗಿಯೂ ಹೃತ್ಪೂರ್ವಕವಾಗಿ ಪ್ರಾರ್ಥಿಸಿದ್ದೀರಿ ಎಂದು ಖಚಿತ ಪಡಿಸಿಕೊಳ್ಳಿ.
1. ತಂದೆಯೇ ನನ್ನ ಜೀವಿತದಲ್ಲಿ ನಿನ್ನ ದಯೆ ಹೆಚ್ಚಾಗುವಂತೆ ಯೇಸು ಸಹಾಯ ಮಾಡು. (ಕೀರ್ತನೆ 5:12).
2. ಕರ್ತನೆ ಎಲ್ಲಿ ನಾನು ನಿಂದೆಗೂ ಅವಮಾನಕ್ಕೂ ಒಳಗಾಗಿದ್ದೇನೋ ಅಲ್ಲಿಯೇ ನಾನು ಸನ್ಮಾನಿಸಲ್ಪಡುವಂತೆ ಯೇಸು ನಾಮದಲ್ಲಿ ನಿನ್ನ ದಯೆ ದೊರಕಲಿ. ( ಎಸ್ತೇರಳು 2:17)
3 ನಾನು ಈ ಕಾಲದಲ್ಲಿಯೇ ಈ ತಿಂಗಳಲ್ಲಿಯೇ ನಿನ್ನ ದಯೆಗೆ ಯೇಸು ನಾಮದಲ್ಲಿ ಪಾತ್ರನಾಗು/ಳಾಗುವೆನು(ಲೂಕ 1:30).
4. ತಂದೆಯೇ ಯೇಸು ನಾಮದಲ್ಲಿ ಮನುಷ್ಯರ ದಯೆಯು ನನಗೆ ದೊರಕುವಂತೆ ಸಹಾಯ ಮಾಡು(ಜ್ಞಾನೋಕ್ತಿ 3:4).
5. ತಂದೆಯೇ ಆರ್ಥಿಕವಾಗಿ ನನಗೆ ನಿನ್ನ ದಯೆ ದೊರಕಲಿ ಆಗ ನಾನು ಸಹ ಇತರರಿಗೆ ದಯೆ ತೋರಿಸಬಹುದು(2ಕೊರಿಯಂತೆ 9:8)
6. ನನ್ನ ಜೀವಿತದಲ್ಲಿರುವ ಎಲ್ಲಾ ನಿರ್ದಯ ಸ್ವಭಾವಗಳು ಯೇಸು ನಾಮದಲ್ಲಿ ನಿರ್ಮೂಲವಾಗಲಿ. (ಫಿಲಿಪ್ಪಿ 3:4-8).
7. ಕರ್ತನೆ ನಾವು ಕೈ ಹಾಕುವ ಕೆಲಸಗಳಲ್ಲಿ ಯೇಸು ನಾಮದಲ್ಲಿ ನಿನ್ನ ದಯೆ ಉಂಟಾಗಲಿ. (ಧರ್ಮೋಪದೇಶಕಾಂಡ 28:12).
8 ತಂದೆಯೇ, ಪೂರ್ವ ಪಶ್ಚಿಮ ದಕ್ಷಿಣ ಉತ್ತರಗಳಿಂದ ಯೇಸು ನಾಮದಲ್ಲಿ ನಿನ್ನ ದಯೆ ನನಗೆ ದೊರಕಲಿ. (ಯೆಶಾಯ 43:5-6).
9. ನನ್ನ ಜೀವಿತದಲ್ಲಿ ಮುಚ್ಚಲ್ಪಟ್ಟಿರುವ ಯಾವುದೇ ಅಭಿವೃದ್ಧಿಯ ಸಂಪತ್ತಿನ ಅವಕಾಶಗಳ ಬಾಗಿಲುಗಳು ಯೇಸು ನಾಮದಲ್ಲಿ ಬೆಂಕಿಯ ಮೂಲಕ ತೆರೆಯಲ್ಪಡಲಿ (ಪ್ರಕಟಣೆ 3:8).
10.ನಾನು ಉದ್ದಾರವಾಗದಂತೆ ತಡೆಯುತ್ತಿರುವ ಎಲ್ಲಾ ದುಷ್ಟ ಶಕ್ತಿಗಳ ಬಂಧನಗಳೆಲ್ಲಾ ಯೇಸುನಾಮದಲ್ಲಿ ಮುರಿಯಲ್ಪಡಲಿ. (ಲೂಕ 10:19).
11.ತಂದೆಯೇ, ನಿನ್ನ ದಯೆಯಿಂದ ವಿರೋಧವಾದ ರಾಜಾಜ್ಞೆಗಳನ್ನಾಗಲಿ -ಪ್ರಾಕಾರವನ್ನಾಗಲೀ ಹಾರುವೆನು. (ಕೀರ್ತನೆ 44:3)
12. ಕರ್ತನೇ, ನನ್ನನ್ನು ಮತ್ತು ಈ 40 ದಿನಗಳ ಉಪವಾಸ ಪ್ರಾರ್ಥನೆಯಲ್ಲಿ ಭಾಗಿಯಾಗಿರುವ ಪ್ರತಿಯೊಬ್ಬರನ್ನು ನಿನ್ನ ಮಹಿಮೆಗಾಗಿ ಯೇಸು ನಾಮದಲ್ಲಿ ಉಪಯೋಗಿಸಿ. (ಮತ್ತಾಯ17:21)
Join our WhatsApp Channel
Most Read
● ಸಾಲದಿಂದ ಹೊರಬನ್ನಿ : ಕೀಲಿಕೈ #2● ದಿನ 27:40 ದಿನಗಳ ಉಪವಾಸ ಪ್ರಾರ್ಥನೆ.
● ದಿನ 06:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ.
● ನಿಮ್ಮ ಸಮಸ್ಯೆಗಳು ಮತ್ತು ನಿಮ್ಮ ನಡವಳಿಕೆಗಳು
● ಕ್ರಿಸ್ತನಲ್ಲಿ ಅರಸರೂ ಯಾಜಕರೂ..
● ಅಂತ್ಯಕಾಲದ ಸಮಯದ 7 ಪ್ರಮುಖವಾದ ಪ್ರವಾದನಾ ಸೂಚನೆಗಳು: #2
● ನಿಮ್ಮ ಮನಸ್ಸಿಗೆ ಉಣಬಡಿಸಿರಿ
ಅನಿಸಿಕೆಗಳು