ಅನುದಿನದ ಮನ್ನಾ
ದಿನ 18:40ದಿನಗಳ ಉಪವಾಸ ಮತ್ತು ಪ್ರಾರ್ಥನೆ.
Thursday, 28th of December 2023
4
1
484
Categories :
ಉಪವಾಸ ಮತ್ತು ಪ್ರಾರ್ಥನೆ (Fasting and prayer)
ಶಾಪಗಳನ್ನು ಮುರಿಯುವುದು.
"ಯಾಕೋಬ್ಯರಿಗೆ ಶಾಪ ತಟ್ಟುವುದಿಲ್ಲ; ಇಸ್ರಾಯೇಲ್ಯರಿಗೆ ಮಾಟಮಂತ್ರ ತಗಲುವುದಿಲ್ಲ."(ಅರಣ್ಯಕಾಂಡ 23:23).
ಶಾಪವು ಬಹಳ ಶಕ್ತಿಶಾಲಿಯಾಗಿದ್ದು ವೈರಿಯು ಒಬ್ಬರ ಅಭಿವೃದ್ಧಿಯನ್ನು ಮಿತಿಗೊಳಿಸಲು ಈ ಒಂದು ಅಸ್ತ್ರವನ್ನು ಬಳಸಿಕೊಳ್ಳುತ್ತಾನೆ.ಶಾಪದಲ್ಲಿ ಅನೇಕ ರಹಸ್ಯಗಳು ಅಡಗಿವೆ ಈ ವಿಚಾರವಾಗಿ ಅನೇಕ ವಿಶ್ವಾಸಿಗಳು ಜ್ಞಾನಹೀನರಾಗಿದ್ದಾರೆ.
"ಯಾಕೋಬ್ಯರಿಗೆ ಶಾಪ ತಟ್ಟುವುದಿಲ್ಲ; ಇಸ್ರಾಯೇಲ್ಯರಿಗೆ ಮಾಟಮಂತ್ರ ತಗಲುವುದಿಲ್ಲ."(ಅರಣ್ಯಕಾಂಡ 23:23).
ಶಾಪವು ಬಹಳ ಶಕ್ತಿಶಾಲಿಯಾಗಿದ್ದು ವೈರಿಯು ಒಬ್ಬರ ಅಭಿವೃದ್ಧಿಯನ್ನು ಮಿತಿಗೊಳಿಸಲು ಈ ಒಂದು ಅಸ್ತ್ರವನ್ನು ಬಳಸಿಕೊಳ್ಳುತ್ತಾನೆ.ಶಾಪದಲ್ಲಿ ಅನೇಕ ರಹಸ್ಯಗಳು ಅಡಗಿವೆ ಈ ವಿಚಾರವಾಗಿ ಅನೇಕ ವಿಶ್ವಾಸಿಗಳು ಜ್ಞಾನಹೀನರಾಗಿದ್ದಾರೆ.
ಅನೇಕ ವಿಶ್ವಾಸಿಗಳಿಗೆ ಇಂದು ದೇವರವಾಕ್ಯವನ್ನು ಹೇಗೆ ಅರ್ಥಯಿಸಿ ಕೊಳ್ಳಬೇಕೋ ಅದೂ ಅರಿಯದವರಾಗಿದ್ದಾರೆ.ಗಲಾತ್ಯ 3:13ರಲ್ಲಿ ದೇವರ ವಾಕ್ಯವು ಕ್ರಿಸ್ತನು ನಿಮ್ಮನ್ನು ಧರ್ಮಶಾಸ್ತ್ರದ ಶಾಪದಿಂದ ವಿಮೋಚಿಸಿದ್ದಾನೆ ಎಂದು ಹೇಳಿದೆ ಅದು ಯಾವ ರೀತಿಯ ಶಾಪವನ್ನು ಕುರಿತು ಹೇಳುತ್ತದೆ?"ಮೋಶೆಯ ಧರ್ಮಶಾಸ್ತ್ರ" ದಲ್ಲಿನ ಶಾಪವನ್ನು ಕುರಿತು ಹೇಳುತ್ತದೆ.
ಒಟ್ಟಾರೆಯಾಗಿ ಮೂರು ರೀತಿಯ ಆಜ್ಞೆಗಳಿದ್ದು ನೀವು ಇವುಗಳನ್ನು ಸ್ವಷ್ಟವಾಗಿ ಅರಿತುಕೊಳ್ಳಬೇಕೆಂದು ನಾನು ಬಯಸುತ್ತೇನೆ. ಅವುಗಳಾವುವೆಂದರೆ :-
1. ದಶಾಜ್ಞೆಗಳು: ಈ ಆಜ್ಞೆಗಳು ಹತ್ತು ಆಜ್ಞೆಗಳನ್ನು ಕುರಿತು ಹೇಳುತ್ತದೆ.
2. ಪಂಚಕಾಂಡಗಳು:ಸತ್ಯವೇದದ ಮೊದಲ ಐದು ಪುಸ್ತಕಗಳು(ಆದಿಕಾಂಡ, ವಿಮೋಚನಾ ಕಾಂಡ, ಯಾಜಕಕಾಂಡ ಅರಣ್ಯಕಾಂಡ ಮತ್ತು ಧರ್ಮೋಪದೇಶಕಾಂಡ). ಇವೂ ಸಹ 'ಆಜ್ಞೆಗಳು' ಎಂದು ಕರೆಯಲ್ಪಡುತ್ತದೆ.
3. ದೇವರ ವಾಕ್ಯ: ದೇವರ ಬಾಯಿಂದ ಹೊರಡುವ ಪ್ರತಿಯೊಂದು ಮಾತುಗಳನ್ನು ಸಹ 'ಆಜ್ಞೆಗಳು' ಎಂದು ಕರೆಯಲ್ಪಡುತ್ತದೆ.
ಕ್ರಿಸ್ತನು ನಮ್ಮನ್ನು ಮೋಶೆಯ ಧರ್ಮಶಾಸ್ತ್ರದ ಆಜ್ಞೆಗಳಲ್ಲಿರುವ ಶಾಪಗಳಿಂದ ಬಿಡಿಸಿದನು. ಆತನು ನಮ್ಮನ್ನು ಎಲ್ಲಾ ಧಾರ್ಮಿಕ ಸಾಂಪ್ರದಾಯಿಕ ನಿಯಮಗಳಿಂದಲೂ ಸಹ ನಮ್ಮನ್ನು ಬಿಡಿಸಿದನು.
ಒಬ್ಬ ಕ್ರೈಸ್ತನು ಶಾಪಕ್ಕೊಳಗಾಗಬಹುದೇ?
ಸತ್ಯವೇನೇಂದರೆ ದೇವರೊಟ್ಟಿಗೆ ನಿಕಟವಾದ ಸಂಬಂಧ ಹೊಂದಿದ ಕ್ರೈಸ್ತನಿಗೆ ಶಾಪ ತಟ್ಟುವುದಿಲ್ಲ. ಕೆಲವೊಂದು ಸನ್ನಿವೇಶಗಳಲ್ಲಿ ಕ್ರೈಸ್ತನ ಜೀವಿತದ ಮೇಲೆ ಶಾಪವು ಕಾರ್ಯ ಮಾಡುವುದನ್ನು ನಾವು ಕಾಣಬಹುದು.ಕ್ರೈಸ್ತನನ್ನು "ನೇರವಾಗಿ ಶಪಿಸಬಹುದು" ಎಂಬುದು ಇದರ ಅರ್ಥವಲ್ಲ.
ಒಬ್ಬ ಕ್ರೈಸ್ತನ ಮೇಲೆ ಶಾಪವು ಕಾರ್ಯಮಾಡಲು ಯಾವೆಲ್ಲಾ ಸಂಗತಿಗಳು ಅನುವು ಮಾಡಿಕೊಡುತ್ತದೆ?
ದೇವರ ಅನ್ಯೋನ್ಯತೆಯಿಂದ ಹೊರಗುಳಿದು ಜೀವಿಸುವ ಕ್ರೈಸ್ತನ ಮೇಲೆ ಶಾಪವು ಕಾರ್ಯ ಮಾಡಬಲ್ಲದು.
ಒಬ್ಬ ಕ್ರೈಸ್ತನು ತನ್ನ ಪಾಪಮಯವಾದ ಜೀವನಶೈಲಿಯಿಂದ ತನ್ನ ಮೇರೆಯನ್ನು ಮೀರಿ ಬದುಕುತ್ತಿದ್ದರೆ ಅಂಥವರ ಮೇಲೆ ಶಾಪ ಕಾರ್ಯ ಮಾಡುತ್ತದೆ. ಇಲ್ಲಿ ಯಾರೂ ಸಹ 100 percent ಪರಿಪೂರ್ಣರಲ್ಲ ಮನುಷ್ಯರೆಂದ ಮೇಲೆ ತಪ್ಪುಗಳು ಪಾಪ ಮಾಡುವುದು ಸಹಜ ಆದರೆ ಪಾಪ ಮಾಡುವದನ್ನೇ ಜೀವನಶೈಲಿ ಮಾಡಿಕೊಳ್ಳುವಂತವರ ಮೇಲೆ ಶಾಪವು ತನ್ನ ಕಾರ್ಯ ಮಾಡುತ್ತದೆ.ಯಾಕೆಂದರೆ ಆ ಮನುಷ್ಯನು ಸೈತಾನನಿಗೆ ಸ್ಥಳ ಮಾಡಿಕೊಟ್ಟಿರುತ್ತಾನೆ (ಎಫಸ್ಸೆ 4:27).
ಒಬ್ಬ ಕ್ರೈಸ್ತನು ತನ್ನ ಒಡಂಬಡಿಕೆಯನ್ನು ಕಾಯ್ದುಕೊಳ್ಳದಿದ್ದರೆ, ತನ್ನ ಸ್ಥಾನ ಮರೆತರೆ ಮತ್ತು ತನ್ನ ಹಕ್ಕಿನ ಬಗ್ಗೆ ಉದಾಸೀನಾದರೆ ಶಾಪವು ಅಂಥವನ ಮೇಲೆ ಕಾರ್ಯ ಮಾಡುತ್ತದೆ.
ಒಬ್ಬ ಕ್ರೈಸ್ತನು ದೇವರದನ್ನು ಕದ್ದು ಕೊಂಡರೆ ಅಥವಾ ದೇವರಿಗೆ ಸಂಬಂಧಿಸಿದಂತದ್ದಕ್ಕೆ ಅವಮಾನಿಸಿದರೆ ಆಗ ಅವನ ಮೇಲೆ ಶಾಪವು ಕಾರ್ಯ ಮಾಡುತ್ತದೆ.
ದೇವರಿಗೆ ಅವಿಧೇಯರಾಗಿ ಜೀವಿಸುವವರ ಮೇಲೆ ಶಾಪವು ಕಾರ್ಯ ಮಾಡುತ್ತದೆ.
ಶಾಪದ ವಿರುದ್ಧವಾಗಿ ಪ್ರಾರ್ಥಿಸದೇ ಅದರ ಮೇಲೆ ತನಗಿರುವ ಅಧಿಕಾರವನ್ನು ಬಳಸದೇ ಇದ್ದರೆ ಅಂತವರ ಮೇಲೆ ಶಾಪ ಕಾರ್ಯ ಮಾಡುತ್ತದೆ. ನೀವು ಆನಂದಿಸ ಬೇಕಾದರೆ ಜಾರಿಗೆ ತರಬೇಕಾದ ಕಾರ್ಯ ಇದೇ.ಕ್ರೈಸ್ತರು ತಮ್ಮ ಆತ್ಮೀಕ ಯುದ್ಧದ ಬಗ್ಗೆ ಎಂದಿಗೂ ನಿಷ್ಕ್ರಿಯರಾಗಿರಬಾರದು.
ಒಬ್ಬ ಕ್ರೈಸ್ತನು ಮತ್ತೊಬ್ಬರಿಗೆ ಮೋಸ ಮಾಡಿದರೆ ಅಥವಾ ಕೆಟ್ಟದ್ದನ್ನು ಮಾಡಿದರೆ ಆಗ ಮೋಸಕ್ಕೊಳಗಾದವರು/ನೊಂದವರು ಶಾಪ ಹಾಕಿದರೆ ಆ ಶಾಪವು ಕಾರ್ಯ ಮಾಡುತ್ತದೆ. ಶಾಪವು ಕಾರ್ಯ ಮಾಡಲು ಕಾರಣ ಇದ್ದೇ ಇರುತ್ತದೆ. ಶಾಪವು ಕಾರ್ಯ ಮಾಡಲು ನಿಯಮಬದ್ದ ಆಧಾರವಿರಲೇ ಬೇಕು. ಜ್ಞಾನೋಕ್ತಿ 26:2 ಹೇಳುತ್ತದೆ"ನಿಮಿತ್ತವಿಲ್ಲದೆ ಕೊಟ್ಟ ಶಾಪ ಎರಗದು" ಎಂದು
ಶಾಪದ ಕುರಿತ ವಾಸ್ತವಾಂಶಗಳು.
*ಶಾಪವು ನೀವು ಎಷ್ಟು ಬೇಗ ಎಷ್ಟು ದೂರ ನೀವು ಜೇವನವನ್ನು ಕ್ರಮಿಸುತ್ತೀರಿ ಎಂಬುದನ್ನು ನಿರ್ಧರಿಸುತ್ತದೆ
*ಶಾಪವು ನಿಮ್ಮ ಕರೆಯ ವಿರುದ್ಧವಾಗಿ ನಿಮ್ಮನ್ನು ಎದುರಿಸಲು ಕಲ್ಪಿಸುವ ಆಯುಧವಾಗಿದೆ.
*ಶಾಪವು ರೋಗಗಳಿಗೂ ವೈಫಲ್ಯಕ್ಕೂ ಮತ್ತು ಮರಣಕ್ಕೂ ನಡೆಸಬಲ್ಲದು.
*ಶಾಪವು ಆಶೀರ್ವಾದಕ್ಕೆ ವಿರುದ್ಧವಾದದ್ದು
*ಶಾಪವು ನಾಶಮಾಡುವಂತದ್ದು.
*ಶಾಪವನ್ನು ಮುರಿಯಬಹುದು.
*ಶಾಪವು ಬಿಡುಗಡೆಯದಾಗ ಅದಕ್ಕೆ ನಿರ್ದಿಷ್ಟ ಸಮಯಾವಧಿ ಎಂಬುದೇನೂ ಇರುವುದಿಲ್ಲ,ಅದು ತಲೆಮಾರಿನಿಂದ ತಲೆಮಾರಿಗೆ ಮುಂದುವರೆಯುತ್ತಾ ಹೋಗಬಹುದು.
*ಯಾರು ಅಧಿಕೃತ ಸ್ಥಾನದಲ್ಲಿರುತ್ತಾರೋ ಅವರು ಶಾಪವನ್ನಾಗಲೀ ಆಶೀರ್ವಾದವನ್ನಾಗಲೀ ಮಾಡುವ ಅಧಿಕಾರ ಹೊಂದಿರುತ್ತಾರೆ.
*ತಲೆಮಾರುಗಳ ಆಶೀರ್ವಾದ ಎನ್ನುವಂಥದ್ದು ಇದೆ. ಹಾಗೆಯೇ ತಲೆಮಾರುಗಳ ಶಾಪವೂ ಇದೆ.
ಶಾಪದ ಕಾರ್ಯಚಾರಣೆ ಕುರಿತ ಸತ್ಯವೇದ ಆಧಾರಿತ ನಿದರ್ಶನಗಳು.
1. ಗೆಹೇಜಿ ಮತ್ತು ಅವನ ಕುಟುಂಬದವರಿಗೆ ಕುಷ್ಟ ರೋಗವು ಶಾಪವಾಗಿ ಬಂತು (2ಅರಸು 5:27).
2. ಯೆಹೋಶುವನು ಯೆರಿಕೋ ಪಟ್ಟಣವನ್ನು ಶಪಿಸಿದನು.
ಯೆಹೋಶುವ 6:26ರಲ್ಲಿ ಯೆಹೋಶುವನು ಯೆರಿಕೋ ಪಟ್ಟಣವನ್ನು ಶಪಿಸುತ್ತಾನೆ ಸುಮಾರು 530ವರ್ಷಗಳ ನಂತರ ಹಿಯೇಲನು ಈ ಪಟ್ಟಣವನ್ನು ತಿರುಗಿ ಕಟ್ಟಲು ಕೈಹಾಕಿದನು ಆಗ ಅವನ ಮೊದಲ ಹಾಗೂ ಕೊನೆಯ ಮಗನನ್ನು ಕಳೆದುಕೊಂಡ ಹೀಗೆ ಆ ಶಾಪವು ನೆರವೇರಿತು. (1ಅರಸು 16:34).
ಹಿಯೇಲನು ಈ ವಿಚಾರವನ್ನು ತಿರಸ್ಕರಿಸಿರಬಹುದು ಅಥವಾ ಈ ಶಾಪವನ್ನು ಅಸಡ್ಡೆ ಮಾಡಿರಬಹುದು. ಒಂದು ವಿಚಾರದ ಬಗ್ಗೆ ಉದಸೀನಾ ಮಾಡುವುದರಿಂದ ಶಾಪದಿಂದ ಉಂಟಾಗುವ ಕೇಡಿನಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಅದರಿಂದ ಯಾವ ಕ್ರೈಸ್ತನೂ ಸಹ ಇರುವ ಶಾಪದ ಬಗ್ಗೆ ನಾನು ತಲೆಕೆಡಿಸಿಕೊಳ್ಳುವುದಿಲ್ಲ ಎಂದು ಹೇಳಿ ಅದರಿಂದ ವಿನಾಯಿತಿ ಪಡೆಯಲು ಸಾಧ್ಯವಿಲ್ಲ
3. ಆದಾಮನು ಆಶೀರ್ವಧಿಸಲ್ಪಟ್ಟವನಾಗಿದ್ದನು ಆದರೆ ಅವನ ಅವಿಧೇಯತೆಯೇ ಅವನಿಗೆ ಶಾಪ ತಂದಿತು. ದೇವರು ಪಾಪವನ್ನು ಸಹಿಸಲಾರನು;ಆತನು ಪಾಪಿಗಳನ್ನು ಪ್ರೀತಿಸುತ್ತಾನೆ ಆದರೆ ನಾವು ಪಾಪದ ಬಗ್ಗೆ ಅಜಾಗರೂಕತೆಯಿಂದ ವರ್ತಿಸುವುದನ್ನು ಸಹಿಸಲಾರನು.ನಾವು ಪಾಪದ ವಿರುದ್ಧ ಹೋರಾಡಬೇಕು. (ಆದಿಕಾಂಡ 3:17-19).
4. ಬಾಲಾಕ ಮತ್ತು ಬಿಳಮಾನು. ಬಾಲಾಕನು ಬಿಳಾಮನನ್ನು ಬಾಡಿಗೆಗೆ ನೇಮಿಸಿಕೊಂಡನು;ಬಿಳಾಮನು ಇಸ್ರಾಯೇಲ್ಯರನ್ನು ಶಪಿಸಬೇಕು ಇದರಿಂದ ಇಸ್ರಾಯೇಲ್ಯರು ಬಲಹೀನರಾದಾಗ ತಾನು ಅವರನ್ನು ಸೋಲಿಸಬಹುದು ಎಂದು ಬಾಲಾಕನು ಬಯಸಿದನು. ಬಾಲಾಕನು ಒಬ್ಬರ ಮೇಲೆ ಎರಗುವ ಶಾಪದ ಆತ್ಮೀಕ ಪರಿಣಾಮವನ್ನು ಅರಿತವನಾಗಿದ್ದನು ಮತ್ತು ಈ ಆತ್ಮೀಕ ಅಸ್ತ್ರವನ್ನು ಅವನು ಭೌತಿಕವಾಗಿ ಯುದ್ಧಕ್ಕೆ ಬರುವ ಮೊದಲೇ ಇಸ್ರಾಯೆಲ್ಯರ ಮೇಲೆ ಪ್ರಯೋಗಿಸಿ ಅವರನ್ನು ಬಲಹೀನಗೊಳಿಸ ಬಯಸಿದ. ಬಿಳಾಮಾನೇನಾದರೂ ಇಸ್ರಾಯೇಲ್ಯರನ್ನು ಶಪಿಸಲು ಅಂದು ಸಫಲನ್ನಾಗಿದ್ದಾರೆ ಇಸ್ರಾಯೇಲ್ಯರು ಮೋವಾಬ್ಯರಿಂದ ಭೌತಿಕ ಯುದ್ಧದಲ್ಲಿ ಸೋತು ಹೋಗುತ್ತಿದ್ದರು.
ಶಾಪವನ್ನು ಮುರಿಯುವುದು ಹೇಗೆ?
*ಮೊದಲು ಕಾರ್ಯಗಳಲ್ಲಿ ಯಾವುದಾದರೂ ಶಾಪವಿದೆಯೇ ಎಂದು ಆತ್ಮೀಕವಾಗಿ ವಿವೇಚಿಸಬೇಕು.
* ಆ ಶಾಪಕ್ಕೆ ಕಾರಣವೇನು ಎಂದು ಪ್ರಾರ್ಥನಾ ಪೂರ್ವಕವಾಗಿ ದೈವೀಕ ಪ್ರಕಟಣೆಯನ್ನು ಕೇಳಿಕೊಳ್ಳಬೇಕು.
*ತಿಳಿದೋ ತಿಳಿಯದೆಯೋ ಮಾಡಿದ ಪಾಪದಿಂದ ದುರಾತ್ಮಕ್ಕಾಗಲೀ ಆ ಶಾಪಕ್ಕಾಗಲೀ ಕಾನೂನುಬದ್ದ ನೆಲೆ ಕೊಟ್ಟಿದ್ದರೆ ಅದಕ್ಕಾಗಿ ಪಶ್ಚಾತ್ತಾಪ ಪಟ್ಟು ಮನತಿರುಗಬೇಕು.
*ನೀವು ಇದಕ್ಕೆ ಸಂಬಂಧಿಸಿದ ದೇವರ ವಾಕ್ಯಗಳನ್ನು ಆದುಕೊಂಡು ಆತ್ಮನ ಖಡ್ಗದಂತೆ ಅದನ್ನು ಬಳಸಬೇಕು. ನೀವು ದೇವರ ವಾಕ್ಯಗಳನ್ನು ಶೋಧಿಸಿ ದೇವರ ಚಿತ್ತವೇನೆಂದು ತಿಳಿದುಕೊಳ್ಳಬೇಕು. ನೀವು ಶಾಪದ ಕಾರ್ಯಚರಣೆಗಳನ್ನು ಅದರ ಬಲವನ್ನು ಮುರಿಯಬೇಕೆಂಬುದೇ ನಿಮ್ಮ ವಿಚಾರದಲ್ಲಿ ದೇವರ ಚಿತ್ತವಾಗಿದೆ.
*ಯೇಸುವಿನ ರಕ್ತವನ್ನು ನಿಮ್ಮ ಪರಿಸ್ಥಿತಿಯ ಮೇಲೆ ಪ್ರೊಕ್ಷಿಸಿ ಆ ಶಾಪದ ಕಾನೂನುಬದ್ದ ನೆಲೆಯನ್ನು ನಾಶಪಡಿಸಬೇಕು.
*ದೇವರ ಚಿತ್ತಕ್ಕಾಗಿಯೂ ಮತ್ತು ಆತನು ಈ ಒಂದು ಕಾರ್ಯಾಚರಣೆಯಲ್ಲಿ ಮಧ್ಯಪ್ರವೇಶಿಸಬೇಕೆಂದು ಪ್ರಾರ್ಥಿಸಬೇಕು. ಈ ರೀತಿಯ ಆತ್ಮೀಕ ಯುದ್ಧದಲ್ಲಿ ಆ ಶಾಪವನ್ನು ಹಿಡಿದು ಕಾರ್ಯ ಮಾಡುತ್ತಿರುವ ದುರಾತ್ಮಗಳನ್ನು ಬಂಧಿಸಬೇಕು.
* ಪ್ರವಾದನ ಆಜ್ಞೆಗಳ ಮೂಲಕ ಪ್ರವಾದನ ಘೋಷಣೆಗಳ ಮೂಲಕ ಕ್ರಿಸ್ತನಲ್ಲಿ ನಮಗೆ ದೊರಕಿರುವ ಅಧಿಕಾರವನ್ನು ಉಪಯೋಗಿಸುವ ಅಭ್ಯಾಸ ಮಾಡಿಕೊಳ್ಳಬೇಕು. ಈ ಶಾಪಕ್ಕೆ ವಿರುದ್ಧವಾಗಿ ಆಶೀರ್ವಾದವನ್ನು ಬಾಯ ಅರಿಕೆ ಮಾಡುವುದನ್ನು ಮುಂದುವರಿಸುತ್ತಲೇ ಇರಬೇಕು.
*ಮತ್ತೆ ಹಳೆಯ ಪಾಪದ ಜೀವಿತಕ್ಕೆ ತಿರುಗದೆ ಪರಿಶುದ್ಧದ ಜೀವಿತ ಜೀವಿಸಬೇಕು.
* ಶಾಪವೋ ಶಕ್ತಿಯುಳ್ಳದ್ದು ಆದ್ದರಿಂದ ನಾವು ಈ ಆತ್ಮಿಕ ಯುದ್ಧದಲ್ಲಿ ನಮ್ಮ ಜೀವಿತಕ್ಕೆ ವಿರೋಧವಾದ ಇವುಗಳ ವಿರುದ್ಧ ಹೋರಾಡುತ್ತಲೇ ಇರಬೇಕು. ನಿಮ್ಮ ಕರೆಗೆ ತಡೆ ಮಾಡುವಂತಹ ಈ ಅಂಧಕಾರ ಶಕ್ತಿಗಳನ್ನು ನಾಶ ಪಡಿಸಬೇಕೆಂದು ದೇವರು ಬಯಸುತ್ತಾನೆ. ಇದು ನಿಮ್ಮ ಜವಾಬ್ದಾರಿಯೂ ಸಹ ಹೌದು ಮತ್ತು ಈ ಅಧಿಕಾರವನ್ನು ನಿಮಗೇ ಕೊಡಲ್ಪಟ್ಟಿದೆ. ನಿಮ್ಮ ಆತ್ಮದಲ್ಲಿ ರೋಷ ಉಳ್ಳವರಾಗಿ ನಿಮ್ಮ ಜೀವಿತಕ್ಕೆ ವಿರೋಧವಾದ ಶಾಪಗಳನ್ನು ನೀವು ನಾಶಪಡಿಸಬೇಕು. ಯಾವುದೇ ಶಾಪಗಳು ನಿಮ್ಮ ಜೀವಿತದಲ್ಲಿ ಕಾರ್ಯ ಮಾಡುತ್ತಿದ್ದರೆ ಅವುಗಳು ಯೇಸು ನಾಮದಲ್ಲಿ ನಾಶವಾಗಿ ಹೋಗಲೆಂದು ಈ ದಿನ ನಿಮ್ಮ ಜೀವಿತದ ಮೇಲೆ ನಾನು ಯೇಸುನಾಮದಲ್ಲಿ ಘೋಷಿಸುತ್ತೇನೆ.
ಪ್ರಾರ್ಥನೆಗಳು
ಈ ಪ್ರಾರ್ಥನಾ ಕ್ಷಿಪಣಿಗಳು ನಿಮ್ಮ ಹೃದಯದ ಆಳದಿಂದ ಬರುವವರೆಗೂ ಪುನರಾವರ್ತನೆ ಮಾಡಿರಿ. ಆನಂತರವೇ ಮುಂದಿನ ಪ್ರಾರ್ಥನಾ ಅಂಶಕ್ಕೆ ಹೋಗಿರಿ. ಒಂದೊಂದು ಪ್ರಾರ್ಥನಾ ಅಂಶಗಳನ್ನು ವ್ಯಕ್ತಿಗತ ಮಾಡಿಕೊಂಡು ಪ್ರತಿಯೊಂದಕ್ಕೂ ಕನಿಷ್ಠ ಪಕ್ಷ ಒಂದೊಂದು ನಿಮಿಷವಾದರೂ ಮುಡಿಪಾಗಿಡಿ. ಮುಂದಿನ ಪ್ರಾರ್ಥನಾ ಅಂಶಕ್ಕೆ ಹೋಗುವ ಮೊದಲು ನಿಜವಾಗಿಯೂ ಹೃತ್ಪೂರ್ವಕವಾಗಿ ಪ್ರಾರ್ಥಿಸಿದ್ದೀರಿ ಎಂದು ಖಚಿತ ಪಡಿಸಿಕೊಳ್ಳಿ.
1. ನನ್ನ ಜೀವಿತದ ಕರೆಗೆ ವಿರೋಧವಾಗಿ ಕಾರ್ಯ ಮಾಡುತ್ತಿರುವ ಯಾವುದೇ ನಕರಾತ್ಮಕ ಒಡಂಬಡಿಕೆಗಳಾದರೂ ಯೇಸು ನಾಮದಲ್ಲಿ ನಾಶವಾಗಿ ಹೋಗಲಿ. (ಯೆಶಾಯ 54:17)
2. ನನ್ನ ರಕ್ತ ಸಂಬಂಧದಲ್ಲಿ ಬಂದಿರುವ ಯಾವುದೇ ನಕರಾತ್ಮಕ ಶಾಪಗಳು ಯೇಸು ನಾಮದಲ್ಲಿ ಮುರಿಯಲ್ಪಡಲಿ. (ಗಲಾತ್ಯ 3:3)
3. ನನ್ನ ಪೂರ್ವಿಕರಿಂದ ಬಂದಂತಹ ಎಲ್ಲಾ ಶಾಪಗಳಿಂದಲೂ ಎಲ್ಲಾ ದುಷ್ಟ ಯಜ್ಞ ವೇದಿಗಳಿಂದಲೂ ಯೇಸುನಾಮದಲ್ಲಿ ನಾನು ಸಂಪರ್ಕವನ್ನು ಕಡಿದುಕೊಳ್ಳುತ್ತೇನೆ. (ಯೆಹೆಜ್ಕೇಲ 18:20)
4. ಯಾವುದೇ ನಿಗೂಢ ವ್ಯಕ್ತಿಯಿಂದ ನನ್ನ ಮೇಲೆ ಬಂದಿರುವ ಶಾಪದ ಮೇಲೆ ಅಧಿಕಾರವನ್ನು ನಾನು ಯೇಸು ನಾಮದಲ್ಲಿ ಹೊಂದುತ್ತೇನೆ ಆ ಎಲ್ಲಾ ಶಾಪಗಳು ಯೇಸು ನಾಮದಲ್ಲಿ ಆಶೀರ್ವಚನಗಳಾಗಿ ಮಾರ್ಪಡಲಿ (ಲೂಕ 10:19).
5. ತಂದೆಯೇ ನನ್ನ ಮೇಲೆ ಬಿಡುಗಡೆಯಾಗಿರುವ ಯಾವುದೇ ಶಾಪಗಳಾಗಲಿ ಅವುಗಳನ್ನು ಯೇಸುನಾಮದಲ್ಲಿ ಆಶೀರ್ವಾದಗಳಾಗಿ ಮಾರ್ಪಡಿಸು. (ಧರ್ಮಪದೇಶಕಾಂಡ 23:5)
6. ನನ್ನ ಪ್ರಗತಿಯ ಮೇಲೇಯೂ ಮತ್ತು ನನ್ನ ಸಂಪತ್ತಿನ ಮೇಲೆಯೂ ಆಳ್ವಿಕೆ ನಡೆಸುತ್ತಿರುವ ಎಲ್ಲಾ ಪ್ರಭುತ್ವಗಳನ್ನು ಯೇಸು ನಾಮದಲ್ಲಿ ಬಂಧಿಸುತ್ತೇನೆ.(ಎಫಸ್ಸೆ 6:12).
7. ನನ್ನ ರಕ್ತ ಸಂಬಂಧದಲ್ಲಿ ಮಾಡಲಾಗಿರುವ ವಿಗ್ರಹಾರಾಧನೆಯಿಂದ ಉಂಟಾಗಿರುವ ಎಲ್ಲ ದುಷ್ಪರಿಣಾಮಗಳನ್ನು ಯೇಸು ನಾಮದಲ್ಲಿ ತೊಡೆದು ಹಾಕುತ್ತಿದ್ದೇನೆ. (1ಯೋಹಾನ 5:21).
8. ತಂದೆಯೇ ನನ್ನ ಜೀವನದಲ್ಲಿ ಕಾರ್ಯ ಮಾಡುತ್ತಿರುವ ಎಲ್ಲ ಶಾಪಗಳಿಂದ ನನ್ನನ್ನು ಯೇಸುನಾಮದಲ್ಲಿ ವಿಮೋಚಿಸು. (ಕೀರ್ತನೆ 34:6)
9. ನನ್ನ ತಂದೆ ತಾಯಿಗಳ ಮೂಲಕ ಬಂದ ಎಲ್ಲಾ ಶಾಪಗಳ ಮೇಲೆ ಯೇಸುವಿನ ರಕ್ತವನ್ನು ಪ್ರೋಕ್ಷಿಸಿ, ಯೇಸು ನಾಮದಲ್ಲಿ ಅವುಗಳನ್ನು ನಿಷ್ಕ್ರಿಯಗೊಳಿಸುತ್ತೇನೆ. (ಯೆಹೆಜ್ಕೇಲ18:20).
10. ಎಲ್ಲಾ ವೈಫಲ್ಯದ ದುರಾತ್ಮಗಳೇ ಯೇಸು ನಾಮದಲ್ಲಿ ನಿಮ್ಮನ್ನು ನಿರಾಕರಿಸುತ್ತೇನೆ. ಹಾಗೆಯೇ ನಾನು ಯೇಸು ನಾಮದಲ್ಲಿ ಸಾಫಲ್ಯತೆಯನ್ನು ಹೊಂದುವೆ ಎಂದು ಯೇಸು ನಾಮದಲ್ಲಿ ಘೋಷಿಸುತ್ತೇನೆ. (ಫಿಲಿಪ್ಪಿ 4:13).
11. ದೇವರ ಬಲವೇ, ತಲೆಮಾರುಗಳಿಂದ ಬಂದ ಎಲ್ಲಾ ಪಿತ್ರಾರ್ಜಿತ ಶಾಪಗಳಿಂದ ನನ್ನನ್ನು ಯೇಸು ನಾಮದಲ್ಲಿ ಬಿಡಿಸು. (ಗಲಾತ್ಯ 3:13)
12. ನನ್ನ ಜೀವಿತದಲ್ಲಿ ಬರಬೇಕಾದ ಒಳಿತುಗಳನ್ನು ತಡೆಯುತ್ತಿರುವ ಯಾವುದೇ ದುಷ್ಟ ಶಾಪವಾಗಲಿ ಪವಿತ್ರಾತ್ಮನ ಅಗ್ನಿಯಿಂದ ಅವುಗಳನ್ನು ಯೇಸು ನಾಮದಲ್ಲಿ ಮುರಿದು ಹಾಕುತ್ತಿದ್ದೇನೆ. (ಯೇಶಾಯ 54:17)
Join our WhatsApp Channel
Most Read
● ದೇವರು ಹೇಗೆ ಒದಗಿಸುತ್ತಾನೆ #2● ಅಗ್ನಿಯು ಸುರಿಯಲ್ಪಡಬೇಕು
● ದೇವರಿಂದ ಒದಗಿದ ಕನಸು
● ಪರಲೋಕದ ವಾಗ್ದಾನ
● ದುರಾತ್ಮಗಳ ಪ್ರವೇಶವನ್ನು ತಡೆಯುವ ಅಂಶಗಳು - III
● ನಿಮ್ಮ ಗತಿಯನ್ನು ಬದಲಾಯಿಸಿ
● ನಾವು ಸಭೆಯಾಗಿ ನೇರವಾಗಿ ಕೂಡಿಕೊಳ್ಳದೆ ಮನೆಯಲ್ಲಿಯೇ ಕುಳಿತು ಆನ್ಲೈನ್ ನಲ್ಲಿ ಸಭೆಯ ಆರಾಧನೆಯಲ್ಲಿ ಭಾಗವಹಿಸಬಹುದೇ?
ಅನಿಸಿಕೆಗಳು