ಪವಿತ್ರತೆಯು ಕ್ರೈಸ್ತ ನಂಬಿಕೆಯಲ್ಲಿ ಆಳವಾಗಿ ಬೇರೂರಿರುವ ಒಂದು ಪರಿಕಲ್ಪನೆಯಾಗಿದ್ದು, ಇದನ್ನು ತಲುಪಲು ಸಾಧ್ಯವಿಲ್ಲವೆಂದು ತೋರುವ ಉನ್ನತ ಆದರ್ಶವೆಂದು ಪರಿಗಣಿಸಲಾಗುತ್ತದೆ.
ಆದಾಗ್ಯೂ, ಪವಿತ್ರತೆಯು ಎರಡು ಅಂಶಗಳನ್ನು ಹೊಂದಿದೆ ಎಂಬುದನ್ನು ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯ.
1. ಸ್ಥಾನಿಕ ಪವಿತ್ರತೆ (possisional )ಮತ್ತು
2. ವರ್ತನೆಯಲ್ಲಿ(behavioural) ಪವಿತ್ರತೆ
ಈ ಅಂಶಗಳನ್ನು ಆಳವಾಗಿ ಪರಿಶೀಲಿಸೋಣ ಮತ್ತು ದೇವರಲ್ಲಿ ನಂಬಿಕೆಯುಳ್ಳವರ ನಡಿಗೆಗೆ ಇಂದು ಅವು ಏನನ್ನು ಅರ್ಥೈಸುತ್ತವೆ ಎಂಬುದನ್ನು ಕಂಡುಹಿಡಿಯೋಣ.
ಸ್ಥಾನಿಕ ಪವಿತ್ರತೆ ನೀವು ಯೇಸುಕ್ರಿಸ್ತನನ್ನು ನಿಮ್ಮ ಕರ್ತನಾಗಿ ಮತ್ತು ರಕ್ಷಕನಾಗಿ ಸ್ವೀಕರಿಸಿದಾಗ, ನಂಬಲಾಗದ ಏನೋ ಒಂದು ಸಂಭವಿಸುತ್ತದೆ - ಅಲ್ಲಿ ನಿಮ್ಮ ಸ್ಥಾನವು ಬದಲಾಗುತ್ತದೆ. ನೀವು ಇನ್ನು ಮುಂದೆ ದೇವರ ದೃಷ್ಟಿಯಲ್ಲಿ ಪಾಪಿಯಾಗಿ ಕಾಣುವುದಿಲ್ಲ; ಬದಲಾಗಿ, ನೀವು ಪವಿತ್ರರಾಗಿ ಮತ್ತು ನಿರ್ದೋಷಿಯಾಗಿ ಕಾಣುತ್ತೀರಿ.
ಎಫೆಸ 1:4 ಹೇಳುವಂತೆ, "ಆತನು ಜಗದುತ್ಪತ್ತಿಗೆ ಮುಂಚೆಯೇ ಆತನ ದೃಷ್ಟಿಯಲ್ಲಿ ಪವಿತ್ರರೂ ಮತ್ತು ನಿರ್ದೋಷಿಗಳೂ ಆಗಿರಬೇಕೆಂದು ನಮ್ಮನ್ನು ಆತನಲ್ಲಿ ಆರಿಸಿಕೊಂಡನು,." "ನಾನಾ? ಪವಿತ್ರನಾ? ಆದರೆ ನಾನು ಇನ್ನೂ ಪ್ರತಿದಿನ ಪಾಪದೊಂದಿಗೆ ಹೋರಾಡುತ್ತಿದ್ದೇನಲ್ಲಾ!" ಎಂದು ನೀವು ಯೋಚಿಸುತ್ತಿರಬಹುದು ಮತ್ತು ಈ ಹೋರಾಟದಲ್ಲಿ ನೀವು ಒಬ್ಬಂಟಿಯಾಗಿಲ್ಲ; ಇದು ಪ್ರತಿಯೊಬ್ಬ ವಿಶ್ವಾಸಿಯು ಎದುರಿಸುವ ಹೋರಾಟವಾಗಿದೆ.
ಆದರೂ, ಸ್ಥಾನಿಕ ಪವಿತ್ರತೆಯು ಒಂದು ಕೃಪಾವರವಾಗಿದೆಯೇ ಹೊರತು, ನಾವು ಸಂಪಾದಿಸಿಕೊಳ್ಳುವ ವಿಷಯವಲ್ಲ. ಅದು ಕರ್ತನಾದ ಯೇಸು ಕ್ರಿಸ್ತನು ಶಿಲುಬೆಯ ಮೇಲೆ ಮಾಡಿ ಮುಗಿಸಿದ ಯಜ್ಞದ ಮೂಲಕ ದೊರೆತದ್ದಾಗಿದ್ದು, ಇದರ ಮೂಲಕ ದೇವರೇ ನಮ್ಮನ್ನು ಶುದ್ಧೀಕರಿಸಿ, ನಮ್ಮನ್ನು ಪವಿತ್ರರೂ ಮತ್ತು ಪರಿಶುದ್ಧರೂ ಎಂದು ನೋಡುತ್ತಾನೆ.
2 ಕೊರಿಂಥ 5:21 ನಮಗೆ ನೆನಪಿಸುವಂತೆ, " ಪಾಪವನ್ನೇ ಅರಿಯದ ಕ್ರಿಸ್ತ ಯೇಸುವನ್ನು ದೇವರು ನಮಗೋಸ್ಕರ ಪಾಪವನ್ನಾಗಿ ಮಾಡಿದನು. ಹೀಗೆ ಕ್ರಿಸ್ತ ಯೇಸುವಿನಲ್ಲಿ ದೇವರ ನೀತಿಯನ್ನಾಗಿ ದೇವರು ನಮ್ಮನ್ನು ಮಾಡಿದನು."
ವರ್ತನೆಯಲ್ಲಿನ ಪವಿತ್ರತೆ:
ಸ್ಥಾನಿಕ ಪವಿತ್ರತೆ ತತ್ - ಕ್ಷಣವೇ ಆಗುವಂತದ್ದು ಮತ್ತು ನಿತ್ಯವಾದದ್ದು ಆಗಿದೆ ಆದರೆ, ವರ್ತನೆಯಲ್ಲಿ ಬರುವ ಪವಿತ್ರತೆ ಎಂಬುದು ಒಂದು ಪ್ರಯಾಣವಾಗಿದೆ. ಪವಿತ್ರತೆಯ ಈ ಅಂಶವು ನಮ್ಮ ಕಾರ್ಯಗಳು, ಆಯ್ಕೆಗಳು ಮತ್ತು ಜೀವನಶೈಲಿಗೆ ಸಂಬಂಧಿಸಿದೆ. ಉದಾಹರಣೆಗೆ, ಮದುವೆಯ ಸಾದೃಶ್ಯವನ್ನು ತೆಗೆದುಕೊಳ್ಳಿ. ನೀವು ಮದುವೆಯಾದ ದಿನ, ನಿಮ್ಮ ಸ್ಥಿತಿ "ವಿವಾಹಿತರು" ಎಂದು ಬದಲಾಗುತ್ತದೆ. ಆದಾಗ್ಯೂ, ನೀವು ಒಂಟಿಯಾಗಿರುವಂತೆ ಬದುಕುವುದನ್ನು ಮುಂದುವರಿಸಿದರೆ, ನಿಮ್ಮ ನಡವಳಿಕೆಯು ನಿಮ್ಮ ಹೊಸ ಸ್ಥಾನಮಾನಕ್ಕೆ ವಿರುದ್ಧವಾಗಿರುತ್ತದೆ.
ಅದೇ ರೀತಿಯಲ್ಲಿ, ಕ್ರಿಸ್ತನ ರಕ್ತದಿಂದ ಪವಿತ್ರರಾದ ವಿಶ್ವಾಸಿಗಳಂತೆ, ನಮ್ಮ ಕಾರ್ಯಗಳು ನಮ್ಮ ಹೊಸ ಗುರುತನ್ನು ಪ್ರತಿಬಿಂಬಿಸಬೇಕು. "ನಾನು ಪರಿಶುದ್ಧನ್ನಾಗಿರುವುದರಿಂದ ನೀವೂ ಪರಿಶುದ್ಧರಾಗಿರ್ರಿ." ಎಂದು1 ಪೇತ್ರ 1:16 ಹೇಳುತ್ತದೆ. ಕ್ರಿಸ್ತನಲ್ಲಿ ಈಗಾಗಲೇ ನಮ್ಮೊಳಗಿರುವ ಪವಿತ್ರತೆಯಲ್ಲಿ ಬದುಕಲು ಇದು ನಮಗೆ ದೇವರ ಆಜ್ಞೆಯಾಗಿದೆ.
ಸ್ಥಾನ ಮತ್ತು ನಡವಳಿಕೆಯ ನಡುವಿನ ಸಂಪರ್ಕ ಕಡಿತ
"ನಿದ್ರೆ ಮಾಡುವುದನ್ನು" ಮುಂದುವರಿಸುವ ವಿವಾಹಿತ ವ್ಯಕ್ತಿಯು ತಮ್ಮ ವೈವಾಹಿಕ ಸ್ಥಿತಿಗೆ ವಿರುದ್ಧವಾಗಿರುವಂತೆಯೇ, ಪಾಪದಲ್ಲಿ ಮುಂದುವರಿಯುವ ಕ್ರೈಸ್ತನು ಅವರ ಸ್ಥಾನಿಕ ಪವಿತ್ರತೆಗೆ ವಿರುದ್ಧವಾಗಿರುತ್ತಾನೆ. ಅಪೊಸ್ತಲ ಪೌಲನು ರೋಮನ್ನರು 6:1-2 ರಲ್ಲಿ ಈ ಸಂಪರ್ಕ ಕಡಿತವನ್ನು ಉದ್ದೇಶಿಸಿ, "ಹಾಗಾದರೆ ಏನು ಹೇಳೋಣ? ಕೃಪೆಯು ಹೆಚ್ಚಾಗುವಂತೆ ಪಾಪ ಮಾಡುತ್ತಲೇ ಇರಬೇಕೇ? ಖಂಡಿತ ಇಲ್ಲ! ನಾವು ಪಾಪಕ್ಕೆ ಸತ್ತವರಾಗಿರುವಾಗ; ಇನ್ನು ಮುಂದೆ ಅದರಲ್ಲಿ ಹೇಗೆ ಬದುಕಬಲ್ಲೆವು?" ಎಂದು ಕೇಳುತ್ತಾನೆ.
ಎರಡನ್ನೂ ಸಮನ್ವಯ ಗೊಳಿಸಬೇಕು.
ನಮ್ಮ ನಡವಳಿಕೆಯ ಪವಿತ್ರತೆಯನ್ನು ನಮ್ಮ ಸ್ಥಾನಿಕ ಪವಿತ್ರತೆಯೊಂದಿಗೆ ಸಮನ್ವಯಗೊಳಿಸುವಂತದ್ದು ನಮ್ಮ ಗುರಿಯಾಗಿರಬೇಕು. ಇದು ಪರಿಪೂರ್ಣತೆಯನ್ನು ಸಾಧಿಸುವುದರ ಕುರಿತಾಗಿ ಅಲ್ಲ, ಬದಲಿಗೆ ನಂಬಿಕೆಯ ಮೂಲಕ ಈಗಾಗಲೇ ನಮ್ಮಲ್ಲಿರುವ ಕ್ರಿಸ್ತನಂತಹ ಗುಣಲಕ್ಷಣಗಳನ್ನು ಸಾಕಾರಗೊಳಿಸಲು ಶ್ರದ್ಧೆಯಿಂದ ಶ್ರಮಿಸುವುದರ ಕುರಿತಾಗಿರುತ್ತದೆ.
ಗಲಾತ್ಯ 5:22-23ದಲ್ಲಿ ಹೇಳಿರುವ "ಆತ್ಮನ ಫಲ" - ಪ್ರೀತಿ, ಸಂತೋಷ, ಸಮಾಧಾನ, ಸಹಿಷ್ಣುತೆ, ದಯೆ, ಒಳ್ಳೆಯತನ, ನಂಬಿಗಸ್ತಿಕೆ, ಸೌಮ್ಯತೆ ಮತ್ತು ಸ್ವಯಂ ನಿಯಂತ್ರಣ - ಇವುಗಳನ್ನು ನಾವು ಪವಿತ್ರಾತ್ಮನಿಗೆ ಸಲ್ಲಿಸಿದಾಗ ನಮ್ಮ ಜೀವನದಲ್ಲಿ ಸ್ವಾಭಾವಿಕವಾಗಿ ಹೊರಹೊಮ್ಮಬೇಕಾದ ಗುಣಗಳಾಗಿ ವಿವರಿಸುತ್ತದೆ.
ವಿಫಲವಾಗದ ಕೃಪೆ
ಅದೃಷ್ಟವಶಾತ್, ನಾವು ಎಡವಿದಾಗಲೂ - ಮತ್ತೆ ಸರಿ ಪಡಿಸಿಕೊಳ್ಳಲು -ನಮಗೆ ದೇವರ ಕೃಪೆ ಸಾಕಾದದು. "ನಾವು ನಮ್ಮ ಪಾಪಗಳನ್ನು ಒಪ್ಪಿಕೊಂಡರೆ, ಆತನು ನಂಬಿಗಸ್ತನೂ ನೀತಿವಂತನೂ ಆಗಿರುವುದರಿಂದ ನಮ್ಮ ಪಾಪಗಳನ್ನು ಕ್ಷಮಿಸಿ ಎಲ್ಲಾ ಅನೀತಿಯಿಂದ ನಮ್ಮನ್ನು ಶುದ್ಧೀಕರಿಸುತ್ತಾನೆ." ಎಂದು1 ಯೋಹಾನ 1:9 ನಮಗೆ ಭರವಸೆ ನೀಡುತ್ತದೆ.
ಆದರೆ ಕೃಪೆಯು ಪಾಪ ಮಾಡಲು ಪರವಾನಗಿಯಾಗಿರಬಾರದು; ಬದಲಿಗೆ, ಅದು ದೇವರನ್ನು ಪ್ರತಿದಿನ ಹೆಚ್ಚು ಸಂಪೂರ್ಣವಾಗಿ ಗೌರವಿಸಲು ನಮ್ಮನ್ನು ಪ್ರೇರೇಪಿಸಬೇಕು. ಯಾವಾಗಲೂ ನೆನಪಿಡಿ, ಪವಿತ್ರತೆಯು ದೋಷರಹಿತ ಪರಿಪೂರ್ಣತೆಯ ಸ್ಥಿತಿಯಲ್ಲ ಆದರೆ ಪ್ರತಿದಿನ ಕ್ರಿಸ್ತನಂತೆ ಆಗುವ ಪ್ರಯಾಣ. ಸ್ಥಾನಿಕ ಪವಿತ್ರತೆಯ ಮೂಲಕ, ನಾವು ಈಗಾಗಲೇ ಪ್ರತ್ಯೇಕರಾಗಿದ್ದೇವೆ; ವರ್ತನೆಯ ಪವಿತ್ರತೆಯ ಮೂಲಕ, ನಾವು ಈ ದೈವಿಕ ಗುರುತನ್ನು ಜಗತ್ತಿನಲ್ಲಿ ಜೀವಿಸಲು ಸಮರ್ಥರಾಗುತ್ತೇವೆ. ಈ ಎರಡೂ ಅಂಶಗಳು ಹೊಂದಿಕೊಂಡಾಗ, ನಾವು ಕ್ರಿಸ್ತನ ಪರಿಣಾಮಕಾರಿ ರಾಯಭಾರಿಗಳಾಗುತ್ತೇವೆ ಮತ್ತು ನಮ್ಮ ಜೀವನವು ಆತನ ಕೃಪೆಯ ಪರಿವರ್ತಕ ಶಕ್ತಿಗೆ ಸಾಕ್ಷಿಯಾಗುತ್ತದೆ.
Bible Reading: Matthew 10-12
ಪ್ರಾರ್ಥನೆಗಳು
ಪ್ರತಿಯೊಂದು ಪ್ರಾರ್ಥನಾ ಕ್ಷಿಪಣಿಯನ್ನು ನಿಮ್ಮ ಹೃದಯದಿಂದ ಬರುವವರೆಗೆ ಪುನರಾವರ್ತಿಸಿ. ನಂತರ ಮಾತ್ರ ಮುಂದಿನ ಪ್ರಾರ್ಥನಾ ಕ್ಷಿಪಣಿಗೆ ಹೋಗಿ. ಆತುರಪಡಬೇಡಿ.
1. ಪರಲೋಕದ ತಂದೆಯೇ, ನಿನ್ನ ಮಗನಾದ ಯೇಸು ಕ್ರಿಸ್ತನ ಯಜ್ಞದ ಮೂಲಕ ನೀನು ನನಗೆ ನೀಡಿರುವ ಸ್ಥಾನಿಕ ಪವಿತ್ರತೆಗಾಗಿ ನಾನು ನಿನಗೆ ಸ್ತೋತ್ರ ಸಲ್ಲಿಸುತ್ತೇನೆ. ಶತ್ರುವಿನ ಪ್ರತಿಯೊಂದು ಕುತಂತ್ರದ ವಿರುದ್ಧ ನನ್ನ ಗುರಾಣಿಯಾಗಿ ನೀನಿರುವುದರಿಂದ ಈ ಪವಿತ್ರತೆಯನ್ನು ನಾನು ಘೋಷಿಸುತ್ತೇನೆ. (ಎಫೆಸ 6:16) ನನ್ನ ಸ್ಥಾನವನ್ನು ನಿನ್ನ ದೃಷ್ಟಿಯಲ್ಲಿ ಪವಿತ್ರ ಮತ್ತು ನಿರ್ದೋಷಿ ಎಂದು ನಾನು ಯೇಸುನಾಮದಲ್ಲಿ ಗುರುತಿಸಿಕೊಳ್ಳುತ್ತೇನೆ. .
2. ದೇವರೇ, ನೀನು ಪರಿಶುದ್ನಾಗಿರುವುದರಿಂದ ನಾನೂ ಪರಿಶುದ್ಧನಾಗಿರಬೇಕೆಂದು ನಿನ್ನ ವಾಕ್ಯವು ನನಗೆ ಆಜ್ಞಾಪಿಸುತ್ತದೆ (1 ಪೇತ್ರ 1:16). ನನ್ನ ನಡವಳಿಕೆಗಳು ಮತ್ತು ಕ್ರಿಯೆಗಳನ್ನು ಕ್ರಿಸ್ತನಲ್ಲಿರುವ ನನ್ನ ಪವಿತ್ರ ಸ್ಥಾನದೊಂದಿಗೆ ಸಮನ್ವಯಗೊಳಿಸಿಕೊಳ್ಳಲು ನನಗೆ ಸಹಾಯ ಮಾಡಿ. ಶತ್ರುವಿಗೆ ನೆಲೆಯನ್ನು ನೀಡುವ ಯಾವುದಾದರೂ ನನ್ನೊಳಗಿದ್ದರೆ ನನ್ನ ಜೀವನದಿಂದ ಯೇಸುನಾಮದಲ್ಲಿ ಅದನ್ನು ಬೇರುಸಹಿತ ಕಿತ್ತುಹಾಕಿ.ಆಮೆನ್!
Join our WhatsApp Channel
Most Read
● ಯಜಮಾನನ ಬಯಕೆ● ಅತ್ಯುನ್ನತವಾದ ರಹಸ್ಯ
● ಸರಿಯಾದ ಜನರೊಂದಿಗೆ ಸಹವಾಸ
● ಮಾತಿನಲ್ಲಿರುವ ಶಕ್ತಿ
● ಮನಃಪೂರ್ವಕ ಹುಡುಕಾಟ
● ನಿರಾಶೆಯನ್ನು ಜಯಿಸುವುದು ಹೇಗೆ?
● ಜೀವನದ ದೊಡ್ಡ ಬಂಡೆಗಳನ್ನು ಗುರುತಿಸುವುದು ಮತ್ತು ಆದ್ಯತೆ ನೀಡುವುದು
ಅನಿಸಿಕೆಗಳು
