ಅನುದಿನದ ಮನ್ನಾ
ನಿಮ್ಮ ಗುರಿಯನ್ನು ತಲುಪಲು ಬಲವನ್ನು ಹೊಂದಿಕೊಳ್ಳಿರಿ.
Wednesday, 31st of July 2024
1
1
247
Categories :
ಗುರಿ (Goal)
ಪ್ರಗತಿ (Progress)
"ನಾವು ಹೀಗೆ ಜೀವಿಸಬೇಕೆಂದು ಬಯಸುತ್ತೇವೆ, ಆದರೆ ನಮ್ಮನ್ನು ಹಾಗೆ ಬದುಕುವಂತೆ ಸಶಕ್ತಗೊಳಿಸುವವನು ದೇವರೇ" ( ಜ್ಞಾನೋಕ್ತಿ 16:9)
ನಾವು ಹೀಗೆ ಬದುಕಬೇಕೆಂದು ನಮ್ಮ ಜೀವನದಲ್ಲಿ ಗುರಿಗಳನ್ನು ಇಟ್ಟು ಕೊಳ್ಳಬಹುದು; ಅದು ಮೆಚ್ಚುವಂಥದ್ದೇ. ಕರ್ತನು ಮಾತ್ರವೇ ಅದನ್ನು ಸಾಧಿಸಲು ಬಲವನ್ನು ಸಾಮರ್ಥ್ಯವನ್ನು ಅನುಗ್ರಹಿಸುವವನಾಗಿದ್ದಾನೆ.
ಕರ್ತನೇ ನಮ್ಮಲ್ಲಿ ರೂಪಾಂತರ ತರುವಂತಹ ಗುರಿಗಳನ್ನು ಮುಟ್ಟಲು ಅಗತ್ಯವಾದ ಈ ಮೂರು ಮುಖ್ಯ ಸಂಗತಿಗಳನ್ನು ತನ್ನ ಕೃಪೆಯಿಂದ ಅನುಗ್ರಹಿಸುವವನಾಗಿದ್ದಾನೆ.
#1.ನಿಮ್ಮನ್ನು ಬಳಗೊಳಿಸುವ ದೇವರ ಆತ್ಮನು ನಿಮಗೆ ಬೇಕು.
ದೇವರು ನಿಮ್ಮನ್ನು ಸಂಪೂರ್ಣವಾಗಿ ಸಜ್ಜುಗೊಳಿಸದೆಯೇ ಸಮರ್ಥರನ್ನಾಗಿ ಮಾಡದೆಯೇ ನಿಮಗೆ ಯಾವುದೇ ಯೋಜನೆಗಳನ್ನು ಕೊಡುವುದಿಲ್ಲ. ಹಾಗೆಯೇ ಅಂತಹ ಸ್ಥಾನದಲ್ಲಿಯೂ ಸಹ ನಿಮ್ಮನ್ನು ತಂದು ನಿಲ್ಲಿಸುವುದಿಲ್ಲ. ಈ ಒಂದು ಸಾಮರ್ಥ್ಯ ಸಜ್ಜಾಗುವಿಕೆಯು ನಿಮ್ಮ ಮನೋಬಲದ ಮೇಲೆ ಆಧಾರವಾಗಿರದೇ ದೇವರ ಬಲದ ಮೇಲೆ ಆಧಾರಗೊಂಡಿರುತ್ತದೆ.
"ಯಾಕಂದರೆ ದೇವರೇ ತನ್ನ ಸುಚಿತ್ತವನ್ನು ನೆರವೇರಿಸಬೇಕೆಂದು ನಿಮ್ಮಲ್ಲಿ ಉದ್ದೇಶವನ್ನೂ ಪ್ರಯತ್ನವನ್ನೂ ಉಂಟುಮಾಡುವವನಾಗಿದ್ದಾನೆ."(ಫಿಲಿಪ್ಪಿಯವರಿಗೆ 2:13)
ಇದು ಉಂಟಾದದು ನಿಮ್ಮ ಪ್ರಯತ್ನದಿಂದಲ್ಲ, ನಿಮ್ಮ ಭರವಸದಿಂದ."ಆಗ ಅವನು ನನಗೆ ಪ್ರತ್ಯುತ್ತರವಾಗಿ ಹೀಗೆ ಹೇಳಿದನು - ಪರಾಕ್ರಮದಿಂದಲ್ಲ, ಬಲದಿಂದಲ್ಲ, ನನ್ನ ಆತ್ಮದಿಂದಲೇ ಎಂಬದು ಸೇನಾಧೀಶ್ವರ ಯೆಹೋವನ ನುಡಿ"(ಜೆಕರ್ಯ 4:6)
ಹಾಗಾಗಿ ನೀವು ಪ್ರತಿದಿನವೂ ನಿಮ್ಮ ಪ್ರಾರ್ಥನೆಯಲ್ಲಿ ಪವಿತ್ರಾತ್ಮನು ಬಂದು ನಿಮ್ಮನ್ನು ಬಲಗೊಳಿಸಬೇಕೆಂದು ಬೇಡಿಕೊಳ್ಳಬೇಕು
#2. ನಿಮ್ಮನ್ನು ಮಾರ್ಗದರ್ಶಿಸಲು ನಿಮಗೆ ದೇವರ ವಾಕ್ಯ ಬೇಕು
ಸತ್ಯವೇದವು ಜೀವನಕ್ಕೆ ಕೈಪಿಡಿಯಾಗಿದೆ.ನೀವು ಹೆಚ್ಚು ಹೆಚ್ಚಾಗಿ ಓದಿದಂತೆಲ್ಲ, ಹೆಚ್ಚು ಹೆಚ್ಚಾಗಿ ಕಂಠಪಾಠ ಮಾಡಿದಂತೆಲ್ಲ ಮತ್ತು ಹೆಚ್ಚು ಹೆಚ್ಚಾಗಿ ಧ್ಯಾನಿಸಿದಂತೆಲ್ಲ ನಿಮ್ಮ ಜೀವನದ ಕರೆಯು ಪೂರೈಸುತ್ತಾ ನಿಮ್ಮನ್ನು ಇನ್ನೂ ಹೆಚ್ಚು ಹೆಚ್ಚು ಯಶಸ್ವಿಯಾಗುವಂತೆ ಮಾಡುತ್ತದೆ.
ಇಸ್ರಾಯೆಲ್ಯರನ್ನು ವಾಗ್ದಾತ ದೇಶಕ್ಕೆ ಸೇರಿಸಬೇಕೆಂಬ ಜವಾಬ್ದಾರಿಯನ್ನು ಯೆಹೋಶುವನಿಗೆ ಕೊಟ್ಟಾಗ, ಅದು ಒಂದು ಸುಲಭವಾದ ಕಾರ್ಯವಾಗಿರಲಿಲ್ಲ. ಆಗ ಕರ್ತನು ಅವನಿಗೆ
"ಈ ಧರ್ಮಶಾಸ್ತ್ರವು ಯಾವಾಗಲೂ ನಿನ್ನ ಬಾಯಲ್ಲಿರಲಿ; ಹಗಲಿರುಳು ಅದನ್ನು ಧ್ಯಾನಿಸುತ್ತಾ ಅದರಲ್ಲಿ ಬರೆದಿರುವದನ್ನೆಲ್ಲಾ ಕೈಕೊಂಡು ನಡಿ. ಆಗ ನಿನ್ನ ಮಾರ್ಗದಲ್ಲೆಲ್ಲಾ ಸಫಲನಾಗುವಿ, ಕೃತಾರ್ಥನಾಗುವಿ." ಎಂದು ಹೇಳಿದನು (ಯೆಹೋಶುವ 1:8)
#3. ನಿಮ್ಮನ್ನು ಬೆಂಬಲಿಸಲು ನಿಮಗೆ ದೇವರ ಜನರು ಬೇಕು.
ನೀವು ನಿಮ್ಮ ಗುರಿಗಳನ್ನು ನೀವೇ ಸ್ವಂತವಾಗಿ ಮುಟ್ಟಲು ಸಾಧ್ಯವಿಲ್ಲ. ನಿಮ್ಮ ಕನಸನ್ನು ಸಾಕಾರಗೊಳಿಸಲು ಒಂದು ತಂಡದ ಅವಶ್ಯಕತೆ ನಿಮಗಿದೆ!
ಒಂದು ದೊಡ್ಡ ಗುಂಪು ನಿಮಗೆ ಸಹಾಯ ಮಾಡಲಾರದೆ ಇರಬಹುದು. ಆದರೆ ಒಂದು ಚಿಕ್ಕ ಗುಂಪು ಅದನ್ನು ಮಾಡಬಲ್ಲದು. ನಿಮ್ಮ ಅತ್ಯಂತ ಕಠಿಣ ಪರಿಸ್ಥಿತಿಯಲ್ಲಿ ನಿಮ್ಮ ಫೇಸ್ಬುಕಲ್ಲಿ ಇರುವ 5000 ಅಭಿಮಾನಿಗಳು ನಿಮ್ಮ ಸಹಾಯಕ್ಕೆ ಬರಲಾರರು.
ಆದರೆ ನಿಮ್ಮ J-12 ಗುಂಪಿನ ಒಂದು ಸಣ್ಣ ಗುಂಪು ನಿಮ್ಮ ಅತ್ಯಂತ ಅವಶ್ಯಕತೆಯ ಸ್ಥಿತಿಯಲ್ಲಿ ನಿಮಗೆ ಬೆಂಬಲಿಗರಾಗಿ ನಿಲ್ಲಬಹುದು.( ಈಗ ಎಲ್ಲರೂ ನಮ್ಮಗನಿಸಿದಂತೆಯೇ ಇರದೇ ಇರಬಹುದು. ಯಾವಾಗಲೂ ಒಂದು ಸಮ ಒಂದು ಬೆಸ ಇದ್ದೇ ಇರುತ್ತದೆ ಎಂಬ ಸತ್ಯವನ್ನು ನೀವು ಅರ್ಥ ಮಾಡಿಕೊಳ್ಳಬೇಕು. )
ನಾನು ಇನ್ನೂ ಸತ್ಯವೇದ ಹೇಳುವ ಈ ವಾಕ್ಯಕ್ಕೆ ಪ್ರಾಮುಖ್ಯತೆ ಕೊಡಲು ಬಯಸುತ್ತೇನೆ.
"ಒಬ್ಬೊಂಟಿಗನನ್ನು ಜಯಿಸಬಲ್ಲವನಿಗೆ ಇಬ್ಬರು ಎದುರಾಗಿ ನಿಲ್ಲಬಹುದು; ಮೂರು ಹುರಿಯ ಹಗ್ಗ ಬೇಗ ಕಿತ್ತು ಹೋಗುವದಿಲ್ಲವಷ್ಟೆ."(ಪ್ರಸಂಗಿ 4:12)
ಸತ್ಯದ ಪರಿಸ್ಥಿತಿಯಲ್ಲಿ ನೀವು J-12 ನಾಯಕರ ಅಡಿಯಲ್ಲಿ ಇಲ್ಲದಿದ್ದರೆ ನೀವು ನೋಹ ಆಪ್ ಮೂಲಕ ಸಂದೇಶವನ್ನು ಕಳಿಸಬಹುದು.
ನಿಮ್ಮ ಗುರಿಯನ್ನು ಮುಟ್ಟುವ ಹಾದಿಯಲ್ಲಿ ನಿಮಗೆ ಅಡೆತಡೆಗಳು ಉಂಟಾದರೆ ಅದನ್ನು ಸಾಧಿಸುವ ನಿರ್ಧಾರಗಳನ್ನು ಬದಲಿಸಬೇಡಿರಿ. ಅದರ ಬದಲಾಗಿ ಈ ಮೇಲ್ಕಂಡ ಮೂರು ವಿಷಯಗಳನ್ನು ಕಾರ್ಯರೂಪಕ್ಕೆ ತರಲು ಪ್ರಯತ್ನಿಸಿ.
ಪ್ರಾರ್ಥನೆಗಳು
ತಂದೆಯೇ, ನಿನ್ನ ಕೃಪೆಯೇ ನನಗೆ ಸಾಕು, ನನ್ನ ಬಲಹೀನತೆಯಲ್ಲಿಯೇ ನಿನ್ನ ಬಲವು ಸಾಧಕವಾಗುತ್ತದೆ. ನನ್ನ ಕರ್ತನು ನನ್ನ ಮುಂದುಗಡೆಯಲ್ಲಿ ಹೋಗುವುದರಿಂದ ನಾನು ಬಲಶಾಲಿಯಾಗಿಯೂ ಧೈರ್ಯವಾಗಿಯೂ ಇರುವೆನು. ಆತನು ನನ್ನನ್ನು ಕೈಬಿಡುವುದಿಲ್ಲ ಎಂದಿಗೂ ತೊರೆಯುವುದಿಲ್ಲ. ಯೇಸುನಾಮದಲ್ಲಿ ಪ್ರಾರ್ಥಿಸುತ್ತೇನೆ. ಆಮೆನ್.
Join our WhatsApp Channel
Most Read
● ಆತನ ಬೆಳಕಿನಲ್ಲಿ ಸಂಬಂಧಗಳ ಪೋಷಣೆ● ಆ ವಾಕ್ಯವನ್ನು ಹೊಂದಿಕೊಳ್ಳಿರಿ
● ನಿಮ್ಮ ಜೀವದದಲ್ಲಿ ಎಂದೂ ಅಳಿಯದಂತ ಬದಲಾವಣೆಯನ್ನು ತರುವುದು ಹೇಗೆ?-1
● ದಿನ 27:40 ದಿನಗಳ ಉಪವಾಸ ಪ್ರಾರ್ಥನೆ
● ದಿನ 01:40 ದಿನಗಳ ಉಪವಾಸ ಹಾಗೂ ಪ್ರಾರ್ಥನೆ
● ದಿನ 07 : 40 ದಿನಗಳ ಉಪವಾಸ ಮತ್ತು ಪ್ರಾರ್ಥನೆ
● ನಂಬಿಕೆಯಲ್ಲಿರುವ ಬಲ
ಅನಿಸಿಕೆಗಳು