ಚಿತ್ತ ಚಂಚಲತೆ ಯನ್ನು ಜಯಿಸಲು ಇರುವ ಪ್ರಾಯೋಗಿಕ ಮಾರ್ಗಗಳು
ಚಿತ್ತ ಚಂಚಲತೆಯನ್ನು ಜಯಿಸುವುದು ಹೇಗೆ ಎಂಬುದರ ಕುರಿತು ಕೆಲವು ಪ್ರಾಯೋಗಿಕ ಮಾರ್ಗಗಳನ್ನು ಹಂಚಿಕೊಳ್ಳಲು ನನಗೆ ಅನುಮತಿಸಿ.
1. ಇಂಟರ್ನೆಟ್ ಒಂದು ದೊಡ್ಡ ಆಶೀರ್ವಾದ, ಆದರೆ ಅದು ಹಾಗೆಯೇ ಒಂದು ಪ್ರಮುಖ ಅಡಚಣೆಯೂ ಆಗಿರಬಹುದು. ನಾವು ಅದನ್ನು
ಎದುರಿಸುವುದು ಹೇಗೆ?
ಆಫ್ ಲೈನ್ ಗೆ ಹೋಗುವ ಮೂಲಕ.
"ಮುಂಜಾನೆ ಇನ್ನೂ ಮೊಬ್ಬಿರುವಾಗ ಆತನು ಎದ್ದು ಹೊರಟು ಅಡವಿಯ ಸ್ಥಳಕ್ಕೆ ಹೋಗಿ ದೇವರನ್ನು ಪ್ರಾರ್ಥಿಸುತ್ತಿದ್ದನು. [36] ಸೀಮೋನನೂ ಅವನ ಸಂಗಡ ಇದ್ದವರೂ ಆತನನ್ನು ಹಿಂದಟ್ಟಿ ಕಂಡು - "ಎಲ್ಲರು ನಿನ್ನನ್ನು ಹುಡುಕುತ್ತಾರೆ ಅನ್ನಲಾಗಿ.". " (ಮಾರ್ಕ 1:35- 37)
ಕರ್ತನಾದ ಯೇಸು ತನ್ನ ಪರಲೋಕದ ತಂದೆಯೊಂದಿಗೆ ವಿಚಲಿತವಾಗದಂತ ಗುಣಮಟ್ಟದ ಸಮಯಕ್ಕಾಗಿ ಬೆಳಿಗ್ಗೆ ಬೇಗನೆ ಎಚ್ಚರಗೊಳ್ಳುವ ನಿಯಮಿತ ಅಭ್ಯಾಸವನ್ನು ಹೊಂದಿದ್ದನು. ಇಂದಿನ ಪರಿಭಾಷೆಯಲ್ಲಿ ಹೇಳುವುದಾದರೆ ಆತನು ಆಫ್‌ಲೈನ್‌ಗೆ ಹೋದನು - ಬಲೆಯಿಂದ ಹೊರಗೆ ಹೋದನು.
ಅದು ನನಗೆ ಹೇಗೆ ಗೊತ್ತು? ಹೇಗೆಂದರೆ ಶಿಷ್ಯರು ಆತನನ್ನು ಸಂಪರ್ಕಿಸಲು ಪ್ರಯತ್ನಿಸುತ್ತಿದ್ದರೂ ಅದು ಸಾಧ್ಯವಾಗಿರಲಿಲ್ಲ. "ಎಲ್ಲರೂ ನಿನ್ನನ್ನು ಹುಡುಕುತ್ತಿದ್ದಾರೆ" ಎಂದು ಅವರು ಹೇಳಿದ್ದನ್ನು ಗಮನಿಸಿ.
ಹಾಗಾಗಿ ನಮ್ಮ ಗುರುವಿನಿಂದ ಇದನ್ನು ಕಲಿಯೋಣ: ನೀವು ಪ್ರಾರ್ಥಿಸುವಾಗ, ಆ ಫೋನ್ ಅನ್ನು ಆಫ್ ಮಾಡಿ. ತಾವು ಪ್ರಾರ್ಥಿಸುತ್ತಿರುವಾಗಲೂ ತಮ್ಮ ಫೋನ್ ಅನ್ನು ಪರಿಶೀಲಿಸುತ್ತಲೇ ಇರುವ ಅನೇಕರಿದ್ದಾರೆ. ಅಧಿಸೂಚನೆಗಳೊಂದಿಗೆ ಝೇಂಕರಿಸುವ ಫೋನ್ ಒಂದು ದೊಡ್ಡ ಅಡಚಣೆಯಾಗಿದೆ.ಇದರಿಂದಲೇ ನೀವು ಕರ್ತನೊಂದಿಗೆ ಆ ಮಟ್ಟದ ಸಂಪರ್ಕವನ್ನು ಮಾಡಿಕೊಳ್ಳದಿರುವುದಲ್ಲಿ ಆಶ್ಚರ್ಯವೇನಿಲ್ಲ.
ವಿದ್ಯಾರ್ಥಿಗಳೇ, ನೀವು ಆ ಮಟ್ಟದ ಪ್ರಮುಖ ಪಾಠವನ್ನು ಅಧ್ಯಯನ ಮಾಡುವಾಗ, ಆ ಫೋನ್ ಅನ್ನು ಆಫ್ ಮಾಡಿ. ನೀವು ಏನು ಮಾಡುತ್ತಿದ್ದೀರಿ ಎಂಬುದರ ಮೇಲೆ ಗಮನಹರಿಸಲು ಇದು ನಿಮಗೆ ಸಹಾಯ ಮಾಡುತ್ತದೆ ಮತ್ತು ನೀವು ಅದನ್ನು ವೇಗವಾಗಿ ಮತ್ತು ಉತ್ತಮವಾಗಿ ಪೂರ್ಣಗೊಳಿಸುತ್ತೀರಿ.
ಸಾಮಾಜಿಕ ಮಾಧ್ಯಮವು ಒಂದು ಉತ್ತಮ ಸಹವಾಸ ಮತ್ತು ಸಂಪರ್ಕ ಸಾಧನವಾಗಿದೆ. ಈ ಸಮಯದಲ್ಲಿ, ಇದು ಸಂಪರ್ಕದಲ್ಲಿರಲು ಹೆಚ್ಚು ಸಹಾಯ ಮಾಡುತ್ತದೆ, ಇತ್ಯಾದಿ. ಆದರೆ ಇದು ಕೂಡ ಒಂದು ದೊಡ್ಡ ಚಂಚಲಗೊಳಿಸುವ ಸಾಧನ.
ಜನರು ಸಾಮಾಜಿಕ ಮಾಧ್ಯಮದಲ್ಲಿ ಗಂಟೆಗಟ್ಟಲೆ ಕಳೆಯುತ್ತಾ ಅವರ ವೇಳಾಪಟ್ಟಿಯಲ್ಲಿ ಗೊಂದಲ ಸೃಷ್ಟಿಸಿಕೊಳ್ಳುತ್ತಾರೆ. ನಿಮ್ಮ ಆದ್ಯತೆಗಳು ಪೂರ್ಣಗೊಳ್ಳುವವರೆಗೆ ಸ್ವಲ್ಪ ಸಮಯದವರೆಗೆ ಆಫ್‌ಲೈನ್‌ಗೆ ಹೋಗುವುದರಿಂದ ನೀವು ಸರಿಯಾದ ದಿಕ್ಕಿನಲ್ಲಿ ವೇಗವಾಗಿ ಹೋಗಲು ಅದು ನಿಮಗೆ ಸಹಾಯ ಮಾಡುತ್ತದೆ.
"ಆದರೆ ನೀನು ಪ್ರಾರ್ಥನೆಮಾಡಬೇಕಾದರೆ ನಿನ್ನ ಏಕಾಂತವಾದ ಕೋಣೆಯೊಳಗೆ ಹೋಗಿ ಬಾಗಲನ್ನು ಮುಚ್ಚಿಕೊಂಡು ಅಂತರಂಗದಲ್ಲಿಯೂ ಇರುವ ನಿನ್ನ ತಂದೆಗೆ ಪ್ರಾರ್ಥನೆಮಾಡು; ಅಂತರಂಗದಲ್ಲಿ ನಡೆಯುವದನ್ನು ನೋಡುವ ನಿನ್ನ ತಂದೆಯು ನಿನಗೆ ಫಲಕೊಡುವನು." (ಮತ್ತಾಯ 6:6)
ನೋಡಿ, ಯೇಸು ಬಾಗಿಲನ್ನು ಮುಚ್ಚಬೇಕು ಎಂದು ಸ್ಪಷ್ಟವಾಗಿ ಹೇಳಿದನು, ಅಂದರೆ ತನ್ನೊಂದಿಗೆ ಆ ಪ್ರಮುಖ ಸಂಪರ್ಕವನ್ನು ಮಾಡಿಕೊಳ್ಳುವುದನ್ನು ತಡೆಯುವ ಗೊಂದಲಗಳಿಗೆ ಬಾಗಿಲು ಮುಚ್ಚಬೇಕು ಎಂದರ್ಥ.
2. ಹಿಂದಿನ ರಾತ್ರಿಯೇ ನಿಮ್ಮ ದಿನವನ್ನು ಯೋಜಿಸಿ
ಚಿತ್ತ ಚಂಚಲ ಗೊಳಿಸುವ ಸಂಗತಿಗಳು ಅವು ಎಷ್ಟು ತುರ್ತು ವಿಷಯ ಮತ್ತು ಮುಖ್ಯವಾದವೆಂದು ನಿಮ್ಮ ಮುಂದೆ ಸುಲಭವಾಗಿ ವೇಷ ಧರಿಸಿ ನಿಲ್ಲಬಹುದಾದರಿಂದ ಅವುಗಳನ್ನು ಗುರುತಿಸುವುದು ಕಷ್ಟಕರವಾಗುತ್ತದೆ.
ಆದರೆ ಒಂದು ವೇಳಾಪಟ್ಟಿಯನ್ನು ಹೊಂದಿರುವುದು ನಿಮಗೆ ಗೊಂದಲಗಳನ್ನು ಗುರುತಿಸಲು ಮತ್ತು ಅವುಗಳನ್ನು ನಿಭಾಯಿಸಲು ಸಹಾಯ ಮಾಡುತ್ತದೆ.
31"ಅಷ್ಟರೊಳಗೆ ಶಿಷ್ಯರು - ಗುರುವೇ, ಊಟಮಾಡು ಎಂದು ಆತನನ್ನು ಬೇಡಿಕೊಂಡರು."
34"ಯೇಸು ಅವರಿಗೆ - ನನ್ನನ್ನು ಕಳುಹಿಸಿದಾತನ ಚಿತ್ತದಂತೆ ಮಾಡಿ ಆತನ ಕೆಲಸವನ್ನು ಪೂರೈಸುವದೇ ನನ್ನ ಆಹಾರವು." ಎಂದನು(ಯೋಹಾನ 4:31,34)
ಯೇಸು ತಂದೆಯಿಂದ ಆತನಿಗೆ ನೀಡಲಾದ ವೇಳಾಪಟ್ಟಿಯನ್ನು ಹೊಂದಿದ್ದನು. ಆತನು ಈ ವೇಳಾಪಟ್ಟಿಯನ್ನು ತಂದೆಯ ಚಿತ್ತ ಎಂದು ಕರೆದನು. ಯೇಸುವಿಗೆ ಒಂದು ವೇಳಾಪಟ್ಟಿ ಇದ್ದುದರಿಂದ, ಯಾವುದು ವಿಚಲನೆಯಾಗಿದೆ ಮತ್ತು ಯಾವುದು ಅಲ್ಲ ಎಂಬುದನ್ನು ಆತನು ಸುಲಭವಾಗಿ ಗುರುತಿಸಬಲ್ಲವನಾಗಿದ್ದನು.
Bible Reading: Ezekiel 43-44

Most Read
● ದೇವರ 7 ಆತ್ಮಗಳು● ಅಶ್ಲೀಲ ಸಾಹಿತ್ಯ
● ಅಗಾಪೆ ಪ್ರೀತಿಯಲ್ಲಿ ಬೆಳೆಯುವುದು
● ದಿನ 11:40 ದಿನಗಳ ಉಪವಾಸ ಪ್ರಾರ್ಥನೆ.
● ಪೂಜೆಯ ಎರಡು ಅಗತ್ಯಗಳು
● ವ್ಯರ್ಥವಾದದಕ್ಕೆ ಹಣ
● ನಂಬಿಕೆ ಎಂದರೇನು ?