english हिंदी मराठी తెలుగు മലയാളം தமிழ் Contact us ನಮ್ಮನ್ನು ಸಂಪರ್ಕಿಸಿ ಸ್ಪೋರ್ಟಿಫೈ ನ್ನು ಆಲಿಸಿರಿ ಸ್ಪೋರ್ಟಿಫೈ ನ್ನು ಆಲಿಸಿರಿ Download on the App StoreiOS ನಲ್ಲಿ ಆಪ್ ನ್ನು ಡೌನ್ಲೋಡ್ ಮಾಡಿ Get it on Google Play ಆಂಡ್ರಾಯ್ಡ್ ನಲ್ಲಿ ಆಪ್ ನ್ನು ಡೌನ್ಲೋಡ್ ಮಾಡಿ
 
ಲಾಗಿನ್
ಆನ್ಲೈನ್ ಮೂಲಕ ಕಾಣಿಕೆ ನೀಡಲು
ಲಾಗಿನ್
  • ಮೂಲತಾಣ
  • ಕಾರ್ಯಕ್ರಮಗಳು
  • ನೇರಪ್ರಸಾರ
  • ದೂರದರ್ಶನ
  • ನೋಹಾಟ್ಯೂಬ್
  • ಸ್ತೋತ್ರಗಳು
  • ಸುದ್ದಿಗಳು
  • ಮನ್ನಾ
  • ಪ್ರಾರ್ಥನೆಗಳು
  • ಅರಿಕೆಗಳು
  • ಕನಸುಗಳು
  • ವಿದ್ಯುನ್ಮಾನ -ಪುಸ್ತಕಗಳು
  • ವ್ಯಾಖ್ಯಾನ
  • ಶ್ರದ್ದಾಂಜಲಿ
  • ಓಯಸಿಸ್
  1. ಮೂಲತಾಣ
  2. ಅನುದಿನದ ಮನ್ನಾ
  3. ಹೆಚ್ಚು ಪರಿಣಾಮಕಾರಿ ಜನರ 9 ಅಭ್ಯಾಸಗಳು: ಅಭ್ಯಾಸ ಸಂಖ್ಯೆ 9
ಅನುದಿನದ ಮನ್ನಾ

ಹೆಚ್ಚು ಪರಿಣಾಮಕಾರಿ ಜನರ 9 ಅಭ್ಯಾಸಗಳು: ಅಭ್ಯಾಸ ಸಂಖ್ಯೆ 9

Sunday, 18th of January 2026
2 2 63
Categories : ಹೆಚ್ಚು ಪರಿಣಾಮಕಾರಿ ಜನರ 9 (9 Habit of Highly Effective people)
"ಶ್ರೇಷ್ಠ ಹೋರಾಟವನ್ನು ಮಾಡಿದ್ದೇನೆ, ನನ್ನ ಓಟವನ್ನು ಕಡೆಗಾಣಿಸಿದ್ದೇನೆ, ಕ್ರಿಸ್ತನಂಬಿಕೆಯನ್ನು ಕಾಪಾಡಿಕೊಂಡಿದ್ದೇನೆ;  (2 ತಿಮೊಥೆಯ 4:7) 

ಹೆಚ್ಚು ಪರಿಣಾಮಕಾರಿ ಜನರನ್ನು ಅವರು ಹೇಗೆ ಪ್ರಾರಂಭಿಸಿದರು ಎಂಬುದರ ಮೇಲೆ ನಿರ್ಣಯಿಸಲಾಗುವುದಿಲ್ಲ, ಆದರೆ ಅವರು ಹೇಗೆ ತಮ್ಮ ಕಾರ್ಯ ಮಾಡಿ ಮುಗಿಸಿದರು ಎಂಬುದರ ಮೇಲೆ ನಿರ್ಣಯಿಸಲಾಗುತ್ತದೆ. ಬೈಬಲ್ ಸಹಿಷ್ಣುತೆಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುತ್ತದೆ, ಏಕೆಂದರೆ ಆರಂಭದಲ್ಲಿಯೇ ದೈವೀಕ ಕರೆ ಸಾಬೀತಾಗುವುದಿಲ್ಲ - ಅದು ಕಡೆಯಲ್ಲಿ ದೃಢೀಕರಿಸಲ್ಪಡುತ್ತದೆ. ಅನೇಕ ಜನರು ದರ್ಶನ, ಅಭಿಷೇಕ ಮತ್ತು ಅವಕಾಶಗಳನ್ನು ಪಡೆಯುತ್ತಾರೆ, ಆದರೆ ಕೆಲವರು ಮಾತ್ರ ಜೀವನದ ಪ್ರತಿಯೊಂದು ಸಮಯದಲ್ಲೂ ವಿಧೇಯರು, ನಿಷ್ಠಾವಂತರು ಮತ್ತು ಪರಿಶುದ್ಧರಾಗಿ ಉಳಿಯುತ್ತಾರೆ. 

ದೇವರ ಆರ್ಥಿಕತೆಯಲ್ಲಿ, ಉತ್ತಮವಾಗಿ ಮುಗಿಸುವಂತದ್ದೇ ಯಶಸ್ಸು.

1. ಪ್ರಾರಂಭಿಸುವುದು ಸಾಮಾನ್ಯ ಸಂಗತಿ; ಮುಗಿಸುವುದೇ ದುಬಾರಿಯಾದದ್ದು.

ಬೈಬಲ್‌ನಲ್ಲಿ ಚೆನ್ನಾಗಿ ಪ್ರಾರಂಭಿಸಿದರೂ ಚೆನ್ನಾಗಿ ಮುಗಿಸದ ಅನೇಕ ಜನರ ಉದಾಹರಣೆಗಳಿವೆ. ಸೌಲನು ದೀನತೆ ಮತ್ತು ದೇವರ ಕೃಪೆಯಿಂದ ತನ್ನ ಪ್ರಯಾಣವನ್ನು ಪ್ರಾರಂಭಿಸಿದನು, ಆದರೆ ನಂತರ ಅವನು ಅವಿಧೇಯನಾಗಿ ಮತ್ತು ಅಸುರಕ್ಷಿತನಾದನು. 

ದೇಮನು ಪೌಲನೊಂದಿಗೆ ನಿಕಟವಾಗಿ ಸೇವಕಾರ್ಯ ಆರಂಭಿಸಿದನು ಆದರೆ ಅವನು ಈ ಲೋಕದ ವಿಷಯಗಳನ್ನು ಹೆಚ್ಚು ಪ್ರೀತಿಸಿದ್ದರಿಂದ ಕೊನೆಗೆ ಅವನನ್ನು ಬಿಟ್ಟು ಹೊರಟುಹೋದನು. ಆದರೆ, ಕಾಲೇಬನು ತುಂಬಾ ಭಿನ್ನನಾಗಿದ್ದನು. ಎಂಬತ್ತೈದನೇ ವಯಸ್ಸಿನಲ್ಲಿಯೂ "ನಾನು ಆಗಿದ್ದಂತೆಯೇ ಈಗಲೂ ಬಲಶಾಲಿಯಾಗಿದ್ದೇನೆ" ಎಂದು ಅವನು ಆತ್ಮವಿಶ್ವಾಸದಿಂದ ಹೇಳಿದನು. ಇದಕ್ಕೆ ಕಾರಣ ಅವನು ಹಿಂಜರಿಯದೆ ಕರ್ತನನ್ನು ಸಂಪೂರ್ಣವಾಗಿ ಅನುಸರಿಸಿದ್ದು.

ಪ್ರಾರಂಭಿಸಲು ಉತ್ಸಾಹ ಇದ್ದರೆ ಸಾಕು, ಆದರೆ  ಹಿಡಿದ ಕಾರ್ಯ ಚೆನ್ನಾಗಿಮಾಡಿ ಮುಗಿಸಲು ಸಹಿಷ್ಣುತೆ ಬೇಕು ಎಂಬ ಈ ಸತ್ಯವನ್ನು ಹೆಚ್ಚು ಪರಿಣಾಮಕಾರಿಯಾದ ಜನರು  ಅರ್ಥಮಾಡಿಕೊಳ್ಳುತ್ತಾರೆ.


2. ಸಹಿಷ್ಣುತೆ ಒಂದು ಆತ್ಮೀಕ ಅವಶ್ಯಕತೆ.

"ಕಡೇವರೆಗೂ ತಾಳಿಕೊಳ್ಳುವವನೇ ರಕ್ಷಿಸಲ್ಪಡುವನು

”ಬೈಬಲ್ ಇದರ ಬಗ್ಗೆ ಬಹಳ ಸ್ಪಷ್ಟವಾಗಿದೆ.(ಮತ್ತಾಯ 24:13). 

ತಾಳ್ಮೆ ಎಂದರೆ ಕೇವಲ ಬದುಕುಳಿಯುವುದು ಅಥವಾ ಮೌನವಾಗಿ ತಡೆದಿಟ್ಟುಕೊಳ್ಳುವುದು ಎಂದಲ್ಲ. ಜೀವನವು ಕಷ್ಟಕರವಾದಾಗಲೂ ಮತ್ತು ಒತ್ತಡ ಹೆಚ್ಚಾದಾಗಲೂ ನಂಬಿಕೆ, ಪವಿತ್ರತೆ ಮತ್ತುವಿಧೇಯತೆಯಲ್ಲಿ ನಡೆಯುವುದನ್ನು ಇದು ಅರ್ಥೈಸುತ್ತದೆ. 
ವೆಚ್ಚವನ್ನು ಲೆಕ್ಕಿಸದೆ ಮುಂದುವರಿಯುವುದು ಸ್ಥಿರವಾದ ನಿರ್ಧಾರವಾಗಿದೆ. 

ಇಬ್ರಿಯರ ಪುಸ್ತಕವು ವಿಶ್ವಾಸಿಗಳನ್ನು ಪ್ರೋತ್ಸಾಹಿಸುತ್ತದೆ

“ನಮ್ಮ ಮುಂದೆ ಇಡಲಾದ ಓಟವನ್ನು ಸ್ಥಿರ ಚಿತ್ತ ದಿಂದ ಓಡೋಣ”(ಇಬ್ರಿಯ 12:1). 

ಓಟವನ್ನು ದೇವರು ಈಗಾಗಲೇ ನಿಗದಿಪಡಿಸಿದ್ದಾನೆ ಎಂಬುದನ್ನು ಇಲ್ಲಿ ಗಮನಿಸಿ. ನೀವು ನಿರ್ದೇಶನ ಅಥವಾ ಉದ್ದೇಶವಿಲ್ಲದೆ ಓಡುತ್ತಿಲ್ಲ. ದೇವರು ನಿಮ್ಮ ಮಾರ್ಗವನ್ನು ಈಗಾಗಲೇ ಗುರುತಿಸಿದ್ದಾನೆ. ಬೇಗನೆ ಮಾಡಿಮುಗಿಸುವುದು ದೀನತೆಯಲ್ಲ - ಅದು ಅವಿಧೇಯತೆ. ಕೊನೆಯವರೆಗೂ ನಾವು ನಂಬಿಗಸ್ತರಾಗಿರಬೇಕೆಂದು ದೇವರು ನಿರೀಕ್ಷಿಸುತ್ತಾನೆ. 

ಹೆಚ್ಚು ಪರಿಣಾಮಕಾರಿ ಜನರು ಇದನ್ನು ಅರ್ಥಮಾಡಿಕೊಳ್ಳುತ್ತಾರೆ. ಅವರು ಸುಲಭವಾಗಿ ದಣಿದುಹೋಗುವುದಿಲ್ಲ ಅಥವಾ ಬಿಟ್ಟುಕೊಡುವುದಿಲ್ಲ. ಅವರು ಆತ್ಮೀಕವಾಗಿ ಹೆಜ್ಜೆ ಹಾಕುತ್ತಾರೆ. ಅವರು ಪ್ರಾರ್ಥನೆ, ವಾಕ್ಯಕ್ಕಾಗಿ ಸಮಯ ನೀಡುತ್ತಾರೆ, ಸರಿಯಾದ ವಿಶ್ರಾಂತಿ, ಹೊಣೆಗಾರಿಕೆ ಮತ್ತು ಸ್ಥಿರವಾದ ವಿಧೇಯತೆಯ ಮೂಲಕ ಶಕ್ತಿಯನ್ನು ಬೆಳೆಸಿಕೊಳ್ಳುತ್ತಾರೆ. ಕಾಲಾನಂತರದಲ್ಲಿ, ಈ ಆತ್ಮೀಕ ತ್ರಾಣವು ಅವರ ಓಟವನ್ನು ಬಲವಾಗಿ ಮುಗಿಸಲು ಸಹಾಯ ಮಾಡುತ್ತದೆ.

3. ಸಮಯ ಬದಲಾಗುತ್ತವೆ, ಆದರೆ ನಿಯೋಜನೆ ಉಳಿಯುತ್ತದೆ.

ಸಮಯವು ಬದಲಾಗುವುದರಿಂದ ಅನೇಕರು ಬಿಟ್ಟುಬಿಡುತ್ತಾರೆ. ಆದರೆ ವಿಧಾನಗಳು ಬದಲಾದರೂ, ನಿಯೋಜನೆ ಉಳಿಯುತ್ತದೆ ಎಂಬುದಾಗಿ ಧರ್ಮಗ್ರಂಥವು ಬೋದಿಸುತ್ತದೆ. ಪೌಲನು ಜನಸಂದಣಿ ಮಧ್ಯದಲ್ಲಿ ಇದ್ದಾಗಲೂ ಅಥವಾ ಜೈಲಿನಲ್ಲಿ ಇದ್ದಾಗಲೂ ಬೋಧಿಸುವುದನ್ನು ಬಿಡಲಿಲ್ಲ(ಫಿಲಿಪ್ಪಿ 1:12–14). 
ಯೇಸು ತನ್ನ ಮುಂದೆ ಇಟ್ಟಿದ್ದ ಸಂತೋಷಕ್ಕಾಗಿ ಶಿಲುಬೆಯನ್ನು ಸಹಿಸಿಕೊಂಡನು (ಇಬ್ರಿಯ 12:2). ನಿತ್ಯತ್ವದ ಮೇಲಿನ ದೃಷ್ಟಿಕೋನವು ಸಹಿಷ್ಣುತೆಯನ್ನು ಸಬಲಗೊಳಿಸಿತು. 

ಹೆಚ್ಚು ಪರಿಣಾಮಕಾರಿಯಾದ ವಿಶ್ವಾಸಿಗಳು ಕಷ್ಟವನ್ನು ತ್ಯಾಗ ಎಂದು ಅರ್ಥೈಸಿಕೊಳ್ಳುವುದಿಲ್ಲ.  ಸಾಮಾನ್ಯವಾಗಿ  ಇನ್ನೇನು ಪೂರ್ಣಗೊಳ್ಳುವ ಸಮೀಪದಲ್ಲಿ ಪ್ರತಿರೋಧವು ತೀವ್ರಗೊಳ್ಳುತ್ತದೆ ಎಂಬುದಾಗಿ ಅವರು ಅರ್ಥಮಾಡಿಕೊಳ್ಳುತ್ತಾರೆ.

4. ಹಿಡಿದ ಕಾರ್ಯ ಮಾಡಿ ಮುಗಿಸಲು ಹೃದಯವನ್ನು ಕಾಪಾಡಿಕೊಳ್ಳುವುದು ಅಗತ್ಯ.

“ನಾನು ಹೋದ ನಂತರ ಕ್ರೂರ ತೋಳಗಳು ಬರುತ್ತವೆ” ಎಂದು ಪೌಲನು ಎಫೆಸದ ಹಿರಿಯರಿಗೆ ಎಚ್ಚರಿಸಿದನು,  (ಅ. ಕೃ 20:29). 

ಜಾಗರೂಕತೆಯನ್ನು ಸಡಿಲಗೊಳ್ಳುವುದರಿಂದ ಅನೇಕರು ಕಡೆ ಕಡೆಯಲ್ಲಿ ವಿಫಲರಾಗಿಬಿಡುತ್ತಾರೆ. ಸಂಸೋನನ ಶಕ್ತಿ ಉಳಿದಿತ್ತು, ಆದರೆ ಅವನ ಶಿಸ್ತು ಸವೆದುಹೋಯಿತು (ನ್ಯಾಯಸ್ತಾಪಕರು 16). 

ಹೆಚ್ಚು ಪರಿಣಾಮಕಾರಿ ಜನರು ಕೊನೆಯ ಉಸಿರಿನವರೆಗೂ ಸಿದ್ಧಾಂತ, ಗುಣ ಮತ್ತು ಭಕ್ತಿಯನ್ನು ಕಾಪಾಡಿಕೊಳ್ಳುತ್ತಾರೆ. ಅವರು ದೀರ್ಘಾಯುಷ್ಯದ ಕಾರಣ ಪವಿತ್ರತೆಯನ್ನು ಕಡೆಗಣಿಸುವುದಿಲ್ಲ. ಅವರು ಸಮಗ್ರತೆಯನ್ನು ಸಂಪೂರ್ಣವಾಗಿ ಪೂರ್ಣಗೊಳಿಸುತ್ತಾರೆ.

5. ನಂಬಿಗಸ್ತಿಕರಾಗಿ ಕಾರ್ಯ ಮುಗಿಸುವವರಿಗೆ ದೇವರು ಪ್ರತಿಫಲ ನೀಡುತ್ತಾನೆ.

ಪ್ರಕಟನೆಯು ಈ ವಾಗ್ದಾನವನ್ನು ದಾಖಲಿಸುತ್ತದೆ: 

“ಸಾಯಬೇಕಾದರೂ ನಂಬಿಗಸ್ತನಾಗಿರು,ಆಗ ನಾನು ನಿನಗೆ ಜೀವದ ಕಿರೀಟವನ್ನು ಕೊಡುವೆನು” (ಪ್ರಕಟನೆ 2:10).

ಕಿರೀಟಗಳನ್ನು ಉತ್ಸಾಹಕ್ಕಾಗಿ ನೀಡಲಾಗುವುದಿಲ್ಲ, ಆದರೆ ಕೊನೆಯವರೆಗೂ ನಂಬಿಗಸ್ತಿಕರಾಗಿ ನಡೆದದ್ದಕ್ಕೆ ನೀಡಲಾಗುತ್ತದೆ. ನನಗೆ ವರವಿದೆ ಅಥವಾ ನಾನು ಜನಪ್ರಿಯನಾಗಿದ್ದೆ ಎಂದು ಪೌಲನು ಹೇಳಲಿಲ್ಲ. ಆದರೆ ಅವನು ಹೇಳಿದ್ದು, ನಾನು ಓಡಿ ಮುಗಿಸಿದೆ ಎಂದು. 

ಇದು ಅಭ್ಯಾಸ ಸಂಖ್ಯೆ 9 
ಎಲ್ಲಾ ಅಭ್ಯಾಸಗಳಿಗೂ ಕಿರೀಟ. ಶತ್ರುವನ್ನು ಬಲವಾಗಿ ಮೌನಗೊಳಿಸುವವರು, ದೇವರನ್ನು ಮಹಿಮೆಪಡಿಸುವವರು  ಎಲ್ಲವುಗಳನ್ನು ಮೀರಿಸುವಂತಹ ಪರಂಪರೆಯನ್ನು ಬಿಡುವವರು.

Bible Reading: Genesis 50; Exodus 1-3
ಪ್ರಾರ್ಥನೆಗಳು
ತಂದೆಯೇ, ಕಡೆವರೆಗೂ ತಾಳಿಕೊಳ್ಳಲು ಕೃಪೆಯನ್ನು ಬಿಡುಗಡೆ ಮಾಡು. ನನ್ನ ಆತ್ಮವನ್ನು ಬಲಪಡಿಸು, ನನ್ನ ನಂಬಿಕೆಯನ್ನು ಕಾಪಾಡು, ನನ್ನ ಹೃದಯವನ್ನು ಕಾಪಾಡು ಮತ್ತು ನಿನ್ನ ಮಹಿಮೆಗಾಗಿ ನನ್ನ ಓಟವನ್ನು ಬಲವಾಗಿ ಓಡಿ ಮುಗಿಸಲು ಯೇಸುನಾಮದಲ್ಲಿ ನನಗೆ ಸಹಾಯ ಮಾಡು. ಆಮೆನ್!!

Join our WhatsApp Channel


Most Read
● ದಿನ 28:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ
● ಅಶ್ಲೀಲ ಸಾಹಿತ್ಯ
● ಆರಾಧನೆಯನ್ನು ಜೀವನಶೈಲಿಯನ್ನಾಗಿ ಮಾಡಿಕೊಳ್ಳುವುದು.
● ದಿನ 17:40 ದಿನಗಳ ಉಪವಾಸ ಪ್ರಾರ್ಥನೆ.
● ಸರ್ವಶಕ್ತನಾದ ದೇವರ ಅದ್ಬುತ ಸಮಾಗಮ.
● ಹೆಚ್ಚು ಪರಿಣಾಮಕಾರಿ ಜನರ 9 ಅಭ್ಯಾಸಗಳು: ಅಭ್ಯಾಸ ಸಂಖ್ಯೆ 8
● ಚಿಂತೆಯಿಂದ ಹೊರಬರಲು ಈ ಸಂಗತಿಗಳ ಕುರಿತು ಯೋಚಿಸಿ
ಅನಿಸಿಕೆಗಳು
ನಮ್ಮನ್ನು ಸಂಪರ್ಕಿಸಿ
Phone: +91 8356956746
+91 9137395828
WhatsApp: +91 8356956746
ಇಮೇಲ್ ವಿಳಾಸ: [email protected]
ವಿಳಾಸ :
10/15, First Floor, Behind St. Roque Grotto, Kolivery Village, Kalina, Santacruz East, Mumbai, Maharashtra, 400098
ಸ್ಪೋರ್ಟಿಫೈ ನ್ನು ಆಲಿಸಿರಿ
Download on the App Store
Get it on Google Play
JOIN MAILING LIST
EXPLORE
ಕಾರ್ಯಕ್ರಮಗಳು
ನೇರಪ್ರಸಾರ
ನೋಹಾಟ್ಯೂಬ್
ದೂರದರ್ಶನ
Donation
ಮನ್ನಾ
ಸ್ತೋತ್ರಗಳು
ಅರಿಕೆಗಳು
ಕನಸುಗಳು
ಸಂಪರ್ಕ
© 2026 Karuna Sadan, India.
➤
ಲಾಗಿನ್
ಈ ಜಾಲದಲ್ಲಿರುವ ವಿಷಯದ ಕುರಿತು ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಿಳಿಸಲು ಲೈಕ್ ಮಾಡಲು ದಯಮಾಡಿ ನಿಮ್ಮ ನೋಹ ಖಾತೆಗೆ ಲಾಗಿನ್ ಆಗಿರಿ
ಲಾಗಿನ್