ಅನುದಿನದ ಮನ್ನಾ
ನೀವು ದೇವರನ್ನು ಎದುರಿಸುತ್ತಿದ್ದೀರಾ?
Sunday, 8th of September 2024
1
0
175
Categories :
ಬಿಡುಗಡೆ (Deliverance)
ಒಂದು ಸಾರಿ ದೇವರಿಂದ ಬಹಳವಾಗಿ ಉಪಯೋಗಿಸಲ್ಪಡುತ್ತಿದ್ದ ಹಾಗೂ ಪ್ರವಾದನ ವರಗಳನ್ನು ಹೊಂದಿದ್ದ ಒಬ್ಬ ಸಭೆಯ ಸದಸ್ಯರು ಪಾಸ್ಟರ್ ಗಳಿಗೆ ಹೋಗಿ "ಪಾಸ್ಟರ್ ರವರೇ ನನ್ನನ್ನು ಯಾವ ಒಂದು ಆತ್ಮವಿರೋಧಿಸುತ್ತಿದೆ ಎಂದು ಹೇಳಬಲ್ಲಿರಾ?" ಎಂದು ಕೇಳಿದರು. ಆ ಸಭೆಯ ಸದಸ್ಯರು ಒಂದು ಕುತೂಹಲಕಾರಿಯಾದ ಉತ್ತರವನ್ನು ನಿರೀಕ್ಷಿಸಿದ್ದರು. ಆದರೆ "ದೇವರ ಆತ್ಮವು ನಿಮ್ಮನ್ನು ಪ್ರತಿರೋಧಿಸುತ್ತಿದೆ.ಏಕೆಂದರೆ ನೀವು ದೇವರನ್ನೇ ಎದುರಿಸುತ್ತಿದ್ದೀರಿ" ಎಂದು ಹೇಳಿದಾಗ ಅವರು ಬೆಪ್ಪಾದರು.
ದಯಮಾಡಿ ಈ ಮುಂದಿನ ವಾಕ್ಯಗಳನ್ನು ಬಹಳ ಜಾಗರೂಕತೆಯಿಂದ ಓದಿರಿ.
"ಹೀಗಿರಲಾಗಿ ದೇವರಿಗೆ ಒಳಗಾಗಿರಿ. ಸೈತಾನನನ್ನು ಎದುರಿಸಿರಿ, ಅವನು ನಿಮ್ಮನ್ನು ಬಿಟ್ಟು ಓಡಿಹೋಗುವನು."(ಯಾಕೋಬನು 4:7)
"ಅವನನ್ನು (ಸೈತಾನನನ್ನು) ಎದುರಿಸಿ ನಂಬಿಕೆಯಲ್ಲಿ ಧೃಡವಾಗಿ ನಿಲ್ಲಿರಿ". (1ಪೇತ್ರ 5:9)
ಈ ಮೇಲಿನ ವಾಕ್ಯಗಳು ಸ್ಪಷ್ಟವಾಗಿ ನಮಗೆ ಹೇಳುವುದೇನೆಂದರೆ ಕ್ರೈಸ್ತನಾದವನು ಮೊದಲಿಗೆ ದೇವರಿಗೆ ಒಳಗಾಗಬೇಕು ಆಮೇಲೆ ಸೈತಾನನನ್ನು ಎದುರಿಸಬೇಕು. ಹೀಗೆ ನಾವು ಸೈತಾನನ ದುಷ್ಟ ತಂತ್ರದಿಂದ ಹೊರ ಬರಬಹುದು.
ಒಂದು ಶುಭ ಸಮಾಚಾರ ಏನೆಂದರೆ ಕ್ರೈಸ್ತರಲ್ಲಿ ಅತಿ ಎಳೆಯ ಪ್ರಾಯದವರೂ ಸಹ ಕ್ರಿಸ್ತನಲ್ಲಿ ಬಲವಾಗಿ ನಿಲ್ಲುವ ಮೂಲಕ ಶತ್ರುವಿನ ಅತ್ಯಂತ ಅಂಧಕಾರದ ಬಲವನ್ನು ಯಶಸ್ವಿಯಾಗಿ ಎದುರಿಸಬಹುದು. ಆದರೂ ಸಾಮಾನ್ಯವಾಗಿ ಎಲ್ಲರೂ ಕಡೆಗಣಿಸಲ್ಪಡುವ ಒಂದು ಅಂಶವಿದೆ ಮತ್ತು ಅದರಿಂದಲೇ ಎಲ್ಲಾ ಸಮಸ್ಯೆಗಳು ಉದ್ದವಿಸುತ್ತವೆ :
"ಆತನು ನಮ್ಮ ಮೇಲೆ ಅತಿಶಯವಾದ ಕೃಪೆಯನ್ನು ಇಡುತ್ತಾನೆ. ಆದುದರಿಂದ - ದೇವರು ಅಹಂಕಾರಿಗಳನ್ನು ಎದುರಿಸುತ್ತಾನೆ, ದೀನರಿಗಾದರೋ ಕೃಪೆಯನ್ನು ಅನುಗ್ರಹಿಸುತ್ತಾನೆ ಎಂದು ಶಾಸ್ತ್ರವು ಹೇಳುತ್ತದೆ."(ಯಾಕೋಬನು 4:6)
"ದೇವರು ಅಹಂಕಾರಿಗಳನ್ನು ಎದುರಿಸುತ್ತಾನೆ, ದೀನರಿಗಾದರೋ ಕೃಪೆಯನ್ನು ಅನುಗ್ರಹಿಸುತ್ತಾನೆ."(1 ಪೇತ್ರನು 5:5)
ನಾವು ಕರ್ತನ ಬಲದಲ್ಲಿ ಸೈತಾನನನ್ನು ಎದುರಿಸುತ್ತೇವೆ ಎಂಬ ವಿಚಾರವಂತು ಸತ್ಯವೇ. ಆದರೂ ಕ್ರೈಸ್ತರು ಅನೇಕ ಬಾರಿ ದೇವರನ್ನೇ ಎದುರಿಸುವವರಾಗಿರುತ್ತಾರೆ. ಅಹಂಕಾರವು ದೇವರನ್ನೂ ಆತನ ಮಾರ್ಗವನ್ನೂ ಎದುರಿಸುವಂತದ್ದಾಗಿದೆ.ಈ ಒಂದು ಸಮಯದಲ್ಲಿಯೇ ಕರ್ತನು ನಮಗೆ ವಿರೋಧವಾಗಿ ನಿಲ್ಲುತ್ತಾನೆ.
ಅರಣ್ಯಕಾಂಡ 22 ಬಿಳಾಮನೆಂಬ ವ್ಯಕ್ತಿಯ ಕುರಿತು ಮಾತನಾಡುತ್ತದೆ:
ಮೊವಬ್ಯಾರ ಅರಸನಾದ ಬಾಲಕನು ಇಸ್ರಾಯೆಲ್ಯಾರನ್ನು ಸೋಲಿಸಲು ಪ್ರವಾದಿಯಾದ ಬಿಳಾಮನ ಬಳಿ "ನೀನು ದಯಮಾಡಿ ಬಂದು ನನಗೋಸ್ಕರ ಈ ಜನಕ್ಕೆ ಶಾಪಕೊಡಬೇಕು; ಆಗ ಅವರನ್ನು ಸೋಲಿಸಿ ಈ ದೇಶದಿಂದ ಹೊರಡಿಸಿಬಿಡುವದಕ್ಕೆ ನನ್ನಿಂದಾದೀತು. ನಿನ್ನ ಆಶೀರ್ವಾದದಿಂದ ಶುಭವೂ ನಿನ್ನ ಶಾಪದಿಂದ ಅಶುಭವೂ ಉಂಟಾಗುತ್ತದೆ ಎಂಬದನ್ನು ನಾನು ಬಲ್ಲೆ ಎಂದು ಹೇಳಿಸಿದನು.ಅದಕ್ಕೆ
"ಬೆಳಿಗ್ಗೆ ಬಿಳಾಮನು ತನ್ನ ಕತ್ತೆಗೆ ತಡಿಹಾಕಿಸಿ ಮೋವಾಬ್ಯರ ಪ್ರಧಾನರ ಜೊತೆಯಲ್ಲಿ ಹೊರಟನು."(ಅರಣ್ಯಕಾಂಡ 22:21)
"ಅವನು ಹೋದದರಿಂದ ದೇವರಿಗೆ ಕೋಪವುಂಟಾಯಿತು; ಯೆಹೋವನ ದೂತನು ಅವನಿಗೆ ಎದುರಾಳಿಯಾಗಿ ದಾರಿಯಲ್ಲಿ ನಿಂತುಕೊಂಡನು. "(ಅರಣ್ಯಕಾಂಡ 22:22)
"ಅಷ್ಟರಲ್ಲೇ ಯೆಹೋವನು ಬಿಳಾಮನ ಕಣ್ಣುಗಳನ್ನು ತೆರೆದನು. ಯೆಹೋವನ ದೂತನು ಬಿಚ್ಚುಕತ್ತಿಯನ್ನು ಹಿಡಿದು ದಾರಿಯಲ್ಲೇ ನಿಂತಿರುವದನ್ನು ಅವನು ಕಂಡಾಗ ಅಡ್ಡಬಿದ್ದು ನಮಸ್ಕರಿಸಿದನು."(ಅರಣ್ಯಕಾಂಡ 22:31)
ನಾವು ದೇವರನ್ನು ಎದುರಿಸಿದಾಗ ಆತನು ನಮ್ಮನ್ನು ಎದುರಿಸುವವರಾಗುತ್ತಾನೆ. ಅಂತಹ ಸಂದರ್ಭಗಳಲ್ಲಿ ನಮ್ಮ ಪ್ರತಿರೋಧವೂ ಸಂಪೂರ್ಣವಾಗಿ ನಿರರ್ಥಕವಾಗಿರುತ್ತದೆ. ದೀನತ್ವವೇ ಈ ಅಹಂಕಾರಕ್ಕೆ ವಿರುದ್ಧವಾದದ್ದು.
ನಿಮ್ಮ ಜೀವನ ಶೈಲಿಯ ಕೆಲವೊಂದು ಕ್ಷೇತ್ರಗಳಲ್ಲಿ ನೀವು ಬದಲಾಗಬೇಕು ಎಂದು ಕರ್ತನು ನಿಮ್ಮೊಂದಿಗೆ ಮಾತನಾಡುತ್ತಿರಬಹುದು .ವಿಶೇಷವಾಗಿ ಬೀಜವನ್ನು ಬಿತ್ತುವ ಅಗತ್ಯತೆ, ಯಾರನ್ನಾದರೂ ಕ್ಷಮಿಸುವಂತಹ ಅಥವಾ ಪ್ರಾರ್ಥನೆಗಾಗಿ ಒಂದು ನಿರ್ದಿಷ್ಟ ಸಮಯವನ್ನು ನಿಗದಿಪಡಿಸುವ ಅಗತ್ಯವನ್ನು ಕರ್ತನು ನಿಮಗೆ ಹೇಳುತ್ತಿರಬಹುದು ಮತ್ತು ನೀವು ಅದನ್ನು ಅನಿರ್ದಿಷ್ಟವಾಗಿ ಮುಂದೂಡುತ್ತಲೇ ಇರಬಹುದು. ಏನೇ ಆಗಿರಲಿ ಇನ್ನು ಮುಂದೆ ಆತನನ್ನು ಪ್ರತಿರೋಧಿಸದೆ ದೇವರ ಮುಂದೆ ನಿಮ್ಮನ್ನು ನೀವು ತಗ್ಗಿಸಿಕೊಳ್ಳಿರಿ.
ನೀವಿಂದು ನಿಮ್ಮ ಜೀವಿತದಲ್ಲಿ ಯಾವುದೇ ಪ್ರಗತಿಯನ್ನು ಕಾಣದೆ ಇರಬಹುದು ಮತ್ತು ಅಹಂಕಾರದ ಸಮಸ್ಯೆಯಿಂದ ಈ ಎಲ್ಲಾ ವಿರೋಧಗಳು ಬರುತ್ತಿರುವಾಗ ನೀವು ಅದಕ್ಕಾಗಿ ಸೈತಾನನನ್ನು ದೂಷಿಸುತ್ತಾ ಕುಳಿತಿರಬಹುದು. ಯಾವ ವಿಧದಲ್ಲಾದರೂ ನೀವು ದೇವರನ್ನು ಎದುರಿಸುತ್ತಿದ್ದಿರಾ ಎಂದು ನಿಮ್ಮನ್ನು ನೀವು ಪ್ರಶ್ನಿಸಿಕೊಳ್ಳಿರಿ?
ಪ್ರಾರ್ಥನೆಗಳು
ತಂದೆಯೇ, ಯಾವುದೇ ವಿಚಾರದಲ್ಲಿಯಾದರೂ ನಿನ್ನ ಮಾತನ್ನು ಕೇಳದೆ ನಿನ್ನನ್ನು ವಿರೋಧಿಸಿದಕ್ಕಾಗಿ ಯೇಸು ನಾಮದಲ್ಲಿ ನನ್ನನ್ನು ಕ್ಷಮಿಸು.ನಿನ್ನ ವಾಕ್ಯವನ್ನು ಅವಿರೋಧವಾಗಿ ಪಾಲಿಸುವಂತಹ ಹೃದಯವನ್ನು ಯೇಸು ನಾಮದಲ್ಲಿ ನನಗೆ ಅನುಗ್ರಹಿಸು ಆಮೇನ್.
Join our WhatsApp Channel
Most Read
● ನಂಬುವವರಾಗಿ ನಡೆಯುವುದು● ನಿಮ್ಮ ಮನಸ್ಸಿಗೆ ಉಣಬಡಿಸಿರಿ
● ಕರ್ತನ ಆನಂದ
● ಯಾವಾಗ ಸುಮ್ಮನಿರಬೇಕು ಮತ್ತು ಯಾವಾಗ ಮಾತನಾಡಬೇಕು
● ನಿಮ್ಮ ಜೀವದದಲ್ಲಿ ಎಂದೂ ಅಳಿಯದಂತ ಬದಲಾವಣೆಯನ್ನು ತರುವುದು ಹೇಗೆ?-1
● ಆತ್ಮೀಕ ಬಾಗಿಲುಗಳನ್ನು ಮುಚ್ಚುವುದು
● ನಂಬಿಕೆ- ನಿರೀಕ್ಷೆ -ಪ್ರೀತಿ
ಅನಿಸಿಕೆಗಳು