ಅನುದಿನದ ಮನ್ನಾ
ಸೆರೆಯಲ್ಲಿ ದೇವರ ಸ್ತೋತ್ರ
Friday, 16th of August 2024
2
0
213
Categories :
ಬಿಡುಗಡೆ (Deliverance)
"ಎಲ್ಲಾದರಲ್ಲಿಯೂ ಕೃತಜ್ಞತಾಸ್ತುತಿಮಾಡಿರಿ; ಇದೇ ನಿಮ್ಮ ವಿಷಯವಾಗಿ ಕ್ರಿಸ್ತ ಯೇಸುವಿನಲ್ಲಿ ತೋರಿ ಬಂದ ದೇವರ ಚಿತ್ತ."(1 ಥೆಸಲೋನಿಕದವರಿಗೆ 5:18)
ಯಾರಿಗಾದರೂ ಖಿನ್ನತೆಗೆ ಒಳಗಾಗಬೇಕಿದ್ದ ಕಾರಣವಿದೆ ಎಂದು ಹೇಳುವುದಾದರೆ ಅದು ಪೌಲ ಮತ್ತು ಸೀಲರಿಗೆ ಎಂದು ಹೇಳಬಹುದು. ಏಕೆಂದರೆ ಅವರು ಸುವಾರ್ತೆಯನ್ನು ಸಾರುತ್ತಿದ್ದ ಆ ಸಮಯದಲ್ಲಿಯೇ ಅವರನ್ನು ಹಿಡಿದು ಅವರನ್ನು ಹೊಡೆದು ಅವರ ಬಟ್ಟೆಗಳನ್ನೆಲ್ಲ ಹರಿದು ಹಾಕಿದರು. ಸಾರ್ವಜನಿಕವಾಗಿ ಅವರನ್ನು ಅವಮಾನಿಸಿದ ಮೇಲೆ ಅವರನ್ನು ಸೆರೆಮನೆಗೂ ಹಾಕಿಸಿ ಅವರನ್ನು ಸರಪಳಿಗಳಿಂದ ಕಟ್ಟಿ ಅಪರಾಧಿಗಳಂತೆ ಅವಮಾನಿಸಿದರು.
ಆದರೂ ಅವರ ಆ ಪರಿಸ್ಥಿತಿಯು ದೇವರ ಸಾರ್ವಭೌಮತೆಯನ್ನು ಪ್ರಶ್ನಿಸುವಂತೆ ಮಾಡಲು ಅವರು ಅನುಮತಿಸಲಿಲ್ಲ. ತಮ್ಮ ಶೋಚನೀಯ ಸ್ಥಿತಿಯನ್ನು ನೋಡಿಕೊಳ್ಳುವ ಬದಲು ಅವರು ದೇವರ ಉದ್ದೇಶದ ಮೇಲೆ ಭರವಸದಿಂದ ಇದ್ದರು. ಚೆನ್ನಾಗಿ ಹೊಡಿಸಿಕೊಂಡು ಮೈಯಲ್ಲೆಲ್ಲಾ ರಕ್ತ ಸೋರುತಿದ್ದರೂ ಸೆರೆಮನೆಯಲ್ಲಿ ಅವರು ದೇವರ ಕೀರ್ತನೆಗಳನ್ನು ಹಾಡುತ್ತಾ ದೇವರಿಗೆ ಸ್ತೋತ್ರ ಮಾಡುತ್ತಿದ್ದರು.
"ಅಕಸ್ಮಾತ್ತಾಗಿ ಮಹಾಭೂಕಂಪವುಂಟಾಯಿತು; ಸೆರೆಮನೆಯ ಅಸ್ತಿವಾರಗಳು ಕದಲಿದವು. ಅದೇ ಕ್ಷಣದಲ್ಲಿ ಕದಗಳೆಲ್ಲಾ ತೆರೆದವು, ಎಲ್ಲರ ಬೇಡಿಗಳು ಕಳಚಿಬಿದ್ದವು."(ಅಪೊಸ್ತಲರ ಕೃತ್ಯಗಳು 16:26)
ಇಲ್ಲಿ ಮೂರು ಪ್ರಮುಖವಾದ ಸಂಗತಿಗಳು ಘಟಿಸಿದವು
1). ಸೆರೆಮನೆಯ ಅಸ್ತಿವಾರವು ಕದಲಿದವು.
2). ಎಲ್ಲಾ ಬಾಗಿಲುಗಳೂ ತೆರೆಯಲ್ಪಟ್ಟವು.
3). ಎಲ್ಲರ ಬೇಡಿಗಳು ಕಳಚಿಕೊಂಡವು.
ಅವರು ಮಾಡುತ್ತಿದ್ದ ಸ್ತೋತ್ರವು ಕೇವಲ ಅವರ ಸೆರೆಮನೆಯ ಬಾಗಿಲನ್ನಷ್ಟೇ ತೆರೆಯದೆ ಎಲ್ಲಾ ಕೈದಿಗಳ ಸೆರೆಮನೆಯ ಬಾಗಿಲುಗಳನ್ನು ತೆರೆಯಿತು.
ಅವರ ಸ್ತೋತ್ರದಿಂದ ಕೇವಲ ಅವರಿಬ್ಬರ ಬೇಡಿಗಳು ಮಾತ್ರ ಕಳಚಿ ಬೀಳದೆ ಪ್ರತಿಯೊಬ್ಬ ಖೈದಿಯ ಬೇಡಿಗಳೂ ಕಳಚಿ ಬಿದ್ದವು.
ಎಲ್ಲಾ ಸಮಯಗಳಲ್ಲೂ ನೀವು ಕರ್ತನಿಗೆ ಸ್ತೋತ್ರ ಮಾಡುವಾಗ ಅವು ಕೇವಲ ನಿಮ್ಮ ಬಂಧನಗಳನ್ನಷ್ಟೇ ಅಲ್ಲದೆ ನಿಮಗೆ ಬೇಕಾದವರ ಬಂಧನಗಳನ್ನು ಕೂಡ ಬಿಚ್ಚುತ್ತದೆ.
ಹಾಗೆಯೇ, ಅವರು ಅಷ್ಟೊಂದು ಪ್ರೀತಿ ಪಾತ್ರನಾದ ದೇವರು ಹೇಗೆ ತಾನೆ ನಮ್ಮನ್ನು ಇಂತಹ ಭಯಂಕರ ಪ್ರದೇಶಕ್ಕೆ ಬರಲು ನಮ್ಮನ್ನು ಬಿಟ್ಟುಕೊಟ್ಟನು ಎಂದು ಗೊಣಗುಟ್ಟುತ್ತಾ ಗೋಳಾಡಬಹುದಿತ್ತು. ಹಾಗೇನಾದರೂ ಅವರು ಮಾಡಿದ್ದಲ್ಲಿ ಸೆರೆಮನೆಯ ಯಜಮಾನನನ್ನು ಮತ್ತು ಅವನ ಕುಟುಂಬದವರನ್ನು ಕರ್ತನ ಬಳಿ ಕರೆತರುವ ಆ ಒಂದು ಅವಕಾಶದಿಂದ ಅವರು ವಂಚಿತರಾಗುತ್ತಿದ್ದರಷ್ಟೇ.
ನಿಮ್ಮಲ್ಲಿ ಕೆಲವರು ಇಂದು ಕರ್ತನ ಮೇಲಿನ ನಂಬಿಕೆಯ ನಿಮಿತ್ತವಾಗಿ ಅಸಹನೀಯವಾದಂತಹ ಹಿಂಸೆಗಳನ್ನು ಹಾದು ಹೋಗುತ್ತಿರಬಹುದು. ಆದರೆ ನಿಮ್ಮ ಧೈರ್ಯವನ್ನು ಬಿಟ್ಟುಬಿಡಬೇಡಿರಿ. ನೀತಿವಂತನಿಗೆ ಬರುವ ಕಷ್ಟಗಳು ಅನೇಕವಿದ್ದರೂ ಕರ್ತನು ಅವೆಲ್ಲವೂಗಳಿಂದ ಅವರನ್ನು ಬಿಡಿಸುವವನಾಗಿದ್ದಾನೆ. (ಕೀರ್ತನೆಗಳು 34:19) ಆದ್ದರಿಂದ ದೇವರ ಸೇವೆ ಮಾಡುವುದನ್ನು ಬಿಟ್ಟುಬಿಡಬೇಡಿರಿ. ಆದರೆ ಆತನಿಗೆ ನಿರಂತರವಾಗಿ ಸ್ತೋತ್ರ ಸಲ್ಲಿಸಿ. ಆಗ ನಿಮ್ಮ ಸೆರೆಮನೆಯು ಸ್ತೋತ್ರದ ಅಂಗಳವಾಗಿ ಬದಲಾಗಿ ಬಿಡುತ್ತದೆ.
ಪ್ರಾರ್ಥನೆಗಳು
ತಂದೆಯೇ, ನೀನು ನಿಜವಾಗಿಯೂ ಹೇಗಿದ್ದೀಯೋ ಹಾಗೆ ನಿನ್ನನ್ನು ನೋಡುವಂತೆ ನನಗೆ ಸಹಾಯ ಮಾಡು. ನನ್ನೆಲ್ಲಾ ಪರಿಸ್ಥಿತಿಗಳಲ್ಲೂ ನೀನು ಏನಾಗಿದ್ದೀಯೋ ಅದನ್ನು ನೆನಪಿಸಿಕೊಂಡು ನಿನ್ನಲ್ಲಿ ಭರವಸದಿಂದ ಇರುವಂತೆ ಯೇಸು ನಾಮದಲ್ಲಿ ನನಗೆ ಕಲಿಸಿಕೊಡು. ಆಮೇನ್
Join our WhatsApp Channel
Most Read
● ಮಳೆಯಾಗುತ್ತಿದೆ● ದೇವರು ದರ್ಶನಕೊಡುವ ಸಮಯವನ್ನು ಗುರುತಿಸಿಕೊಳ್ಳುವುದು
● ದಿನ 02:40 ದಿನಗಳ ಉಪವಾಸ ಪ್ರಾರ್ಥನೆ ದಿನಗಳು
● ಕಳೆದು ಹೋದ ರಹಸ್ಯ
● ಆತನ ಬೆಳಕಿನಲ್ಲಿ ಸಂಬಂಧಗಳ ಪೋಷಣೆ
● ಆತ್ಮೀಕ ಬಾಗಿಲುಗಳನ್ನು ಮುಚ್ಚುವುದು
● ದೇವರು ನಿಮ್ಮ ಶರೀರದ ಕುರಿತು ಚಿಂತಿಸುತ್ತಾನಾ?
ಅನಿಸಿಕೆಗಳು