"ಅದನ್ನು ಕೇಳಿ ಜನಸಮೂಹದವರೆಲ್ಲರೂ ಗುಲ್ಲುಮಾಡಿ ಬಹಳ ಕೂಗಿಕೊಂಡರು; ಆ ರಾತ್ರಿಯೆಲ್ಲಾ ಜನರು ಅಳುತ್ತಿದ್ದರು. ಇಸ್ರಾಯೇಲ್ಯರೆಲ್ಲರೂ ಮೋಶೆ ಆರೋನರಿಗೆ ವಿರೋಧವಾಗಿ ಗುಣುಗುಟ್ಟಿ - ನಾವು ಐಗುಪ್ತದೇಶದಲ್ಲಿಯೇ ಸತ್ತಿದ್ದರೆ ಎಷ್ಟೋ ಮೇಲಾಗಿತ್ತು; ಈ ಅರಣ್ಯದಲ್ಲಿಯಾದರೂ ಸತ್ತಿದ್ದರೆ ಮೇಲಾಗಿತ್ತು. ಯೆಹೋವನು ನಮ್ಮನ್ನು ಯಾಕೆ ಕತ್ತಿಯ ಬಾಯಿಂದ ಸಾಯಿಸುವದಕ್ಕೆ ಈ ದೇಶಕ್ಕೆ ಬರಮಾಡುತ್ತಾನೆ; ನಮ್ಮ ಹೆಂಡರೂ ಮಕ್ಕಳೂ ಪರರ ಪಾಲಾಗುವರಲ್ಲಾ; ನಾವು ಐಗುಪ್ತದೇಶಕ್ಕೆ ತಿರಿಗಿ ಹೋಗುವದು ಒಳ್ಳೇದಲ್ಲವೇ ಎಂದು ಹೇಳಿಕೊಳ್ಳುತ್ತಾ ಒಬ್ಬರ ಸಂಗಡಲೊಬ್ಬರು - ನಾವು ನಾಯಕನನ್ನು ನೇವಿುಸಿಕೊಂಡು ಐಗುಪ್ತದೇಶಕ್ಕೆ ತಿರಿಗಿ ಹೋಗೋಣ ಎಂದು ಮಾತಾಡಿಕೊಳ್ಳುತ್ತಿದ್ದರು."(ಅರಣ್ಯ ಕಾಂಡ 14:1-3)
ದೇವರು ಇಸ್ರಾಯೇಲ್ ಮಕ್ಕಳನ್ನು ಅವರಿಗಾಗಿ ಪವಾಡಗಳು ಮತ್ತು ಸೂಚಕ ಕಾರ್ಯಗಳು ಮತ್ತು ಅದ್ಭುತಕಾರ್ಯಗಳಿಂದ ಮಾಡುತ್ತಾ ಇಲ್ಲಿಯವರೆಗೆ ನಡೆಸಿಕೊಂಡು ಬಂದಿದ್ದನು. ಖಂಡಿತವಾಗಿಯೂ ಕರ್ತನು ಅವರನ್ನು ಇನ್ನು ಮುಂದೆಯೂ ಕರೆದುಕೊಂಡು ಹೋಗುವವನಾಗಿದ್ದು ಅವರನ್ನು ಹಾಗೆಯೇ ಅವರ ಸಂಕಷ್ಟದಲ್ಲಿ ಬಿಟ್ಟುಬಿಡುತ್ತಿರಲಿಲ್ಲ. ಅವರ ದೈಹಿಕವಾದ ಸಾಮರ್ಥ್ಯಗಳೇ ಅವರನ್ನು ಇಲ್ಲಿಯವರೆಗೆ ಕರೆತರದೇ ಕರ್ತನ ಕಾರಣದಿಂದಾಗಿ ತಾವು ಇಲ್ಲಿಯವರೆಗೂ ಬಂದಿದ್ದೇವೆ ಎಂಬುದನ್ನು ಅವರು ಅರ್ಥಮಾಡಿಕೊಂಡಿದ್ದರೆ, ಅವರು ಹಿಂದಿನದನ್ನು ನೋಡುವುದನ್ನು ನಿಲ್ಲಿಸಿ ಬದಲಾಗಿ ಕರ್ತನನ್ನು ಎದುರುನೋಡುತ್ತಿದ್ದರು.
ಅಂತೆಯೇ, ಆರ್ಥಿಕ ಚೇತರಿಕೆಯ ಆರಂಭಿಕ ಹಂತವೆಂದರೆ ನಿಮಗೆ ನೀವೇ ಸ್ವಾನುಕಂಪ ತೋರಿಸಿಕೊಳ್ಳುವುದನ್ನು ನಿಲ್ಲಿಸಿ ವಾಸ್ತವವನ್ನು ಒಪ್ಪಿಕೊಳ್ಳುವುದಾಗಿದೆ. ಹಿಂದಿನದ್ದನ್ನೇ ಯೋಚಿಸಿ ಬದುಕುವುದರಿಂದ ಮುಂದೆ ಸಾಗುವುದು ಕಷ್ಟವಾಗುತ್ತದೆ. ಆದದರಿಂದ ಅದನ್ನು ಬಿಟ್ಟುಬಿಡಿ ಮತ್ತು ಮುಂದೆ ಸಾಗಲು ಬದ್ಧರಾಗಿರಿ. ಅದುವೇ ಸರಿಯಾದ ಕೆಲಸ ಎಂಬ ಕಾರಣಕ್ಕಾಗಿ ಮಾತ್ರವಲ್ಲದೇ, ಅದು ನಿಮಗೆ ನೀವೇ ಸಹಾಯ ಮಾಡಿಕೊಳ್ಳುವ ಅತ್ಯುತ್ತಮ ಮಾರ್ಗವೂ ಆಗಿದೆ.
ನಿಮ್ಮ ಹಣಕಾಸಿನ ವಿಷಯದಲ್ಲಿ ನೀವು ಆರ್ಥಿಕ ಪ್ರಗತಿಯನ್ನು ಸಾಧಿಸಲು ಬಯಸುವುದಾದರೆ ನೀವು ನಿಮ್ಮ ಹಿಂದಿನ ಜೀವಿತದ ಅನುಭವದಿಂದ ಕಲಿಯಬಹುದೇ ಹೊರತು ಆ ನಿಮ್ಮ ಹಿಂದಿನ ಜೀವಿತ ಕಾಲಕ್ಕೆ ಹೋಗಿ ಬದುಕಲು ನಿಮಗೆ ಸಾಧ್ಯವಾಗುವುದಿಲ್ಲ. ನೀವು ನಿಮ್ಮ ದುಃಖದಲ್ಲಿಯೇ ಮುಳುಗುವ ಮೂಲಕ ನಿಮ್ಮ ಸಮಯ ಮತ್ತು ಶಕ್ತಿಯನ್ನು ವ್ಯರ್ಥ ಮಾಡಿಕೊಳ್ಳುವುದರಿಂದ ಜೀವನದಲ್ಲಿ ಮುಂದುವರಿಯಲು ನೀವು ಎದುರಿಸುವ ನಿಜವಾದ ಸವಾಲುಗಳನ್ನು ಪರಿಹರಿಸಲು ನಿಮ್ಮಲ್ಲಿ ಕಡಿಮೆ ಬಲಹೊಂದಿ ಕೊಳ್ಳುವವರಾಗುತ್ತೀರಿ.
ಹಿಂದಿನ ಅನುಭವದಿಂದ ಕಲಿಯುವುದು ಎಂದರೆ ನೀವು ಈಗ ಇರುವ ಪರಿಸ್ಥಿತಿಗೆ ಕಾರಣವಾದ ಅದೇ ಆರ್ಥಿಕ ಪ್ರಮಾದಗಳನ್ನು ನೀವು ಪುನರಾವರ್ತಿಸಬಾರದು. ಇದರರ್ಥ ನೋಡಿದ ತಕ್ಷಣ ಖರೀದಿಸುವುದನ್ನು ತ್ಯಜಿಸುವುದು, ಇತ್ತೀಚಿನ ಗ್ಯಾಜೆಟ್‌ಗಳಿಗಾಗಿ ಹಂಬಳಿಸುವುದನ್ನು ಬಿಡುವುದು, ರೆಸ್ಟೋರೆಂಟ್‌ಗಳಲ್ಲಿ ನಿರಂತರವಾಗಿ ತಿನ್ನುವ ಇತ್ಯಾದಿಗಳಂತಹ ಕೆಲವು ಪ್ರಮುಖ ಜೀವನಶೈಲಿಯ ಮಾರ್ಪಾಡುಗಳನ್ನು ಮಾಡಿ ಕೊಳ್ಳಬೇಕಾಗುತ್ತದೆ. (ದಯವಿಟ್ಟು ಇದು ಕೇವಲ ಸಾಂಕೇತಿಕ ಪಟ್ಟಿ ಮತ್ತು ನಿಮಗೆ ಅನ್ವಯಿಸದಿರಬಹುದು ಎಂಬುದನ್ನು ಗಮನಿಸಿ)
ಕೊನೆಯದಾಗಿ, ಯಾರೋ ಒಬ್ಬರು ಹೇಳಿದರು, "ಉತ್ತಮ ರಕ್ಷಿಸಿಕೊಳ್ಳುವಂತದ್ದು ಉತ್ತಮವಾದ ಅಪರಾಧವಾಗಿದೆ". ಎಂದು ಆದ್ದರಿಂದ ರಕ್ಷಣಾತ್ಮಕ ಕ್ರಮದಿಂದ ಹೊರಬಂದು ಸ್ಪಷ್ಟವಾದ ಆಕ್ರಮಣಕಾರಿ ತಂತ್ರದೊಂದಿಗೆ ಚೇತರಿಕೆಯ ಹಾದಿಯಲ್ಲಿ ಪ್ರಾರಂಭಿಸಿ. ಇದಕ್ಕಾಗಿ ಯೋಜನೆಯನ್ನು ಹೊಂದಿರುವುದು ಬಹಳ ಮುಖ್ಯ.
ಯೋಜನೆ ಎಂದರೆ ನಿಮ್ಮ ಮುಂದೆ ಒಂದು ಮಾರ್ಗವನ್ನು ರೂಪಿಸಿಕೊಳ್ಳುವುದು; ಆಗ ಎಲ್ಲಿ ಮತ್ತು ಯಾವಾಗ ಏನು ಮಾಡಬೇಕೆಂದು ನಿಮಗೆ ತಿಳಿಯುತ್ತದೆ; ಇಲ್ಲದಿದ್ದರೆ, ನೀವು ಗುರಿಯಿಲ್ಲದೆ ಅಲೆದಾಡುತ್ತಿದ್ದೀರಿ. ನಿಮ್ಮ ಸಂಗಾತಿಯೊಂದಿಗೆ ವಿಷಯಗಳನ್ನು ಚರ್ಚಿಸಿ ಮತ್ತು ಆರ್ಥಿಕ ಚೇತರಿಕೆಯ ಹಾದಿಯಲ್ಲಿ ಸಾಗಲು ಪ್ರಾರ್ಥನಪೂರ್ವಕವಾಗಿ ಯೋಜನೆಯನ್ನು ರೂಪಿಸಿ
ಯೇಸುನಾಮದಲ್ಲಿ ಸಂಪತ್ತನ್ನು ಸೃಷ್ಟಿಸುವ ಬಲವು ಈಗ ನನ್ನ ಮೇಲಿದೆ. ಅವಕಾಶದ ದೈವಿಕ ಬಾಗಿಲುಗಳು ನನ್ನ ಕುಟುಂಬ ಸದಸ್ಯರಿಗಾಗಿಯೂ ಮತ್ತು ನನಗಾಗಿಯೂ ಯೇಸುನಾಮದಲ್ಲಿ ಈಗಲೇ ತೆರೆದಿವೆ. (ಈ ಪ್ರಾರ್ಥನಾ ಅಂಶಗಳನ್ನು ಪ್ರಾರ್ಥಿಸುವಲ್ಲಿ ನಿಮ್ಮ ಇಡೀ ಕುಟುಂಬವನ್ನು ತೊಡಗಿಸಿಕೊಳ್ಳಿ. ಈ ಅಂಶಗಳನ್ನು ನೀವು ಸಾಧ್ಯವಾದಷ್ಟು ಬಾರಿ ಪ್ರಾರ್ಥಿಸಿ)
Bible Reading: Psalms 120-133
ಅರಿಕೆಗಳು
ಯೇಸುನಾಮದಲ್ಲಿ ಸಂಪತ್ತನ್ನು ಸೃಷ್ಟಿಸುವ ಬಲವು ಈಗ ನನ್ನ ಮೇಲಿದೆ. ಅವಕಾಶದ ದೈವಿಕ ಬಾಗಿಲುಗಳು ನನ್ನ ಕುಟುಂಬ ಸದಸ್ಯರಿಗಾಗಿಯೂ ಮತ್ತು ನನಗಾಗಿಯೂ ಯೇಸುನಾಮದಲ್ಲಿ ಈಗಲೇ ತೆರೆದಿವೆ.
Join our WhatsApp Channel

Most Read
● ನೀವೊಂದು ಉದ್ದೇಶಕ್ಕಾಗಿ ಹುಟ್ಟಿದ್ದೀರಿ.● ಆತ್ಮವಂಚನೆ ಎಂದರೇನು? -I
● ಇಂತಹ ಪರಿಶೋಧನೆಗಳು ಏಕೆ?
● ಪುರಾತನ ಮಾರ್ಗಗಳನ್ನು ವಿಚಾರಿಸಿ
● ಪುರುಷರು ಏಕೆ ಪತನಗೊಳ್ಳುವರು -4
● ಅಂತ್ಯಕಾಲದ 7 ಪ್ರಮುಖವಾದ ಪ್ರವಾದನಾ ಸೂಚನೆಗಳು : #1
● ಕರ್ತನೇ, ನಾನು ಏನು ಮಾಡಬೇಕೆಂದು ನೀನು ಬಯಸುತ್ತೀ?
ಅನಿಸಿಕೆಗಳು