ಅನುದಿನದ ಮನ್ನಾ
2
2
49
ಕೋಪವನ್ನು ಅರ್ಥಮಾಡಿಕೊಳ್ಳುವುದು
Sunday, 8th of February 2026
Categories :
ಗುಣ(character)
ಭಾವನೆ (Emotion)
ಕೋಪ ಎಂದರೇನು?
ಹಾಗಾದರೆ, ಕೋಪ ಎಂದರೇನು? ಕೋಪವನ್ನು ಪರಿಣಾಮಕಾರಿಯಾಗಿ ನಿಭಾಯಿಸಲು ಮಾಡಬೇಕಾದ ಬಹಳ ಮುಖ್ಯವಾದ ಕಾರ್ಯ ಕೋಪ ಮತ್ತು ಅದರ ಕಾರ್ಯವಿಧಾನಗಳನ್ನು ಅರ್ಥಮಾಡಿಕೊಳ್ಳುವುದಾಗಿದೆ.
ಕೋಪದ ಬಗ್ಗೆ ಅರ್ಥಮಾಡಿಕೊಳ್ಳಬೇಕಾದ ಮೊದಲ ವಿಷಯವೆಂದರೆ ಅದು ಒಂದು ನಿಜವಾದ ದೈಹಿಕ ಪ್ರತಿಕ್ರಿಯೆಯಾಗಿದೆ.
ಎಂದು ಜ್ಞಾನೋಕ್ತಿ 29:22 ಹೇಳುತ್ತದೆ.
"ಕೋಪಿಷ್ಟನು ಜಗಳವನ್ನೆಬ್ಬಿಸುವನು, ಮುಂಗೋಪಿಯು ಅನೇಕ ಪಾಪಗಳನ್ನು ಮಾಡುತ್ತಾನೆ."
“ಕೋಪಿಷ್ಟನು ” ಎಂಬ ಪದಗುಚ್ಛವು ಹೀಬ್ರೂ ಪದಗುಚ್ಛಕ
ಅನುವಾದದಲ್ಲಿ ಇದರರ್ಥ “ಶಾಖದ ಮಾಲೀಕರು”. ನೀವು ಕೋಪಗೊಂಡಾಗ ನಿಮ್ಮ ದೇಹದಾದ್ಯಂತ ಸಾಮಾನ್ಯವಾಗಿ ನೀವು ಅನುಭವಿಸುವ ಬಿಸಿಯಾದ ಹೊಳಪನ್ನು ಇದು ಸೂಚಿಸುತ್ತದೆ.
ಕೋಪವು ಒಂದು ಲಕ್ಷಣವಾಗಿದೆ, ಹೊರತು ಅದುವೇ ನಿಜವಾದ ಸಮಸ್ಯೆಯಲ್ಲ. ಇದು ನಿಮ್ಮ ಕಾರಿನಲ್ಲಿರುವ ಕೆಂಪು ಎಚ್ಚರಿಕೆ ದೀಪದಂತೆ,ಅದು ಏನೋ ತಪ್ಪಾಗಿದೆ ಎಂಬುದನ್ನು ಸೂಚಿಸುವಂತದ್ದಾಗಿದೆ.
ಮೂರು ಪ್ರಾಥಮಿಕ ಪ್ರಚೋದಕಗಳು
ಹಾಗಾದರೆ, ನಮ್ಮ ಕೋಪವನ್ನು ಪ್ರಚೋದಿಸುವುದು ಯಾವುದು? ಸಾಮಾನ್ಯವಾಗಿ, ಇದು ಈ ಮೂರು ಪ್ರಮುಖ ಕಾರಣಗಳಿಂದಾಗಿ ಬರುತ್ತದೆ: ಮನಸ್ಸಿಗಾದ ಗಾಯಹತಾಶೆ ಮತ್ತು ಭಯ
1. ಮನಸ್ಸಿಗಾದ ಗಾಯ
ಮೊದಲನೆಯದಾಗಿ, ಮನಸ್ಸಿಗಾದ ಗಾಯವು ಕೋಪವನ್ನು ಉಂಟುಮಾಡಬಹುದು. ಇದು ದೈಹಿಕ ನೋವಾದರೂ ಹೆಚ್ಚಾಗಿ, ಅದು ಭಾವನಾತ್ಮಕ ಗಾಯ ಅಥವಾ ನೋವಾಗಿರುತ್ತದೆ. ನಿರಾಕರಣೆ, ದ್ರೋಹ, ಮೆಚ್ಚುಗೆ ಪಡೆಯದಿರುವುದು, ಪ್ರೀತಿಸದಿರುವುದು ಅಥವಾ ಅನ್ಯಾಯವಾಗಿ ನಡೆಸಿಕೊಳ್ಳಲ್ಪಟ್ಟ ಭಾವನೆಗಳು ಹೆಚ್ಚಾಗಿ ಕೋಪದ ಪ್ರತಿಕ್ರಿಯೆಯನ್ನು ಉಂಟುಮಾಡುತ್ತವೆ.
ಬೈಬಲ್ನ ಉದಾಹರಣೆ: ಕಾಯಿನ
ಸತ್ಯವೇದದ ಉದಾಹರಣೆಯೆಂದರೆ ಕಾಯಿನ. ಆದಿಕಾಂಡ 4 ರಲ್ಲಿ,ಅದನ್ನು ನಾವು ಓದುತ್ತೇವೆ.
"ಹೇಬೆಲನು ಸಹ ತನ್ನ ಹಿಂಡಿನಿಂದ ಚೊಚ್ಚಲ ಕುರಿಗಳನ್ನೂ ಅವುಗಳ ಕೊಬ್ಬನ್ನೂ ತಂದನು. ಯೆಹೋವ ದೇವರು ಹೇಬೆಲನನ್ನೂ ಅವನ ಕಾಣಿಕೆಯನ್ನೂ ಮೆಚ್ಚಿಕೊಂಡನು. ಆದರೆ ಕಾಯಿನನನ್ನೂ ಅವನ ಕಾಣಿಕೆಯನ್ನೂ ದೇವರು ಮೆಚ್ಚಲಿಲ್ಲ. ಆದ್ದರಿಂದ ಕಾಯಿನನು ಬಹು ಕೋಪಗೊಂಡನು. ಅವನ ಮುಖವು ಬಾಡಿತು.(ಆದಿಕಾಂಡ 4:4-5)
ಕಾಯಿನನ ಕೋಪ ಮತ್ತು ನಂತರದ ಅವನು ಮಾಡಿದ ಸಹೋದರನ ಕೊಲೆ ನಿರಾಕರಣೆಯಿಂದಾದ ಭಾವನಾತ್ಮಕ ನೋವಿನಿಂದ ಹುಟ್ಟಿಕೊಂಡಿತು.
2. ಹತಾಶೆ ಉದಾಹರಣೆ: ನಾಮಾನ
ಹತಾಶೆಯು ಕೋಪಕ್ಕೆ ಮತ್ತೊಂದು ಪ್ರಚೋದಕವಾಗಿದೆ. ಇದು ತಾಂನಂದುಕೊಂಡ ನಿರೀಕ್ಷೆಗಳನ್ನು ಪೂರೈಸದ ಕಾರಣ ಅಥವಾ ಪರಿಸ್ಥಿತಗಳು ತಮ್ಮ ನಿಯಂತ್ರಣಕ್ಕೆ ಸಿಗದೇ ಹೋದಾಗ ಉದ್ಭವಿಸುತ್ತದೆ. ಮದುವೆ, ಮಕ್ಕಳು, ಉದ್ಯೋಗಗಳು ಇತ್ಯಾದಿಗಳ ಕುರಿತು ನಾವು ಜೀವನದಲ್ಲಿ ಹಲವಾರು ಈಡೇರದ ನಿರೀಕ್ಷೆಗಳನ್ನು ಎದುರಿಸುತ್ತೇವೆ.
ಮತ್ತು ನಿಯಂತ್ರಣಕ್ಕೆ ಸಿಗದೇ ಹೋಗುವಂತದ್ದು? ಟ್ರಾಫಿಕ್ ಜಾಮ್‌ನಲ್ಲಿ ಅನುಭವಿಸುವ ಕೋಪವು ಒಂದು ಸಾಮಾನ್ಯ ಉದಾಹರಣೆಯಾಗಿದೆ, ಅಲ್ಲಿ ನೀವು ಅಸಹಾಯಕರಾಗಿ ವಿಳಂಬಕ್ಕೆ ಸಿಲುಕುವಾಗಲೂ ಅದರ ಬಗ್ಗೆ ಏನನ್ನೂ ಮಾಡಲು ಸಾಧ್ಯವಿಲ್ಲದವರಾಗಿರುತ್ತೀರಿ.
ಕೋಪಕ್ಕೆ ಕಾರಣವಾಗುವ ಹತಾಶೆಯ ಸತ್ಯವೇದ ಉದಾಹರಣೆ ನಾಮಾನ. 2 ಅರಸುಗಳು 5 ರಲ್ಲಿ, ಸಿರಿಯ ದೇಶದ ಸೇನಾಧಿಪತಿಯಾದ ನಾಮಾನನು ಪ್ರವಾದಿಯಾದ ಎಲೀಷನಿಂದ ಗುಣಮುಖನಾಗಲು ಬಯಸಿದನು. ಎಲೀಷನು ಅವನಿಗೆ ಯೋರ್ಧನ್ ನದಿಯಲ್ಲಿ ಮುಳುಗೇಳುವಂತೆ ಸೂಚಿಸುತ್ತಾನೆ. ಆಗ ನಾಮಾನನು ಕೋಪದಿಂದ ಪ್ರತಿಕ್ರಿಯಿಸಿದನು:"ಆಗ ನಾಮಾನನು ಕೋಪಗೊಂಡು ಹೊರಟುಹೋಗಿ, “ಅವನು ನಿಶ್ಚಯವಾಗಿ ನನ್ನ ಬಳಿಗೆ ಹೊರಟುಬಂದು, ತನ್ನ ದೇವರಾದ ಯೆಹೋವ ದೇವರ ಹೆಸರನ್ನು ಕರೆದು, ನನ್ನ ಚರ್ಮದ ಮೇಲೆ ತನ್ನ ಕೈಯನ್ನಾಡಿಸಿ, ಕುಷ್ಠರೋಗವನ್ನು ವಾಸಿಮಾಡುವನೆಂದು, ನಾನು ನೆನಸಿದೆ.ನಾನು ಹೊಳೆಗಳಲ್ಲಿ ಸ್ನಾನಮಾಡಿ ಶುದ್ಧನಾಗುವಂತೆ ದಮಸ್ಕದ ನದಿಗಳಾದ ಅಬಾನಾವೂ, ಪಾರ್ಪರೂ ಇಸ್ರಾಯೇಲಿನ ಸಮಸ್ತ ನೀರುಗಳಿಗಿಂತ ಉತ್ತಮವಾಗಿಲ್ಲವೋ?” ಎಂದು ಹೇಳಿ ತಿರುಗಿಕೊಂಡು ಕೋಪದಿಂದ ಹೋದನು."(2 ಅರಸುಗಳು 5:11–12)
ನಾಮಾನನ ಕೋಪವು ಅವನು ಪ್ರವಾದಿ ಎಲೀಷನಿಂದ ವಿಭಿನ್ನ ವಿಧಾನವನ್ನು ನಿರೀಕ್ಷಿಸಿ ಆ ತನ್ನ ನಿರೀಕ್ಷೆ ಈಡೇರದೆ ಹೋದಾಗ ಉರಿಯಿತು.
3. ಭಯ/ ಆತಂಕ
"ಮತ್ತು ನಂತರ ಮೂರನೇ ಪ್ರಚೋದಕವೆಂದರೆ ಭಯ/ಆತಂಕ. ನೀವು ಗಾಬರಿಗೊಂಡಾಗ ಅಥವಾ ಬೆದರಿಕೆಗೆ ಒಳಗಾದಾಗ, ನೀವು ಸಾಮಾನ್ಯವಾಗಿ ಕೋಪದಿಂದ ಪ್ರತಿಕ್ರಿಯಿಸುತ್ತೀರಿ.
ನೆನಪಿಡಿ, ಕೋಪಕ್ಕೆ ಆಗುವ ದೈಹಿಕ ಪ್ರತಿಕ್ರಿಯೆಯು ಸಹ ಭಯಕ್ಕೆ ದೈಹಿಕ ಪ್ರತಿಕ್ರಿಯೆಗೆ ಹೋಲುತ್ತದೆ ಎಂಬುದನ್ನು ನಾವು ಮೊದಲೇ ನೋಡಿದ್ದೇವೆ.
ಅದಕ್ಕಾಗಿಯೇ ಯಾರಾದರೂ ನಿಮ್ಮನ್ನು ಗಾಬರಿಗೊಳಿಸಿದಾಗ ಅಥವಾ 'ಬೂ!' ಎಂದು ಕೂಗಿದಾಗ ನೀವು ಸಾಮಾನ್ಯವಾಗಿ ಕೋಪಗೊಳ್ಳುತ್ತೀರಿ. ಅದೇ ಪ್ರತಿಕ್ರಿಯೆ.
ಬೈಬಲ್ ಉದಾಹರಣೆ: ರಾಜ ಸೌಲ ಭಯವು ಕೋಪಕ್ಕೆ ಕಾರಣವಾಗುವ ಉತ್ತಮ ಉದಾಹರಣೆ ಹಳೆಯ ಒಡಂಬಡಿಕೆಯಲ್ಲಿ ರಾಜ ಸೌಲ. ದಾವೀದನು ಗೋಲಿಯಾತನನ್ನು ಕೊಂದು ಬರುವಾಗ, ಸ್ತ್ರೀಯರು ಹೊರಬಂದು ಬೀದಿಗಳಲ್ಲಿ ನೃತ್ಯ ಮಾಡಿದರು. ಎಂದು ನಾವು 1 ಸಮುವೇಲ 18 ರಲ್ಲಿ ಓದುತ್ತೇವೆ, 'ಅವರು ನೃತ್ಯ ಮಾಡುತ್ತಾ" ಆ ಸ್ತ್ರೀಯರು ಒಬ್ಬರಿಗೊಬ್ಬರು, “ಸೌಲನು ಸಾವಿರಗಳಷ್ಟು ಕೊಂದನು, ದಾವೀದನು ಹತ್ತು ಸಾವಿರಗಳಷ್ಟು ಕೊಂದನು,” ಎಂದು ಹಾಡಿದರುಇದರಿಂದ ಸೌಲನಿಗೆ ಬಹು ಕೋಪವಾಯಿತು. ಆ ಹಾಡಿನಿಂದ ಅವನಿಗೆ ಬಹುಬೇಸರವಾಯಿತು. “ಇವರು ದಾವೀದನಿಗೆ ಹತ್ತು ಸಾವಿರಗಳಷ್ಟು ಎಂದು ಹಾಡಿದ್ದಾರೆ; ನನಗೆ ಸಾವಿರಗಳಷ್ಟೇ ಎಂದು ಹಾಡಿದ್ದಾರೆ; ಹಾಗಾದರೆ, ಅವನಿಗೆ ರಾಜ್ಯವಲ್ಲದೆ ಇನ್ನು ಆಗಬೇಕಾದದ್ದೇನು?” ಎಂದುಕೊಂಡನು..... ಕರ್ತನಾತ್ಮವು ದಾವೀದನ ಮೇಲಿತ್ತು ಸೌಲನನ್ನು ಬಿಟ್ಟುಹೋಗಿತ್ತು...ಇದರಿಂದ ದಾವೀದನನ್ನು ಕೊಲ್ಲಲೆತ್ನಿಸಿದನು (1 ಸಮುವೇಲ 18:7-12)
ಸೌಲನು ದಾವೀದನಿಂದ ಬೆದರಿಕೆಗೆ ಒಳಗಾಗಿ ಕೋಪದಿಂದ ಪ್ರತಿಕ್ರಿಯಿಸಿದನು.
ಕೋಪವು ದ್ವಿತೀಯ ಭಾವನೆಯಾಗಿದೆ
ಕೋಪವು ದ್ವಿತೀಯ ಭಾವನೆಯಾಗಿದೆ. ಆದ್ದರಿಂದ ನೀವು ಕೋಪಗೊಂಡಾಗ, ನೀವು ನಿಂತು "ನಾನು ಏಕೆ ಕೋಪಗೊಂಡಿದ್ದೇನೆ? ಕೆಂಪು ಎಚ್ಚರಿಕೆ ದೀಪವು ನನಗೆ ಯಾವ ಎಚ್ಚರಿಕೆ ನೀಡಲು ಪ್ರಯತ್ನಿಸುತ್ತಿದೆ? ನಾನು ಮನನೊಂದಿದ್ದೇನೆ ಯೇ, ಹತಾಶೆಗೊಂಡಿದ್ದೇನೆಯೇ ಅಥವಾ ಭಯಪಡುತ್ತಿದ್ದೇನೆಯೇ?" ಎಂದು ನಿಮ್ಮನ್ನು ನೀವು ಕೇಳಿಕೊಳ್ಳಬೇಕು'' ಕೋಪವು ದ್ವಿತೀಯಕ ಭಾವನೆ ಎಂದು ನೀವು ಅರ್ಥಮಾಡಿಕೊಂಡ ನಂತರ,ನಿಮ್ಮನ್ನು ಕೆರಳಿಸುತ್ತಿರುವ ಪ್ರಾಥಮಿಕ ಭಾವನೆಯತ್ತ ಅಂದರೆ ನೀವು ನಿಜವಾದ ಸಮಸ್ಯೆಯನ್ನು ನಿಭಾಯಿಸಲು ಪ್ರಾರಂಭಿಸಬಹುದು.
Bible Reading: Leviticus 16-17
ಪ್ರಾರ್ಥನೆಗಳು
ಪರಲೋಕದ ತಂದೆಯೇ, ಮನಸ್ಸಿಗಾದ ಗಾಯ, ಹತಾಶೆ ಅಥವಾ ಭಯದಂತಹ ಕೋಪದ ಯಾವುದೇ ಬೇರುಗಳು ನನ್ನಲ್ಲಿ ಇದ್ದರೆ ಅದನ್ನು ಗ್ರಹಿಸಲು ನನಗೆ ಸಹಾಯ ಮಾಡಿ. ನಿಮ್ಮ ಪ್ರೀತಿ ಮತ್ತು ಜ್ಞಾನದಿಂದ ಈ ಆಳವಾದ ಭಾವನೆಗಳನ್ನು ಪರಿಹರಿಸಲು ನನಗೆ ವಿವೇಕವನ್ನು ಮತ್ತು ತಾಳ್ಮೆಯನ್ನು ಅನುಗ್ರಹಿಸಿ, ನನ್ನನ್ನು ಶಾಂತಿ ಮತ್ತು ಸಮನ್ವಯದ ಕಡೆಗೆ ಯೇಸುನಾಮದಲ್ಲಿ ಕರೆದೊಯ್ಯಿರಿ. ಆಮೆನ್.
Join our WhatsApp Channel
Most Read
● ಅತ್ಯುನ್ನತವಾದ ರಹಸ್ಯ● ಯೇಸು ಈಗ ಪರಲೋಕದಲ್ಲಿ ಏನು ಮಾಡುತ್ತಿದ್ದಾನೆ?
● ದೇವರ ಭಾಷೆಯಾದ ಅನ್ಯಭಾಷೆಗಳು
● ಕೃಪೆಯ ವಾಹಕರಾಗಿ ಮಾರ್ಪಡುವುದು.
● ಇತರರಿಗೆ ಕೃಪೆಯನ್ನು ವಿಸ್ತರಿಸಿ
● ಯಾರೂ ವಿನಾಯಿತಿ ಹೊಂದಿದವರಿಲ್ಲ.
● ದೇವರ 7 ಆತ್ಮಗಳು: ಜ್ಞಾನದ ಆತ್ಮ
ಅನಿಸಿಕೆಗಳು
