ಅನುದಿನದ ಮನ್ನಾ
1
0
50
ತಾತ್ಕಾಲಿಕವಾದದ್ದಕ್ಕಾಗಿ ಅಲ್ಲ, ನಿತ್ಯವಾದದ್ದಕ್ಕೆ ಹಾತೊರೆಯಿರಿ.
Sunday, 9th of November 2025
Categories :
ಆಯ್ಕೆಗಳು (Choices)
ಚಿತ್ತಚಂಚಲತೆ(Distraction)
ಲೋಟನ ಹೆಂಡತಿಯನ್ನು ನೆನಪಿಸಿಕೊಳ್ಳಿ. (ಲೂಕ 17:32)
ಬೈಬಲ್ ಕೇವಲ ಐತಿಹಾಸಿಕ ವೃತ್ತಾಂತಗಳಲ್ಲ, ಆದರೆ ಮಾನವ ಅನುಭವಗಳ ಬಟ್ಟೆಯಲ್ಲಿ ಸುತ್ತಿಟ್ಟ ಆಳವಾದ ಪಾಠಗಳಿಂದ ತುಂಬಿದೆ. ಅಂತಹ ಒಂದು ದುಃಖಕರ ಕಥೆ ತಪ್ಪಿದ ಅವಕಾಶ, ಭೂತಕಾಲದ ಹಂಬಲ ಮತ್ತು ಜೀವನವನ್ನು ಬದಲಾಯಿಸುವ ನಿರ್ಧಾರದ ಕಥೆ- ಲೋಟನ ಹೆಂಡತಿಯದ್ದಾಗಿದೆ.
ಸೊದೋಮ್ ನಗರವು ಅದರ ದುಷ್ಟತನದಿಂದಾಗಿ ನಾಶಕ್ಕೆ ತೀರ್ಪಿಗೆ ಒಳಗಾಗಿತ್ತು, ಆದರೆ ದೇವರು ತನ್ನ ಕರುಣೆಯಿಂದ ಲೋಟ ಮತ್ತು ಅವನ ಕುಟುಂಬಕ್ಕೆ ತಪ್ಪಿಸಿಕೊಳ್ಳಲು ಅವಕಾಶವನ್ನು ಒದಗಿಸಿ ಕೊಟ್ಟನು. ಈ ದೈವಿಕ ರಕ್ಷಣಾ ಕಾರ್ಯಾಚರಣೆಯ ನಡುವೆ, "ಹಿಂತಿರುಗಿ ನೋಡಬೇಡ" ಎಂಬ ಸ್ಪಷ್ಟವಾದ ಆಜ್ಞೆಯನ್ನು ನೀಡಲಾಯಿತು(ಆದಿಕಾಂಡ 19:17). ಆದರೂ, ಬೆಂಕಿಯ ಮಳೆಯಂತೆ, ಲೋಟನ ಹೆಂಡತಿ ತನ್ನ ಗತಿ ಬದಲಾಯಿಸಲು ಮುದ್ರೆ ಮಾಡಿದ ಆಯ್ಕೆಯನ್ನು ಮಾಡಿದಳು: ಅವಳು ಹಿಂತಿರುಗಿ ನೋಡಿದಳು. ಇದು ಅದು, ನಾವು ಅರ್ಥಮಾಡಿಕೊಂಡಂತೆ ಕೇವಲ ಒಂದು ಸಾಮಾನ್ಯ ನೋಟವಾಗಿರಲಿಲ್ಲ: ಅದು ಹಂಬಲದ ನೋಟವಾಗಿತ್ತು. ಬಹುಶಃ ಅವಳು ತಾನು ಬಿಡುತ್ತಿರುವ ಜೀವನ, ತನ್ನ ಮನೆಯ ಸೌಕರ್ಯಗಳು ಅಥವಾ ನಗರದ ಪರಿಚಿತತೆಯ ಕುರಿತು ಗೋಳಾಡಿರಬಹುದು. ಸೊದೋಮ್‌ನ ತಾತ್ಕಾಲಿಕ ಸಂತೋಷಗಳೊಂದಿಗಿನ ಅವಳ ಬಾಂಧವ್ಯವು ಅವಳ ಭವಿಷ್ಯದ ಆಶೀರ್ವಾದವನ್ನು ಕಸಿದುಕೊಂಡಿತು.
ಆದರಿಂದ ಕರ್ತನಾದ ಯೇಸು ಮತ್ತಾಯ 5:13 ರಲ್ಲಿ ನಮಗೆ ಹೀಗೆ ಉಪದೇಶಿಸುತ್ತಾನೆ, "ನೀವು ಭೂಮಿಗೆ ಉಪ್ಪಾಗಿದ್ದೀರಿ." ಉಪ್ಪು ರುಚಿಯನ್ನು ಹೆಚ್ಚಿಸುತ್ತದೆ ಮತ್ತು ಶಾಶ್ವತ ಗುಣವನ್ನು ಹೊಂದಿದೆ. ಉಪ್ಪಿನಂತೆ ಕ್ರೈಸ್ತರು, ಶುಭ ಸುದ್ದಿಯನ್ನು ಹಂಚಿಕೊಳ್ಳುವ ಮೂಲಕ, ಪ್ರೀತಿ ಮತ್ತು ಸಂತೋಷದ ಜೀವನವನ್ನು ನಡೆಸುವ ಮೂಲಕ ಮತ್ತು ಪ್ರತಿಕೂಲ ಪರಿಸ್ಥಿತಿಯ ನಡುವೆಯೂ ನಂಬಿಕೆಯಲ್ಲಿ ದೃಢವಾಗಿ ನಿಲ್ಲುವ ಮೂಲಕ ಜಗತ್ತಿಗೆ ಸಂರಕ್ಷಣೆಯನ್ನು ತರುವ ಉದ್ದೇಶವನ್ನು ಹೊಂದಿದ್ದಾರೆ.
ಆದರೆ ಲೋಟನ ಹೆಂಡತಿಯಲ್ಲಿ ಒಂದು ಸ್ಪಷ್ಟ ನೀತಿಪಾಠವಿದೆ. ಅವಳು ಉಪ್ಪಿನಂತೆ ಸಂರಕ್ಷಕ ಪ್ರಭಾವಿ ಸಂಚಾರಿಯಾಗಿರಬೇಕಾಗಿದ್ದರೂ, ಅವಳು ಬದಲಾಗಿ ಉಪ್ಪಿನ ಚಲನರಹಿತ ಸ್ತಂಭವಾದಳು - ಅದು ನಮ್ಮ ಹಿಂದಿನದಕ್ಕಾಗಿ ಹಾತೊರೆಯುವ ಅಪಾಯಗಳ ಸ್ಪಷ್ಟ ಜ್ಞಾಪನೆಯಾಗಿದೆ.
" ಸಹೋದರರೇ, ನಾನಂತೂ ಪಡೆದುಕೊಂಡವನೆಂದು ನನ್ನನ್ನು ಈ ವರೆಗೂ ಎಣಿಸಿಕೊಳ್ಳುವುದಿಲ್ಲ. ಆದರೆ ಒಂದು, ನಾನು ಹಿಂದಿನ ಸಂಗತಿಗಳನ್ನು ಮರೆತುಬಿಟ್ಟು ಮುಂದಿನವುಗಳನ್ನು ಹಿಡಿಯುವುದಕ್ಕಾಗಿ ಎದೆಬೊಗ್ಗಿದವನಾಗಿ, ದೇವರು ಕ್ರಿಸ್ತನ ಮೂಲಕವಾಗಿ ನಮ್ಮನ್ನು ಮೇಲಕ್ಕೆ ಕರೆದು ನಮ್ಮ ಮುಂದೆ ಇಟ್ಟಿರುವ ಬಿರುದನ್ನು ಹೊಂದುವ ಗುರಿಯನ್ನು ತಲುಪಲೆಂದು ಓಡುತ್ತಾ ಇದ್ದೇನೆ ."ಎಂದು ಅಪೊಸ್ತಲ ಪೌಲನು ಫಿಲಿಪ್ಪಿ 3:13-14 ರಲ್ಲಿ ಹೇಳುತ್ತಾನೆ.
ನಮ್ಮ ಆತ್ಮೀಕ ಪ್ರಯಾಣವು ನಾವು ನಮ್ಮ ಹಿಂದಿನ ಸೌಕರ್ಯಗಳು ಅಥವಾ ಆಕರ್ಷಣೆಗಳಲ್ಲಿ ಸಿಕ್ಕಿಹಾಕಿಕೊಳ್ಳಬಾರದು, ಆದರೆ ಶಾಶ್ವತ ಬಹುಮಾನದ ಮೇಲೆ ನಮ್ಮ ದೃಷ್ಟಿಯನ್ನು ನೆಟ್ಟು ಮುಂದುವರಿಯಬೇಕು ಎಂದು ಒತ್ತಾಯಿಸುತ್ತದೆ. ಕೊಲೊಸ್ಸೆ 3:2 ಸಹ ಈ ಭಾವನೆಯನ್ನೇ ಪ್ರತಿಧ್ವನಿಸುತ್ತದೆ: "ಪರಲೋಕದ ಕಾರ್ಯಗಳ ಮೇಲೆಯೇ ನಿಮ್ಮ ಮನಸ್ಸಿಡಿರಿ, ಭೂಸಂಬಂಧವಾದವುಗಳ ಮೇಲೆ ಮನಸ್ಸಿಡಬೇಡಿರಿ." ಭೂಮಿಯ ಮೇಲಿನ ನಮ್ಮ ಜೀವನವು ಕ್ಷಣಿಕವಾಗಿದೆ, ಶಾಶ್ವತತೆಗೆ ಹೋಲಿಸಿದರೆ ಅದು ಕೇವಲ ಕಣ್ಣು ಮಿಟುಕಿಸುವಷ್ಟು ಕ್ಷಣವಷ್ಟೇ. ನಾವು ನಮ್ಮ ಹೃದಯಗಳನ್ನು ದೇವರ ಶಾಶ್ವತ ಸತ್ಯಗಳಲ್ಲಿ ಲಂಗರು ಹಾಕಿದಾಗ ಮತ್ತು ಆತನ ಮಹಿಮೆಯನ್ನು ಪ್ರತಿಬಿಂಬಿಸುವ ಜೀವನಕ್ಕಾಗಿ ಶ್ರಮಿಸುವಾಗ ನಾವು ನಿಜವಾಗಿಯೂ ಉಪ್ಪಾಗುತ್ತೇವೆ, ಜಗತ್ತಿನಲ್ಲಿ ವ್ಯತ್ಯಾಸವನ್ನುಂಟುಮಾಡುತ್ತೇವೆ.
ಲೋಟನ ಹೆಂಡತಿಯನ್ನು ನೆನಪಿಸಿಕೊಳ್ಳುವುದು ಕೇವಲ ಅವಳ ದುರಂತ ಅಂತ್ಯವನ್ನು ನೆನಪಿಸಿಕೊಳ್ಳುವುದಕ್ಕಿಂತ ಹೆಚ್ಚಿನದಾಗಿದೆ; ಅದು ಪ್ರತಿಬಿಂಬಿಸಿಕೊಂಡು ನೋಡುವುದಕ್ಕೆ ತುರ್ತು ಕರೆಯಾಗಿದೆ. ನಮ್ಮ ಪ್ರೀತಿ ಯಾವುದರ ಮೇಲಿದೆ? ನಾವು ಯಾವುದಕ್ಕಾಗಿ ಹಂಬಲಿಸುತ್ತಿದ್ದೇವೆ? ಈ ಲೋಕದ ಸೌಕರ್ಯಗಳು ಮತ್ತು ಆಕರ್ಷಣೆಗಳು ಅಗಾಧವಾಗಿರಬಹುದು, ಆದರೆ ಕ್ರಿಸ್ತನಲ್ಲಿ ನಮಗಾಗಿ ಕಾಯುತ್ತಿರುವ ಮಹಿಮೆಗೆ ಹೋಲಿಸಿದರೆ ಅವು ಮಸುಕಾದದ್ದು.
ನಾವು ಲೋಕದ ಆಕರ್ಷಣೆಯನ್ನು ವಿರೋಧಿಸುವ ಪ್ರತಿ ಬಾರಿಯೂ, ಪರೀಕ್ಷೆಗಳ ನಡುವೆ ನಂಬಿಕೆಯಲ್ಲಿ ದೃಢವಾಗಿ ನಿಲ್ಲುವ ಪ್ರತಿ ಬಾರಿಯೂ ಅಥವಾ ದೇವರ ಪ್ರೀತಿಯ ದಾರಿದೀಪಗಳಾಗಿ ಹೊಳೆಯುವ ಪ್ರತಿ ಬಾರಿಯೂ, ನಾವು ನಿಜವಾಗಿ "ಭೂಮಿಯ ಉಪ್ಪು" ಎಂಬ ನಮ್ಮ ಪಾತ್ರವನ್ನು ಪುನರುಚ್ಚರಿಸುತ್ತೇವೆ. ನಾವು ಕೇವಲ ಮಾತುಗಳಲ್ಲಿ ಮಾತ್ರವಲ್ಲ, ಕಾರ್ಯಗಳಲ್ಲಿಯೂ ಸಾಕ್ಷಿಗಳಾಗಿ, ಕ್ರಿಸ್ತನ ಶಾಶ್ವತ ಪ್ರೀತಿಯ ಕಡೆಗೆ ಇತರರಿಗೆ ಮಾರ್ಗದರ್ಶನ ನೀಡುತ್ತೇವೆ.
ನಾವು ಹಿಂತಿರುಗಿ ನೋಡಿ, ನಮಗಾಗಿ ದೇವರ ಉದ್ದೇಶದೊಂದಿಗೆ ಹೊಂದಿಕೆಯಾಗದ ವಿಷಯಗಳಿಗಾಗಿ ಹಾತೊರೆಯುತ್ತಿದ್ದೇವೆಯೇ? ಅಥವಾ ನಾವು ಕ್ರಿಸ್ತನಲ್ಲಿ ದೃಢವಾಗಿ ನೆಲೆಗೊಂಡಿದ್ದೇವೆಯೇ, ವ್ಯತ್ಯಾಸವಾದ ಕಾರ್ಯವನ್ನು ಮಾಡಲು ಸಿದ್ಧರಿದ್ದೇವೆಯೇ ಮತ್ತು ಶಾಶ್ವತಕ್ಕಾಗಿ ಹಾತೊರೆಯುತ್ತಿದ್ದೇವೆಯೇ? ಇಂದು, ನಾವು ಎಲ್ಲಿದ್ದೇವೆ ಎಂಬುದನ್ನು ನಿರ್ಣಯಿಸಿ ಕೊಳ್ಳಲು ಒಂದು ಕ್ಷಣ ತೆಗೆದುಕೊಳ್ಳೋಣ.
Bible Reading: John 5-6
ಪ್ರಾರ್ಥನೆಗಳು
ತಂದೆಯೇ, ಯೇಸುನಾಮದಲ್ಲಿ ನಮ್ಮ ಆಲೋಚನೆಗಳನ್ನು ನಿತ್ಯತ್ವದ ಕಡೆಗೆ ನಿರ್ದೇಶಿಸು. ಈ ಲೋಕದ ಕ್ಷಣಿಕ ಆಕರ್ಷಣೆಗಳಿಂದ ನಾವು ಮೋಹಗೊಳ್ಳಬಾರದು ಅನೇಕರನ್ನು ನಿನ್ನಲ್ಲಿರುವ ವಿಮೋಚನಾ ಕೃಪೆಗೆ ಕರೆದೊಯ್ಯುವ ಸಂರಕ್ಷಿಸುವ ಉಪ್ಪಾಗುವಂತೆ ನಮಗೆ ಸಹಾಯ ಮಾಡು. ಆಮೆನ್.
Join our WhatsApp Channel
Most Read
● ಪವಿತ್ರಾತ್ಮನ ಇತರ ಪ್ರಕಟನಾತ್ಮಕ ವರಗಳಿಗೆ ಪ್ರವೇಶಹೊಂದಿ.● ನಿಮ್ಮ ಮನೋಭಾವವು ನಿಮ್ಮ ಯೋಗ್ಯತೆಯನ್ನು ನಿರ್ಧರಿಸುತ್ತದೆ
● ಪ್ರೀತಿಯ ಹುಡುಕಾಟ
● ನಂಬಿಕೆ ಎಂದರೇನು ?
● ಜೀವಬಾದ್ಯರ ಪುಸ್ತಕ
● ಅಗ್ನಿಯು ಸುರಿಯಲ್ಪಡಬೇಕು
● ಬೀಜದಲ್ಲಿರುವ ಶಕ್ತಿ -2
ಅನಿಸಿಕೆಗಳು
