english हिंदी मराठी తెలుగు മലയാളം தமிழ் Contact us ನಮ್ಮನ್ನು ಸಂಪರ್ಕಿಸಿ ಸ್ಪೋರ್ಟಿಫೈ ನ್ನು ಆಲಿಸಿರಿ ಸ್ಪೋರ್ಟಿಫೈ ನ್ನು ಆಲಿಸಿರಿ Download on the App StoreiOS ನಲ್ಲಿ ಆಪ್ ನ್ನು ಡೌನ್ಲೋಡ್ ಮಾಡಿ Get it on Google Play ಆಂಡ್ರಾಯ್ಡ್ ನಲ್ಲಿ ಆಪ್ ನ್ನು ಡೌನ್ಲೋಡ್ ಮಾಡಿ
 
ಲಾಗಿನ್
ಆನ್ಲೈನ್ ಮೂಲಕ ಕಾಣಿಕೆ ನೀಡಲು
ಲಾಗಿನ್
  • ಮೂಲತಾಣ
  • ಕಾರ್ಯಕ್ರಮಗಳು
  • ನೇರಪ್ರಸಾರ
  • ದೂರದರ್ಶನ
  • ನೋಹಾಟ್ಯೂಬ್
  • ಸ್ತೋತ್ರಗಳು
  • ಸುದ್ದಿಗಳು
  • ಮನ್ನಾ
  • ಪ್ರಾರ್ಥನೆಗಳು
  • ಅರಿಕೆಗಳು
  • ಕನಸುಗಳು
  • ವಿದ್ಯುನ್ಮಾನ -ಪುಸ್ತಕಗಳು
  • ವ್ಯಾಖ್ಯಾನ
  • ಶ್ರದ್ದಾಂಜಲಿ
  • ಓಯಸಿಸ್
  1. ಮೂಲತಾಣ
  2. ಅನುದಿನದ ಮನ್ನಾ
  3. ಆತನ ಪುನರುತ್ಥಾಕ್ಕೆ ಸಾಕ್ಷಿಯಾಗುವುದು ಹೇಗೆ? - 1
ಅನುದಿನದ ಮನ್ನಾ

ಆತನ ಪುನರುತ್ಥಾಕ್ಕೆ ಸಾಕ್ಷಿಯಾಗುವುದು ಹೇಗೆ? - 1

Friday, 3rd of April 2026
0 0 16
Categories : ನಿಜ ಸಾಕ್ಷಿ (True witness)
ನನ್ನೊಂದಿಗೆ ಅಪೊಸ್ತಲರ ಕೃತ್ಯಗಳು 4:33 ಕ್ಕೆ ಬನ್ನಿ
“ಮತ್ತುಕರ್ತನಾದ
ಯೇಸುಜೀವಂತನಾಗಿಎದ್ದುಬಂದನೆಂಬದಕ್ಕೆ ಅಪೊಸ್ತಲರು ಬಹು ಬಲವಾಗಿ ಸಾಕ್ಷಿ ಹೇಳುತ್ತಿದ್ದರು. ಬಹಳ ದಯವು ಅವರೆಲ್ಲರ ಮೇಲೆ ಇತ್ತು."

“ಮತ್ತು ಬಹು ಬಲವಾಗಿ ಸಾಕ್ಷಿ.. " ಎಂದು ಧರ್ಮಗ್ರಂಥವು ಹೇಳುವುದನ್ನು ಇಲ್ಲಿ  ಗಮನಿಸಿ. ನನಗೆ ಇದು ಇಷ್ಟವಾದದ್ದು, ಕೇವಲ ಬಲವಾಗಿ ಅಲ್ಲ, ಬಹು ಬಲವಾಗಿ. ಕರುಣಾ ಸದನದ ಸೇವೆಯಲ್ಲಿ, ಈ ವರೆಗೆ ನಾವು ಬಲವನ್ನು ನೋಡಿದ್ದೇವೆ, ಆದರೆ ಈಗ ನಾವು ಬಹು ಬಲವನ್ನು ನೋಡುತ್ತೇವೆ ಎಂದು ನಾನು ಪ್ರವಾದನೆ ನುಡಿಯುತ್ತೇನೆ.ಅದಕ್ಕಾಗಿಯೇ ನಾವು ಮಧ್ಯಸ್ಥಿಕೆ ಪ್ರಾರ್ಥನೆಯಲ್ಲಿಯೂ ನಮ್ಮ ಉಪವಾಸ ಮತ್ತು ಪ್ರಾರ್ಥನೆಗಳಲ್ಲಿಯೂ  ಉಡಾಫೇ ಯಾಗಿರಲು ಸಾಧ್ಯವಿಲ್ಲ. ಅಪೊಸ್ತಲರು ಯೇಸುವಿನ ಪುನರುತ್ಥಾನದ ವಿಷಯದಲ್ಲಿ  ಬಹು ಬಲವಾದ  ಸಾಕ್ಷಿಯಾದರು. ನಾವೂ ಸಹ  ಇದನ್ನು ನಮ್ಮ ಸ್ವಂತ ಜೀವನದಲ್ಲಿ ಅನುಕರಿಸಬೇಕಾಗಿದೆ.

ವಿಮರ್ಶಕರು ಎಂದು ಕರೆಯಲ್ಪಡುವವರು ಬಲವನ್ನು  ಸ್ವಲ್ಪ ಮಟ್ಟಿಗೆ ನಿರಾಕರಿಸಬಹುದು. ಆದಾಗ್ಯೂ, ಬಹು ಬಲವನ್ನು ನಿರಾಕರಿಸಲಾಗಲೀ  ಅಥವಾ ನಿರ್ಲಕ್ಷಿಸಲಾಗಲೀ  ಸಾಧ್ಯವೇ ಇಲ್ಲ. 
ನೋಡಿ, ಫರೋಹನ ಜಾದೂಗಾರರು ಪವಾಡಗಳನ್ನು ಮತ್ತು ದೇವರ ಮನುಷ್ಯನಾದ ಮೋಶೆ ಪ್ರದರ್ಶಿಸಿದ ಶಕ್ತಿಯನ್ನು ನಕಲು ಮಾಡುವ ಒಂದು ಹಂತವಿತ್ತು. ನಂತರ ದೇವರು ಗೇರ್ ಬದಲಾಯಿಸಿದನು  ನಂತರ  ಮಾಂತ್ರಿಕರು "ಇದು ದೇವರ ಕೈ ಬೆರಳೇ  " ಎಂದು ಘೋಷಿಸುವಂತೆ ಒತ್ತಾಯಿಸುವ ಕಾರ್ಯವೊಂದನ್ನು ಮೋಶೆಯು ಮಾಡಿದನು. (ವಿಮೋಚನಕಾಂಡ 8:19).

ಜಾದೂಗಾರರು "ದೇವರ ಕೈ" ಎಂದು ಹೇಳಲಿಲ್ಲ, ಬದಲಿಗೆ "ದೇವರ ಕೈ ಬೆರಳು" ಎಂದು ಹೇಳಿದ್ದರು ಎಂಬುದನ್ನು ನೀವು ಗಮನಿಸಬೇಕೆಂದು ನಾನು ಬಯಸುತ್ತೇನೆ. ದೇವರ ಒಂದು ಬೆರಳು ಮನುಷ್ಯರ ಎಲ್ಲಾ ಶಕ್ತಿಗಿಂತ ಪ್ರಬಲವಾಗಿದೆ. ಅಲ್ಲಿಯೇ, ಬಲಕ್ಕೂ  ಮತ್ತು ಮಹಾ ಬಲಕ್ಕೂ ನಡುವೆ ಇರುವ  ವ್ಯತ್ಯಾಸವನ್ನು ನಾವು ನೋಡಬಹುದು. ಅಪೊಸ್ತಲರು ಸಹ ಮಹಾ ಬಲವನ್ನು ಪ್ರದರ್ಶಿಸಿ ಕ್ರಿಸ್ತನ ಪುನರುತ್ಥಾನಕ್ಕೆ ಸಾಕ್ಷಿಯಾದರು.

ಪ್ರಿಯರೇ ಪಾಸ್ಟರ್  , J-12 ನಾಯಕ ಮತ್ತು ಕರುಣಾ ಸದನ ಸಚಿವಾಲಯದೊಂದಿಗೆ ಸಂಪರ್ಕ ಹೊಂದಿದ ಪ್ರತಿಯೊಬ್ಬ ವ್ಯಕ್ತಿಯೂ , ಹಿಂದೆಂದಿಗಿಂತಲೂ ಹೆಚ್ಚಾಗಿ ಕರ್ತನನ್ನು ಹುಡುಕುವ ಸಮಯ ಇದಾಗಿದೆ ಎಂಬುದಾಗಿ ನಾನು ನಿಮ್ಮನ್ನು ಪ್ರೋತ್ಸಾಹಿಸಲು ಬಯಸುತ್ತೇನೆ.

ವಿಚಲಿತರಾಗಬೇಡಿಸಣ್ಣ ಸಣ್ಣ ವಿಷಯಗಳು ತಮ್ಮ ಜೀವನವನ್ನು ನಿಯಂತ್ರಿಸಲು ಬಿಡುವ ಜನರಿದ್ದಾರೆ. “ಪಾಸ್ಟರ್ , ನೋಡಿ  ಅವರು ನನ್ನ ಬಗ್ಗೆ ಹೀಗೆ ಹೇಳಿದ್ದಾರೆಂದು ನಾನು ಕೇಳಿದೆ . ಅವರು ಹೀಗೆ ಹೇಳಬಾರದಿತ್ತು. ನನಗೆ ಇನ್ನು ಮುಂದೆ ಸೇವೆ ಮಾಡಲು ಇಷ್ಟವಿಲ್ಲ.” ಎಂದು ಹೇಳುವ ಜನರಿದ್ದಾರೆ.ಈ ಗ್ರಹದಲ್ಲಿ ಜನರು ಇರುವವರೆಗೆ, ಅವರು ನಿಮ್ಮ ಬಗ್ಗೆ ಮಾತನಾಡುತ್ತಲೇ ಇರುತ್ತಾರೆ. ನೀವು ಯಾವ ಹಂತದಲ್ಲಿಯೂ  ಇತರರ ಬಗ್ಗೆ ಮಾತನಾಡಿಯೇ ಇಲ್ಲವೇ?

“ಪಾಸ್ಟರ್, ಅವರು ನನ್ನ ಹುಟ್ಟುಹಬ್ಬದಂದು ನನಗೆ ಶುಭ ಹಾರೈಸಲು ಮರೆತಿದ್ದಾರೆಯೇ? ಅವರು ಹಾರೈಸಿದರು  ಆದರೆ ನನಗಲ್ಲ.” ಈ ರೀತಿ ಮೋಲ್‌ಗುಡ್ಡಗಳಿಂದ ಪರ್ವತಗಳನ್ನು ಮಾಡಬೇಡಿ. ಪ್ರಾರ್ಥನೆ ಮತ್ತು ವಾಕ್ಯದಲ್ಲಿ ಎದ್ದೇಳಿ. ಪ್ರೋತ್ಸಾಹದ ಅಗತ್ಯವಿರುವ ಅನೇಕ ಜನರು ಇಂದು ಸಾಯುತ್ತಿದ್ದಾರೆ. ನೀವು ಪವಿತ್ರಾತ್ಮನ  ಧ್ವನಿಯನ್ನು ಆಲಿಸುತ್ತಿದ್ದೀರಾ ಆತನ ಪುನರುತ್ಥಾನಕ್ಕೆ  ಸಾಕ್ಷಿಯಾಗುತ್ತೀರಾ? ಇದಕ್ಕಾಗಿ ಕರ್ತನು ಖಂಡಿತವಾಗಿಯೂ ನಿಮಗೂ  ಮತ್ತು ನಿಮ್ಮ ಪ್ರೀತಿಪಾತ್ರರಿಗೂ  ಪ್ರತಿಫಲ ನೀಡುತ್ತಾನೆ.ನೀವು ಪ್ರೀತಿಸಲ್ಪಡುತ್ತೀರಿ — ಏಳಿರಿ.
“ಪಾಸ್ಟರ್ , ಯಾರೂ ನನ್ನನ್ನು ಪ್ರೀತಿಸುವುದಿಲ್ಲ; ನಾನು ತುಂಬಾ ತಿರಸ್ಕರಿಸಲ್ಪಟ್ಟಿದ್ದೇನೆಂದು ಭಾವಿಸುತ್ತೇನೆ.” ಹಲೋ! ಯೇಸು ನಿನ್ನನ್ನು ತುಂಬಾ ಪ್ರೀತಿಸುತ್ತಾನೆ, ನಿನ್ನ  ಮೇಲಿನ ಆತನ ಪ್ರೀತಿ ಎಂದಿಗೂ ಬದಲಾಗುವುದಿಲ್ಲ. ಅಷ್ಟು ನಿಮಗೆ  ಸಾಕಾಗುವುದಿಲ್ಲವೇ? ನೀವು ಯಾವಾಗ ಎದ್ದು ಆತನ ಪುನರುತ್ಥಾನಕ್ಕೆ  ನಿಜವಾದ ಸಾಕ್ಷಿಯಾಗುತ್ತೀರಿ? ಈಗ ಅಲ್ಲದಿದ್ದರೆ, ಮತ್ತೆ ಯಾವಾಗ? ನೀವು ಇಲ್ಲದಿದ್ದರೆ,  ಮತ್ತೆ ಇನ್ಯಾರು? 

"ಹೀಗಿರುವದರಿಂದ - ಏನು ಊಟಮಾಡಬೇಕು, ಏನು ಕುಡಿಯಬೇಕು, ಏನು ಹೊದ್ದುಕೊಳ್ಳಬೇಕು ಎಂದು ಚಿಂತೆಮಾಡಬೇಡಿರಿ. ಇವೆಲ್ಲವುಗಳಿಗಾಗಿ ಅಜ್ಞಾನಿಗಳು ತವಕಪಡುತ್ತಾರೆ. ಇದೆಲ್ಲಾ ನಿಮಗೆ ಬೇಕಾಗಿದೆ ಎಂದು ಪರಲೋಕದಲ್ಲಿರುವ ನಿಮ್ಮ ತಂದೆಗೆ ತಿಳಿದದೆಯಷ್ಟೆ.  ಹೀಗಿರುವದರಿಂದ, ನೀವು ಮೊದಲು ದೇವರ ರಾಜ್ಯಕ್ಕಾಗಿಯೂ ನೀತಿಗಾಗಿಯೂ ತವಕಪಡಿರಿ. ಇವುಗಳ ಕೂಡ ಅವೆಲ್ಲವೂ ನಿಮಗೆ ದೊರಕುವವು."ಎಂದು ಕರ್ತನಾದ ಯೇಸು ಸ್ಪಷ್ಟವಾಗಿ ಹೇಳಿದನು(ಮತ್ತಾಯ 6:31–33)

ದೇವರ ರಾಜ್ಯ ಕೇಂದ್ರಿತ ಜೀವನದ ಫಲಿತಾಂಶ.
ಪವಿತ್ರಾತ್ಮನು  ನಿಮ್ಮಲ್ಲಿ ಮತ್ತು ನಿಮ್ಮ ಮೂಲಕ ಕೆಲಸ ಮಾಡಲು ಅನುಮತಿಸುವ ಮೂಲಕ, ನೀವು ಆತನ ಪುನರುತ್ಥಾನಕ್ಕೆ  ನಿಜವಾದ ಸಾಕ್ಷಿಯಾಗುತ್ತೀರಿ. ಮತ್ತು ಅದರ  ಅತ್ಯುತ್ತಮ ಭಾಗವೆಂದರೆ ಆಗ ನಿಮ್ಮ ಜೀವನದಲ್ಲಿ ಎಲ್ಲವೂ ಸರಿಯಾದ ಸ್ಥಳದಲ್ಲಿ ಬಂದು ನಿಲ್ಲುತ್ತವೆ. ಆಗ ನೀವು ಕೀರ್ತನೆಗಾರನಂತೆ,
"ನನಗೆ ಪ್ರಾಪ್ತವಾಗಿರುವ ಸ್ವಾಸ್ತ್ಯವು ರಮಣೀಯವಾದದ್ದು; ಅದು ನನಗೆ ಸಂತೃಪ್ತಿಕರವಾಗಿದೆ.ಎಂದು  ಘೋಷಿಸುವಿರಿ. (ಕೀರ್ತನೆ 16:6) 
 
Bible Reading: 1 Samuel 8-9
ಪ್ರಾರ್ಥನೆಗಳು
ತಂದೆಯೇ, ನನಗೆ ಇಂದು ಪರಲೋಕದಿಂದ ನೂತನ ಅಗ್ನಿಯು ಯೇಸುನಾಮದಲ್ಲಿ ಬೇಕಾಗಿದೆ . ನಾನು ನಿನ್ನ ಪುನರುತ್ಥಾನಕ್ಕೆ ನಿಜವಾದ ಸಾಕ್ಷಿಯಾಗುವಂತೆ ನಿನ್ನ ಆತ್ಮನಿಂದ ನನಗೆ ಯೇಸುನಾಮದಲ್ಲಿ ದೀಕ್ಷಾಸ್ನಾನ ಮಾಡಿಸು. ಆಮೆನ್.


Join our WhatsApp Channel


Most Read
● ಯೇಸುವನ್ನು ನೋಡುವ ಬಯಕೆ  
● ದೇವರ ವಾಕ್ಯವು ನಿಮ್ಮನ್ನು ಬೇಸರಗೊಳಿಸಬಹುದೇ?
● ದಿನ 27:40 ದಿನಗಳ ಉಪವಾಸ ಪ್ರಾರ್ಥನೆ
● ಯೂದನ ಪತನದಿಂದ ಕಲಿಯಬಹುದಾದ 3 ಪಾಠಗಳು
● ಮೋಸದ ಜಗತ್ತಿನಲ್ಲಿ ಸತ್ಯವನ್ನು ವಿವೇಚಿಸಿ ತಿಳಿಯುವುದು.
● ದಿನ 40:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ.
● ಯೇಸುವಿನ ಹೆಸರು.
ಅನಿಸಿಕೆಗಳು
ನಮ್ಮನ್ನು ಸಂಪರ್ಕಿಸಿ
Phone: +91 8356956746
+91 9137395828
WhatsApp: +91 8356956746
ಇಮೇಲ್ ವಿಳಾಸ: [email protected]
ವಿಳಾಸ :
10/15, First Floor, Behind St. Roque Grotto, Kolivery Village, Kalina, Santacruz East, Mumbai, Maharashtra, 400098
ಸ್ಪೋರ್ಟಿಫೈ ನ್ನು ಆಲಿಸಿರಿ
Download on the App Store
Get it on Google Play
JOIN MAILING LIST
EXPLORE
ಕಾರ್ಯಕ್ರಮಗಳು
ನೇರಪ್ರಸಾರ
ನೋಹಾಟ್ಯೂಬ್
ದೂರದರ್ಶನ
Donation
ಮನ್ನಾ
ಸ್ತೋತ್ರಗಳು
ಅರಿಕೆಗಳು
ಕನಸುಗಳು
ಸಂಪರ್ಕ
© 2026 Karuna Sadan, India.
➤
ಲಾಗಿನ್
ಈ ಜಾಲದಲ್ಲಿರುವ ವಿಷಯದ ಕುರಿತು ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಿಳಿಸಲು ಲೈಕ್ ಮಾಡಲು ದಯಮಾಡಿ ನಿಮ್ಮ ನೋಹ ಖಾತೆಗೆ ಲಾಗಿನ್ ಆಗಿರಿ
ಲಾಗಿನ್