ಅನುದಿನದ ಮನ್ನಾ
ಭೂರಾಜರುಗಳ ಒಡೆಯನು
Sunday, 30th of June 2024
1
0
324
Categories :
ಕ್ರಿಸ್ತನಲ್ಲಿನ ದೈವತ್ವ(Deity of Christ)
"ಮತ್ತು ಆತನ ಸಿಂಹಾಸನದ ಮುಂದಿರುವ ಏಳು ಆತ್ಮಗಳಿಂದ ಮತ್ತು ನಂಬತಕ್ಕ ಸಾಕ್ಷಿಯೂ ಸತ್ತವರೊಳಗಿಂದ ಮೊದಲು ಎದ್ದುಬಂದವನೂ ಭೂರಾಜರ ಒಡೆಯನೂ ಆಗಿರುವ ಯೇಸು ಕ್ರಿಸ್ತನಿಂದ ನಿಮಗೆ ಕೃಪೆಯೂ ಶಾಂತಿಯೂ ಆಗಲಿ. ನಮ್ಮನ್ನು ಪ್ರೀತಿಸುವವನೂ ತನ್ನ ರಕ್ತದ ಮೂಲಕ ನಮ್ಮನ್ನು ಪಾಪಗಳಿಂದ ಬಿಡಿಸಿದವನೂ ನಮ್ಮನ್ನು ರಾಜ್ಯವನ್ನಾಗಿಯೂ."(ಪ್ರಕಟನೆ 1:5)
ಈ ಮೇಲಿನ ದೇವರ ವಾಕ್ಯದಲ್ಲಿ ಕರ್ತನಾದ ಯೇಸು ಕ್ರಿಸ್ತನಿಗೆ ಇರುವ ಮೂರನೇ ಹೆಸರೇನೇಂದರೆ ಭೂ ರಾಜರುಗಳ ಒಡೆಯನು ಎಂಬುದೇ.
ಈ ಲೋಕದಲ್ಲಿ ನಾವೀಗ ಕಾಣುತ್ತಿರುವ ಅಸ್ತವ್ಯಸ್ತ್ಯ ನೋಡುತ್ತಿರುವಾಗ "ಕ್ರಿಸ್ತನು ಭೂರಾಜರ ಒಡೆಯನು" ಎಂದು ನಂಬುವುದು ನಿಜಕ್ಕೂ ಕಷ್ಟಕರವೆನಿಸುತ್ತದೆ. ಇದಕ್ಕೆ ಕಾರಣವೇನೆಂದರೆ ಕ್ರಿಸ್ತನಿಗೆ ಭೂಮಿಯ ಮೇಲೆ ಆಳ್ವಿಕೆ ನಡೆಸುವ ಅಧಿಕಾರವಿದ್ದರೂ ಈ ಸಮಯದಲ್ಲಿ ಆತನು ತನ್ನ ಅಧಿಕಾರವನ್ನು ರಾಜರುಗಳ ಮೇಲೆ ನಡೆಸುತ್ತಿಲ್ಲ.
ಏದೇನ್ ತೋಟದಲ್ಲಿ ಆಧಾಮನು ದೇವರು ಲೋಕದ ಮೇಲೆ ಕೊಟ್ಟ ಅವನಿಗೆ ಕೊಟ್ಟ ತನ್ನ ಅಧಿಕಾರವನ್ನು ಬಿಟ್ಟು ಕೊಟ್ಟಿದ್ದರಿಂದ ಈ ಲೋಕದ ಎಲ್ಲಾ ರಾಜ್ಯಗಳ ಮೇಲೆ ಸೈತಾನನು ತಾತ್ಕಾಲಿಕವಾಗಿ ಕಾನೂನು ಬದ್ಧ ಅಧಿಕಾರವನ್ನು ಪಡೆದುಕೊಂಡನು.
ಈ ಕೆಳಗಿನ ವಚನಗಳ ಬಗ್ಗೆ ಸ್ವಲ್ಪ ದೃಷ್ಟಿ ಇಟ್ಟು ನೋಡಿರಿ
"ಬಳಿಕ ಸೈತಾನನು ಆತನನ್ನು ಮೇಲಕ್ಕೆ ಕರೆದುಕೊಂಡು ಹೋಗಿ ಕ್ಷಣಮಾತ್ರದಲ್ಲಿ ಲೋಕದ ಎಲ್ಲಾ ರಾಜ್ಯಗಳನ್ನು ಆತನಿಗೆ ತೋರಿಸಿ - ಇವೆಲ್ಲವುಗಳ ಅಧಿಕಾರವನ್ನೂ ಇವುಗಳ ವೈಭವವನ್ನೂ ನಿನಗೆ ಕೊಡುವೆನು; ಇದೆಲ್ಲಾ ನನಗೆ ಕೊಟ್ಟದೆ, ಇದನ್ನು ನನ್ನ ಮನಸ್ಸು ಬಂದವನಿಗೆ ಕೊಡುತ್ತೇನೆ;
ನೀನು ನನ್ನ ಮುಂದೆ ಅಡ್ಡಬಿದ್ದರೆ ಇದೆಲ್ಲಾ ನಿನ್ನದಾಗುವದು ಎಂದು ಆತನಿಗೆ ಹೇಳಿದನು. ಅದಕ್ಕೆ ಯೇಸು - ನಿನ್ನ ದೇವರಾಗಿರುವ ಕರ್ತನಿಗೆ ಅಡ್ಡಬಿದ್ದು ಆತನೊಬ್ಬನನ್ನೇ ಆರಾಧಿಸಬೇಕು ಎಂಬದಾಗಿ ಬರೆದದೆ ಎಂದು ಉತ್ತರಕೊಟ್ಟನು."(ಲೂಕ 4:5-8 )
ಆದರೂ ಕರ್ತನಾದ ಯೇಸು ಸೈತಾನನಿಗೆ ನಾವು ಯಾರಿಗೆ ಆರಾಧನೆ ಮಾಡಬೇಕೆಂದು ಸ್ಪಷ್ಟವಾಗಿ ತಿಳಿಸಿ ಹೇಳಿದನು. ಆತನು ಈ ಲೋಕದ ಎಲ್ಲಾ ರಾಜ್ಯಗಳ ಮೇಲೆ ಸೈತಾನನಿಗೆ ಇರುವಂತಹ ಸ್ವಾಯುತ್ತತೆ ಕುರಿತು ಸೈತಾನನೊಂದಿಗೆ ವಿವಾದಿಸಲಿಲ್ಲ
ಕರ್ತನಾದ ಯೇಸು ಶಿಲುಬೆಯ ಮೇಲೆ ತನ್ನ ಕಾರ್ಯವನ್ನು ಮುಗಿಸಿದ ಮೇಲೆ ಸೈತಾನನ ಸ್ವಾಯುತ್ತತೆಯೂ ಕೂಡ ಮುಗಿದು ಹೋಗುತ್ತದೆ ಎಂಬುದನ್ನು ಬಲ್ಲವನಾಗಿದ್ದನು.
(ಯೋಹಾನ 12:31 ನೋಡಿರಿ )
ಕರ್ತನಾದ ಯೇಸು ಸತ್ತವರೊಳಗಿಂದ ಎದ್ದು ಬಂದ ಮೇಲೆ "..ಯೇಸು ಹತ್ತರಕ್ಕೆ ಬಂದು - ಪರಲೋಕದಲ್ಲಿಯೂ ಭೂಲೋಕದಲ್ಲಿಯೂ ಎಲ್ಲಾ ಅಧಿಕಾರವು ನನಗೆ ಕೊಡಲ್ಪಟ್ಟಿದೆ." ಎಂದು ಘೋಷಿಸಿದನು (ಮತ್ತಾಯ 28:18)
ಇಂದು ಕರ್ತನು ಭೂಲೋಕದ ಅರಸರ ಹೃದಯಗಳನ್ನು ನಿಯಂತ್ರಿಸುವವನಾಗಿದ್ದಾನೆ.
" ರಾಜನ ಸಂಕಲ್ಪಗಳು ಯೆಹೋವನ ಕೈಯಲ್ಲಿ ನೀರಿನ ಕಾಲುವೆಗಳಂತೆ ಇವೆ; ತನಗೆ ಬೇಕಾದ ಕಡೆಗೆ ತಿರುಗಿಸುತ್ತಾನೆ."(ಜ್ಞಾನೋಕ್ತಿಗಳು 21:)
ಅದರರ್ಥ ನಾವು ಇಂದು ನಮ್ಮ ದೇಶದಲ್ಲಿ ಆತನ ಚಿತ್ತವು ನೆರವೇರಬೇಕೆಂದೂ ಹಾಗೆಯೇ ನಮ್ಮ ನಾಯಕರು ದೇವರನ್ನು ಹುಡುಕುವರಾಗಬೇಕೆಂದೂ, ಆತನ ಸ್ವರವನ್ನು ಕೇಳುವವರಾಗಬೇಕೆಂದೂ ಪ್ರಾರ್ಥಿಸಬೇಕು. ಹಾಗೆ ಅವರೆಲ್ಲರ ಸುತ್ತಲೂ ದೈವಿಕ ಆಲೋಚಕರು ಇರಬೇಕೆಂದು ಮತ್ತು ಬಹು ಮುಖ್ಯವಾಗಿ ನಮ್ಮ ನಾಯಕತ್ವ ವಹಿಸುವರು ವೈಯಕ್ತಿಕವಾಗಿ ದೇವರನ್ನು ಅರಿತುಕೊಂಡು ಯೇಸುಕ್ರಿಸ್ತನಲ್ಲಿ ಮಾತ್ರ ದೊರಕುವ ರಕ್ಷಣೆಯನ್ನು ಹೊಂದಿಕೊಳ್ಳಬೇಕು ಎಂದು ಪ್ರಾರ್ಥಿಸಬೇಕು.
ಪ್ರಾರ್ಥನೆಗಳು
1. ತಂದೆಯೇ, ಈ ದೇಶದಲ್ಲಿ ವಿವೇಚನಾತ್ಮಕ ಆತ್ಮವನ್ನೂ, ಧೈರ್ಯ ನಂಬಿಕೆ ಮತ್ತು ದೈವೀಕ ಜ್ಞಾನ ಮನಸುಳ್ಳ ನಿನ ಗುಣಗಳನ್ನು ಪ್ರಸಿದ್ಧಿ ಪಡಿಸುವಂತಹ ನಾಯಕರನ್ನು ಎಬ್ಬಿಸು.
2. ತಂದೆಯೇ, ನಾಯಕರುಗಳ ಮನಸ್ಸನ್ನು ತಿರುಗಿಸುವಂತಹ ಹಿಡಿತವನ್ನು ಹೊಂದಿರುವನು ನೀನೊಬ್ಬನೇ; ಆದ್ದರಿಂದ ನಮ್ಮ ಪ್ರಾರ್ಥನೆಗಳನ್ನು ಕೇಳಿ ಅದರಂತೆ ಅವರು ಸರಿಯಾದ ಕಾರ್ಯಗಳನ್ನು ಮಾಡುವಂತೆ ಮಾಡು ಎಂದು ಯೇಸು ನಾಮದಲ್ಲಿ ಪ್ರಾರ್ಥಿಸುತ್ತೇನೆ ತಂದೆಯೇ, ಆಮೆನ್.
2. ತಂದೆಯೇ, ನಾಯಕರುಗಳ ಮನಸ್ಸನ್ನು ತಿರುಗಿಸುವಂತಹ ಹಿಡಿತವನ್ನು ಹೊಂದಿರುವನು ನೀನೊಬ್ಬನೇ; ಆದ್ದರಿಂದ ನಮ್ಮ ಪ್ರಾರ್ಥನೆಗಳನ್ನು ಕೇಳಿ ಅದರಂತೆ ಅವರು ಸರಿಯಾದ ಕಾರ್ಯಗಳನ್ನು ಮಾಡುವಂತೆ ಮಾಡು ಎಂದು ಯೇಸು ನಾಮದಲ್ಲಿ ಪ್ರಾರ್ಥಿಸುತ್ತೇನೆ ತಂದೆಯೇ, ಆಮೆನ್.
Join our WhatsApp Channel
Most Read
● ಭಯದ ಆತ್ಮ● ಕೃಪೆಯ ವಾಹಕರಾಗಿ ಮಾರ್ಪಡುವುದು.
● ದಿನ 38:40ದಿನಗಳ ಉಪವಾಸ ಮತ್ತು ಪ್ರಾರ್ಥನೆ.
● ದಿನ 07:40 ದಿನಗಳು ಉಪವಾಸ ಹಾಗೂ ಪ್ರಾರ್ಥನೆ.
● ಬೇರಿನೊಂದಿಗೆ ವ್ಯವಹರಿಸುವುದು
● ದಿನ 14:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ
● ದೇವರಿಂದ ಒದಗಿದ ಕನಸು
ಅನಿಸಿಕೆಗಳು