english हिंदी मराठी తెలుగు മലയാളം தமிழ் Contact us ನಮ್ಮನ್ನು ಸಂಪರ್ಕಿಸಿ ಸ್ಪೋರ್ಟಿಫೈ ನ್ನು ಆಲಿಸಿರಿ ಸ್ಪೋರ್ಟಿಫೈ ನ್ನು ಆಲಿಸಿರಿ Download on the App StoreiOS ನಲ್ಲಿ ಆಪ್ ನ್ನು ಡೌನ್ಲೋಡ್ ಮಾಡಿ Get it on Google Play ಆಂಡ್ರಾಯ್ಡ್ ನಲ್ಲಿ ಆಪ್ ನ್ನು ಡೌನ್ಲೋಡ್ ಮಾಡಿ
 
ಲಾಗಿನ್
ಆನ್ಲೈನ್ ಮೂಲಕ ಕಾಣಿಕೆ ನೀಡಲು
ಲಾಗಿನ್
  • ಮೂಲತಾಣ
  • ಕಾರ್ಯಕ್ರಮಗಳು
  • ನೇರಪ್ರಸಾರ
  • ದೂರದರ್ಶನ
  • ನೋಹಾಟ್ಯೂಬ್
  • ಸ್ತೋತ್ರಗಳು
  • ಸುದ್ದಿಗಳು
  • ಮನ್ನಾ
  • ಪ್ರಾರ್ಥನೆಗಳು
  • ಅರಿಕೆಗಳು
  • ಕನಸುಗಳು
  • ವಿದ್ಯುನ್ಮಾನ -ಪುಸ್ತಕಗಳು
  • ವ್ಯಾಖ್ಯಾನ
  • ಶ್ರದ್ದಾಂಜಲಿ
  • ಓಯಸಿಸ್
  1. ಮೂಲತಾಣ
  2. ಅನುದಿನದ ಮನ್ನಾ
  3. ಯಾರೂ ವಿನಾಯಿತಿ ಹೊಂದಿದವರಿಲ್ಲ.
ಅನುದಿನದ ಮನ್ನಾ

ಯಾರೂ ವಿನಾಯಿತಿ ಹೊಂದಿದವರಿಲ್ಲ.

Tuesday, 6th of May 2025
2 0 110
Categories : ಆಧ್ಯಾತ್ಮಿಕ ನಡಿಗೆ (Spiritual Walk) ನಮ್ರತೆ (Humility)
"ಶಾಂತಿದಾಯಕನಾದ ದೇವರು ತಾನೇ ನಿಮ್ಮನ್ನು ಪರಿಪೂರ್ಣವಾಗಿ ಪವಿತ್ರಮಾಡಲಿ. ನಮ್ಮ ಕರ್ತನಾದ ಯೇಸು ಕ್ರಿಸ್ತನು ಪ್ರತ್ಯಕ್ಷನಾದಾಗ ನಿಮ್ಮ ಆತ್ಮಪ್ರಾಣಶರೀರಗಳು ದೋಷವಿಲ್ಲದೆ ಸಂಪೂರ್ಣವಾಗಿ ಕಾಣಿಸುವಂತೆ ಕಾಪಾಡಲ್ಪಡಲಿ." ಎಂದು 1 ಥೆಸಲೊನೀಕ 5:23 ನಮಗೆ ಹೇಳುತ್ತದೆ. ಮನುಷ್ಯನು ತ್ರಯೇಕ ಜೀವಿ. ಅವನು ಒಂದು ಆತ್ಮವನ್ನೂ ಒಂದು ಪ್ರಾಣವನ್ನು ಹೊಂದಿದ್ದು ಶರೀರದಲ್ಲಿ ವಾಸಿಸುವವನಾಗಿದ್ದಾನೆ. ಜೀವನದ ಶಾರೀರಿಕ , ಭಾವನಾತ್ಮಕ ಮತ್ತು ಆತ್ಮೀಕ ಈ ಮೂರು ಕ್ಷೇತ್ರಗಳಲ್ಲಿಯೂ ಅವನು ಹತಾಶೆಯನ್ನು ಅನುಭವಿಸಬಹುದು.

ಹತಾಶೆಯಿಂದ ಚೇತರಿಸಿಕೊಳ್ಳಲು ಸ್ವಲ್ಪ ದಿನಗಳೋ ಮತ್ತು ಕೆಲವು ಸಂದರ್ಭಗಳಲ್ಲಿ, ವಾರಗಳನ್ನೂ ಅದು ತೆಗೆದುಕೊಳ್ಳಬಹುದು. ಆದ್ದರಿಂದ, ಆದರ್ಶಪ್ರಾಯವಾಗಿ, ಇದರ ಸಂಭಾವ್ಯ ಲಕ್ಷಣಗಳು ದೀರ್ಘಕಾಲದವರೆಗೆ ಕಾಡುವುದಕ್ಕೆ ಲಗ್ಗೆ ಇಡುವ ಮೊದಲೇ ನೀವು ಅವುಗಳನ್ನು ಗುರುತಿಸಿಕೊಳ್ಳಲು ಬಯಸುವವರಾಗಿರಿ. ಈ ರೀತಿಯಾಗಿ, ಪರಿಸ್ಥಿತಿ ತುಂಬಾ ಸಮಸ್ಯಾತ್ಮಕವಾಗುವ ಮೊದಲೇ ನೀವು ಅದರ ಅಂಚಿನಿಂದ ಹಿಂದೆ ಸರಿಯಲು ಕ್ರಮಗಳನ್ನು ತೆಗೆದುಕೊಳ್ಳಬಹುದು. 

ಈಗ ನಾವು ದೇವಮನುಷ್ಯನಾದ ಎಲೀಯನ ಜೀವನವನ್ನು ನೋಡೋಣ. ಸತ್ಯವೇದದಲ್ಲಿ ಗಮನಾರ್ಹ ವ್ಯಕ್ತಿಯಾಗಿದ್ದ ಎಲಿಯನು ಒಬ್ಬ ಅಸಾಧಾರಣ ದೇವ ಮನುಷ್ಯನಾಗಿದ್ದನು. ಮೋಶೆಯು ಧರ್ಮಶಾಸ್ತ್ರವನ್ನು ಪ್ರತಿನಿಧಿಸಿದಂತೆಯೇ, ಎಲೀಯನು ಪ್ರವಾದಿಗಳನ್ನು ಪ್ರತಿನಿಧಿಸಿದನು. ರೂಪಾಂತರದ ಪರ್ವತದ ಮೇಲೆ ಯೇಸುವಿನೊಂದಿಗೆ ಮೋಶೆ ಮತ್ತು ಎಲೀಯರ ಭೇಟಿಯು ಹೆಚ್ಚಿನ ಮಹತ್ವವನ್ನು ಹೊಂದಿತ್ತು. ಕಲ್ವರಿಯಲ್ಲಿ ಶಿಲುಬೆಯ ಮೇಲೆ ಯೇಸು ಮಾಡಿದ ಅಪೂರ್ವ ಬಲಿಯನ್ನು ಈ ಧರ್ಮಶಾಸ್ತ್ರ ಮತ್ತು ಪ್ರವಾದನೆಗಳು ಬೆಂಬಲಿಸಿ ಮತ್ತು ಮೌಲ್ಯೀಕರಿಸುತ್ತದೆ ಎಂಬುದನ್ನು ಅದು ವಿವರಿಸುತ್ತದೆ.

ಹಳೆಯ ಒಡಂಬಡಿಕೆಯ ಈ ಇಬ್ಬರು ನಿರ್ಣಾಯಕ ವ್ಯಕ್ತಿಗಳ ಉಪಸ್ಥಿತಿಯು ಗತಕಾಲ ಮತ್ತು ಯೇಸುವಿನ ಉದ್ದೇಶ ಎರಡರ ನಡುವಿನ ಸಂಪರ್ಕವನ್ನು ಪ್ರದರ್ಶಿಸಿತು. ಅವರ ಅನುಮೋದನೆಯು ದೈವಿಕ ಯೋಜನೆಯನ್ನು ಬಲಪಡಿಸಿ ಇತಿಹಾಸದುದ್ದಕ್ಕೂ ದೇವರ ಸಂದೇಶದ ನಿರಂತರತೆಯನ್ನು ಪ್ರದರ್ಶಿಸಿತು. ಈ ಪ್ರಬಲ ಕ್ಷಣವು ಧರ್ಮಶಾಸ್ತ್ರ , ಪ್ರವಾದಿಗಳು ಮತ್ತು ಮೆಸ್ಸೀಯನನ್ನು ಒಟ್ಟುಗೂಡಿಸಿ, ದೇವರ ವಾಗ್ದಾನದ ನೆರವೇರಿಕೆ ಮತ್ತು ಹೊಸ ಯುಗದ ಆರಂಭವನ್ನು ದೃಢಪಡಿಸಿತು. 

ಸತ್ಯವೇದದಲ್ಲಿ ಪ್ರವಾದಿಯನ್ನು ಪ್ರತಿನಿಧಿಸುವ ಎಲೀಯನಂತಹ ದೇವರ ಮಹಾನ್ ಮನುಷ್ಯನೇ ಹತಾಶೆಯನ್ನು ಅನುಭವಿಸಿದ್ದರೆ, ನೀವು ಹತಾಶೆಯಿಂದ ಮುಕ್ತಾರಾಗಿದ್ದೀರಿ ಎಂದು ಒಂದು ಕ್ಷಣವೂ ಭಾವಿಸಬೇಡಿ - ಅಂತವರು ಯಾರೂ ಇಲ್ಲ. ನಾವು ಜಾಗರೂಕರಾಗಿರಬೇಕು ಮತ್ತು ನಮ್ಮ ದೌರ್ಬಲ್ಯಗಳನ್ನು ಒಪ್ಪಿಕೊಳ್ಳಬೇಕು. ಪೌಲನು ನಮಗೆ ಎಚ್ಚರಿಕೆ ನೀಡುತ್ತಾ, "ಆದ್ದರಿಂದ ತಾನು ನಿಂತಿದ್ದೇನೆ ಎಂದು ಭಾವಿಸುವವನು ಬೀಳದಂತೆ ಎಚ್ಚರವಹಿಸಲಿ" ಎಂದು ಹೇಳಿದನು. (1 ಕೊರಿಂಥ 10:12).

ಅನೇಕ ಜನರು ಮೇಲ್ನೋಟಕ್ಕೆ ಚೆನ್ನಾಗಿ ಕಾಣಿಸಬಹುದು, ಆದರೆ ಹೆಚ್ಚು ಸಮಯದವರೆಗೆ ಮುಖವಾಡ ಧರಿಸುವಂತದ್ದು ಹಾನಿಕಾರಕವಾಗಿದೆ. ಮಿತಿಗಳು ಮತ್ತು ಅಪೂರ್ಣತೆಗಳೊಂದಿಗೆ ನಮ್ಮ ಮಾನವೀಯತೆಯನ್ನು ಅಳವಡಿಸಿಕೊಳ್ಳುವುದು ನಮ್ಮ ಯೋಗಕ್ಷೇಮವನ್ನು ಕಾಪಾಡಿಕೊಳ್ಳಲು ಅತ್ಯಗತ್ಯ. ಹತಾಶೆಯ ವಾಸ್ತವತೆಯನ್ನು ನಿರ್ಲಕ್ಷಿಸುವುದು ಭವಿಷ್ಯದಲ್ಲಿ ತೀವ್ರ ಪರಿಣಾಮಗಳಿಗೆ ಕಾರಣವಾಗಬಹುದು. ಅಪಾಯವನ್ನು ಒಪ್ಪಿಕೊಳ್ಳುವುದು ಮತ್ತು ತಡೆಗಟ್ಟುವ ಕ್ರಮಗಳನ್ನು ತೆಗೆದುಕೊಳ್ಳುವುದು ಸಮತೋಲನವನ್ನು ಕಾಪಾಡಿಕೊಳ್ಳಲು ಮತ್ತು ಮುರಿದು ಹೋಗುವ ಹಂತವನ್ನು ತಲುಪುವುದನ್ನು ತಪ್ಪಿಸಲು ನಮಗೆ ಸಹಾಯ ಮಾಡುತ್ತದೆ.

3½ ವರ್ಷಗಳ ಕಾಲ ತೀವ್ರವಾಗಿ ಪ್ರಾರ್ಥಿಸಿದ ನಂತರ, ಎಲೀಯನು ಕ್ಷಾಮದ ಅಂತ್ಯವನ್ನು ಪ್ರವಾದನಾತ್ಮಕವಾಗಿ ಘೋಷಿಸಿದನು. ದೇವರ ಮೇಲಿದ್ದ ಅವನ ಅಚಲವಾದ ನಂಬಿಕೆ ಮತ್ತು ಸಂಪರ್ಕಕ್ಕೆ ಸಾಕ್ಷಿಯಾಗಿ, ದೇವರ ಆತ್ಮವನ್ನು ಸೂಚಿಸುವ ಕರ್ತನ ಕೈ ಎಲೀಯನ ಮೇಲೆ ಬಂದು ದೈವಿಕ ಶಕ್ತಿಯ ಗಮನಾರ್ಹ ಪ್ರದರ್ಶನದಲ್ಲಿ, ಎಲೀಯನು ತನ್ನ ನಡುವನ್ನು ಕಟ್ಟಿಕೊಂಡು, ತನ್ನ ಉದ್ದನೆಯ ನಿಲುವಂಗಿಗಳನ್ನು ಒಟ್ಟುಗೂಡಿಸಿ, ರಾಜ ಅಹಾಬನ ರಥಗಳ ಮುಂದೆ ಯಜ್ರೀಲ್ ಪ್ರವೇಶದ್ವಾರದವರೆಗೂ ಓಡಿದನು (1 ಅರಸುಗಳು 18:46). ಆ ಸಮಯದಲ್ಲಿ, ಅಹಾಬನ ರಥಗಳನ್ನು ಸಾರಿಗೆಯ ವ್ಯವಸ್ಥೆಯಲ್ಲಿಯೇ ಪರಾಕಾಷ್ಠೆ ಯ ವಾಹನಗಳಾಗಿದ್ದು ಇಂದಿನ ಮರ್ಸಿಡಿಸ್ ಮತ್ತು BMW ಗಳಂತಹ ಉನ್ನತ-ಮಟ್ಟದ ವಾಹನಗಳಂತೆ ಇದ್ದವು ಎಂದು ಪರಿಗಣಿಸಲ್ಪಟ್ಟಿತ್ತು. 

ದೇವರ ಕೈ ಎಲೀಯನ ಮೇಲಿದ್ದರೂ, ಅವನು ಇನ್ನೂ ಭೌತಿಕ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದನು ಎಂಬುದನ್ನು ಗುರುತಿಸುವುದು ಬಹಳ ಮುಖ್ಯ. ನಮಗೂ ಇದು ಅನ್ವಯಿಸುತ್ತದೆ: ದೇವರ ಆತ್ಮವು ನಮ್ಮೊಂದಿಗಿರಬಹುದು, ಆದರೆ ನಾವು ಇನ್ನೂ ನಮ್ಮ ಭೌತಿಕ ದೇಹಗಳಲ್ಲಿ ಕೆಲಸ ಮಾಡುತ್ತಿದ್ದೇವೆ. ಅಪೊಸ್ತಲ ಪೌಲನು ಬರೆದಂತೆ, "ನಮ್ಮ ಬಾಹ್ಯ ಮನುಷ್ಯನು ನಾಶವಾಗುತ್ತಿದ್ದರೂ, ಒಳಗಿನ ಮನುಷ್ಯನು ದಿನದಿಂದ ದಿನಕ್ಕೆ ನವೀಕರಿಸಲ್ಪಡುತ್ತಿದ್ದಾನೆ" (2 ಕೊರಿಂಥ 4:16). 

Bible Reading: 2 kings 8-9
ಪ್ರಾರ್ಥನೆಗಳು
ತಂದೆಯೇ, ನನ್ನ ಜೀವನದಲ್ಲಿ ಇರುವ ಹತಾಶೆಯ ಚಿಹ್ನೆಗಳನ್ನು ಗುರುತಿಸಲು ನನಗೆ ಸಹಾಯ ಮಾಡು ಮತ್ತು ಅವುಗಳನ್ನು ತಡೆಗಟ್ಟುವ ಕ್ರಮಗಳನ್ನು ತೆಗೆದುಕೊಳ್ಳಲು ನನಗೆ ಅಗತ್ಯವಿರುವ ತಿಳುವಳಿಕೆಯನ್ನು ಯೇಸುನಾಮದಲ್ಲಿ ಅನುಗ್ರಹಿಸು. ನನಗೆ ಅಗತ್ಯವಿರುವಾಗಲೆಲ್ಲವೂ ನಿನ್ನ ಸಹಾಯವನ್ನು ಪಡೆದುಕೊಳ್ಳಲು ನಿನ್ನಾ ಸನ್ನಿಧಾನಕ್ಕೆ ಓಡಿ ಬರುವಂತ ದೀನತೆಯನ್ನು ನನಗೆ ಯೇಸುನಾಮದಲ್ಲಿ ಅನುಗ್ರಹಿಸು. ಆಮೆನ್!!

Join our WhatsApp Channel


Most Read
● ದೈವಿಕ ಶಾಂತಿಯನ್ನು ಪ್ರವೇಶಿಸುವುದು ಹೇಗೆ
● ಅತ್ಯುತ್ತಮ ದೇವರು ನೀಡಿದ ಸಂಪನ್ಮೂಲ
● ದಿನ 20:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ
● ನಿಮ್ಮ ಭೂಮಿಯನ್ನು ಉತ್ತು ಹದಮಾಡಿರಿ
● ಉಪವಾಸದಲ್ಲಿರುವ ಜೀವನವನ್ನು ಬದಲಾಯಿಸುವ ಪ್ರಯೋಜನಗಳು
● ಕೃತಜ್ಞತೆಯ ಪಾಠ
● ಹಣಕಾಸಿನ ಅದ್ಭುತ ಬಿಡುಗಡೆ.
ಅನಿಸಿಕೆಗಳು
ನಮ್ಮನ್ನು ಸಂಪರ್ಕಿಸಿ
Phone: +91 8356956746
+91 9137395828
WhatsApp: +91 8356956746
ಇಮೇಲ್ ವಿಳಾಸ: [email protected]
ವಿಳಾಸ :
10/15, First Floor, Behind St. Roque Grotto, Kolivery Village, Kalina, Santacruz East, Mumbai, Maharashtra, 400098
ಸ್ಪೋರ್ಟಿಫೈ ನ್ನು ಆಲಿಸಿರಿ
Download on the App Store
Get it on Google Play
JOIN MAILING LIST
EXPLORE
ಕಾರ್ಯಕ್ರಮಗಳು
ನೇರಪ್ರಸಾರ
ನೋಹಾಟ್ಯೂಬ್
ದೂರದರ್ಶನ
Donation
ಮನ್ನಾ
ಸ್ತೋತ್ರಗಳು
ಅರಿಕೆಗಳು
ಕನಸುಗಳು
ಸಂಪರ್ಕ
© 2025 Karuna Sadan, India.
➤
ಲಾಗಿನ್
ಈ ಜಾಲದಲ್ಲಿರುವ ವಿಷಯದ ಕುರಿತು ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಿಳಿಸಲು ಲೈಕ್ ಮಾಡಲು ದಯಮಾಡಿ ನಿಮ್ಮ ನೋಹ ಖಾತೆಗೆ ಲಾಗಿನ್ ಆಗಿರಿ
ಲಾಗಿನ್