ಅನುದಿನದ ಮನ್ನಾ
ನೀವೊಂದು ಉದ್ದೇಶಕ್ಕಾಗಿ ಹುಟ್ಟಿದ್ದೀರಿ.
Sunday, 31st of March 2024
2
1
422
Categories :
ಉದ್ದೇಶಗಳು (purpose)
"ಅನೇಕ ವಿಷಯಗಳಲ್ಲಿ ನಾವೆಲ್ಲರೂ ತಪ್ಪುವದುಂಟು. ಒಬ್ಬನು ಮಾತಿನಲ್ಲಿ ತಪ್ಪದಿದ್ದರೆ ಅವನು ಶಿಕ್ಷಿತನೂ ತನ್ನ ದೇಹವನ್ನೆಲ್ಲಾ ಸ್ವಾಧೀನಪಡಿಸಿಕೊಳ್ಳುವದಕ್ಕೆ ಸಮರ್ಥನೂ ಆಗಿದ್ದಾನೆ. 3ನಾವು ಕುದುರೆಗಳನ್ನು ಸ್ವಾಧೀನ ಮಾಡಿಕೊಳ್ಳಬೇಕೆಂದಿರುವಾಗ ಅವುಗಳ ಬಾಯಿಗೆ ಕಡಿವಾಣಹಾಕುತ್ತೇವಲ್ಲಾ; ಆಗ ಅವುಗಳ ದೇಹವನ್ನೆಲ್ಲಾ ತಿರುಗಿಸುವದಕ್ಕೆ ಆಗುತ್ತದೆ.4 ಹಡಗುಗಳನ್ನು ನೋಡಿರಿ. ಅವು ಬಹು ದೊಡ್ಡವು, ಬಲವಾದ ಗಾಳಿಯಿಂದ ಬಡಿಸಿಕೊಂಡು ಹೋಗುತ್ತವೆ. ಆದರೂ ನಡಿಸುವವನು ಬಹು ಸಣ್ಣ ಚುಕ್ಕಾಣಿಯಿಂದ ಅವುಗಳನ್ನು ತನ್ನ ಮನಸ್ಸಿಗೆ ಬಂದ ಕಡೆಗೆ ತಿರುಗಿಸುತ್ತಾನೆ. 5ಹಾಗೆಯೇ ನಾಲಿಗೆಯು ಕೂಡ ಚಿಕ್ಕ ಅಂಗವಾಗಿದ್ದರೂ ದೊಡ್ಡ ಕಾರ್ಯಗಳನ್ನು ಕೊಚ್ಚಿಕೊಳ್ಳುತ್ತದೆ."(ಯಾಕೋಬನು 3:2-5)
ಈ ಮೇಲಿನ ದೇವರ ವಾಕ್ಯವು ನಮ್ಮ ಜೀವಿತವನ್ನು ಬಿರುಗಾಳಿಗೆ ಸಿಕ್ಕಿಕೊಂಡು ಹೋಯ್ದಾಡುವ ಹಡಗಿಗೆ ಹೋಲಿಸಿದೆ. ಅಪೋಸ್ತಲನಾದಂತ ಯಾಕೋಬನು ಹೀಗಿದ್ದರೂ ನಾವು ನಮ್ಮ ಹಡಗನ್ನು ಅದರ ತೀರಕ್ಕೆ ನಡೆಸಲು ಸಾಧ್ಯ ಎಂದು ಇಲ್ಲಿ ವಿವರಿಸುತ್ತಿದ್ದಾನೆ.
ಅಪೋಸ್ತಲನಾದ ಯಾಕೋಬನು 5 ಸಂಗತಿಗಳನ್ನು ಇಲ್ಲಿ ಉಲ್ಲೇಖಿಸಿದ್ದಾನೆ.
- ಹಡಗು - ನಮ್ಮ ಜೀವನ
- ನಾವೀಕ - ನಮ್ಮ ಆತ್ಮೀಕ ಮನುಷ್ಯ
- ಬಲವಾದ ಗಾಳಿ - ನಮ್ಮ ಜೀವನದಲ್ಲಿ ಬರುವ ಸನ್ನಿವೇಶಗಳು
- ಚುಕ್ಕಾಣಿ -ನಮ್ಮ ನಾಲಿಗೆ
- ಸಮುದ್ರ -ಲೋಕದಲ್ಲಿನ ಜೀವನ
ನಮ್ಮ ತಾಣವನ್ನು ನಾವು ತಲುಪಲು ನಮಗೆ ಸಹಾಯ ಮಾಡುವ ಮೂಲಭೂತ ಸತ್ಯಗಳಾವುವೆಂದರೆ:-
- ನೀವು ಮತ್ತು ನಾನು ದೇವರಿಂದ ಪಡೆದ ಸಾಮರ್ಥ್ಯಗಳಿಂದ ತುಂಬಲ್ಪಟ್ಟವರಾಗಿದ್ದೇವೆ.
- ಅಪರಿಚಿತವಾಗಿ ಅಪ್ಪಳಿಸುವ ಬಲಗಳು ನಮ್ಮ ಜೀವನವನ್ನು ನಿಯಂತ್ರಿಸಲು ದಿಕ್ಕು ತಪ್ಪಿಸಲು ಪ್ರಯತ್ನಿಸಬಹುದು.
- ಆದರೂ ನೀವು ನಿಮ್ಮ ಜೀವನವನ್ನು ಸರಿಯಾದ ದಿಕ್ಕಿನಲ್ಲಿ ನಡೆಸಬಹುದು.
1.ನೀವು ಮತ್ತು ನಾನು ದೇವರಿಂದ ಪಡೆದ ಸಾಮರ್ಥ್ಯಗಳಿಂದ ತುಂಬಲ್ಪಟ್ಟವರಾಗಿದ್ದೇವೆ.
ಕರ್ತನಾದ ಯೇಸು ನಿಮಗಾಗಿ ಅಮೂಲ್ಯವಾದ ಕ್ರಯ ವನ್ನು ಕೊಟ್ಟು ನಿಮ್ಮ ಮೇಲೆ ಬಹಳಷ್ಟು ಹೂಡಿಕೆ ಮಾಡಿದ್ದಾನೆ( ಎಫೆಸ್ಸೆ 4:8ಓದಿರಿ )ನೀವು ವಿಭಿನ್ನವಾದವರೂ ನೀವು ವರಗಳಿಂದಲೂ ತಲಾಂತುಗಳಿಂದಲೂ ತುಂಬಿಸಲ್ಪಟ್ಟವರೂ ಆಗಿದ್ದೀರಿ. ನೀವೊಂದು ನಿರ್ದಿಷ್ಟ ಕಾರ್ಯಕ್ಕಾಗಿ ಒಳ್ಳೆಯ ವಸ್ತುಗಳಿಂದ ತುಂಬಿಸಲ್ಪಟ್ಟ ವ್ಯಾಪಾರಿ ಹಡಗಿನಂತಿದ್ದೀರಿ, ಪವಿತ್ರಾತ್ಮನ ಸಹಾಯದಿಂದ ನೀವು ಮತ್ತು ನಾನು ದೇವರ ಮಹಿಮೆಗಾಗಿ ಮತ್ತು ನಮ್ಮ ಸುತ್ತಲಿನವರ ಪ್ರಯೋಜನಾರ್ಥವಾಗಿ ಈ ಎಲ್ಲಾ ವರಗಳನ್ನು ಕಂಡುಕೊಂಡು, ಪರಿಷ್ಕರಿಸಿ,ಉಪಯೋಗಿಸಬೇಕಾಗಿದೆ.
2.ಅಪರಿಚಿತವಾಗಿ ಅಪ್ಪಳಿಸುವ ಬಲಗಳು ನಮ್ಮ ಜೀವನವನ್ನು ನಿಯಂತ್ರಿಸಲು ದಿಕ್ಕು ತಪ್ಪಿಸಲು ಪ್ರಯತ್ನಿಸಬಹುದು.
ನಾವು ಕ್ರೈಸ್ತರೆಂದ ಮಾತ್ರಕ್ಕೆ ಯಾವುದೇ ಬಿರುಗಾಳಿಗೆ ನಾವು ಸಿಲುಕದವರು ಎಂಬ ಅರ್ಥವಲ್ಲ. 'ನೀವು ಯೇಸುವನ್ನು ನಂಬಿ ಆತನನ್ನು ಹಿಂಬಾಲಿಸಿದರೆ ನಿಮ್ಮ ಜೀವನವು ಹೂವಿನ ಹಾಸಿಗೆಯಂತಿರುತ್ತದೆ' ಎಂದು ಯಾರಾದರೂ ಬೋಧಿಸಿದರೆ ಆ ಬೋಧನೆಗಳು ಸುಳ್ಳು ಬೋಧನೆಗಳಾಗಿವೆ.
ಅನೇಕ ಸಲ ಈ ಬಲಗಳು ನಿಮ್ಮ ವಿರುದ್ಧವಾಗಿ ಏಕೆ ಬಂದಿತು ಎನ್ನಲು ಯಾವುದೇ ಸ್ವಾಭಾವಿಕವಾದ ಅಥವಾ ತರ್ಕಬದ್ದವಾದ ವಿವರಣೆ ಕೊಡಲು ಇದಕ್ಕೆ ಸಾಧ್ಯವಾಗದು. ಆದುದರಿಂದಲೇ ನಾನು ಇದನ್ನು ಅಪರಿಚಿತ ಬಲವೆಂದು ಹೇಳಿದ್ದು.
ಒಂದು ದಿನ ಶಿಷ್ಯರು ಯೇಸುವಿನೊಂದಿಗೆ ದೋಣಿಯಲ್ಲಿದ್ದರು. ಆಗ ಇದ್ದಕ್ಕಿದ್ದಂತೆ ಆ ದೋಣಿಯನ್ನೂ,ಅದರಲ್ಲಿದ್ದವರನ್ನೂ ಮುಳುಗಿಸುವಂಥ ಬಿರುಗಾಳಿ ಎದ್ದಿತು.
ಆಸಕ್ತಿಕರ ವಿಷಯವೇನೆಂದರೆ ಈ ಒಂದು ಪ್ರಯಾಣವು ಕರ್ತನ ಅಜ್ಞಾನುಸಾರವಾಗಿ ಮಾಡಿದ ಪ್ರಯಾಣವಾಗಿತ್ತು:
"ಆ ಹೊತ್ತು ಸಾಯಂಕಾಲವಾದಾಗ ಕರ್ತನು ಅವರಿಗೆ - ಆಚೇದಡಕ್ಕೆ ಹೋಗೋಣ ಎಂದು ಹೇಳಲು.."(ಮಾರ್ಕ 4:35)
'ನಾವು ಕರ್ತನ ಆಜ್ಞೆಗೆ ವಿಧೇಯರಾದೆವು ಆದರೂ ಏಕೆ ಈ ರೀತಿಯ ಭಯಂಕರ ಬಿರುಗಾಳಿಯನ್ನು ಎದುರಿಸಬೇಕಾಯಿತು' ಎಂದು ನಾವು ಬಹುತೇಕರು ಕೂಗಾಡುವಂತೆಯೇ ಶಿಷ್ಯರೂ ಸಹ ಆಶ್ಚರ್ಯದಿಂದಲೇ ಅಂದು ಕೂಗಾಡಿರಬಹುದು.
ಕೆಲವೊಮ್ಮೆ ನಾವು ವಿಧೇಯತೆಯಿಂದ ನಡೆಯುವಾಗ ಎದುರಿಸುವ ಬಿರುಗಾಳಿಯು ಸಾಮಾನ್ಯವಾಗಿ ಎದುರಿಸುವ ಬಿರುಗಾಳಿಗಿಂತಲೂ ಹೆಚ್ಚು ಪ್ರಬಲವಾಗಿರುತ್ತದೆ.
ಮುಖ್ಯವಾದ ಸಂಗತಿ ಏನೆಂದರೆ ನಾವು ಈ ಬಿರುಗಾಳಿಯನ್ನು ನೋಡಿ ನಮ್ಮ ಪ್ರಯತ್ನವನ್ನು ಬಿಟ್ಟುಬಿಡಬಾರದು. ನಾವು ಗತಕಾಲದಲ್ಲಿ ಹಿಡಿದುಕೊಂಡಿದ್ದಕ್ಕಿಂತ ಇನ್ನೂ ಹೆಚ್ಚಾಗಿ ಈಗ ಯೇಸುವಿನ ಕೈಯನ್ನು ಗಟ್ಟಿಯಾಗಿ ಹಿಡಿದುಕೊಳ್ಳಬೇಕು.
ಇನ್ನೊಂದು ಆಸಕ್ತಿಕರ ವಿಷಯವೇನೆಂದರೆ ಆ ಬಿರುಗಾಳಿಯ ಆರ್ತನಾದವು ಯೇಸುವನ್ನು ಎಚ್ಚರಗೊಳಿಸಲಿಲ್ಲ. ಆದರೆ ಶಿಷ್ಯರ ಕೂಗು ಯೇಸುವನ್ನು ಎಚ್ಚರಗೊಳಿಸಿತು. ಹಾಗಾಗಿ ಪ್ರಾರ್ಥನೆಯಲ್ಲಿ ಆತನಿಗೇ ಮೊರೆಯಿಡಿರಿ.
3.ಆದರೂ ನೀವು ನಿಮ್ಮ ಜೀವನವನ್ನು ಸರಿಯಾದ ದಿಕ್ಕಿನಲ್ಲಿ ನಡೆಸಬಹುದು.
ನಿಮ್ಮ ಜೀವನವು ಹಡಗಿದ್ದ ಹಾಗಿದ್ದು ದೇವರು ನಿಮ್ಮನ್ನು ಅದಕ್ಕೆ ನಾವೀಕರನ್ನಾಗಿ ನೇಮಿಸಿದ್ದಾನೆ. ಯಾವುದೇ ಹಡಗು ತಾನೇ ತಾನಾಗಿ ತನ್ನ ತೀರವನ್ನು ತಲುಪುವುದಿಲ್ಲ. ಯಾವಾಗಲೂ ಅದನ್ನು ನಡೆಸುವ ನಾವಿಕನೊಬ್ಬನು ಅದಕ್ಕೆ ಇದ್ದೇ ಇರುತ್ತಾನೆ.
ಎಂತದ್ದೇ ಬಲವಾದ ಹುಚ್ಚು ಗಾಳಿಯ ಮಧ್ಯದಲ್ಲೂ ಸಹ ನಾವಿಕನು ತಾನು ಎಲ್ಲಿಗೆ ಹೋಗುತ್ತಿದ್ದೇನೆ ಎಂದು ಹಾಗೂ ಹೇಗೆ ಹೋಗಬೇಕು ಎಂಬುದನ್ನು ತಿಳಿದವನಾಗಿರುತ್ತಾನೆ.
ಮೂರು ಸಂಗತಿಗಳು ನಿಮ್ಮ ಹಡಗನ್ನು ಸಾಗಿಸಲು ನಿಮಗೆ ಸಹಾಯ ಮಾಡುತ್ತವೆ.
- ದರ್ಶನಗಳು
- ನಿರೀಕ್ಷೆ
- ಅರಿಕೆ
ಅರಿಕೆಗಳು
"ನಾನು ಕ್ರಿಸ್ತನಲ್ಲಿ ನೂತನಸೃಷ್ಟಿಯಾದವನು/ಯಾದವಳು. ಇಗೋ, ಪೂರ್ವಸ್ಥಿತಿ ಹೋಗಿ ಎಲ್ಲಾ ನೂತನವಾಯಿತು.(2 ಕೊರಿಂಥದವರಿಗೆ 5:17)ನಾನು ಕ್ರಿಸ್ತನಲ್ಲಿನ ನನ್ನ ಉದ್ದೇಶವನ್ನು ನೆರವೇರಿಸುವೆನು.ಆಮೆನ್.
Join our WhatsApp Channel
Most Read
● ದೇವರ ಯೋಜನೆಯಲ್ಲಿರುವ ತಂತ್ರಗಾರಿಕೆಯ ಶಕ್ತಿ● ಯೇಸು ನಿಜವಾಗಿ ಖಡ್ಗ ಹಾಕಲೆಂದು ಬಂದನೇ?
● ಅತ್ಯಂತ ಸಾಮಾನ್ಯ ಭಯಗಳು
● ಸಾಲದಿಂದ ಹೊರಬನ್ನಿ : ಕೀಲಿಕೈ # 1
● ಅತ್ಯುನ್ನತವಾದ ರಹಸ್ಯ
● ಧನ್ಯನಾದ ಮನುಷ್ಯ
● ನಿಮ್ಮನ್ನು ನಡೆಸುತ್ತಿರುವವರು ಯಾರು?
ಅನಿಸಿಕೆಗಳು