ಅನುದಿನದ ಮನ್ನಾ
ಸರ್ವಶಕ್ತನಾದ ದೇವರ ಅದ್ಬುತ ಸಮಾಗಮ.
Friday, 29th of March 2024
1
0
331
Categories :
ದೇವರೊಂದಿಗೆ ಆತ್ಮೀಯತೆ (Intimacy with God)
"ಅದಕ್ಕಾತನು - ನನ್ನ ಕೃಪೆಯೇ ನಿನಗೆ ಸಾಕು; ಬಲಹೀನತೆಯಲ್ಲಿಯೇ ಬಲವು ಪೂರ್ಣಸಾಧಕವಾಗುತ್ತದೆ ಎಂದು ನನಗೆ ಹೇಳಿದ್ದಾನೆ. ಹೀಗಿರಲಾಗಿ ಕ್ರಿಸ್ತನ ಬಲವು ನನ್ನಲ್ಲಿ ನೆಲಸಿಕೊಂಡಿರಬೇಕೆಂದು ನನಗುಂಟಾಗುವ ನಿರ್ಬಲಾವಸ್ಥೆಗಳ ವಿಷಯದಲ್ಲಿಯೇ ಬಹುಸಂತೋಷವಾಗಿ ಹೆಚ್ಚಳಪಡುವೆನು."(2 ಕೊರಿಂಥದವರಿಗೆ 12:9).
ದಾನಿಯೇಲನು ಒಂದು ದರ್ಶನವನ್ನು ಕಂಡನು. ಅದು ಅವನನ್ನು ಬಹಳವಾಗಿ ಅಸ್ವಸ್ಥ ಗೊಳಿಸಿತು. ಅವನು ಆ ದರ್ಶನದ ಅರ್ಥವನ್ನು ಗ್ರಹಿಸಿಕೊಳ್ಳುವುದಕ್ಕಾಗಿ ಮೂರು ವಾರಗಳ ತನಕ ಉಪವಾಸವಿದ್ದನು. ಅವನು ಆ ಮೂರು ವಾರಗಳ ಉಪವಾಸ ಮುಗಿಸಿದ ನಂತರ ಮೂರು ದಿನಗಳಾದ ಮೇಲೆ ದೇವರಿಂದ ಬಂದ ದೂತನೊಬ್ಬನು ದಾನಿಯೇಲನಿಗೆ ಕಾಣಿಸಿಕೊಂಡನು. ಆ ಸಂದೇಶದೂತನು ದಾನಿಯೇಲನಿಗೆ ದಾನಿಯೇಲನು ವಿಜ್ಞಾಪಿಸಿದ ಮೊದಲನೇ ದಿನವೇ ಅವನ ವಿಜ್ಞಾಪನೆಯು ಪರಲೋಕವನ್ನು ಮುಟ್ಟಿತ್ತು. ಆದರೆ ಪಾರಸಿಯ ರಾಜ್ಯದ ದಿವ್ಯ ಪಾಲಕನೊಬ್ಬ ಅಂದರೆ ಸೈತಾನನ ದೂತನೊಬ್ಬನು ತಾತ್ಕಾಲಿಕವಾಗಿ 21 ದಿನ ಈ ಸಂದೇಶ ದೂತನನ್ನು ತಡೆದುದರಿಂದ ದೇವರ ಉತ್ತರವನ್ನು ತಲುಪಿಸಲು ತಡವಾಯಿತು ಎಂದು ಹೇಳಿದನು.
ನಾವು ದೇವರನ್ನು ಮನಪೂರ್ವಕವಾಗಿ ಹುಡುಕಲೇಬೇಕೆಂದೂ, ಅದಕ್ಕಾಗಿ ನಮ್ಮ ಜೀವಿತದಲ್ಲಿ ಸಮಯ ಮೀಸಲಿಡುವ ಕೆಲವೊಂದು ಕಾಲ ಬರುತ್ತದೆ.ಈ ಸಮಯದಲ್ಲಿಯೇ ನಾವು ಹಿಂದೆಂದೂ ಅನುಭವಿಸಿರದಂತಹ ಪರಲೋಕದ ವಾಣಿಯನ್ನು ಕೇಳುವವರಾಗುತ್ತೇವೆ.ದಾನಿಯೇಲನು ಮಾಡಿದ ಅವಿರತ ಪ್ರಾರ್ಥನೆಯ ಫಲವಾಗಿ ಅವನು ವೈಯಕ್ತಿಕವಾಗಿ ಪರಲೋಕದ ಅದ್ಭುತ ದರ್ಶನವನ್ನು ಅನುಭವಿಸಿದನು. ಹೇಗೂ, ಅದನ್ನು ದೇವರಿಂದ ಹೊಂದಿಕೊಳ್ಳಲು ಅವನು ತನ್ನನ್ನು ಏಕಾಂಗಿಯಾಗಿ ಪ್ರತ್ಯೇಕಿಸಿಕೊಂಡನು. ತನ್ನ ಬಲವನ್ನೆಲ್ಲಾ ತ್ಯಜಿಸಿ ತನ್ನನ್ನು ಬರಿದುಕೊಂಡು ತನ್ನ ಅಸಹಾಯಕತೆಯನ್ನು ದೇವರ ಮುಂದಿಟ್ಟನು. ನಾವು ನಮ್ಮ ಸ್ವಂತ ಬಲದಲ್ಲಿ ಪರಲೋಕದ ಸಾನಿಧ್ಯವನ್ನು ಹೊಂದಲು ಅಸಮರ್ಥರಾದಾಗ ಅಥವಾ ಅಂತಹ ಸನ್ನಿವೇಶಗಳು ನಮ್ಮ ಜೀವಿತದಲ್ಲಿ ಜರಗುವಾಗ ಪರಲೋಕದ ವಾಣಿಯನ್ನು ಕೇಳಿಸಿಕೊಳ್ಳುವ ಸ್ಥಾನಕ್ಕೆ ಬರುತ್ತೇವೆ. ನಮ್ಮ ದೀನತ್ವ ಮತ್ತು ಬಲಹೀನತೆಯ ಪರಿಸ್ಥಿತಿಯೇ ಜೀವ ಸ್ವರೂಪನಾದ ದೇವರ ಅದ್ಭುತ ದರ್ಶನವನ್ನು ನಾವು ವೈಯಕ್ತಿಕವಾಗಿ ಹೊಂದಲು ಸ್ಥಾನವನ್ನು ಕಲ್ಪಿಸಿ ಕೊಡುತ್ತದೆ ಎಂಬುದನ್ನು ಇದು ಸಾಬೀತುಗೊಳಿಸುತ್ತದೆ.
ಅಪೋಸ್ತಲನಾದ ಪೌಲನು ಒಬ್ಬ ವಿದ್ವಾಂಸನಾಗಿದ್ದನು. ಆದರೂ ತನ್ನ ಮೂಲಕ ಕಾರ್ಯ ಸಾಧಿಸುತ್ತಿರುವಂಥದ್ದು ದೇವರ ಸಾಮರ್ಥ್ಯವೇ ಆಗಿದೆ ಎಂಬ ರಹಸ್ಯವನ್ನು ಅವನು ಅರಿತುಕೊಂಡಿದ್ದನು. ಆದುದರಿಂದಲೇ ಅವನು ಆಗಾಗ್ಗೆ ಹಾದು ಹೋಗುತ್ತಿದ್ದ ಕಷ್ಟಗಳಲ್ಲಿಯೂ ಹಿಂಸೆಗಳಲ್ಲಿಯೂ ಅವನು ದೇವರನ್ನು ದೂಷಿಸದೇ ಇದ್ದದಕ್ಕೆ ನಾವು ಆಶ್ಚರ್ಯಪಡಬೇಕಿಲ್ಲ. ಆದರೆ ಇವೆಲ್ಲವುಗಳು ಅವನಿಗೆ ದೇವರಿನ ಮೇಲಿನ ಪ್ರೀತಿಯನ್ನು ಇನ್ನಷ್ಟೂ ಬೆಳಗಿಸಲು ಇಂಧನವಾಗಿ ಬಳಕೆಯಾಯಿತು.
ನಿಮಗಿಂದು ವೈಯಕ್ತಿಕವಾಗಿ ದೇವರೊಂದಿಗೆ ಒಂದು ಅದ್ಭುತವಾದಂತಹ ಸಮಾಗಮಬೇಕೆನಿಸುತ್ತಿದೆಯೇ? ದೇವರು ನಿಮ್ಮ ಪರವಾಗಿ ಕಾರ್ಯ ಮಾಡಬೇಕಾದ ಅವಶ್ಯಕತೆ ಇದೆ ಎಂದು ಎನಿಸುತ್ತಿದೆಯೇ? ಹಾಗಾದರೆ ಮನಃಪೂರ್ವಕವಾಗಿ ಆತನನ್ನು ಹುಡುಕಿರಿ. ನಿಮಗೆ ಆತನ ಸಾನಿಧ್ಯದ ಗಂಭೀರವಾದ ಅವಶ್ಯಕತೆ ಇದೆ ಎಂಬುದನ್ನು ಪ್ರದರ್ಶಿಸಿರಿ.ನಿಮ್ಮ ಜೀವನದ ಈ ಒತ್ತಡಗಳು ದೇವರಿಂದ ನಿಮ್ಮನ್ನು ದೂರವಿರಿಸಲು ಬಿಟ್ಟು ಕೊಡಬೇಡಿರಿ. ಆದರೆ ಅವು ನಿಮ್ಮನ್ನು ಆತನಿಗೆ ಇನ್ನೂ ಹೆಚ್ಚಾದ ಪ್ರೀತಿಯಿಂದ ಅಂಟಿಕೊಳ್ಳುವಂತೆ ಮಾಡಲಿ. ದೇವರೊಂದಿಗೆ ಮಾತ್ರ ಉಪಸ್ಥಿತರಾಗಿರ್ರಿ ಮತ್ತು ಆತನ ಮುಂದೆ ನಿಮ್ಮ ಅಸಹಾಯಕತೆಯನ್ನು ಅರಿಕೆ ಮಾಡಿರಿ. ಆತನು ಖಂಡಿತವಾಗಿಯೂ ತನ್ನ ಅದ್ಭುತವಾದ ಪ್ರಸನ್ನತೆಯಿಂದ ನಿಮ್ಮನ್ನು ಸನ್ಮಾನಿಸುವನು. ನಿಮ್ಮ ಕಣ್ಣೀರೇ ನಿಮಗೆ ಅದ್ಭುತವನ್ನು ಫಲಿಸುವ ಬಿತ್ತನೆಯ ಬೀಜವಾಗಿದೆ.
ಪ್ರಾರ್ಥನೆಗಳು
ತಂದೆಯೇ, ನಾನು ನಿನ್ನ ದರ್ಶನವನ್ನು ದಾಹದಿಂದ ಅಪೇಕ್ಷಿಸುತ್ತೇನೆ. ಈ ಜೀವನದ ಒತ್ತಡಗಳು ನಿನ್ನಿಂದ ನನ್ನನ್ನು ದೂರ ಮಾಡದಂತೆ ನನ್ನನ್ನು ನಿನಗೆ ಇನ್ನೂ ಹೆಚ್ಚಾದ ಪ್ರೀತಿಯಿಂದ ಅಂಟಿಕೊಳ್ಳುವಂತೆ ಮಾಡುವ, ನನ್ನನ್ನು ನಿತ್ಯಕ್ಕೂ ಮಾರ್ಪಡಿಸುವಂತಹ ನಿನ್ನ ನೂತನವಾದ ದರ್ಶನವನ್ನು ಹೊಂದಲು ನಾನು ಬಯಸುತ್ತೇನೆ. ಯೇಸು ನಾಮದಲ್ಲಿ ಪ್ರಾರ್ಥಿಸುತ್ತಿದ್ದೇನೆ ತಂದೆಯೇ ಆಮೇನ್.
Join our WhatsApp Channel
Most Read
● ನೆಪ ಹೇಳುವ ಕಲೆ● ವಾಕ್ಯದಿಂದ ಬೆಳಕು ಬರುತ್ತದೆ
● ಕೃಪೆಯನ್ನು ತೋರಿಸುವ ಪ್ರಾಯೋಗಿಕ ವಿಧಾನ.
● ಅಂತ್ಯದಿನಗಳ ಕುರಿತು ಪ್ರವಾದನ ಯುಕ್ತ ಗೂಡಾರ್ಥ ವಿವರಣೆ
● ದೇವರು ನಿಮ್ಮನ್ನು ಉಪಯೋಗಿಸಲು ಬಯಸುತ್ತಾನೆ.
● ನಿಮ್ಮ ಗತಿಯನ್ನು ಬದಲಾಯಿಸಿ
● ನಮ್ಮ ಆಯ್ಕೆಯ ಪರಿಣಾಮಗಳು
ಅನಿಸಿಕೆಗಳು