ಅನುದಿನದ ಮನ್ನಾ
ಆರಾಧನೆಗೆ ಬೇಕಾದ ಇಂಧನ
Tuesday, 8th of October 2024
2
1
155
Categories :
ದೇವರವಾಕ್ಯ ( Word of God )
"ನಾನು ಆತನನ್ನು ಕಂಡಾಗ ಸತ್ತವನ ಹಾಗೆ ಆತನ ಪಾದಗಳ ಮುಂದೆ ಬಿದ್ದೆನು. ಆತನು ತನ್ನ ಬಲಗೈಯನ್ನು ನನ್ನ ಮೇಲಿಟ್ಟು - ಹೆದರಬೇಡ, ನಾನು ಮೊದಲನೆಯವನೂ ಕಡೆಯವನೂ ಸದಾ ಜೀವಿಸುವವನೂ ಆಗಿದ್ದೇನೆ. ಸತ್ತವನಾದೆನು, ಮತ್ತು ಇಗೋ ಯುಗಯುಗಾಂತರಗಳಲ್ಲಿಯೂ ಬದುಕುವವನಾಗಿದ್ದೇನೆ; ಮರಣದ ಮತ್ತು ಪಾತಾಳದ ಬೀಗದ ಕೈಗಳು ನನ್ನಲ್ಲಿ ಅವೆ."(ಪ್ರಕಟನೆ 1:17-18)
"ಕಟ್ಟಿಗೆಯಿಲ್ಲದಿದ್ದರೆ ಬೆಂಕಿ ಆರುವದು; ಚಾಡಿಕೋರನು ಇಲ್ಲದಿದ್ದರೆ ಜಗಳ ಶಮನವಾಗುವದು."(ಜ್ಞಾನೋಕ್ತಿಗಳು 26:20)
ನಾನು ಪ್ರಾರ್ಥಿಸುತ್ತಿರುವಾಗ ಕರ್ತನನ್ನು ಆರಾಧಿಸುವುದಕ್ಕೂ ಮತ್ತು ಆತನನ್ನು ಪ್ರೀತಿಸುವುದಕ್ಕೂ ಸಮಯ ಕೊಡಬೇಕೆಂದು ಪವಿತ್ರಾತ್ಮನು ಆಗಾಗ ಪ್ರೇರೇಪಿಸುವುದನ್ನು ನಾನು ಅನುಭವಿಸುತ್ತೇನೆ. ಸಾಮಾನ್ಯವಾಗಿ ಯಾವಾಗಲೂ ನಾವು ಸಮ್ಮೇಳನದ ಸಮಯದ ಅಥವಾ ಸಭೆಯ ಸಮಯ ಅಥವಾ ನಮ್ಮ ಅನುಭವಕ್ಕೆ ತಕ್ಕಂತೆ ಆರಾಧನಾ ಸಮಯವನ್ನು ಸೀಮಿತಗೊಳಿಸಿಕೊಳ್ಳುತ್ತೇವೆ. ಒಮ್ಮೆ ಸಮ್ಮೇಳನವು ಮುಗಿದ ಮೇಲೆ/ ಒಮ್ಮೆ ಸಭೆಯು ಮುಗಿದ ಮೇಲೆ, ಆ ಒಂದು ಅಗ್ನಿಯು ಆ ಒಂದು ಉತ್ಸಾಹವು ಕಳೆಗುಂದಲು ಆರಂಭಿಸುತ್ತದೆ.
ನಾನಿದ್ದನ್ನು ಬಹಳ ಸಾರಿ ಚೆನ್ನಾಗಿಯೇ ಅನುಭವಿಸಿದ್ದೇನೆ. ಏಕೆಂದರೆ ನಾವು ಪುನಃ ಆ ಇಂಧನವನ್ನು ತುಂಬಿಸಿಕೊಳ್ಳಲು ವಿಫಲರಾಗಿರುತ್ತೇವೆ. ನಮ್ಮ ಆರಾಧನೆ ಅಷ್ಟು ಸುಲಭವಾಗಿ ನಶಿಸಲು ಇಂಧನದ ಕೊರತೆಯೇ ಮುಖ್ಯ ಕಾರಣವಾಗಿದೆ.
ಆರಾಧನೆಗೆ ಬೇಕಾದ ಇಂಧನ ಯಾವುದು?
ಅಪೋಸ್ತಲನಾದ ಯೋಹಾನನ ಆರಾಧನೆಯನ್ನು ಉತ್ತೇಜನಕರ ಹಾಗೂ ಅಗ್ನಿಮಯವನ್ನಾಗಿ ಮಾಡುತ್ತಿದ್ದದ್ದು ಯಾವುದೆಂದು ನಾವು ಹತ್ತಿರದಿಂದ ಗಮನಿಸಿದರೆ ಅದರ ರಹಸ್ಯ ನಮಗೆ ಪ್ರಕಟವಾಗುತ್ತದೆ! ಇದು ಇತ್ತೀಚೆಗಷ್ಟೇ ಬಂದಂತ ಒಂದು ವಾದ್ಯಗೋಷ್ಠಿ ಇಂದಲ್ಲ ಅಥವಾ ಹೊಸ ಅನುಭವ ಸಮ್ಮೇಳನವೂ ಅಲ್ಲ, ನಿರ್ದಿಷ್ಟ ಆರಾಧನಾ ನಾಯಕನಿಂದಲೋ ಅಥವಾ ಅತ್ಯುತ್ತಮ ಸ್ಪೀಕರ್ನಿಂದಲೂ ಅಥವಾ ಇವೆಲ್ಲವೂ ಇವುಗಳಿಂದಲೋ ಅಲ್ಲ! ಇವೆಲ್ಲವೂ ಒಳ್ಳೆಯದೇ. ನಾನು ಇದನ್ನು ಖಂಡಿತವಾಗಿಯೂ ವಿರೋಧಿಸುತ್ತಿಲ್ಲ. ಆದರೂ ನಾವು ಕರ್ತನನ್ನು ನೋಡುವಾಗ ಆತನು ನಿಜವಾಗಿ ಯಾರಾಗಿದ್ದಾನೆ ಎಂದು ತಿಳಿದುಕೊಂಡಾಗ ನಿಜವಾದ ಆರಾಧನೆಯು ಹುಟ್ಟುತ್ತದೆ.
ಕರ್ತನನ್ನು ನಿಜವಾಗಿ ಯಾರೆಂದು ನೋಡಿದ ಕೆಲವರು ಇದ್ದಾರೆ.
* ಮೋಶೆಯು ಅಡ್ಡ ಬಿದ್ದು ಆರಾಧಿಸಿದನು. (ವಿಮೋಚನಾಕಾಂಡ : 5,8)
* ಯೆಹೋಶವನು ಅಡ್ಡಬಿದ್ದು ಆರಾಧಿಸಿದನು (5:13-15)
* ಎಲ್ಲಾ ಜನರು ಅಡ್ಡ ಬಿದ್ದು ಆತನನ್ನು ಆರಾಧಿಸುವರು.(ಫಿಲಿಪ್ಪಿ 2:10-11)
ನಾವು ನಿಜವಾಗಿಯೂ ದೇವರ ಆರಾಧನೆಗೆ ಪ್ರತಿಕ್ರಿಯಿಸದೆ ಹೋಗುವುದಕ್ಕೆ ಒಂದು ಕಾರಣವಿದೆ. ಅದೇನೆಂದರೆ ಆತನು ನಿಜವಾಗಿ ಯಾರಾಗಿದ್ದಾನೆ ಎಂದು ಆತನನ್ನು ನೋಡುತ್ತಿಲ್ಲ. ಆತನು ಕಾಣುವುದೇ ಆತನನ್ನು ಆರಾಧಿಸುವುದಾಗಿದೆ.
ಆರಾಧನ ಗುಂಪಿನ ನಾಯಕ ಮತ್ತು ಲೇಖಕನೂ ಆಗಿರುವಂತಹ ಮಟ್ ರೆಡ್ ಮ್ಯಾನ್ ಹೇಳುವ ಪ್ರಕಾರ " ಸುರಿಯಲ್ಪಡುತ್ತಿರುವ ದೇವರ ಪ್ರಕಟಣೆಯಲ್ಲಿ ನಾನು ಮಿಂದದೆ ಹೋಗುವುದೇ ಆಗಾಗ ನನ್ನ ಆರಾಧನೆ ಕಳೆಗುಂದಲು ಕಾರಣವಾಗಿರುತ್ತದೆ."
"ಕ್ರಿಸ್ತನ ವಾಕ್ಯವು ನಿಮ್ಮಲ್ಲಿ ಸಮೃದ್ಧಿಯಾಗಿ ವಾಸಿಸಲಿ; ಸಕಲಜ್ಞಾನದಿಂದ ಕೂಡಿದವರಾಗಿ ಒಬ್ಬರಿಗೊಬ್ಬರು ಉಪದೇಶಮಾಡಿಕೊಳ್ಳಿರಿ, ಬುದ್ಧಿಹೇಳಿಕೊಳ್ಳಿರಿ; ಕರ್ತನ ಕೃಪೆಯನ್ನು ನೆನಸಿಕೊಳ್ಳುವವರಾಗಿ ಕೀರ್ತನೆಗಳಿಂದಲೂ ಸಂಗೀತಗಳಿಂದಲೂ ಆತ್ಮಸಂಬಂಧವಾದ ಹಾಡುಗಳಿಂದಲೂ ನಿಮ್ಮ ಹೃದಯಗಳಲ್ಲಿ ದೇವರಿಗೆ ಗಾನಮಾಡಿರಿ."(ಕೊಲೊಸ್ಸೆಯವರಿಗೆ 3:16 )
ನಾವು ಪ್ರತಿದಿನವೂ ದೇವರ ವಾಕ್ಯಕ್ಕೆ ನಮ್ಮ ಜೀವನದಲ್ಲಿ ಸ್ಥಳಕೊಟ್ಟು ಅದು ನಮ್ಮ ಜೀವಿತದಲ್ಲಿ ಪ್ರಭಾವ ಬೀರುವಂತೆ ಅವಕಾಶ ಮಾಡಿಕೊಡುವುದಾದರೆ, ಅದು ನಮಗೆ ದೇವರು ನಿಜವಾಗಿ ಯಾರಾಗಿದ್ದಾನೆ ಎಂಬ ಪ್ರಕಟಣೆಯನ್ನು ತಂದುಕೊಡುತ್ತದೆ. ಇದು ನಮ್ಮನ್ನು ಕೃತಜ್ಞತಾ ಹೃದಯದಿಂದ ಆರಾಧಿಸುವಂತೆ ನಮ್ಮನ್ನು ಮುನ್ನಡೆಸಿ ಕೆಲವೊಮ್ಮೆ ಸ್ವಯಂ ಪ್ರೇರಣೆಯಿಂದ ಪ್ರವಾದನ ಗೀತೆಗಳನ್ನೂ ಹಾಡುವಂತೆ ಆತ್ಮನಲ್ಲಿ ನಡೆಸುತ್ತದೆ.

ಪ್ರಾರ್ಥನೆಗಳು
ಪರಲೋಕದ ತಂದೆಯೇ, ನೀನು ನನ್ನ ಕರ್ತನಾಗಿರುವುದಕ್ಕಾಗಿ ನಿನಗೆ ಸ್ತೋತ್ರ ಸಲ್ಲಿಸುತ್ತೇನೆ. ನನ್ನ ಆರಾಧನೆಗೂ - ಸ್ತುತಿಗೂ ನೀನೇ ಯೋಗ್ಯನ್ನಾಗಿದ್ದೀಯ.
ಯೇಸು ನಾಮದಲ್ಲಿ ಆಮೆನ್. (ಆತನನ್ನು ಆರಾಧಿಸುತ್ತಾ ಕೆಲ ಅಮೂಲ್ಯ ಸಮಯವನ್ನು ಕಳೆಯಿರಿ)

Join our WhatsApp Channel
Most Read
● ಮಳೆಯಾಗುತ್ತಿದೆ● ದೇವರ ಕನ್ನಡಿ
● ಅಂತ್ಯದಿನಗಳ ಕುರಿತು ಪ್ರವಾದನ ಯುಕ್ತ ಗೂಡಾರ್ಥ ವಿವರಣೆ
● ದೇವರ ಆಲಯದಲ್ಲಿರುವ ಸ್ತಂಭಗಳು
● ಹಣವು ಚಾರಿತ್ರ್ಯವನ್ನು ವಿವರಿಸುತ್ತದೆ
● ಆತನ ಬಲದ ಉದ್ದೇಶ.
● ಯೇಸುವಿನ ಕರ್ತತ್ವವನ್ನು ಅರಿಕೆ ಮಾಡುವುದು
ಅನಿಸಿಕೆಗಳು