4. ಕೊಡುವಿಕೆಯು ಆತನ ಮೇಲಿನ ನಮ್ಮ ಪ್ರೀತಿಯನ್ನು ವೃದ್ಧಿಸುತ್ತದೆ.
ಒಬ್ಬ ವ್ಯಕ್ತಿಯು ಕ್ರಿಸ್ತನನ್ನು ತನ್ನ ರಕ್ಷಕನಾಗಿ ಅಂಗೀಕರಿಸಿಕೊಂಡಾಗ ಆ ವ್ಯಕ್ತಿಯು ತನ್ನಲ್ಲಿ ಕರ್ತನಿಗಾಗಿ ತನ್ನ "ಮೊದಲ ಪ್ರೀತಿಯನ್ನು" ಅನುಭವಿಸುತ್ತಾನೆ. ದೇವರ ಆತ್ಮವೂ ಅವನ ಆತ್ಮದೊಂದಿಗೆ ಅವನು ದೇವರ ಮಗನೆಂದು ಸಾಕ್ಷಿ ಹೇಳುತ್ತದೆ (ರೋಮ 8:16 ನೋಡಿ). ಈ ಒಂದು ಹೊಸದಾದ ಸಂಬಂಧವು ಅವನಲ್ಲಿ ಮಹತ್ತರವಾದ ಆನಂದವನ್ನು ಮತ್ತು ಬಿಡುಗಡೆಯನ್ನು ತರುತ್ತದೆ.
ದುರಾದೃಷ್ಟವಶಾತ್ ಅನೇಕ ಕ್ರೈಸ್ತರು ತಮ್ಮ ಅನುದಿನದ ಅಗತ್ಯಗಳ ಪೂರೈಕೆಗಾಗಿ ದೇವರ ಮೇಲೆ ಆಧಾರಗೊಳ್ಳದೆ ಆ "ಮೊದಲ ಪ್ರೀತಿಯಿಂದ" ಬಿದ್ದು ಹೋಗುತ್ತಾರೆ. ತಮ್ಮ ಸ್ವಂತ ಸಾಮರ್ಥ್ಯದಿಂದಲೇ ತಮ್ಮ ಸ್ವಂತ ಪ್ರತಿಭೆಯಿಂದಲೇ ತಾವು ಯಶಸ್ಸನ್ನು ಹೊಂದುತ್ತೇವೆ ಎಂದು ಯೋಚಿಸುತ್ತಾರೆ.
ಕರ್ತನಾದ ಈ ಸಮಸ್ಯೆಯ ಕುರಿತು ಎಫಸ್ಸೆ ಸಭೆಗೆ ಹೇಳುವಾಗ ಹೇಳಿದ್ದಾನೆ . ಯೇಸು ಹೇಳಿದ್ದು
"ಆದರೆ ಮೊದಲು ನಿನಗಿದ್ದ ಪ್ರೀತಿಯನ್ನು ನೀನು ಬಿಟ್ಟುಬಿಟ್ಟಿದ್ದೀಯೆಂದು ನಾನು ನಿನ್ನ ಮೇಲೆ ತಪ್ಪುಹೊರಿಸಬೇಕಾಗುತ್ತದೆ. ಆದದರಿಂದ ನೀನು ಎಲ್ಲಿಂದ ಬಿದ್ದಿದ್ದೀಯೋ ಅದನ್ನು ನಿನ್ನ ನೆನಪಿಗೆ ತಂದುಕೊಂಡು ದೇವರ ಕಡೆಗೆ ತಿರುಗಿಕೋ. ನೀನು ಮೊದಲು ಮಾಡುತ್ತಿದ್ದ ಕೃತ್ಯಗಳನ್ನು ಮಾಡು..... "(ಪ್ರಕಟನೆ 2:4-5 )
ಇಲ್ಲಿ ನೀಡಿರುವ ಮೂರು ಮಡಿಕೆಗಳ ಆಜ್ಞೆಯನ್ನು ಗಮನಿಸಿರಿ.
1) ನೆನಪಿಗೆ ತಂದುಕೋ
2) ದೇವರ ಕಡೆಗೆ ತಿರುಗಿಕೊ
3) ಮೊದಲು ಮಾಡುತ್ತಿದ್ದ ಕಾರ್ಯಗಳನ್ನು ಮಾಡು.
ಪಶ್ಚಾತಾಪವು ಮನಸ್ಸನ್ನು, ಹೃದಯವನ್ನು, ಮಾರ್ಗವನ್ನು ಬದಲಾಯಿಸಿಕೊಳ್ಳುವ ವಿಚಾರಗಳನ್ನು ಒಳಗೊಂಡಿದೆ. ದೇವರನ್ನು ಪೂರ್ಣ ಹೃದಯದಿಂದ ಪ್ರೀತಿಸುವುದರಿಂದ ನಿಮ್ಮ ಗಮನವನ್ನು ದೂರ ಸೆಳೆಯುವ ಆಲೋಚನೆಗಳನ್ನು ಸ್ವಭಾವವನ್ನು ಮತ್ತು ಕ್ರಿಯೆಗಳನ್ನು ಬಿಟ್ಟುಬಿಡುವಂತದ್ದಾಗಿದೆ. ನೀವು ದೇವರು ಕೊಡುವ ಕ್ಷಮಾಪಣೆಯನ್ನು ಹೊಂದಿಕೊಂಡು ನಿಮ್ಮ ನಂಬಿಕೆಯಲ್ಲಿ ಮೊದಲು ಮಾಡುತ್ತಿದ್ದ ಕಾರ್ಯಗಳಿಗೆ ಬದ್ಧರಾಗಬೇಕು.
ಮೊದಲು ಮಾಡುತ್ತಿದ್ದ ಕಾರ್ಯಗಳೆಂದರೆ ಆರಾಧನೆ, ಪ್ರಾರ್ಥನೆ, ಸತ್ಯವೇದ ಅಧ್ಯಯನ, ಕೊಡುವಿಕೆ, ಉಪವಾಸ ಮತ್ತು ಇತರರಿಗೆ ಮಾಡುತ್ತಿದ್ದ ಸೇವೆ ಮುಂತಾದ "ಮುಖ್ಯವಾದ ಪ್ರಯತ್ನಗಳನ್ನು" ಪ್ರತಿನಿಧಿಸುತ್ತದೆ. ಈ ಪ್ರತಿಯೊಂದು ಕಾರ್ಯಗಳು ದೇವರೊಂದಿಗೆ ಆಳವಾದ ಅನ್ಯೋನ್ಯತೆಯನ್ನು ತರುವ ಚಟುವಟಿಕೆಗಳಾಗಿವೆ.
ಆತನ ಪ್ರೀತಿಯು ಎಂದಿಗೂ ಬದಲಾಗದು ಆದರೆ ನಿಮ್ಮ ಧರ್ಮಕಾರ್ಯಗಳು ಆತನ ಪ್ರೀತಿಯನ್ನು ಇನ್ನಷ್ಟು ವೃದ್ಧಿಸುವುದಂತೂ ಹೌದು. ಈ ನಿಯಮವು ಬಹಳ ಸರಳವಾಗಿದೆ "ನಿಮ್ಮ ಗಂಟೆಲ್ಲಿದೆಯೋ ನಿಮ್ಮ ಮನಸ್ಸು ಅಲ್ಲೇ ಇರುತ್ತದೆ"(ಮತ್ತಾಯ 6:21).
5. ಕೊಡುವಿಕೆಯು ನಿಮ್ಮ ಮೇಲಿನ ಆತನ ಕೃಪೆಯನ್ನು ವೃದ್ಧಿಸುತ್ತದೆ.
"ದೇವರು ಸಕಲವಿಧವಾದ ದಾನಗಳನ್ನು ನಿಮಗೆ ಧಾರಾಳವಾಗಿ ಅನುಗ್ರಹಿಸುವದಕ್ಕೆ ಶಕ್ತನಾದ್ದರಿಂದ ನೀವು ಯಾವಾಗಲೂ ಎಲ್ಲಾ ವಿಷಯಗಳಲ್ಲಿ ಪರಿಪೂರ್ಣತೆಯುಳ್ಳವರಾಗಿ ಸಕಲಸತ್ಕಾರ್ಯಗಳನ್ನು ಹೇರಳವಾಗಿ ಮಾಡುವವರಾಗಿರಬೇಕು."(2 ಕೊರಿಂಥದವರಿಗೆ 9:8)
ತೆಗೆದುಕೊಳ್ಳುವವನಿಗಿಂತ ಕೊಡುವನ ಮೇಲೆಯೇ ಕೃಪೆಯು ಹೆಚ್ಚಾಗಿದೆ. ನೀವು ಹೆಚ್ಚು ಹೆಚ್ಚು ಕೊಡುವಾಗ ದೇವರು ತನ್ನ ಕೃಪೆಯನ್ನು ಸಮೃದ್ಧಿಯಾಗಿ ನಿಮ್ಮ ಮೇಲೆ ಸುರಿಸುತ್ತಾನೆ. ಇದರಿಂದ ನೀವು ಸತ್ಕಾರ್ಯಗಳನ್ನು ಮಾಡುವುದರಲ್ಲಿ ಇನ್ನಷ್ಟು ಬೆಳೆಯುತ್ತಾ ಹೋಗುವಿರಿ.
6. ಕೊಡುವಿಕೆಯು ನಿಮ್ಮ ನೀತಿಯನ್ನು ಪ್ರಚರ ಪಡಿಸುತ್ತದೆ.
ಮತ್ತೊಂದು ವಿಚಾರವೇನೆಂದರೆ ನಿಮ್ಮ ಕೊಡುವಿಕೆಯು ನಿಮ್ಮ ನೀತಿಯನ್ನು ಪ್ರಚುರ ಪಡಿಸಲು ಸಹಕಾರಿಯಾಗಿದೆ.
"ಬಿತ್ತುವವನಿಗೆ ಬೀಜವನ್ನೂ ಉಣ್ಣುವವನಿಗೆ ಆಹಾರವನ್ನೂ ಕೊಡುವಾತನು ನಿಮಗೂ ಬಿತ್ತುವದಕ್ಕೆ ಬೀಜವನ್ನು ಕೊಟ್ಟು ಹೆಚ್ಚಿಸಿ ನಿಮ್ಮ ಧರ್ಮಕಾರ್ಯಗಳಿಂದಾಗುವ ಫಲಗಳನ್ನು ವೃದ್ಧಿಪಡಿಸುವನು."(2 ಕೊರಿಂಥದವರಿಗೆ 9:10 )
ಕ್ರೈಸ್ತರಾಗಿ ನಮ್ಮ ಜೀವಿತವು ನಮ್ಮೆಲ್ಲರ ರಕ್ಷಣೆಗಾಗಿ ತನ್ನ ಪ್ರಿಯ ಕುಮಾರನಾದ ಯೇಸುವನ್ನೇ ಕೊಟ್ಟ ನಮ್ಮ ಪರಲೋಕ ತಂದೆಯ ಗುಣಾತಿಶಯವನ್ನು ಬಿಂಬಿಸುವಂತಿರಬೇಕು.
"ದೇವರು ಲೋಕದ ಮೇಲೆ ಎಷ್ಟೋ ಪ್ರೀತಿಯನ್ನಿಟ್ಟು ತನ್ನ ಒಬ್ಬನೇ ಮಗನನ್ನು ಕೊಟ್ಟನು; ಆತನನ್ನು ನಂಬುವ ಒಬ್ಬನಾದರೂ ನಾಶವಾಗದೆ ಎಲ್ಲರೂ ನಿತ್ಯಜೀವವನ್ನು ಪಡೆಯಬೇಕೆಂದು ಆತನನ್ನು ಕೊಟ್ಟನು."(ಯೋಹಾನ 3:16)
ಈ ಎಲ್ಲಾ ಆಶೀರ್ವಾದಗಳನ್ನು ಮನಗಾಣಿಸಿಕೊಂಡು ನೀವು ತೆಗೆದುಕೊಳ್ಳುವುದಕ್ಕಿಂತಲೂ ಕೊಡುವುದೇ ಆಶೀರ್ವದಕರವಾದದ್ದು ಎಂದು ಒಪ್ಪಿಕೊಳ್ಳುತ್ತೀರಿ ಎಂದು ನಾನು ಖಚಿತವಾಗಿ ಹೇಳುತ್ತೇನೆ. (ಅಪೋ. ಕೃತ್ಯ.20:35)
ಪ್ರಾರ್ಥನೆಗಳು
ಬಿತ್ತುವವನಿಗೆ ಬೀಜವನ್ನೂ ಉಣ್ಣುವವನಿಗೆ ಆಹಾರವನ್ನೂ ಕೊಡುವ ಕರ್ತನು ನನಗೂ ಬಿತ್ತುವದಕ್ಕೆ ಬೀಜವನ್ನು ಕೊಟ್ಟು ಹೆಚ್ಚಿಸಿ ನನ್ನ ಧರ್ಮಕಾರ್ಯಗಳಿಂದಾಗುವ ಫಲಗಳನ್ನು ಯೇಸುನಾಮದಲ್ಲಿ ವೃದ್ಧಿಪಡಿಸುವನು.ಆಮೇನ್.
Join our WhatsApp Channel
Most Read
● ಅಂತಿಮ ಸುತ್ತನ್ನೂ ಗೆಲ್ಲುವುದು● ಮರೆತುಹೋದ ಆಜ್ಞೆ.
● ದೇವರಿಗಾಗಿ ಮತ್ತು ದೇವರೊಂದಿಗೆ.
● ದೈವೀಕ ಅನುಕ್ರಮ -2
● ದಿನ 01 : 40 ದಿನಗಳ ಉಪವಾಸ ಮತ್ತು ಪ್ರಾರ್ಥನೆ
● ನಿರ್ಣಯಾಕ ಅಂಶವಾಗಿರುವ ವಾತಾವರಣದ ಒಳನೋಟ -2
● ಚಿಕ್ಕ ಸಂಗತಿಗಳೂ ಸಹ ಮಹತ್ತರ ಉದ್ದೇಶಗಳನ್ನು ಪೂರೈಸಬಲ್ಲವು.
ಅನಿಸಿಕೆಗಳು