ಅನುದಿನದ ಮನ್ನಾ
ದೇವರು ಲೋಕದ ಮೇಲೆ ಎಷ್ಟೋ ಪ್ರೀತಿಯನ್ನಿಟ್ಟು ಕೊಟ್ಟನು
Friday, 21st of June 2024
2
3
173
Categories :
ಪ್ರೀತಿ (Love)
"ದೇವರು ಲೋಕದ ಮೇಲೆ ಎಷ್ಟೋ ಪ್ರೀತಿಯನ್ನಿಟ್ಟು ತನ್ನ ಒಬ್ಬನೇ ಮಗನನ್ನು ಕೊಟ್ಟನು; ಆತನನ್ನು ನಂಬುವ ಒಬ್ಬನಾದರೂ ನಾಶವಾಗದೆ ಎಲ್ಲರೂ ನಿತ್ಯಜೀವವನ್ನು ಪಡೆಯಬೇಕೆಂದು ಆತನನ್ನು ಕೊಟ್ಟನು."(ಯೋಹಾನ 3:16)
ಹಲವು ವರ್ಷಗಳ ಹಿಂದೆ ಸೌತ್ ವೇಲ್ನ ಬೆಟ್ಟಗಳ ನಡುವಲ್ಲಿ ಒಬ್ಬ ಸಣ್ಣ ಮಗುವಿದ್ದ ತಾಯಿಯು ತನ್ನ ಮಗುವಿನೊಂದಿಗೆ ಸಾಗುವಾಗ ಕಣ್ಣು ಕಟ್ಟುವಂತ ಹಿಮಪಾತದಲ್ಲಿ ಸಿಕ್ಕಿಕೊಂಡಳು. ಆ ಹಿಮಪಾತದಿಂದ ತಪ್ಪಿಸಿಕೊಳ್ಳುವಂತ ಪ್ರಕ್ರಿಯೆಯಲ್ಲಿ ತನ್ನ ಪ್ರಾಣವನ್ನೇ ಆಕೆ ಕಳೆದುಕೊಂಡಳು. ಆಶ್ಚರ್ಯವೇನೆಂದರೆ ಆಕೆಯ ಮೃತ ದೇಹವನ್ನು ತೆಗೆಯುವಾಗ ಆಕೆಯು ತನ್ನ ಸುತ್ತಲೂ ಸುತ್ತಿ ಕೊಂಡಿದಂತಹ ಬಟ್ಟೆಯನ್ನು ಕಂಡು ಆ ಬಟ್ಟೆಯನ್ನು ಬಿಚ್ಚಿದರು. ಆ ಬಟ್ಟೆಯನ್ನು ತೆಗೆದು ನೋಡುವಾಗ ಅದರೊಳಗೆ ಅವಳ ಮಗುವಿತ್ತು. ಅದು ಜೀವಂತವಾಗಿತ್ತು ಮತ್ತು ಆ ಹುಡುಗನು ಆರೋಗ್ಯವಾಗಿದ್ದನು. ನೈಜ ವಿಷಯವೇನೆಂದರೆ ಆಕೆಯು ತನ್ನ ದೇಹಕ್ಕೆ ಆ ಮಗುವನ್ನು ತಬ್ಬಿಕೊಂಡು ಅದರ ಮೇಲೆ ತನ್ನ ಬಟ್ಟೆಯನೆಲ್ಲಾ ಆ ಮಗುವಿಗೆ ಸುತ್ತಿದ್ದಳು. ಹಾಗಾಗಿ ತನ್ನ ಜೀವವನ್ನೇ ತನ್ನ ಮಗುವಿಗೆ ನೀಡಿ ಆಕೆಯ ಮಾತೃ ಪ್ರೀತಿಯನ್ನು ಸಾಬೀತುಪಡಿಸಿದಳು.
ಸ್ವಲ್ಪ ವರ್ಷಗಳಾದ ನಂತರ ಆ ಮಗುವಾಗಿದ್ದ - ಡೇವಿಡ್ ಲಿಯೋಡ್ ಜಾರ್ಜ್ ಬೆಳೆದು ದೊಡ್ಡವನಾಗಿ ಮುಂದೆ ಗ್ರೇಟ್ ಬ್ರಿಟನ್ ದೇಶದ ಪ್ರಧಾನಮಂತ್ರಿಯಾದನು. ಇಂಗ್ಲೆಂಡಿನಲ್ಲೇ ಅವ ಗಣ್ಯ ವ್ಯಕ್ತಿ ಎನ್ನುವುದರಲ್ಲಿ ಸಂದೇಹವೇ ಇಲ್ಲ. ಆ ತಾಯಿಯು ಅಂದು ತನ್ನ ಜೀವಿತವನ್ನು ತ್ಯಾಗ ಮಾಡಿ ಆ ಮಗುವನ್ನು ರಕ್ಷಿಸದೆ ಹೋಗಿದ್ದರೆ, ಇಂದು ಇದು ಸಾಧ್ಯವಾಗುತ್ತಿರಲಿಲ್ಲ. ಅದು ಅತ್ಯುನ್ನತ ತ್ಯಾಗ ಪೂರ್ವಕವಾದ ಪ್ರೀತಿ ಆಗಿತ್ತು. ಆಕೆಯು ಕೊಡುವುದರ ಮೂಲಕ ತನ್ನ ಪ್ರೀತಿಯನ್ನು ವ್ಯಕ್ತಪಡಿಸಿದ್ದಳು.
ಅದಕ್ಕೆ ಅನುರೂಪವಾಗಿಯೇ ಒಂದು ದೊಡ್ಡ ದೃಷ್ಟಿಕೋನದಲ್ಲಿ ಯೋಹಾನ 3:16 ದೇವರು ತನ್ನ ಒಬ್ಬನೇ ಮಗನಾದಂತ ಯೇಸು ಕ್ರಿಸ್ತನನ್ನು ನಮಗಾಗಿ ಕೊಡುವ ಮುಖಾಂತರ ತನ್ನ ಅತ್ಯುನ್ನತವಾದ ಪ್ರೀತಿಯನ್ನು ಹೇಗೆ ವ್ಯಕ್ತಪಡಿಸಿದನು ಎಂಬುದನ್ನು ತೋರಿಸುತ್ತದೆ. "ದೇವರು ಲೋಕದ ಮೇಲೆ ಎಷ್ಟೋ ಪ್ರೀತಿಯನ್ನಿಟ್ಟು ತನ್ನ ಒಬ್ಬನೇ ಮಗನನ್ನು ಕೊಟ್ಟನು...". ದೇವರು ತನ್ನ ದೃಷ್ಟಿಗೆ ಅತ್ಯಮೂಲ್ಯವಾದದನ್ನು ಕೊಟ್ಟನು-ಅದು ಆತನ ಮಗನೇ! ಆತನು ತನ್ನಲ್ಲಿದ್ದ ಏನೋ ಒಂದನ್ನು ಕೊಡದೇ ತನ್ನ ಎದೆಯಲ್ಲಿದ್ದ ತನ್ನ ಪ್ರೀತಿಯ ಒಬ್ಬನೇ ಮಗನನ್ನು ಕೊಟ್ಟನು.
ಅದು ಸಾಕಾಗಲಿಲ್ಲ ಎಂಬಂತೆ ಅದೇ ವಾಕ್ಯವು ಇನ್ನೂ ಹೆಚ್ಚಾಗಿ ಹೇಳುವುದೇನೆಂದರೆ ದೇವರು ತನ್ನ ಅಪಾರವಾದ ಪ್ರೀತಿಯನ್ನು ತೋರಿಸಲು ತನ್ನ ಒಬ್ಬನೇ ಮಗನನ್ನು ಕೊಟ್ಟನು. ಆದರೆ ಯಾರ ಪ್ರಯೋಜನಕ್ಕಾಗಿ? ಆತನು ತನ್ನ ಪ್ರಯೋಜನಕ್ಕಾಗಿ ಕೊಡಲಿಲ್ಲ. ಬದಲಾಗಿ ಆತನು ತನ್ನ ಮಗನನ್ನು ಕೊಟ್ಟದ್ದು ನಮ್ಮ ಸಲುವಾಗಿ; ಆತನು ಹಾಗೆ ಕೊಟ್ಟದ್ದರಿಂದ ನಮ್ಮಲ್ಲಿ ಯಾರೂ ಕೂಡ ನಾಶವಾಗದೆ ಪ್ರತಿಯೊಬ್ಬರೂ ನಿತ್ಯ ಜೀವವನ್ನು ಹೊಂದಬೇಕೆಂದು ಕೊಟ್ಟನು.
ಇದು "ನೀವು ಪ್ರೀತಿಸದೆ ಏನನ್ನಾದರೂ ಕೊಡಬಹುದು, ಆದರೆ ನೀವು ಕೊಡಲಾರದೆ ಪ್ರೀತಿಸಲು ಸಾಧ್ಯವಿಲ್ಲ " ಎನ್ನುವ ಆಮಿ ಕಾರ್ಮಿಕೆಲ್ ರವರು ಹೇಳಿದ ಮಾತನ್ನು ಸ್ಪಷ್ಟೀಕರಿಸುತ್ತದೆ. ದೇವರು ತನ್ನ ಪ್ರೀತಿಯನ್ನು ತ್ಯಾಗ ಪೂರ್ವಕವಾಗಿ ಕೊಡುವ ಮುಖಾಂತರ ವ್ಯಕ್ತಪಡಿಸಿದನು. ಆದರದು ತನ್ನ ಹಿತಾಸಕ್ತಿಗೆಂದು ಇರದೇ - ತನ್ನ ಸ್ವಾರ್ಥಕ್ಕಾಗಿ ಇರದೇ ಮತ್ತೊಬ್ಬರ ಒಳಿತಿಗಾಗಿ ಅದನ್ನು ಕೊಟ್ಟು ವ್ಯಕ್ತಪಡಿಸಿದನು. ಆತನು ಬಹಳ ದೂರಕ್ಕೆ ಆಲೋಚಿಸಿ ನನ್ನ ಸಲುವಾಗಿ- ನಿಮ್ಮ ಸಲುವಾಗಿ ನಾವು ನಾಶ ಹೊಂದದೆ ನಿತ್ಯ ಜೀವ ಹೊಂದಬೇಕೆಂದು ಹೀಗೆ ಮಾಡಿದನು. ಅದು ಎಷ್ಟು ಅಮೋಘವಾದ ಪ್ರೀತಿಯಲ್ಲವೇ.
ಇತರರಿಂದ ಪಡೆದುಕೊಳ್ಳುವುದೇ ಪ್ರೀತಿಯಲ್ಲ ಎಂಬುದನ್ನು ದೇವರು ಉದಾಹರಣೆಯಾಗಿ ತೋರಿಸಿದ್ದಾನೆ. ಪ್ರೀತಿಯೆಂದರೆ ನಾವು ಇತರರನ್ನು ತಲುಪುವ ಬೇಕು: ಪ್ರೀತಿ ಕೇವಲ ಭಾವನೆಗೆ ಸೀಮಿತವಾಗಬಾರದು ; ಪ್ರೀತಿ ಕೊಡುವಿಕೆಯನ್ನು ಒಳಗೊಂಡಿರುತ್ತದೆ.
ಪ್ರೀತಿಯು ಅವರು ನಮಗಾಗಿ ಏನು ಮಾಡಬಲ್ಲರು ಎಂಬುದಲ್ಲ ; ಅವರಿಗಾಗಿ ನಾವೇನು ಮಾಡಬಲ್ಲೆವು ಎನ್ನುವುದಾಗಿದೆ. ಪ್ರೀತಿಯು ಇತರರ ಕುರಿತ ಕಾಳಜಿಯನ್ನು ಒಳಗೊಂಡಿದೆ. ಅಂದರೆ ಅವರಿಗೆ ಎಲ್ಲವೂ ಒಳಿತೇ ಆಗಬೇಕು ಎನ್ನುವುದನ್ನು ಒಳಗೊಂಡಿರುತ್ತದೆ.
ಇತರರು ನಿಮಗೆ ಕರೆ ಮಾಡದಿದ್ದರೂ ನೀವು ಅವರಿಗೆ ಕರೆ ಮಾಡಿರಿ. ಅವರು ನಿಮಗಾಗಿ ಪ್ರಾರ್ಥಿಸದಿದ್ದರೂ ನೀವು ಅವರಿಗಾಗಿ ಪ್ರಾರ್ಥಿಸಿರಿ. ಅವರು ತಿರುಗಿ ನಿಮಗೆ ದಯೆ ತೋರಿಸುವುದಿಲ್ಲ ಎಂದು ತಿಳಿದಿದ್ದರೂ ಅವರಿಗೆ ನಿಮ್ಮ ಆಹಾರದಲ್ಲಿ ಭಾಗವನ್ನು ಕಳುಹಿಸಿಕೊಡಿ. ಕರ್ತನು ಎಲ್ಲವನ್ನು ನೋಡುವವನಾಗಿದ್ದಾನೆ
ಇತರರಿಂದ ನಾವೇನನ್ನಾದರೂ ಹೊಂದಿಕೊಳ್ಳಬಹುದು ಎಂದು ಎದುರು ನೋಡುವವರ ಹಾಗೆ ನಾವು ಆಗದೆ ಇರೋಣ. ದೇವರು ತನ್ನ ಮಗನನ್ನು ಕೊಟ್ಟು ತನ್ನ ಪ್ರೀತಿಯನ್ನು ಹೇಗೆ ವ್ಯಕ್ತಪಡಿಸಿದ ಎಂಬುದನ್ನು ನಾವು ನೆನಪಿನಲ್ಲಿಡೋಣ. ನೀವು ನಿಮ್ಮ ಜೀವಿತವನ್ನು ಸಾಗಿಸುತ್ತಿರುವಾಗ ಇತರರಿಗೆ ಆಶೀರ್ವಾದಕರವಾಗಿರುವ ಮೂಲಕ ನಿಮ್ಮ ಪ್ರೀತಿಯನ್ನು ವ್ಯಕ್ತಪಡಿಸಲು ಪ್ರಯತ್ನಿಸಿರಿ.
ಪ್ರಾರ್ಥನೆಗಳು
ಪರಲೋಕದಲ್ಲಿರುವ ನನ್ನ ತಂದೆಯೇ, ನಾನು ನಿತ್ಯ ಜೀವನವನ್ನು ಹೊಂದಿಕೊಳ್ಳಲು ನೀನು ನಿನ್ನ ಮಗನನ್ನೇ ನಮಗಾಗಿ ಕಳಿಸಿಕೊಟ್ಟಿದ್ದಕ್ಕಾಗಿ ನಿನಗೆ ಸ್ತೋತ್ರ. ನಾನೂ ಸಹ ನಿನ್ನ ಈ ಪ್ರೀತಿಯನ್ನು ನಾನು ಕೈ ತೆರೆದು ಕೊಡುವ ಮೂಲಕ ಹಂಚುವಂತೆ ಸಹಾಯ ಮಾಡು. ನಾನು ಇನ್ನೊಬ್ಬರಿಗೆ ದೊಡ್ಡ ಆಶೀರ್ವಾದ ನಿಧಿಯಾಗಿರುವಂತೆ ಯೇಸು ನಾಮದಲ್ಲಿ ನನಗೆ ಸಹಾಯ ಮಾಡು. ಆಮೇನ್.
Join our WhatsApp Channel
Most Read
● ಅಭಿಷೇಕಕ್ಕಿರುವ ಪ್ರಪ್ರಥಮ ಶತೃ● ಕುಟುಂಬಕ್ಕಾಗಿ ಇರುವ ಗುಣಮಟ್ಟದ ಸಮಯ
● ಅನ್ಯ ಭಾಷೆಯಲ್ಲಿ ಪ್ರಾರ್ಥಿಸಿ ಮತ್ತು ಆತ್ಮಿಕವಾದ ನವಚೇತನವನ್ನು ಹೊಂದಿಕೊಳ್ಳಿರಿ
● ನಿಮ್ಮ ದಿನವೇ ನಿಮ್ಮನ್ನು ವ್ಯಾಖ್ಯಾನಿಸುತ್ತದೆ
● ಕಟ್ಟಬೇಕಾದ ಬೆಲೆ
● ಮತ್ತೊಬ್ಬ ಯೇಸು, ಬೇರೊಂದು ಆತ್ಮ, ಮತ್ತು ಬೇರೊಂದು ಸುವಾರ್ತೆ-II
● ಬದಲಾಗಲು ಇನ್ನೂ ತಡವಾಗಿಲ್ಲ
ಅನಿಸಿಕೆಗಳು