ಅನುದಿನದ ಮನ್ನಾ
ನಂಬತಕ್ಕ ಸಾಕ್ಷಿ
Saturday, 24th of February 2024
4
3
512
Categories :
ಕ್ರಿಸ್ತನಲ್ಲಿನ ದೈವತ್ವ(Deity of Christ)
"ಮತ್ತು ಆತನ ಸಿಂಹಾಸನದ ಮುಂದಿರುವ ಏಳು ಆತ್ಮಗಳಿಂದ ಮತ್ತು ನಂಬತಕ್ಕ ಸಾಕ್ಷಿಯೂ ಸತ್ತವರೊಳಗಿಂದ ಮೊದಲು ಎದ್ದುಬಂದವನೂ ಭೂರಾಜರ ಒಡೆಯನೂ ಆಗಿರುವ ಯೇಸು ಕ್ರಿಸ್ತನಿಂದ ನಿಮಗೆ ಕೃಪೆಯೂ ಶಾಂತಿಯೂ ಆಗಲಿ... "(ಪ್ರಕಟನೆ 1:5 )
ಈ ಒಂದು ಮೇಲಿನ ಒಂದೇ ವಾಕ್ಯದಲ್ಲಿ ನಮ್ಮ ಕರ್ತನ ಮೂರು ಅದ್ಭುತವಾದ ಪದನಾಮ ನಾವು ಕಾಣಬಹುದು.
1.ನಂಬಿಗಸ್ತ ಸಾಕ್ಷಿ
2 ಸತ್ತವರೊಳಗಿಂದ ಮೊದಲು ಎದ್ದುಬಂದವನು
3. ಭೂರಾಜರ ಒಡೆಯನು
ಇವೆಲ್ಲವೂ ನಿಜವಾಗಿಯೂ ನಮ್ಮ ಕರ್ತನನ್ನು ಸ್ತುತಿಸಲು ಇರುವ ಸುಂದರ ವಿಧಾನಗಳಾಗಿವೆ. ನೀವು ನಿಮ್ಮ ವೈಯಕ್ತಿಕ ಪ್ರಾರ್ಥನೆಯಲ್ಲಾಗಲಿ ಅಥವಾ ಸಭೆಯಲ್ಲಿನ ಸಾಮೂಹಿಕ ಪ್ರಾರ್ಥನೆಯಲ್ಲಾಗಲಿ ಕರ್ತನನ್ನು ಸ್ತುತಿಸಲು ಈ ಪದನಾಮಗಳನ್ನು ಬಳಸಬಹುದು.
ನಂಬಿಗಸ್ತ ಸಾಕ್ಷಿ.
ಸಾಕ್ಷಿ ಎಂಬುವವನು ತಾನು ಏನನ್ನು ಕಂಡನೋ, ತಾನು ಏನನ್ನು ಕೇಳಿದನೋ ಅದನ್ನು ಹೇಳುವವನಾಗಿದ್ದಾನೆ. ನಂಬತಕ್ಕ ಸಾಕ್ಷಿ ಹೇಳುವ ಸಾಕ್ಷಿಯೂ ಯಾವಾಗಲೂ ವಿಶ್ವಾಸ ಯೋಗ್ಯವಾಗಿರುತ್ತದೆ.
ಯಾವ ರೀತಿಯಲ್ಲಿ ಕ್ರಿಸ್ತನು ನಂಬತಕ್ಕ ಸಾಕ್ಷಿಯಾಗಿದ್ದಾನೆ?
ಅಪೋಸ್ತಲನಾದ ಯೋಹಾನನ ಅರ್ಥದಲ್ಲಿ ಯೇಸು ಕ್ರಿಸ್ತನು ಸತ್ಯವನ್ನೇ ಹೇಳುವವನಾಗಿದ್ದಾನೆ ಎಂದು ವಿಶ್ವಾಸವಿಡಬಹುದು. ಆತನು ಮಾತಾಡುವಾಗ ಯಾವಾಗಲೂ ಸತ್ಯವನ್ನೇ ಆಡುವವನಾಗಿದ್ದಾನೆ. ಆತನ ವಾಕ್ಯಗಳೆಲ್ಲವೂ ಖಂಡಿತವಾಗಿಯೂ ಸತ್ಯವೂ ಮತ್ತು ಅಧಿಕಾರಯುತವೂ ಆಗಿದೆ.
"ಸರ್ವಸೃಷ್ಟಿಗೆ ಜೀವಾಧಾರಕನಾದ ದೇವರ ಮುಂದೆಯೂ ಪೊಂತ್ಯ ಪಿಲಾತನ ಕಾಲದಲ್ಲಿ ಶ್ರೇಷ್ಠಪ್ರತಿಜ್ಞೆಯನ್ನು ತಾನೇ ಸಾಕ್ಷಿಯಾಗಿದ್ದು ಸ್ಥಾಪಿಸಿದ ಕ್ರಿಸ್ತ ಯೇಸುವಿನ ಮುಂದೆಯೂ... " ಎಂದು 1 ತಿಮೊಥೆಯನಿಗೆ 6:13 ಹೇಳುತ್ತದೆ.
ಆತನು ಪಿಲಾತನ ಮುಂದೆ ನಿಂತಾಗ ಏನನ್ನು ಹೇಳಿದನು.
"ಅದಕ್ಕೆ ಪಿಲಾತನು - ಹಾಗಾದರೆ ನೀನು ಅರಸನು ಹೌದಲ್ಲವೇ ಅಂದನು. ಯೇಸು ಅವನಿಗೆ - ನನ್ನನ್ನು ಅರಸನೆಂದು ನೀನೇ ಹೇಳಿದ್ದೀ. ನಾನು ಸತ್ಯದ ವಿಷಯದಲ್ಲಿ ಸಾಕ್ಷಿ ಹೇಳುವದಕ್ಕೋಸ್ಕರ ಹುಟ್ಟಿದವನು, ಅದಕ್ಕೋಸ್ಕರವೇ ಈ ಲೋಕಕ್ಕೆ ಬಂದಿದ್ದೇನೆ. ಸತ್ಯಪರರೆಲ್ಲರು ನನ್ನ ಮಾತಿಗೆ ಕಿವಿಕೊಡುತ್ತಾರೆ ಎಂದು ಉತ್ತರಕೊಟ್ಟನು."(ಯೋಹಾನ 18:37)
ಯೇಸು ಕ್ರಿಸ್ತನು ಪರಮೊಚ್ಚ ಸತ್ಯವನ್ನು ಹೇಳುವವನಾಗಿದ್ದಾನೆ ಮತ್ತು ಯಾರೆಲ್ಲಾ ಸತ್ಯವನ್ನು ಕೇಳಲು ಬಯಸುತ್ತಾರೋ ಅವರು ಈತನ ಮಾತನ್ನು ಕೇಳಬೇಕು. ಯೇಸುವು ದೇವರನ್ನು (ತಂದೆಯನ್ನು) ಮನುಷ್ಯರಿಗೆ ಪ್ರಕಟಿಸಿದನು. ಯೇಸುಕ್ರಿಸ್ತನು ಕೇವಲ ತಾನಾಡುವ ಮಾತುಗಳಿಂದ ಮಾತ್ರ ದೇವರನ್ನು ಪ್ರಕಟಿಸಲಿಲ್ಲ (ಮುಂಚೆ ಇದ್ದ ಪ್ರವಾದಿಗಳು ಮಾಡಿದಂತೆ) ಆದರೆ ಆತನು ದೇವರ ವ್ಯಕ್ತಿ ರೂಪವಾಗಿ ದೇವರು ಮುಂಚೆ ಹೇಗಿದ್ದನೋ, ದೇವರು ಇಂದು ಹೇಗಿದ್ದಾನೋ ಹಾಗೆಯೇ ಆತನನ್ನು ಪ್ರಕಟಿಸಿದನು.
"ಈತನು ದೇವರ ಪ್ರಭಾವದ ಪ್ರಕಾಶವೂ ಆತನ ತತ್ವದ ಮೂರ್ತಿಯೂ ತನ್ನ ಶಕ್ತಿಯ ವಾಕ್ಯದಿಂದ ಸಮಸ್ತಕ್ಕೆ ಆಧಾರವೂ ಆಗಿದ್ದು ಪಾಪವಿಶುದ್ಧಿಮಾಡಿದ ಮೇಲೆ ಉನ್ನತಲೋಕದೊಳಗೆ ಮಹತ್ವವುಳ್ಳ ದೇವರ ಬಲಗಡೆಯಲ್ಲಿ ಆಸನಾರೂಢನಾದನು."(ಇಬ್ರಿಯರಿಗೆ 1:3)
ಫಿಲಿಪ್ಪನು ಯೇಸುವನ್ನು ತಂದೆ ದೇವರನ್ನು ತೋರಿಸುವಂತೆ ಕೇಳಿಕೊಂಡನು..
"ಫಿಲಿಪ್ಪನು - ಸ್ವಾಮೀ, ನಮಗೆ ತಂದೆಯನ್ನು ತೋರಿಸು, ನಮಗೆ ಅಷ್ಟೇ ಸಾಕು ಅಂದನು. [9] ಯೇಸು ಅವನಿಗೆ - ಫಿಲಿಪ್ಪನೇ, ನಾನು ಇಷ್ಟು ದಿವಸ ನಿಮ್ಮ ಸಂಗಡ ಇದ್ದರೂ ನೀನು ಇನ್ನೂ ನನ್ನನ್ನು ಅರಿತುಕೊಳ್ಳಲಿಲ್ಲವೇ. ನನ್ನನ್ನು ನೋಡಿದವನು ತಂದೆಯನ್ನು ನೋಡಿದ್ದಾನೆ. ನಮಗೆ ತಂದೆಯನ್ನು ತೋರಿಸೆಂದು ನೀನು ಹೇಳುವದು ಹೇಗೆ?"(ಯೋಹಾನ 14:8-9)
ತಪ್ಪು ತಿಳಿಯಬೇಡಿ! "ನನ್ನನ್ನು ನೋಡಿದವನು ತಂದೆಯನ್ನು ನೋಡಿದ್ದಾನೆ" ಎಂದು ಯಾವ ಒಬ್ಬ ಪ್ರವಾದಿಯಾಗಲೀ ಈ ರೀತಿ ಹೇಳಿದ್ದಿಲ್ಲ. ಯಾವುದೇ ಸಂತನಾಗಲಿ ಯಾವುದೇ ತತ್ವಜ್ಞಾನಿಯಾಗಲಿ ಈ ರೀತಿ ಮಾತಾಡಿದ್ದಿಲ್ಲ. ಪ್ರತಿಯೊಬ್ಬರೂ ನಾವು ನಿಮಗೆ ಮಾರ್ಗ ತೋರಿಸುವವರು ಎಂದರು. ಆದರೆ ಯೇಸುಕ್ರಿಸ್ತನಾದರೋ "ನಾನೇ ಮಾರ್ಗ" ಎಂದು ಘೋಷಿಸಿದನು.
ಪ್ರಾರ್ಥನೆಗಳು
ಸರ್ವಶಕ್ತನಾದ ತಂದೆಯೇ, ಭೂಮಿ ಆಕಾಶಗಳನ್ನು ನಿರ್ಮಿಸಿದವನೇ ನಿನ್ನ ಪರಿಶುದ್ಧವಾದ ನಾಮವನ್ನು ಕೊಂಡಾಡುತ್ತೇವೆ.
ತಂದೆಯೇ ನನ್ನ ಜೀವನದಲ್ಲಿರುವ ಎಲ್ಲಾ ಸುಳ್ಳು- ಕಪಟತನವನ್ನು ತೆಗೆದುಹಾಕು. ನನ್ನ ಹೆಜ್ಜೆಗಳನ್ನು ನಿನ್ನ ಸತ್ಯತೆಯಲ್ಲಿ ನಡೆಯುವಂತೆ ಮಾರ್ಗದರ್ಶಿಸು.ನಿನ್ನ ಮಗನಾದ ಯೇಸುವಿನ ಹಾಗೆ ನನ್ನನ್ನು ಮಾರ್ಪಡಿಸು. ಆಮೆನ್.
ತಂದೆಯೇ ನನ್ನ ಜೀವನದಲ್ಲಿರುವ ಎಲ್ಲಾ ಸುಳ್ಳು- ಕಪಟತನವನ್ನು ತೆಗೆದುಹಾಕು. ನನ್ನ ಹೆಜ್ಜೆಗಳನ್ನು ನಿನ್ನ ಸತ್ಯತೆಯಲ್ಲಿ ನಡೆಯುವಂತೆ ಮಾರ್ಗದರ್ಶಿಸು.ನಿನ್ನ ಮಗನಾದ ಯೇಸುವಿನ ಹಾಗೆ ನನ್ನನ್ನು ಮಾರ್ಪಡಿಸು. ಆಮೆನ್.
Join our WhatsApp Channel
Most Read
● ವ್ಯರ್ಥವಾದದಕ್ಕೆ ಹಣ● ನೀವು ಎಷ್ಟು ವಿಶ್ವಾಸಾರ್ಹರು?
● ಕರ್ತನೇ ನನ್ನ ದೀಪವನ್ನು ಬೆಳಗಿಸು.
● ನಿಮ್ಮ ಮನಸ್ಥಿತಿಯನ್ನು ಉತ್ತಮಗೊಳಿಸಿಕೊಳ್ಳುವುದು
● ಜೀವಬಾದ್ಯರ ಪುಸ್ತಕ
● ದೇವರು ಹೇಗೆ ಒದಗಿಸುತ್ತಾನೆ #2
● ದಿನ 15:40 ದಿನಗಳ ಉಪವಾಸ ಮತ್ತು ಪಾರ್ಥನೆ.
ಅನಿಸಿಕೆಗಳು