ಅನುದಿನದ ಮನ್ನಾ
ದೇವರು ಹೇಗೆ ಒದಗಿಸುತ್ತಾನೆ #4
Monday, 16th of September 2024
1
1
159
Categories :
ನಿಬಂಧನೆ (Provision)
4. ದೇವರು ನಿಮ್ಮ ಶತ್ರುಗಳ ಕೈಯಿಂದಲೂ ಒದಗಿಸುತ್ತಾನೆ.
ಒಬ್ಬ ವಿಧವೆಯು ದೇವರಿಗೆ ಯಾವಾಗಲೂ ಗಟ್ಟಿಯಾಗಿ ಪ್ರಾರ್ಥಿಸುತ್ತಾ ತನ್ನ ಅಗತ್ಯಗಳಿಗಾಗಿ ಮೊರೆ ಇಡುತ್ತಿದ್ದಳು ಆದರೆ ಸಂಪೂರ್ಣ ನಾಸ್ತಿಕರಾದ ಆಕೆಯ ಮನೆಯ ನೆರೆಹೊರೆಯವರಿಗೆ ಇದು ಸರಿಯಾಗಿ ಕಾಣುತ್ತಿರಲಿಲ್ಲ.ಈ ಮಹಿಳೆ ಗಟ್ಟಿಯಾಗಿ ಪ್ರಾರ್ಥಿಸುತ್ತಿದ್ದರಿಂದ ಅವನು ಬಹಳ ವಿಚಲಿತನಾಗಿದ್ದನು. ಒಂದು ದಿನ ಈ ಮಹಿಳೆ ಎಂದಿನಂತೆ ತನ್ನ ಅಗತ್ಯಗಳಿಗಾಗಿ ಗಟ್ಟಿಯಾಗಿ ಪ್ರಾರ್ಥಿಸುತ್ತಿದ್ದಳು. ಈ ಬಾರಿ ದೇವರು ಮೊದಲಿನಂತೆ ಬೇಗ ಆಕೆಗೆ ಉತ್ತರಿಸಲಿಲ್ಲ.ಆದ್ದರಿಂದ ಆ ಮಹಿಳೆಯು ಇನ್ನಷ್ಟು ಜೋರಾಗಿ ಪ್ರಾರ್ಥಿಸಲಾರಂಬಿಸಿದಳು.ಇದು ನಾಸ್ತಿಕನಾದ ಆ ನೆರೆಯವನನ್ನು ಮತ್ತಷ್ಟು ಕೆರಳುವಂತೆ ಮಾಡಿತು. ಅವನು ಈ ಮಹಿಳೆಗೆ ದೇವರಿಲ್ಲ ಎನ್ನುವ ಪಾಠ ಕಲಿಸಲೇಬೇಕೆಂದು ನಿರ್ಧರಿಸಿ ಅವನೊಂದು ಸೂಪರ್ ಮಾರ್ಕೆಟಿಗೆ ಹೋಗಿ ಸಾಕಷ್ಟು ದಿನಸಿ ಮತ್ತು ಇತರೆ ಗೃಹ ಉಪಯೋಗಿ ವಸ್ತುಗಳನ್ನು ಸುಮಾರು ಎರಡು ದೊಡ್ಡ ಡಬ್ಬಿಗಳಾಗುವಷ್ಟು ಖರೀದಿಸಿ ನಂತರ ಸದ್ದಿಲ್ಲದೆ ಹಿತ್ತಲಿನಿಂದ ಬಂದು ಆ ಎರಡು ಚೀಲಗಳನ್ನು ಆಕೆಯ ಮನೆಯ ಅಡುಗೆಮನೆಯ ನೆಲದಲ್ಲಿ ತಳ್ಳಿದನು.
ಈ ಶಬ್ದದಿಂದ ಎಚ್ಚೆತ್ತ ಮಹಿಳೆಯು ಪ್ರಾರ್ಥನೆ ಮಾಡುವುದನ್ನು ನಿಲ್ಲಿಸಿದಳು. ಅವಳ ಪ್ರಾರ್ಥನೆಗಳಿಗೆ ಈಗ ಉತ್ತರ ಸಿಕ್ಕಿತ್ತು. ಇದರಿಂದ ಆಕೆ ಕರ್ತನಿಗೆ ಹೇರಳವಾಗಿ ಧನ್ಯವಾದ ಹೇಳಲು ಆರಂಭಿಸಿದಳು. ಆಗ ಮನೆಯ ಕರೆಗಂಟೆ ಬಾರಿಸಿತು. ಆಕೆ ನೋಡಿದಾಗ ಪಕ್ಕದ ಮನೆಯ ಆ ನಾಸ್ತಿಕ ವ್ಯಕ್ತಿಯು ಆಕೆಯನ್ನು ಅಣಕಿಸುತ್ತಾ "ದೇವರೇ ಇಲ್ಲ! ಇದು ದೇವರು ಮಾಡಿದ್ದಲ್ಲ ನಾನು ಮಾಡಿದ್ದು "ಎಂದನು.ಅದಕ್ಕೆ ಆ ಮಹಿಳೆಯು ನಡುಗಿ ಹೋದಳು, ಅದೇನೇ ಇದ್ದರೂ ಮತ್ತೆ ಆಕೆ ಪ್ರಾರ್ಥನೆಗೆ ಮರಳಿದಳು. ಮತ್ತೆ ಎಂದಿನಂತೆ ಜೋರಾಗಿ ಪ್ರಾರ್ಥಿಸುತ್ತಾ "ತಂದೆಯೇ, ನಿಮ್ಮ ಒದಗಿಸುವಿಕೆಗಾಗಿ ಸ್ತೋತ್ರ.ನೀವು ಅದನ್ನು ನನಗೆ ತಲುಪಿಸಲು ಸೈತಾನನ್ನು ಉಪಯೋಗಿಸಿಕೊಂಡಿರಿ" ಎಂದಳು. ಈ ಘಟನೆಯು ತಮಾಷೆ ಎನಿಸಬಹುದು ಆದರೆ ಅದರಲ್ಲಿ ಒಂದು ಸತ್ಯಾಂಶವಿದೆ.
"ಯೆಹೋವನು ಒಬ್ಬನ ನಡತೆಗೆ ಮೆಚ್ಚಿದರೆ ಅವನ ಶತ್ರುಗಳನ್ನೂ ವಿುತ್ರರನ್ನಾಗಿ ಮಾಡುವನು. "(ಜ್ಞಾನೋಕ್ತಿಗಳು 16:7)
ಹೌದು ದೇವರು ಒಬ್ಬ ಮನುಷ್ಯನ ನಡತೆಯನ್ನು ಮೆಚ್ಚುವುದಾದರೆ ಅವರ ಹಿಂಸಕರನ್ನೇ ಅವರ ಉದ್ಧಾರಕರನ್ನಾಗಿ ಕರ್ತನು ಮಾಡಬಲ್ಲನು.
"ಆ ಹಳ್ಳದ ನೀರು ನಿನಗೆ ಪಾನವಾಗಿರುವದು; ನಿನಗೆ ಆಹಾರತಂದುಕೊಡಬೇಕೆಂದು ಕಾಗೆಗಳಿಗೆ ಆಜ್ಞಾಪಿಸಿದ್ದೇನೆ ಎಂದು ಹೇಳಿದನು. [5] ಅವನು ಯೆಹೋವನ ಅಪ್ಪಣೆಯಂತೆ ಯೊರ್ದನಿನ ಪೂರ್ವಕ್ಕಿರುವ ಕೆರೀತ್‍ಹಳ್ಳದಲ್ಲಿ ವಾಸಿಸಿದನು. [6] ಕಾಗೆಗಳು ಅವನಿಗೆ ಪ್ರಾತಃಕಾಲದಲ್ಲಿಯೂ ಸಾಯಂಕಾಲದಲ್ಲಿಯೂ ರೊಟ್ಟಿ, ಮಾಂಸ ಇವುಗಳನ್ನು ತಂದುಕೊಡುತ್ತಿದ್ದವು. ಅವನು ಇವುಗಳನ್ನು ತಿನ್ನುತ್ತಿದ್ದನು; ಹಳ್ಳದ ನೀರು ಅವನಿಗೆ ಪಾನವಾಗಿತ್ತು."(1 ಅರಸುಗಳು 17:4-6)
ನಾನು ಚಿಕ್ಕವನಿದ್ದಾಗ ನಮ್ಮ ಮನೆಯ ಮುಂದೆ ಮೀನುಗಾರ ಒಬ್ಬನು ಬರುತ್ತಿದ್ದದ್ದು ನೆನಪಿದೆ. ಆ ಮೀನುಗಾರನು ಮೀನನ್ನು ತೆಗೆದ ಕೂಡಲೇ ಕಾಗೆಗಳು ಅವನನ್ನು ಮುತ್ತುಕೊಳ್ಳುತ್ತಿದ್ದವು. ಒಂದು ಚೂರು ಅವಕಾಶ ಸಿಕ್ಕಿದರೆ ಸಾಕು ಆ ಮೀನಿನ ತುಂಡನ್ನು ಎತ್ತಿಕೊಂಡು ಆ ಕಳ್ಳ ಕಾಗೆಗಳು ಹೋಗಿ ಹಬ್ಬ ಮಾಡಿಕೊಂಡು ಬಿಡುತ್ತಿದ್ದವು.
ಅಂತಹ ಕಳ್ಳ ಸ್ವಭಾವವಿರುವ ಪಕ್ಷಿಯಿಂದಲೇ ದೇವರ ತನ್ನ ಪ್ರವಾದಿಯಾದ ಎಲೀಯನಿಗೆ ಒದಗಿಸಿದನು. ಆದ್ದರಿಂದ ದೇವರು ಎಲಿಯನಿಗೆ ಈ ಸಹಾಯ ಮಾಡಬಲ್ಲನಾದರೆ ನಿಮಗೂ ನನಗೂ ಸಹ ಮಾಡಬಲ್ಲನು.
ಕರ್ತನು ಮನುಷ್ಯರ ಮುಖದಾಕ್ಷಿಣ್ಯ ಮಾಡುವವನಲ್ಲ (ಅ. ಕೃ 10:34)ಆತನು ಪಕ್ಷಪಾತೀಯಲ್ಲ.(ರೋಮ 12:11)ಆತನು ಎಲಿಯನಿಗೆ ಹೀಗೆ ಒದಗಿಸಿದ್ದರೆ ಆತನು ನಿಮಗೂ ಸಹ ಒದಗಿಸುವವನು.
ಪ್ರಾರ್ಥನೆಗಳು
ಯೇಸುವಿನ ನಾಮದಲ್ಲಿ ನನ್ನ ಕೈ ಪ್ರಯಾಸವು ಅಭಿವೃದ್ಧಿಯಾಗುತ್ತದೆ ಮತ್ತು ಅದು ಕರ್ತನಿಗೆ ಮಹಿಮೆ ತರುತ್ತದೆ.ಆದ್ದರಿಂದ ಕರ್ತನು ಯೇಸು ನಾಮದಲ್ಲಿ ನನ್ನನ್ನು ಆಶೀರ್ವದಿಸಲು ನನ್ನ ಶತ್ರುಗಳನ್ನು ಬಳಸಿಕೊಳ್ಳುತ್ತಾನೆ.
( ಎಲ್ಲರಲ್ಲೂ ಒಂದು ವಿನಮ್ರ ವಿನಂತಿ, ಈ ದೈನಂದಿನ ಮನ್ನಾವನ್ನು ಸಾಧ್ಯವಾದಷ್ಟು ಜನರಿಗೆ ಹಂಚಿ. ದೇವರ ವಾಕ್ಯ ಹರಡಲಿ.)
( ಎಲ್ಲರಲ್ಲೂ ಒಂದು ವಿನಮ್ರ ವಿನಂತಿ, ಈ ದೈನಂದಿನ ಮನ್ನಾವನ್ನು ಸಾಧ್ಯವಾದಷ್ಟು ಜನರಿಗೆ ಹಂಚಿ. ದೇವರ ವಾಕ್ಯ ಹರಡಲಿ.)
Join our WhatsApp Channel
Most Read
● ಸ್ವಸ್ಥ ಚಿತ್ತತೆ ಎಂಬುದು ಒಂದು ವರ● ಕರ್ತನು ಹೃದಯವನ್ನೇ ಶೋಧಿಸುವವನಾಗಿದ್ದಾನೆ.
● ದಿನ 04:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ
● ಹಣಕಾಸಿನ ಅದ್ಭುತ ಬಿಡುಗಡೆ.
● ವ್ಯರ್ಥವಾದದಕ್ಕೆ ಹಣ
● ದಿನ 10:40 ದಿನಗಳ ಉಪವಾಸ ಪ್ರಾರ್ಥನೆ.
● ಇಸ್ಕಾರಿಯೋತ ಯೂದನ ಜೀವನದಿಂದ ಕಲಿಯಬೇಕಾದ ಪಾಠಗಳು -2
ಅನಿಸಿಕೆಗಳು