ಅನುದಿನದ ಮನ್ನಾ
ಅನ್ಯಭಾಷೆಯನ್ನಾಡುವುದು ಪ್ರಗತಿಯನ್ನು ತರುತ್ತದೆ.
Monday, 8th of April 2024
5
3
491
Categories :
ಅನ್ಯಭಾಷೆಯನ್ನಾಡುವುದು (Speak in Tongues)
"ಪ್ರಿಯರೇ ನೀವಾದರೋ ನಿಮಗಿರುವ ಅತೀ ಪರಿಶುದ್ಧವಾದ ಕ್ರಿಸ್ತನಂಬಿಕೆಯನ್ನು ಆಧಾರ ಮಾಡಿಕೊಂಡು ಭಕ್ತಿಯಲ್ಲಿ ಅಭಿವೃದ್ಧಿ ಹೊಂದುತ್ತಾ (ಪ್ರಗತಿ ಹೊಂದುತ್ತಾ ಮಂದಿರದ ಹಾಗೆ ಎತ್ತರ ಎತ್ತರಕ್ಕೆ ಬೆಳೆಯುತ್ತಾ) ಪವಿತ್ರಾತ್ಮ ಪ್ರೇರಿತರಾಗಿ ಪ್ರಾರ್ಥಿಸುತ್ತಿರಿ" (ಯೂದ 1:20)
ನೀವು ಅನ್ಯ ಭಾಷೆಯಲ್ಲಿ ಪ್ರಾರ್ಥಿಸುವಾಗ ನೀವು ಪ್ರಗತಿ ಹೊಂದುತ್ತಾ, ಮೇಲಿಂದ ಮೇಲೆ ಕಟ್ಟಲ್ಪಡುವ ಮಂದಿರೋಪಾದಿಯಲ್ಲಿ ಬೆಳೆಯುತ್ತಾ ಹೋಗುವಿರಿ. ಇದರ ಅರ್ಥ ನೀವು ಯಾರು ನಿರ್ಲಕ್ಷಿಸಲಾರದಷ್ಟು ಬೆಳೆಯುತ್ತಾ ಹೋಗುವಿರಿ.ನೀವು ಮಂದಿರ ಎಂದು ಸೂಚಿಸಲ್ಪಡುವಾಗ ನೀವು ಎಂದಿಗೂ ಕೂಡ ಕೆಳಗೆ ನೋಡುವುದಿಲ್ಲ.ಹಾಗೆಯೇ ನಿಮ್ಮ ಜೀವನದ ನಿಲುವು ಸಹ ಎಲ್ಲರೂ ತಲೆ ಎತ್ತಿ ನೋಡುವ ಹಾಗೆ ಉತ್ತಮಗೊಳ್ಳುತ್ತಾ ಹೋಗುತ್ತಿರುತ್ತದೆ. ನಿಮ್ಮ ಪ್ರಭಾವ ಹಾಗೂ ವರ್ಚಸ್ಸನ್ನು ಯಾರೂ ಕಡೆಗಣಿಸಲು ಸಾಧ್ಯವೇ ಇರುವುದಿಲ್ಲ. ನೀವು ಈ ಗೋಳಾಕಾರದ ಭೂಮಿಯಲ್ಲಿ ಅಮಿತವಾಗಿ ಹರಡಿಕೊಳ್ಳುತ್ತಾ ಹೋಗುವಿರಿ.
ಹಾಗೆಯೇ ಈ ಮಂದಿರವು ಆತ್ಮಿಕವಾದ ಕಟ್ಟಡವಾಗಿದೆ. ಅದು ದೇವರ ತೈಲದಿಂದ ಅಭಿಷೇಕವನ್ನು ಹೊಂದಿಕೊಂಡಂತ ಕಟ್ಟಡವಾಗಿದೆ. ನೀವು 2ಅರಸು 4:1-7ರವರೆಗೆ ಓದಿ ನೋಡುವುದಾದರೆ, ಒಂದು ದಿನ ಪ್ರವಾದಿಯಾದ ಎಲೀಷನು ಒಬ್ಬ ವಿಧವೆ ಮತ್ತು ಆಕೆಯ ಮಕ್ಕಳನ್ನು ಸಾಲದ ಬಂಧನದಿಂದ ಮುಕ್ತರಾಗಲು ಸಹಾಯ ಮಾಡುತ್ತಾನೆ. ಅವನು ಅದಕ್ಕಾಗಿ ಅವರಿಗೆ ಹೋಗಿ ಅವರ ನೆರೆಹೊರೆಯವರಿಂದ ಅವರಿಗೆ ಸಾಧ್ಯವಾಗುವಷ್ಟು ಪಾತ್ರೆಗಳನ್ನು ಕೇಳಿ ತೆಗೆದುಕೊಂಡು ಬಂದು ಬಾಗಿಲನ್ನು ಮುಚ್ಚಿ ಆ ಪಾತ್ರೆ ಒಳಗೆ ಅವರ ಬಳಿಯಲ್ಲಿದ್ದ ಎಣ್ಣೆಯನ್ನು ಹೊಯ್ಯುವಂತೆ ಒಂದು ಸರಳವಾದ ಸೂಚನೆ ಕೊಟ್ಟನಷ್ಟೇ.
ಅನ್ಯ ಭಾಷೆಯಲ್ಲಿ ಪ್ರಾರ್ಥಿಸುವಂಥದ್ದು ಹೀಗೆಯೇ ದೇವರ ಅತ್ಯಮೂಲ್ಯವಾದ ಅಭಿಷೇಕ ತೈಲದಿಂದ ಆತ್ಮಿಕವಾದ ಕಟ್ಟಡವನ್ನು ಕಟ್ಟಲು ಸಹಾಯ ಮಾಡುತ್ತದೆ.
"ಭಕ್ತಿವೃದ್ಧಿ"ಎಂಬ ಪದವು ಬ್ಯಾಟರಿಯನ್ನು ಚಾರ್ಜ್ ಮಾಡು ಎಂಬ ಅರ್ಥವನ್ನು ಕೊಡುವಂತದ್ದಾಗಿದೆ. ಅನ್ಯ ಭಾಷೆಯಲ್ಲಿ ಪ್ರಾರ್ಥನೆ ಮಾಡುವುದು ನಮ್ಮ ಆತ್ಮಿಕ ಬ್ಯಾಟರಿಯನ್ನು ಚಾರ್ಜ್ ಮಾಡುವ ಪ್ರಕ್ರಿಯೆಯಂತಿರುತ್ತದೆ.
ನಮ್ಮಲ್ಲಿ ಅನೇಕರಿಗೆ ಬಲಹೀನತೆಗಳಿವೆ. ನೀವು "ಚಾರಿತ್ರಹೀನತೆ" ಎಂದು ಅವುಗಳನ್ನು ಕರೆಯಬಹುದು.ಆದರೆ ಅವುಗಳನ್ನು ನಿರ್ವಹಿಸುವುದು ಹೇಗೆ?ಅದಕ್ಕಾಗಿ ನೀವು ನಿಮ್ಮನ್ನೇ ಕಟ್ಟಿಕೊಳ್ಳುತ್ತಾ ಹೋಗಬೇಕು. ನೀವು ಅನ್ಯ ಭಾಷೆಯಲ್ಲಿ ಪ್ರಾರ್ಥಿಸುವಾಗ ಅಲ್ಲಿ ಶುದ್ಧೀಕರಣದ ಪ್ರಕ್ರಿಯೆಯು ಆರಂಭವಾಗುತ್ತದೆ. ಹಾಗಾಗಿ ಅನ್ಯ ಭಾಷೆಯಲ್ಲಿ ಪ್ರಾರ್ಥಿಸುವುದನ್ನು ಆರಂಭಿಸಿ ಮಂದಿರೋಪಾದಿಯಲ್ಲಿ ನಿಮ್ಮನ್ನು ನೀವು ಕಟ್ಟಿಕೊಳ್ಳುತ್ತಾ ಮುನ್ನಡೆಯಿರಿ.
ಅರಿಕೆಗಳು
ನಾನು ಅನ್ಯ ಭಾಷೆಯಲ್ಲಿ ಪ್ರಾರ್ಥಿಸುವಾಗ ನಾನು ಪ್ರಗತಿ ಹೊಂದುತ್ತಾ ಮಂದಿರೋಪಾದಿಯಲ್ಲಿ ಎತ್ತರ -ಎತ್ತರಕ್ಕೆ ಕಟ್ಟಲ್ಪಡ್ತಾ ಹೋಗುವೆನು ಎಂದು ಯೇಸು ಕ್ರಿಸ್ತನ ನಾಮದಲ್ಲಿ ಘೋಷಿಸುತ್ತೇನೆ. ನಾನು ಸಾವಿರಾರು ಜನರಿಗೆ ಆಶೀರ್ವಾದ ನಿಧಿಯಾಗುವಂತಹ ದೇವರ ಬಲವನ್ನು ಹೊಂದಿಕೊಂಡ ಪಾತ್ರೆಯಾಗುವೆನು.
Join our WhatsApp Channel
Most Read
● ಯಾವಾಗ ಸುಮ್ಮನಿರಬೇಕು ಮತ್ತು ಯಾವಾಗ ಮಾತನಾಡಬೇಕು● ಜನರು ನೆಪಗಳನ್ನು ಹೇಳಲು ಇರುವ ಕಾರಣಗಳು : ಭಾಗ 2
● ಸಂತೃಪ್ತಿಯ ಭರವಸೆ
● ಹೋಲಿಕೆಯ ಬಲೆ
● ಹೆಚ್ಚು ಹೆಚ್ಚಾಗಿ ಬೆಳೆಯುವ ನಂಬಿಕೆ
● ಚಾಡಿಮಾತು ಸಂಬಂಧಗಳನ್ನು ಹಾಳುಮಾಡುತ್ತದೆ
● ಆತ್ಮೀಕ ಚಾರಣ
ಅನಿಸಿಕೆಗಳು