ಅನುದಿನದ ಮನ್ನಾ
ಕರ್ತನೇ ನನ್ನ ದೀಪವನ್ನು ಬೆಳಗಿಸು.
Monday, 11th of March 2024
3
3
511
Categories :
ದೇವರವಾಕ್ಯ ( Word of God )
ದೇವರು ತನ್ನ ಮಹತ್ತರವಾದ ರಹಸ್ಯಗಳನ್ನು ಸಾಮಾನ್ಯವಾದ ಸಂಗತಿಗಳಲ್ಲಿ ಅಡಗಿಸಿಟ್ಟಿರುತ್ತಾನೆ. ನೀವು ಈ ಮುಂದಿನ ದೇವರ ವಾಕ್ಯವನ್ನು ಓದಿದರೆ, ನೋಡಲು ಅದು ಬಹಳ ಸಾಮಾನ್ಯವಾದದ್ದು ಎಂದು ಎನಿಸುತ್ತದೆ ಆದರೆ ಅದು ತನ್ನೊಳಗೆ ಬಹಳ ಸಂಪತ್ತನ್ನು ಅಡಗಿಸಿಟ್ಟುಕೊಂಡಿದೆ.
"ನೀನೇ ನನ್ನ ದೀಪವನ್ನು ಹೊತ್ತಿಸುವವನಲ್ಲವೇ, ನನ್ನ ದೇವರಾದ ಯೆಹೋವನು ನನಗೆ ಬೆಳಕನ್ನು ಕೊಟ್ಟು ಕತ್ತಲನ್ನು ಪರಿಹರಿಸುವವನು."(ಕೀರ್ತನೆಗಳು 18:28)
ಮನುಷ್ಯರನ್ನು ಮೂರು ಭಾಗಗಳಾಗಿ ವಿಭಾಗಿಸಬಹುದು ಮನುಷ್ಯನು ಆತ್ಮವಾಗಿದ್ದಾನೆ ಅವನಿಗೆ ಪ್ರಾಣವಿದೆ ಮತ್ತು ಅವನು ದೇಹದಲ್ಲಿ ಜೀವಿಸುತ್ತಾನೆ. (1 ಥೆಸಾಲೋನಿಕ 5:23)
ಈ ವಾಕ್ಯದಲ್ಲಿ ಆತ್ಮವನ್ನು ದೀಪಕ್ಕೆ ಹೋಲಿಸಲಾಗಿದೆ. ಈ ಮುಂದಿನ ವಾಕ್ಯವು ಇದನ್ನು ಸ್ಪಷ್ಟೀಕರಿಸುತ್ತದೆ.
"ಮನುಷ್ಯನ ಆತ್ಮವು ಯೆಹೋವನ ದೀಪವಾಗಿದೆ; ಅದು ಅಂತರಂಗವನ್ನೆಲ್ಲಾ ಶೋಧಿಸುತ್ತದೆ."(ಜ್ಞಾನೋಕ್ತಿಗಳು 20:27 )
ನಾವೀಗ ಈ ತಿಳುವಳಿಕೆಯೊಂದಿಗೆ ಕೀರ್ತನೆ 18:28ನ್ನು ಮತ್ತೊಮ್ಮೆ ಓದೋಣ

ನಿಮ್ಮ ಆತ್ಮಿಕ ಮನುಷ್ಯನು ಬೆಳಗಬೇಕಾದದ್ದು ಅತ್ಯಂತ ನಿರ್ಣಾಯಕವಾದ ಅಂಶವಾಗಿದೆ. ಏಕೆಂದು ನಾನೀಗ ನಿಮಗೆ ಹೇಳುತ್ತೇನೆ...
ನಿಮಗೆ ಸ್ವಾಭಾವಿಕವಾದ ಜ್ಞಾನಕ್ಕೆ ಅರ್ಥವಾಗದಂತ ಪ್ರಕಟಣೆಗಳನ್ನು ತಿಳುವಳಿಕೆಯನ್ನು ದೇವರು ನಿಮಗೆ ತಿಳಿಸಲು ನಿಮ್ಮ ಆತ್ಮವನ್ನು ಬಳಸಿಕೊಳ್ಳುತ್ತಾನೆ.
ಕರ್ತನಾದ ಯೇಸುವು ರಾಜಾಧಿರಾಜನಾಗಿದ್ದವನು. ಮನುಷ್ಯರ ನಡುವೆ ನಿವಾಸಿಸಿದನು. ಆದರೆ ಕೆಲವರು ಮಾತ್ರವೇ ಪ್ರಾಪಂಚಿಕ ಆಯಾಮದಲ್ಲಿ ಅದನ್ನು ತಿಳಿದುಕೊಂಡರು. ಆತನು ಸಾಮಾನ್ಯ ಮನುಷ್ಯನಂತೆ ಸರಳವಾಗಿ ಜನರ ನಡುವೆ ಜೀವಿಸಿದನು. ಆದರೂ ದೇವರೇ ಆ ಜನರ ಮಧ್ಯದಲ್ಲಿ ಇದ್ದದ್ದು. ದೊಡ್ಡ ದೊಡ್ಡ ಧಾರ್ಮಿಕ ನಾಯಕರಗಳು ಸಹ ಆತನಲ್ಲಿದ್ದ ಮಹತ್ವವನ್ನು ಮತ್ತು ಮಹಿಮೆಯನ್ನು ಕಂಡುಕೊಳ್ಳಲು ವಿಫಲರಾದರು.
ಅದೇ ರೀತಿಯಾಗಿಯೇ ನೀವು ಆತ್ಮಿಕವಾಗಿ ಬೆಳಕಿಲ್ಲದವರಾಗಿದ್ದರೆ ಕೆಲವೊಂದು ಸಂಗತಿಗಳನ್ನು ಅಥವಾ ಕೆಲವರನ್ನು ಅದರ /ಅವರ ಹೊರ ರೂಪವನ್ನು ನೋಡಿ ಅದರ/ಅವರ ಮೌಲ್ಯವನ್ನು ಅಳೆಯಲು ಸಾಧ್ಯವಾಗುವುದಿಲ್ಲ."ಪ್ರಾಕೃತಮನುಷ್ಯನು ದೇವರಾತ್ಮನ ವಿಷಯಗಳನ್ನು ಬೇಡವೆನ್ನುತ್ತಾನೆ; ಅವು ಅವನಿಗೆ ಹುಚ್ಚುಮಾತಾಗಿ ತೋರುತ್ತವೆ; ಅವು ಆತ್ಮವಿಚಾರದಿಂದ ತಿಳಿಯ ತಕ್ಕವುಗಳಾಗಿರಲಾಗಿ ಅವನು ಅವುಗಳನ್ನು ಗ್ರಹಿಸಲಾರನು." ಎಂದು ಅಪೋಸ್ತಲನಾದ ಪೌಲನು ಬರೆಯುತ್ತಾನೆ.(1 ಕೊರಿಂಥದವರಿಗೆ 2:14)
ನೀವು ಅತ್ಯುನ್ನತ ವಿದ್ಯಾಭ್ಯಾಸವನ್ನು ಹೊಂದಿರಬಹುದು, ಬಹಳ ಬುದ್ಧಿವಂತ ವ್ಯಕ್ತಿಗಳಾಗಿರಲೂ ಬಹುದು. ಆದರೂ ನೀವು ಆತ್ಮೀಕ ತಿಳುವಳಿಕೆ ಇಲ್ಲದವರಾಗಿರಬಹುದು. ನಿಮ್ಮ ಪ್ರಾಪಂಚಿಕ ಬುದ್ಧಿಯು ವಿದ್ಯೆಯಿಂದ ತುಂಬಿರಬಹುದು. ಆದರೆ ದೇವರಿಗೆ ಸಂಬಂಧಿಸಿದ ವಿಚಾರಗಳಲ್ಲಿ ನಿಮ್ಮ ಆತ್ಮಿಕ ಮನುಷ್ಯನು ಅವಿದ್ಯಾವಂತನಾಗಿರಬಹುದು.ಒಬ್ಬ ವ್ಯಕ್ತಿಯ ಆತ್ಮಿಕ ಮನುಷ್ಯನಲ್ಲಿ ಬೆಳಕಿಲ್ಲದಿದ್ದರೆ ಅದು ಯಾವಾಗಲೂ ಹೀಗೆಯೇ ಆಗುತ್ತದೆ.
"ಆತನು ನಿಮ್ಮ ಮನೋನೇತ್ರಗಳನ್ನು ಬೆಳಗಿಸಿ ಆತನಿಂದ ಕರಿಸಿಕೊಂಡವರು ನಿರೀಕ್ಷಿಸುವ ಪದವಿ ಎಂಥದೆಂಬದನ್ನೂ ದೇವಜನರೆಂಬ ಆತನ ಸ್ವಾಸ್ಥ್ಯದ ಮಹಿಮಾತಿಶಯವು ಎಂಥದೆಂಬದನ್ನೂ ನಂಬುವವರಾದ ನಮ್ಮಲ್ಲಿ ಆತನು ಸಾಧಿಸುವ ಪರಾಕ್ರಮವು ಎಷ್ಟು ಅತಿಶಯವಾದದ್ದೆಂಬದನ್ನೂ ನೀವು ತಿಳುಕೊಳ್ಳುವಂತೆ ಅನುಗ್ರಹಿಸಲಿ. " ಎಂಬುದಾಗಿ ಅಪೋಸ್ತಲನಾದ ಪೌಲನು ಎಲ್ಲದಕ್ಕಿಂತ ಮುಖ್ಯವಾಗಿ ಪ್ರಾಶಾಸ್ತ್ಯ ಕೊಟ್ಟು ಎಫೆಸದವರ ಸಭೆಗಾಗಿ ಪ್ರಾರ್ಥಿಸುತ್ತಾನೆ. ( ಎಫೆಸದವರಿಗೆ 1:18-19)
ನೀವು ಕರ್ತನಿಂದ ಪ್ರಕಟಣೆಯನ್ನು ಜ್ಞಾನವನ್ನು ಹೊಂದಲು ನಿಮ್ಮ ಆತ್ಮಿಕ ಮನುಷ್ಯನನ್ನು ನೀವು ಹೇಗೆ ಬೆಳಗಿಸಬಹುದು?
"ನಿನ್ನ ವಾಕ್ಯವಿವರಣೆಯಿಂದ ಯುಕ್ತಿಹೀನರಿಗೆ ಜ್ಞಾನೋದಯವಾಗುವದು."(ಕೀರ್ತನೆಗಳು 119:130)
ದೇವರ ವಾಕ್ಯದ ಮೂಲಕ ನಿಮ್ಮನ್ನು ಪರಿಶೋಧಿಸಿಕೊಳ್ಳಿರಿ ದೇವರ ವಾಕ್ಯಕ್ಕೆ ನಿಮ್ಮನ್ನು ನೀವು ಸಮರ್ಪಿಸಿಕೊಳ್ಳಿ. ಆತನ ವಾಕ್ಯಗಳಿಂದಲೇ ನಿಮ್ಮ ಮಾರ್ಗಗಳು ಬೆಳಗುತ್ತವೆ. ನಿಮ್ಮ ಆತ್ಮೀಕ ಮನುಷ್ಯನೂ ಬೆಳಗುತ್ತಾನೆ.

ಪ್ರಾರ್ಥನೆಗಳು
ತಂದೆಯೇ, ನಾನು ನಿನ್ನನ್ನು ಕಾಣುವಂತೆ ನಿನ್ನ ಸ್ವರ ಕೇಳುವಂತೆ ನನ್ನ ಆತ್ಮಿಕ ಕಣ್ಣುಗಳನ್ನು ಕಿವಿಗಳನ್ನು ತೆರೆಮಾಡು ಎಂದು ಯೇಸು ನಾಮದಲ್ಲಿ ಪ್ರಾರ್ಥಿಸುತ್ತೇನೆ.ಆಮೇನ್.
Join our WhatsApp Channel
Most Read
● ಯೇಸುವಿನ ಕರ್ತತ್ವವನ್ನು ಅರಿಕೆ ಮಾಡುವುದು● ದಿನ 05: 40 ದಿನಗಳ ಉಪವಾಸ ಮತ್ತು ಪ್ರಾರ್ಥನೆ
● ಸರ್ವಶಕ್ತನಾದ ದೇವರ ಅದ್ಬುತ ಸಮಾಗಮ.
● ನೋವಿನಲ್ಲೂ ದೇವರಿಗೆ ಒಡಂಬಟ್ಟು ನಡೆಯುವುದನ್ನು ಕಲಿಯುವುದು
● ದಿನ 28:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ
● ಕುಟುಂಬಕ್ಕಾಗಿ ಇರುವ ಗುಣಮಟ್ಟದ ಸಮಯ
● ಕೃತಜ್ಞತೆಯ ಯಜ್ಞ
ಅನಿಸಿಕೆಗಳು