ಅನುದಿನದ ಮನ್ನಾ
1
0
45
ಬಿಡುಗಡೆ ಮತ್ತು ಪ್ರಬುದ್ಧತೆಯಲ್ಲಿ ನಡೆಯುವುದು
Friday, 9th of January 2026
Categories :
Offence
ಮನಸ್ತಾಪವು ಯಾವಾಗಲೂ ವಿಶ್ವಾಸಿಯ ಜೀವನದ ಮೇಲೆ ಪರಿಣಾಮ ಬೀರುತ್ತದೆ - ಆದರೆ ಮನಸ್ತಾಪವನ್ನು ಜಯಿಸುವುದು ಕೂಡ ಹಾಗೆಯೇ ಮಾಡುತ್ತದೆ. ಮನಸ್ತಾಪವನ್ನು ಉಳಿಯಲು ಬಿಟ್ಟಾಗ, ಅದು ಹೃದಯವನ್ನು ಕಠಿಣಗೊಳಿಸಿ ಆತ್ಮೀಕ ಬೆಳವಣಿಗೆಯನ್ನು ಕುಂಟಿತಗೊಳಿಸುತ್ತದೆ. ಆದರೆ ಮನಸ್ತಾಪವನ್ನು ಎದುರಿಸಿ ಅದನ್ನು ಬಿಟ್ಟು ಬಿಡುವಾಗ, ಅದು ಪ್ರಬುದ್ಧತೆ, ಶಾಂತಿ ಮತ್ತು ಬಿಡುಗಡೆಯನ್ನು ಉಂಟುಮಾಡುತ್ತದೆ.
ಬೇರೆ ರೀತಿಯಲ್ಲಿ ಹೇಳುವುದಾದರೆ, ನಾವು ಹಿಡಿದಿಟ್ಟುಕೊಳ್ಳುವ ಮನಸ್ತಾಪವನ್ನು ಅಥವಾ ನಾವು ಆಯ್ಕೆ ಮಾಡುವ ಸ್ವಸ್ಥತೆಯಿಂದಲೋ ನಾವು ರೂಪುಗೊಳ್ಳುತ್ತೇವೆ. ಮನಸ್ತಾಪವು ಬೆಳವಣಿಗೆಯನ್ನು ಮಿತಿಗೊಳಿಸುತ್ತದೆ, ಮನಸ್ತಾಪದಿಂದ ಬಿಡುಗಡೆ ಹೊಂದುವಂತದ್ದು ಆತ್ಮವನ್ನು ಪಕ್ವಗೊಳಿಸುತ್ತದೆ. ಈ ಪ್ರಯಾಣದ ಅಂತಿಮ ಗುರಿಯು ಕೇವಲ ಮನಸ್ತಾಪವನ್ನು ತಪ್ಪಿಸುವುದಲ್ಲ, ಆದರೆ ಅದು ಉಂಟಾದರೂ ಪ್ರೀತಿಯಿಂದ, ಕಲಿಯಲು ಮತ್ತು ಶಾಂತಿಯುತವಾಗಿ ಉಳಿಯಲು ಸಾಕಷ್ಟು ಬಲವಾದ ಹೃದಯವನ್ನು ಬೆಳೆಸುವುದಾಗಿರುತ್ತದೆ.
ದೇವರವಾಕ್ಯವು ಪ್ರಬುದ್ಧತೆಯನ್ನು ಪರಿಪೂರ್ಣವಾಗಿಯಲ್ಲ ಆದರೆ ಸ್ಥಿರತೆಯಾಗಿ ಪ್ರಸ್ತುತಪಡಿಸುತ್ತದೆ.
ನಮ್ಮ ಆತ್ಮೀಕ ಪರಿಪಕ್ವತೆಯು ಮನಸ್ತಾಪವಾದಾಗ ನಾವು ಹೇಗೆ ಪ್ರತಿಕ್ರಿಯಿಸುತ್ತೇವೆ ಎಂಬುದರ ಮೂಲಕ ಬಹಿರಂಗಗೊಳ್ಳುತ್ತದೆಯೋ ಹೊರತು ಎಲ್ಲವೂ ಚೆನ್ನಾಗಿ ನಡೆದಾಗ ಅಲ್ಲ.
ಚಕ್ರವನ್ನು ಮುರಿಯುವಂಥ ಆಯ್ಕೆ
ಮನಸ್ತಾಪದಿಂದಾದ ನೋವಿಂದ ಬಿಡುಗಡೆಹೊಂದುವಂತದ್ದು ಭಾವನೆಯಿಂದಲ್ಲ, ನಿರ್ಧಾರದಿಂದ ಪ್ರಾರಂಭವಾಗುತ್ತದೆ. ಕ್ಷಮಿಸುವಂತದ್ದು ಭಾವನೆಯಾಗುವ ಮೊದಲು ವಿಧೇಯತೆಯ ಕ್ರಿಯೆಯಾಗಿದೆ.
ಈ ಆಜ್ಞೆಯು ದೌರ್ಬಲ್ಯದ ಮೇಲೆ ಬೇರೂರಿಲ್ಲ, ಆದರೆ ಅಧಿಕಾರದಲ್ಲಿ ಬೇರೂರಿದೆ. ವಿಶ್ವಾಸಿಗಳು ಪ್ರತೀಕಾರ ತೀರಿಸಿಕೊಳ್ಳಲು ಅಥವಾ ಹಿಂದೆ ಸರಿಯುವುದನ್ನು ನಿರಾಕರಿಸಿದಾಗ, ಮನಸ್ತಾಪವು ಪೋಷಿಸುವ ಚಕ್ರವನ್ನು ಅವರು ಮುರಿಯುತ್ತಾರೆ. ಮನಸ್ತಾಪವು ವೃದ್ಧಿಯಾಗಲು ಪ್ರಯತ್ನಿಸುವುದನ್ನು ಪ್ರೀತಿಯು ನಾಶಪಡಿಸುತ್ತದೆ.
ಹೃದಯವನ್ನು ಸ್ವಸ್ಥ ಪಡಿಸುವ ಕಾರ್ಯವೇ ಹೊರತು ನೆನಪನ್ನು ಅಳಿಸಿಹಾಕುವ ಕ್ರಿಯೆಯಲ್ಲ.
ಅನೇಕ ಜನರು ಕ್ಷಮಿಸಿದ ನಂತರವೂ ತಮಗಾದ ನೋವನ್ನು ನೆನಪಿಸಿಕೊಳ್ಳುವುದರಿಂದ ಇದು ಗೊಂದಲಕ್ಕೆ ಕಾರಣವಾಗಬಹುದು. ಸ್ವಸ್ಥತೆಯು ಯಾವಾಗಲೂ ನೆನಪನ್ನು ಅಳಿಸುವುದಿಲ್ಲ - ಅದು ಮಾಡುವ ನಿಯಂತ್ರಣವನ್ನು ತೆಗೆದುಹಾಕುತ್ತದೆ. ಆಗ ಆ ಮನಸ್ಸಿನ ಗಾಯವು ಇನ್ನು
ಮುಂದೆ ಪ್ರತಿಕ್ರಿಯೆಗಳು, ನಿರ್ಧಾರಗಳು ಅಥವಾ ಸ್ವರವನ್ನು ನಿರ್ದೇಶಿಸುವುದಿಲ್ಲ.
ಗುಣಪಡಿಸುವುದು ದೇವರ ಕೆಲಸ, ಆದರೆ ಶರಣಾಗತಿ ನಮ್ಮದು. ಗುಣಮುಖವಾದ ಹೃದಯವು ಪುನರಾವರ್ತಿತ ಹಾನಿಗೆ ಗುರಿಯಾಗದೆ ಮೃದುವಾಗಿರುತ್ತದೆ. ಕರ್ತನಾದ ಯೇಸು ಕ್ಷಮಿಸಲಿಲ್ಲ -ಆದರೆ ಆತನು ತನ್ನನ್ನು ತಂದೆಗೆ ಒಪ್ಪಿಸಿಕೊಟ್ಟನು (ಯೋಹಾನ 2:24).
ಇದುವೇ ಪ್ರಬುದ್ಧತೆಯ ಭಂಗಿ: ತನ್ನನ್ನು ತಾನು ಸಮರ್ಥನೆ ಮಾಡಿಕೊಳ್ಳುವ ಅಗತ್ಯವನ್ನು ಬಿಟ್ಟುಬಿಟ್ಟು ಅತ್ಯುನ್ನತ ನಾದ ನ್ಯಾಯಾಧೀಶನಾಗಿರುವ ದೇವರ ಮೇಲೆ ಭರವಸದಿಂದಿರುವುದಾಗಿದೆ.
ಮೃದುತ್ವವು ಅಪಕ್ವತೆಯಲ್ಲ; ಅದು ಆತ್ಮ ಸಂಯಮದಲ್ಲಿರುವ ಶಕ್ತಿ.
ದೇವರ ರಾಜ್ಯವನ್ನು ಪ್ರತಿಬಿಂಬಿಸುವ ಜೀವನ ಮನಸ್ತಾಪವನ್ನು ಜಯಿಸಿದಾಗ,
ಶಾಂತಿ ಸ್ಥಿರವಾಗುತ್ತದೆ, ಸಂಬಂಧಗಳು ಆರೋಗ್ಯಕರವಾಗುತ್ತವೆ ಮತ್ತು ಬೆಳವಣಿಗೆ ತ್ವರಿತಗೊಳ್ಳುತ್ತದೆ. ಆಗ ವಿಶ್ವಾಸಿಯು ಇನ್ನು ಮುಂದೆ ಸುಲಭವಾಗಿ ಅಲುಗಾಡುವುದಿಲ್ಲ, ಸುಲಭವಾಗಿ ಕೋಪಗೊಳ್ಳುವುದಿಲ್ಲ ಅಥವಾ
ಸುಲಭವಾಗಿ ಹಿಂಜಾರುವುದಿಲ್ಲ.
ಮನಸ್ತಾಪದಿಂದ ಮುಕ್ತಿ ಹೊಂದುವುದು ಕೇವಲ ವೈಯಕ್ತಿಕ ವಿಷಯವಲ್ಲ - ಅದು ಒಂದು ಸಾಕ್ಷಿಯಾಗಿದೆ.
Bible Reading: Genesis 27-29

"ಗಟ್ಟಿಯಾದ ಆಹಾರವು ಪ್ರಾಯಸ್ಥರಿಗೋಸ್ಕರ ಅಂದರೆ ಜ್ಞಾನೇಂದ್ರಿಯಗಳನ್ನು ಸಾಧನೆಯಿಂದ ಶಿಕ್ಷಿಸಿಕೊಂಡು ಇದು ಒಳ್ಳೇದು ಅದು ಕೆಟ್ಟದ್ದು ಎಂಬ ಭೇದವನ್ನು ತಿಳಿದವರಿಗೋಸ್ಕರವಾಗಿದೆ." (ಇಬ್ರಿಯ 5:14).
ನಮ್ಮ ಆತ್ಮೀಕ ಪರಿಪಕ್ವತೆಯು ಮನಸ್ತಾಪವಾದಾಗ ನಾವು ಹೇಗೆ ಪ್ರತಿಕ್ರಿಯಿಸುತ್ತೇವೆ ಎಂಬುದರ ಮೂಲಕ ಬಹಿರಂಗಗೊಳ್ಳುತ್ತದೆಯೋ ಹೊರತು ಎಲ್ಲವೂ ಚೆನ್ನಾಗಿ ನಡೆದಾಗ ಅಲ್ಲ.
ಚಕ್ರವನ್ನು ಮುರಿಯುವಂಥ ಆಯ್ಕೆ
ಮನಸ್ತಾಪದಿಂದಾದ ನೋವಿಂದ ಬಿಡುಗಡೆಹೊಂದುವಂತದ್ದು ಭಾವನೆಯಿಂದಲ್ಲ, ನಿರ್ಧಾರದಿಂದ ಪ್ರಾರಂಭವಾಗುತ್ತದೆ. ಕ್ಷಮಿಸುವಂತದ್ದು ಭಾವನೆಯಾಗುವ ಮೊದಲು ವಿಧೇಯತೆಯ ಕ್ರಿಯೆಯಾಗಿದೆ.
"ಆದರೆ ನಾನು ನಿಮಗೆ ಹೇಳುವದೇನಂದರೆ - ನಿಮ್ಮ ವೈರಿಗಳನ್ನು ಪ್ರೀತಿಸಿರಿ; ನಿಮ್ಮನ್ನು ಹಿಂಸೆ ಪಡಿಸುವವರಿಗೋಸ್ಕರ ದೇವರನ್ನು ಪ್ರಾರ್ಥಿಸಿರಿ." ಎಂದು ಯೇಸು ಸ್ಪಷ್ಟವಾಗಿ ಬೋದಿಸಿದನು (ಮತ್ತಾಯ 5:44).
ಈ ಆಜ್ಞೆಯು ದೌರ್ಬಲ್ಯದ ಮೇಲೆ ಬೇರೂರಿಲ್ಲ, ಆದರೆ ಅಧಿಕಾರದಲ್ಲಿ ಬೇರೂರಿದೆ. ವಿಶ್ವಾಸಿಗಳು ಪ್ರತೀಕಾರ ತೀರಿಸಿಕೊಳ್ಳಲು ಅಥವಾ ಹಿಂದೆ ಸರಿಯುವುದನ್ನು ನಿರಾಕರಿಸಿದಾಗ, ಮನಸ್ತಾಪವು ಪೋಷಿಸುವ ಚಕ್ರವನ್ನು ಅವರು ಮುರಿಯುತ್ತಾರೆ. ಮನಸ್ತಾಪವು ವೃದ್ಧಿಯಾಗಲು ಪ್ರಯತ್ನಿಸುವುದನ್ನು ಪ್ರೀತಿಯು ನಾಶಪಡಿಸುತ್ತದೆ.
ಹೃದಯವನ್ನು ಸ್ವಸ್ಥ ಪಡಿಸುವ ಕಾರ್ಯವೇ ಹೊರತು ನೆನಪನ್ನು ಅಳಿಸಿಹಾಕುವ ಕ್ರಿಯೆಯಲ್ಲ.
ಅನೇಕ ಜನರು ಕ್ಷಮಿಸಿದ ನಂತರವೂ ತಮಗಾದ ನೋವನ್ನು ನೆನಪಿಸಿಕೊಳ್ಳುವುದರಿಂದ ಇದು ಗೊಂದಲಕ್ಕೆ ಕಾರಣವಾಗಬಹುದು. ಸ್ವಸ್ಥತೆಯು ಯಾವಾಗಲೂ ನೆನಪನ್ನು ಅಳಿಸುವುದಿಲ್ಲ - ಅದು ಮಾಡುವ ನಿಯಂತ್ರಣವನ್ನು ತೆಗೆದುಹಾಕುತ್ತದೆ. ಆಗ ಆ ಮನಸ್ಸಿನ ಗಾಯವು ಇನ್ನು
ಮುಂದೆ ಪ್ರತಿಕ್ರಿಯೆಗಳು, ನಿರ್ಧಾರಗಳು ಅಥವಾ ಸ್ವರವನ್ನು ನಿರ್ದೇಶಿಸುವುದಿಲ್ಲ.
"ಯೆಹೋವನೇ, ನನ್ನನ್ನು ಸ್ವಸ್ಥಪಡಿಸು, ಆಗ ಸ್ವಸ್ಥನೇ ಆಗುವೆನು; ನನ್ನನ್ನು ರಕ್ಷಿಸು, ಆಗ ರಕ್ಷಿತನೇ ಆಗುವೆನು; ನೀನೇ ನನಗೆ ಸ್ತುತ್ಯನು. " ಎಂದು ಪ್ರವಾದಿಯು ವಿವೇಕದಿಂದ ಪ್ರಾರ್ಥಿಸಿದ್ದಾನೆ(ಯೆರೆಮೀಯ 17:14).
ಗುಣಪಡಿಸುವುದು ದೇವರ ಕೆಲಸ, ಆದರೆ ಶರಣಾಗತಿ ನಮ್ಮದು. ಗುಣಮುಖವಾದ ಹೃದಯವು ಪುನರಾವರ್ತಿತ ಹಾನಿಗೆ ಗುರಿಯಾಗದೆ ಮೃದುವಾಗಿರುತ್ತದೆ. ಕರ್ತನಾದ ಯೇಸು ಕ್ಷಮಿಸಲಿಲ್ಲ -ಆದರೆ ಆತನು ತನ್ನನ್ನು ತಂದೆಗೆ ಒಪ್ಪಿಸಿಕೊಟ್ಟನು (ಯೋಹಾನ 2:24).
ಇದುವೇ ಪ್ರಬುದ್ಧತೆಯ ಭಂಗಿ: ತನ್ನನ್ನು ತಾನು ಸಮರ್ಥನೆ ಮಾಡಿಕೊಳ್ಳುವ ಅಗತ್ಯವನ್ನು ಬಿಟ್ಟುಬಿಟ್ಟು ಅತ್ಯುನ್ನತ ನಾದ ನ್ಯಾಯಾಧೀಶನಾಗಿರುವ ದೇವರ ಮೇಲೆ ಭರವಸದಿಂದಿರುವುದಾಗಿದೆ.
"ಎಲ್ಲಾ ದ್ವೇಷ ಕೋಪ ಕ್ರೋಧ ಕಲಹ ದೂಷಣೆ ಇವುಗಳನ್ನೂ ಸಕಲವಿಧವಾದ ದುಷ್ಟತನವನ್ನೂ ನಿಮ್ಮಿಂದ ದೂರಮಾಡಿರಿ.ಒಬ್ಬರಿಗೊಬ್ಬರು ಉಪಕಾರಿಗಳಾಗಿಯೂ ಕರುಣೆಯುಳ್ಳವರಾಗಿಯೂ ಕ್ಷವಿುಸುವವರಾಗಿಯೂ ಇರ್ರಿ."ಎಂದು ಅಪೊಸ್ತಲ ಪೌಲನು ವಿಶ್ವಾಸಿಗಳನ್ನು ಒತ್ತಾಯಿಸುತ್ತಾನೆ. (ಎಫೆಸ 4:31–32).
ಮೃದುತ್ವವು ಅಪಕ್ವತೆಯಲ್ಲ; ಅದು ಆತ್ಮ ಸಂಯಮದಲ್ಲಿರುವ ಶಕ್ತಿ.
ದೇವರ ರಾಜ್ಯವನ್ನು ಪ್ರತಿಬಿಂಬಿಸುವ ಜೀವನ ಮನಸ್ತಾಪವನ್ನು ಜಯಿಸಿದಾಗ,
ಶಾಂತಿ ಸ್ಥಿರವಾಗುತ್ತದೆ, ಸಂಬಂಧಗಳು ಆರೋಗ್ಯಕರವಾಗುತ್ತವೆ ಮತ್ತು ಬೆಳವಣಿಗೆ ತ್ವರಿತಗೊಳ್ಳುತ್ತದೆ. ಆಗ ವಿಶ್ವಾಸಿಯು ಇನ್ನು ಮುಂದೆ ಸುಲಭವಾಗಿ ಅಲುಗಾಡುವುದಿಲ್ಲ, ಸುಲಭವಾಗಿ ಕೋಪಗೊಳ್ಳುವುದಿಲ್ಲ ಅಥವಾ
ಸುಲಭವಾಗಿ ಹಿಂಜಾರುವುದಿಲ್ಲ.
ಕರ್ತನಾದ ಯೇಸು, "ನೀವು ಒಬ್ಬರನ್ನೊಬ್ಬರು ಪ್ರೀತಿಸುವುದಾದರೆ ನೀವು ನನ್ನ ಶಿಷ್ಯರೆಂದು ಎಲ್ಲರೂ ತಿಳಿದುಕೊಳ್ಳುವರು" (ಯೋಹಾನ 13:35).
ಮನಸ್ತಾಪದಿಂದ ಮುಕ್ತಿ ಹೊಂದುವುದು ಕೇವಲ ವೈಯಕ್ತಿಕ ವಿಷಯವಲ್ಲ - ಅದು ಒಂದು ಸಾಕ್ಷಿಯಾಗಿದೆ.
Bible Reading: Genesis 27-29
ಪ್ರಾರ್ಥನೆಗಳು
ತಂದೆಯೇ, ನಾನು ಮನಸ್ತಾಪಕ್ಕಿಂತಲೂ ಬಿಡುಗಡೆಯನ್ನು ಆರಿಸಿಕೊಳ್ಳುತ್ತೇನೆ. ನಿನ್ನ ಹೃದಯವನ್ನು ಪ್ರತಿಬಿಂಬಿಸುವಂತೆ ನನ್ನ ಹೃದಯವನ್ನು ರೂಪಿಸು. ನನ್ನ ಜೀವನವು ಪ್ರೀತಿ, ಜ್ಞಾನ ಮತ್ತು ಪರಿಪಕ್ವತೆಯಿಂದ ಪ್ರತಿಕ್ರಿಯಿಸಲಿ. ಯೇಸುನಾಮದಲ್ಲಿ ಆಮೆನ್!!
Join our WhatsApp Channel
Most Read
● ದಿನ 13:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ.● ಬೇರಿನೊಂದಿಗೆ ವ್ಯವಹರಿಸುವುದು
● ಕ್ರಿಸ್ತನಲ್ಲಿ ನಿಮ್ಮ ದೈವಿಕ ಗಮ್ಯಸ್ಥಾನವನ್ನು ಪ್ರವೇಶಿಸುವುದು
● ಸತ್ತವರೊಳಗಿಂದ ಮೊದಲು ಎದ್ದು ಬಂದವನು.
● ನಂಬಿಕೆಯ ಜೀವಿತ
● ಆತ್ಮೀಕ ಹೆಮ್ಮೆಯ ಬಲೆ
● ಅಭಿಷೇಕಕ್ಕಿರುವ ಪ್ರಪ್ರಥಮ ಶತೃ
ಅನಿಸಿಕೆಗಳು