ಅನುದಿನದ ಮನ್ನಾ
ನಿಮ್ಮ ಆಶೀರ್ವಾದಗಳನ್ನು ಹೆಚ್ಚಿಸಿಕೊಳ್ಳುವ ಖಚಿತವಾದ ಮಾರ್ಗ
Sunday, 16th of June 2024
1
0
260
Categories :
ಸಾಕ್ಷಿ (Testimony)
"ಅವರು ಪ್ರಾಣದ ಮೇಲಣ ಪ್ರೀತಿಯನ್ನು ತೊರೆದು ಮರಣಕ್ಕೆ ಹಿಂತೆಗೆಯದೆ ಯಜ್ಞದ ಕುರಿಯಾದಾತನ ರಕ್ತದ ಬಲದಿಂದಲೂ ತಮ್ಮ ಸಾಕ್ಷಿಯ ಬಲದಿಂದಲೂ ಅವನನ್ನು ಜಯಿಸಿದರು."(ಪ್ರಕಟನೆ 12:11)
ನೀವು ನಿಮ್ಮ ಸುತ್ತಲಿನ ಜನರಿಗೆ ಕರ್ತನು ನಿಮಗಾಗಿ ಮಾಡಿದ ಕಾರ್ಯಗಳನ್ನು ಕುರಿತು ಹೇಳುವಾಗ ದೇವರು ನಿಮಗಾಗಿ ಮಾಡಿದ ಕಾರ್ಯಗಳ ಸಾಕ್ಷಿಯನ್ನು ಹೇಳುವವರಾಗಿರುತ್ತೀರಿ.
ಕೆಲವು ಕ್ರೈಸ್ತರಿಗೆ ತಮ್ಮ ಪಾಪಮಯವಾದ, ಭಯಂಕರವಾದ ಜೀವನಶೈಲಿಂದ ಬಿಡುಗಡೆಯಾದ ಒಂದು ನಾಟಕೀಯವಾದ ಸಾಕ್ಷಿಗಳಿರುತ್ತವೆ. ಮತ್ತೆ ಕೆಲವರಿಗೆ ಅಂತಹ ನಾಟಕೀಯವಾಗಿ ಬಿಡುಗಡೆಯಾದ ಸಾಕ್ಷಿಗಳಿಲ್ಲದಿದ್ದರೂ ಅದು ಸಹ ಏನೂ ಕಡಿಮೆ ಇಲ್ಲದಂತಹ ದೇವರ ದೃಷ್ಟಿಯಲ್ಲಿ ಮಹತ್ವವಾದ ಸಾಕ್ಷಿಗಳಾಗಿರುತ್ತದೆ.
ಅಪೋಸ್ತಲನಾದ ಪೌಲನು ಅವನ ಕಾಲದ ಧಾರ್ಮಿಕ ನಾಯಕರಿಗೆ ಯೇಸುವನ್ನು ಪ್ರಚಾರ ಮಾಡಲು ತನ್ನ ಸಾಕ್ಷಿಯನ್ನು ಉಪಯೋಗಿಸುತ್ತಿದ್ದನೆಂದು ದೇವರ ವಾಕ್ಯದಲ್ಲಿ ಬರೆದಿದೆ. ಅಪೋಸ್ತಲ ಕೃತ್ಯಗಳು ಪುಸ್ತಕದಲ್ಲಿ ಕನಿಷ್ಠ ಮೂರು ಬಾರಿಯಾದರೂ ಪೌಲನು ತನ್ನ ಸಾಕ್ಷಿಯನ್ನು ಸುವಾರ್ತೆಯ ಸಾಧನವಾಗಿ ಬಳಸಿದನ್ನು ಬರೆಯಲಾಗಿದೆ.
ಯೇಸು ಸ್ವಾಮಿಯನ್ನು ಕಂಡುಕೊಂಡ ಸಮಾರ್ಯ ಸ್ತ್ರೀಯು ತನ್ನ ನೀರಿನ ಕೊಡವನ್ನು ಅಲ್ಲಿಯೇ ಬಿಟ್ಟು ಹೋಗಿ ತನ್ನ ಊರಿನ ಜನರಿಗೆಲ್ಲ "ಅಲ್ಲಿ ಒಬ್ಬನಿದ್ದಾನೆ, ನಾನು ಇದುವರೆಗೆ ಮಾಡಿದ್ದನ್ನೆಲ್ಲಾ ನನಗೆ ಹೇಳಿದನು; ಬಂದು ಅವನನ್ನು ನೋಡಿರಿ; ಬರತಕ್ಕ ಕ್ರಿಸ್ತನು ಅವನೇ ಏನೋ?" ಎಂದು ಹೇಳಲು ಆತನ ಬಳಿಗೆ ಬರುವದಕ್ಕೆ ಊರೊಳಗಿಂದ ಹೊರಟರು."(ಯೋಹಾನ 4:29-30)
ನೋಡಿರಿ ಅವಳ ಒಂದು ಸಾಕ್ಷಿಯಿಂದ ಅನೇಕರು ಕರ್ತನಾದ ಯೇಸು ಕ್ರಿಸ್ತನ ಬಳಿಗೆ ಬರುವವರಾದರು. ಇದು ಸಾಕ್ಷಿ ಎಷ್ಟು ಮಹತ್ವವುಳ್ಳದ್ದು ಎಂದು ನಮಗೆ ತಿಳಿಸುತ್ತದೆ.
ಆಶೀರ್ವಾದಗಳನ್ನು, ಬಿಡುಗಡೆಯನ್ನು ಮತ್ತು ತಮ್ಮ ಪ್ರಾರ್ಥನೆಗಳಿಗೆ ಉತ್ತರಗಳನ್ನು ಅದ್ಭುತವಾಗಿ ಹೊಂದಿಕೊಂಡಂತ ಅನೇಕ ಜನರಿದ್ದಾರೆ. ಆದರೆ ಅವರು ಸಾಕ್ಷಿ ನೀಡದವರಾಗಿದ್ದಾರೆ. ಅನೇಕರ ಮಧ್ಯೆ ಪ್ರಪ್ರಥಮವಾಗಿ ಆಶೀರ್ವದ ಹೊಂದಿದವರೇ ದೇವರಿಗೆ ಮಹಿಮೆ ತರಲು ವಿಫಲರಾಗುತ್ತಾರೆ. ಕ್ರೈಸ್ತರಾದ ನಾವು ದೇವರು ನಮ್ಮ ಜೀವಿತದಲ್ಲಿ ಮಾಡಿದ ಕಾರ್ಯವನ್ನು ಹೇಳಲು ಎಂದಿಗೂ ಅಂಜುವುದಾಗಲೀ, ನಾಚಿಕೆ ಪಡುವುದಾಗಲೀ ಮಾಡಬಾರದು.
ಕರ್ತನಾದ ಯೇಸು ತಿರುಗಿ ದೋಣಿ ಹತ್ತಲು ಹೋಗುವಾಗ ದಂಡಿನ ದೆವ್ವಗಳಿಂದ ಬಿಡಿಸಲ್ಪಟ್ಟವನು ಯೇಸುವಿನ ಬಳಿಗೆ ಓಡಿ ಬಂದು "ನಾನು ನಿನ್ನ ಜೊತೆಗೆ ಬರಲೇ " ಎಂದು ಕೇಳಿದನು. ಆದರೆ ಯೇಸು ಅವನಿಗೆ ಹೇಳಿದ್ದೇನೆಂದು ನೋಡಿರಿ.
"ಆದರೆ ಆತನು ಅವನನ್ನು ಇರಗೊಡದೆ ಅವನಿಗೆ - ನೀನು ನಿನ್ನ ಮನೆಗೂ ನಿನ್ನ ಜನರ ಬಳಿಗೂ ಹೋಗಿ ಸ್ವಾವಿುಯು ನಿನ್ನಲ್ಲಿ ಕರುಣೆಯಿಟ್ಟು ನಿನಗೆ ಎಂಥೆಂಥ ಉಪಕಾರಗಳನ್ನು ಮಾಡಿದ್ದಾನೋ ಅದನ್ನು ಹೇಳು ಅಂದನು. ಅವನು ಹೊರಟುಹೋಗಿ ಯೇಸು ತನಗೆ ಮಾಡಿದ ಉಪಕಾರಗಳನ್ನು ದೆಕಪೊಲಿ ಎಂಬ ಸೀಮೆಯಲ್ಲಿ ಸಾರುವದಕ್ಕೆ ಪ್ರಾರಂಭಿಸಿದನು; ಎಲ್ಲರೂ ಆಶ್ಚರ್ಯಪಟ್ಟರು."(ಮಾರ್ಕ 5:19-20 )
ಆ ಮನುಷ್ಯನು ಕರ್ತನ ಮಾತಿಗೆ ವಿಧೇಯಾನಾದ್ದರಿಂದ ಹತ್ತು ಹಳ್ಳಿಗೆ ಅವನು ಆಶೀರ್ವಾದ ನಿಧಿಯಾದನು. ಅದನ್ನೊಮ್ಮೆ ಕಲ್ಪಿಸಿಕೊಂಡು ನೋಡಿ. ನೀವು ಕರ್ತನ ನಾಮವನ್ನು ನಿಮ್ಮ ಸಾಕ್ಷಿಗಳ ಮೂಲಕ ಮಹಿಮೆ ಪಡಿಸುವಾಗ ಆತ ಖಂಡಿತವಾಗಿಯೂ ನಿಮಗೆ ಇನ್ನಷ್ಟು ಸಾಕ್ಷಿ ಹೇಳುವಂತೆ ಆಶೀರ್ವದಿಸುವನಲ್ಲವೇ"
ಪ್ರಾರ್ಥನೆಗಳು
ತಂದೆಯೇ, ನೀನು ನನ್ನ ಜೀವಿತದಲ್ಲಿ ಮಾಡಿರುವ ಎಲ್ಲಾ ಕಾರ್ಯಗಳಿಗಾಗಿ ನಿನಗೆ ಸ್ತೋತ್ರ. ನಾನು ಖಂಡಿತವಾಗಿಯೂ ನಿನ್ನ ಒಳ್ಳೆಯತನವನ್ನು ನನ್ನ ಸುತ್ತಲಿನವರೆಲ್ಲರಿಗೂ ತಿಳಿಸುವೆನು. ಈ ಕಾರ್ಯವನ್ನು ಮಾಡಲು ಯೇಸು ನಾಮದಲ್ಲಿ ನನಗೆ ನಿನ್ನ ಕೃಪೆಯನ್ನು ಅನುಗ್ರಹಿಸು. ಆಮೆನ್.
Join our WhatsApp Channel
Most Read
● ಕೃಪೆಯ ಮೇಲೆ ಕೃಪೆ● ಮರೆಯಾದ ಸ್ಥಳವನ್ನು ಆಶ್ರಯಿಸಿಕೊಳ್ಳುವುದು.
● ನಿಮ್ಮ ಗತಿಯನ್ನು ಬದಲಾಯಿಸಿ
● ಬೇರಿನೊಂದಿಗೆ ವ್ಯವಹರಿಸುವುದು
● ಮರೆತುಹೋದ ಆಜ್ಞೆ.
● ನಿರ್ಣಯಾಕ ಅಂಶವಾಗಿರುವ ವಾತಾವರಣದ ಒಳನೋಟ -2
● ನಿಮ್ಮ ಗತಿಸಿ ಹೋದ ಕಾಲವು ನಿಮ್ಮ ಹೆಸರಾಗುವುದಕ್ಕೆ ಅವಕಾಶ ಕೊಡಬೇಡಿರಿ.
ಅನಿಸಿಕೆಗಳು