ಒಂದು ಬೆಳಿಗ್ಗೆ, ನನಗೆ ಒಂದು ಸಂದೇಶ ಬಂದಿತು, “ಪಾಸ್ಟರ್ ಮೈಕ್, ನಾನು ನನ್ನ ತಪ್ಪಿಲ್ಲದೆ ನನ್ನ ಕೆಲಸವನ್ನು ಕಳೆದುಕೊಂಡೆ, ಆದ್ದರಿಂದ ನಾನು ಇನ್ನು ಮುಂದೆ ಚರ್ಚ್‌ಗೆ ಹೋಗಲು ಬಯಸುವುದಿಲ್ಲ. ನಾನು ಇನ್ನು ಮುಂದೆ ಬೈಬಲ್ ಓದುವುದಿಲ್ಲ.”
ಆರ್ಥಿಕ ಏರುಪೇರುಗಳಿರುವ ಈ ಕಾಲದಲ್ಲಿ, ಅನೇಕರು ತಮ್ಮ ನಂಬಿಕೆಯ ಜೀವಿತದಲ್ಲಿ ಬಿರುಗಾಳಿಯಲ್ಲಿ ಹಾದು ಹೋಗುತ್ತಿದ್ದಾರೆ. ದೇವರು ತಮ್ಮನ್ನು ಕೈಬಿಟ್ಟಿದ್ದಾನೆಂದು ಅವರು ಭಾವಿಸುತ್ತಾರೆ. ಆದಾಗ್ಯೂ, ಸತ್ಯವು ಇದಕ್ಕೆ ತದ್ವಿರುದ್ಧವಾಗಿದೆ.
ನಮ್ಮ ಮಾರ್ಗದಲ್ಲಿ ನಾವು ಬಿರುಗಾಳಿ ಮತ್ತು ಪ್ರವಾಹದ ಮೂಲಕ ಹೋಗುವುದಿಲ್ಲ ಎಂದು ಕರ್ತನು ಎಂದಿಗೂ ವಾಗ್ದಾನ ಮಾಡಿಲ್ಲ - ನಾವು ಹಾದು ಹೋಗಬೇಕಾಗಬಹುದು. ಒಳ್ಳೆಯ ಸುದ್ದಿ ಏನೆಂದರೆ ಆತನ ಸಾನಿಧ್ಯವು ನಮ್ಮನ್ನು ಎಂದಿಗೂ ಬಿಟ್ಟು ಹೋಗದೆ ನಾವು ಶಕ್ತಿಯುತವಾಗಿ ಆದರಿಂದ ಹೊರಬರುತ್ತೇವೆ ಎಂದು ಖಚಿತಪಡಿಸುತ್ತದೆ.
ಈ ಕೆಳಗಿನ ವಚನವನ್ನು ಓದಿ, ಅದು ನಿಮಗೆ ಇನ್ನೂ ಹೆಚ್ಚಿನ ಸ್ಪಷ್ಟತೆ ನೀಡುತ್ತದೆ:
"ನೀನು ಜಲರಾಶಿಯನ್ನು ಹಾದು ಹೋಗುವಾಗ ನಾನು ನಿನ್ನ ಸಂಗಡ ಇರುವೆನು; ನದಿಗಳನ್ನು ದಾಟುವಾಗ ಅವು ನಿನ್ನನ್ನು ಮುಣುಗಿಸವು; ಉರಿಯಲ್ಲಿ ನಡೆಯುವಾಗ ನೀನು ಕಂದದಿರುವಿ, ಜ್ವಾಲೆಯು ನಿನ್ನನ್ನು ದಹಿಸದು." (ಯೆಶಾಯ 43:2)
ನೀವು ಪ್ರಸ್ತುತ ನಿಮ್ಮ ನಂಬಿಕೆಯ ಜೀವನವು ಬಿರುಗಾಳಿಯ ಮೂಲಕ ಹೋಗುತ್ತಿದ್ದರೆ, ನಾನು ನಿಮಗೆ ಒಂದು ಸಂಗತಿ ಮಾಡಲು ಸಲಹೆ ನೀಡುತ್ತೇನೆ. ಅದನ್ನು ಮಾಡದೇ ಹೋದರೆ ನಿಮ್ಮ ವಿಪತ್ತಿನಲ್ಲಿ ಕೊನೆಗೊಳ್ಳಬಹುದು ಎಂದು ನಾನು ನಿಮಗೆ ಮೃದುವಾಗಿ ಎಚ್ಚರಿಸಬೇಕಾಗಿದೆ.
ಪ್ರಸಂಗಿ 4:12 ಸ್ನೇಹಿತರು ನಮ್ಮನ್ನು ಬಲಶಾಲಿಗಳನ್ನಾಗಿ ಮತ್ತು ಹೆಚ್ಚು ಸ್ಥಿತಿಸ್ಥಾಪಕರನ್ನಾಗಿ ಮಾಡುತ್ತಾರೆ ಎಂದು ಹೇಳುತ್ತದೆ. ಈ ಸಂಗತಿಯ ಹೊರತಾಗಿಯೂ, ಅನೇಕ ಜನರು ಜನರಿಗೆ ಹತ್ತಿರವಾಗಲು ಹೆಣಗಾಡುತ್ತಾರೆ. ಆತ್ಮೀಕವಾಗಿ ನಿಮಗಿಂತ ಸಧೃಡರಾದ ಸ್ನೇಹಿತರು ಬೇಕೆಂದು ಕರ್ತನಬಳಿ ಬೇಡಿಕೊಳ್ಳಿ.
ನಿಮಗಿಂತ ಆತ್ಮಿಕವಾಗಿ ಸಧೃಡರಾಗಿರುವುದರಿಂದ, ಅವರು ನಿಮಗಾಗಿ ಪ್ರಾರ್ಥಿಸುತ್ತಾರೆ ಆಗ ದೇವರು ತನ್ನ ಕರುಣೆಯಿಂದ ಈಗ ಮುಚ್ಚಿದ ಬಾಗಿಲುಗಳಿಗಿಂತಲೂ ಉತ್ತಮವಾದ ಹೊಸ ಬಾಗಿಲುಗಳನ್ನು ತೆರೆಯುವ ಮೂಲಕ ನಿಮಗೆ ಪ್ರತಿಕ್ರಿಯಿಸುತ್ತಾನೆ. (ಪ್ರಕಟನೆ 3:8)
ನಿಮ್ಮನ್ನು ನೀವು ಪ್ರತ್ಯೇಕಿಸಿಕೊಳ್ಳಬೇಡಿ. ನೀವು ಧೃಡವಾದ ಆತ್ಮೀಕ ಸ್ನೇಹಿತರೊಂದಿಗೆ ನಿಮ್ಮ ಜೀವನವನ್ನು ಹಂಚಿಕೊಂಡಾಗ, ನಿಮ್ಮ ಹೊರೆ ತುಂಬಾ ಹಗುರವಾಗಿರುತ್ತದೆ.
ನೀವು ಕರುಣಾ ಸದನ ಚರ್ಚ್‌ನ ಭಾಗವಾಗಿದ್ದರೆ ನೀವು J-12 ನಾಯಕರೊಂದಿಗೆ ಸಂಪರ್ಕ ಸಾಧಿಸಲು ನಾನು ಪ್ರೋತ್ಸಾಹಿಸುತ್ತೇನೆ. ಈ ವ್ಯಕ್ತಿಯು ನಿಮಗಾಗಿ ಪ್ರಾರ್ಥಿಸುತ್ತಾನೆ. ನೀವು ಇದನ್ನು ಓದುವ J-12 ನಾಯಕರಾಗಿದ್ದರೆ ನೀವು ಇತರರಿಗೆ ಏನು ಮಾಡುತ್ತೀರಿ ಎಂಬುದನ್ನು ನೆನಪಿಡಿ.ದೇವರು ಅದನ್ನೇ ನಿಮಗಾಗಿ ಮಾಡುತ್ತಾನೆ. (ಜ್ಞಾನೋಕ್ತಿ 11:25 ಓದಿ). ನಿಮ್ಮೊಂದಿಗೆ ಸಂಪರ್ಕ ಸಾಧಿಸುವ ಜನರಿಗಾಗಿ ಪ್ರಾಮಾಣಿಕವಾಗಿ ಪ್ರಾರ್ಥಿಸಿ.
ಕೊನೆಯದಾಗಿ, ಸ್ನೇಹವು ಕಾಲಾನಂತರದಲ್ಲಿ ಕೆಲವು ಉದ್ದೇಶಪೂರ್ವಕ ಪ್ರಯತ್ನದಿಂದ ಅಭಿವೃದ್ಧಿಗೊಳ್ಳುತ್ತದೆ. ಪರಿಪೂರ್ಣ ಸ್ನೇಹ ಎಂಬುದೇ ಇಲ್ಲ. ಸ್ನೇಹಿತರನ್ನು ಮಾಡಿಕೊಳ್ಳುವ ಮತ್ತು ಸ್ನೇಹಿತರನ್ನು ಉಳಿಸಿಕೊಳ್ಳುವ ಸಾಮರ್ಥ್ಯವನ್ನು ಅಭಿವೃದ್ಧಿಪಡಿಸಿಕೊಳ್ಳಬೇಕಾಗಿದೆ. ಇದಕ್ಕಾಗಿ ಕರ್ತನು ಖಂಡಿತವಾಗಿಯೂ ನಿಮಗೆ ಕೃಪೆಯನ್ನು ಒದಗಿಸುತ್ತಾನೆ. ನೀವು ಆತನನ್ನೇ ಬೇಡಿಕೊಳ್ಳಬೇಕು ಅಷ್ಟೇ. ಆಗ ನಿಮ್ಮ ಜೀವನ ಸಾವಿರಾರು ಜನರಿಗೆ ಆಶೀರ್ವಾದಕರವಾಗುತ್ತದೆ. (ಆದಿಕಾಂಡ 12:2 ಓದಿ).
ಹೌದು, ನೀವು ಆ ಸ್ನೇಹಿತರನ್ನು ಪಡೆದಾಗ, ಅವರನ್ನು ಗೌರವಿಸಲು ಮತ್ತು ಸನ್ಮಾನಿಸಲು ಕಲಿಯಿರಿ. ದಯವಿಟ್ಟು ಅವರನ್ನು ಹಗುರವಾಗಿ ತೆಗೆದುಕೊಳ್ಳಬೇಡಿ.
Bible Reading: Ecclesiastes 2-6
ಪ್ರಾರ್ಥನೆಗಳು
ಪರಲೋಕದ ತಂದೆಯೇ, ಸರಿಯಾದ ಜನರೊಂದಿಗೆ ಸಂಪರ್ಕ ಸಾಧಿಸಲು ನನಗೆ ಸಹಾಯ ಮಾಡು. ಸರಿಯಾದ ಸ್ನೇಹಿತರೊಂದಿಗೆ ನನ್ನನ್ನು ಸಂಪರ್ಕಿಸು ಮತ್ತು ನಿಮ್ಮ ವಾಕ್ಯದ ಜ್ಞಾನದಲ್ಲಿ ನಿರಂತರವಾಗಿ ಬೆಳೆಯಲು ನನಗೆ ಯೇಸುನಾಮದಲ್ಲಿ ಸಹಾಯ ಮಾಡು. ಆಮೆನ್.
Join our WhatsApp Channel

Most Read
● ನಿಮ್ಮ ಆತ್ಮಗಳ ಪುನಃಸ್ಥಾಪನೆ● ದಿನ 13:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ.
● ನಿಮ್ಮ ನಂಬಿಕೆಯ ಸಾಮರ್ಥ್ಯವನ್ನು ವಿಸ್ತರಿಸುವುದು ಹೇಗೆ?
● ನಿಮ್ಮ ಜೀವದದಲ್ಲಿ ಎಂದೂ ಅಳಿಯದಂತ ಬದಲಾವಣೆಯನ್ನು ತರುವುದು ಹೇಗೆ?-1
● ಓಟವನ್ನು ಓಡಲು ಇರುವ ತಂತ್ರಗಾರಿಕೆ
● ದೈವೀಕ ಶಿಸ್ತಿನ ಸ್ವರೂಪ-1
● ಮಹಿಮೆ ಮತ್ತು ಶಕ್ತಿಯ ಭಾಷೆ - ಅನ್ಯಭಾಷೆ
ಅನಿಸಿಕೆಗಳು