ದೇವರ ಬಹುಮುಖದ ಸಾರುಪ್ಯದ ಸನ್ನಿಧಾನವನ್ನು ಪ್ರವೇಶಿಸಲು ಇರುವ ಪ್ರಮುಖವಾದ ಮತ್ತು ಮಾನ್ಯವಾದ ಮಾರ್ಗವೆಂದರೆ ಅದು ನಂಬಿಕೆಯಲ್ಲಿರುವ ಬಲ. ಇಂದು ಅನೇಕ ಕ್ರೈಸ್ತರು ಈ ಕೀಲಿ ಕೈಯನ್ನು ಪರಿಣಾಮರಹಿತವಾದುದ್ದು ವಿಶ್ವಾಸಾರ್ಹವಲ್ಲದ್ದು ಎಂದು ಪರಿಗಣಿಸಿಬಿಟ್ಟಿದ್ದಾರೆ. ತಪ್ಪಾದ ಮಾಹಿತಿ ಮತ್ತು ಸರಿಯಾದ ತಿಳುವಳಿಕೆಯ ಕೊರತೆಯೇ ಇದಕ್ಕೆ ಕಾರಣ. ದೇವರ ಸನ್ನಿಧಾನವನ್ನು ಪ್ರವೇಶಿಸಲು ದೇವರ ಪ್ರಸನ್ನತೆಯನ್ನು ಸಕ್ರಿಯಗೊಳಿಸಲು ಮತ್ತು ನಮಗೆ ಅಗತ್ಯ ಇರುವ ಎಲ್ಲವನ್ನು ಪಡೆದುಕೊಳ್ಳಲು ನಮಗೆ ನೀಡಲಾಗಿರುವ ಏಕೈಕ ಮಾನ್ಯವಾದ ಕೀಲಿ ಕೈ ಎಂದರೆ ನಂಬಿಕೆಯಾಗಿದೆ. ನಂಬಿಕೆ ಇಲ್ಲದೆ ಹೋದರೆ ನಾವು ದೇವರ ಆಶೀರ್ವಾದ ಹಾಗೂ ಅಂಗೀಕಾರದಿಂದ ವಂಚಿತರಾಗುತ್ತಲೇ ಹೋಗುತ್ತೇವೆ.
(ಇಬ್ರಿಯ 11:6)
ಕ್ರೈಸ್ತನಾದವನೊಬ್ಬನು ನಂಬಿಕೆಯಲ್ಲಿರುವ ಬಲವನ್ನೇ ಅನುಮಾನಿಸುವಾಗ ಸೈತಾನಾನಿಂದ ಬರುವ ಹಿಂಸೆಗಳಿಗೆ ಬಾಗಿಲನ್ನು ತೆರೆದು ಕೊಡುವವನಾಗುತ್ತಾನೆ. ಯಾವಾಗ ಅವನು ಸೈತಾನನಿಂದ ನಿರಂತರವಾದ ದಾಳಿಗೆ ತುತ್ತಾಗುತ್ತಾನೋ ಅವನು ಕ್ರಿಸ್ತನಲ್ಲಿರುವ ತನ್ನ ಬಾಧ್ಯತೆಯನ್ನೇ ಮರೆತುಬಿಡುತ್ತಾನೆ.ವಿಶ್ವಾಸಿಗಳಾಗಿ ನಾವು ದೇವರಿಗೆ ಸಂಬಂಧಿಸಿದ ಎಲ್ಲವುಗಳನ್ನು ಎಲ್ಲಾ ವಾಗ್ದಾನಗಳನ್ನು ಸ್ವಂತ ಮಾಡಿಕೊಳ್ಳಲು ನಮಗಿರುವ ಕೆಲಿ ಕೈ ಎಂದರೆ ನಂಬಿಕೆ. ಆದರೆ ಮೊದಲು ನಾವು ಇದು ಹೇಗೆ ಕಾರ್ಯ ಮಾಡುತ್ತದೆ ಎಂದು ಅರಿತುಕೊಳ್ಳಬೇಕು.
ನೀವು ವಿದೇಶಕ್ಕೆ ಹೋಗಿ ನಿಮ್ಮ ದೇಶದ ಚಲಾವಣೆಯ ಹಣವನ್ನು ಖರ್ಚು ಮಾಡಲು ಬಯಸಿದರೆ ಹೇಗಿರುತ್ತದೆ? ಸ್ವಲ್ಪ ಕಲ್ಪಿಸಿಕೊಳ್ಳಿರಿ; ನೀವು ಯಾವುದಾದರೂ ವಹಿವಾಟು ನಡೆಸಲು ಸಾಧ್ಯವೇ? ಇಲ್ಲಾ! ಮೊದಲು ಅದಕ್ಕಾಗಿ ನೀವು ನಿಮ್ಮ ಹಣ ಕೊಟ್ಟು ನೀವು ಹೋಗಲಿರುವ ಹೊಸ ದೇಶದ ಚಲಾವಣೆಯ ನಾಣ್ಯವನ್ನು ವಿನಿಮಯ ಮಾಡಿಕೊಳ್ಳಬೇಕು. ಹಾಗೆಯೇ ನಂಬಿಕೆ ಎಂಬುದು ಪರಲೋಕದಲ್ಲಿ ಚಲಾವಣೆಯಲ್ಲಿರುವ ನಾಣ್ಯವಾಗಿದೆ. ನೀವು ಯಾವುದೇ ಆತ್ಮಿಕ ವಹಿವಾಟು ನಡೆಸಬೇಕಾದರೆ ನೀವು ನಂಬಿಕೆಯ ಮೂಲಕವೇ ನಡೆಸಬೇಕು.
ನೀವು ವಿದೇಶಕ್ಕೆ ಹೋಗಿ ಅಲ್ಲಿನ ಚಲಾವಣೆಯ ಹಣವಿಲ್ಲದೆ ಹೋದರೆ ಹೇಗೆ ಪೇಚಿಗೆ ಸಿಲುಕುತ್ತೀರೋ ಹಾಗೆಯೇ ನಂಬಿಕೆಯ ಕೊರತೆ ಇದ್ದರೆ ನೀವು ಕ್ರಿಸ್ತೀಯ ಜೀವಿತದಲ್ಲಿ ಪೇಚಿಕೆ ಸಿಲುಕುತ್ತೀರಿ ಹಾಗೆಯೇ ಗೊಂದಲಕ್ಕೀಡಾಗುತ್ತೀರಿ. ದೇವರ ಮಕ್ಕಳಾಗಿ ನಂಬಿಕೆಯಿಂದ ನಮಗೆ ಬೇಕಾದದ್ದನ್ನು (ದೇವರ ಚಿತ್ತಕ್ಕನುಗುಣವಾದದನ್ನು) ಬೇಡಿಕೊಂಡು ಹೊಂದಿಕೊಳ್ಳಬಹುದು. ನಂಬಿಕೆಯಿಂದಲೇ ರಕ್ಷಣೆಯನ್ನು ಹೊಂದಿಕೊಂಡಂತೆ ನಂಬಿಕೆಯ ಮೂಲಕವೇ ನಾವು ಎಲ್ಲವನ್ನು ಹೊಂದಿಕೊಳ್ಳುತ್ತೇವೆ. ನೀವು ಕ್ರಿಸ್ತನನ್ನು ಅಂಗೀಕರಿಸಿಕೊಂಡ ಮೇಲೆ ನಂಬಿಕೆಯ ಶಕ್ತಿಯ ಅವಧಿ ಮುಗಿದು ಹೋಗಲಿಲ್ಲ. ಹಾಗಾದರೆ ನಿಮ್ಮ ನಂಬಿಕೆಯನ್ನು ಚಲಾಯಿಸಲು ನಿಮಗೆ ಏಕೆ ಕಷ್ಟವಾಗುತ್ತಿದೆ? ಈ ಮುಂದಿನ ದೇವರ ವಾಕ್ಯದಲ್ಲಿ ವಿಶ್ವಾಸಿಗಳಾಗಿ ಜೀವಿಸಲು ಸತ್ಯವೇದವು ಒಂದು ಬಲವಾದ ಕೀಲಿಕೈಯನ್ನು ನಮಗೆ ಕೊಡುತ್ತದೆ
"ನೀತಿವಂತನು ನಂಬಿಕೆಯಿಂದಲೇ ಬದುಕುತ್ತಾನೆ "(ರೋಮ 1:17)
ನೀವು ಒಂದು ಸ್ವಸ್ಥತೆಯನ್ನು ಎದುರು ನೋಡುತ್ತಿದ್ದೀರಾ? ನಿಮ್ಮ ಕೆಲಸದಲ್ಲಿ ಬಡ್ತಿಗಾಗಿ ನಿರೀಕ್ಷಿಸುತ್ತಿದ್ದೀರಾ? ನಿಮ್ಮ ಕುಟುಂಬದಲ್ಲಿ ಒಂದು ರೂಪಾಂತರವನ್ನು ಬಯಸುತ್ತಿದ್ದೀರಾ? ನಿಮ್ಮ ಕುಟುಂಬದಲ್ಲಿನ ಒಬ್ಬ ವ್ಯಕ್ತಿಯ ಕುರಿತು ಚಿಂತಿಸುತ್ತಿದ್ದೀರಾ? ಸತ್ಯವೇದದಲ್ಲಿ ನಿಮ್ಮೆಲ್ಲಾ ಸಮಸ್ಯೆಗಳಿಗೆ ಪರಿಹಾರವಿದೆ ಮತ್ತು ಅದರ ಶ್ರೇಷ್ಠತೆ ಏನೆಂದರೆ ಆ ಪರಿಹಾರವೂ ಎಲ್ಲಾ ಪರಿಸ್ಥಿತಿಗಳಲ್ಲೂ ಕಾರ್ಯ ಮಾಡುತ್ತದೆ. ಅದುವೇ ನಂಬಿಕೆ! ಅತ್ಯುತ್ತಮ ಪರಿಣಾಮಕ್ಕಾಗಿ ಪ್ರಾರ್ಥನೆಯೊಂದಿಗೆ ಅದನ್ನು ಉಪಯೋಗಿಸಬೇಕು.
"ಆದಕಾರಣ ನೀವು ಪ್ರಾರ್ಥನೆಮಾಡಿ ಏನೇನು ಬೇಡಿಕೊಳ್ಳುತ್ತೀರೋ ಅದನ್ನೆಲ್ಲಾ ಹೊಂದಿದ್ದೇವೆಂದು ನಂಬಿರಿ; ಅದು ನಿಮಗೆ ಸಿಕ್ಕುವದೆಂದು ನಿಮಗೆ ಹೇಳುತ್ತೇನೆ."(ಮಾರ್ಕ 11:24)
ಪ್ರಾರ್ಥನೆಯು ನಂಬಿಕೆಯ ಬಲವನ್ನು ಬಳಸಿಕೊಳ್ಳುವ ಹಾಗೂ ವ್ಯಕ್ತಪಡಿಸುವ ಸಾಧನವಾಗಿದೆ. "ದೇವರ ಬಳಿ ಬರುವವನು.... ನಂಬಬೇಕು" ನಾವು ಪ್ರಾರ್ಥನೆಯ ಮೂಲಕ ಮಾತ್ರ ದೇವರ ಬಳಿಗೆ ಬರುತ್ತೇವೆ. ನಮ್ಮ ನಂಬಿಕೆಯಿಂದ ಮಾತ್ರ ಉತ್ತರಗಳು ಉಂಟಾಗುತ್ತವೆ. ಪ್ರಾರ್ಥನೆಯಲ್ಲಿ ನೀವು ನಂಬಿಕೊಂಡು ಕೇಳುವ ಪ್ರತಿಯೊಂದನ್ನೂ ಸಹ ನೀವು ಹೊಂದಿಕೊಳ್ಳಬಹುದು ಮತ್ತು ನಿಮ್ಮ ಪರಿಸ್ಥಿತಿಗಳನ್ನು ಅತ್ಯುತ್ತಮವಾಗಿ ಬದಲಾಯಿಸಿಕೊಳ್ಳಬಹುದು. ಇದಕ್ಕೆಲ್ಲ ನಂಬಿಕೆ ಕಾರ್ಯ ಮಾಡುತ್ತದೆ!
ಪ್ರಾರ್ಥನೆಗಳು
ತಂದೆಯೇ, ನೀನು ಅನುಗ್ರಹಿಸಿರುವ ನಂಬಿಕೆ ಎಂಬ ವರಕ್ಕಾಗಿ ನಾನು ಚಿರಋಣಿಯಾಗಿರುತ್ತೇನೆ. ನಿನ್ನ ವಾಗ್ದಾನಗಳ ಮೇಲೆ ಯಾವಾಗಲೂ ನಾನು ಭರವಸದಿಂದ ಇರುವಂತೆ ನನಗೆ ಬೋಧಿಸು ಮತ್ತು ನನ್ನ ಜೀವಿತದ ಪ್ರತಿಯೊಂದು ಆಯಾಮದಲ್ಲೂ ನಂಬಿಕೆಯನ್ನು ಅಳವಡಿಸಿಕೊಳ್ಳುವಂತೆ ಯೇಸು ನಾಮದಲ್ಲಿ ನನಗೆ ಸಹಾಯ ಮಾಡು. ಆಮೆನ್.
Join our WhatsApp Channel
Most Read
● ಚಿಕ್ಕ ಸಂಗತಿಗಳೂ ಸಹ ಮಹತ್ತರ ಉದ್ದೇಶಗಳನ್ನು ಪೂರೈಸಬಲ್ಲವು.● ದಿನ 10:40 ದಿನಗಳ ಉಪವಾಸ ಪ್ರಾರ್ಥನೆ.
● ಪುರುಷರು ಏಕೆ ಪತನಗೊಳ್ಳುವರು -4
● ಹನ್ನಾಳ ಜೀವಿತದಿಂದ ಕಲಿಯಬೇಕಾದ ಪಾಠ
● ದಿನ 26:40ದಿನಗಳ ಉಪವಾಸ ಪ್ರಾರ್ಥನೆ
● ಕರ್ತನ ಆನಂದ
● ದಿನ 02 : 40 ದಿನಗಳ ಉಪವಾಸ ಮತ್ತು ಪ್ರಾರ್ಥನೆ
ಅನಿಸಿಕೆಗಳು