ಅನುದಿನದ ಮನ್ನಾ
ಕ್ರಿಸ್ತನ ರಾಯಭಾರಿಗಳು
Thursday, 11th of July 2024
3
2
203
Categories :
ನಿಜ ಸಾಕ್ಷಿ (True witness)
ಕ್ರೈಸ್ತರಾಗಿ ನಾವು ಹೇಗೆ ಜೀವಿಸುತ್ತಿದ್ದೇವೆಯೋ ಅದರ ಕುರಿತು ಬಹಳ ಜಾಗರೂಕರಾಗಿರಬೇಕು. ನಾವು ಎಲ್ಲಿ ಹೋದರೂ ಜನರು ನಮ್ಮನ್ನು ಗಮನಿಸುತ್ತಲೇ ಇರುತ್ತಾರೆ. ನಾವು ಕ್ರಿಸ್ತನನ್ನು ಹಿಂಬಾಲಿಸುವವರು ಎಂದು ತಿಳಿದ ಕೂಡಲೇ ಇನ್ನೂ ಹೆಚ್ಚಾಗಿ ನಮ್ಮ ಸುತ್ತಲಿನ ಸಮಾಜದಿಂದ ಪರಿವೀಕ್ಷಣೆಗೆ ಒಳಗಾಗುತ್ತೇವೆ. ಆದ್ದರಿಂದ ನಮ್ಮ ಪ್ರಯತ್ನ ಮೀರಿ ಅತ್ಯುತ್ತಮವಾದ ಜೀವಿತವನ್ನು ನಾವು ಜೀವಿಸಬೇಕು. ಆಗ ನಮ್ಮ ಕರ್ತನನ್ನು ನಮ್ಮ ಜೀವಿತದ ಮೂಲಕ ಮಹಿಮೆ ಪಡಿಸಲು ಸಾಧ್ಯವಾಗುತ್ತದೆ.
ದೇವರ ವಾಕ್ಯವು ನಮ್ಮನ್ನು ಕ್ರಿಸ್ತನ ರಾಯಭಾರಿಗಳೆಂದು ಒತ್ತಿ ಹೇಳುತ್ತದೆ (2ಕೊರಿಯಂತೆ 5:20). ರಾಯಭಾರಿಗಳಾಗಿ ನೀವು ಮತ್ತು ನಾನು ಹೋಗುವ ಕಡೆಯೆಲ್ಲಾ ದೇವರ ರಾಜ್ಯವನ್ನು ಪ್ರತಿನಿಧಿಸುವುದಕ್ಕಾಗಿಯೇ ನೇಮಿಸಲ್ಪಟ್ಟಿದ್ದೇವೆ. ರಾಯಭಾರಿಗಳಾಗಿ ನಾವು ಮಾತನಾಡುವಾಗ ನಮ್ಮ ಅರಸನ ಕುರಿತು ಮಾತನಾಡುವವರಾಗಿರುತ್ತೇವೆ. ನಮ್ಮ ನಡೆಯು ಅರಸನ ಪರವಾದ ನಡೆಯಾಗಿರುತ್ತದೆ.
ಒಬ್ಬ ನಿಜವಾದ ಕ್ರಿಸ್ತನ ರಾಯಭಾರಿ ಎನ್ನಲು ಕೆಲವೊಂದು ನಿರ್ದಿಷ್ಟ ಗುರುತುಗಳಿವೆ.
1. ಆ ವ್ಯಕ್ತಿಯು ಪರಲೋಕದ ಪ್ರಜೆಯಾಗಿರಬೇಕು.
ಈ ಒಂದು ಪೌರತ್ವವು ಹುಟ್ಟಿನಿಂದಲೇ ಬರದೇ ಕೃಪೆಯಿಂದ ದೊರೆತಿರುತ್ತದೆ. ಒಮ್ಮೆ ದೇವರ ಒಡಂಬಡಿಕೆಯನ್ನು ಅರಿಯದವರೂ, ದೇವರ ವಾಕ್ಯಕ್ಕೆ ಅಪರಿಚಿತರೂ ಆಗಿ ಲೋಕದಲ್ಲಿ ಬದುಕಿದ್ದವರು, ಈಗ ದೇವ ಜನರೊಡನೆ ಬಾಧ್ಯರೂ ದೇವರ ಮನೆಯವರೂ ಆಗುವರು.(ಎಫಸ್ಸೆ 2:19). ಒಬ್ಬ ನಿಜವಾದ ಕ್ರಿಸ್ತನ ರಾಯಭಾರಿಯು ಕ್ರಿಸ್ತನಲ್ಲಿರಬೇಕು ಮತ್ತು ನೂತನವಾಗಿ ಹುಟ್ಟಿದವರಾಗಿರಬೇಕು. (2 ಕೊರಿಯಂತೆ 5:17).
2. ಆ ವ್ಯಕ್ತಿಯು ಸುಗುಣಗಳುಳ್ಳ ವ್ಯಕ್ತಿಯಾಗಿರಬೇಕು.
"ಪೂರ್ವ ಸ್ಥಿತಿಯೆಲ್ಲಾ ಹೋಗಿ ಎಲ್ಲಾ ನೂತನವಾಯಿತು" ಎಂದು 2 ಕೊರಿಯಂತೆ 5:17 ಸ್ಪಷ್ಟವಾಗಿ ಉಲ್ಲೇಖಿಸುತ್ತದೆ. ನಮ್ಮ ಸ್ವಭಾವವು ಒಂದು ಸೇವೆಯನ್ನು ಕಟ್ಟಲೂ ಬಹುದು ಮುರಿಯಲೂ ಬಹುದಾದ್ದರಿಂದ ಕ್ರಿಸ್ತನ ರಾಯಭಾರಿಯಾಗಿ ದೈವಿಕ ಗುಣಗಳನ್ನು ಬೆಳೆಸಿಕೊಳ್ಳಬೇಕಾಗಿರುವುದು ಒಂದು ಕಡ್ಡಾಯವಾದ ವಿಷಯವಾಗಿದೆ.
ಕ್ರಿಸ್ತನ ಗುಣಗಳನ್ನು ಬೆಳೆಸಿಕೊಂಡು ಅದರಂತೆ ನಡೆಯುವಂತದು ಕೇವಲ ಒಂದು ಸಾರಿ ಮಾಡಿ ಮುಗಿಸುವ ಕಾರ್ಯವಲ್ಲ. ಅದೊಂದು ಪ್ರಕ್ರಿಯೆಯಾಗಿದ್ದು ಪ್ರತಿದಿನ ಅದರ ಮೇಲೆ ಪ್ರಯತ್ನ ಮಾಡುತ್ತಲೇ ಇರಬೇಕು. ದೈವಿಕ ಗುಣಗಳನ್ನು ಬೆಳೆಸಿಕೊಳ್ಳಲು ಇರುವ ಒಂದು ಮಾರ್ಗವೆಂದರೆ ಅದು ಸ್ಥಿರವಾದ ಭಕ್ತಿ ಜೀವಿತವನ್ನು ಕಾಯ್ದುಕೊಳ್ಳುವಂತದ್ದಾಗಿದೆ.
ಕರ್ತನಾದ ಯೇಸು ಯೋಹಾನ 15:5 ರಲ್ಲಿ ಹೇಳುವುದೇನೆಂದರೆ ನೀವು ನನ್ನಲ್ಲಿಯೂ ನಾನು ನಿಮ್ಮಲ್ಲಿಯೂ ಇರುವುದಾದರೆ ನೀವು ಹೆಚ್ಚು ಫಲ ಕೊಡುವುದಾಗಿರುತ್ತೀರಿ ಎಂದು. ಮೂರು ರೀತಿಯ ಫಲವನ್ನು ಕುರಿತು ಹೊಸ ಒಡಪಡಿಕೆಯಲ್ಲಿ ಉಲ್ಲೇಖಿಸಲಾಗಿದೆ.
1) ಸುಕೃತ್ಯದ ಫಲ (ಕೊಲಸ್ಸೆ 1:10)
2) ಕ್ರಿಸ್ತನಿಗಾಗಿ ಆತ್ಮಗಳ ಆದಾಯ ಪಡಿಸುವಂತ ಫಲ.(ಯೋಹಾನ 4:35-36)ಮತ್ತು
3) ಪವಿತ್ರಾತ್ಮನ ಫಲ: "ಪ್ರೀತಿ, ಸಂತೋಷ, ಶಾಂತಿ, ತಾಳ್ಮೆ, ಕರುಣೆ ಸಾಧುತ್ವ, ಆತ್ಮನಿಗ್ರಹ, ನಂಬಿಗಸ್ಥಿಕೆ ಉಪಕಾರ ಸ್ಮರಣೆ (ಗಲಾತ್ಯ 5:22-23)
ಈ ಎಲ್ಲಾ ಫಲವು ಒಂದು ಕಾರ್ಯವನ್ನು ಮಾಡುವಾಗ ಸಾಕಾರಗೊಳ್ಳುತ್ತವೆ - ಅದುವೇ ಭಕ್ತಿಪ್ರದ ಜೀವಿತದಲ್ಲಿ ಸ್ಥಿರತೆ ಕಾಯ್ದುಕೊಳ್ಳಬೇಕಾದ ಕಾರ್ಯ.
3. ಆ ವ್ಯಕ್ತಿಯು ದೇವರ ಕೃಪಾಸನದೊಂದಿಗೆ ನಿರಂತರವಾದ ಸಂಪರ್ಕ ಹೊಂದಿರುವ ವ್ಯಕ್ತಿ ಆಗಿರಬೇಕು.
ಹೇಗೆ ಒಬ್ಬ ದೇಶದ ರಾಯಭಾರಿಯು ತಾನು ಪ್ರತಿನಿಧಿಸುವ ದೇಶದೊಂದಿಗೆ ನಿರಂತರವಾದ ಸಂಪರ್ಕದಲ್ಲಿರುತ್ತಾನೋ ಹಾಗೆಯೇ ಒಬ್ಬ ನಿಜವಾದ ಕ್ರಿಸ್ತನ ರಾಯಭಾರಿಯು ತನ್ನ ದಿನ ನಿತ್ಯದ ಕಾರ್ಯಗಳಲೆಲ್ಲಾ ದೇವರ ಕೃಪಾಸನದೊಂದಿಗೆ ನಿರಂತರವಾದ ಸಂಪರ್ಕ ಹೊಂದಿರುತ್ತಾನೆ.
ಪ್ರಾರ್ಥನೆಗಳು
ತಂದೆಯೇ, ನಾನು ನಿನ್ನ ರಾಯಭಾರಿಯಾಗಿರುವಂತಹ ಅಧಿಕಾರ ಕೊಟ್ಟಿದ್ದಕ್ಕಾಗಿ ನಿನಗೆ ಸ್ತೋತ್ರ. ನಾನು ಹೋಗುವ ಕಡೆಯೆಲ್ಲಾ ನಿನ್ನನ್ನು ಸರಿಯಾಗಿ ಪ್ರತಿನಿಧಿಸುವಂತೆ ಯೇಸು ನಾಮದಲ್ಲಿ ನನಗೆ ಸಹಾಯ ಮಾಡು. ಆಮೇನ್.
Join our WhatsApp Channel
Most Read
● ದಿನ 30:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ.● ದಿನ 37 :40ದಿನಗಳ ಉಪವಾಸ ಮತ್ತು ಪ್ರಾರ್ಥನೆ.
● ದೈವಿಕ ಅನುಕ್ರಮ - 1
● ಸರಿಯಾದವುಗಳ ಮೇಲೆ ಲಕ್ಷ್ಯವಿಡಿರಿ
● ದೇವರಿಗೇ ಪ್ರಥಮ ಸ್ಥಾನ ನೀಡುವುದು.#1
● ಪುರುಷರು ಏಕೆ ಪತನಗೊಳ್ಳುವರು -1
● ಕ್ಷಿಪ್ರವಾಗಿ ವಿಧೇಯರಾಗುವುದರಲ್ಲಿರುವ ಬಲ
ಅನಿಸಿಕೆಗಳು