ಅನುದಿನದ ಮನ್ನಾ
ಪ್ರವಾದನಾ ಪೂರಕ ಮಧ್ಯಸ್ಥಿಕೆ ಪ್ರಾರ್ಥನೆ ಎಂದರೇನು?
Saturday, 13th of July 2024
1
1
275
Categories :
ಪ್ರವಾದನೆ ( Prophetic)
ಮಧ್ಯಸ್ತಿಕೆ ಪ್ರಾರ್ಥನೆ (Intercession)
"ಆದದರಿಂದ ಯಾಕೋಬನು ರಾಹೇಲಳಿಗೋಸ್ಕರ ಏಳು ವರುಷ ಸೇವೆ ಮಾಡಿದನು; ಆದರೂ ಆಕೆಯಲ್ಲಿ ಬಹಳ ಪ್ರೀತಿಯನ್ನಿಟ್ಟಿದ್ದದರಿಂದ ಅದು ಅವನಿಗೆ ಸ್ವಲ್ಪ ದಿವಸದಂತೆ ಕಾಣಿಸಿತು."(ಆದಿಕಾಂಡ 29:20)
ರಾಹೇಲಳ ಮೇಲೆ ಯಾಕೋಬನಿಗಿದ್ದ ಪ್ರೇಮದ ಕಾರಣದಿಂದಾಗಿ ಏಳು ವರ್ಷಗಳು ದಿನಗಳಂತೆ ಅವನಿಗೆ ಅನ್ನಿಸಿತ್ತು. ನಮ್ಮ ಪ್ರಾರ್ಥನೆಗಳಲ್ಲೂ ನಮ್ಮ ಮಧ್ಯಸ್ಥಿಕೆ ಪ್ರಾರ್ಥನೆಗಳು ನಮಗೆ ಕರ್ತವ್ಯ ರೂಪ ಎಂದು ನಮಗೆ ಎನಿಸದೇ ಹೋದರೆ ಅವೂ ಸಹ ಪ್ರವಾದನ ಪೂರಕವಾದ ಸುವಾಸನೆಯನ್ನು ಪ್ರಾರ್ಥನೆಗೆ ತರುತ್ತದೆ.
ನೀವು ಸತ್ಯವೇದದಲ್ಲಿ ದೇವರು ಬಲವಾಗಿ ಉಪಯೋಗಿಸಿದಂತಹ ದೇವ ಸೇವಕ -ಸೇವಕಿಯರ ಜೀವಿತವನ್ನು ಕುರಿತು ಅಧ್ಯಯನ ಮಾಡಿ ನೋಡುವುದಾದರೆ ಅವರೆಲ್ಲರೂ ದೇವರ ಸ್ವರವನ್ನು ಕೇಳುವ, ದೇವರಿಂದ ಮಾಹಿತಿಯನ್ನು ಹೊಂದಿಕೊಳ್ಳುವ ಸಾಮರ್ಥ್ಯವನ್ನು ಹೊಂದಿದ್ದರು ಎಂಬುದನ್ನು ತಿಳಿದುಕೊಳ್ಳುತ್ತೀರಿ. ದಾವೀದನ ನಿದರ್ಶನವನ್ನೇ ತೆಗೆದುಕೊಳ್ಳಿ. ಅವನು ಹೋರಾಡಿದ ಬಹುತೇಕ ಯುದ್ಧಗಳಲೆಲ್ಲಾ ಅವನು ಜಯಶಾಲಿಯಾಗುತ್ತಿದ್ದ. ಅದರ ರಹಸ್ಯವೇನೆಂದರೆ, ದಾವೀದನು ಯುದ್ಧಕ್ಕೆ ಹೊರಡುವ ಮುನ್ನ ಯುದ್ಧವನ್ನು ಮುನ್ನಡೆಸಲು ಬೇಕಾದ ನಿರ್ಣಾಯಕವಾದ ಮಾಹಿತಿಯನ್ನು ಪಡೆದುಕೊಳ್ಳುತ್ತಿದ್ದ.
ನೀವೀಗ ನನ್ನೊಂದಿಗೆ 1 ಸಮುವೇಲ 30:8 ನ್ನು ನೋಡಿರಿ.
"ಆಗ ದಾವೀದನು ಯೆಹೋವನನ್ನು - ನಾನು ಆ ಗುಂಪನ್ನು ಹಿಂದಟ್ಟಬಹುದೋ? ಅದು ನನಗೆ ಸಿಕ್ಕುವದೋ ಎಂದು ಕೇಳಲು ಅತನು - ಹಿಂದಟ್ಟು, ಅದು ನಿನಗೆ ಸಿಕ್ಕುವದು; ನೀನು ಎಲ್ಲರನ್ನೂ ಬಿಡಿಸಿಕೊಂಡು ಬರುವಿ ಎಂದು ಉತ್ತರಕೊಟ್ಟನು."
ಈ ಒಂದು ದೇವರ ವಾಕ್ಯದಲ್ಲಿ ದೇವರ ಮನುಷ್ಯನಾದ ದಾವೀದನು ಮನಪೂರ್ವಕವಾಗಿ ಪ್ರಾರ್ಥನೆಯಲ್ಲಿ ಕರ್ತನನ್ನೇ ಎದುರು ನೋಡುತ್ತಾ ಯುದ್ಧದ ಕುರಿತು ಕರ್ತನನ್ನು ವಿಚಾರಸುತ್ತಿದ್ದನು ಎಂಬುದನ್ನು ನಾವು ನೋಡುತ್ತೇವೆ. ಕರ್ತನು ಆಗ ಅವನಿಗೆ ಪ್ರತಿಸ್ಪಂದಿಸಿ ದಾವೀದನು ಮುಂದೆ ಮಾರ್ಗದರ್ಶಿಸುತ್ತಿದ್ದನು. ದಾವೀದನು ಅದರಂತೆ ಮಾಡುತ್ತಿದ್ದನು.
ಪ್ರವಾದನಾ ಪೂರಕ ಮಧ್ಯಸ್ಥಿಕೆ ಪ್ರಾರ್ಥನೆಯು ದೈವೀಕ ಪ್ರಕಟಣೆಗಳ ಮೇಲೆ ಆಧಾರಗೊಂಡಿದ್ದು ಮನಃ ಪೂರ್ವಕವಾಗಿ ಕರ್ತನನ್ನು ಪ್ರಾರ್ಥಿಸುವ ಆರಾಧಿಸುವುದರಿಂದ ದೊರೆಯುವ ಪ್ರತಿಫಲವಾಗಿದೆ. ಇದು ಮಧ್ಯಸ್ಥಿಕೆ ಪ್ರಾರ್ಥನೆ ಮಾಡುವಾಗ ಕರ್ತನ ದನಿಗೆ ತೀವ್ರವಾಗಿ ಕಿವಿ ಕೊಡುವುದನ್ನೂ ಸಹ ಒಳಗೊಂಡಿರುತ್ತದೆ.
ನಾನು ಹಿಂದಿನ ದಿನಗಳಲ್ಲಿ ನನ್ನ ಹತ್ತಿರವಿದ್ದ ರೇಡಿಯೋ ಅಥವಾ ದೂರದರ್ಶನದಲ್ಲಿ ಬೇಕಾದನ್ನುಕೇಳಲು ಅಥವಾ ನೋಡಬೇಕಾದರೆ ಅದನ್ನು ಸರಿಯಾಗಿ ಟ್ಯೂನ್ ಮಾಡುತ್ತಿದ್ದನ್ನು ನೆನಪಿಸಿಕೊಳ್ಳುತ್ತೇನೆ. ಆಗ ಮಾತ್ರ ಸರಿಯಾದ ಧ್ವನಿಯನ್ನು ಸರಿಯಾದ ಚಿತ್ರಣವನ್ನು ಕೇಳಲು ಅಥವಾ ಕಾಣಲು ಸಾಧ್ಯವಾಗುತ್ತಿತ್ತು. ಅದೇ ರೀತಿ ನಾವು ನಮ್ಮ ಆತ್ಮೀಯ ಕಣ್ಣು- ಕಿವಿಗಳನ್ನು ದೇವರ ದರ್ಶನ ಹಾಗೂ ಸ್ವರಕ್ಕಾಗಿ ಸರಿಯಾಗಿ ಟ್ಯೂನ್ ಮಾಡಬೇಕು. ಆಗ ನಾವು ಆತನು ನಮಗೆ ಹೇಳುವುದನ್ನು ಸರಿಯಾಗಿ ಕೇಳಿಸಿಕೊಳ್ಳಲು ಆತನು ತೋರಿಸುವುದನ್ನು ಸರಿಯಾಗಿ ಕಾಣಲು ನಮಗೆ ಸಾಧ್ಯವಾಗುತ್ತದೆ.
ದೈವಿಕ ಪ್ರಕಟಣೆಗಳನ್ನು ಎದುರು ನೋಡುವಂತದ್ದು ನಾವು ಪ್ರವಾದನಾ ಪೂರಕವಾದ ಮಧ್ಯಸ್ಥಿಕೆ ಪ್ರಾರ್ಥನೆ ಮಾಡುವುದಕ್ಕೇ ಸಂಬಂಧಿಸಿರುತ್ತದೆ.
ಕೀರ್ತನೆ 53:2 ಹೇಳುವಂತೆ "ಮನುಷ್ಯರಲ್ಲಿ ತನ್ನ ಸಾನ್ನಿಧ್ಯವನ್ನು ಅಪೇಕ್ಷಿಸುವ ಬುದ್ಧಿವಂತರು ಇದ್ದಾರೋ ಎಂದು ದೇವರು ಆಕಾಶದಿಂದ ಮನುಷ್ಯರನ್ನು ನೋಡುತ್ತಿರುತ್ತಾನೆ.. "
ನಾವು ಆತನು ನಮಗೆ ಅನುಗ್ರಹಿಸಿರುವ ತಿಳುವಳಿಕೆ ಆಧಾರದಲ್ಲಿ ಕರ್ತನನ್ನು ಎದುರು ನೋಡುವುದಾದರೆ ಮಧ್ಯಸ್ಥಿಕೆ ಪ್ರಾರ್ಥನೆ ಎಂಬುದು ಇನ್ನು ಎಂದಿಗೂ ಒಂದು ಧಾರ್ಮಿಕ ಚಟುವಟಿಕೆಯಾಗಿ ಉಳಿಯಲಾರದು. ದೇವರು ಸಹ ನಮ್ಮಿಂದ ಬಯಸುವುದು ಇದನ್ನೇ ಎಂದು ದೇವರ ವಾಕ್ಯವು ಸ್ಪಷ್ಟವಾಗಿ ಹೇಳುತ್ತದೆ. ಅದು ಸಭೆಗಾಗಿ ಮಾಡುವ ಮಧ್ಯಸ್ಥಿಕೆ ಪ್ರಾರ್ಥನೆಯಾಗಲಿ, ದೇಶಕ್ಕಾಗಿ ಅಥವಾ ನಮ್ಮ ಕುಟುಂಬಕ್ಕಾಗಿ ಮಾಡುವ ಪ್ರಾರ್ಥನೆಯಾಗಿರಲೀ. ನಾವು ಆತನ ಮೆಲು ದನಿಯನ್ನು ಕೇಳುವಷ್ಟು ಸೂಕ್ಷ್ಮತೆಯ ಕಿವಿಯುಳ್ಳವರಾಗಿರಬೇಕು.
ನಾವು ಮಧ್ಯಸ್ಥಿಕೆ ವಹಿಸಬೇಕಾದ ವಿಷಯ ಕುರಿತ ಪ್ರವಾದನಾ ಮಾಹಿತಿಯು ಕನಸುಗಳು, ದರ್ಶನಗಳು ಮತ್ತು ಆತ್ಮದಿಂದ ಹೊರಹೊಮ್ಮುವ ಸೂಕ್ಷ್ಮವಾದ ಅನಿಸಿಕೆಗಳ ಮೂಲಕ ಅಥವಾ ಪವಿತ್ರಾತ್ಮನ ಮೂಲಕ ಬಲವಾಗಿ ಹೇಳುವಂಥ ಸತ್ಯವೇದದಲ್ಲಿನ ವಾಕ್ಯಭಾಗದಿಂದಲೂ ಕಂಡು ಬರಬಹುದು.ಗುಂಪಿನಲ್ಲಿ ಮಧ್ಯಸ್ಥಿಕೆ ಪ್ರಾರ್ಥನೆ ಮಾಡುವಾಗ ನಾವು ಕರ್ತನಿಂದ ಮಾಹಿತಿಯನ್ನು ಸ್ವೀಕರಿಸಿದರೆ ಅದನ್ನು ಸಭೆಯಲ್ಲಿ ಮಾತನಾಡಬಾರದು. ಅದನ್ನು ಸದ್ದಿಲ್ಲದೆ ಸಭಾ ನಾಯಕರಿಗೆ ತಿಳಿಸಬೇಕು. ಇಲ್ಲಿಯೇ ನಮ್ಮ ದೀನತೆ ಕಾಣುವಂತದ್ದು. ಅನೇಕರು ತಾವು ಎಲ್ಲರ ಮುಂದೆ ಕಾಣಿಸಿಕೊಳ್ಳಬೇಕು ಎಲ್ಲರಿಂದ ಗುರುತಿಸಲ್ಪಡಬೇಕೆಂದು ಬಯಸುತ್ತಾರೆ. ಇಲ್ಲಿಯೇ ನಮ್ಮ ಅಹಂಕಾರದ ಬಳ್ಳಿಯು ಚಿಗುರೊಡೆಯಲು ಅನುವು ಮಾಡಿ ಕೊಡುವಂತದ್ದು.
ನಾವು ಮಧ್ಯಸ್ಥಿಕೆ ಪ್ರಾರ್ಥನೆ ಮಾಡುವ ವಿಚಾರದಲ್ಲಿ ಆತನ ಚಿತ್ತವನ್ನೇ ಸ್ಥಾಪಿಸುವಂತದ್ದೇ ಪ್ರವಾದನ ಪೂರಕ ಮಧ್ಯಸ್ಥಿಕೆ ಪ್ರಾರ್ಥನೆಯ ಉದ್ದೇಶವಾಗಿದೆ.
ಪ್ರಾರ್ಥನೆಗಳು
ತಂದೆಯೇ, ಮನಪೂರ್ವಕವಾಗಿ ನಾನು ನಿನ್ನನ್ನು ಹುಡುಕುವ ಕೃಪೆಯನ್ನು ನನಗೆ ಅನುಗ್ರಹಿಸು. ನಿನ್ನನ್ನು ನೋಡುವ ಹಾಗೆ ನಿನ್ನ ಸ್ವರ ಕೇಳುವ ಹಾಗೆ ನನ್ನ ಕಣ್ಣುಗಳನ್ನು- ಕಿವಿಗಳನ್ನು ಯೇಸುನಾಮದಲ್ಲಿ ತೆರೆ ಮಾಡು. ಆಮೆನ್.
Join our WhatsApp Channel
Most Read
● ಕರ್ತನೇ, ನಾನು ಏನು ಮಾಡಬೇಕೆಂದು ನೀನು ಬಯಸುತ್ತೀ?● ದೇವರು ನನಗಿಂದು ಒದಗಿಸುತ್ತಾನೋ?
● ದಿನ 30:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ.
● ಮಾತಿನಲ್ಲಿರುವ ಶಕ್ತಿ
● ಯೇಸು ನಿಜವಾಗಿ ಖಡ್ಗ ಹಾಕಲೆಂದು ಬಂದನೇ?
● ಸ್ತ್ರೀ ಪುರುಷರು ಏಕೆ ಪತನಗೊಳ್ಳುವರು- 5
● ಮತ್ತೊಬ್ಬರ ಪಾತ್ರೆಯನ್ನು ತುಂಬಿಸುವುದನ್ನು ಬಿಟ್ಟು ಬಿಡಬೇಡಿರಿ.
ಅನಿಸಿಕೆಗಳು