ಪ್ರಕಟನೆ 19:10 ರಲ್ಲಿ, ಅಪೊಸ್ತಲ ಯೋಹಾನನು " ಯೇಸುವಿನ ವಿಷಯವಾದ ಸಾಕ್ಷಿಯು ಪ್ರವಾದನೆಯ ಆತ್ಮವೇ." ಎಂದು ಹೇಳುತ್ತಾನೆ. ಇದರರ್ಥ ನಾವು ನಮ್ಮ ಸಾಕ್ಷ್ಯವನ್ನು ಹಂಚಿಕೊಳ್ಳುವಾಗ, ನಾವು ನಮಗೆ ಅನುಗ್ರಹಿಸಿರುವ ಪ್ರವಾದನೆಯ ಆತ್ಮವನ್ನು ಆ ಪರಿಸರದಲ್ಲಿ ಬಿಡುಗಡೆ ಮಾಡುವವರಾಗುತ್ತೇವೆ.
ಯೇಸುವಿನ ಕುರಿತು ಸಾಕ್ಷಿಯು ದೇವರು ನಮ್ಮ ಜೀವನದಲ್ಲಿ ಮಾಡಿದ ಯಾವುದೇ ವಿಷಯದ ಕುರಿತು ಮಾತನಾಡುವ ಅಥವಾ ಬರೆಯುವ ದಾಖಲೆಯನ್ನು ಸೂಚಿಸುತ್ತದೆ.ಆದರೂ ಪ್ರವಾದನೆ ಆತ್ಮವು ಪ್ರವಾದಿಯ ಸ್ವಭಾವದ ಮತ್ತು ಭವಿಷ್ಯದ ಘಟನೆಯನ್ನು ಮುನ್ಸೂಚಿಸುವ ಅಥವಾ ತಕ್ಷಣದ ಘಟನೆಯನ್ನು ಬದಲಾಯಿಸಬಹುದಾದ ಅಭಿಷೇಕವಾಗಿದೆ.
"ಸಾಕ್ಷಿ" ಎಂಬ ಪದವು "ಮತ್ತೆ ಮಾಡು " ಎಂಬ ಅರ್ಥವಿರುವ ಮೂಲ ಪದದಿಂದ ಬಂದಿದೆ. ಪ್ರತಿ ಬಾರಿ ಸಾಕ್ಷ್ಯವನ್ನು ಮಾತನಾಡುವಾಗ, ಅದು ಆ ಅದ್ಭುತವನ್ನು ಪುನರಾವರ್ತಿಸಬೇಕೆಂಬ ದೇವರ ಒಡಂಬಡಿಕೆಯೊಂದಿಗೆ ಬರುತ್ತದೆ. ಅದಕ್ಕಾಗಿಯೇ ನಮ್ಮ ಸಾಕ್ಷ್ಯವನ್ನು ಹಂಚಿಕೊಳ್ಳುವುದು ಬಹಳ ಮುಖ್ಯವಾದ ಕಾರ್ಯವಾಗಿದೆ.
ಅದು ದೇವರಿಗೆ ಮಹಿಮೆ ಸಲ್ಲಿಸಿ ಇತರರಿಗೆ ಪ್ರೇರೇಪಣೆ ನೀಡುತ್ತದೆ, ಅದೇ ಅದ್ಭುತ ಪುನಃ ಮರುಕಳಿಸುವಂತೆ ಮಾಡವಂತ ವಾತಾವರಣವನ್ನು ಸೃಷ್ಟಿಸುತ್ತದೆ.
ನಾವು ನಮ್ಮ ಸಾಕ್ಷ್ಯವನ್ನು ಹಂಚಿಕೊಳ್ಳುವಾಗ , ನಾವು ಪ್ರವಾದನೆಯ ಆತ್ಮವನ್ನು ಸಹ ಸಕ್ರಿಯಗೊಳಿಸುತ್ತೇವೆ.
"ಪ್ರವಾದಿಸುವವರಾದರೋ ಮನುಷ್ಯರ ಸಂಗಡ ಮಾತಾಡುವವನಾಗಿ ಅವರಿಗೆ ಭಕ್ತಿವೃದ್ಧಿಯನ್ನೂ ಪ್ರೋತ್ಸಾಹವನ್ನೂ ಸಂತೈಸುವಿಕೆಯನ್ನೂ ಉಂಟುಮಾಡುತ್ತಾನೆ." ಎಂದು 1 ಕೊರಿಂಥ 14:3ರಲ್ಲಿ ಅಪೊಸ್ತಲ ಪೌಲನು ಹೇಳುತ್ತಾನೆ.
ನಾವು ನಮ್ಮ ಸಾಕ್ಷಿಯನ್ನು ಹಂಚಿಕೊಳ್ಳುವಾಗ , ನಾವು ಇತರರನ್ನು ಪ್ರೋತ್ಸಾಹಿಸುವುದು ಮಾತ್ರವಲ್ಲದೇ , ಅವರ ಮೇಲೆ ಪ್ರವಾದನೆ ಸಹ ಹೇಳುವವರಾಗುತ್ತೇವೆ. ನಾವು ಅವರ ಪರಿಸ್ಥಿತಿಯ ಮೇಲೆ ಜೀವವನ್ನೂ ಮತ್ತು ನಿರೀಕ್ಷೆಯನ್ನು ಘೋಷಿಸುವವರಾಗುತ್ತೇವೆ.
ಮೋನಾ (ಹೆಸರು ಬದಲಾಯಿಸಲಾಗಿದೆ)ಹಲವು ವರ್ಷಗಳಿಂದ ಬಂಜೆತನದಿಂದ ಬಳಲುತ್ತಿದ್ದರು. ಅವರು ಮತ್ತು ಅವರ ಪತಿ ಫಲವತ್ತತೆ ಚಿಕಿತ್ಸೆಗಳಿಂದ ಹಿಡಿದು ದತ್ತು ಸ್ವೀಕಾರದವರೆಗೆ ಎಲ್ಲವನ್ನೂ ಪ್ರಯತ್ನಿಸಿದ್ದರು, ಆದರೆ ಯಾವುದೂ ಸಹ ಕೈಗೂಡಿರಲಿಲ್ಲ. ಇದರಿಂದ ಅವರು ಹತಾಶರಾಗಿ ಸೋತುಹೋಗಿದ್ದರು.
ಒಂದು ದಿನ, ಮೋನಾ ಕರುಣಾ ಸದನದಲ್ಲಿ ನಡೆದ ವಾವ್ ಸೇವೆಗೆ ಹಾಜರಾದರು. ಸೇವೆಯ ಸಮಯದಲ್ಲಿ, ಒಬ್ಬ ಮಹಿಳೆ ದೇವರು ತನ್ನನ್ನು ಬಂಜೆತನವನ್ನು ಹೇಗೆ ಪರಿಹರಿಸಿದನೆಂದೂ ತಾನು ಆ ಭಾನುವಾರದ ಸೇವೆಗೆ ಹಾಜರಾಗಿದ್ದನ್ನು, ದೇವರ ವಾಕ್ಯವನ್ನು ಕೇಳಿದ್ದನ್ನು ಮತ್ತು ತನಗೆ ಮಕ್ಕಳನ್ನು ನೀಡುವ ದೇವರ ವಾಗ್ದಾನವನ್ನು ಹೇಗೆ ನಂಬಿದ್ದಳೆಂದು ಮತ್ತು ಅಂತಿಮವಾಗಿ ಹೇಗೆ ಅವಳು ಗರ್ಭಿಣಿಯಾಗಿ ಆರೋಗ್ಯಕರ ಗಂಡು ಮಗುವಿಗೆ ಜನ್ಮ ನೀಡಿದಳು ಎಂಬ ತನ್ನ ಸಾಕ್ಷಿಯನ್ನು ಹಂಚಿಕೊಂಡಳು.
ಆ ಮಹಿಳೆಯ ಸಾಕ್ಷಿಯನ್ನು ಕೇಳಿ ಮೋನಾ ಭಾವುಕಳಾದಳು ಮತ್ತು ಅವಳ ಹೃದಯದಲ್ಲಿ ಒಂದು ರೀತಿಯಲ್ಲಿ ನಿರೀಕ್ಷೆಯ ಮಿನುಗುವಿಕೆಯನ್ನು ಅನುಭವಿಸಿದಳು. ಸೇವೆಯ ಸಮಯದಲ್ಲಿ, ಅವಳು ದೇವರಿಗೆ ಕೂಗಿ ಮೊರೆಯಿಟ್ಟಳು. ಸೇವೆಯ ನಂತರ, ಅವಳು ಆ ಮಹಿಳೆಯನ್ನು ಸಮೀಪಿಸಿ ಆಕೆಯ ಸಾಕ್ಷಿಯನ್ನು ಹಂಚಿಕೊಂಡಿದ್ದಕ್ಕಾಗಿ ಧನ್ಯವಾದ ಹೇಳಿದಳು.
ಕೆಲವು ತಿಂಗಳುಗಳ ನಂತರ, ಮೋನಾ ತಾನು ಗರ್ಭಿಣಿಯಾಗಿದ್ದಾಳೆಂದು ಕಂಡುಕೊಂಡು . ಅವಳಿ ಮಕ್ಕಳಿಗೆ ಜನ್ಮ ನೀಡಿದಳು. ಅವಳಿಗೆ ಅದನ್ನು ನಂಬಲೇ ಸಾಧ್ಯವಾಗಲಿಲ್ಲ! ದೇವರು ತನ್ನ ಪ್ರಾರ್ಥನೆಗಳಿಗೆ ಉತ್ತರಿಸಿದ್ದಾನೆ ಮತ್ತು ಆ ಮಹಿಳೆಯ ಸಾಕ್ಷಿಯನ್ನು ಬಳಸಿಕೊಂಡು ತನ್ನ ನಂಬಿಕೆಯನ್ನು ಬಲಪಡಿಸಿದ್ದಾನೆಂದು ಅವಳು ಅರಿತಿದ್ದಳು.
" ನಮ್ಮಲ್ಲಿ ಕಾರ್ಯಸಾಧಿಸುವ ತನ್ನ ಶಕ್ತಿಯ ಪ್ರಕಾರ ನಾವು ಬೇಡುವದಕ್ಕಿಂತಲೂ ಯೋಚಿಸುವದಕ್ಕಿಂತಲೂ ಅತ್ಯಧಿಕವಾದದ್ದನ್ನು ಮಾಡಲು ಶಕ್ತನಾದ ದೇವರಿಗೆ.. " ಎಂದು 3:20 ರಲ್ಲಿ, ಬೈಬಲ್ ಹೇಳುತ್ತದೆ, ಸಾಕ್ಷ್ಯಗಳನ್ನು ಹಂಚಿಕೊಳ್ಳುವಂತದ್ದು ನಂಬಿಕೆಯನ್ನು ಬೆಳೆಸಲು ಇರುವ ಒಂದು ಪ್ರಬಲ ಮಾರ್ಗವಾಗಿದೆ. "ಆದಕಾರಣ ಸಾರಿದ ವಾರ್ತೆಯು ನಂಬಿಕೆಗೆ ಆಧಾರ, ಆ ವಾರ್ತೆಗೆ ಕ್ರಿಸ್ತನ ವಾಕ್ಯವೇ ಆಧಾರ" ಎಂದು ರೋಮ 10:17 ರಲ್ಲಿ ಪೌಲನು ಹೇಳುತ್ತಾನೆ.
ದೇವರು ಇತರರ ಜೀವನದಲ್ಲಿ ಏನು ಮಾಡಿದ್ದಾನೆ ಎಂಬುದರ ಸಾಕ್ಷ್ಯಗಳನ್ನು ನಾವು ಕೇಳಿದಾಗ, ನಮ್ಮ ನಂಬಿಕೆ ಬಲಗೊಳ್ಳುತ್ತದೆ. ದೇವರು ಇಂದಿಗೂ ಜಗತ್ತಿನಲ್ಲಿ ಕೆಲಸ ಮಾಡುತ್ತಿದ್ದಾನೆ ಮತ್ತು ನಾವು ಕೇಳುವುದಕ್ಕಿಂತ ಅಥವಾ ಊಹಿಸುವುದಕ್ಕಿಂತ ಹೆಚ್ಚಿನದನ್ನು ಆತನು ಮಾಡಲು ಶಕ್ತನಾಗಿದ್ದಾನೆ ಎಂದು ಅದು ನಮಗೆ ನೆನಪಿಸುತ್ತದೆ.
Bible Reading: 1 Samuel 27 - 30
ಪ್ರಾರ್ಥನೆಗಳು
ಪರಲೋಕದ ತಂದೆಯೇ, ನಮ್ಮ ಕಾಲುಗಳಿಗೆ ದೀಪ ಮತ್ತು ನಮ್ಮ ಹಾದಿಗೆ ಬೆಳಕಾಗಿರುವ ನಿಮ್ಮ ವಾಕ್ಯಕ್ಕಾಗಿ ನಾನು ನಿಮಗೆ ಸ್ತೋತ್ರ ಸಲ್ಲಿಸುತ್ತೇನೆ. ನಮ್ಮ ನಂಬಿಕೆಯನ್ನು ಬಲಪಡಿಸಿ, ನಿನ್ನಲ್ಲಿ ನಂಬಿಕೆ ಇಡಲು ಪ್ರೋತ್ಸಾಹಿಸು ಸಾಕ್ಷಿಯಲ್ಲಿ ಹೂಡಿದ ಶಕ್ತಿಗಾಗಿ ನಾನು ನಿನಗೆ ಸ್ತೋತ್ರ ಸಲ್ಲಿಸುತ್ತೇನೆ . ನಿನ್ನ ಪವಿತ್ರಾತ್ಮದಿಂದ ನನ್ನನ್ನು ತುಂಬಿಸಿ, ನಾನು ಹೋಗುವಲ್ಲೆಲ್ಲಾ ನನ್ನ ಸಾಕ್ಷಿಯನ್ನು ಹಂಚಿಕೊಳ್ಳಲು ಯೇಸುನಾಮದಲ್ಲಿ ಧೈರ್ಯವನ್ನು ಅನುಗ್ರಹಿಸು . ಆಮೆನ್!
Join our WhatsApp Channel

Most Read
● ಕೆಂಪು ದೀಪದ ಎಚ್ಚರಿಕೆ ಗಂಟೆ● ನಿಮ್ಮ ಮಾರ್ಗದರ್ಶಕರು ಯಾರು - II
● ಹೊಟ್ಟೆಕಿಚ್ಚು ಎಂಬ ಪೀಡೆ.
● ದೈವೀಕ ಶಿಸ್ತಿನ ಸ್ವರೂಪ: 2
● ನಿಮ್ಮ ದಿನವೇ ನಿಮ್ಮನ್ನು ವ್ಯಾಖ್ಯಾನಿಸುತ್ತದೆ
● ಮೂರ್ಖತನದಿಂದ ನಂಬಿಕೆಯನ್ನು ಪ್ರತ್ಯೇಕಿಸುವುದು
● ದಿನ 16:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ
ಅನಿಸಿಕೆಗಳು