ಅನುದಿನದ ಮನ್ನಾ
2
1
103
ದೇವರ ಸ್ವರಕ್ಕೆ ವಿಶ್ವಾಸ ತೋರುವುದರಲ್ಲಿನ ಬಲ.
Tuesday, 11th of November 2025
Categories :
ಆಯ್ಕೆಗಳು (Choices)
ನಂಬಿಕೆಯಿಲ್ಲದೆ ಆತನನ್ನು ಮೆಚ್ಚಿಸುವುದು ಅಸಾಧ್ಯ, ಏಕೆಂದರೆ ದೇವರನ್ನು ಸಮೀಪಿಸುವವನು ಆತನು ಇದ್ದಾನೆ ಮತ್ತು ಆತನನ್ನು ಹುಡುಕುವವರಿಗೆ ಆತನು ಪ್ರತಿಫಲ ನೀಡುತ್ತಾನೆ ಎಂದು ನಂಬಬೇಕು.” (ಇಬ್ರಿಯ 11:6 NET)
ದೇವರೊಂದಿಗಿನ ನಮ್ಮ ಪ್ರಯಾಣದಲ್ಲಿ, ಆತನ ಧ್ವನಿಯು ನಮ್ಮ ಹೃದಯಗಳಲ್ಲಿ ಸ್ಪಷ್ಟವಾಗಿ ಪ್ರತಿಧ್ವನಿಸುವ ಕ್ಷಣಗಳಿದ್ದು, ಅದು ನಂಬಿಕೆಯಿಂದ ನಾವು ಹೆಜ್ಜೆ ಹಾಕಬೇಕೆಂದು ನಮಗೆ ಕರೆ ನೀಡುತ್ತದೆ. ಆದಾಗ್ಯೂ, ಕೆಲವೊಮ್ಮೆ ಹಿಂಜರಿಯುವುದು, ಪ್ರಶ್ನಿಸುವುದು ಮತ್ತು ದೃಢೀಕರಣವನ್ನು ಹುಡುಕುವುದು ಮಾನವ ಸ್ವಭಾವವಾಗಿದ್ದು, "ದೇವರು ನಮಗೆ ಮಾರ್ಗದರ್ಶನ ನೀಡುತ್ತಿದ್ದಾನೆಂದು ನಮಗೆ ನಿಜವಾಗಿಯೂ ತಿಳಿದು ಕೊಳ್ಳುವುದಾದರೆ, ನಾವು ತಕ್ಷಣ 'ಹೌದು' ಎಂದು ಏಕೆ ಪ್ರತಿಕ್ರಿಯಿಸುವುದಿಲ್ಲ?" ಎಂದು ಯಾರಾದರೂ ಆಶ್ಚರ್ಯಪಡಬಹುದು.
ಇಸ್ರೇಲೀಯರು ತಮ್ಮ ವಲಸೆಯ ಸಮಯದಲ್ಲಿ, ಕೆಂಪು ಸಮುದ್ರವನ್ನು ವಿಭಜಿಸುವುದರಿಂದ ಹಿಡಿದು ಮನ್ನಾವನ್ನು ಒದಗಿಸುವವರೆಗೆ ದೇವರ ಪವಾಡಗಳನ್ನು ನೇರವಾಗಿ ನೋಡಿದ್ದರು. ಆದರೂ, ಅವರು ಆತನ ಯೋಜನೆಗಳ ಕುರಿತು ಹಲವಾರು ಬಾರಿ ಗೊಣಗುಟ್ಟಿ, ಪ್ರಶ್ನಿಸಿಸುತ್ತಾ ಅನುಮಾನಿಸಿದರು. ಅವರ ಪ್ರಯಾಣವು ನಮ್ಮ ಸ್ವಂತ ಹೃದಯದ ಹೋರಾಟಗಳನ್ನು ಪ್ರತಿಬಿಂಬಿಸುತ್ತದೆ. “ನಿಮ್ಮ ದೇವರಾದ ಯೆಹೋವ ದೇವರು ನಿಮ್ಮನ್ನು ಈ ನಲವತ್ತು ವರ್ಷ ಮರುಭೂಮಿಯಲ್ಲಿ ತಗ್ಗಿಸಿ, ನೀವು ದೇವರ ಆಜ್ಞೆಗಳನ್ನು ಕಾಪಾಡುವಿರೋ ಇಲ್ಲವೋ ಎಂದು ನಿಮ್ಮ ಹೃದಯವನ್ನು ಪರೀಕ್ಷಿಸುವುದಕ್ಕೆ ನಿಮ್ಮನ್ನು ನಡೆಸಿದ ಮಾರ್ಗವನ್ನೆಲ್ಲಾ ಜ್ಞಾಪಕಮಾಡಿಕೊಳ್ಳಿರಿ.” (ಧರ್ಮೋಪದೇಶಕಾಂಡ 8:2 NIV)
ನಮ್ಮ ಹಿಂಜರಿಕೆಗಳು ಹೆಚ್ಚಾಗಿ ಅಜ್ಞಾತ ಭಯ, ಹಿಂದಿನ ನಿರಾಶೆಗಳು ಅಥವಾ ನಮ್ಮ ಮಾನವ ಮಿತಿಗಳ ಭಾರದಿಂದ ಉಂಟಾಗುತ್ತವೆ. ಆದರೆ ದೇವರು ತನ್ನ ಅನಂತ ವಿವೇಕದಲ್ಲಿ ನಮ್ಮ ದೌರ್ಬಲ್ಯವನ್ನು ಅರ್ಥಮಾಡಿಕೊಳ್ಳುತ್ತಾನೆ. ಆತನು ನಮ್ಮ ಚೌಕಟ್ಟನ್ನು ತಿಳಿದಿದ್ದಾನೆ ಮತ್ತು ನಾವು ಕೇವಲ ಧೂಳಾಗಿದ್ದೇವೆ ಎಂಬುದನ್ನು ನೆನಪಿಸಿಕೊಳ್ಳುತ್ತಾನೆ (ಕೀರ್ತನೆ 103:14). ದೃಢೀಕರಣವನ್ನು ಬಯಸಿದ್ದಕ್ಕಾಗಿ ಆತನು ನಮ್ಮನ್ನು ಖಂಡಿಸುವುದಿಲ್ಲ, ಆದರೆ ನಾವು ನಂಬಿಕೆಯಲ್ಲಿ ಬೆಳೆಯಬೇಕೆಂದು ಆತನು ನಮ್ಮನ್ನು ಕರೆಯುತ್ತಾನೆ.
ಈ ಸಂದರ್ಭದಲ್ಲಿ ಗಿದ್ಯೋನನ ಕಥೆಯು ನಮಗೆ ಜ್ಞಾನೋದಯವನ್ನುಂಟುಮಾಡುವಂತದ್ದಾಗಿದೆ.
ಕರ್ತನ ದೂತನು ಗಿದ್ಯೋನನಿಗೆ ಕಾಣಿಸಿಕೊಂಡು ಇಸ್ರಾಯೇಲ್ಯರನ್ನು ಮಿದ್ಯಾನ್ಯರಿಂದ ರಕ್ಷಿಸುವುದಾಗಿ ಹೇಳಿದಾಗ, ಗಿದ್ಯೋನನು ಉಣ್ಣೆಯನ್ನು ಬಳಸಿ ಒಮ್ಮೆ ಅಲ್ಲ, ಹಲವಾರು ಬಾರಿ ದೃಢೀಕರಣವನ್ನು ಕೋರಿದನು (ನ್ಯಾಯಸ್ಥಾಪಕರು 6:36-40).
ಗಿದ್ಯೋನನ ವಿನಂತಿಗಳನ್ನು ನಂಬಿಕೆಯ ಕೊರತೆ ಎಂದು ಭಾವಿಸುವುದು ಸುಲಭವಾದರೂ, ಅವನು ದೇವರ ಚಿತ್ತವನ್ನೇ ತಾನು ಅನುಸರಿಸುತ್ತಿದ್ದಾನೆಯೇ ಎಂದು ಖಚಿತಪಡಿಸಿಕೊಳ್ಳುವ ಪ್ರಾಮಾಣಿಕ ಬಯಕೆಯಾಗಿಯೂ ನಾವು ಅವುಗಳನ್ನು ನೋಡಬಹುದು. ಇದು ನಮಗೆ ಆಳವಾದದ್ದನ್ನು ಬೋದಿಸುತ್ತದೆ: ದೃಢೀಕರಣಕ್ಕಾಗಿ ನಮ್ಮ ಅನ್ವೇಷಣೆಯಲ್ಲಿ ದೇವರು ನಮ್ಮೊಂದಿಗೆ ತಾಳ್ಮೆಯಿಂದ ವರ್ತಿಸುವವನಾಗಿದ್ದಾನೆ. ಆತನಲ್ಲಿ ನಮ್ಮ ಸಂಪೂರ್ಣ ನಂಬಿಕೆಯನ್ನು ಆತನು ಬಯಸುತ್ತಾನೆ, ಆದರೆ ಆತನು ನಮ್ಮ ಭರವಸೆಯ ಅಗತ್ಯವನ್ನು ಸಹ ಅರ್ಥಮಾಡಿಕೊಳ್ಳುತ್ತಾನೆ ಎಂದು ನಾವು ಅರಿತುಕೊಳ್ಳಬಹುದು.
“ಪೂರ್ಣಹೃದಯದಿಂದ ಯೆಹೋವ ದೇವರಲ್ಲಿ ಭರವಸೆ ಇಡು ನಿನ್ನ ಸ್ವಂತ ಬುದ್ಧಿಯ ಮೇಲೆಯೇ ಆಧಾರಗೊಳ್ಳಬೇಡ. ನಿನ್ನ ಎಲ್ಲಾ ಮಾರ್ಗಗಳಲ್ಲಿ ದೇವರಿಗೆ ಅಧೀನವಾಗಿರು. ಆಗ ದೇವರು ನಿನ್ನ ಮಾರ್ಗಗಳನ್ನು ಸರಾಗ ಮಾಡುವರು. (ಜ್ಞಾನೋಕ್ತಿ 3:5-6 NIV)
ಆದರೆ ಇದರಲ್ಲಿ ಇನ್ನೂ ಆಳವಾದ ಪಾಠವಿದೆ. ನಾವು ಪ್ರತಿ ಬಾರಿ ಹಿಂಜರಿಕೆಯಿಲ್ಲದೆ "ಹೌದು" ಎಂದು ಹೇಳಿದಾಗ, ಪ್ರತಿ ಬಾರಿ ನಾವು ಪೂರ್ಣ ಚಿತ್ರವನ್ನು ನೋಡದೆ ನಂಬಿದಾಗ, ನಾವು ನಮ್ಮ ನಂಬಿಕೆಯನ್ನು ಬಲಪಡಿಸಿಕೊಳ್ಳುವುದಲ್ಲದೆ ದೇವರ ಹೃದಯಕ್ಕೆ ಹತ್ತಿರವಾಗುತ್ತಾ ಹೋಗುತ್ತೇವೆ. ನಂಬಿಕೆಯಲ್ಲಿ ಸಹಕಾರವು ಬಂಧವನ್ನು ಬಲಪಡಿಸಿ ನಮ್ಮ ಪರಲೋಕದ ತಂದೆಯೊಂದಿಗಿನ ನಮ್ಮ ಸಂಬಂಧದಲ್ಲಿ ಯಾವುದೇ ವ್ಯತ್ಯಾಸವಿಲ್ಲದಂತೆ ಮಾಡುತ್ತದೆ.
ವಿಶ್ವಾಸಿಗಳಾಗಿ, ನಮ್ಮ ಗುರಿ ನಮ್ಮ ನಂಬಿಕೆಯಲ್ಲಿ ಪ್ರಬುದ್ಧವಾಗಿದ್ದು ದೇವರ ಕರೆಗೆ ನಮ್ಮ ತಕ್ಷಣದ ಪ್ರತಿಕ್ರಿಯೆಯು ಅಚಲವಾದ "ಹೌದು" ಎನ್ನುವ ಸ್ಥಾನವನ್ನು ತಲುಪಬೇಕು. ನೀವು ಇಂದು ಹಿಂಜರಿಯುತ್ತಿದ್ದರೆ, ದೇವರು ನಿಮಗಾಗಿ ಬಂದು ಕಾರ್ಯಮಾಡಿದ ಅಸಂಖ್ಯಾತ ಸಮಯಗಳನ್ನು ನೆನಪಿಗೆ ತಂದುಕೊಳ್ಳಿ. ಆತನು ತನ್ನ ನಂಬಿಗಸ್ತಿಕೆಯನ್ನು ತೋರಿಸಿದ ಕ್ಷಣಗಳು, ಆತನು ನಿಮ್ಮ ಹೆಜ್ಜೆಗಳನ್ನು ಮಾರ್ಗದರ್ಶನ ಮಾಡಿದ ಸಮಯಗಳು ಮತ್ತು ಆತನು ನಿಮ್ಮ ದುಃಖವನ್ನು ಸಂತೋಷವಾಗಿ ಪರಿವರ್ತಿಸಿದ ಸಂದರ್ಭಗಳ ಮೇಲೆ ನಿಮ್ಮ ದೃಷ್ಟಿಯನ್ನು ಪ್ರತಿಬಿಂಬಿಸಿ.
ಈ ನೆನಪುಗಳು ನಿಮ್ಮ ನಂಬಿಕೆಯನ್ನು ಬಲಪಡಿಸಲಿ. ಮತ್ತು ದೇವರು ಮಾತನಾಡುವಾಗ, ನಿಮ್ಮ ಹೃದಯವು "ಇಗೋ, ಕರ್ತನೇ ಇದ್ದೇನೆ, ನನ್ನನ್ನು ಕಳುಹಿಸು" ಎಂದು ಹೇಳಲು ಸಿದ್ಧವಾಗಿರಲಿ.
Bible Reading: John 8-9
ಪ್ರಾರ್ಥನೆಗಳು
ತಂದೆಯೇ, ನಿನ್ನ ಮೇಲಿನ ನಮ್ಮ ನಂಬಿಕೆಯನ್ನು ಬಲಪಡಿಸು. ನೀನು ಪ್ರತಿ ಬಾರಿ ಕರೆದಾಗಲೂ, ನಮ್ಮ ಹೃದಯಗಳು ನೀನು ಯಾವಾಗಲೂ ನಂಬಿಗಸ್ತನಾಗಿದ್ದೀಯ ಎಂದು ತಿಳಿದುಕೊಂಡು ಆತ್ಮವಿಶ್ವಾಸದಿಂದ 'ಹೌದು' ಎಂದು ಯೇಸುನಾಮದಲ್ಲಿ ಪ್ರತಿಧ್ವನಿಸಲಿ. ಆಮೆನ್.
Join our WhatsApp Channel
Most Read
● ಮೂರು ನಿರ್ಣಾಯಕ ಪರೀಕ್ಷೆಗಳು● ಯಾರ ಸಂದೇಶವನ್ನು ನೀವು ನಂಬುವಿರಿ?
● ನಿಮ್ಮ ಜೀವದದಲ್ಲಿ ಎಂದೂ ಅಳಿಯದಂತ ಬದಲಾವಣೆಯನ್ನು ತರುವುದು ಹೇಗೆ?- 2
● ದಿನ 21:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ
● ದೈನಂದಿನ ಮನ್ನಾ
● ಇದು ಕೇವಲ ಸಾಂದರ್ಭಿಕವಾಗಿ ಹೇಳುವ ಶುಭಾಶಯವಲ್ಲ
● ದಿನ 20:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ
ಅನಿಸಿಕೆಗಳು
