"ನೀನಂತೂ ಹೆದರಬೇಡ, ಏಕೆಂದರೆ ನಾನೇ ನಿನ್ನ ದೇವರು, ನಾನು ನಿನ್ನನ್ನು ಬಲಪಡಿಸುತ್ತೇನೆ. ನಾನು ನಿನಗೆ ಸಹಾಯ ಮಾಡುತ್ತೇನೆ. ನನ್ನ ನೀತಿಯ ಬಲಗೈಯಿಂದ ನಿನ್ನನ್ನು ಎತ್ತಿಹಿಡಿಯುತ್ತೇನೆ." (ಯೆಶಾಯ 41:10)
ಮಾನಸಿಕ ಕಲ್ಪನೆಗಳೇ ಇಂದು ಹೆಚ್ಚಿನ ವಿಶ್ವಾಸಿಗಳು ತಮ್ಮ ಜೀವನದಲ್ಲಿ ಮುಂದುವರಿಯುವುದನ್ನು ತಡೆಯುವ ಅತ್ಯಂತ ಸೀಮಿತಗೊಳಿಸುವ ಶಕ್ತಿಗಳಲ್ಲಿ ಒಂದಾಗಿದೆ. ಅನೇಕ ಮಾನಸಿಕ ಕಲ್ಪನೆಗಳು ನಿಖರವಾಗಿರಬಹುದು ಆದರೂ ಅವುಗಳಲ್ಲಿ ಕೆಲವು ತಪ್ಪು ಮಾಹಿತಿಯನ್ನು ಆಧರಿಸಬಹುದು. ಈ ತಪ್ಪು ಕಲ್ಪನೆಗಳೇ ನಂತರ ನಮ್ಮಲ್ಲಿ ಭಯವನ್ನು ಹುಟ್ಟುಹಾಕುತ್ತವೆ.
"ನಾವು ಈ ಕಾಯಿಲೆಯಿಂದ ಹೊರಬರಲು ಸಾಧ್ಯವೇ ?"ಎಂದು ಅನೇಕರು ಆಶ್ಚರ್ಯಪಡುತ್ತಾರೆ. ನಮ್ಮ ಮನಸ್ಸಿನಲ್ಲಿ ನಾವು ಅನುಮತಿಸಿದ ತಪ್ಪು ಮಾಹಿತಿಯು ನಮ್ಮಲ್ಲಿ ಭಯದ ಕೋಟೆಯನ್ನು ನಿರ್ಮಿಸಿ ನಾವು ನಮ್ಮ ಕುರಿತು ಮತ್ತು ನಮ್ಮ ಪರಿಸ್ಥಿತಿಗಳ ಕುರಿತು ಕೆಟ್ಟದಾಗಿ ಯೋಚಿಸುವಂತೆ ಮಾಡುತ್ತವೆ.
ಯಾರಾದರೂ ಯೇಸು ಗುಣಪಡಿಸಬಲ್ಲನೆಂದು ನಮಗೆ ಹೇಳಿದಾಗಲೂ, ನಮ್ಮ ಮನಸ್ಸಿನಲ್ಲಿ ನಾವು ಅನುಮತಿಸಿದ ತಪ್ಪು ಮಾಹಿತಿಗಳು ನಮ್ಮ ಆರೋಗ್ಯದ ಕುರಿತು ಇರುವ ಅಂತಹ ಒಳ್ಳೆಯ ಸುದ್ದಿಯನ್ನು ತಿರಸ್ಕರಿಸುತ್ತದೆ. ಅಥವಾ ಬಹುಶಃ ನಾವು ಉದ್ಯೋಗಕ್ಕಾಗಿ ತೀವ್ರವಾಗಿ ಹುಡುಕಾಡುತ್ತಿರಬಹುದು ಮತ್ತು ಇದೇ ರೀತಿಯ ಅರ್ಹತೆಗಳನ್ನು ಹೊಂದಿ ಕಡಿಮೆ ಸಂಬಳದ ಉದ್ಯೋಗಗಳನ್ನು ಪಡೆದ ಜನರನ್ನು ನಾವು ನೋಡುತ್ತಿರಬಹುದು. ಈ ಮಾಹಿತಿಯು ನಮ್ಮ ಅರ್ಹತೆಗಳನ್ನು ಮೀರಿ ನಮ್ಮಲ್ಲಿ ಕಾರ್ಯ ಮಾಡಲು ಸಮರ್ಥನಾಗಿರುವ ದೇವರಲ್ಲಿ ಭರವಸೆಯನ್ನು ಕಳೆದುಕೊಳ್ಳುವಂತೆ ಮಾಡುತ್ತದೆ. ನಾವು ಇನ್ನು ಮುಂದೆ ಬಹುರಾಷ್ಟ್ರೀಯ ಕಂಪನಿಯಲ್ಲಿ ಕಾರ್ಯನಿರ್ವಾಹಕ ಹುದ್ದೆಯನ್ನು ಹೊಂದಿಕೊಂಡಿದ್ದೇವೆ ಎಂದು ಊಹಿಸಿಕೊಳ್ಳುವ ಬದಲಾಗಿ, ನಾವು ಕೈಗೆ ಬಾಯಿಗೆ ಸಾಕಾಕುವಷ್ಟು ಸಂಬಳ ಕೊಡುವ ಕೆಲಸ ಸಿಕ್ಕರೆ ಸಾಕು ಎಂದು ನೋಡುತ್ತೇವೆ.
ಸತ್ಯವೇದವು ಬಡ್ತಿ ಮತ್ತು ಪದೋನ್ನತಿಯು ಕರ್ತನಿಂದ ಬರುತ್ತದೆ ಆತನು ನಿಮಗಾಗಿ ಯಾರನ್ನಾದರೂ ಕೆಳಗಿಳಿಸಿ ನಿಮ್ಮನ್ನು ಅಲ್ಲಿ ಕೂರಿಸಬಹುದು. (ಕೀರ್ತನೆ 75:6-7) ಎಂಬುದಾಗಿ ಹೇಳುತ್ತದೆ ಎಂಬುದನ್ನು ನಾವು ಮರೆತುಬಿಡುತ್ತೇವೆ. ದೇವರು ಯೋಸೇಫನನ್ನು ಜೈಲಿನಿಂದ ಕೆಲಸಕ್ಕೆ ಶೂನ್ಯ ಅರ್ಹತೆ ಹೊಂದಿರುವ ವ್ಯಕ್ತಿಯನ್ನು ಹೇಗೆ ನೇರವಾಗಿ ಅರಮನೆಗೆ ಕರೆದೊಯ್ದನೆಂದು, ನೋಡದಂತೆ ಸೈತಾನನು ನಮ್ಮನ್ನು ಕುರುಡನನ್ನಾಗಿ ಮಾಡುತ್ತಾನೆ.
ಯೋಸೇಫನಿಗೆ ಅರ್ಹತೆಗಳಿದ್ದರೂ ಸಹ, ಅವನು ತನ್ನ ಯಾವುದೇ ಅರ್ಹತೆಗಳನ್ನು ಗಣನೆಗೆ ತೆಗೆದುಕೊಳ್ಳದೆ ತನ್ನ ತಂದೆಯ ಮನೆಯಿಂದ ಹೊರಟುಹೋದನೆಂದು ನೆನಪಿಡಿ. ಹಾಗಾದರೆ, ಈಗ ಸಿಕ್ಕ ಈ ಹೊಸ ಪಾತ್ರಕ್ಕೆ ಬೇಕಾದ ಅರ್ಹತೆಗೆ ಅವನು ಯಾವ ಪುರಾವೆಯನ್ನು ನೀಡುತ್ತಾನೆ? ಆದರೆ ಅದು ಅಪ್ರಸ್ತುತವಾಗಿರಲಿಲ್ಲ ಏಕೆಂದರೆ ದೇವರ ಹಸ್ತವು ಅವನ ಮೇಲೆಯೂ ಮತ್ತು ಅವನೊಂದಿಗೂ ಇತ್ತು. ಆದ್ದರಿಂದಲೇ ಅರಮನೆಯ ಬಾಗಿಲು ಅವನಿಗಾಗಿ ತೆರೆಯಲಾಗಿ ಅವನು ನೇರವಾಗಿ ಒಳಗೆ ನಡೆದನು.
ಅರಸನಾಗಿ ಅಭಿಷೇಕಿಸಲು ಕನಿಷ್ಠ ಅರ್ಹತೆ ಹೊಂದಿದ್ದ ದಾವೀದನ ಬಗ್ಗೆ ಏನು ಹೇಳೋಣ ? ಕುರಿಗಳೊಂದಿಗೆ ಹೆಚ್ಚಿನ ಸಮಯವನ್ನು ಕಳೆಯುವ ಈ ಕುರುಬನಿಗೆ ಹೋಲಿಸಿದರೆ ಇಸ್ರೇಲಿ ಸೈನ್ಯದಲ್ಲಿ ಈಗಾಗಲೇ ಸೇರ್ಪಡೆಗೊಂಡಿದ್ದ ಅವನ ಸಹೋದರರಿಗೆ ಹೆಚ್ಚಾಗಿ ಅರಮನೆಯ ನೀತಿ ನಿಯಮಗಳು ತಿಳಿದಿದ್ದವು ಆ ಕ್ಷೇತ್ರದಲ್ಲಿ ದಾವೀದನಿಗೆ ಶೂನ್ಯ ಅನುಭವ ಇತ್ತು. ಆದರೆ ದೇವರು ಮಧ್ಯಪ್ರವೇಶಿಸಿ ತನ್ನ ಜನರನ್ನು ಮುನ್ನಡೆಸಲು ಅವನನ್ನು ಅಭಿಷೇಕಿಸಿದನು.
ಸಾಮಾನ್ಯವಾಗಿ, ಭಯವು ಹೆಚ್ಚಾಗಿ ಊಹೆಗಳು ಮತ್ತು ಸಾಧ್ಯತೆಗಳನ್ನು ಆಧರಿಸಿದೆಯೇ ಹೊರತು ವಾಸ್ತವವಾಗಿ ಏನಾಗುತ್ತದೆ ಎಂಬುದರ ಮೇಲೆ ಅಲ್ಲ. ನಿಮ್ಮ ಕಲ್ಪನೆಗಳು ಹೆಚ್ಚಾಗಿ ನಿಮ್ಮ ಮನಸ್ಸಿನ ಮುಖ್ಯಸ್ಥರಕ್ಕೆ ಕಳುಹಿಸಲಾದ ಸರಿಯಾದ ಅಥವಾ ತಪ್ಪಾಗಿರುವ ಮಾಹಿತಿಯನ್ನು ಆಧರಿಸುತ್ತಿರುತ್ತವೆ. ಜ್ಞಾನ ಮತ್ತು ತಿಳುವಳಿಕೆಯು ಹುಚ್ಚು ಕಲ್ಪನೆಗಳಿಂದ ನಿಮ್ಮ ಮನಸ್ಸನ್ನು ನಿಯಂತ್ರಿಸಿ ಅವು ನಿಮ್ಮ ಜೀವನದಲ್ಲಿ ಮಾನಸಿಕ ದೈತ್ಯರನ್ನು ಸೃಷ್ಟಿಸುವುದನ್ನು ತಡೆಯುತ್ತದೆ. ಆದರೆ ನೀವು ನಿಮ್ಮ ದೇವರು ಎಷ್ಟು ಶ್ರೇಷ್ಠನೆಂದು ನೋಡುವ ಬದಲು ಪರ್ವತಗಳು ಎಷ್ಟು ದುಸ್ತರವಾಗಿವೆ ಎಂಬುದನ್ನು ನೋಡುತ್ತೀರಿ. ನಿಮ್ಮ ವಿಜಯ ತಾಂಡವವನ್ನು ಅಭ್ಯಾಸ ಮಾಡುವ ಬದಲು ನೀವು ಸೋಲನ್ನು ಊಹಿಸಲು ಮತ್ತು ಅದಕ್ಕೆ ಹೇಗೆ ಸ್ಪಂದಿಸಬಹುದು ಎಂದು ಪೂರ್ವಾಭ್ಯಾಸ ಮಾಡಲು ಪ್ರಾರಂಭಿಸುತ್ತೀರಿ.
ದೇವರು ನಿಮಗೆ ಹೇಳುತ್ತಿರುವುದೇನೆಂದರೆ "ನೀವು ಭಯಪಡಬಾರದು" ಬೇರೆ ರೀತಿಯಲ್ಲಿ ಹೇಳುವುದಾದರೆ, ತಪ್ಪು ಮಾಹಿತಿಯನ್ನು ಅಳಿಸಿಹಾಕಿ ಮತ್ತು ದೇವರವಾಕ್ಯದಲ್ಲಿರುವ ನಿರೀಕ್ಷೆಗಳಿಂದ ನಿಮ್ಮ ಮನಸ್ಸನ್ನು ತುಂಬಿಸಿ. ಮಾರ್ಕ 13:37 ರಲ್ಲಿ ಯೇಸು, "ಮತ್ತು ನಾನು ನಿಮಗೆ ಹೇಳುವುದನ್ನು ಎಲ್ಲರಿಗೂ ಹೇಳುತ್ತೇನೆ: ಎಚ್ಚರವಾಗಿರಿ!" ಬೇರೆ ರೀತಿಯಲ್ಲಿ ಹೇಳುವುದಾದರೆ, ನಿಮ್ಮ ಕಣ್ಣುಗಳ ಮುಂದೆ ದೇವರವಾಕ್ಯದಲ್ಲಿ ದಾಖಲಾಗಿರುವ ದೇವರ ಕಾರ್ಯಗಳನ್ನು ಸೈತಾನನು ಅತ್ಯಲ್ಪ ಎಂದು ಎನಿಸುವಂತೆ ಮಾಡಲು ಬಿಡಬೇಡಿ. ಯೇಸು ಜನರ ಜೀವನದಲ್ಲಿ ಏನು ಮಾಡಿದನೋ ಅದು ಸತ್ಯವೇದದಲ್ಲಿ ದಾಖಲಾಗಿದೆ, ಆತನು ಅದನ್ನು ನಿಮ್ಮ ಜೀವನದಲ್ಲೂ ಮಾಡಲು ಸಿದ್ಧನಿದ್ದಾನೆ ಮತ್ತು ಸಮರ್ಥನಾಗಿದ್ದಾನೆ. ಆತನು ನಿನ್ನೆಯ ದಿನಗಳಲ್ಲಿ ಇಂದಿಗಿಂತ ಹೆಚ್ಚು ಶಕ್ತಿಶಾಲಿಯಾಗಿದ್ದ ಎಂದು ಸತ್ಯವೇದ ಹೇಳದೇ . ಆತನು ನಿನ್ನೆ, ಇಂದು ಮತ್ತು ನಾಳೆಯೂ ಹಾಗೆಯೇ ಇರುತ್ತಾನೆ (ಇಬ್ರಿಯ 13:8) ಎಂದು ಹೇಳುತ್ತದೆ.
ಆದ್ದರಿಂದ, ಭಯಪಡಬೇಡಿ! ದೇವರು ರಕ್ಷಣಾ ಕೋಟೆಯಂತೆ ನಿಮ್ಮೊಂದಿಗಿದ್ದಾನೆ . ನಿಮ್ಮ ಹಾದಿಯಲ್ಲಿ ನಿಲ್ಲಬಹುದಾದ ಪ್ರತಿಯೊಂದು ದ್ವಾರವನ್ನು ತೆರೆಯಲು ಆತನು ನಿಮ್ಮೊಂದಿಗಿದ್ದಾನೆ. ಪ್ರತಿಯೊಂದು ತಡೆಗೋಡೆಯನ್ನು ನೆಲಸಮ ಮಾಡಲು ಆತನು ನಿಮ್ಮೊಂದಿಗಿದ್ದಾನೆ. ದೇವರವಾಕ್ಯದ ಸತ್ಯವಾದ ಮಾಹಿತಿಗಳಿಂದ ನಿಮ್ಮ ಹೃದಯವನ್ನು ನೀವು ತುಂಬಿಸಿಕೊಂಡು ನಿಮ್ಮಲ್ಲಿ ನಂಬಿಕೆಯನ್ನು ನಿರ್ಮಿಸಿಕೊಳ್ಳುವಾಗ ನಿಮ್ಮ ಜೀವನವು ದೇವರವಾಕ್ಯದ ವಾಸ್ತವತೆಯನ್ನು ಪ್ರತಿಬಿಂಬಿಸಲು ಪ್ರಾರಂಭಿಸುತ್ತದೆ.
Bible Reading: 1 Samuel 14
ಪ್ರಾರ್ಥನೆಗಳು
ತಂದೆಯೇ, ನಿಮ್ಮ ವಾಕ್ಯದ ಮೂಲಕ ನೀವಿಂದು ಕೊಟ್ಟ ಚುಚ್ಚುಮದ್ಧಿಗಾಗಿ ಯೇಸುನಾಮದಲ್ಲಿ ನಿಮಗೆ ಸ್ತೋತ್ರ.
ನವೀಕೃತ ಮನಸ್ಸನ್ನು ಹೊಂದಲು ನೀವು ನನಗೆ ಸಹಾಯ ಮಾಡುವಂತೆ ಯೇಸುನಾಮದಲ್ಲಿ ಪ್ರಾರ್ಥಿಸುತ್ತೇನೆ. ನಿಮ್ಮ ಮಾರ್ಗಗಳನ್ನು ಅನುಸರಿಸಲು ನನಗೆ ಸಹಾಯ ಮಾಡಿ, ಮತ್ತು ನನ್ನ ಹೃದಯದಲ್ಲಿರುವ ಭಯದ ಪ್ರತಿಯೊಂದು ಕೋಟೆಯನ್ನು ಯೇಸುನಾಮದಲ್ಲಿ ಬಹಿಷ್ಕರಿಸುತ್ತೇನೆ.
ಇಂದಿನಿಂದ, ನಾನು ನಿಮ್ಮ ಕುರಿತು ಜಾಗೃತನಾಗಿದ್ದು ಕೇವಲ ಸಾಧ್ಯತೆಗಳನ್ನು ಮಾತ್ರ ಯೇಸುನಾಮದಲ್ಲಿ ಎದುರು ನೋಡುತ್ತೇನೆ. ಆಮೆನ್.
ನವೀಕೃತ ಮನಸ್ಸನ್ನು ಹೊಂದಲು ನೀವು ನನಗೆ ಸಹಾಯ ಮಾಡುವಂತೆ ಯೇಸುನಾಮದಲ್ಲಿ ಪ್ರಾರ್ಥಿಸುತ್ತೇನೆ. ನಿಮ್ಮ ಮಾರ್ಗಗಳನ್ನು ಅನುಸರಿಸಲು ನನಗೆ ಸಹಾಯ ಮಾಡಿ, ಮತ್ತು ನನ್ನ ಹೃದಯದಲ್ಲಿರುವ ಭಯದ ಪ್ರತಿಯೊಂದು ಕೋಟೆಯನ್ನು ಯೇಸುನಾಮದಲ್ಲಿ ಬಹಿಷ್ಕರಿಸುತ್ತೇನೆ.
ಇಂದಿನಿಂದ, ನಾನು ನಿಮ್ಮ ಕುರಿತು ಜಾಗೃತನಾಗಿದ್ದು ಕೇವಲ ಸಾಧ್ಯತೆಗಳನ್ನು ಮಾತ್ರ ಯೇಸುನಾಮದಲ್ಲಿ ಎದುರು ನೋಡುತ್ತೇನೆ. ಆಮೆನ್.
Join our WhatsApp Channel

Most Read
● ಸಮರುವಿಕೆಯ ಕಾಲ- 3● ದೇವರು ದರ್ಶನಕೊಡುವ ಸಮಯವನ್ನು ಗುರುತಿಸಿಕೊಳ್ಳುವುದು
● ಪುರುಷರು ಏಕೆ ಪತನಗೊಳ್ಳುವರು -1
● ದೇವರು ಹೇಗೆ ಒದಗಿಸುತ್ತಾನೆ #4
● ಅಂತ್ಯಕಾಲದ ಸಮಯದ 7 ಪ್ರಮುಖವಾದ ಪ್ರವಾದನಾ ಸೂಚನೆಗಳು: #2
● ದೇವರು ದೊಡ್ಡ ಬಾಗಿಲುಗಳನ್ನು ತೆರೆಯಲಿದ್ದಾನೆ
● ಸ್ನೇಹ ವಿನಂತಿ: ಪ್ರಾರ್ಥನಾಪೂರ್ವಕವಾಗಿ ಆಯ್ಕೆಮಾಡಿ.
ಅನಿಸಿಕೆಗಳು