ನಮ್ಮ ಚರ್ಚುಗಳು ಮತ್ತು ಸೇವೆಗಳಲ್ಲಿ, ಉದಾರತೆ, ಉಸ್ತುವಾರಿ ಮತ್ತು ವಿಶ್ವಾಸದ ಕುರಿತು ನಮ್ಮ ತಿಳುವಳಿಕೆಯನ್ನು ಪ್ರಶ್ನಿಸುವ ಸಂದರ್ಭಗಳನ್ನು ನಾವು ಹೆಚ್ಚಾಗಿ ಎದುರಿಸುತ್ತೇವೆ. ಅಂತಹ ಒಂದು ಸನ್ನಿವೇಶವೆಂದರೆ ಸಹ ವಿಶ್ವಾಸಿಗಳು ಆರ್ಥಿಕ ಸಹಾಯವನ್ನು ಕೇಳುವುದು.
ನಮ್ಮ ಹೃದಯಗಳು ನಮ್ಮನ್ನು ದಾನ ಮಾಡುವಂತೆ ಒತ್ತಾಯಿಸಬಹುದಾದರೂ, ಈ ಕ್ಷಣಗಳಲ್ಲಿ ಜ್ಞಾನ ಮತ್ತು ವಿವೇಚನೆ ಅತ್ಯಗತ್ಯ.
ಜ್ಞಾನೋಕ್ತಿ 19:17 ರಲ್ಲಿ ಕಂಡುಬರುವಂತೆ, ಸತ್ಯವೇದ ನಮಗೆ ಉದಾರವಾಗಿಯೂ ಮತ್ತು ದಯೆಯುಳ್ಳವರಾಗಿಯೂ ಇರಬೇಕೆಂದು ಕಲಿಸುತ್ತದೆ,
"ಬಡವರಿಗೆ ದಯೆತೋರಿಸುವವನು ಯೆಹೋವನಿಗೆ ಸಾಲಕೊಡುವವನು; ಆ ಉಪಕಾರಕ್ಕೆ ಯೆಹೋವನೇ ಪ್ರತ್ಯುಪಕಾರ ಮಾಡುವನು." ಆದಾಗ್ಯೂ, ವರ್ಷಗಳಲ್ಲಿ, ಚರ್ಚ್ ಒಳಗೆ ಸಾಮಾನ್ಯವಾಗಿ ಸಾಲ ಪಡೆಯುವಂತದ್ದು ಸಂಕೀರ್ಣ ಸಂದರ್ಭಗಳಿಗೆ ಕಾರಣವಾಗಬಹುದು ಎಂಬುದನ್ನು ನಾನು ನೋಡಿದ್ದೇನೆ.
ದುರದೃಷ್ಟವಶಾತ್ ಕೆಲವು ವ್ಯಕ್ತಿಗಳು,ಸಹ ವಿಶ್ವಾಸಿಗಳ ದಯೆಯನ್ನು ಬಳಸಿಕೊಂಡು ಮರುಪಾವತಿ ಮಾಡದೇ ಪದೇ ಪದೇ ಸಾಲ ಪಡೆಯುವುದಲ್ಲದೆ, ಘರ್ಷಣೆ ಮತ್ತು ನೋವನ್ನು ಉಂಟುಮಾಡುತ್ತಾರೆ. ಈ ನಡವಳಿಕೆಯು ಸಂಬಂಧಗಳನ್ನು ಕೆಡಿಸುತ್ತದೆ ಮಾತ್ರವಲ್ಲದೆ ಚರ್ಚ್ ಒಳಗೆ ಸಾಮರಸ್ಯವನ್ನು ಅಡ್ಡಿಪಡಿಸುತ್ತದೆ.
ಈ ವಿಷಯದ ಕುರಿತು ದೇವರವಾಕ್ಯವು ನಮಗೆ ಮಾರ್ಗದರ್ಶನ ನೀಡುತ್ತದೆ.
"ದುಷ್ಟನು ಸಾಲಮಾಡಿಕೊಂಡು ತೀರಿಸಲಾರದೆ ಹೋಗುವನು; ನೀತಿವಂತನು ಪರೋಪಕಾರಿಯಾಗಿ ಧರ್ಮಕೊಡುವನು" ಎಂದು ಕೀರ್ತನೆ 37:21 ಹೇಳುತ್ತದೆ. ಈ ವಚನವು ದಾನ ಮಾಡುವ ಕ್ರಿಯೆ ಮತ್ತು ಸಾಲ ನೀಡುವ ಕ್ರಿಯೆಯ ನಡುವಿನ ಮೂಲಭೂತ ವ್ಯತ್ಯಾಸವನ್ನು ಎತ್ತಿ ತೋರಿಸುತ್ತದೆ.
ಸಾಲ ನೀಡುವುದು ಮರುಪಾವತಿಯನ್ನು ನಿರೀಕ್ಷಿಸಿ ಬಾಧ್ಯತೆಯ ಬಂಧನವನ್ನು ಸೃಷ್ಟಿಸಬಹುದು, ಆದರೆ ದಾನವು ಪ್ರತಿಫಲದ ನಿರೀಕ್ಷೆಯಿಲ್ಲದೆ ಸ್ವತಂತ್ರ ಇಚ್ಛೆಯ ಕ್ರಿಯೆಯಾಗಿದೆ.
ಉದಾರಿಯಾಗಿರುವುದು ಎಂದರೆ ನಮಗೆ ಸಾಮಾನ್ಯ ಜ್ಞಾನದ ಕೊರತೆಯಿರಬೇಕು ಎಂದಲ್ಲ.
ಯಾಕೋಬ 1:5 ಸಲಹೆ ನೀಡಿದಂತೆ " ನಿಮ್ಮಲ್ಲಿ ಯಾವನಿಗಾದರೂ ಜ್ಞಾನ ಕಡಿಮೆಯಾಗಿದ್ದರೆ ಅವನು ದೇವರನ್ನು ಕೇಳಿಕೊಳ್ಳಲಿ, ಅದು ಅವನಿಗೆ ದೊರಕುವದು; ದೇವರು ಹಂಗಿಸದೆ ಎಲ್ಲರಿಗೂ ಉದಾರ ಮನಸ್ಸಿನಿಂದ ಕೊಡುವವನಾಗಿದ್ದಾನೆ. "
ಜ್ಞಾನಕ್ಕಾಗಿ ಪ್ರಾರ್ಥಿಸುವುದು ಅತ್ಯಗತ್ಯ. ಯಾವಾಗ ನೀಡಬೇಕು, ಎಷ್ಟು ನೀಡಬೇಕು ಮತ್ತು ಯಾರಿಗೆ ನೀಡಬೇಕು ಎಂಬುದನ್ನು ವಿವೇಚಿಸಲು ಈ ಜ್ಞಾನವು ನಮಗೆ ಸಹಾಯ ಮಾಡುತ್ತದೆ.
ಇದು ದೇವರು ನಮಗೆ ವಹಿಸಿಕೊಟ್ಟಿರುವ ಸಂಪನ್ಮೂಲಗಳ ಉಸ್ತುವಾರಿಯೊಂದಿಗೆ ಸಹಾಯ ಮಾಡುವ ನಮ್ಮ ಬಯಕೆಯನ್ನು ಸಮತೋಲನಗೊಳಿಸುವ ಕುರಿತಾದ್ದಾಗಿದೆ.
ಆಗ ಚರ್ಚ್‌ನ ಸದಸ್ಯರಾಗಿ, ಅದರ ಐಕ್ಯತೆ ಮತ್ತು ಶಾಂತಿಯನ್ನು ಕಾಪಾಡುವಲ್ಲಿ ನಾವು ಪಾತ್ರವಹಿಸುತ್ತೇವೆ.
ಎಂದು ಎಫೆಸ 4:3 ನಮ್ಮನ್ನು ಒತ್ತಾಯಿಸುತ್ತದೆ. "ಪ್ರೀತಿಯಿಂದ ಒಬ್ಬರನ್ನೊಬ್ಬರು ಸಹಿಸಿಕೊಳ್ಳಿರಿ. ಸಮಾಧಾನವೆಂಬ ಬಂಧನದಿಂದ ಕಟ್ಟಲ್ಪಟ್ಟವರಾಗಿದ್ದು ಪವಿತ್ರಾತ್ಮನಿಂದುಂಟಾಗುವ ಐಕ್ಯವನ್ನು ಕಾಪಾಡಿಕೊಳ್ಳುವದಕ್ಕೆ ಆಸಕ್ತರಾಗಿರಿ."
ಪದೇ ಪದೇ ಸಾಲ ಪಡೆಯುವ ಸಂದರ್ಭಗಳನ್ನು ಎದುರಿಸುವಾಗ, ಅವರನ್ನು ಪ್ರೀತಿಯಿಂದ, ಜ್ಞಾನದಿಂದ ತಿಳುವಳಿಕೆ ಹೇಳುವುದು ಮತ್ತು ಬಹುಶಃ ಚರ್ಚ್‌ನ ಸಾಮರಸ್ಯವನ್ನು ಕಾಪಾಡಿಕೊಳ್ಳುವ ಪರಿಹಾರವನ್ನು ಕಂಡುಹಿಡಿಯಲು ಚರ್ಚ್ ನಾಯಕತ್ವವನ್ನು ಒಳಗೊಳ್ಳುವುದು ಮುಖ್ಯವಾಗುತ್ತದೆ. ಪದೇ ಪದೇ ಸಾಲ ಪಡೆಯುತ್ತಿರುವ ವ್ಯಕ್ತಿಗಳನ್ನು ನೀವು ಕಂಡುಕೊಂಡರೆ, ಪಾಸ್ಟರ್ ಗೆ ಗೌಪ್ಯವಾಗಿ ವರದಿ ಮಾಡುವುದು ನಿಮ್ಮ ಕರ್ತವ್ಯ.
ನಿಮ್ಮ ತ್ವರಿತ ಕ್ರಮವು ಬಹಳಷ್ಟು ತೊಂದರೆಗಳಿಂದ ರಕ್ಷಿಸುತ್ತದೆ.
ನಮ್ಮ ನಂಬಿಕೆಯ ಪ್ರಯಾಣವು ನಮ್ಮನ್ನು ಉದಾರವಾಗಿರಲೂ ಮತ್ತು ಬುದ್ಧಿವಂತರಾಗಿರಲು ಕರೆಯುತ್ತದೆ. ನಾವು ಈ ನೀರಿನಲ್ಲಿ ಸಂಚರಿಸುವಾಗ, ನಮ್ಮ ಎಲ್ಲಾ ಅಗತ್ಯಗಳನ್ನು ಪೂರೈಸುವ ದೇವರ ಮೇಲೆ ನಮ್ಮ ಅಂತಿಮ ನಂಬಿಕೆ ಮತ್ತು ಅವಲಂಬನೆ ಇದೆ ಎಂಬುದನ್ನು ನೆನಪಿನಲ್ಲಿಡೋಣ.
[ಕೆಳಗಿನ ಕಾಮೆಂಟ್‌ಗಳ ವಿಭಾಗದಲ್ಲಿ ನಿಮ್ಮ ಆಲೋಚನೆಗಳನ್ನು ನನಗೆ ತಿಳಿಸಿ👇]
Bible Reading: Number 4-6
ಪ್ರಾರ್ಥನೆಗಳು
ಪರಲೋಕದ ತಂದೆಯೇ, ನಮ್ಮ ಕೊಡುವಿಕೆಯಲ್ಲಿ ನಮಗೆ ಮಾರ್ಗದರ್ಶನ ನೀಡಿ ಮತ್ತು ಜ್ಞಾನದೊಂದಿಗೆ ಉದಾರತೆಯ ಮನೋಭಾವವನ್ನು ನಮ್ಮಲ್ಲಿ ತುಂಬಿರಿ. ನಮ್ಮ ಕಾರ್ಯಗಳಲ್ಲಿ ನಿಮ್ಮ ಪ್ರೀತಿ ಮತ್ತು ಅನುಗ್ರಹವನ್ನು ಪ್ರತಿಬಿಂಬಿಸಲು ನಮಗೆ ಸಹಾಯ ಮಾಡಿ. ನಮ್ಮ ವರಗಳು ನಿಮ್ಮ ಆಶೀರ್ವಾದದ ಬೀಜಗಳಾಗಿದ್ದು, ಇತರರ ಹೃದಯಗಳಲ್ಲಿ ಬೆಳೆಯಲಿ. ಯೇಸುನಾಮದಲ್ಲಿ. ಆಮೆನ್.
Join our WhatsApp Channel
Most Read
● ಆತ್ಮಗಳನ್ನು ಗೆಲ್ಲುವುದು - ಅದು ಎಷ್ಟು ಮುಖ್ಯ?● ದಿನ 19:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ
● ಪರ್ವತಗಳನ್ನೇ ಕದಲಿಸಬಲ್ಲ ಗಾಳಿ
● ಪವಿತ್ರಾತ್ಮನೊಂದಿಗೆ ಸಂವೇದನಶೀಲರಾಗಿ ವರ್ತಿಸುವುದು
● ದೇವರಿಗೇ ಪ್ರಥಮ ಸ್ಥಾನ ನೀಡುವುದು #2.
● ನಿಮ್ಮ ಸಂಪರ್ಕವನ್ನು ಕಳೆದುಕೊಳ್ಳಬೇಡಿರಿ
● ನಂಬಿಕೆಯಲ್ಲಿಯೋ ಅಥವಾ ಭಯದಲ್ಲಿಯೋ
ಅನಿಸಿಕೆಗಳು
