ಅನುದಿನದ ಮನ್ನಾ
ನಿಮ್ಮ ಆತ್ಮಿಕ ಬಲವನ್ನು ನವೀಕರಿಸಿಕೊಳ್ಳುವುದು ಹೇಗೆ-2
Tuesday, 27th of August 2024
1
1
280
Categories :
ಆತ್ಮೀಕ ಶಕ್ತಿ ( Spiritual Strength)
"ವಾಣಿಯನ್ನಾಡುವವನು ತನಗೆ ಮಾತ್ರ ಭಕ್ತಿವೃದ್ಧಿಯನ್ನುಂಟುಮಾಡುತ್ತಾನೆ,.."(1 ಕೊರಿಂಥದವರಿಗೆ 14:4)
ಭಕ್ತಿ ವೃದ್ದಿ (edify)ಎಂಬ ಪದವು ಗ್ರೀಕ್ ಭಾಷೆಯ ಮೂಲದ 'ಒಯಿಕೋ ಡೊಮಿಯೋ' ಎಂಬ ಪದದಿಂದ ಬಂದಿದೆ. ಅದರ ಪದಶಃ ಅರ್ಥ ನಿರ್ಮಿಸು ಅಥವಾ ಕಟ್ಟು ಎನ್ನುವುದಾಗಿದೆ. ಅದೇ ರೀತಿಯಲ್ಲಿ ಈ ಭಕ್ತಿ ವೃದ್ದಿ/ ಉತ್ತಮಗೊಳಿಸಿಕೊಳ್ಳುವಂತದ್ದು ಎನ್ನುವುದೂ ಸಹ ನಿರ್ಮಿಸುವ ಕಾರ್ಯವನ್ನು ಮಾಡುತ್ತದೆ.
1 ಕೊರಿಯಂತೆ 14:4 ರಲ್ಲಿ ಅಪೋಸ್ತಲನಾದ ಪೌಲನು ಆತ್ಮನ ಮೂಲಕ ನಮಗೆ ಉಪದೇಶವುದೇನೆಂದರೆ ನಾವು ಅನ್ಯ ಭಾಷೆಯಲ್ಲಿ ಮಾತನಾಡುವಾಗ ಒಂದು ನಿರ್ಮಾಣದ ಜಾಗದಲ್ಲಿರುವ ಕೆಲಸಗಾರರು ಹೇಗೆ ಒಂದು ಇಟ್ಟಿಗೆ ಮೇಲೆ ಮತ್ತೊಂದು ಇಟ್ಟಿಗೆಯನ್ನು ಜೋಡಿಸಿ ಕಟ್ಟುತ್ತಿರುತ್ತಾರೋ ಹಾಗೆ ನಾವು ಸಹ ಒಂದಾದ ಮೇಲೆ ಒಂದರಂತೆ ಆತ್ಮನ ಗುಣಗಳಲ್ಲಿ ಕಟ್ಟುತ್ತಾ ಹೋಗುತ್ತೇವೆ ಎಂದು.
ಲೌಕಿಕ ಜೀವನದ ಸನ್ನಿವೇಶಗಳು ಮತ್ತು ದಿನನಿತ್ಯದ ವ್ಯವಹಾರಗಳು ಆತ್ಮಿಕ ಬಲ ಮತ್ತು ಶಕ್ತಿಯನ್ನು ಬಳಸಿಕೊಂಡು ನಿಮ್ಮನ್ನು ಆತ್ಮಿಕವಾಗಿ ದುರ್ಬಲಗೊಳಿಸಬಹುದು ಮತ್ತು ನೀವು ಅವುಗಳಿಂದ ಕುಂದು ಹೋಗುವಂತೆಯೂ ಮಾಡಬಹುದು. ಜನರು ಮತ್ತೆ ಮತ್ತೆ ಆತ್ಮಿಕವಾಗಿ ತುಂಬಲ್ಪಡದೆ ಹೋದಾಗ ಅವರು ಆತ್ಮಿಕವಾಗಿ ದಣಿದು ಬೀಳಲು ಆರಂಭಿಸುತ್ತಾರೆ.
ನಿಮ್ಮಲ್ಲಿ ಕೆಲವರು ಕರ್ತನ ಸೇವೆ ಮಾಡುತ್ತಾ ಮಾಡುತ್ತಾ ಇತ್ತೀಚಿಗೆ ದಣಿದ ಅನುಭವವನ್ನು ಅನುಭವಿಸುತ್ತಿರಬಹುದು. ಬಹುಶಃ ನೀವು ಲೋಕ ಕಾರ್ಯಗಳಲ್ಲಿ ತೊಡಗಿಕೊಂಡು ತೀವ್ರವಾದ ಒತ್ತಡದ ಕಾರಣ ಬಿಟ್ಟು ಬಿಡುವ ಮನಸ್ಸು ಮಾಡುತ್ತಿರಬಹುದು.
ಇದೆಲ್ಲದಕ್ಕೂ ಕಾರಣ ನಿಮ್ಮ ಆಂತರಿಕ ಆತ್ಮಿಕ ಶಕ್ತಿ ಕ್ಷೀಣಿಸುವುದಾಗಿದೆ.
ಆತ್ಮಿಕವಾಗಿ ದುರ್ಬಲವಾಗುವಂತದ್ದು ನಿಮ್ಮ ನಂಬಿಕೆಯ ಮಟ್ಟವು ಕಡಿಮೆಯಾಗುವುದಕ್ಕೂ ಮತ್ತು ನಿರುದ್ಸಾಹ ಗೊಳ್ಳುವುದಕ್ಕೂ ಎಡೆ ಮಾಡಿಕೊಡಬಹುದು. ಅಂತಹ ಸಮಯದಲ್ಲಿ ಪ್ರಾರ್ಥನೆ ಮಾಡುವುದೇ ಒಂದು ಹೋರಾಟವಾಗಿ ಬಿಡುತ್ತದೆ. ನಿಮಗೆ ಸತ್ಯವೇದವನ್ನು ಇನ್ನು ಓದಬೇಕು ಎನಿಸುವುದಿಲ್ಲ. ಸಭಾ ಕೂಟಗಳಲ್ಲಿ ಪಾಲ್ಗೊಳ್ಳುವಂತದಂತೂ ನೀರಸವೆಂದು ತೋರುತ್ತದೆ.
ಇದೆಲ್ಲದಕ್ಕೂ ಪರಿಹಾರವಿದೆ.
ಅನ್ಯ ಭಾಷೆಯಲ್ಲಿ ಪ್ರಾರ್ಥಿಸುವಂಥದ್ದು ಮತ್ತು ಮಾತನಾಡುವಂಥದ್ದು ನಿಮ್ಮನ್ನು ಆತ್ಮಿಕವಾಗಿ ಕಟ್ಟುತ್ತದೆ ಏಕೆಂದರೆ ಇದು ಕರ್ತನೊಂದಿಗೆ ಸಂವಹನ ನಡೆಸಲು ಇರುವ ಪರಿಣಾಮಕಾರಿ ಸಾಧನವಾಗಿದ್ದು ಸ್ವಾಭಾವಿಕ ಬುದ್ಧಿಯನ್ನು ಮೀರಿದಂತದ್ದಾಗಿದೆ. (1ಕೊರಿಯಂತೆ 14:14).
ಒಂದು ಉತ್ತಮ ಭಾಗವೆಂದರೆ ಇದನ್ನು ಮಾಡಲು ನೀವು ವಿಶೇಷ ಸಂದರ್ಭಕ್ಕಾಗಿ ಕಾಯಬೇಕಿಲ್ಲ. ನೀವು ಯಾವಾಗ ಮತ್ತು ಎಲ್ಲಿ ಬೇಕಾದರೂ ಅನ್ಯ ಭಾಷೆಗಳಲ್ಲಿ ಮಾತನಾಡಬಹುದು. ನೀವು ಇದನ್ನು ನಿಯಮಿತವಾಗಿ ರೂಡಿಸಿಕೊಳ್ಳುವಾಗ ನೀವು ನಿಮ್ಮ ಜೀವನದ 2:0 ಆವೃತ್ತಿಯಾಗಿ ಬಿಡುತ್ತೀರಿ. ನಿಮ್ಮ ಸುತ್ತಮುತ್ತಲಿರುವ ಜನರು ನಿಮ್ಮಲ್ಲಿ ಉಂಟಾಗುವ ವ್ಯತ್ಯಾಸವನ್ನು ಗಮನಿಸಲಾರಂಭಿಸುತ್ತಾರೆ.
2ಕೊರಿಯಂತ 11: 23- 27ರಲ್ಲಿ ಅಪೋಸ್ತಲನಾದ ಪೌಲನು ನಮ್ಮ ಕರ್ತನಾದ ಯೇಸುಕ್ರಿಸ್ತನ ಸುವಾರ್ತೆಯನ್ನು ಸಾರುವ ತನ್ನ ಅನ್ವೇಷಣೆಯಲ್ಲಿ ತನಗುಂಟಾದ ತನ್ನ ಹೋರಾಟವನ್ನು ಮತ್ತು ಸಂಕಟಗಳನ್ನು ಹೀಗೆ ಉಲ್ಲೇಖಿಸುತ್ತಾನೆ.
"ಅವರು ಕ್ರಿಸ್ತನ ಸೇವಕರೋ ಅವರಿಗಿಂತ ನಾನು ಹೆಚ್ಚಾಗಿ ಸೇವೆಮಾಡುವವನಾಗಿದ್ದೇನೆ. ಬುದ್ಧಿಸ್ವಾಧೀನವಿಲ್ಲದವನಾಗಿ ಮಾತಾಡುತ್ತೇನೆ. ಆತನ ಸೇವೆಯಲ್ಲಿ ಅವರಿಗಿಂತ ಹೆಚ್ಚಾಗಿ ಪ್ರಯಾಸಪಟ್ಟೆನು, ಹೆಚ್ಚಾಗಿ ಸೆರೆಮನೆಗಳೊಳಗೆ ಬಿದ್ದೆನು; ವಿುತಿಮೀರಿ ಪೆಟ್ಟುಗಳನ್ನು ತಿಂದೆನು, ಅನೇಕಸಾರಿ ಮರಣದ ಬಾಯೊಳಗೆ ಸಿಕ್ಕಿಕೊಂಡೆನು. ಐದುಸಾರಿ ಯೆಹೂದ್ಯರಿಂದ ನನಗೆ ಒಂದು ಕಡಿಮೆ ನಾಲ್ವತ್ತು ಏಟುಗಳು ಬಿದ್ದವು; [25] ಮೂರು ಸಾರಿ ಸರಕಾರದವರು ಚಡಿಗಳಿಂದ ನನ್ನನ್ನು ಹೊಡಿಸಿದರು; ಒಂದು ಸಾರಿ ಜನರು ನನ್ನನ್ನು ಕೊಲ್ಲುವದಕ್ಕೆ ಕಲ್ಲೆಸೆದರು; ಮೂರು ಸಾರಿ ನಾನಿದ್ದ ಹಡಗು ಒಡೆದು ಹೋಯಿತು; ಒಂದು ರಾತ್ರಿ ಒಂದು ಹಗಲು ಸಮುದ್ರದ ನೀರಿನಲ್ಲಿ ಕಳೆದೆನು. ಆತನ ಸೇವೆಯಲ್ಲಿ ಎಷ್ಟೋ ಪ್ರಯಾಣಗಳನ್ನು ಮಾಡಿದೆನು; ನದಿಗಳ ಅಪಾಯಗಳೂ ಕಳ್ಳರ ಅಪಾಯಗಳೂ ಸ್ವಂತ ಜನರಿಂದ ಅಪಾಯಗಳೂ ಅನ್ಯಜನರಿಂದ ಅಪಾಯಗಳೂ ಪಟ್ಟಣದಲ್ಲಿ ಅಪಾಯಗಳೂ ಕಾಡಿನಲ್ಲಿ ಅಪಾಯಗಳೂ ಸಮುದ್ರದಲ್ಲಿ ಅಪಾಯಗಳೂ ಸುಳ್ಳುಸಹೋದರರೊಳಗೆ ಇರುವಾಗ ಅಪಾಯಗಳೂ ನನಗೆ ಸಂಭವಿಸಿದವು. ಪ್ರಯಾಸ ಪರಿಶ್ರಮಗಳಿಂದ ಕೆಲಸನಡಿಸಿ ಅನೇಕ ಸಾರಿ ನಿದ್ದೆಗೆಟ್ಟು ಹಸಿವೆ ಬಾಯಾರಿಕೆಗಳನ್ನು ಪಟ್ಟು ಅನೇಕ ಸಾರಿ ಉಪವಾಸವಾಗಿಯೂ ಚಳಿಯಲ್ಲಿಯೂ ವಸ್ತ್ರವಿಲ್ಲದೆಯೂ ಇದ್ದು ಆತನನ್ನು ಸೇವಿಸಿದ್ದೇನೆ."(2 ಕೊರಿಂಥದವರಿಗೆ 11:23-27)
ಅನ್ಯ ಭಾಷೆಯಲ್ಲಿ ಗಂಟಗಟ್ಟಲೆ ಪ್ರಾರ್ಥಿಸುತ್ತಿದ್ದದೇ ಅಪೋಸ್ತಲನಾದ ಪೌಲನ ಸೇವೆಯ ರಹಸ್ಯವಾಗಿತ್ತು. ಇದನ್ನು ಮಾಡುವುದರಿಂದ ಅವನ ಆತ್ಮಿಕ ಮನುಷ್ಯನು ಉನ್ನತ ಮಟ್ಟದಲ್ಲಿ ನಿರ್ಮಾಣಗೊಂಡಿದ್ದನು. ಇದರಿಂದಾಗಿಯೇ ತನ್ನ ಮೇಲೆ ಶತ್ರುವ ಎಸೆಯುವ ಯಾವ ಬಾಣವನ್ನಾದರೂ ಅವನು ಸಹಿಸಿಕೊಳ್ಳುವವನಾಗಿದ್ದನು ಮತ್ತು ಜಯಿಸಬಲ್ಲವನಾಗಿದ್ದನು. ಇದುವೇ ದೇವರಿಂದ ಪ್ರಬಲವಾಗಿ ಉಪಯೋಗಿಸಲ್ಪಟ್ಟ ಅನೇಕ ದೇವಸೇವಕ ಮತ್ತು ದೇವ ಸೇವಕಿಯರ ಜಯಪ್ರದ ಕ್ರಿಸ್ತೀಯ ಜೀವಿತದ ರಹಸ್ಯವಾಗಿದೆ.
ದಕ್ಷಿಣ ಭಾರತದಲ್ಲಿ ಒಬ್ಬ ಅದ್ಭುತವಾದ ದೇವ ಮನುಷ್ಯನಾದ ಪ್ರವಾದಿ ಎಚ್ಕೀಯ ಫ್ಯಾನ್ಸಿಸ್ ಅವರಿದ್ದಾರೆ. ಅವರನ್ನು ನಾನು ವೈಯಕ್ತಿಕವಾಗಿ ಎಂದೂ ಭೇಟಿಯಾಗಿಲ್ಲ ಆದರೆ ಅವರ ಜೀವನ ಮತ್ತು ಬೋಧನೆಗಳು ನನ್ನನ್ನು ಅಪಾರವಾಗಿ ಆಶೀರ್ವದಿಸಿದೆ. ( ನಾನು ನಿಜವಾಗಿ ಅವರನ್ನು ಭೇಟಿಯಾಗಲು ಬಯಸುತ್ತೇನೆ) ಎರಡು ದಶಕಗಳಿಂದಲೂ ಹೆಚ್ಚಾದ ನಮ್ಮ ಕರ್ತನಾದ ಯೇಸುಕ್ರಿಸ್ತನಲ್ಲಿನ ಅವರ ಜೀವಿತ ಹಾಗೂ ಸೇವೆಯು ನಿರಂತರವಾಗಿ ಉನ್ನತ ಮಟ್ಟದಲ್ಲಿಯೇ ಇದೆ. ಇದು ಹೇಗೆ ಸಾಧ್ಯ?
ನಾನು ಕ್ರಿಸ್ತನಲ್ಲಿ ನನ್ನ ಸೇವೆಯನ್ನು ಇನ್ನೂ ಆರಂಭಿಸುವಾಗ (ಇದು 1997 ರ ಅವಧಿಯಲ್ಲಿ) ಇವರ ಬೋಧನೆಯನ್ನು ದ್ವನಿ ಸುರಳಿಯಲ್ಲಿ ಕೇಳಿಸಿಕೊಂಡಿದ್ದೆ. ಅದರಲ್ಲಿ ಅವರು "ನಾನು ಸ್ನಾನ ಮಾಡುವಾಗಲೂ ಅನ್ಯ ಭಾಷೆಯಲ್ಲಿ ಪ್ರಾರ್ಥಿಸುತ್ತಲೇ ಇರುತ್ತೇನೆ"ಎಂದು ಹೇಳಿದ್ದರು. ಇದನ್ನು ಕೇಳುವಾಗ ನಾನು ಆಶ್ಚರ್ಯ ಚಕಿತನಾದೆ.
ಇಂದು ಎಷ್ಟೋ ಕ್ರೈಸ್ತರು ಅನ್ಯ ಭಾಷೆಯ ವರವನ್ನು ಹೊಂದಿದ್ದರೂ ನಿಯಮಿತವಾಗಿ ಅನ್ಯ ಭಾಷೆಯಲ್ಲಿ ಪ್ರಾರ್ಥಿಸಲು ಮಾತನಾಡಲು ವಿಫಲರಾಗುತ್ತಾರೆ.ಈ ದಿನಮಾನಗಳಲ್ಲಿ ವಿಶ್ವಾಸಿಗಳಲ್ಲಿಯೇ ಆತ್ಮೀಕ ಬಲಹೀನತೆ ಎದ್ದು ಕಾಣುತ್ತಿರುವಂತದ್ದರಲ್ಲಿ ಆಶ್ಚರ್ಯವೇನಿಲ್ಲ ಬಿಡಿ. ಇದೊಂದು ರೀತಿಯಲ್ಲಿ ತನಗೆ ಸಿಕ್ಕ ತಲಾಂತನ್ನು ಮಣ್ಣಿನಲ್ಲಿ ಹೂಳಿಟ್ಟ ಸೇವಕನಿಗೆ ಹೋಲಿಕೆಯಾಗಿದೆ. (ಮತ್ತಾಯ 25:14-30)
"ಪ್ರಿಯರೇ, ನೀವಾದರೋ ನಿಮಗಿರುವ ಅತಿಪರಿಶುದ್ಧವಾದ ಕ್ರಿಸ್ತ ನಂಬಿಕೆಯನ್ನು ಆಧಾರಮಾಡಿಕೊಂಡು ಭಕ್ತಿಯಲ್ಲಿ ಅಭಿವೃದ್ಧಿಯನ್ನು ಹೊಂದುತ್ತಾ ಪವಿತ್ರಾತ್ಮ ಪ್ರೇರಿತರಾಗಿ ಪ್ರಾರ್ಥನೆಮಾಡುತ್ತಾ....(ಯೂದನು 1:20)
ಈ ಯೂದ 1: 20ರ ವಾಕ್ಯದಲ್ಲೂ ಅದೇ ಗ್ರೀಕ್ ಪದವಾದ ಒಯಿಕೋ ಡೋಮಿಯಾ ಎನ್ನುವ ಕಟ್ಟುವ, ನಿರ್ಮಿಸುವ ಪದವನ್ನೇ ಬಳಸಲಾಗಿದೆ. ಪ್ರಗತಿಯನ್ನು ಸಾಧಿಸಿ..... ಪವಿತ್ರಾತ್ಮನಲ್ಲಿ ಪ್ರಾರ್ಥಿಸುವ ಮೂಲಕ ನಂಬಿಕೆಯ ತಳಹದಿಯ ಮೇಲೆ ಕಟ್ಟಲ್ಪಡುವ ಎತ್ತರದ ಕಟ್ಟಡವನ್ನು ಹಂತ ಹಂತವಾಗಿ ಏರುವಂತೆ ಏರಿ.... ಎನ್ನುವ ಪದಗಳನ್ನು ಗಮನಿಸಿ. ಇದು ನಿಮಗೆ ಇಷ್ಟವಿಲ್ಲವೇ?
ಬಂಡೆಯ ಮೇಲೆ ಮನೆ ಕಟ್ಟಿರುವವನ ಕುರಿತು ಹೇಳುವ ಸಾಮ್ಯದಲ್ಲಿ ನಮ್ಮ ಕರ್ತನಾದ ಯೇಸುವು ಸಹ ಇದೇ ಒಯಿಕುಡೊಮಿಯಾ ಎನ್ನುವ ಗ್ರೀಕ್ ಪದವನ್ನು ಉಪಯೋಗಿಸಿದ್ದಾನೆ.
"ಆದದರಿಂದ, ಈ ನನ್ನ ಮಾತುಗಳನ್ನು ಕೇಳಿ ಅವುಗಳಂತೆ ನಡೆಯುವವನು ಬಂಡೆಯ ಮೇಲೆ ಮನೆಯನ್ನು ಕಟ್ಟಿಕೊಂಡ(ಒಯಿಕೋಡೊಮಿಯೋ) ಬುದ್ಧಿಯುಳ್ಳ ಮನುಷ್ಯನನ್ನು ಹೋಲುವನು. ಕಟ್ಟಿದ ಮೇಲೆ ಮಳೆ ಸುರಿಯಿತು; ಹಳ್ಳಗಳು ಬಂದವು; ನಾಲ್ಕು ಕಡೆಯಿಂದ ಗಾಳಿ ಬೀಸಿ ಆ ಮನೆಗೆ ಬಡಿಯಿತು. ಆದಾಗ್ಯೂ ಅದರ ಅಸ್ತಿವಾರವು ಬಂಡೆಯ ಮೇಲಿದ್ದದರಿಂದ ಅದು ಬೀಳಲಿಲ್ಲ."(ಮತ್ತಾಯ 7:24-25)
ಯೇಸುವಿನ ಮಾತುಗಳನ್ನು ಕೇಳಿ ಅದರಂತೆ ಮಾಡುವಂತದ್ದು ನಮ್ಮನ್ನು ಬುದ್ಧಿವಂತ ಸ್ತ್ರೀ ಅಥವಾ ಪುರುಷರಾಗುವಂತೆ ಸಹಾಯ ಮಾಡುತ್ತದೆ ಒಬ್ಬ ಯಶಸ್ವಿ ಮನೆ ನಿರ್ಮಾತೃವಾಗಲು ಮತ್ತು ನಂಬಿಕೆಯ ತಳಹದಿಯ ಮೇಲೆ ನಮ್ಮ ಮನೆಯನ್ನು ಪರಿಣಾಮಕಾರಿಯಾಗಿ ನಿರ್ಮಿಸಲು ನಾವು ದೇವರ ವಾಕ್ಯವನ್ನು ಧ್ಯಾನಿಸುವಾಗ ಮತ್ತು ವಾಕ್ಯವನ್ನು ಕೇಳುವಾಗ ಅನ್ಯ ಭಾಷೆಯಲ್ಲಿ ಪ್ರಾರ್ಥಿಸುತ್ತಿರಬೇಕು. ನಮ್ಮ ಆಲೋಚನ ಕರ್ತನಾದ ಪವಿತ್ರಾತ್ಮನ ಸಹಾಯದಿಂದ ಅನ್ಯ ಭಾಷೆಯಲ್ಲಿ ಪ್ರಾರ್ಥಿಸುವಂತದ್ದು ನಮ್ಮ ಜೀವಿತದಲ್ಲಿ ಪ್ರಕಟಣೆಯ ಜ್ಞಾನದ ಶಕ್ತಿಯನ್ನು ಬಿಡುಗಡೆಗೊಳಿಸುತ್ತದೆ. ಈ ಪ್ರಕಟಣೆಯ ಬಿಡುಗಡೆಯ ಜ್ಞಾನವನ್ನೇ ಯೇಸುವು ತನ್ನ ಸಭೆಯ ಅಡಿಪಾಯದ ಬಂಡೆಯಾಗಿ ಹೇಳಿದ್ದು.
ಇಂತಹ ಬಂಡೆಯ ಮೇಲೆ ಕಟ್ಟುವ(ಒಯಿಕೋಡೊಮಿಯೋ )ಸಭೆಯ ವಿರುದ್ಧ ಯಾವ ಪಾತಾಳದ ದ್ವಾರಗಳೂ ಜಯಿಸಲು ಸಾಧ್ಯವಿಲ್ಲ ಎಂದೇ ಯೇಸು ಹೇಳಿರುವಂತದ್ದು.
ಅರಿಕೆಗಳು
ನಾನು ಕರ್ತನೂ ಒಂದಾಗಿದ್ದೇವೆ. ನಾನು ಆತನೊಂದಿಗೆ ಒಂದೇ ಆತ್ಮವಾಗಿದ್ದೇವೆ. ನಾನು ಯಾವಾಗಲೂ ಆತನಲ್ಲಿಯೇ ನೆಲೆಗೊಂಡಿರುತ್ತೇನೆ. ನಾನು ಯೇಸುಕ್ರಿಸ್ತನ ಮನಸ್ಸನ್ನು ಹೊಂದಿಕೊಂಡಿರುವುದರಿಂದ ದೇವರ ವಿವೇಕವು ನನ್ನ ಮೂಲಕ ಹೊರಹೊಮ್ಮುತ್ತದೆ.
Join our WhatsApp Channel
Most Read
● ನಂಬತಕ್ಕ ಸಾಕ್ಷಿ● ಬೇರಿನೊಂದಿಗೆ ವ್ಯವಹರಿಸುವುದು
● ಕನಸು ಕಾಣುವ ಧೈರ್ಯ
● ಪ್ರತಿಫಲಿಸಲು ಸಮಯ ತೆಗೆದುಕೊಳ್ಳುವುದು.
● ನಿರ್ಣಾಯಕ ಅಂಶವಾಗಿರುವ ವಾತಾವರಣದ ಒಳನೋಟಗಳು -4
● ದಿನ 25:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ
● ದಿನ 19:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ
ಅನಿಸಿಕೆಗಳು