ಅನುದಿನದ ಮನ್ನಾ
ನಡೆಯುವುದನ್ನು ಕಲಿಯುವುದು
Friday, 3rd of May 2024
3
1
330
Categories :
ಆಧ್ಯಾತ್ಮಿಕ ನಡಿಗೆ (Spiritual Walk)
"ನಾನೇ ಎಫ್ರಾಯೀವಿುಗೆ ನಡೆದಾಟವನ್ನು ಕಲಿಸಿದೆನು; ಅದನ್ನು ಕೈಯಲ್ಲಿ ಎತ್ತಿಕೊಂಡೆನು; ತನ್ನನ್ನು ಸ್ವಸ್ಥಮಾಡಿದವನು ನಾನೇ ಎಂದು ಅದಕ್ಕೆ ತಿಳಿಯಲಿಲ್ಲ."(ಹೋಶೇಯ 11:3 ).
ನಮ್ಮ ಜೀವಿತದಲ್ಲಿ ಆಳವಾದ ಬದಲಾವಣೆ ಕಾಣಬೇಕೆಂದರೆ ನಾವು ಪವಿತ್ರಾತ್ಮನಿಗೆ ಅನುಸಾರವಾಗಿ ನಡೆಯುವುದನ್ನು (ಬದುಕುವುದನ್ನು) ಕಲಿಯುವಂತದ್ದು ಬಹಳ ಮುಖ್ಯವಾದ ಅಂಶವಾಗಿದೆ. ನಾವು ಹೇಗೆ ಈ ಲೋಕದಲ್ಲಿ ಬದುಕಬೇಕೆಂದು ಕಲಿಯುತ್ತೇವೆಯೋ ಹಾಗೆಯೇ ದೇವರ ಲೋಕದಲ್ಲಿಯೂ ಹೇಗೆ ಆತ್ಮೀಕವಾಗಿ ನಡೆಯಬೇಕೆಂಬುದನ್ನು ಕಲಿತುಕೊಳ್ಳಬೇಕು. ಹೇಗೆ ಭೌತಿಕವಾಗಿ ಕಲಿತೆವೋ ಹಾಗೆಯೇ ಆತ್ಮಿಕವಾಗಿಯೂ ಕಲಿಯಬೇಕು. ನಮ್ಮ ತಂದೆ ತಾಯಿಗಳು ನಮಗೆ ಭೌತಿಕವಾಗಿ ಹೇಗೆ ನಡೆಯಬೇಕೆಂದು ಕಲಿಸಿಕೊಟ್ಟರು. ಹಾಗೆಯೇ ದೇವರ ಆತ್ಮನು ನಾವು ಆತ್ಮಿಕವಾಗಿ ಹೇಗೆ ನಡೆಯಬೇಕೆಂದು ನಮಗೆ ಕಲಿಸಿಕೊಡುತ್ತಾನೆ.
ನಾವು ದೇವರನ್ನು ಮೆಚ್ಚಿಸುವ ಮಾರ್ಗದಲ್ಲಿ ಬೆಳೆಯಬೇಕೆಂದರೆ, ನಾವು ಆತನ ಜ್ಞಾವನ್ನು ಕುರಿತಾದ ವಿಚಾರದಲ್ಲಿ ಬೆಳೆಯಬೇಕಾಗುತ್ತದೆ. ಅದಕ್ಕಾಗಿಯೇ ಅಪೋಸ್ತಲನಾದ ಪೌಲನು ಸಭೆಯ ಸದಸ್ಯರಿಗಾಗಿ ಹೀಗೆ ಪ್ರಾರ್ಥಿಸಿದನು.....
"ಆದಕಾರಣ ನಾವು ನಿಮ್ಮ ಸುದ್ದಿಯನ್ನು ಕೇಳಿದ ದಿವಸದಿಂದ ನಿಮಗೋಸ್ಕರ ಪ್ರಾರ್ಥಿಸುವದನ್ನು ಬಿಡದೆ ನೀವು ಸಕಲ ಆತ್ಮೀಯ ಜ್ಞಾನವನ್ನೂ ಗ್ರಹಿಕೆಯನ್ನೂ ಹೊಂದಿ ಕರ್ತನ ಚಿತ್ತದ ವಿಷಯವಾದ ತಿಳುವಳಿಕೆಯಿಂದ ತುಂಬಿಕೊಂಡು ಆತನಿಗೆ ಯೋಗ್ಯರಾಗಿ ನಡೆದು ಎಲ್ಲಾ ವಿಧದಲ್ಲಿ ಆತನನ್ನು ಸಂತೋಷಪಡಿಸುವವರಾಗಿರಬೇಕೆಂತಲೂ ನೀವು ಸಕಲ ಸತ್ಕಾರ್ಯವೆಂಬ ಫಲವನ್ನು ಕೊಡುತ್ತಾ ದೇವಜ್ಞಾನದಿಂದ ಅಭಿವೃದ್ಧಿಯಾಗುತ್ತಿರಬೇಕೆಂತಲೂ... "(ಕೊಲೊಸ್ಸೆಯವರಿಗೆ 1:9-10)
ಸತ್ಯವೇದವನ್ನು ನಿಮ್ಮ ಬೌದ್ಧಿಕ ಜ್ಞಾನಾರ್ಜನೆಗಾಗಿ ಮಾತ್ರ ಬಳಸಬೇಡಿರಿ. ಬದಲಾಗಿ ನಿಮ್ಮ ಮನಸ್ಸನ್ನು ನೂತನ ಗೊಳಿಸಲು ಅದಕ್ಕೆ ಅನುಮತಿಸಿ.
ಕರ್ತನೊಂದಿಗೆ ನಡೆಯುವುದರ ಮತ್ತೊಂದು ಗುಣಾತಿಶಯವೇನೆಂದರೆ ಅದು ಕಲಿಯುವ ಹೃದಯವನ್ನು ಹೊಂದಿರುವಂತದ್ದಾಗಿದೆ. ಇದು ನಮಗೆ ಕರ್ತನಿಂದ ಈಗಾಗಲೇ ನಾವು ಹೊಂದಿಕೊಂಡಿರುವಂತದ್ದನ್ನು ನಾವು ಅನುದಿನದ ದಿನಚರಿಯಲ್ಲಿ ಅಳವಡಿಸಿಕೊಂಡು ನಡೆಯಲು ನಮಗೆ ಸಹಾಯ ಮಾಡುತ್ತದೆ.
ಫರಿಸಾಯರ ದೊಡ್ಡ ಪತನಕ್ಕೆ ಕಾರಣವೇನೆಂದರೆ ಅವರು ದೇವರ ಕುರಿತು ತಿಳಿಯಬಹುದಾದ ಎಲ್ಲಾ ವಿಚಾರವನ್ನು ತಿಳಿದುಕೊಂಡಿದ್ದೇವೆ ಎಂದು ನಂಬಿದ್ದದ್ದಾದ್ದಾಗಿದೆ. ಈ ಕಾರಣದಿಂದಾಗಿ ಅವರು ತಮ್ಮ ಆತ್ಮಿಕ ಬೆಳವಣಿಗೆಯಲ್ಲಿ ನಿಶ್ಚಲವಾದ ಮನಸ್ಥಿತಿ ಹೊಂದಿದವರಂತೆ ಬಾಳುತ್ತಿದ್ದರು. ಕರ್ತನಾದ ಯೇಸು ಹೇಳುವುದೇನೆಂದರೆ "ನಿಮಗೆ ಸತ್ಯವಾಗಿ ಹೇಳುತ್ತೇನೆ, ಯಾವನು ಶಿಶುಭಾವದಿಂದ ದೇವರ ರಾಜ್ಯವನ್ನು ಅಂಗೀಕರಿಸುವದಿಲ್ಲವೋ ಅವನು ಅದರಲ್ಲಿ ಸೇರುವದೇ ಇಲ್ಲ ಎಂದು.." (ಮಾರ್ಕ 10:15)
ನಾವು ಯಾವ ಹಂತಕ್ಕೆ ತಲುಪಿದ್ದರೂ ಸರಿಯೇ, ಇನ್ನೂ ಹೆಚ್ಚಾಗಿ ಹೊಂದಿಕೊಳ್ಳಲು ನಾವು ಕಲಿಯುವ ಹೃದಯವನ್ನು ಹೊಂದಿರಬೇಕಷ್ಟೆ.
ಪ್ರಾರ್ಥನೆಗಳು
ತಂದೆಯೇ, ನನ್ನೆಲ್ಲಾ ಹೆಮ್ಮೆಯನ್ನು -ಅಹಂಕಾರವನ್ನು ಕ್ಷಮಿಸು. ಕಲಿಯುವಿಕೆಯ ಹೃದಯವನ್ನು ನಿನ್ನಿಂದ ಯೇಸು ನಾಮದಲ್ಲಿ ಬೇಡುತ್ತೇನೆ ತಂದೆಯೇ.ಆಮೆನ್.
Join our WhatsApp Channel
Most Read
● ನಿಮ್ಮ ಗುರಿಯನ್ನು ತಲುಪಲು ಬಲವನ್ನು ಹೊಂದಿಕೊಳ್ಳಿರಿ.● ಮತ್ತೊಬ್ಬ ಯೇಸು, ಬೇರೊಂದು ಆತ್ಮ, ಮತ್ತು ಬೇರೊಂದು ಸುವಾರ್ತೆ-II
● ದಿನ 20:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ
● ದಿನ 03 : 40 ದಿನಗಳ ಉಪವಾಸ ಮತ್ತು ಪ್ರಾರ್ಥನೆ
● ದೇವರು ದರ್ಶನಕೊಡುವ ಸಮಯವನ್ನು ಗುರುತಿಸಿಕೊಳ್ಳುವುದು
● ನೆಪ ಹೇಳುವ ಕಲೆ
● ಅಭಿಷೇಕಕ್ಕಿರುವ ಪ್ರಪ್ರಥಮ ಶತೃ
ಅನಿಸಿಕೆಗಳು