"ಅದಕ್ಕೆ ಆ ಸ್ತ್ರೀಯು “ನನಗೆ ಗಂಡನಿಲ್ಲ” ಎಂದಳು. ಯೇಸು ಆಕೆಗೆ, “ನನಗೆ ಗಂಡನಿಲ್ಲವೆಂದು ನೀನು ಹೇಳಿದ್ದು ಸರಿಯೇ. ನಿನಗೆ ಐದು ಮಂದಿ ಗಂಡಂದಿರಿದ್ದರು. ಈಗ ನಿನಗಿರುವವನು ನಿನ್ನ ಗಂಡನಲ್ಲ; ನೀನು ಹೇಳಿದ್ದು ನಿಜವಾದ ಸಂಗತಿ” ಎಂದನು. (ಯೋಹಾನ 4:17-18)
ಒಂದು ದಿನ ಕರ್ತನಾದ ಯೇಸು ಯೂದಾಯದಿಂದ ಗಲಿಲಾಯಕ್ಕೆ ಹೋಗುತ್ತಿದ್ದನು. ಅವನು ಸಮಾರ್ಯದ ಮೂಲಕ ಹಾದು ಹೋಗಬೇಕಿತ್ತು. ಹಾಗೆ ಹೋಗುವಾಗ ತನ್ನ ಪ್ರಯಾಣದಲ್ಲಿ ಅವನು ಸುಕರ್ ಎಂಬ ಸಮಾರ್ಯದ ಪಟ್ಟಣಕ್ಕೆ ಬಂದನು. ಅಲ್ಲಿ, ಒಬ್ಬ ಸಮಾರ್ಯದ ಸ್ತ್ರೀ (ಅವಳ ಹೆಸರನ್ನು ನಮಗೆ ತಿಳಿಯಲ್ಪಡಿಸವುದಿಲ್ಲ) ಮಧ್ಯಾಹ್ನದ ಸಮಯದಲ್ಲಿ ಬಾವಿಗೆ ನೀರು ಸೇದಲು ಬಂದಿದ್ದಳು.
ಆಗ ಸಾಮಾನ್ಯವಾಗಿ ಮಹಿಳೆಯರು ತಂಪು ಸಮಯದಲ್ಲಿ ಬಾವಿಯಿಂದ ನೀರು ಸೇದಲು ಬರುತ್ತಿದ್ದರು. ಈ ಮಹಿಳೆ, ಬಹುಶಃ ತನ್ನ ಕಳಂಕಿತ ಖ್ಯಾತಿಯ ಬಗ್ಗೆ ಚೆನ್ನಾಗಿ ತಿಳಿದಿದ್ದಳು, ಹಾಗಾಗಿಯೇ ಉದ್ದೇಶಪೂರ್ವಕವಾಗಿ ನೀರನ್ನು ಸೇದಲು ದಿನದಲ್ಲಿ ಅತ್ಯಂತ ಕಡಿಮೆ ಜನ ಬರುವ ಸಮಯವನ್ನು ಆರಿಸಿಕೊಂದಿದ್ದಳು. ತನ್ನ ನೆರೆಹೊರೆಯವರ ಪಿಸುಮಾತುಗಳು, ಗೇಲಿ ಮಾತುಗಳು ಮತ್ತು ಮುಜುಗರದಿಂದ ತಪ್ಪಿಸಿಕೊಳ್ಳಲು ಜಾಗರೂಕವಾಗಿ ವರ್ತಿಸುತ್ತಿದ್ದಳು - ನಿಜಕ್ಕೂ ಆಕೆ ಸಾಗುತ್ತಿದ್ದ ಜೀವನದ ಮಾರ್ಗವು ಎಷ್ಟು ದುಃಖಕರವಾದದ್ದು.
ಅವಳ ಜೀವನದಲ್ಲಿ ಈಗಾಗಲೇ ಆರು ಜನ ಪುರುಷರು ಬಂದಿದ್ದರು, ಆದರೆ ಆಕೆಯು ಬಯಸಿದ್ದನ್ನು- ಅಂದರೆ ನಿಜವಾದ ಪ್ರೀತಿಯನ್ನು ನೀಡಲು ಅವರಾರಿಗೂ ಸಾಧ್ಯವಾಗಿರಲಿಲ್ಲ - ಪ್ರಾಯಶಃ ಅವರೆಲ್ಲಾ ಅವಳನ್ನು ನಿಂದಿಸಿ ಬಿಟ್ಟು ಹೋಗಿರಬಹುದು. ಅತ್ಯಂತ ಆಸಕ್ತಿದಾಯಕ ವಿಷಯವೆಂದರೆ ಕರ್ತನಾದ ಯೇಸುವು ಅವಳ ಜೀವನದಲ್ಲಿ ಬಂದ ಏಳನೇ ವ್ಯಕ್ತಿ.
ಯೇಸುವು ಪರಿಪೂರ್ಣ ವ್ಯಕ್ತಿಯಾಗಿದ್ದನು. ಆತನು ತನ್ನ ಯಾವುದೇ ಸ್ವಾರ್ಥಕ್ಕಾಗಿ ಅವಳನ್ನು ಬಳಸಿಕೊಳ್ಳಲು ಆತನು ಬಯಸಲಿಲ್ಲ. ಆತನ ಪ್ರೀತಿ ಪರಿಶುದ್ಧ ಮತ್ತು ಪವಿತ್ರವಾಗಿತ್ತು. ಇದುವೇ ಅವಳು ನಿಜವಾಗಿಯೂ ಹುಡುಕುತ್ತಿದ್ದ ಪ್ರೀತಿಯಾಗಿತ್ತು. ಇತರ ಪುರುಷರು ನೀಡಿದ ಸುಳ್ಳು ಪ್ರೀತಿಯಿಂದ ಅವಳು ಬೇಸತ್ತು ಹೋಗಿದ್ದಳು. ಒಂದು ಸಾರಿ ಆಕೆ ಯೇಸುವಿನ ಪ್ರೀತಿಯನ್ನು ಪಡೆದುಕೊಂಡ ನಂತರ, ಆಕೆ ಸಮಾಜವನ್ನು ಎದುರಿಸ ಶಕ್ತಳಾದಳು ಅಷ್ಟೇ ಅಲ್ಲದೇ ಆತನು ತನಗಾಗಿ ಮಾಡಿದ್ದನ್ನು ಕುರಿತು ಮಾತನಾಡುವಂತವಳಾದಳು.
ಅಂತೆಯೇ, ನೀವು ಸಹ ಯೇಸುವಿನ ಸ್ನೇಹಿತರಾದಾಗ, ಇತರರು ನೀಡಲು ಸಾಧ್ಯವಾಗದ ಈ ನಿಜವಾದ ಪ್ರೀತಿಯನ್ನು ನೀವು ಅನುಭವಿಸುವಿರಿ. ಅನೇಕ ವರ್ಷಗಳಿಂದ ತನ್ನನ್ನು ಪ್ರೀತಿಸುತ್ತಿದ್ದ ತನ್ನ ಪ್ರೇಮಿ ತನ್ನನ್ನು ತೊರೆದು ಹೋದನು ಎಂದು ಯುವತಿಯೊಬ್ಬಳು ನನಗೆ ಪತ್ರ ಬರೆದು ಆತ್ಮಹತ್ಯೆಯ ಯೋಚನೆಯಲ್ಲಿ ತಾನಿದ್ದೇನೆ ಎಂದು ಹೇಳಿದಳು.
ಮದುವೆಯಾಗುವುದು ಸಾಧ್ಯವಾದರೆ, ಅದು ತಮ್ಮ ಸಮಸ್ಯೆಗಳನೆಲ್ಲ ಪರಿಹರಿಸುತ್ತದೆ ಎಂದು ಹಲವರು ಭಾವಿಸುತ್ತಾರೆ.
ಆದರೆ ಮದುವೆಯೇ ಪರಿಹಾರವಲ್ಲ. ವಿವಾಹಿತ ದಂಪತಿಗಳೂ ಸಹ ತಾವು ಬೇರ್ಪಟ್ಟು ಒಂಟಿಯಾಗಿರಬೇಕೆಂದು ಬಯಸುತ್ತಾರೆ ಎಂದು ನಾನು ಆಗಾಗ್ಗೆ ಕೇಳುತ್ತಿರುತ್ತೇನೆ. ದುರದೃಷ್ಟವಶಾತ್, ಇದು ಸಹ ಪರಿಹಾರ ಅಲ್ಲ.
ನೀವು ಈಗ ನಿಮ್ಮ ಪ್ರಸ್ತುತ ಸ್ಥಿತಿಯಲ್ಲಿ ಸಂತೃಪ್ತಿಯನ್ನು ಕಂಡುಕೊಳ್ಳುವುದಾದರೆ - , ನೀವು ವಿವಾಹಿತರಾಗಿದ್ದರೂ ಅಥವಾ ಏಕಾಂಗಿಯಾಗಿದ್ದರೂ ಖಂಡಿತವಾಗಿಯೂ ಸಂತೃಪ್ತಿಯಿಂದ ಇರುವಿರಿ. ಈ ಸಂತೃಪ್ತಿಯು ಯೇಸುವಿನಲ್ಲಿ ಮಾತ್ರ ದೊರಕುವಂತದ್ದಾಗಿದೆ .
ಸಮಾರ್ಯ ಸ್ತ್ರೀಯು ತನ್ನ ಸಂತೃಪ್ತಿಯನ್ನು ಯೇಸುವಿನಲ್ಲಿ ಕಂಡುಕೊಂಡಳು, ಆದ್ದರಿಂದ ನಾವು ಈ ಆತ್ಮೀಕ ಮಹಿಳೆಯನ್ನು ಇಂದಿಗೂ ನೆನಪಿಸಿಕೊಳ್ಳುತ್ತೇವೆ. ಈಗ ನಿಮ್ಮ ಸರದಿ.
ಪ್ರಾರ್ಥನೆಗಳು
ಪರಲೋಕದ ತಂದೆಯೇ, ಶಾಶ್ವತ ಪ್ರೀತಿಯಿಂದ ನನ್ನನ್ನು ಪ್ರೀತಿಸಿದ್ದಕ್ಕಾಗಿ ನಾನು ನಿನಗೆ ಸ್ತೋತ್ರ ಸಲ್ಲಿಸುತ್ತೇನೆ. ನಿನ್ನ ಪ್ರೀತಿಯು ಸ್ವಾರ್ಥವಲ್ಲ. ನಿನ್ನ ಪ್ರೀತಿ ಬೇಷರತ್ತಾಗಿದೆ. ನೀನು ನನ್ನನ್ನು ಎಷ್ಟು ಅಧಿಕವಾಗಿ ಪ್ರೀತಿಸುವವನಾಗಿದ್ದೀಯ ಎಂದರೆ ಅದಕ್ಕಾಗಿ ನಿನ್ನ ಒಬ್ಬನೇ ಮಗನಾದ ಕರ್ತನಾದ ಯೇಸುವನ್ನು ನನಗಾಗಿ ಕಳುಹಿಸಿ ಕೊಟ್ಟೆ . ನಿನ್ನ ಪ್ರೀತಿಯಲ್ಲಿ ಬೆಳೆಯಲು ನನಗೆ ಯೇಸುನಾಮದಲ್ಲಿ ಸಹಾಯ ಮಾಡು.. ಆಮೆನ್.
Join our WhatsApp Channel
Most Read
● ನಿಮ್ಮ ಸಂಪರ್ಕವನ್ನು ಕಳೆದುಕೊಳ್ಳಬೇಡಿರಿ● ದಿನ 37 :40ದಿನಗಳ ಉಪವಾಸ ಮತ್ತು ಪ್ರಾರ್ಥನೆ.
● ಇದರ ವ್ಯತ್ಯಾಸವು ಸ್ಪಷ್ಟವಾಗಿದೆ
● ಪುರುಷರು ಯಾಕೆ ಪತನಗೊಳ್ಳುವರು -2
● ಆಳವಾದ ನೀರಿನೊಳಗೆ
● ನೀವಿನ್ನೂ ತಡಮಾಡುತ್ತಿರುವುದೇಕೆ?
● ದೇವರ ಕೃಪೆಯನ್ನು ಸೇದುವುದು
ಅನಿಸಿಕೆಗಳು