ಅನುದಿನದ ಮನ್ನಾ
ಈ ದಿನಮಾನಗಳಲ್ಲಿ ಕಾಣುವ ಅಪರೂಪದ ಸಂಗತಿ
Saturday, 4th of May 2024
2
2
264
Categories :
ನಿಷ್ಠೆ (Loyality)
"ಸ್ನೇಹಿತರೆಂದು ಹೇಳಿಕೊಳ್ಳುವವರು ಬಹುಮಂದಿ; ನಂಬಿಗಸ್ತನಾದ ಸ್ನೇಹಿತನು ಎಲ್ಲಿ ಸಿಕ್ಕುವನು?"ಎಂದು ಸತ್ಯವೇದ ಹೇಳುತ್ತದೆ (ಜ್ಞಾನೋಕ್ತಿಗಳು 20:6)
ನನಗೆ ನೆನಪಿದೆ, ಹಿರಿಯ ಸ್ತ್ರೀಯೊಬ್ಬರಿಗೆ ನಾನು ಅವರ ನಾಯಿಯನ್ನು ಯಾಕಿಷ್ಟು ಪ್ರೀತಿಸುತ್ತಾರೆ ಎಂದು ಕೇಳಿದಾಗಲೆಲ್ಲಾ ಅವರು ಯಾವಾಗಲೂ ಹೇಳುತ್ತಿದ್ದ ಒಂದು ಸಂಗತಿ ಎಂದರೆ " ಮನುಷ್ಯರಿಗಿಂತ ನಾಯಿಗೇ ನಿಷ್ಠೆ ಜ್ಯಾಸ್ತಿ " ಎನ್ನುತ್ತಿದ್ದರು. ಆಕೆಯ ಪ್ರತ್ಯುತ್ತರವು ನನ್ನ ಮನಸ್ಸಿನಲ್ಲಿ ಅಚ್ಚಳಿಯದಂತೆ ಉಳಿದುಬಿಟ್ಟಿದೆ.
ಕಛೇರಿಯಾಗಿರಲಿ (ಕೆಲಸದ ಸ್ಥಳ)ಸಭೆಯಾಗಿರಲಿ, ವ್ಯವಹಾರವಾಗಿರಲಿ, ರಾಜಕೀಯ ವಾಗಿರಲಿ ಅಥವಾ ಕುಟುಂಬವಾಗಿರಲಿ ಒಂದೇ ಒಂದು ಕೊರತೆಯ ಸಂಗತಿ ಎಂದರೆ ನಿಷ್ಠೆ . ನಿಷ್ಠೆ ಎಂಬುದು ಇಂದು ಅಪರೂಪದ ಸಂಗತಿ ಯಾಗಿಬಿಟ್ಟಿದೆ. ಎಷ್ಟೋ ಜನರು ಬರೀ ಮಾತಿನಲ್ಲಿ ನಿಷ್ಠಾವಂತರಾಗಿದ್ದಾರೆ ಆದರೆ ಕೆಲವೇ ಕೆಲವರು ಮಾತ್ರ ಆ ನಿಷ್ಠೆಯನ್ನು ಹೊಂದಿದ್ದಾರೆ.
ಈ ನಿಷ್ಠೆ ಎಂದರೇನು?
ನಿಷ್ಠೆ ಎಂಬುದುರ ಅರ್ಥವು ಕೊಟ್ಟ ಮಾತನ್ನು ತಪ್ಪದಂತೆ ಕಾದುಕೊಳ್ಳುವುದನ್ನು ಮತ್ತು ವಿಶ್ವಾಸವನ್ನೂ ಒಳಗೊಂಡಿದೆ. ಅದು ಎಂತಹ ಪರಿಸ್ಥಿತಿ ಬಂದರೂ ಆ ಮಾತಿನ ಮೇಲೆ ಆಧಾರಾಗೊಳ್ಳುವುದನ್ನು ಒಳಗೊಂಡಿದೆ. ಪ್ರಾಮಾಣಿಕತೆಯಿಂದ ಇರುವುದೆಂದರೆ ನಿಮ್ಮೆಲ್ಲಾ ಸ್ವಂತಾಸಕ್ತಿ, ವೈಯಕ್ತಿಕ ಬೇಕು-ಬೇಡಗಳನ್ನು ಬದಿಗೊತ್ತುವುದಾಗಿದೆ.
ನೀವು ರೂತಳ ಪುಸ್ತಕವನ್ನು ಓದಿ ನೋಡಿದರೆ,ರೂತಳು ತನ್ನ ಬದುಕಿನಲ್ಲಿ ತೆಗೆದು ಕೊಂಡ ಒಂದು ನಿರ್ಣಾಯಕ ನಿರ್ಧಾರವೆಂದರೆ ದೇವರ ಕುರಿತ ಆಕೆ ತೋರಿದ ನಿಷ್ಠೆಯಾಗಿದೆ. ಆಕೆಯು ತನ್ನ ಅತ್ತೆಯಾದ ನೋವೋಮಿಗೆ " ನಿನ್ನ ಜನರೇ ನನ್ನ ಜನರು, ನಿನ್ನ ದೇವರೇ ನನ್ನ ದೇವರು " ಎಂದಳು (ರೂತಳು 1:16). ಆಗಿನ್ನೂ ಅವಳು ಯೌವನಸ್ಥ ಸ್ತ್ರೀ ಯಾಗಿದ್ದಳು. ಆಗಿನ್ನೂ ಆಕೆಯ ಜೀವಿತದಲ್ಲಿ ಯಾವ ಒಳಿತಾದರೂ ಘಟಿಸಿರಲಿಲ್ಲ. ಆಗ ಆಕೆಯು ದೇವರನ್ನು ತಿರಸ್ಕರಿಸಿ ತನ್ನ ತವರುಮನೆಗೆ ಹಿಂದಿರುಗುವ ಎಲ್ಲಾ ಸಾಧ್ಯತೆಯು ಇತ್ತು. ಆದರೂ ಅಂತಹ ಸಮಯದಲ್ಲಿ ಆಕೆ " ನಿನ್ನ ದೇವರೇ ನನ್ನ ದೇವರು" ಎಂದಳು.
ನೀವು ಇನ್ನು ಉಳಿದ ಕಥೆಯನ್ನು ಓದಿ ನೋಡಿದರೆ, ದೇವರು ಆಕೆಯ ನಂಬಿಗಸ್ಥಿಕೆಯನ್ನು ನಾಟಕೀಯವಾಗಿ ಸನ್ಮಾನಿಸಿ ಆಶೀರ್ವಧಿಸಿದ್ದನ್ನು ಕಾಣುವಿರಿ. ಆಕೆಯು ಪುನಃ ಕಟ್ಟಲ್ಪಟ್ಟು ಮೆಸ್ಸಿಯನಾದ -ಕರ್ತನಾದ ಯೇಸು ಕ್ರಿಸ್ತನ ನೇರ ವಂಶಾವಳಿಯಲ್ಲಿ ಹೆಸರಿಸಲ್ಪಟ್ಟಳು.
ಯೇಸುವು ತನ್ನ ಶಿಷ್ಯರನ್ನು ಕಳುಹಿಸಿ ಕೊಡುವಾಗ ಇಬ್ಬಿಬ್ಬಿರಾಗಿ ಕಳುಹಿಸಿ ಕೊಟ್ಟನು (ಮಾರ್ಕ್ 6:7). ಈ ಇಬ್ಬಿಬ್ಬರ ಜೊತೆಗಾರಿಕೆಯು ಅವರು ದೇವರರಾಜ್ಯವನ್ನು ಸಾರಲು, ದೆವ್ವಗಳನ್ನು ಬಿಡಿಸಲು ರೋಗಿಗಳನ್ನು ವಾಸಿ ಮಾಡಲು ಹೊರಟಾಗ ಖಂಡಿತಾವಾಗಿಯೂ ಅವರಲ್ಲಿ ನಿಷ್ಠೆಯನ್ನೂ, ಐಕ್ಯತೆಯನ್ನು ಸ್ನೇಹವನ್ನೂ ಬೆಳೆಸಿರುತ್ತದೆ.
ನೀವು ಪ್ರಾರ್ಥಿಸುವಾಗಲೆಲ್ಲಾ ಇದನ್ನು ನಿಮ್ಮ ಪ್ರಾರ್ಥನಾ ಅಂಶ ವಾಗಿಟ್ಟುಕೊಂಡು ಇತರರೊಂದಿಗಿನ ನಿಮ್ಮ ಸಂಬಂಧಗಳು ನಿಷ್ಠೆಯಿಂದ ಕೂಡಿರಬೇಕೆಂದು ಪ್ರಾರ್ಥಿಸಿರಿ. ಮುಖ್ಯವಾಗಿ ಸರಿಯಾದ ಆದ್ಯತೆ ಯೊಂದಿಗೆ ಆತನಿಗೇ ನಿಷ್ಠೆಯಿಂದ ಇರಬೇಕೆಂದು ಪ್ರಾರ್ಥಿಸಿರಿ.
ಪ್ರಾರ್ಥನೆಗಳು
ತಂದೆಯೇ, ದಿನಾಲೂ ನಿನ್ನ ಶಿಲುಬೆಯನ್ನು ಹೊತ್ತುಕೊಂಡು ನಿನ್ನ ವಾಕ್ಯಕ್ಕನುಸಾರ ನಡೆಯುವಂತೆ ನನಗೆ ಸಹಾಯ ಮಾಡು. ಹಾಗೆಯೇ ನನ್ನ ಸುತ್ತಲಿನ ಜನರೆಲ್ಲಾ ಪ್ರಾಮಾಣಿಕರೇ ಇರುವಂತೆ ಸಹಾಯ ಮಾಡು ಎಂದು ಯೇಸುನಾಮದಲ್ಲಿ ಪ್ರಾರ್ಥಿಸುತ್ತೇನೆ ತಂದೆಯೇ ಆಮೇನ್.
Join our WhatsApp Channel
Most Read
● ದೇವರ ಎಚ್ಚರಿಕೆಗಳನ್ನು ಕಡೆಗಣಿಸಬೇಡಿರಿ● ದೈವೀಕ ಅನುಕ್ರಮ -2
● ನೀವು ಎಷ್ಟು ಜೋರಾಗಿ ಮಾತಾಡ ಬಲ್ಲಿರಿ?
● ದಿನ 26:40ದಿನಗಳ ಉಪವಾಸ ಪ್ರಾರ್ಥನೆ.
● ಶಾಂತಿಯು ನಮ್ಮ ಬಾಧ್ಯತೆಯಾಗಿದೆ.
● ಕರ್ತನ ಆಲೋಚನೆಯನ್ನು ಕೇಳಬೇಕಾದ ಅಗತ್ಯತೆ
● ನಿಮ್ಮನ್ನು ನಡೆಸುತ್ತಿರುವವರು ಯಾರು?
ಅನಿಸಿಕೆಗಳು