"ಅವರೆಲ್ಲರೂ ಗೊಲ್ಗೊಥಾ ಅಂದರೆ “ಕಪಾಲಸ್ಥಳ” ಎಂಬ ಸ್ಥಾನಕ್ಕೆ ಬಂದಾಗ ಆತನಿಗೆ ಕಹಿ ಬೆರಸಿದ ದ್ರಾಕ್ಷಾರಸವನ್ನು ಕುಡಿಯುವುದಕ್ಕೆ ಕೊಟ್ಟರು; ಆತನು ಅದನ್ನು ರುಚಿ ನೋಡಿ ಕುಡಿಯಲಾರದೆ ಇದ್ದನು."(ಮತ್ತಾ 27:33-34 )
"ಆಗ ಅಲ್ಲಿ ಹುಳಿರಸ ತುಂಬಿದ ಪಾತ್ರೆಯಿತ್ತು. ಅವರು ಸ್ಪಂಜನ್ನು ಹುಳಿರಸದಲ್ಲಿ ಅದ್ದಿ ಹಿಸ್ಸೋಪ್ ಗಿಡದ ಕೋಲಿಗೆ ಸಿಕ್ಕಿಸಿ ಆತನ ಬಾಯಿಗೆ ಮುಟ್ಟಿಸಿದರು. ಯೇಸು ಆ ಹುಳಿರಸವನ್ನು ತೆಗೆದುಕೊಂಡ ಮೇಲೆ, “ತೀರಿತು” ಎಂದು ಹೇಳಿ ತಲೆ ಬಾಗಿಸಿ ತನ್ನ ಆತ್ಮವನ್ನು ಒಪ್ಪಿಸಿಕೊಟ್ಟನು."(ಯೋಹಾ 19:29-30)
ಕರ್ತನಾದ ಯೇಸುಕ್ರಿಸ್ತನು ಶಿಲುಬೆಯಲ್ಲಿದ್ದಾಗ 'ಎರಡು ಬಾರಿ' ಹುಳಿದ್ರಾಕ್ಷಾರಸವನ್ನು ನೀಡಲಾಯಿತು ಎಂದು ಮೇಲಿನ ಗ್ರಂಥಗಳಿಂದ ನೀವು ಸ್ಪಷ್ಟವಾಗಿ ನೋಡಬಹುದು. ಆತನು ಮೊದಲನೆಯದನ್ನು ನಿರಾಕರಿಸಿದನು. ಆದರೆ ಎರಡನೆಯದನ್ನು ತೆಗೆದುಕೊಂಡನು. ಯಾಕೆ ಹೀಗೆ? ಯೇಸುವಿಗೆ ಮೊದಲ ಬಾರಿಗೆ ದ್ರಾಕ್ಷಾರಸವನ್ನು ನೀಡಿದಾಗ, ಅದು ಔಷಧಿಯೊಂದಿಗೆ ಬೆರೆಸಲ್ಪಟ್ಟಿತು ( ರಕ್ತಬೋಳ - ಮಾರ್ಕ 15:23) ಅದಕ್ಕಾಗಿಯೇ ಆತನು ಅದನ್ನು ತೆಗೆದುಕೊಳ್ಳಲಿಲ್ಲ. ಹಳೆಯ ಸಂಪ್ರದಾಯದ ಪ್ರಕಾರ, ಯೆರುಸಲೆಮಿನ ಗೌರವಾನ್ವಿತ ಮಹಿಳೆಯರು ಅಸಹನೀಯ ನೋವಿಗೆ ತುತ್ತಾಗುವಾಗ ಅದರ ಸೂಕ್ಷ್ಮತೆಯನ್ನು ಕಡಿಮೆ ಮಾಡಲು ಮತ್ತು ಮರಣದಂಡನೆಗೆ ಗುರಿಯಾದವರಿಗೆ ಮಾದಕ ಪಾನೀಯವಾಗಿ ಈ ದ್ರಾಕ್ಷರಸವನ್ನು ನೀಡುತ್ತಿದ್ದರು .
ಕರ್ತನಾದ ಯೇಸು ಮೊದಲು ಗೊಲ್ಗೊಥಾಗೆ ಬಂದಾಗ ಈ (ರಕ್ತಬೋಳ )ಔಷಧಿ ಬೆರೆಸಿದ ದ್ರಾಕ್ಷಾರಸವನ್ನು ನೀಡಲಾಯಿತು, ಆದರೆ ಆತನು ಅದನ್ನು ನಿರಾಕರಿಸಿಬಿಟ್ಟನು. ಈ ಮೊದಲ ದ್ರಾಕ್ಷ ರಸವು ಸ್ವಲ್ಪ ಮಟ್ಟಿಗೆ ನೋವನ್ನು ತಗ್ಗಿಸುವ ಅಂಶವನ್ನು ಪ್ರತಿನಿಧಿಸುತ್ತದೆ. ಆದರೆ ನಮ್ಮ ಕರ್ತನಾದ ಯೇಸು ಇದನ್ನು ನಿರಾಕರಿಸಿ "ತನಗಾಗಿ ನೇಮಿಸಿದ ನೋವುಗಳನ್ನು ಪೂರ್ಣ ಪ್ರಜ್ಞೆಯಿಂದ ಸಹಿಸಿಕೊಳ್ಳುವುದನ್ನು ಆಯ್ಕೆ ಮಾಡಿಕೊಂಡನು
ಕರ್ತನಾದ ಯೇಸು ಗೊಲ್ಗೊಥಾಗೆ ಬಂದಾಗ, ಆತನಿಗೆ ಈ ಔಷಧಿ (ರಕ್ತಬೋಳ ಮಾದಕ ದ್ರವ್ಯ ಬೆರೆಸಿದ ಈ ಮೊದಲ ದ್ರಾಕ್ಷಾರಸ ನೀಡುವಿಕೆಯು ಅರಸನಾದ ದಾವಿದನ ಪ್ರವಾದನೆಯ ನೆರವೇರಿಕೆಯಾಗಿದೆ. ನೋವಿನ ಅನುಭವದ ಆಳದಲ್ಲಿದ್ದಾಗ, ದಾವೀದನು ತನ್ನ ಬಾಯಾರಿಕೆಯನ್ನು ನೀಗಿಸಲು ತನ್ನ ಶತ್ರುಗಳು ತನಗೆ ಕಹಿಯಾದದ್ದನ್ನು ಮಾತ್ರ ನೀಡಿದ್ದಾರೆ ಎಂದು ಮೊರೆಯಿಡುತ್ತಾನೆ (ಕೀರ್ತನೆ 69:16 - 21)
ಹಳೆಯ ಒಡಂಬಡಿಕೆಯಲ್ಲಿ ಹುಳಿ ದ್ರಾಕ್ಷಿರಸವನ್ನು ಚೈತನ್ಯ ಪಡಿಸುವ ಪಾನೀಯವಾಗಿ ಉಲ್ಲೇಖಿಸಲಾಗಿದೆ ಎಂದು ಸತ್ಯವೇದ ವಿದ್ವಾಂಸರು ಉಲ್ಲೇಖಿಸಿದ್ದಾರೆ (ಅರಣ್ಯಕಾಂಡ 6:13; ರೂತಳು 2:14). ಗ್ರೀಕ್ ಮತ್ತು ರೋಮನ್ ಸಾಹಿತ್ಯದಲ್ಲಿಯೂ ಸಹ, ಇದು ಒಂದು ಸಾಮಾನ್ಯ ಪಾನೀಯವಾಗಿದ್ದು ಇದು ನೀರಿಗಿಂತ ಹೆಚ್ಚು ಪರಿಣಾಮಕಾರಿಯಾಗಿ ಬಾಯಾರಿಕೆಯನ್ನು ನಿವಾರಿಸುವಂತದ್ದು ಮತ್ತು ಅಗ್ಗವಾದದ್ದು ಆಗಿರುವುದರಿಂದ ಕಾರ್ಮಿಕರು ಮತ್ತು ಸೈನಿಕರಿಂದ ಮೆಚ್ಚುಗೆ ಪಡೆದಿತ್ತು.
ಯೇಸುವಿಗೆ ಎರಡನೆ ಬಾರಿ ದ್ರಾಕ್ಷಾರಸವನ್ನು ಅರ್ಪಿಸಿದ್ದು ಸಾಧ್ಯವಾದಷ್ಟು ಕಾಲ ಯೇಸುವನ್ನು ಪ್ರಜ್ಞೆಯಲ್ಲಿರಿಸುವ ಉದ್ದೇಶದಿಂದ .
ಖಂಡನೆಗೊಳಗಾದ ಇತರ ಅಪರಾಧಿಗಳು ಮೊದಲನೆಯದನ್ನು (ತಮ್ಮ ಹಿಂಸೆಯ ನೋವನ್ನು ತಗ್ಗಿಸಿಕೊಳ್ಳಲು ) ಆಗಲೇ ತೆಗೆದುಕೊಂಡಿದ್ದರಿಂದ ಎರಡನೆಯದರ ಅರಿವು ಅವರಿಗಿರುವುದಿಲ್ಲ (ಹಾಗಾಗಿ ಅವರ ಭಯಾನಕ ನೋವಿನ ಅಳತೆಯಲ್ಲಿ ಅವರಿಗೆ ವ್ಯತ್ಯಾಸ ಕಾಣುವುದಿಲ್ಲ ).
ಆದರೆ ನಮ್ಮ ಯೇಸು ನಮಗೆ ವಿಮೋಚನೆಯನ್ನು ಭದ್ರಪಡಿಸಿಕೊಡಲು ಯಾವುದೇ ರೀತಿಯ ಅಡ್ಡ ಮಾರ್ಗವನ್ನು ಹಿಡಿಯಲಿಲ್ಲ . ಶಿಲುಬೆಯಲ್ಲಿ, ಕರ್ತನಾದ ಯೇಸು ತನ್ನ ತಂದೆಯ ಕೋಪದ ದ್ರಾಕ್ಷಾರಸವನ್ನು ಸಂಪೂರ್ಣವಾಗಿ ಕುಡಿದನು ಆದ್ದರಿಂದಲೇ ಇಂದು ನಾವು ಆತನ ತಂದೆಯ ಪ್ರೀತಿಯ ದ್ರಾಕ್ಷಾರಸವನ್ನು ಆನಂದಿಸಬಹುದಾಗಿದೆ, ಕುರಿಮರಿಯ ವಿವಾಹ ಭೋಜನದಲ್ಲಿ ಆತನೊಂದಿಗೆ ಪಾಲ್ಗೊಳ್ಳಬಹುದು ಮತ್ತು ವಿಮೋಚನೆಗಾಗಿ ಯಾವುದೇ ಅಡ್ಡ ದಾರಿ ಹಿಡಿಯದವನ ವೈಭವಯುತ ಪ್ರಸನ್ನತೆಯಲ್ಲಿ ಶಾಶ್ವತವಾದ ರಕ್ಷಣೆಯಲ್ಲಿ ವಿಮೋಚನೆಯಲ್ಲಿಯೂ ನಿತ್ಯಕ್ಕೂ ನಾವು ಆನಂದಿಸಬಹುದು.
ಪ್ರಾರ್ಥನೆಗಳು
ಕರ್ತನಾದ ಯೇಸುವೇ, ನೀವು ಶಿಲುಬೆಯಲ್ಲಿ ನನಗಾಗಿ ಅನುಭವಿಸಿದ ನೋವು ಮತ್ತು ಸಂಕಟಕ್ಕಾಗಿ ಸ್ತೋತ್ರ. ನಾನು ಪ್ರಸ್ತುತ ಅನುಭವಿಸುತ್ತಿರುವ ಎಲ್ಲವನ್ನೂ ನೀವು ಸಂಪೂರ್ಣವಾಗಿ ಅರ್ಥಮಾಡಿಕೊಂಡಿದ್ದೀರಿ. ನನ್ನ ಕುಟುಂಬ ಸದಸ್ಯರನ್ನು ಮತ್ತು ನನ್ನನ್ನು ಬಲಪಡಿಸಿ ಎಂದು ಯೇಸುವಿನ ಹೆಸರಿನಲ್ಲಿ ನಾನು ಪ್ರಾರ್ಥಿಸುತ್ತೇನೆ. ಆಮೆನ್
Join our WhatsApp Channel
Most Read
● ಕೃಪೆಯಿಂದಲೇ ರಕ್ಷಣೆ● ಅಲೌಖಿಕತೆಯನ್ನು ಬೆಳೆಸಿಕೊಳ್ಳುವುದು
● "ಆತನಿಗೆ ಎಲ್ಲವನ್ನೂ ತಿಳಿಸಿರಿ"
● ಯೇಸುವನ್ನು ನೋಡುವ ಬಯಕೆ
● ನಿಮ್ಮ ಮನಸ್ಸಿಗೆ ಉಣಬಡಿಸಿರಿ
● ಐಕ್ಯತೆ ಮತ್ತು ವಿಧೇಯತೆಯ ಒಂದು ದರ್ಶನ
● ದೇವರ ರೀತಿಯ ನಂಬಿಕೆ
ಅನಿಸಿಕೆಗಳು