ಅನುದಿನದ ಮನ್ನಾ
ಇದು ನಿಜಕ್ಕೂ ಮುಖ್ಯವಾದ ಸಂಗತಿಯಾ?
Monday, 1st of April 2024
3
1
261
Categories :
ಶಿಷ್ಯತ್ವ (Discipleship)
"ಸಭೆಯಾಗಿ ಕೂಡಿಕೊಳ್ಳುವದನ್ನು ಕೆಲವರು ರೂಢಿಯಾಗಿ ಬಿಟ್ಟಿರುವ ಪ್ರಕಾರ ನಾವು ಬಿಟ್ಟುಬಿಡದೆ ಒಬ್ಬರನ್ನೊಬ್ಬರು ಎಚ್ಚರಿಸೋಣ. ಕರ್ತನ ಪ್ರತ್ಯಕ್ಷತೆಯ ದಿನವು ಸಮೀಪಿಸುತ್ತಾ ಬರುತ್ತದೆ ಎಂದು ನೀವು ನೋಡುವದರಿಂದ ಇದನ್ನು ಮತ್ತಷ್ಟು ಮಾಡಿರಿ. "(ಇಬ್ರಿಯರಿಗೆ 10:25 )
ನಾನು ಈ ವಿಚಾರವನ್ನು ನಿಮ್ಮ ಮುಂದೆ ಒಪ್ಪಿಕೊಳ್ಳಲೇಬೇಕು. ನಾನು ಯೌವನಸ್ತನಾಗಿದ್ದಾಗ ಕ್ರೈಸ್ತನಾಗಿದ್ದರೂ ಸಭೆಗೆ ಸರಿಯಾದ ಸಮಯಕ್ಕೆ ಹೋಗಬೇಕೆಂಬ ವಿಚಾರವನ್ನು ಗಂಭೀರವಾಗಿ ತೆಗೆದುಕೊಂಡಿರಲಿಲ್ಲ. ಒಂದು ದಿನ ಅದೇ ರೀತಿ ತಡಮಾಡಿ ಸಭೆಗೆ ಹೋದೆ. ನನ್ನ ಪಾಸ್ಟರ್ ಅವರು ಅಧಿಕಾರಯುತ ವಾಣಿಯಲ್ಲಿ ನನ್ನನ್ನು ಉದ್ದೇಶಿಸಿ ಸಭೆಗೆ ಸರಿಯಾದ ಸಮಯಕ್ಕೆ ಬರುವಂತೆ ನನಗೆ ಸೂಚಿಸಿದರು. ಅದು ನನ್ನ ಅಹಂ ಗೆ ಪೆಟ್ಟು ನೀಡಿತು. ಆದ್ದರಿಂದ ಅಂದಿನ ದಿನ ಸಭೆಯಲ್ಲಿ ನನ್ನ 'ಹಲ್ಲೆಲೂಯದ' ಧ್ವನಿ ಯಾರಿಗೂ ಕೇಳಲಿಲ್ಲ( ಆ ಸಭೆಯು ಕೇವಲ ಕೆಲವೇ ಮಂದಿಯಿಂದ ಕೂಡಿದ ಸಭೆಯಾಗಿತ್ತು ಎಂಬುದು ನಿಮಗೆ ತಿಳಿದಿರಲಿ ).
ನನ್ನ ಪಾಸ್ಟರ್ ಬಹಳ ವಿವೇಚನೆ ಉಳ್ಳ ವ್ಯಕ್ತಿಯಾಗಿದ್ದರು.ಆ ದಿನ ಸಭೆಯು ಮುಗಿದ ನಂತರ ಅವರು ನನ್ನನ್ನು ಕರೆದು ಅವರ ಕೈಗಳನ್ನು ನನ್ನ ಹೆಗಲ ಮೇಲಿಟ್ಟು ಆತ್ಮೀಯವಾಗಿ "ಮೈಕಲ್ ನನಗೆ ಗೊತ್ತು ನಿನಗೆ ಬೇಸರವಾಗಿದೆ ಎಂದು. ಆದರೆ ನಾನು ನಿನಗೆ ಒಂದು ವಿಚಾರ ಹೇಳಲೇಬೇಕು. ನೀನು ಪ್ರತಿ ಸಾರಿ ಸಭೆಗೆ ತಡವಾಗಿ ಬಂದಾಗ ನೀನು ದೇವರ ಪ್ರಸನ್ನತೆಯನ್ನು ಅಲಕ್ಷ ಮಾಡುವವನಾಗಿ ಕಂಡು ಬರುತ್ತೀಯ ಎಂದು ತಿಳಿದುಕೋ" ಎಂದರು.ಇದನ್ನು ಕೇಳಿ ನನಗೆ ಆಘಾತವಾಯಿತು. ನಾನು ಅವರ ಮಾತನ್ನು ವಿರೋಧಿಸುತ್ತಾ "ಆದರೆ ನಾನು ದೇವರನ್ನು ಪ್ರೀತಿಸುತ್ತೇನೆ" ಎಂದೆ.
ಆಗ ಅವರು ನನಗೆ ವಿನಯವಾಗಿ "ಪ್ರೀತಿ ಮತ್ತು ಗೌರವ (ಬೆಲೆ ಕೊಡುವುದು) ಯಾವಾಗಲೂ ಜೊತೆಯಾಗಿ ಸಾಗುತ್ತದೆ" ಎಂದರು. ಜೊತೆಗೆ "ನೀನು ಯಾರಾದರೂ ಒಬ್ಬರು ಗಣ್ಯ ವ್ಯಕ್ತಿಯನ್ನು ಭೇಟಿ ಮಾಡಬೇಕೆಂದರೆ ತಡವಾಗಿ ಹೋಗುವ ಧೈರ್ಯ ಮಾಡುವೆಯಾ? ಹಾಗಾದರೆ ಕರ್ತಾಧಿ ಕರ್ತನು ರಾಜಾಧಿರಾಜನು(ಪ್ರಕಟಣೆ 17:14) ಆಗಿರುವ ನಮ್ಮ ದೇವರಿಗೆ ಇನ್ನು ಎಷ್ಟೋ ಗೌರವದಿಂದ ನಡೆದುಕೊಳ್ಳಬೇಕಲ್ಲವೇ" ಎಂದು ವಿನಯವಾಗಿ ಕೇಳಿದರು.
ನಾನಾಗ ಅವರನ್ನು ತಬ್ಬಿಕೊಂಡು ಅವರಿಗೆ 'ನಾನು ಇನ್ನೆಂದಿಗೂ ಈ ರೀತಿ ವರ್ತನೆಯನ್ನು ಮುಂದುವರಿಸುವುದಿಲ್ಲ ಎಂದು ಭರವಸೆ ಕೊಟ್ಟೆ.
ಅವರು ಇನ್ನೂ ಒಂದು ಮಾತನ್ನು ನನಗೆ ಹೇಳಿದರು ನಾನು ಅದನ್ನು ನಿಮ್ಮ ಮುಂದೆ ಇಡಲು ಬಯಸುತ್ತೇನೆ
"ಮೈಕೆಲ್ ಮುಂದೆ ಒಂದು ದಿನ ನಿನ್ನದೇ ಆದ ಸ್ವಂತ ಸಭೆಯನ್ನು ನಿನಗೆ ದೇವರು ಕೊಡುತ್ತಾನೆ, ಅದಕ್ಕಾಗಿ ನೀನು ಸಭೆಗೆ ಸರಿಯಾದ ಸಮಯಕ್ಕೆ ಹೋಗುವ ಅಭ್ಯಾಸವು ಮೂಲಭೂತವಾದಂತಹ ಗುಣವಾಗಿದ್ದು ಅದನ್ನು ನೀನು ಯೇಸುವಿನ ಶಿಷ್ಯನಾಗಿ ಈ ನಿನ್ನ ಯೌವನಕಾಲದಲ್ಲಿಯೇ ಅಭ್ಯಾಸಸಿಕೊಳ್ಳಬೇಕು.ಈ ಒಂದು ನಿನ್ನ ಅಭ್ಯಾಸವೇ ನಿನ್ನ ಜೀವಿತದ ಮಿಕ್ಕೆಲ್ಲಾ ಕ್ಷೇತ್ರಗಳು ಧನಾತ್ಮಕವಾಗಿ ಪರಿಣಮಿಸಲು ಪರಿಣಾಮ ಬೀರುವಂತದ್ದಾಗಿದೆ." ಎಂದರು
ಆರಾಧನೆಯು ಮುಗಿದ ಮೇಲೆ ಸಭೆಗೆ ಬರುವವರನ್ನು ನೋಡುವಂತದ್ದು ನಿಜಕ್ಕೂ ನೋವಿನ ಸಂಗತಿಯಾಗಿದೆ.
ನಿಮಗೀಗ ಸಭೆಗೆ ತಡವಾಗಿ ಬರಲು ಅನೇಕ ಕಾರಣಗಳನ್ನು ಹೇಳಲಿರಬಹುದು. ಆದರೆ ಆರಾಧನೆಯೇ ನಿಮ್ಮ ಜೀವಿತದ ಅಡಿಪಾಯವನ್ನು ರೂಪಿಸುವಂತಹ ಕಾರ್ಯ ಮಾಡುವಂತದ್ದು ಎಂಬ ವಿಚಾರ ನೀವಿನ್ನೂ ತಿಳಿದೇ ಇಲ್ಲ. ಇದನ್ನು ಬಿಟ್ಟು ಅನೇಕರು ಸಭೆಯ ಆರಂಭ ಸಮಯವು ಅಷ್ಟೇನೂ ಮಹತ್ವದಲ್ಲ ಎಂದು ಪರಿಗಣಿಸಿಕೊಂಡು ಈ ವರ್ತನೆಯನ್ನೇ ಈಗಲೂ ಮುಂದುವರೆಸುತ್ತಿದ್ದಾರೆ.
ಆದ್ದರಿಂದ ಸಭೆಗೆ ಸರಿಯಾದ ಸಮಯಕ್ಕೆ ಬರುವುದನ್ನು ಈಗಲಿಂದಲೇ ಆರಂಭಿಸೋಣ ಮತ್ತು ಆತನಿಗೆ ಯೋಗ್ಯವಾದ ರೀತಿಯಲ್ಲಿ ಆತನಿಗೇ ಸಲ್ಲಬೇಕಾದ ಮಹಿಮೆಯನ್ನು ಗೌರವವನ್ನೂ ಸಲ್ಲಿಸೋಣ. ನೀವು ಬೇಸರಗೊಳ್ಳಬೇಡಿ ಅದಕ್ಕೆ ಬದಲಾಗಿ ನೀವು ಇದೊಂದು ದೈವಿಕ ಸೂಚನೆ ಎಂದು ಸ್ವೀಕರಿಸಿ ದೇವರಲ್ಲಿ ಉನ್ನತವಾಗಿ ಬೆಳೆಯುವಂತಾಗಲೆಂದು, ಮೇಲ್ನೋಟಕ್ಕೆ ಅಷ್ಟೇನೂ ಮಹತ್ವವಲ್ಲ ಎನಿಸುವ ಆದರೆ ನಮ್ಮ ಆತ್ಮೀಕ ಮನುಷ್ಯನ ಮೌಲ್ಯಗಳನ್ನು ನಿಜವಾಗಿಯೂ ಬಹಿರಂಗ ಪಡಿಸುವ ಒಂದು ಪ್ರಕ್ರಿಯೆಯ ಕರೆ ಎಂದು ನೀವಿದನ್ನು ಸ್ವೀಕರಿಸಬೇಕೆಂದು ನಾನು ದೇವರಲ್ಲಿ ಪ್ರಾರ್ಥಿಸುತ್ತೇನೆ.
ಪ್ರಾರ್ಥನೆಗಳು
ತಂದೆಯೇ, ಸರಿಯಾದ ಸಂಗತಿಗಳಿಗೆ ನಾನು ಪ್ರಾಶಸ್ತ್ಯ ನೀಡುವಂತಹ ಕೃಪೆಯನ್ನು ನನಗೆ ಅನುಗ್ರಹಿಸು. ಕರ್ತನೇ ನೀನು ನನಗೆ ಅನುಗ್ರಹಿಸಿರುವ ಸಮಯ ಮತ್ತು ಎಲ್ಲವುಗಳ ಮೂಲಕ ಯೇಸು ನಾಮದಲ್ಲಿ ನಾನು ನಿನ್ನನ್ನೇ ಸನ್ಮಾನಿಸುತ್ತೇನೆ. ಆಮೆನ್.
Join our WhatsApp Channel
Most Read
● ಅಭಿಷೇಕಕ್ಕಿರುವ ಪ್ರಪ್ರಥಮ ಶತೃ● ಸಮಾಧಾನದ ಮೂಲ :ಕರ್ತನಾದ ಯೇಸು
● ನೀವೇ ಮಾದರಿಯಾಗಿರ್ರಿ
● ಮೊಗ್ಗು ಬಿಟ್ಟಂತಹ ಕೋಲು
● ಇಸ್ಕಾರಿಯೋತ ಯೂದನ ಜೀವನದಿಂದ ಕಲಿಯಬೇಕಾದ ಪಾಠಗಳು -2
● ನಿಮ್ಮ ಜೀವದದಲ್ಲಿ ಎಂದೂ ಅಳಿಯದಂತ ಬದಲಾವಣೆಯನ್ನು ತರುವುದು ಹೇಗೆ?- 2
● ದಿನ 38:40ದಿನಗಳ ಉಪವಾಸ ಮತ್ತು ಪ್ರಾರ್ಥನೆ.
ಅನಿಸಿಕೆಗಳು