english हिंदी मराठी తెలుగు മലയാളം தமிழ் Contact us ನಮ್ಮನ್ನು ಸಂಪರ್ಕಿಸಿ ಸ್ಪೋರ್ಟಿಫೈ ನ್ನು ಆಲಿಸಿರಿ ಸ್ಪೋರ್ಟಿಫೈ ನ್ನು ಆಲಿಸಿರಿ Download on the App StoreiOS ನಲ್ಲಿ ಆಪ್ ನ್ನು ಡೌನ್ಲೋಡ್ ಮಾಡಿ Get it on Google Play ಆಂಡ್ರಾಯ್ಡ್ ನಲ್ಲಿ ಆಪ್ ನ್ನು ಡೌನ್ಲೋಡ್ ಮಾಡಿ
 
ಲಾಗಿನ್
ಆನ್ಲೈನ್ ಮೂಲಕ ಕಾಣಿಕೆ ನೀಡಲು
ಲಾಗಿನ್
  • ಮೂಲತಾಣ
  • ಕಾರ್ಯಕ್ರಮಗಳು
  • ನೇರಪ್ರಸಾರ
  • ದೂರದರ್ಶನ
  • ನೋಹಾಟ್ಯೂಬ್
  • ಸ್ತೋತ್ರಗಳು
  • ಸುದ್ದಿಗಳು
  • ಮನ್ನಾ
  • ಪ್ರಾರ್ಥನೆಗಳು
  • ಅರಿಕೆಗಳು
  • ಕನಸುಗಳು
  • ವಿದ್ಯುನ್ಮಾನ -ಪುಸ್ತಕಗಳು
  • ವ್ಯಾಖ್ಯಾನ
  • ಶ್ರದ್ದಾಂಜಲಿ
  • ಓಯಸಿಸ್
  1. ಮೂಲತಾಣ
  2. ಅನುದಿನದ ಮನ್ನಾ
  3. ಸರಿಯಾದ ಜನರೊಂದಿಗೆ ಸಹವಾಸ
ಅನುದಿನದ ಮನ್ನಾ

ಸರಿಯಾದ ಜನರೊಂದಿಗೆ ಸಹವಾಸ

Thursday, 9th of January 2025
3 1 203
Categories : ಸಂಬಂಧ (Relationship)
ನಾನು ಚಿಕ್ಕ ಹುಡುಗನಾಗಿ ಬೆಳೆದ ಸ್ಥಳವನ್ನು ನಾನು ಸ್ಪಷ್ಟವಾಗಿ ಈಗಲೂ ನೆನಪಿಸಿಕೊಳ್ಳುತ್ತಿರುತ್ತೇನೆ. ಅದೊಂದು ರಮಣೀಯ ಗ್ರಾಮವಾಗಿತ್ತು. ಆ ವರ್ಷಗಳಲ್ಲಿ, ನಾನು ಕೆಲವು ಹುಡುಗರು ಒಂದು  ಆಟದ ಮೈದಾನದಲ್ಲಿ ಕುಳಿತು ಸುಮ್ಮನೆ  ಸಮಯ ಕಳೆಯುವುದನ್ನು ದೂರದಿಂದ ನೋಡುತ್ತಿದ್ದೆ. 

ಅಂತಹ ಒಬ್ಬ ಹುಡುಗ ಎಂಜೋ. ಅವನು ಈ ಹುಡುಗರ ಗುಂಪಿನೊಂದಿಗೆ ಸುತ್ತಾಡುತ್ತಿದ್ದನು. ಆ ಹುಡುಗನು ಹೊಸದೇನಾದರೂ  ಮಾಡೋಣ ಎಂದು ಸಲಹೆ ನೀಡಿದಾಗಲೆಲ್ಲ ಉಳಿದವರು ಅವನನ್ನು  ಗೇಲಿ ಮಾಡಿ ಅಡ್ಡ ಹೆಸರು ಹಿಡಿದು ಕೂಗುತ್ತಿದರು. ಎಂಝೋ ಕೇವಲ ಆ ಗುಂಪಿನ ಭಾಗವಾಗಿ, ಮೂಕನಾಗಿ ಉಳಿಯುತ್ತಿದ್ದ. 

ಶೀಘ್ರದಲ್ಲೇ ಎಂಝೋ ತನ್ನ ಶಾಲಾ ಶಿಕ್ಷಣವನ್ನು ಮುಗಿಸಿ ಒಂದು ಯೋಗ್ಯ ಕಾಲೇಜಿಗೆ ಸೇರಿದನು. ಆಗ, ದೇವರ ದಯೆಯಿಂದ ಅವನು  ಸಕಾರಾತ್ಮಕ ಮನಸುಳ್ಳ ಮತ್ತು ಉದ್ದೇಶ-ಚಾಲಿತ ಕೆಲವು ಜನರನ್ನು ಭೇಟಿಯಾದನು .

 ಬಹುತೇಕ ತಕ್ಷಣವೇ, ಎಂಝೋ ನ ಜೀವನದಲ್ಲಿ ಸಂಗತಿಗಳು ಬದಲಾಗಲಾರಂಭಿಸಿದವು. ಅವನು ಅವನ ಗುರಿಗಳನ್ನು ಹೊಂದಿಸಲು ಪ್ರಾರಂಭಿಸಿ ಅದಕ್ಕಾಗಿ  ಶ್ರಮಿಸಲಾರಾಂಭಿಸಿದನು. ಇಂದು, ಎಂಜೊ ತನ್ನದೇ ಆದ ಅಡುಗೆ ಕಂಪನಿಯನ್ನೂ  ಮತ್ತು ಅದ್ಭುತವಾದ  ಕುಟುಂಬವನ್ನೂ  ಹೊಂದಿದ್ದಾರೆ

ನಾನು ಸ್ವಲ್ಪ ಸಮಯದ ಹಿಂದೆ ಅವರನ್ನು ಭೇಟಿಯಾಗಿದ್ದೆ ಮತ್ತು ಇದೆಲ್ಲಾ  ಹೇಗೆ ಸಂಭವಿಸಿತು ಎಂದು ನಾನು ಕೇಳಿದೆ.ಅದಕ್ಕೆ ಅವರು  ಸರಿಯಾದ ಸ್ನೇಹಿತರು ಮತ್ತು ಸರಿಯಾದ ಸಂಪರ್ಕಗಳು ಈ ಎಲ್ಲಾ ವ್ಯತ್ಯಾಸಗಳನ್ನು ಮಾಡಿವೆ  ಎಂದು  ನನಗೆ ಹೇಳಿದರು. ಅವರ  ಹೊಸ ಸ್ನೇಹಿತರು ಅವರನ್ನು  ಹೇಗೆ ಕರ್ತನ ಬಳಿಗೆ ಕರೆದೊಯ್ದರು ಎಂದು ಅವರು ನನಗೆ ಹೇಳಿದರು.

ಅವರ  ಬಗ್ಗೆ ನನಗೆ ತುಂಬಾ ಸಂತೋಷವಾಯಿತು, ಆದರೆ ಆ ಮಿಕ್ಕ  ಹುಡುಗರಿಗೆ ಏನಾಯಿತು ಎಂದು ತಿಳಿಯುವ ಕುತೂಹಲವೂ ನನಗೆ ಇತ್ತು. ಆಗ ಅವರೆಲ್ಲ  ಇನ್ನೂ ಅದೇ ನೆರೆಹೊರೆಯಲ್ಲಿಯೇ  ವಾಸಿಸುತ್ತಿದ್ದಾರೆ, ಏನನ್ನೂ ಮಾಡುತ್ತಿಲ್ಲ ಎಂದು ಅವರು ನನಗೆ ಹೇಳಿದರು.  "ಪಾಸ್ಟರ್  ನಾನು ಆ ಹುಡುಗರ ಜೊತೆಯಲ್ಲಿಯೇ ಇದ್ದಿದ್ದರೆ, ನಾನು ಇನ್ನೂ ಗಲ್ಲಿ ಕ್ರಿಕೆಟ್ ಆಡುತ್ತಿದ್ದೆ!" ಎಂದು ಅವರು ನನಗೆ ಹೇಳಿದರು.

 ಎಂಝೋ ಅವರ ಕಥೆಯು ನಮ್ಮ ಜೀವನದ ಮೇಲೆ ಇತರರು ಬೀರಬಹುದಾದ ಪ್ರಭಾವದ ಉತ್ತಮ ಪಾಠವಾಗಿದೆ. ಕೆಲವೊಮ್ಮೆ, ನಾವು ನಮ್ಮ ಸುತ್ತಲೂ ಇರುವ ಜನರ  ಅಭ್ಯಾಸವನ್ನೇ  ಮಾಡಿಕೊಳ್ಳುತ್ತೇವೆ. ಅದು ನಮ್ಮ ಕರೆಯ ಮೇಲೆ, ನಮ್ಮ ಭವಿಷ್ಯದ ಮೇಲೆ ಬೀರುವ ಪರಿಣಾಮಗಳ ಬಗ್ಗೆ ನಾವು ಯೋಚಿಸುವುದೇ ಇಲ್ಲ. 

 "ಮೋಸಹೋಗಬೇಡಿರಿ ದುಸ್ಸಹವಾಸವು (ಒಡನಾಟಗಳು , ಸಂಘಗಳು) ಉತ್ತಮ ನಡತೆ ಮತ್ತು ನೈತಿಕತೆ ಮತ್ತು ಚಾರಿತ್ರ್ಯವನ್ನು ಭ್ರಷ್ಟಗೊಳಿಸುತ್ತವೆ." (1 ಕೊರಿಂಥ 15:33 )

 ನಾವು ಲೌಕಿಕವಾದ  ನೈತಿಕತೆ ಹೊಂದಿರುವ ಜನರೊಂದಿಗೆ ಸಹವಾಸ ಮಾಡುವಾಗ ಅಥವಾ ಅವರೊಟ್ಟಿಗೆ ಸಂತೋಷಪಡುವಾಗ, ನಾವು ಸಹ ಅವರ ನಡವಳಿಕೆಗಳು, ಅವರ ಭಾಷೆ ಮತ್ತು ಅವರ ಅಭ್ಯಾಸಗಳನ್ನು ಅನುಕರಿಸುವ ಅಪಾಯವನ್ನು ಎದುರಿಸುವವರಾಗುತ್ತೇವೆ.

"ನೀವು ಯಾರೊಂದಿಗೆ ಸುತ್ತಾಡುತ್ತೀರಿ ಎಂದು ಹೇಳಿ, ನೀವು ಯಾರಾಗುತ್ತೀರಿ ಎಂದು ನಾನು ಹೇಳುತ್ತೇನೆ "ಎಂಬ ಗಾದೆಯನ್ನು ನೀವು ಕೇಳಿದ್ದೀರಾ? ಆ ಸರಳ ಹೇಳಿಕೆಯಲ್ಲಿ ಸಾಕಷ್ಟು ಜ್ಞಾನ ಅಡಕವಾಗಿದೆ. ನೀವು ಚಿಕ್ಕ ಹುಡುಗ ಅಥವಾ ಚಿಕ್ಕ ಹುಡುಗಿಯಾಗಿ ಬೆಳೆಯುತ್ತಿದ್ದ  ಸಮಯವನ್ನು  ಹಿಂತಿರುಗಿ ನೋಡಿ  ಯೋಚಿಸಿ. ನಾವು ಯಾರೊಂದಿಗೆ ಸಹವಾಸ ಹೊಂದಿದ್ದೇವೆ  ಎಂಬುದರ  ಕುರಿತು ನಮ್ಮ ಪೋಷಕರು ಎಷ್ಟು ಕಾಳಜಿ ವಹಿಸಿದ್ದರು ಎಂದು ನಿಮಗೆ ನೆನಪಿದೆಯೇ?

 ನಮ್ಮ ಅಮ್ಮ ಮತ್ತು ಅಪ್ಪಾ ನಾವು ನಮಗೆ ಸ್ನೇಹಿತರಾಗಿದ್ದ ನಮ್ಮ ಎಲ್ಲಾ  ಸ್ನೇಹಿತರನ್ನು ಭೇಟಿಯಾಗಲು ಮತ್ತು ಅವರ ಬಗ್ಗೆ ಎಲ್ಲವನ್ನೂ ತಿಳಿದುಕೊಳ್ಳಲು ಬಯಸುತ್ತಿದ್ದರು. ಇದು ನಮಗೆ ಸ್ವಲ್ಪ ಅಸಭ್ಯವೆಂದು ತೋರುತ್ತದೆ, ಆದರೂ  ಈಗ ನಾನು  ಪೋಷಕನಾಗಿರುವಾಗ ಅವರು ಇದನ್ನು ಏಕೆ ಮಾಡಿದರು ಎಂದು ನಾನು ಅರ್ಥಮಾಡಿಕೊಂಡಿದ್ದೇನೆ. (ನೀವು ಬಹುಶಃ ನನ್ನೊಂದಿಗೆ ಸಮ್ಮತಿಸುತ್ತೀರಿ) ನಮ್ಮ ಹೆತ್ತವರಿಗೆ ಯಾವ ರೀತಿಯ ಸ್ನೇಹಿತರು ಯಾರ ಜೀವನದ ಮೇಲೆ ಯಾವ ರೀತಿಯ ಪ್ರಭಾವ ಬೀರಬಹುದೆಂಬ ಸಂಗತಿಯನ್ನು  ತಿಳಿದಿದ್ದರು ಮತ್ತು ಆದ್ದರಿಂದಲೇ ಅವರು ನಮ್ಮನ್ನು ಹಿಂದಟ್ಟಿ ಚೆನ್ನಾಗಿ ಪರಿವೀಕ್ಷಿಸುತ್ತಿದ್ದರು. 

"ಧನ್ಯ ವ್ಯಕ್ತಿ' ಯನ್ನು ಸತ್ಯವೇದವು ಹೇಗೆ ವಿವರಿಸುತ್ತದೆ ಎಂಬುದನ್ನು ಗಮನಿಸಿ..
ಯಾವನು ದುಷ್ಟರ ಆಲೋಚನೆಯಂತೆ ನಡೆಯದೆ 
ಪಾಪಾತ್ಮರ ಮಾರ್ಗದಲ್ಲಿ ನಿಂತುಕೊಳ್ಳದೆ
 ಧರ್ಮನಿಂದಕರೊಡನೆ ಕೂತುಕೊಳ್ಳದೆ...
 (ಕೀರ್ತನೆ 1:1)

 ಆಧುನಿಕ ಸಾಹಿತ್ಯವು ಸಾಮಾನ್ಯವಾಗಿ ಜನರನ್ನು 'ವಿಷಕಾರಿ ಜನರು' ಅಥವಾ 'ಪೋಷಿಸುವ ಜನರು' ಎಂದು ವರ್ಗೀಕರಿಸುತ್ತದೆ.

ವಿಷಕಾರಿ ವ್ಯಕ್ತಿಗಳು ಯಾವಾಗಲೂ  ಮತ್ತು ಎಲ್ಲೇ ಹೋದರೂ  ಯಾವಾಗಲೂ ವಿಷವನ್ನು ಉಗುಳುತ್ತಲಿರುತ್ತಾರೆ. ಇದಕ್ಕೆ ವ್ಯತಿರಿಕ್ತವಾಗಿ, ಪೋಷಿಸುವ ಜನರು ಯಾವಾಗಲೂ  ಧನಾತ್ಮಕವಾಗಿದ್ದು  ಪ್ರೋತ್ಸಾಹವನ್ನು ನೀಡುತ್ತಾರೆ. ಸರಳವಾಗಿ ಹೇಳುವುದಾದರೆ, ಅವರು ನಿಮ್ಮ ಉತ್ಸಾಹವನ್ನು ಹೆಚ್ಚಿಸುತ್ತಾರೆ ಮತ್ತು ನಿಮ್ಮೊಂದಿಗೆ  ಸುತ್ತಾಡಲು ಸಂತೋಷಪಡುತ್ತಾರೆ.

 ವಿಷಪೂರಿತ ಜನರು ಯಾವಾಗಲೂ ನಿಮ್ಮನ್ನು ತಮ್ಮ ಮಟ್ಟಕ್ಕೆ ಎಳೆಯಲು ಪ್ರಯತ್ನಿಸುತ್ತಾರೆ, ಆದರೆ ಪೋಷಿಸುವ ಜನರು ನಿಮ್ಮನ್ನು ತಮ್ಮ ಮಟ್ಟಕ್ಕೆ ಏರಿಸಲು ಪ್ರಯತ್ನಿಸುತ್ತಾರೆ. ವಿಷಪೂರಿತ ಜನರು ಯಾವಾಗಲೂ ನಿಮಗೆ ಇಂಥ ಮತ್ತು ಅಂಥ ಕೆಲಸವನ್ನು ಏಕೆ ಮಾಡಬಾರದು, ಏಕೆ ಅಸಾಧ್ಯವೆಂದು ಹೇಳುತ್ತಾರೆ. ಆರ್ಥಿಕತೆಯು ಎಷ್ಟು ಕೊಳಕು ಮತ್ತು ಇತ್ಯಾದಿಗಳ ಕುರಿತು ಅಂಧಕಾರದ ಹೇಳಿಕೆಗಳಿಂದ ಅವರು ನಿಮಗೆ ಹೊರೆಯಾಗುತ್ತಾರೆ. ಅಂತಹ ಜನರ ಮಾತುಗಳನ್ನು ಕೇಳಿದ ನಂತರ, ನೀವು ದೈಹಿಕವಾಗಿಯೂ  ಮತ್ತು ಮಾನಸಿಕವಾಗಿಯೂ  ಕುಗ್ಗಿ ಹೋಗುತ್ತೀರಿ. 

ಇಷ್ಟು ವರ್ಷಗಳಲ್ಲಿ, ನಾನು ವಿಷಕಾರಿ ಮತ್ತು ಪೋಷಣೆಯ ಎರಡೂ ರೀತಿಯ ಜನರ ನಡುವೆ ಪಾಲುಗಾರನಾಗಿದ್ದೇನೆ -  ನಿಮ್ಮ ಗುರಿಗಳನ್ನು ಅನುಸರಿಸುವ ಬಗ್ಗೆ ಮತ್ತು  ದೇವರು ನೀಡಿರುವ  ನಿಮ್ಮ ಕರೆಯನ್ನು ಸಾಧಿಸುವ ಬಗ್ಗೆ ನೀವು ನಿಜವಾಗಿಯೂ ಗಂಭೀರವಾಗಿದ್ದರೆ, ಪ್ಲೇಗ್‌ನಂತಹ ವಿಷಕಾರಿ ಜನರಿಂದ  ತಪ್ಪಿಸಿಕೊಳ್ಳಿ ಎಂದು ನಾನು ಹೇಳಬಲ್ಲೆ. 

ಇದರರ್ಥ ಸಾಮಾಜಿಕ ಮಾಧ್ಯಮದಲ್ಲಿ ಕೆಲವು ಸ್ನೇಹಿತರನ್ನು ಕಳೆದುಕೊಳ್ಳುವುದು, ಋಣಾತ್ಮಕತೆಯನ್ನು ಉತ್ತೇಜಿಸುವ Youtube ಚಾನಲ್‌ಗಳಿಂದ  ಹೊರಬರುವುದು (unsubscribe) ಅಥವಾ ಕೆಲವು ಸಂಪರ್ಕಗಳನ್ನು ಅಳಿಸುವುದು ಅಥವಾ ನಿರ್ಬಂಧಿಸುವುದು,  - ಇವುಗಳನ್ನು ಮಾಡಿರಿ.

 ಅಬ್ರಹಾಮನು ಲೋಟನಿಂದ ಬೇರ್ಪಟ್ಟನು ನಂತರವೇ ಕರ್ತನು ಅವನನ್ನು ಆಶೀರ್ವದಿಸಿದನು  (ಆದಿಕಾಂಡ 13:5-13 ಓದಿ) 

ಯಾಕೋಬನು ವಾಗ್ದತ್ತ ದೇಶವನ್ನು ಸ್ವಾಧೀನಪಡಿಸಿಕೊಳ್ಳುವ ಮೊದಲು ಏಸಾವನಿಂದ ಬೇರ್ಪಡಿಸಲ್ಪಡಬೇಕಾಗಿತ್ತು. (ಆದಿಕಾಂಡ 33:16-20 ಓದಿ)
 
Bible Reading: Genesis 27 -29
ಪ್ರಾರ್ಥನೆಗಳು
ತಂದೆಯೇ, ಸರಿಯಾದ ಜನರೊಂದಿಗೆ ನಾನು ಸಹವಾಸಮಾಡುವಂತೆ ಸಹಾಯ ಮಾಡಿ. ಅವರ ಜೀವನದಲ್ಲಿ ನಾನು ಕಾಣುವ ದೈವಿಕ ಗುಣಲಕ್ಷಣಗಳು ನನ್ನ ಮೇಲೆ ಪ್ರಭಾವ ಬೀರುವಂತಾಗಲಿ ಆಗ ನಾನು ನಿಮ್ಮ ಮಹಿಮೆಗಾಗಿ ಉತ್ತಮ ವ್ಯಕ್ತಿಯಾಗುತ್ತೇನೆ ಎಂದು ನಾನು ಯೇಸುವಿನ ಹೆಸರಿನಲ್ಲಿ ಅರಿಕೆ ಮಾಡುತ್ತೇನೆ. ಆಮೆನ್.


Join our WhatsApp Channel


Most Read
● ಇದು ಕೇವಲ ಸಾಂದರ್ಭಿಕವಾಗಿ ಹೇಳುವ ಶುಭಾಶಯವಲ್ಲ
● ಬದಲಾಗಲು ಇರುವ ತೊಡಕುಗಳು.
● ಅದು ನಿಮಗೆ ಮುಖ್ಯವಾದ್ದದಾದರೆ, ಅದು ದೇವರಿಗೂ ಮುಖ್ಯವೇ.
● ನಂಬಿಕೆಯಿಂದ ಹೊಂದಿಕೊಳ್ಳುವುದು
● ಮತ್ತೊಬ್ಬರ ಪಾತ್ರೆಯನ್ನು ತುಂಬಿಸುವುದನ್ನು ಬಿಟ್ಟು ಬಿಡಬೇಡಿರಿ.
● ಪರಲೋಕ ಎಂದು ಕರೆಯಲ್ಪಡುವ ಸ್ಥಳ
● ಆತ್ಮೀಕ ಬಾಗಿಲುಗಳನ್ನು ಮುಚ್ಚುವುದು
ಅನಿಸಿಕೆಗಳು
ನಮ್ಮನ್ನು ಸಂಪರ್ಕಿಸಿ
Phone: +91 8356956746
+91 9137395828
WhatsApp: +91 8356956746
ಇಮೇಲ್ ವಿಳಾಸ: [email protected]
ವಿಳಾಸ :
10/15, First Floor, Behind St. Roque Grotto, Kolivery Village, Kalina, Santacruz East, Mumbai, Maharashtra, 400098
ಸ್ಪೋರ್ಟಿಫೈ ನ್ನು ಆಲಿಸಿರಿ
Download on the App Store
Get it on Google Play
JOIN MAILING LIST
EXPLORE
ಕಾರ್ಯಕ್ರಮಗಳು
ನೇರಪ್ರಸಾರ
ನೋಹಾಟ್ಯೂಬ್
ದೂರದರ್ಶನ
Donation
ಮನ್ನಾ
ಸ್ತೋತ್ರಗಳು
ಅರಿಕೆಗಳು
ಕನಸುಗಳು
ಸಂಪರ್ಕ
© 2025 Karuna Sadan, India.
➤
ಲಾಗಿನ್
ಈ ಜಾಲದಲ್ಲಿರುವ ವಿಷಯದ ಕುರಿತು ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಿಳಿಸಲು ಲೈಕ್ ಮಾಡಲು ದಯಮಾಡಿ ನಿಮ್ಮ ನೋಹ ಖಾತೆಗೆ ಲಾಗಿನ್ ಆಗಿರಿ
ಲಾಗಿನ್