ಅನುದಿನದ ಮನ್ನಾ
ಮೊಗ್ಗು ಬಿಟ್ಟಂತಹ ಕೋಲು
Saturday, 29th of June 2024
1
0
199
Categories :
ದೇವರ ಉಪಸ್ಥಿತಿ (Presence of God)
"ಯೆಹೋವನು ಮೋಶೆಗೆ ಹೇಳಿದ್ದೇನಂದರೆ - ನೀನು ಇಸ್ರಾಯೇಲ್ಯರ ಸಂಗಡ ಮಾತಾಡಿ ಹೀಗೆ ಮಾಡಬೇಕು. ಒಂದೊಂದು ಕುಲದ ಅಧಿಪತಿಯಿಂದ ಒಂದೊಂದು ಕೋಲಿನ ಮೇರೆಗೆ ಹನ್ನೆರಡು ಕೋಲುಗಳನ್ನು ತೆಗೆದುಕೊಳ್ಳಬೇಕು. ಅವನವನ ಕೋಲಿನ ಮೇಲೆ ಆಯಾ ಕುಲಾಧಿಪತಿಯ ಹೆಸರನ್ನು ಬರೆಯಿಸಬೇಕು."(ಅರಣ್ಯಕಾಂಡ 17:1-2)
ಕೋಲು ಎಂಬುದು ತನ್ನ ಮೂಲ ಮರದಿಂದ ಸಂಪರ್ಕ ಕಳೆದುಕೊಂಡಿರುವಂತದ್ದು ಎಂಬುದನ್ನು ಗಮನಿಸಿ. ಸ್ವಾಭಾವಿಕವಾಗಿ ಹೇಳುವುದಾದರೆ ಆ ಕೋಲು ಬೆಳವಣಿಗೆ ಹೊಂದುವ ಮತ್ತು ಬಲ ಕೊಡುವ ತನ್ನ ಸಾಮರ್ಥ್ಯವನ್ನು ಕಳೆದುಕೊಂಡಿದೆ, ಯಾಕೆಂದರೆ ಅದು ತನ್ನ ತಾಯಿಬೇರಿನಿಂದ ಸಂಪರ್ಕ ಕಳೆದುಕೊಂಡಿದೆ.
ಈಗ ನೀವಿದನ್ನು ಓದುತ್ತಿರುವಾಗ ನಾವೀಗ ಮಾತಾಡಿದ ವಿಷಯದಂತೆ ನಿಮ್ಮ ಜೀವಿತದಲ್ಲೂ ಸಹ ಕೆಲವು ಸಂಗತಿಗಳು ಆ ಕೋಲಿನಂತೆ ಬರಡಾಗಿ ಹೋಗಿರಬಹುದು. ಬಹುಶಃ ನಿಮಗೆ ಕೆಲವು ಕನಸುಗಳು -ದರ್ಶನಗಳು ಇದ್ದವೆಂದು ಎನಿಸುತ್ತದೆ. ಆದರೆ ಕಾಲ ಕಳೆದಂತೆ ಅವು ಈಗ ಮಾಸಿಹೋಗಿರಬಹುದು. ನಿಮ್ಮ ಜೀವಿತದ ಕಥೆ ಇಂದು ಬದಲಾಗುತ್ತದೆ ಎಂದು ನಾನು ನಂಬುತ್ತೇನೆ.
ಆಸಕ್ತಿಕರ ವಿಷಯವೇನೆಂದರೆ ಇಸ್ರಾಯೇಲಿನ ಪ್ರಾಚೀನ ಸಂಸ್ಕೃತಿಯಲ್ಲಿ ಒಂದು ಕೋಲೆಂದರೆ...
1. ಅದು ಅಧಿಕಾರದ ಮತ್ತು ಬಲದ ಸಂಕೇತ.(ವಿಮೋಚನಾ ಕಾಂಡ 4:20,ವಿಮೋಚನಾ ಕಾಂಡ 7:9-12)
2. ಅದು ನ್ಯಾಯತೀರ್ಪಿನ ಸಂಕೇತ. (ಕೀರ್ತನೆ 2:9, ಜ್ಞಾನೋಕ್ತಿ 10:13) ಮತ್ತದು ರಾಜದಂಡಕ್ಕೆ ಸಂಬಂಧಿಸಿದೆ. (ಯೆಹೆಜ್ಕೇಲ 19:14)
"ನೀನು ಆ ಕೋಲುಗಳನ್ನು ದೇವದರ್ಶನದ ಗುಡಾರದಲ್ಲಿ ಆಜ್ಞಾಶಾಸನಗಳ ಮುಂದೆ ನಾನು ನಿಮಗೆ ದರ್ಶನಕೊಡುವ ಸ್ಥಳದಲ್ಲಿ ಇಡಬೇಕು." (ಅರಣ್ಯಕಾಂಡ 17:4)
ಕರ್ತನು ಮೋಶೆಗೆ ಆ ಒಣಕೊಲನ್ನು ದೇವದರ್ಶನ ಗುಡಾರದ ತನ್ನ ಸಮ್ಮುಖದಲ್ಲಿ ಇಡಲು ಹೇಳಿದನು. ಬೇರೆ ಎಲ್ಲೋ ಅಲ್ಲ ಆದರೆ ಆತನ ಪ್ರಸನ್ನತೆಯ- ಸಮ್ಮುಖದಲ್ಲಿ ಅದನ್ನು ಇಡಲು ಹೇಳಿದನು. ನಿಮ್ಮ ಪರಿಸ್ಥಿತಿ ಇಂದು ಏನೇ ಆಗಿರಲಿ, ಪ್ರತಿನಿತ್ಯವು ದೇವರ ಸಮ್ಮುಖಕ್ಕೆ ನೀವು ಬರುವವರಾಗಿರ್ರಿ. ಆ ಪ್ರಸನ್ನತೆಯನ್ನು ದಿನವಿಡೀ ಆತನನ್ನು ಸ್ತುತಿಸುವ ಮೂಲಕ ಆರಾಧನೆಯ ಸಂಗೀತವನ್ನು ಕೇಳುವ ಮೂಲಕ ಇತ್ಯಾದಿ... ಕಾಯ್ದುಕೊಳ್ಳಿ. ಇದುವೇ ಕೀಲಿಕೈ.
"ಮರುದಿನ ಮೋಶೆ ಗುಡಾರದಲ್ಲಿ ಹೋಗಿ ನೋಡಲಾಗಿ ಆಹಾ, ಲೇವಿಕುಲಕ್ಕೋಸ್ಕರ ಆರೋನನು ಕೊಟ್ಟಿದ್ದ ಕೋಲು ಚಿಗುರಿ ಮೊಗ್ಗೆ ಬಿಟ್ಟು ಹೂವರಳಿ ಬಾದಾವಿು ಹಣ್ಣುಗಳನ್ನು ಫಲಿಸಿತ್ತು." (ಅರಣ್ಯಕಾಂಡ 17:8)
ಒಂದು ಫಲದ ಮೂರು ಹಂತಗಳು
1) ಮೊಗ್ಗು
2) ಹೂವು
3) ಬಾದಾಮಿ ಹಣ್ಣು- ಫಲ
ಒಂದು ಇಡೀ ರಾತ್ರಿ ದೇವರ ಪ್ರಸನ್ನತೆಯಲ್ಲಿ ಇದ್ದಂತಹ ಆ ಒಣಗಿದ ಕೋಲು ಈ ಮೂರನ್ನು ಒಮ್ಮೆಲೆ ಬಿಟ್ಟಿತು. ನಿಮಗೆ ಯಾವ ಸಂಗತಿಗಳು ಜರುಗಲು ತಿಂಗಳುಗಳು- ವರ್ಷಗಳು ಬೇಕಾಯಿತೋ, ನೀವು ದೇವರ ಪ್ರಸನ್ನತೆಗೆ ಬರುವುದಾದರೆ ಕೆಲವೇ ದಿನಗಳಲ್ಲಿ ಅದು ಮುಗಿದುಬಿಡುತ್ತದೆ. ಕಷ್ಟಕರ ಎಣಿಸುವ ವಿಚಾರಗಳು ಸಹ ನಿಮಗಾಗಿ ಫಲ ಕೊಡಲು ಆರಂಭಿಸುತ್ತದೆ. ನೀವು ಆಳುದ್ದಕ್ಕೂ ಯೋಚಿಸಿ ಮಾಡಲಾಗದಂತ ಕಾರ್ಯಗಳನ್ನು ಕರ್ತನು ತ್ವರಿತವಾಗಿ ಮಾಡಿ ಮುಗಿಸುವನು.
ನಾನು ಭಾರತ ದೇಶದ ಒಂದು ರಾಜ್ಯದಲ್ಲಿ ಸುವಾರ್ತೆ ಸೇವೆಗಾಗಿ ಹೋಗಿದ್ದೆ. ಅಲ್ಲಿ ಒಬ್ಬ ಸ್ತ್ರೀಯು ಬಾಯಿಯ ಕ್ಯಾನ್ಸರ್ ಗಡ್ಡೆಯಿಂದ ಬಳಲುತ್ತಿದ್ದಳು. ಆ ಸಂಜೆಯಲ್ಲಿ ನಾನು ಈಗ ಹೇಳಿದ್ದನ್ನೇ ಆಗಲು ಅಲ್ಲಿ ಹೇಳಿದೆ. ನೀವು ನಿಮ್ಮನ್ನು ಕರ್ತನ ಪ್ರಸನ್ನತೆಗೆ ಒಪ್ಪಿಸಿ ಕೊಡಿರಿ ಎಂದು. ಆ ಸಂಜೆಯಲ್ಲಿ ಆಕೆ ವೇದಿಕೆ ಬಳಿ ಓಡಿ ಬಂದು ತನ್ನ ಕ್ಯಾನ್ಸರ್ ಗಡ್ಡೆ ಹೊಡೆದು ಹೋಗಿದೆ ಎಂದು ಸಾಕ್ಷಿ ಹೇಳಿದಳು. ಅವಳ ಮೈಮೇಲೆ ರಕ್ತ ಸುರಿಯುತ್ತಿತ್ತು ಸ್ವಯಂಸೇವಕರು ಬಂದು ಒಂದು ಟವೆಲ್ನಿಂದ ಅದನ್ನು ವರೆಸುತ್ತಿದ್ದರು. ಪ್ರಾಮಾಣಿಕವಾಗಿ ಹೇಳುತ್ತೇನೆ ನಾನು ಸ್ವಲ್ಪ ನಡುಗಿ ಹೋದೆ. ಮರುದಿನ ಮುಂಜಾನೆಯೇ ಆಕೆ ಪರೀಕ್ಷೆ ಮಾಡಿಸಲು ಆಸ್ಪತ್ರೆಗೆ ಹೋಗಿದ್ದಳು. ಆ ಪರೀಕ್ಷೆಯಲ್ಲಿ ಆಕೆಯು ಕ್ಯಾನ್ಸರ್ ನಿಂದ ಮುಕ್ತವಾಗಿದ್ದಾಳೆ ಎಂಬ ಫಲಿತಾಂಶ ಬಂತು. ಅಲ್ಲಿನ ವೈದ್ಯರೆಲ್ಲಾ ಇದರಿಂದ ಆಶ್ಚರ್ಯ ಚಕಿತರಾದರು.
ಆತನ ಮಾತುಗಳು ಎಷ್ಟೋ ಸತ್ಯವಲ್ಲವೇ!
"ನೀನು ನನಗೆ ಜೀವಮಾರ್ಗವನ್ನು ತಿಳಿಯಪಡಿಸುವಿ; ನಿನ್ನ ಸಮ್ಮುಖದಲ್ಲಿ ಪರಿಪೂರ್ಣ ಸಂತೋಷವಿದೆ; ನಿನ್ನ ಬಲಗೈಯಲ್ಲಿ ಶಾಶ್ವತಭಾಗ್ಯವಿದೆ. "(ಕೀರ್ತನೆಗಳು 16:11)
ಆತನ ಸಮ್ಮುಖಕ್ಕೆ ಬನ್ನಿರಿ. ನಿಮ್ಮ ಕಥೆಯು ಈಗಲೇ ಬದಲಾಗುತ್ತದೆ.
ಪ್ರಾರ್ಥನೆಗಳು
ಪರಲೋಕದ ತಂದೆಯೇ, ನಾನು ನನ್ನ ಜೀವಿತದಲ್ಲಿ ಪ್ರತಿನಿತ್ಯವೂ ನಿನ್ನ ಪರಿಶುದ್ಧವಾದ ದೈವಿಕ ಪ್ರಸನ್ನತೆಯನ್ನು ಅನುಭವಿಸಲು ಆಶಿಸುತ್ತೇನೆ. ನೀನು ಯಾವಾಗಲೂ ನಮ್ಮ ಜೊತೆಯಲ್ಲೇ ಇರು. ನಮ್ಮ ಹೃದಯಗಳನ್ನು ಸ್ಪರ್ಶಿಸು, ನಮ್ಮನ್ನು ರೂಪಿಸು, ನಮ್ಮನ್ನು ಕೆತ್ತು ಮತ್ತು ಯಾವಾಗಲೂ ನಮ್ಮನ್ನು ಮಾರ್ಗದರ್ಶಿಸು ಎಂದು ಯೇಸು ನಾಮದಲ್ಲಿ ಪ್ರಾರ್ಥಿಸುತ್ತೇನೆ ತಂದೆಯೇ ಆಮೆನ್.
Join our WhatsApp Channel
Most Read
● ನಿಮ್ಮ ಗುರಿಯನ್ನು ತಲುಪಲು ಬಲವನ್ನು ಹೊಂದಿಕೊಳ್ಳಿರಿ.● ವ್ಯರ್ಥವಾದದಕ್ಕೆ ಹಣ
● ನಂಬಿಕೆ- ನಿರೀಕ್ಷೆ -ಪ್ರೀತಿ
● ದೇವರ ಪರಿಪೂರ್ಣ ಚಿತ್ತಕ್ಕಾಗಿ ಪ್ರಾರ್ಥಿಸಿರಿ
● ದ್ವಾರ ಪಾಲಕರು / ಕೋವರ ಕಾಯುವವರು
● ಚಿಕ್ಕ ಸಂಗತಿಗಳೂ ಸಹ ಮಹತ್ತರ ಉದ್ದೇಶಗಳನ್ನು ಪೂರೈಸಬಲ್ಲವು.
● ಮಾತಿನಲ್ಲಿರುವ ಶಕ್ತಿ
ಅನಿಸಿಕೆಗಳು