"ಕೋಪಮಾಡಬೇಕಾದರೂ ಪಾಪಮಾಡಬೇಡಿರಿ; ಸೂರ್ಯನು ಮುಳುಗುವದಕ್ಕಿಂತ ಮುಂಚೆ ನಿಮ್ಮ ಸಿಟ್ಟು ತೀರಲಿ; ಸೈತಾನನಿಗೆ ಅವಕಾಶಕೊಡಬೇಡಿರಿ. " ಎಫೆಸ 4:26-27
ಕೋಪವು ಒಂದು ಆತ್ಮೀಕ ಸಮಸ್ಯೆ
ಕೋಪವು ಒಂದು ಸಮಸ್ಯೆಯಾಗಿದೆ ಎಂಬುದು ನಾವು ಗುರುತಿಸಬೇಕಾದ ಮೊದಲ ವಿಷಯವಾಗಿದೆ.
ಸತ್ಯವೇದ ಹೇಳುತ್ತದೆ,“ನನ್ನ ಪ್ರಿಯ ಸಹೋದರರೇ, ನೀವು ಬಲ್ಲವರು. ಆದರೆ ಪ್ರತಿಯೊಬ್ಬನು ಕಿವಿಗೊಡುವದರಲ್ಲಿ ತೀವ್ರವಾಗಿಯೂ ಮಾತಾಡುವದರಲ್ಲಿ ನಿಧಾನವಾಗಿಯೂ ಇರಲಿ. ಕೋಪಿಸುವದರಲ್ಲಿಯೂ ನಿಧಾನವಾಗಿರಲಿ; ಮನುಷ್ಯನ ಕೋಪವು ದೇವರಿಗೆ ಮೆಚ್ಚಿಕೆಯಾಗಿರುವ ನೀತಿಗೆ ಅನುಕೂಲವಾಗುವದಿಲ್ಲ".(ಯಾಕೋಬ 1:19–20) ನೀವು ಕೋಪಗೊಳ್ಳುವ ವ್ಯಕ್ತಿಗಳಾಗಿದ್ದು ದೇವರು ಬಯಸುವ ನೀತಿವಂತಿಕೆಯ ಜೀವನವನ್ನು ನಡೆಸಲು ಸಾಧ್ಯವಿಲ್ಲ.
ವಿನಾಶಕಾರಿ ಶಕ್ತಿಯಾಗಿ ಕೋಪ
ಕೋಪವು ಜೀವನವೆಂಬ ಉದ್ಯಾನವನದಲ್ಲಿ ಬೆಳೆಯುವ ನಿರಂತರ ಕಳೆಯಂತೆ. ಆ ಕಳೆಗಳನ್ನು ನಿಯಂತ್ರಿಸದಿದ್ದರೆ, ಅದು ಸುಂದರವಾದ ಸಸ್ಯಗಳನ್ನು ಅತಿಕ್ರಮಿಸಿ ಉಸಿರುಗಟ್ಟಿಸುವಂತೆಯೇ, ಅನಿಯಂತ್ರಿತ ಕೋಪವು ನಿಮ್ಮ ಜೀವನದಲ್ಲಿನ ಸದ್ಗುಣಗಳನ್ನು ಅತಿಕ್ರಮಿಸಿ ಆ ಸದ್ಗುಣಗಳನ್ನು ಕ್ಷಯಿಸುವಂತೆ ಮಾಡಬಹುದು. ಇದು ತೀರ್ಪನ್ನು ಮಂಕುಪಡಿಸಿ, ಹಾನಿಕಾರಕ ಕ್ರಿಯೆಗಳಿಗೆ ಕಾರಣವಾಗಿ ನಿಮ್ಮ ಮತ್ತು ದೇವರು ಸೇರಿದಂತೆ ಇತರರ ನಡುವೆಯೂ ತಡೆಗೋಡೆಯನ್ನು ಸೃಷ್ಟಿಸಬಹುದು.
ಕೋಪದಲ್ಲಿ ಅಡಗಿರುವ ಅಪಾಯ.
"ಕೋಪಕ್ಕೂ ( anger) ಅಪಾಯಕ್ಕೂ (danger)ಒಂದೇ ಒಂದು ಅಕ್ಷರ ಕಡಿಮೆ" ಎಂದು ಹೆಚ್ಚಾಗಿ ಹೇಳಲಾಗುತ್ತದೆ ಮತ್ತು ಇದು ಒಳ್ಳೆಯ ಎಚ್ಚರಿಕೆಯಾಗಿ ಕಾರ್ಯನಿರ್ವಹಿಸುತ್ತದೆ. ಕೋಪವು ನಿಮ್ಮ ಜೀವನಕ್ಕೆ ಮಾತ್ರವಲ್ಲದೆ ನಿಮ್ಮ ಸುತ್ತಮುತ್ತಲಿನವರ ಜೀವನಕ್ಕೂ ಗಮನಾರ್ಹ ಹಾನಿಯನ್ನುಂಟುಮಾಡುತ್ತದೆ.
ಅನಿಯಂತ್ರಿತ ಕೋಪದ ಪರಿಣಾಮಗಳು
ಕೋಪವು ವೈವಾಹಿಕ ಜೀವನ, ಕುಟುಂಬ ಮತ್ತು ಸ್ನೇಹ ನಷ್ಟದಂತಹ ಸಂಬಂಧಗಳ ಸಮಸ್ಯೆಗಳಿಗೂ ಕಾರಣವಾಗಬಹುದು. ಇದು ಉದ್ಯೋಗ ನಷ್ಟ, ಮೊಕದ್ದಮೆಗಳು, ಆಸ್ತಿ ಹಾನಿ, ಇತರರಿಗೆ ಹಾನಿ ಮತ್ತು ಕೊಲೆಯಂತಹ ಪ್ರಮುಖ ಜೀವನ ಸಮಸ್ಯೆಗಳಿಗೂ ಕಾರಣವಾಗಬಹುದು. ಭಾವನಾತ್ಮಕವಾಗಿ, ನೀವು ಕೋಪಗೊಳ್ಳುವ ವ್ಯಕ್ತಿಯಾಗಿದ್ದರೆ, ಅದು ನಿಮ್ಮ ಮೇಲೆ ಪ್ರತಿಯೊಂದು ಹಂತದಲ್ಲೂ ಪರಿಣಾಮ ಬೀರುತ್ತಿರುತ್ತದೆ.
ದೈಹಿಕವಾಗಿ ನೋಡುವಾದರೆ, ಕೋಪವು ಅಧಿಕ ರಕ್ತದೊತ್ತಡ, ಹೃದಯ ಕಾಯಿಲೆ, ತಲೆನೋವು, ಹೊಟ್ಟೆ ಸಮಸ್ಯೆಗಳು, ಹುಣ್ಣುಗಳು, ಕೊಲೈಟಿಸ್ ಮತ್ತು ನಿದ್ರಾಹೀನತೆಗೆ ಕಾರಣವಾಗಬಹುದು.
ಕೋಪವು ಏಕೆ ವ್ಯಸನಕಾರಿಯಾಗಿದೆ
ಕೋಪವು ವಿಶೇಷವಾಗಿ ಅಪಾಯಕಾರಿ ಏಕೆಂದರೆ ಅದು ಸ್ವಯಂ-ಬಲವರ್ಧನೆಯಾಗಿದೆ. ನಾವು ಕೋಪಗೊಂಡಾಗ, ಸಾಮಾನ್ಯವಾಗಿ ತಕ್ಷಣದ ಫಲಿತಾಂಶಗಳನ್ನು ನೋಡುವವರಾಗಿದ್ದು ಇದು ನಮ್ಮನ್ನು ಮತ್ತೆ ಕೋಪಕ್ಕೆ ತಳ್ಳುವ ಸಾಧ್ಯತೆಯೇ ಹೆಚ್ಚು. ಒಬ್ಬ ದೇವರ ಮನುಷ್ಯ ಹೇಳಿದಂತೆ, "ಕೋಪವು ನಾನು ಕೇಳುವುದನ್ನು ಪಡೆಯುತ್ತದೆ ಆದರೆ ನನಗೆ ಏನು ಬೇಕೋ ಅದನ್ನು ಪಡೆಯುವುದಿಲ್ಲ." ಕೋಪವು ಸಂಬಂಧಗಳನ್ನು ಮತ್ತು ಜೀವನದಲ್ಲಿ ನಿಜವಾದ ತೃಪ್ತಿಯನ್ನು ಶಾರ್ಟ್-ಸರ್ಕ್ಯೂಟ್ ಮಾಡುವ ಒಂದು ಶಾರ್ಟ್‌ಕಟ್ ಆಗಿದೆ. ನೀವು ಆದರಿಂದ ತಕ್ಷಣದ ಫಲಿತಾಂಶಗಳನ್ನು ಪಡೆಯಬಹುದು, ಆದರೆ ನೀವು ದೀರ್ಘಾವಧಿಯ ಸಂತೃಪ್ತಿ ಮತ್ತು ಸಂತೋಷವನ್ನು ಕಳೆದುಕೊಳ್ಳುತ್ತೀರಿ.
ಕೋಪದ ಮೇಲೆ ನಿಯಂತ್ರಣವನ್ನು ಸಾಧಿಸುವುದು
"ನಿಮ್ಮ ಕೋಪವನ್ನು ನಿಯಂತ್ರಿಸಲು ಕಲಿಯಿರಿ, ಇಲ್ಲದಿದ್ದರೆ ಅದೇ ನಿಮ್ಮನ್ನು ನಿಯಂತ್ರಿಸುತ್ತದೆ" ಎಂದು ಹೇಳಲಾಗುತ್ತದೆ. ಕೋಪವನ್ನು ಒಂದು ಮಹತ್ವದ ವಿಷಯವೆಂದು ಒಪ್ಪಿಕೊಳ್ಳುವುದು ಅದನ್ನು ನಿಭಾಯಿಸುವಲ್ಲಿ ಮೊದಲ ಹೆಜ್ಜೆಯಾಗಿದೆ.
ಕರ್ತನಾದ ಯೇಸುವಿನ ಬೋಧನೆಗಳು ಕೋಪವನ್ನು ನಿರ್ವಹಿಸುವಲ್ಲಿ ಮಾರ್ಗದರ್ಶನವನ್ನು ನೀಡುತ್ತವೆ, ಕ್ಷಮೆ, ತಿಳುವಳಿಕೆ ಮತ್ತು ಕರುಣೆಯನ್ನು ಒತ್ತಿಹೇಳುತ್ತವೆ. ದೇವರ ವಾಕ್ಯದಲ್ಲಿರುವ ತತ್ವಗಳನ್ನು ಅಳವಡಿಸಿಕೊಳ್ಳುವುದು ಕೋಪದ ಹಿಡಿತವನ್ನು ತಗ್ಗಿಸುವುದಲ್ಲದೆ ಹೆಚ್ಚಿನ ಸಂತೋಷ ಮತ್ತು ಹೆಚ್ಚು ಸಾಮರಸ್ಯದ ಜೀವನಕ್ಕೆ ದಾರಿಯನ್ನು ತೆರೆದುಕೊಡುತ್ತದೆ.
Bible Reading: Leviticus- 14-15
ಪ್ರಾರ್ಥನೆಗಳು
ಪರಲೋಕದ ತಂದೆಯೇ, ಕೋಪಿಸುವುದರಲ್ಲಿ ನಿಧಾನವಾಗಿರಲು ದಯೆ ಮತ್ತು ಕರುಣೆಯಲ್ಲಿ ಸಮೃದ್ಧವಾಗಿರುವಂತೆ ನನಗೆ ಶಕ್ತಿಯನ್ನು ಅನುಗ್ರಹಿಸು. ಶಾಂತಿ ಮತ್ತು ತಿಳುವಳಿಕೆಯನ್ನು ಬೆಳೆಸಲು ನಿನ್ನ ಜ್ಞಾನದಲ್ಲಿ ನನಗೆ ಮಾರ್ಗದರ್ಶನ ನೀಡು, ನನ್ನ ಹೃದಯವನ್ನು ನೀನು ಬಯಸುವ ನೀತಿಯ ಮಾರ್ಗದ ಕಡೆಗೆ ಯೇಸುನಾಮದಲ್ಲಿ ಮಾರ್ಗದರ್ಶಿಸು.ಆಮೆನ್.
Join our WhatsApp Channel
Most Read
● ದೈವಿಕ ಅನುಕ್ರಮ - 1● ಸಾಲದಿಂದ ಹೊರಬನ್ನಿ : ಕೀಲಿಕೈ #2
● ನೀವೊಂದು ಉದ್ದೇಶಕ್ಕಾಗಿ ಹುಟ್ಟಿದ್ದೀರಿ.
● ಇತರರಿಗೆ ದಾರಿ ತೋರಿಸುವುದು
● ನಿಮ್ಮ ರಕ್ಷಣೆಯ ದಿನವನ್ನು ಸಂಭ್ರಮಿಸಿ.
● ಕ್ರಿಸ್ತನಂತೆ ಆಗುವುದು
● ಅನುಕರಣೆ
ಅನಿಸಿಕೆಗಳು
