"ಆಮೇಲೆ ಅವನು ನನಗೆ - ದಾನಿಯೇಲನೇ, ಭಯಪಡಬೇಡ, ನೀನು [ದೈವಸಂಕಲ್ಪವನ್ನು] ವಿಮರ್ಶಿಸುವದಕ್ಕೂ ನಿನ್ನನ್ನು ನಿನ್ನ ದೇವರ ಮುಂದೆ ತಗ್ಗಿಸಿಕೊಳ್ಳುವದಕ್ಕೂ ಮನಸ್ಸಿಟ್ಟ ಮೊದಲನೆಯ ದಿನದಲ್ಲಿಯೇ ನಿನ್ನ ವಿಜ್ಞಾಪನೆಯು ದೇವರಿಗೆ ಮುಟ್ಟಿತು; ಆ ವಿಜ್ಞಾಪನೆಯ ನಿವಿುತ್ತವೇ ನಾನು ಬಂದೆನು."(ದಾನಿಯೇಲನು 10:12)
ದಾನಿಯೇಲನು ದೇವರ ಉತ್ತರಕ್ಕಾಗಿ ಉಪವಾಸ ಪ್ರಾರ್ಥನೆಯಲ್ಲಿ ನಿರತನಾಗಿದ್ದಾಗ ಮೂರು ವಾರಗಳು ಕಳೆದ ನಂತರ ಪ್ರಧಾನ ದೇವದೂತನಾದ ಗೆಬ್ರಿಯೇಲನು ಕಾಣಿಸಿಕೊಂಡು ಅವನಿಗೆ "ನಿನ್ನ ಪ್ರಾರ್ಥನೆಗಳು ಕೇಳಲ್ಪಟ್ಟಿವೆ. ನಿನ್ನ ವಿಜ್ಞಾಪನೆಗಳ ನಿಮಿತ್ತವಾಗಿಯೇ ನಾನು ಬಂದಿದ್ದೇನೆ" ಎನ್ನುತ್ತಾನೆ.
ದಾನಿಯೇಲನು ದೇವದೂತನನ್ನು ಉದ್ದೇಶಿಸಿ ಪ್ರಾರ್ಥಿಸಿರಲಿಲ್ಲ. ಬದಲಾಗಿ ಉಪವಾಸದೊಂದಿಗೆ ಪ್ರಾರ್ಥನೆಯನ್ನು ತಂದೆಯಾದ ದೇವರಿಗೇ ಮಾಡಿದ್ದನು. ಈ ಪ್ರಾರ್ಥನೆಯು ದಾನಿಯೇಲನ ಪರವಾಗಿ ದೇವದೂತ ಲೋಕದ ಆಯಾಮದಲ್ಲಿ ಸಂಚಲನವನ್ನುಂಟು ಮಾಡಿತು ದಾನಿಯೇಲನ ಪರವಾಗಿ ಶಕ್ತಿಶಾಲಿಯಾದ ಪ್ರಧಾನದೂತನನ್ನು ದಾನಿಯೇಲನಿಗಾಗಿ ಬಿಡುಗಡೆ ಮಾಡಿತು.
ಪ್ರತಿಬಾರಿಯೂ ನೀವು ಪ್ರಾರ್ಥಿಸಲು ಹೋಗುವಾಗ ನೀವು ಫಲರಹಿತವಾದ ಯಾವುದೇ ಚಟುವಟಿಕೆಯಲ್ಲಿ ನಿರತರಾಗಿಲ್ಲ ಎಂಬುದನ್ನು ನೀವು ಮನದಟ್ಟು ಮಾಡಿಕೊಳ್ಳಿ. ಪ್ರತಿ ಬಾರಿ ನೀವು ಉಪವಾಸ ಪ್ರಾರ್ಥನೆ ಮಾಡುವಾಗ ನಿಮ್ಮ ಪರವಾಗಿ ಕಾರ್ಯ ಮಾಡಲು ದೇವದೂತರನ್ನು ಸಜ್ಜುಪಡಿಸಲಾಗುತ್ತದೆ. ಅತ್ಯಾಸಕ್ತಿಯಿಂದ ಕೂಡಿದ ಉಪವಾಸ ಮತ್ತು ಪ್ರಾರ್ಥನೆಗಳು ನಿಮ್ಮ ಕನಸುಗಳನ್ನು ದರ್ಶನಗಳನ್ನು ನಿಮಗಾಗಿ ಸಾಕಾರಗೊಳಿಸುವುದಕ್ಕಾಗಿ ದೇವದೂತರುಗಳನ್ನು ಬಿಡುಗಡೆಗೊಳಿಸುತ್ತದೆ.
ಅಪೋಸ್ತಲರ ಕೃತ್ಯ 27ರಲ್ಲಿ ಅಪೋಸ್ತಲನಾದ ಪೌಲನು 276 ಮಂದಿ ಸಹ ಪ್ರಯಾಣಿಕರೊಂದಿಗೆ ಹಡಗು ಪ್ರಯಾಣದಲ್ಲಿದ್ದನು. ಆಗ ಆ ಹಡಗು ಒಂದು ಹುಚ್ಚು ಗಾಳಿಗೆ ಸಿಲುಕಿಕೊಂಡಿತು ಆ ಹಡಗು ಗಾಳಿಗೆ ಸಿಕ್ಕ ತರಗೆಲೆಯಂತೆ ಅಲ್ಲಾಡಲಾರಂಭಿಸಿ, ಎಲ್ಲಿ ಚಿದ್ರ ಚಿದ್ರ ವಾಗುವುದೋ ಎಂಬ ಅಪಾಯ ಮಟ್ಟದಲ್ಲಿತ್ತು. ಬಹುದಿನಗಳವರೆಗೂ ಯಾವ ನಕ್ಷತ್ರಗಳಾಗಲೀ ಚಂದ್ರನಾಗಲಿ ಅವರಿಗೆ ಕಾಣುತ್ತಿರಲಿಲ್ಲ. ಅವರ ಪ್ರಯಾಣದ ಮಾರ್ಗದಲ್ಲಿ ದೊಡ್ಡ ದೊಡ್ಡ ಬಂಡೆಗಳು ಕಳ್ಳುಸುಬು ಇರುವ ಕಾರಣ ಆ ಪರಿಸ್ಥಿತಿಯಲ್ಲಿ ಪೌಲನು ಮತ್ತು ಅವನ ಸಹ ಪ್ರಯಾಣಿಕರು ಎಲ್ಲರೂ ನಾಶನಕ್ಕೆ ಸಮೀಪರಾದರೇನೋ ಎಂದು ತೋರುತ್ತಿತ್ತು.
ಪೌಲನು ತನ್ನ ಉಪವಾಸ ದಿನಗಳನ್ನು ಇನ್ನೂ ಸ್ವಲ್ಪ ದಿನಗಳವರೆಗೆ ವಿಸ್ತರಿಸಿ ದೇವರ ಉತ್ತರಕ್ಕಾಗಿ ಎದುರು ನೋಡುತ್ತಿದ್ದನು. ಆಗ ದೇವರು ಪೌಲನಿಗೋಸ್ಕರ ತನ್ನ ದೇವದೂತನನ್ನು ಕಳುಹಿಸಿಕೊಟ್ಟನು. ಆ ದೇವದೂತನಿಂದ ಬಂದ ಒಂದು ಪ್ರವಾದನ ಸಂದೇಶವು ಅವರು ಆ ಬಿರುಗಾಳಿಯಿಂದ ತೊಂದರೆಗೀಡಾಗದಂತೆ ಅವರೆಲ್ಲರನ್ನೂ ಬಿಡುಗಡೆ ಮಾಡಿತು.
ನೀವು ಉಪವಾಸ ಪ್ರಾರ್ಥನೆಯಲ್ಲಿ ನಿರತರಾಗಿ ಇರುವಾಗಲೆಲ್ಲಾ ದೇವದೂತರು ನಿಮಗೋಸ್ಕರ ಕಳುಹಿಸಿಕೊಡಲ್ಪಡುತ್ತಾರೆ. ಅನೇಕ ಬಾರಿ ಜನರು ನನಗೆ ಪತ್ರ ಬರೆದು "ನಾನು ಉಪವಾಸ ಮಾಡಿದೆ, ಆದರೆ ಏನೂ ಜರಗಲಿಲ್ಲ" ಎಂದು ಹೇಳುವುದನ್ನು ಓದಿದ್ದೇನೆ. ನೀವು ತಿಳಿದುಕೊಂಡಿರುವುದು ಇಷ್ಟೇ. ಆದರೆ ಆತ್ಮಿಕ ಆಯಾಮದಲ್ಲಿ ದೇವದೂತರು ನಿಮಗಾಗಿ ಬಿಡುಗಡೆ ಮಾಡಲ್ಪಟ್ಟು ಭೌತಿಕ ಆಯಾಮದಲ್ಲಿ ನಿಮಗೆ ಅದ್ಭುತಗಳು ಸಾಕಾರ ಗೊಳ್ಳದಂತೆ ತಡೆಯುತ್ತಿರುವ ಎಲ್ಲ ದುರಾತ್ಮನ ಅಡೆತಡೆಗಳನ್ನು ತೆಗೆದುಹಾಕುವ ಕಾರ್ಯವನ್ನು ಮಾಡುತ್ತಿರುತ್ತಾರೆ.
ಆದ್ದರಿಂದ ಉಪವಾಸ ಮತ್ತು ಪ್ರಾರ್ಥನೆಯನ್ನು ಮಾಡುತ್ತಲೇ ಇರಿ. ನಿಜವಾಗಿಯೂ ದೇವರು ನಿಮ್ಮ ಜೀವಿತದಲ್ಲಿ ಕಾರ್ಯ ಮಾಡುತ್ತಿದ್ದಾನೆ ಎಂದು ನಿಮ್ಮ ವೈರಿಗಳೇ ಹೇಳುವಂತಹ ಬಿಡುಗಡೆಯನ್ನು ನೀವು ನೋಡುತ್ತೀರಿ
ಅರಿಕೆಗಳು
ನಾನು ದೇವರಿಗೆ ಭಯಪಟ್ಟು ಆತನ ಚಿತ್ತವನ್ನೇ ಮಾಡುತ್ತೇನೆ. ಆದ್ದರಿಂದ ನನ್ನ ಸುತ್ತಲೂ ದೇವದೂತರ ದಂಡಿಳಿದು ನನ್ನನ್ನು ಕಾಯುತ್ತವೆ. (ಇದನ್ನು ಯಾವಾಗಲೂ ಹೇಳುತ್ತಾ ಇರಿ).
Join our WhatsApp Channel
Most Read
● ಓಟವನ್ನು ಗೆಲ್ಲಲು ಇರುವ ದೀರ್ಘ ತಾಳ್ಮೆ ಮತ್ತು ದೀರ್ಘ ಪ್ರಯತ್ನ ಎಂಬ ಎರಡು ಪದಗಳು.● ದಿನ 11:40 ದಿನಗಳ ಉಪವಾಸ ಪ್ರಾರ್ಥನೆ.
● ಬೀಜದಲ್ಲಿರುವ ಶಕ್ತಿ -2
● ಮರೆತುಹೋದ ಆಜ್ಞೆ.
● ನಿಮ್ಮ ಮನಸ್ಥಿತಿಯನ್ನು ಉತ್ತಮಗೊಳಿಸಿಕೊಳ್ಳುವುದು
● ನೀವು ದೇವರಿಂದ ನೇಮಿಸಲ್ಪಡುವ ಮುಂದಿನ ಬಿಡುಗಡೆ ನಾಯಕರು ನೀವಾಗಬಹುದು
● ನಂಬಿಕೆ- ನಿರೀಕ್ಷೆ -ಪ್ರೀತಿ
ಅನಿಸಿಕೆಗಳು