ಅನುದಿನದ ಮನ್ನಾ
ಕ್ರಿಸ್ತನ ಮೂಲಕ ಜಯಶಾಲಿಗಳು
Tuesday, 14th of May 2024
2
1
344
Categories :
ನಂಬಿಕೆ (Faith)
ನಂಬಿಕೆಗಳನ್ನು(Beliefs)
ಪ್ರಕಟಣೆಯ ಪುಸ್ತಕದ ಉದ್ದಗಲಕ್ಕೂ ಜಯಶಾಲಿಗಳಾದವರಿಗೆ ಸಿಗುವ ಪ್ರತಿಫಲ ಮತ್ತು ಆಶೀರ್ವಾದಗಳ ಕುರಿತು ಕರ್ತನಾದ ಯೇಸುವು ಮತ್ತೆ ಮತ್ತೆ ಹೇಳುತ್ತಾನೆ. ಜಯಶಾಲಿಗಳಾಗುವುದೆಂದರೆ ಪರಿಪೂರ್ಣರಾಗುವುದು ಎಂಬುದಲ್ಲ. ಆದರೆ ನಮ್ಮ ಜೀವನದ ಉದ್ದಕ್ಕೂ ನಂಬಿಕೆಯಲ್ಲಿ ತಾಳ್ಮೆಯಿಂದ ಜೀವಿಸುತ್ತ ಕ್ರಿಸ್ತನ ಜಯೋತ್ಸವವನ್ನು ನಮ್ಮ ಜೀವಿತದಲ್ಲಿ ಪ್ರಕಟಿಸುವಂತದ್ದಾಗಿದೆ. ಕ್ರಿಸ್ತನ ಮೂಲಕ ಜಯಶಾಲಿಗಳಾಗುವುದರ ಅರ್ಥವನ್ನು ನಾವಿಂದು ವಿವರವಾಗಿ ನೋಡೋಣ.
ಯೋಹಾನ 16:33 ರಲ್ಲಿ ಕರ್ತನಾದ ಯೇಸುವು "ಲೋಕದಲ್ಲಿ ನಿಮಗೆ ಸಂಕಟ ಉಂಟು; ಧೈರ್ಯವಾಗಿರಿ, ನಾನು ಲೋಕವನ್ನು ಜಯಿಸಿದ್ದೇನೆ" ಎಂದು ಹೇಳಿದ್ದಾನೆ. ಈ ಒಂದು ವಚನವು ಸವಾಲುಗಳು ಶೋಧನೆಗಳು ನಮ್ಮ ಜೀವಿತದ ಅವಿಭಾಜ್ಯ ಅಂಗಗಳಾಗಿರುತ್ತವೆ ಎಂಬುದನ್ನು ನಮ್ಮ ನೆನಪಿಗೆ ತರುತ್ತದೆ. ಹೇಗೂ ಯೇಸು ಸ್ವಾಮಿಯು ನಮ್ಮ ಪರವಾಗಿ ವಿಜಯ ಸಾಧಿಸಿದ್ದಾಗಿಬಿಟ್ಟಿದೆ. ಆತನ ಮರಣ ಮತ್ತು ಪುನರುತ್ಥಾನದ ಮೂಲಕ ಆತನು ಪಾಪದ ಮೇಲೂ, ಮರಣದ ಮೇಲೂ ಮತ್ತು ಅಂಧಕಾರ ಶಕ್ತಿಗಳ ಮೇಲೂ ಜಯ ಸಾಧಿಸಿ ವಿಜಯೋತ್ಸವ ಮಾಡಿದ್ದಾನೆ.
ಜಯಶಾಲಿಗಳಾಗಿರುವುದರ ಅರ್ಥವೇನೆಂದರೆ, ನಮ್ಮ ನಂಬಿಕೆಯು ನಮ್ಮ ಬಲದ ಮೇಲೆ ಆಧಾರವಾಗಿರದೇ, ಆತನ ಬಲದ ಮೇಲೆ ನಮ್ಮ ನಂಬಿಕೆಯನ್ನು ಇಡುವಂತದ್ದಾಗಿದೆ. ಅದರ ಅರ್ಥ ನಮ್ಮೆಲ್ಲಾ ಕಷ್ಟ- ಸಂಕಟಗಳ ಮಧ್ಯದಲ್ಲೂ ದೇವರು ನಮಗಾಗಿ ಇದ್ದಾನೆ ಮತ್ತು ಆತನು ಎಂದಿಗೂ ನಮ್ಮ ಕೈಬಿಡುವುದಿಲ್ಲ ಎಂಬುದನ್ನು ಅರಿತುಕೊಳ್ಳುವಂತದ್ದಾಗಿದೆ. (ಧರ್ಮೋಪದೇಶಕಾಂಡ 31:8) ಅದರ ಅರ್ಥ ಆತನ ವಾಗ್ದಾನಕ್ಕೆ ತದ್ವಿರುದ್ಧವಾದ ಪರಿಸ್ಥಿತಿಗಳನ್ನು ನಾವು ಹಾದು ಹೋಗುತ್ತಿದ್ದರೂ ಆತನ ವಾಗ್ದಾನಗಳ ಮೇಲೆಯೇ ಆತುಕೊಳ್ಳುವಂಥದ್ದಾಗಿದೆ. ಪ್ರಕಟಣೆ 12:1ರಲ್ಲಿ "ಯಜ್ಞದ ಕುರಿಯಾದತನ ರಕ್ತದಿಂದಲೂ ತಮ್ಮ ಸಾಕ್ಷಿಯ ವಾಕ್ಯದ ಬಲದಿಂದಲೂ ಅವನನ್ನು ಜಯಿಸಿದರು" ಎಂಬುದಾಗಿ ಶತ್ರುವನ್ನು ಜಯಿಸಿ ಜಯಶಾಲಿಗಳಾದವರನ್ನು ನಾವು ನೋಡಬಹುದು.
ಜಯಶಾಲಿಗಳಾಗಿ ನಾವು ಕ್ರಿಸ್ತನಿಂದ ದೊರಕುವಂತಹ ಆತ್ಮಿಕ ಆಶೀರ್ವಾದಗಳನ್ನು ಸವಲತ್ತುಗಳನ್ನು ಹೊಂದಿಕೊಳ್ಳಲು ಶಕ್ತರಾಗುತ್ತೇವೆ.ಶೋಧನೆಗಳು ಎದುರಾಗುತ್ತಲೇ ಶೋಧನೆಗಳಿಂದ ತಪ್ಪಿಸಿಕೊಳ್ಳುವ ಮಾರ್ಗವನ್ನು ದೇವರು ಆಗಲೇ ನಮಗೆ ಸಿದ್ಧ ಮಾಡಿರುತ್ತಾನೆ ಎಂಬ ಭರವಸೆ ನಮಗಿದೆ. (1ಕೊರಿಯಂತೆ 10:13) ನಾವು ಉಪದ್ರವಗಳನ್ನು ಹಾದು ಹೋಗುವಾಗ ಅದು ನಮ್ಮಲ್ಲಿ ತಾಳ್ಮೆಯನ್ನು ನಿರೀಕ್ಷೆಯನ್ನು ಹುಟ್ಟಿಸುತ್ತದೆ ಎಂಬುದನ್ನು ತಿಳಿದುಕೊಂಡವರಾಗಿದ್ದೇವೆ.(ರೋಮ 5:3-4) ಪವಿತ್ರಾತ್ಮನ ಬಲದ ಮೂಲಕ ನಾವು ಜಯಪ್ರದವಾದ ಕ್ರಿಸ್ತೀಯ ಜೀವಿತ ಜೀವಿಸಲು ಶಕ್ತರಾಗಿದ್ದೇವೆ. (ಗಲಾತ್ಯ 5:16).
ನೀವಿಂದು ಸವಾಲುಗಳನ್ನು ಪರಿಶೋಧನೆಗಳನ್ನು ಎದುರಿಸುತ್ತಿದ್ದೀರಾ? ನೆನಪಿಡಿ ನೀವು ಕ್ರಿಸ್ತನ ಮೂಲಕ ಜಯಶಾಲಿಗಳಾಗಿದ್ದೀರಿ. ಆತನು ನಿಮಗಾಗಿ ಈಗಾಗಲೇ ಸಾಧಿಸಿರುವ ವಿಜಯವನ್ನು ಕುರಿತು ಸ್ವಲ್ಪ ಸಮಯ ಧ್ಯಾನಿಸಿ. ನಿಮ್ಮ ಪರಿಸ್ಥಿತಿ ಗಾಗಿ ದೇವರು ನೀಡಿರುವ ವಾಗ್ದಾನವನ್ನು ನಿಮಗಾಗಿ ಸ್ವಂತ ಮಾಡಿಕೊಳ್ಳಿ ಮತ್ತು ಆತನ ನಂಬಿಗಸ್ತಿಕೆಯ ಮೇಲೆ ಭರವಸೆ ಇಡಿರಿ.
"ನಂಬಿಕೆಯನ್ನು ಹುಟ್ಟಿಸುವವನೂ ಪೂರೈಸುವವನೂ ಆಗಿರುವ ಯೇಸುವಿನ ಮೇಲೆ ದೃಷ್ಟಿಯಿಟ್ಟು ನಮಗೆ ನೇಮಕವಾದ ಓಟವನ್ನು ಸ್ಥಿರಚಿತ್ತದಿಂದ ಓಡೋಣ. ಆತನು ತನ್ನ ಮುಂದೆ ಇಟ್ಟಿದ್ದ ಸಂತೋಷಕ್ಕೋಸ್ಕರ ಅವಮಾನವನ್ನು ಅಲಕ್ಷ್ಯಮಾಡಿ ಶಿಲುಬೆಯ ಮರಣವನ್ನು ಸಹಿಸಿಕೊಂಡು ದೇವರ ಸಿಂಹಾಸನದ ಬಲಗಡೆಯಲ್ಲಿ ಆಸನಾರೂಢನಾಗಿದ್ದಾನೆ."(ಇಬ್ರಿಯರಿಗೆ 12:2 )
ಪ್ರಾರ್ಥನೆಗಳು
ಪರಲೋಕದ ತಂದೆಯೇ, ನನಗಾಗಿ ಯೇಸು ಕ್ರಿಸ್ತನ ಮೂಲಕ ಸಾಧಿಸಿದ ಜಯಕ್ಕಾಗಿ ನಿಮಗೆ ಸ್ತೋತ್ರ. ಜಯಶಾಲಿಯಾಗಿ ಜೀವಿಸಲು ನನಗೆ ಸಹಾಯ ಮಾಡಿ. ನಿನ್ನ ನಂಬಿಕೆಯ ಮೇಲೆ ನೆಲೆಗೊಳ್ಳುವಂತೆಯೂ, ನಿನ್ನ ಬಲದ ಮೇಲೆ ಭರವಸದಿಂದ ಇರುವಂತೆಯೂ ಸಹಾಯ ಮಾಡಿರಿ. ನಿನ್ನ ಪ್ರಸನ್ನತೆಯು ನಿನ್ನ ಬಲವು ನನ್ನ ಸಂಗಡ ಇದೆ ಎಂಬ ಭರವಸದಿಂದ ಪ್ರತಿಯೊಂದು ಸವಾಲುಗಳನ್ನು ಎದುರಿಸುವ ಧೈರ್ಯವನ್ನು ನೀಡಿರಿ. ನನ್ನ ಜೀವಿತವು ನಿನ್ನ ಮಹಿಮೆಗೂ ಮಹತ್ವಕ್ಕೂ ನಿನ್ನ ಪ್ರೀತಿಗೂ ಕೃಪೆಗೂ ಸಾಕ್ಷಿಯಾಗಿರಲಿ ಎಂದು ಯೇಸು ನಾಮದಲ್ಲಿ ಪ್ರಾರ್ಥಿಸುತ್ತೇನೆ ತಂದೆಯೇ, ಆಮೇನ್.
Join our WhatsApp Channel
Most Read
● ದಿನ 38:40ದಿನಗಳ ಉಪವಾಸ ಮತ್ತು ಪ್ರಾರ್ಥನೆ.● ನಿಮ್ಮ ಗತಿಯನ್ನು ಹಾಳು ಮಾಡಿಕೊಳ್ಳಬೇಡಿರಿ!
● ಯುದ್ಧಕ್ಕಾಗಿ ತರಬೇತಿ.
● ಕರ್ತನಾದ ಯೇಸುವಿನ ಮುಖಾಂತರ ಕೃಪೆ
● ಯಹೂದವು ಮುಂದಾಗಿ ಹೊರಡಲಿ
● ಅಧರ್ಮದ ಆಳ್ವಿಕೆಯ ಬಲವನ್ನು ಮುರಿಯುವುದು-II
● ಸರ್ವಶಕ್ತನಾದ ದೇವರ ಅದ್ಬುತ ಸಮಾಗಮ.
ಅನಿಸಿಕೆಗಳು