ವಿಭಿನ್ನ ಆತ್ಮ ಹೊಂದಿದ ವ್ಯಕ್ತಿ
ಭಯ, ಸಂದೇಹ ಮತ್ತು ವೈಫಲ್ಯಗಳು ನಮ್ಮ ನಂಬಿಕೆಯನ್ನು ದುರ್ಬಲಗೊಳಿಸುವ ಈ ಜಗತ್ತಿನಲ್ಲಿ, ವಿಭಿನ್ನ ಮನೋಭಾವ ಹೊಂದಿರುವ ಮನುಷ್ಯನಾದ ಕಾಲೇಬನ ಜೀವನವು ದೇವರಲ್ಲಿ ವಿಶ್ವಾಸವಿಡುವ ವ್ಯಕ್ತಿಯ ಪ್ರಬಲ ಉದಾಹರಣೆಯಾಗಿ ಹೊಳೆಯುತ್ತದೆ. ಇತರರು ಎದೆಗುಂದಿದಾಗ, ಕಾಲೇಬನು ದೃಢವಾಗಿ ನಿಂತಿದ್ದನು.
"ನನ್ನ ದಾಸನಾದ ಕಾಲೇಬನು ಅಂಥ ಮನಸ್ಸುಳ್ಳವನಾಗಿರದೆ ಮನಃಪೂರ್ವಕವಾಗಿ ನನ್ನ ಮಾತನ್ನು ಅನುಸರಿಸಿ ನಡೆದದ್ದರಿಂದ ಅವನನ್ನೇ ಅವನು ಸಂಚರಿಸಿದ ಆ ದೇಶದಲ್ಲಿ ಸೇರಿಸುವೆನು; ಅವನ ಸಂತತಿಯವರು ಅದನ್ನು ಸ್ವಾಧೀನಪಡಿಸಿಕೊಳ್ಳುವರು."ಎಂದು ದೇವರು ಸ್ವತಃ ಅವನ ಬಗ್ಗೆ ಹೇಳಿದನು.(ಅರಣ್ಯಕಾಂಡ 14:24)
ಕಾಲೇಬನ ಕಥೆ ಕೇವಲ ಇತಿಹಾಸವಲ್ಲ. ಇಂದಿಗೂ ನಂಬಿಕೆಯಿಂದ ಹೇಗೆ ಬದುಕಬೇಕೆಂದು ಅದು ನಮಗೆ ಬೋದಿಸುವಂತದ್ದಾಗಿದೆ.
ಭಯವನ್ನು ತಿರಸ್ಕರಿಸುವಂತ ನಂಬಿಕೆ
ಇಸ್ರಾಯೇಲ್ಯರು ವಾಗ್ದತ್ತ ದೇಶದ ಅಂಚಿನಲ್ಲಿ ನಿಂತಾಗ, ಹತ್ತು ಗೂಢಚಾರರು ದೈತ್ಯರ ಮೇಲೆ ತಮ್ಮ ದೃಷ್ಟಿಯನ್ನು ಕೇಂದ್ರೀಕರಿಸಿ ಭಯವನ್ನು ಹರಡಿದರು. ಆದರೆ ಕಾಲೇಬನು ಅದೇ ಪ್ರದೇಶವನ್ನು ವಿಭಿನ್ನವಾಗಿ ನೋಡಿದನು. ಅವನು ಅಲ್ಲಿನ ಪರಿಸ್ಥಿತಿಗಿಂತ ದೇವರನ್ನೇ ಹೆಚ್ಚಾಗಿ ನಂಬಿದನು.
"ಇಸ್ರಾಯೇಲ್ಯರು ಮೋಶೆಗೆ ವಿರೋಧವಾಗಿ ಗುಣುಗುಟ್ಟಲಾಗಿ ಕಾಲೇಬನು ಅವರನ್ನು ಸುಮ್ಮನಿರಿಸಿ - ನಾವು ನಿರ್ಭಯವಾಗಿ ಆ ಬೆಟ್ಟದ ಸೀಮೆಗೆ ಹತ್ತಿಹೋಗಿ ಅದನ್ನು ಸ್ವಾಧೀನಪಡಿಸಿಕೊಳ್ಳೋಣ; ಅದನ್ನು ಜಯಿಸಬಲ್ಲೆವು ಎಂದು ಹೇಳಿದನು." ಎಂದು ಬೈಬಲ್ ಕಾಲೇಬನ ವಿಶ್ವಾಸವನ್ನು ಕುರಿತು ದಾಖಲಿಸುತ್ತದೆ (ಅರಣ್ಯಕಾಂಡ 13:30, NIV)
ದೇವರ ಬಲವು ಯಾವುದೇ ಅಡ್ಡಿ ಆತಂಕ ಗಳಿಗಿಂತ ದೊಡ್ಡದಾಗಿದೆ ಎಂದು ಕಾಲೇಬ್ ನಂಬಿದ್ದನು. ಇದೇ ಸತ್ಯವನ್ನು ಹೊಸ ಒಡಂಬಡಿಕೆಯಲ್ಲಿಯೂ ಉಲ್ಲೇಖಿಸಲಾಗಿದೆ:
ಅದಾವುದೆಂದರೆ
“ನನ್ನನ್ನು ಬಲಪಡಿಸುವ ಕ್ರಿಸ್ತಲ್ಲಿದ್ದುಕೊಂಡು ನಾನು ಎಲ್ಲವನ್ನೂ ಮಾಡಲು ಶಕ್ತನ್ನಾಗಿದ್ದೇನೆ.” (ಫಿಲಿಪ್ಪಿ 4:13, NIV)
ನಂಬಿಕೆಯು ಸಮಸ್ಯೆಗಳನ್ನು ನಿರಾಕರಿಸುವುದಿಲ್ಲ - ಅದು ಅದೆಲ್ಲವುಗಳಿಂತ ದೊಡ್ಡವನಾದ ದೇವರನ್ನು ನಂಬುತ್ತದೆ.
ದೇವರ ಶಕ್ತಿಯ ಮೇಲೆ ಬೇರೂರಿರುವ ವಿಶ್ವಾಸ
ಕಾಲೇಬನ ನಂಬಿಕೆಯು ಹುಚ್ಚು ಆಶಾವಾದವಾಗಿರಲಿಲ್ಲ. ಅದು ದೇವರು ಯಾರೆಂಬುದರ ಮೇಲೆ ಬೇರೂರಿತ್ತು. ಯಾವುದೇ ಶತ್ರು ಕರ್ತನ ವಿರುದ್ಧ ನಿಲ್ಲಲು ಸಾಧ್ಯವಿಲ್ಲ ಎಂಬುದು ಅವನಿಗೆ ತಿಳಿದಿತ್ತು. ದಾವೀದನು ಗೋಲಿಯಾತ್‌ನನ್ನು ಎದುರಿಸಿದಾಗ, ಅವನು ಧೈರ್ಯದಿಂದ ಘೋಷಿಸಿದ್ದೇನೆಂದರೆ:
" - ನೀನು ಈಟಿ ಕತ್ತಿ ಬರ್ಜಿಗಳೊಡನೆ ನನ್ನ ಬಳಿಗೆ ಬರುತ್ತೀ; ನಾನಾದರೋ ನೀನು ಹೀಯಾಳಿಸಿದಂಥ ಸೇನಾಧೀಶ್ವರನೂ ಇಸ್ರಾಯೇಲ್ಯರ ಯುದ್ಧಭಟರ ದೇವರೂ ಆಗಿರುವ ಯೆಹೋವನ ನಾಮದೊಡನೆ ನಿನ್ನ ಬಳಿಗೆ ಬರುತ್ತೇನೆ.(1 ಸಮುವೇಲ 17:45) ಎಂದು.
ದಾವೀದ ಮತ್ತು ಕಾಲೇಬ ಇಬ್ಬರೂ ಸಹ ಒಂದು ಸತ್ಯವನ್ನು ಅರ್ಥಮಾಡಿಕೊಂಡರು: ಅದೇನೆಂದರೆ ಗೆಲುವು ಗಾತ್ರ, ಬಲ ಅಥವಾ ಆಯುಧಗಳ ಮೇಲೆ ಅವಲಂಬಿತವಾಗಿಲ್ಲ - ಆದರೆ ಕರ್ತನು ನಿಮ್ಮ ಕಡೆ ಇರುವುದರ ಮೇಲೆ ಅದು ಅವಲಂಬಿತವಾಗಿದೆ ಎಂದು.
ವಾಗ್ದಾನಕ್ಕಾಗಿ ಕಾಯುವ ತಾಳ್ಮೆ.
ಕಾಲೇಬನಿಗೆ ತನ್ನ ಬಾದ್ಯತೆಯು ತಕ್ಷಣವೇ ಸಿಗಲಿಲ್ಲ. ಅವನು ನಲವತ್ತೈದು ವರ್ಷಗಳ ಕಾಲ ಅದಕ್ಕಾಗಿ ಕಾಯುತ್ತಿದ್ದನು. ಆದರೂ ಅವನ ನಂಬಿಕೆ ಎಂದಿಗೂ ಮಸುಕಲಿಲ್ಲ.
"ದೇವರ ಚಿತ್ತವನ್ನು ನೆರವೇರಿಸಿ ವಾಗ್ದಾನದ ಫಲವನ್ನು ಹೊಂದಬೇಕಾದರೆ ನಿಮಗೆ ತಾಳ್ಮೆಬೇಕು."
ಎಂದು ಹೇಳುವ ಮೂಲಕ ಹೊಸ ಒಡಂಬಡಿಕೆಯು ನಮಗೆ ಇದೇ ತತ್ವವನ್ನು ಕಲಿಸುತ್ತದೆ (ಇಬ್ರಿಯ 10:36,)
ಕಾಯುವುದು ಎಂದರೆ ದೇವರು ನಿಮ್ಮನ್ನು ಮರೆತಿದ್ದಾನೆ ಎಂದಲ್ಲ. ಕೆಲವೊಮ್ಮೆ, ಕಾಯುವುದು ಎಂದರೆ ದೇವರು ನಮ್ಮನ್ನು ದೊಡ್ಡ ವಿಷಯಗಳಿಗೆ ಸಿದ್ಧಪಡಿಸುವುದು ಎಂಬುದಾಗಿರುತ್ತದೆ.
ಎಂಬತ್ತೈದು ವರ್ಷ ವಯಸ್ಸಿನಲ್ಲೂ, ಕಾಲೇಬನು ಇನ್ನೂ ಬಲಶಾಲಿಯಾಗಿ, ಉತ್ಸಾಹಭರಿತನಾಗಿ ಮತ್ತು ದೇವರ ವಾಗ್ದಾನಕ್ಕಾಗಿ ಹೋರಾಡಲು ಸಿದ್ಧನಾಗಿದ್ದನು.
"ಯೆಹೋವನು ಈ ಮಾತುಗಳನ್ನು ಮೋಶೆಗೆ ಹೇಳಿದಂದಿನಿಂದ ಇಸ್ರಾಯೇಲ್ಯರು ಅರಣ್ಯದಲ್ಲಿ ಅಲೆಯುತ್ತಿದ್ದ ವರುಷಗಳೂ ಸೇರಿ ನಾಲ್ವತ್ತೈದು ವರುಷಗಳು ದಾಟಿದವು. ಯೆಹೋವನು ತಾನು ನುಡಿದಂತೆಯೇ ಈ ಕಾಲವೆಲ್ಲಾ ನನ್ನನ್ನು ಜೀವದಿಂದುಳಿಸಿದ್ದಾನೆ. ಈಗ ನಾನು ಎಂಭತ್ತೈದು ವರುಷದವನಾಗಿದ್ದೇನೆ. ಮೋಶೆಯು ನನ್ನನ್ನು ಕಳುಹಿಸಿದಾಗ ನನಗೆಷ್ಟು ಬಲವಿತ್ತೋ ಈಗಲೂ ಅಷ್ಟಿದೆ. ಯುದ್ಧಮಾಡುವದಕ್ಕೂ ವಿಶೇಷ ಕಾರ್ಯಗಳನ್ನು ನಿರ್ವಹಿಸುವದಕ್ಕೂ ನನಗೆ ಮುಂಚಿನಂತೆಯೇ ಶಕ್ತಿಯಿರುತ್ತದೆ."
ಎಂದು ಅವನು ಘೋಷಿಸಿದನು. (ಯೆಹೋಶುವ 14:10–11)
ದೇವರ ಮಾತು ಎಷ್ಟು ಸತ್ಯ:
“ಅವರು ಮುಪ್ಪಿನಲ್ಲಿಯೂ ಫಲಿಸುವರು ಅವರು ಹಸಿರಾಗಿದ್ದು ಶೋಭಿಸುವರು.” (ಕೀರ್ತನೆ 92:14)
ಎಂದು ಅದು ಹೇಳುತ್ತದೆ.ನಂಬಿಕೆಯು ನಿಮ್ಮವಯಸ್ಸು ಏನೇ ಇರಲಿ. ಅದು ನಿಮ್ಮ ಹೃದಯವನ್ನು ಯೌವನದಿಂದಲೂ ಮತ್ತು ಬಲದಲ್ಲೂ ಇರುವಂತೆ ಮಾಡುತ್ತದೆ.
ಕಾಲೇಬನ ಬದ್ಧತೆ.
ಕಾಲೇಬನ ಜೀವನವು ಭಯವನ್ನು ತಿರಸ್ಕರಿಸಲು, ದೇವರನ್ನು ಸಂಪೂರ್ಣವಾಗಿ ನಂಬಲು, ತಾಳ್ಮೆಯಿಂದ ಕಾಯಲು ಮತ್ತು ಆತ್ಮೀಕವಾಗಿ ಬಲವಾಗಿರುವ ಸ್ಥಾನಕ್ಕೆ ನಮ್ಮನ್ನು ಕರೆಯುತ್ತದೆ. ಅವನ ಗೆಲುವು ಕೇವಲ ಭೂಮಿಯನ್ನು ಸ್ವಾಧೀನ ಮಾಡಿಕೊಳ್ಳುವುದರ ಮೇಲೆ ಅಷ್ಟೇ ಇರದೇ ಸಂದೇಹ, ವಿಳಂಬ ಮತ್ತು ನಿರುತ್ಸಾಹದ ಮೇಲೂ ಹೋರಾಡಿ ನಂಬಿಕೆಯನ್ನು ಸ್ವಾಧೀನ ಮಾಡಿಕೊಳ್ಳುವುದನ್ನು ಕಲಿಸುತ್ತದೆ.
ನಾವು ನಮ್ಮ ದೈನಂದಿನ ಜೀವನವನ್ನು ನಡೆಸುವಾಗ, ನಾವು ನಮಗಿರುವ ದೈತ್ಯರನ್ನು ಎದುರಿಸುತ್ತೇವೆ ಆಗ ಅವರನ್ನು ಜಯಿಸಲು, ಕಾಲೇಬನಿಗಿದ್ದಂತ ವಿಭಿನ್ನ ಮನೋಭಾವವನ್ನು ನಾವು ಆಯ್ಕೆ ಮಾಡಿಕೊಳ್ಳಬೇಕು.
Bible Reading: Exodus 17-20
ಪ್ರಾರ್ಥನೆಗಳು
ತಂದೆಯೇ, ಆಶಾವಾದದಲ್ಲಿ ಅಚಲವಾದ, ನಂಬಿಕೆಯಲ್ಲಿ ದೃಢವಾದ, ನಿಮ್ಮ ವಾಗ್ದಾನಗಳ ಅನ್ವೇಷಣೆಯಲ್ಲಿ ತಾಳ್ಮೆಯುಳ್ಳ ಮತ್ತು ನಿಮ್ಮ ಉದ್ದೇಶಕ್ಕೆ ಭಕ್ತಿಯಲ್ಲಿ ಸದಾ ಯೌವನಸ್ಥನಗಿರುವ ಕಾಲೇಬನಲ್ಲಿದ್ದಂತಹ ಆ ವಿಭಿನ್ನ ಆತ್ಮವನ್ನು ಯೇಸುವಿನ ಹೆಸರಿನಲ್ಲಿ ನನಗೆ ಅನುಗ್ರಹಿಸು. ಆಮೆನ್.
Join our WhatsApp Channel
Most Read
● ಕೋಪವನ್ನು ಅರ್ಥಮಾಡಿಕೊಳ್ಳುವುದು● ನಿರಾಶೆಯನ್ನು ಜಯಿಸುವುದು ಹೇಗೆ?
● ನಿಮ್ಮ ಗತಿಯನ್ನು ಬದಲಾಯಿಸಿ
● ದಿನ 01 : 40 ದಿನಗಳ ಉಪವಾಸ ಮತ್ತು ಪ್ರಾರ್ಥನೆ
● ಆತ್ಮೀಕ ಬೆಳವಣಿಗೆಯ ಮೌನ ನಿಗ್ರಹಕರು
● ದಿನ 30:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ.
● ದೈವಿಕ ಅನುಕ್ರಮ - 1
ಅನಿಸಿಕೆಗಳು
