english हिंदी मराठी తెలుగు മലയാളം தமிழ் Contact us ನಮ್ಮನ್ನು ಸಂಪರ್ಕಿಸಿ ಸ್ಪೋರ್ಟಿಫೈ ನ್ನು ಆಲಿಸಿರಿ ಸ್ಪೋರ್ಟಿಫೈ ನ್ನು ಆಲಿಸಿರಿ Download on the App StoreiOS ನಲ್ಲಿ ಆಪ್ ನ್ನು ಡೌನ್ಲೋಡ್ ಮಾಡಿ Get it on Google Play ಆಂಡ್ರಾಯ್ಡ್ ನಲ್ಲಿ ಆಪ್ ನ್ನು ಡೌನ್ಲೋಡ್ ಮಾಡಿ
 
ಲಾಗಿನ್
ಆನ್ಲೈನ್ ಮೂಲಕ ಕಾಣಿಕೆ ನೀಡಲು
ಲಾಗಿನ್
  • ಮೂಲತಾಣ
  • ಕಾರ್ಯಕ್ರಮಗಳು
  • ನೇರಪ್ರಸಾರ
  • ದೂರದರ್ಶನ
  • ನೋಹಾಟ್ಯೂಬ್
  • ಸ್ತೋತ್ರಗಳು
  • ಸುದ್ದಿಗಳು
  • ಮನ್ನಾ
  • ಪ್ರಾರ್ಥನೆಗಳು
  • ಅರಿಕೆಗಳು
  • ಕನಸುಗಳು
  • ವಿದ್ಯುನ್ಮಾನ -ಪುಸ್ತಕಗಳು
  • ವ್ಯಾಖ್ಯಾನ
  • ಶ್ರದ್ದಾಂಜಲಿ
  • ಓಯಸಿಸ್
  1. ಮೂಲತಾಣ
  2. ಅನುದಿನದ ಮನ್ನಾ
  3. ಒಂದು ಉದ್ದೇಶಕ್ಕಾಗಿ ಹುಟ್ಟಿರುವಂತದ್ದು
ಅನುದಿನದ ಮನ್ನಾ

ಒಂದು ಉದ್ದೇಶಕ್ಕಾಗಿ ಹುಟ್ಟಿರುವಂತದ್ದು

Thursday, 5th of February 2026
1 1 46
Categories : ಉದ್ದೇಶಗಳು (purpose) ಮಧ್ಯಸ್ತಿಕೆ ಪ್ರಾರ್ಥನೆ (Intercession)
“ ನೀನು ನನ್ನನ್ನು ಅದ್ಭುತವಾಗಿಯೂ, ವಿಚಿತ್ರವಾಗಿಯೂ ರಚಿಸಿದ್ದರಿಂದ, ನಿನ್ನನ್ನು ಕೊಂಡಾಡುತ್ತೇನೆ. ನಿನ್ನ ಕೃತ್ಯಗಳು ಆಶ್ಚರ್ಯವಾಗಿವೆಯೆಂದು, ನನ್ನ ಹೃದಯವು ಚೆನ್ನಾಗಿ ಗ್ರಹಿಸಿಕೊಂಡಿದೆ." ಕೀರ್ತನೆ 139:14 

ಪ್ರತಿಯೊಬ್ಬ ಮಾನವ ಜೀವನವು ಉದ್ದೇಶಪೂರ್ವಕವಾಗಿದೆ. ದೇವರು ನಿಮ್ಮನ್ನು ಆಕಸ್ಮಿಕವಾಗಿಯೋ ಅಥವಾ ಬೇರೊಬ್ಬರ ಪ್ರತಿಯಾಗಿ ಸೃಷ್ಟಿಸಲಿಲ್ಲ. ನಿಮ್ಮನ್ನು ದೇವರು ಎಚ್ಚರಿಕೆಯಿಂದ, ಚಿಂತನಶೀಲವಾಗಿ ಮತ್ತು ಪ್ರೀತಿಯಿಂದ ವಿನ್ಯಾಸಗೊಳಿಸಿದ್ದಾನೆ. ಆತನ ಕೆಲಸಗಳು ಅದ್ಭುತವಾಗಿವೆ ಎಂದು ಸತ್ಯವೇದ ನಮಗೆ ನೆನಪಿಸುತ್ತಿರುತ್ತದೆ - ಮತ್ತು ನೀವು ಆ ಕೆಲಸಗಳಲ್ಲಿ ಒಬ್ಬರು.

ಬೇರೆ ಯಾರೂ ಕೂಡ ಅದೇ ರೀತಿಯಲ್ಲಿ ಸಾಧಿಸಲು ಸಾಧ್ಯವಾಗದ ನಿರ್ದಿಷ್ಟವಾದದ್ದನ್ನು ಸಾಧಿಸಲು ದೇವರು ಈ ಭೂಮಿಯ ಮೇಲಿನ ಪ್ರತಿಯೊಬ್ಬ ವ್ಯಕ್ತಿಯನ್ನು ಸೃಷ್ಟಿಸಿದನು. ಈ ಸತ್ಯವನ್ನು ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯ ಏಕೆಂದರೆ ಅನೇಕ ಜನರು ತಮ್ಮ ಇಡೀ ಜೀವನವನ್ನು ಇತರರೊಂದಿಗೆ ಹೋಲಿಸಿಕೊಂಡು ಬದುಕುತ್ತಾರೆ, ಹೊರತು  ದೇವರು ನೀಡಿದ ತಮ್ಮ ಸ್ವಂತ ಉದ್ದೇಶವನ್ನು ಎಂದಿಗೂ ಅರಿತುಕೊಳ್ಳುವುದಿಲ್ಲ.

ಯಾವುದೋ ಒಂದು ವಿಷಯಕ್ಕೆ ಹೆಸರುವಾಸಿಯಾಗಲು ಹುಟ್ಟಿದ್ದೇವೆ.
ನೀವು ಮತ್ತು ನಾನು ವಿಶೇಷವಾದದ್ದಕ್ಕೆ ಹೆಸರುವಾಸಿಯಾಗಲು ವಿನ್ಯಾಸಗೊಳಿಸಲ್ಪಟ್ಟಿದ್ದೇವೆ. ನಮ್ಮ ಜೀವಿತಾವಧಿಯನ್ನು ಮೀರಿದ ಗುರುತು ಬಿಡುವ ಏನಾದರೂ ಅರ್ಥಪೂರ್ಣವಾದದ್ದನ್ನು ಮಾಡಲು ನಾವು ಸೃಷ್ಟಿಸಲ್ಪಟ್ಟಿದ್ದೇವೆ. ಎಲ್ಲರೂ ವೇದಿಕೆಯ ಮೇಲೆ ನಿಲ್ಲುವುದಿಲ್ಲ ಅಥವಾ ವ್ಯಾಪಕವಾಗಿ ವೈಭವೀಕರಿಸಲ್ಪಡುವುದಿಲ್ಲ, ಆದರೆ ಪ್ರತಿಯೊಬ್ಬರೂ ದೇವರಿಗೆ ಆಳವಾಗಿ ಮುಖ್ಯವಾದ ಕರೆಯನ್ನು ಹೊಂದಿರುತ್ತಾರೆ.

ಬೈಬಲ್‌ನಾದ್ಯಂತ, ಸಾಮಾನ್ಯ ಜನರು ಅಸಾಧಾರಣ ಫಲಿತಾಂಶಗಳನ್ನು ನೀಡುವ ಸಣ್ಣ ಕಾರ್ಯಗಳನ್ನು ಮಾಡುವುದನ್ನು ನಾವು ನೋಡುತ್ತೇವೆ. ಇವರು ಪ್ರಸಿದ್ಧ ನಾಯಕರು ಅಥವಾ ಪ್ರಬಲ ಆಡಳಿತಗಾರ ರಾಗಿರಲಿಲ್ಲ, ಆದರೆ ಆ ಸಮಯ ಬಂದಾಗ ದೇವರಿಗೆ ವಿಧೇಯರಾದ  ಸಾಮಾನ್ಯ ವ್ಯಕ್ತಿಗಲಾಗಿದ್ದರು.

ಅನಿರೀಕ್ಷಿತ ಜೀವನದಲ್ಲಿ ಅನುಗ್ರಹ 
ಅಂತಹ ಒಂದು ಉದಾಹರಣೆ ರಹಾಬಳು.. ಬೈಬಲ್ ಅವಳನ್ನು ಯೆರಿಕೊದಲ್ಲಿ ವಾಸಿಸುತಿದ್ದ ವೇಶ್ಯೆ ಎಂದು ಪರಿಚಯಿಸುತ್ತದೆ. ಆದರೆ ಇಬ್ಬರು ಇಸ್ರೇಲ್ ಗೂಢಚಾರರು ನಗರಕ್ಕೆ ಬಂದಾಗ, ರಹಾಬಳು ಧೈರ್ಯಶಾಲಿ ಆಯ್ಕೆಯನ್ನು ಮಾಡಿದಳು.
"ಆದರೆ ಆ ಸ್ತ್ರೀಯು ಆ ಇಬ್ಬರನ್ನು ಅಡಗಿಸಿಟ್ಟು ಕೇಳಲು ಬಂದವರಿಗೆ, “ಆ ಮನುಷ್ಯರು ನನ್ನ ಬಳಿಗೆ ಬಂದದ್ದು ನಿಜ; ಅವರು ಎಲ್ಲಿಯವರೆಂಬುದು ನನಗೆ ತಿಳಿಯಲಿಲ್ಲ. ಊರಬಾಗಿಲನ್ನು ಮುಚ್ಚುವ ಹೊತ್ತಿನಲ್ಲಿ ಕತ್ತಲಲ್ಲೇ ಹೊರಟುಹೋದರು. ಎಲ್ಲಿಗೆ ಹೋದರೆಂಬುದು ಗೊತ್ತಿಲ್ಲ. ಬೇಗನೆ ಅವರನ್ನು ಬೆನ್ನಟ್ಟಿರಿ; ನಿಮಗೆ ಸಿಕ್ಕಾರು” ಎಂದು ಹೇಳಿದಳು." ಯೆಹೋಶುವ 2:4–5-ESV

ರಾಹಾಬಳು ತನ್ನ ಜೀವವನ್ನೇ ಪಣಕ್ಕಿಟ್ಟು, ತಾನು ಹಿಂದೆಂದೂ ಭೇಟಿಯಾಗಿರದ ತನಗೆ ಪರಿಚಯವೇ ಇಲ್ಲದಂತ ಈ ಗೂಢಚಾರರನ್ನು ರಕ್ಷಿಸಿದಳು. ಈ ಒಂದೇ ಕೃತ್ಯವು ಇಸ್ರೇಲ್‌ಗೆ ಜೆರಿಕೊವನ್ನು ಸೋಲಿಸಲು ಸಹಾಯ ಮಾಡಿತು (ಯೆಹೋಶುವ 6 ನೋಡಿ). 

ಒಂದು ಸಣ್ಣ ನಿರ್ಧಾರದಂತೆ ಕಾಣುತ್ತಿದ್ದದ್ದು ವಾಸ್ತವವಾಗಿ ಮಧ್ಯಸ್ಥಿಕೆಯ ಪ್ರವಾದನಾ ಕ್ರಿಯೆಯಾಗಿತ್ತು. ಅವಳು ದೇವರ ಜನರಿಗಾಗಿ ಕೋವರದಲ್ಲಿ ನಿಂತಳು. ಯಾರೂ ನೋಡದಿದ್ದರೂ ಸಹ, ಇತರರಿಗಾಗಿ ಮೌನವಾಗಿ ಪ್ರಾರ್ಥಿಸಲು ನೀವು ಕರೆಯಲ್ಪಟ್ಟಿದ್ದೀರಿ ಎಂದು ನೀವು ಭಾವಿಸಬಹುದು. ಮಧ್ಯಸ್ಥಿಕೆಯು ರೋಮಾಂಚಕಾರಿಯಾಗಿ ಕಾಣದಿರಬಹುದು, ಆದರೆ ಅದು ಪರಲೋಕದಲ್ಲಿ ಹೆಚ್ಚಿನ ಮೌಲ್ಯವನ್ನು ಹೊಂದಿದೆ. 

ರಹಾಬಳ ಕಥೆಯು ಜೆರಿಕೊದಲ್ಲಿ ಕೊನೆಗೊಳ್ಳಲಿಲ್ಲ.
"ರಾಹಾಬಳಲ್ಲಿ ಬೋವಜನು ಹುಟ್ಟಿದನು..." — ಮತ್ತಾಯ 1:5 
 ರಹಾಬಳು ಯೆಹೂದದ ಕುಲದವನನ್ನು ವಿವಾಹವಾಗಿ 

ಬೋವಜನ ತಾಯಿಯಾದಳು. ಬೋವಜನ ಮೂಲಕ, ಅವಳು ಕರ್ತನಾದ ಯೇಸು ಕ್ರಿಸ್ತನ ವಂಶಾವಳಿಯನ್ನು ಪ್ರವೇಶಿಸಿದಳು. ಒಮ್ಮೆ ತನ್ನ ಭೂತಕಾಲಕ್ಕೆ ಹೆಸರುವಾಸಿಯಾದ ಮಹಿಳೆ ದೇವರ ವಿಮೋಚನಾ ಕಥೆಯ ಭಾಗವಾದಳು. ಅದುವೇ  ಅನರ್ಹ ಜೀವನವನ್ನು ಬದಲಾಯಿಸುವವ. ಶಕ್ತಿಶಾಲಿಯಾದ ಕೃಪೆ.

ಎಂದಿಗೂ ಮರೆಯಲಾಗದ ಸ್ತ್ರೀಯ ಕೃತ್ಯ.
ಹೊಸ ಒಡಂಬಡಿಕೆಯಲ್ಲಿ, ಸರಳವಾದರೂ ದುಬಾರಿಯಾದ ಕೃತ್ಯವನ್ನು ಮಾಡಿದ ಇನ್ನೊಬ್ಬ ಸ್ತ್ರೀ ಬಗ್ಗೆ ನಾವು ಓದುತ್ತೇವೆ.

ಆಕೆ ಸುಗಂಧ ದ್ರವ್ಯದ ಅಲಬಾಸ್ಟರ್ ಪಾತ್ರೆಯನ್ನು ತಂದು ಯೇಸುವಿನ ತಲೆಯ ಮೇಲೆ ಸುರಿದಳು. 
“ಅವಳು ಅಚ್ಚ ಜಟಮಾಂಸಿ ತೈಲದ ಭರಣಿಯನ್ನು ಒಡೆದು ಆತನ ತಲೆಯ ಮೇಲೆ ತೈಲವನ್ನು ಸುರಿದಳು.” — ಮಾರ್ಕ 14:3 NIV

ಇತರರು ಆಕೆಯನ್ನು ಟೀಕಿಸಿದರು, ಅದನ್ನು ವ್ಯರ್ಥ  
ಮಾಡಿದ್ದೀಯಲ್ಲ ಎಂದು ಕರೆದರು. ಆದರೆ ಯೇಸು :
“ಆಕೆಯನ್ನು ಬಿಟ್ಟುಬಿಡಿ... ಆಕೆಯು ನನಗೆ ಒಳ್ಳೆಯ ಕೆಲಸವನ್ನು ಮಾಡಿದ್ದಾಳೆ....” — ಮಾರ್ಕ 14:6 

ಎಂದು ಹೇಳಿ ಆಕೆಯನ್ನು ಸಮರ್ಥಿಸಿಕೊಂಡನು.
“ನಿಜವಾಗಿಯೂ ನಾನು ನಿಮಗೆ ಹೇಳುತ್ತೇನೆ, ಸುವಾರ್ತೆಯು ಲೋಕದಲ್ಲಿ ಎಲ್ಲೆಲ್ಲಿ ಸಾರಲ್ಪಡುವುದೋ ಅಲ್ಲೆಲ್ಲಾ ಆಕೆಯು ಮಾಡಿದ್ದನ್ನು ಸಹ ಆಕೆಯ ನೆನಪಿಗಾಗಿ ಹೇಳಲಾಗುವುದು.” — (ಮಾರ್ಕ 14:9)ಎಂದು ಕರ್ತನಾದ ಯೇಸು  ಹೇಳಿದನು

ಪರಲೋಕವು ಗಮನಿಸುವಾಗ
ನಿಮ್ಮ ಸಂಪೂರ್ಣ ಹೃದಯವು ಅದರಲ್ಲಿರುವಾಗ ಯಾವುದೇ ಕ್ರಿಯೆಯು ಚಿಕ್ಕದಲ್ಲ. ದೇವರು ನಿಮ್ಮ ಮುಂದೆ ಇಟ್ಟಿರುವದರಲ್ಲಿ ನೀವು ನಿಮ್ಮ ಜೀವನವನ್ನು ಧಾರೆ ಎರೆಯುವಾಗ, ಅದನ್ನು ಎಂದಿಗೂ ಮರೆಯಲಾಗುವುದಿಲ್ಲ. 

ಲೋಕವು ಮರೆತುಹೋದರೂ ಸಹ ಪರಲೋಕವು ನಂಬಿಕೆಯನ್ನು ನೆನಪಿಸಿಕೊಳ್ಳುತ್ತದೆ. ನಿಮ್ಮ ವಿಧೇಯತೆ, ನಿಮ್ಮ ಪ್ರಾರ್ಥನೆಗಳು, ನಿಮ್ಮ ಪ್ರೀತಿಯ ಶಾಂತ ಕ್ರಿಯೆಗಳು ಎಲ್ಲವೂ ಮುಖ್ಯವಾದವು. ದೇವರು ಅವುಗಳನ್ನು ನೋಡುತ್ತಾನೆ, ಗೌರವಿಸುತ್ತಾನೆ ಮತ್ತು ತನ್ನ ದೊಡ್ಡ ಯೋಜನೆಯಲ್ಲಿ ಅವುಗಳನ್ನು ಹೆಣೆಯುತ್ತಾನೆ. 

ನಿಮ್ಮನ್ನು ಉದ್ದೇಶಪೂರ್ವಕವಾಗಿ - ಒಂದು ನಿರ್ದಿಷ್ಟ ಉದ್ದೇಶಕ್ಕಾಗಿ ರಚಿಸಲಾಗಿದೆ. 

Bible Reading: Leviticus 10-12
ಅರಿಕೆಗಳು
ನಾನು ಕರ್ತನಲ್ಲಿ ನನ್ನನ್ನು ಆನಂದಿಸುವುದರಿಂದ ಆತನು ನನ್ನ ಹೃದಯದ ಆಸೆಗಳನ್ನೆಲ್ಲಾ ನನಗೆ ಕೊಡುವನು. ಕ್ರಿಸ್ತನಲ್ಲಿ, ನಾನು ತಲೆಯಾಗಿದ್ದೇನೆ ಹೊರತು ಬಾಲವಲ್ಲ.


Join our WhatsApp Channel


Most Read
● ಸಮಾಧಾನ - ದೇವರ ರಹಸ್ಯ ಆಯುಧ
● ನಿಮ್ಮ ಜೀವದದಲ್ಲಿ ಎಂದೂ ಅಳಿಯದಂತ ಬದಲಾವಣೆಯನ್ನು ತರುವುದು ಹೇಗೆ?- 2
● ಕೆಟ್ಟ ಆಲೋಚನೆಗಳ ಹೋರಾಟವನ್ನು ಗೆಲ್ಲುವುದು
● ಈ ದಿನಮಾನಗಳಲ್ಲಿ ಕಾಣುವ ಅಪರೂಪದ ಸಂಗತಿ
● ಆತ್ಮವಂಚನೆ ಎಂದರೇನು? -I
● ಒತ್ತಡವನ್ನು ಓಡಿಸಲು ಇರುವ ಮೂರು ಶಕ್ತಿಯುತ ಮಾರ್ಗಗಳು
● ಮಾನವನು ಮಾಡುವ ಪ್ರಮಾದಗಳ ನಡುವೆಯೂ ದೇವರ ಬದಲಾಗದ ಸ್ವಭಾವ.
ಅನಿಸಿಕೆಗಳು
ನಮ್ಮನ್ನು ಸಂಪರ್ಕಿಸಿ
Phone: +91 8356956746
+91 9137395828
WhatsApp: +91 8356956746
ಇಮೇಲ್ ವಿಳಾಸ: [email protected]
ವಿಳಾಸ :
10/15, First Floor, Behind St. Roque Grotto, Kolivery Village, Kalina, Santacruz East, Mumbai, Maharashtra, 400098
ಸ್ಪೋರ್ಟಿಫೈ ನ್ನು ಆಲಿಸಿರಿ
Download on the App Store
Get it on Google Play
JOIN MAILING LIST
EXPLORE
ಕಾರ್ಯಕ್ರಮಗಳು
ನೇರಪ್ರಸಾರ
ನೋಹಾಟ್ಯೂಬ್
ದೂರದರ್ಶನ
Donation
ಮನ್ನಾ
ಸ್ತೋತ್ರಗಳು
ಅರಿಕೆಗಳು
ಕನಸುಗಳು
ಸಂಪರ್ಕ
© 2026 Karuna Sadan, India.
➤
ಲಾಗಿನ್
ಈ ಜಾಲದಲ್ಲಿರುವ ವಿಷಯದ ಕುರಿತು ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಿಳಿಸಲು ಲೈಕ್ ಮಾಡಲು ದಯಮಾಡಿ ನಿಮ್ಮ ನೋಹ ಖಾತೆಗೆ ಲಾಗಿನ್ ಆಗಿರಿ
ಲಾಗಿನ್