ಆದಿಯಿಂದಲೂ, ದೇವರು ತನ್ನ ಸೃಷ್ಟಿ ಕಾರ್ಯದಲ್ಲಿ ಕ್ರಮವನ್ನು ರಚಿಸಲು ಮತ್ತು ಶ್ರೇಷ್ಠತೆಯನ್ನು ಸಾಧಿಸಲು ತಂತ್ರಗಾರಿಕೆಯೇ ಪ್ರಧಾನ ಸಂಗತಿ ಎಂಬುದನ್ನು ದೇವರು ಪ್ರದರ್ಶಿಸಿದ್ದಾನೆ. ಆತನು ಮೀನುಗಳನ್ನು ಸೃಷ್ಟಿಸುವ ಮೊದಲು, ಆತನು ಅವು ಜೀವಿಸಲು ನೀರನ್ನು ಸಿದ್ಧಪಡಿಸಿದನು. ಆತನು ಆಕಾಶದಲ್ಲಿ ಪಕ್ಷಿಗಳನ್ನು ಉಂಟು ಮಾಡುವ ಮೊದಲು, ಆತನು ಆಕಾಶವನ್ನು ನಿರ್ಮಿಸಿದನು. ಆದಿಕಾಂಡ 1: 2-10 ಸ್ಪಷ್ಟವಾದ ಅನುಕ್ರಮವನ್ನು ಪ್ರಕಟಪಡಿಸುತ್ತದೆ: ದೇವರು ಮೊದಲು ಅಸ್ಥಿವಾರ ಹಾಕಿ, ನಂತರ ಅದನ್ನು ಜೀವದಿಂದ ತುಂಬಿಸಿದನು.
ಈ ತತ್ವವು ನಮಗೆ ಒಂದು ಪ್ರಮುಖ ಪಾಠವನ್ನು ಕಲಿಸುತ್ತದೆ: ದೇವರು ಎಂದಿಗೂ ಒಂದು ಯೋಜನೆ ಇಲ್ಲದೆ ಕಾರ್ಯನಿರ್ವಹಿಸುವುದಿಲ್ಲ. ತಂತ್ರಗಾರಿಕೆ ಎಂಬುದು ಆತನ ಸೃಷ್ಟಿಯ ಬಟ್ಟೆಯಲ್ಲಿ ನೇಯಲ್ಪಟ್ಟಿದೆ. ನಾವು ಉತ್ತಮ ನಾಳೆಯನ್ನು ಅನುಭವಿಸಲು ಬಯಸುವುದಾದರೆ, ನಾವು ಇಂದೇ ಅದಕ್ಕೆ ಸಿದ್ಧರಾಗಬೇಕು.
ಕರ್ತನಾದ ಯೇಸುಕ್ರಿಸ್ತನು : ನಮ್ಮ ಒಬ್ಬನೇ ರಕ್ಷಕನಾದ ಯೇಸುವು ಸಹ ತಕ್ಕ ತಯಾರಿ ಇಲ್ಲದೆ ಈ ಲೋಕದಲ್ಲಿ ಕಾಣಿಸಿಕೊಳ್ಳಲಿಲ್ಲ. ದೇವರು ತನ್ನ ಬರುವಿಕೆಯನ್ನು ನಿಖರವಾಗಿ ಯೋಜಿಸಿದನು. ಲೆಕ್ಕವಿಲ್ಲದಷ್ಟು ದೇವರ ವಾಕ್ಯಗಳು ಪ್ರವಾದನೆಯ ಚಿತ್ರಣಗಳನ್ನು ಒಳಗೊಂಡಿದೆ. ಪ್ರತಿಯೊಂದೂ ಪ್ರವಾದನಾ ವಾಕ್ಯವು ಮೆಸ್ಸೀಯನ ಒಂದು ನೋಟವನ್ನು ನಮಗೆ ನೀಡುತ್ತದೆ. ಯೆಶಾಯನ "ಕನ್ಯೆಯು ಗರ್ಭಿಣಿಯಾಗಿ ಮಗನನ್ನು ಹಡೆಯುವಳು ಎನ್ನುವ ಪ್ರವಾದನೆಯಿಂದ ಹಿಡಿದು (ಯೆಶಾಯ 7:14,) ಬೆತ್ಲೇಹೇಮ್ ಅನ್ನು ತನ್ನ ಜನ್ಮಸ್ಥಳವಾಗಿ ಆತನು ಆರಿಸಿಕೊಳ್ಳುತ್ತಾನೆ ಎಂದು ಮಿಕಾ ಸೂಚಿಸುವವರೆಗೆ (ಮಿಕಾ 5: 2,) ದೇವರ ತಂತ್ರಗಾರಿಕೆಯು ಶತಮಾನಗಳಿಂದ ಅನಾವರಣಗೊಂಡಿದೆ.
ಗಲಾತ್ಯ 4:4ರಲ್ಲಿ ಪೌಲನು" ಆದರೆ ಸೂಕ್ತಸಮಯ ಬಂದಾಗ ದೇವರು ತನ್ನ ಮಗನನ್ನು ಕಳುಹಿಸಿಕೊಟ್ಟನು. ಧರ್ಮಶಾಸ್ತ್ರಕ್ಕೆ ಅಧೀನರಾದವರನ್ನು ಬಿಡಿಸಬೇಕೆಂತಲೂ, ಪುತ್ರರ ಬಾಧ್ಯತೆಯ ಪದವಿಯನ್ನು ನಮಗೆ ದೊರಕಿಸಿಕೊಡಬೇಕೆಂತಲೂ ಆತನು ಸ್ತ್ರೀಯಲ್ಲಿ ಹುಟ್ಟಿದವನಾಗಿಯೂ, ಧರ್ಮಶಾಸ್ತ್ರಾಧೀನನಾಗಿಯೂ ಬಂದನು" ಎಂದು ಬರೆಯುತ್ತಾನೆ. ಸುವಾರ್ತೆಯ ತ್ವರಿತ ಹರಡುವಿಕೆಯನ್ನು ಅನುಮತಿಸುವುದಕ್ಕಾಗಿ ಇತಿಹಾಸದಲ್ಲಿ ರೋಮನ್ ಸಾಮ್ರಾಜ್ಯದ ರಸ್ತೆಗಳು ಮತ್ತು ಮೂಲಸೌಕರ್ಯವು ಉಂಟಾಗುವ ನಿಖರವಾದ ಕ್ಷಣವನ್ನು ದೇವರು ಆರಿಸಿಕೊಂಡನು. ಪ್ರತಿಯೊಂದು ವಿವರಣೆಗಳೂ ಇಲ್ಲಿ ಸಂಪೂರ್ಣವಾಗಿ ಸಂಯೋಜಿಸಲ್ಪಟ್ಟಿದ್ದಾಗಿವೆ.
ಯೇಸುವಿನ ಸಂದೇಶವು ಜನಸಾಮಾನ್ಯರಿಗೆ ತಲುಪಲು ಸಾಧ್ಯವಾಗದ ಸಮಯದಲ್ಲಿ ಅಥವಾ ಸ್ಥಳದಲ್ಲಿ ಆತನು ಜನಿಸಿದರೆ ಏನಾಗುತಿತ್ತು ಊಹಿಸಿ. ಆದರೆ ದೇವರ ತಂತ್ರಗಾರಿಕೆಯ ಸಮಯವು ಆತನ ಸಂದೇಶವು ಇಡೀ ಪ್ರಪಂಚದ ಮೇಲೆ ಪ್ರಭಾವ ಬೀರುವುದನ್ನು ಖಾತ್ರಿಪಡಿಸಿತು.
ಪಂಚಶತ್ತಾಮ ದಿನ : ಅದೊಂದು ದೈವೀಕಾ ತಂತ್ರಗಾರಿಕೆಯ ದಿನ.
ಪಂಚಶತ್ತಾಮ ದಿನದಲ್ಲಿ ಪವಿತ್ರಾತ್ಮನ ಆಗಮನವು ಕಾಕತಾಳೀಯವಾಗಿರಲಿಲ್ಲ. ಆಕಾಶದ ಕೆಳಗಿರುವ ಪ್ರತಿಯೊಂದು ದೇಶದ ಜನರು ಯೆರುಸಲೇಮಿನಲ್ಲಿ ಒಟ್ಟುಗೂಡಿದಂತ ಒಂದು ನಿರ್ದಿಷ್ಟ ದಿನವನ್ನು ದೇವರು ಆರಿಸಿಕೊಂಡನು. ಅ. ಕೃ 2: 1-4 ಒಂದು ನಾಟಕೀಯ ಕ್ಷಣವನ್ನು ವಿವರಿಸುತ್ತದೆ: "ಪಂಚಾಶತ್ತಮ ದಿನದ ಹಬ್ಬವು ಬಂದಿರಲಾಗಿ ಅವರೆಲ್ಲರೂ ಒಮ್ಮಸ್ಸಿನಿಂದ ಒಂದೇ ಸ್ಥಳದಲ್ಲಿ ಕೂಡಿಬಂದಿದ್ದರು. ಆಗ ಬಿರುಗಾಳಿ ಬೀಸುತ್ತಿದೆಯೋ ಎಂಬಂತೆ ಫಕ್ಕನೆ ಆಕಾಶದೊಳಗಿಂದ ಒಂದು ಶಬ್ದವುಂಟಾಗಿ ಅವರು ಕುಳಿತಿದ್ದ ಮನೆಯನ್ನೆಲ್ಲಾ ತುಂಬಿಕೊಂಡಿತು. ಉರಿಯುವ ಬೆಂಕಿಯೂ ವಿಂಗಡಿಸಿಕೊಳ್ಳುವ ನಾಲಿಗೆಗಳ ಹಾಗೆ ಅವರಿಗೆ ಕಾಣಿಸಿ ಕೊಂಡು ಅವರಲ್ಲಿ ಒಬ್ಬೊಬ್ಬರ ಮೇಲೆ ಒಂದೊಂದಾಗಿ ಕುಳಿತುಕೊಂಡವು. ಆಗ ಅವರೆಲ್ಲರೂ ಪವಿತ್ರಾತ್ಮಭರಿತರಾದರು, ಅವರಿಗೆ ಆ ಪವಿತ್ರಾತ್ಮನು ನೀಡಿದ ಶಕ್ತಿಯ ಪ್ರಕಾರ ಬೇರೆಬೇರೆ ಭಾಷೆಗಳಲ್ಲಿ ಮಾತನಾಡುವುದಕ್ಕೆ ಪ್ರಾರಂಭಿಸಿದರು."
ಇದೊಂದು ಆಕಸ್ಮಿಕಘಟನೆಯಾಗಿರಲಿಲ್ಲ. ಪಂಚಶತ್ತಾಮ ದಿನವು ಜನರು ಸುಗ್ಗಿಯನ್ನು ಆಚರಿಸುವ ಯಹೂದಿ ಹಬ್ಬವಾಗಿತ್ತು ಮತ್ತು ಯೆರುಸಲೆಮ್ ಯಾತ್ರಿಗಳಿಂದ ತುಂಬಿತ್ತು. ಪವಿತ್ರಾತ್ಮನು ಇಳಿದುಬಂದಾಗ, ವಿವಿಧ ರಾಷ್ಟ್ರಗಳ ಜನರು ತಮ್ಮ ಸ್ವಂತ ಭಾಷೆಗಳಲ್ಲಿ ಸುವಾರ್ತೆಯನ್ನು ಕೇಳಿದರು (ಅ.ಕೃ 2: 6-11,). ಈ ಯಾತ್ರಿಕರೆಲ್ಲಾ ತಮ್ಮ ತಾಯ್ನಾಡಿಗೆ ಆ ಸಂದೇಶವನ್ನು ಸಾಗಿಸಿದರು, ಪವಿತ್ರ ಆತ್ಮನ ಅಗ್ನಿಯನ್ನು ಲೋಕದ ಉದ್ದಗಲಕ್ಕೂ ಹರಡಿದರು.
ದೈನಂದಿನ ಜೀವನದಲ್ಲಿ ತಂತ್ರಗಾರಿಕೆ
ದೇವರೇ ತನ್ನ ಯೋಜನೆಗಳನ್ನು ಸಾಧಿಸಲು ತಂತ್ರಗಾರಿಕೆಯನ್ನು ಬಳಸಿದರೆ, ನಾವು ಇನ್ನೆಷ್ಟು ಹೆಚ್ಚು ಅದನ್ನು ಮಾಡಬೇಕು? ಜ್ಞಾನೋಕ್ತಿ 21:5 ಹೇಳುತ್ತದೆ, "ಶ್ರದ್ಧೆಯುಳ್ಳವನ ಯೋಜನೆಗಳಿಂದ ಸಮೃದ್ಧಿ; ಆತುರತೆಯು ಬಡತನಕ್ಕೆ ನಡೆಸುತ್ತದೆ." ಆ ಯೋಜನೆಗಳು ಕೇವಲ ಪ್ರಾಯೋಗಿರದೇ ; ಅದು ಸತ್ಯವೇದ ಆಧಾರಿತವಾಗಿರಬೇಕು".
ನಾನು ಒಮ್ಮೆ ಒಬ್ಬ ಯುವ ವಾಣಿಜ್ಯೋದ್ಯಮಿಯನ್ನು ಭೇಟಿಯಾದೆ, ಅವರು ಮಿಷನರಿಗಳ ಕೆಲಸವನ್ನು ಬೆಂಬಲಿಸುವ ವ್ಯವಹಾರವನ್ನು ಪ್ರಾರಂಭಿಸಲು ಕರೆಯಲ್ಪಟ್ಟವರೆಂದು ತಿಳಿದುಕೊಂಡಿದ್ದರು. ಆದರೆ ಅದಕ್ಕೆ ತಲೆಯಾಕುವ ಮೊದಲು, ಅವರು ಆ ಉದ್ಯಮವನ್ನು ಸಂಶೋಧಿಸಲು, ಸಂಪರ್ಕಕೊಂಡಿ ನಿರ್ಮಿಸಲು ಮತ್ತು ಅದಕ್ಕಾಗಿ ದೇವರ ಮಾರ್ಗದರ್ಶನವನ್ನು ಪಡೆಯವುದರಲ್ಲಿಯೇ ಒಂದು ವರ್ಷ ಕಳೆದರು. ಇಂದು, ಅವರ ವ್ಯಾಪಾರವು ಅಭಿವೃದ್ಧಿ ಹೊಂದುತ್ತಿದೆ ಮತ್ತು ಈಗ ಅವರು ವಿಶ್ವಾದ್ಯಂತ ಮಿಷನರಿಗಳನ್ನು ಬೆಂಬಲಿಸುತ್ತಿದ್ದಾರೆ.
ಅವರ ಈ ಯಶಸ್ಸು ಒಂದು ಆಕಸ್ಮಿಕವಲ್ಲ; ಇದು ನಿಷ್ಠೆಯಿಂದ ಕೂಡಿದ ಕಾರ್ಯದೊಂದಿಗೆ ಮಾಡಿದ ದೈವಿಕ ತಂತ್ರಗಾರಿಕೆಯ ಫಲಿತಾಂಶವಾಗಿದೆ.
ತಂತ್ರಗಾರಿಕೆಯಲ್ಲಿ ಪವಿತ್ರಾತ್ಮನ ಪಾತ್ರ :
ನಮ್ಮದೇ ಆದ ಎಲ್ಲ ಮಾರ್ಗವನ್ನು ನಾವು ಕಂಡುಕೊಳ್ಳುಲಿ ಎಂದು ದೇವರು ನಮ್ಮನ್ನು ಬಿಟ್ಟು ಬಿಡುವುದಿಲ್ಲ. ಪವಿತ್ರಾತ್ಮನೇ ನಮಗೆ ಮಾರ್ಗದರ್ಶಿಯಾಗಿದ್ದು, ದೈವಿಕ ಜ್ಞಾನ ಮತ್ತು ಅಂತರದೃಷ್ಟಿಯನ್ನು ನೀಡುತ್ತಾನೆ . "ಆದರೆ ಸತ್ಯದ ಆತ್ಮ ಬಂದಾಗ ಆತನು ನಿಮ್ಮನ್ನು ಸಕಲ ಸತ್ಯದೊಳಗೆ ನಡೆಸುವನು . ಆತನು ತನ್ನಷ್ಟಕ್ಕೆ ತಾನೇ ಮಾತನಾಡದೆ ತಾನು ಕೇಳಿದವುಗಳನ್ನೇ ಮಾತನಾಡುವನು ಮುಂದೆ ನಡೆಯಲಿರುವ ವಿಷಯಗಳನ್ನು ಆತನು ನಿಮಗೆ ಪ್ರಕಟಿಸುವನು ".ಎಂದು ಯೋಹಾನ 16:13 ಹೇಳುತ್ತದೆ. ನಮ್ಮ ಜೀವನ, ಕುಟುಂಬಗಳು ಮತ್ತು ಸೇವಾಕಾರ್ಯಗಳಿಗೆ ತಂತ್ರಗಾರಿಕೆಯನ್ನು ರೂಪಿಸುವಲ್ಲಿ ಪವಿತ್ರಾತ್ಮನ ನಿರ್ದೇಶನವನ್ನು ಕಂಡುಕೊಳ್ಳುವುದು ಅತ್ಯಗತ್ಯವಾಗಿದೆ.
ದೈವಿಕ ಕಾರ್ಯತಂತ್ರವನ್ನು ಅಭಿವೃದ್ಧಿಪಡಿಸಲು ಇರುವ ಪ್ರಾಯೋಗಿಕ ಹಂತಗಳು.
1.ಪ್ರಾರ್ಥನೆಯೊಂದಿಗೆ ಪ್ರಾರಂಭಿಸಿ
ನಿಮ್ಮ ಜೀವನಕ್ಕಾಗಿ ಇರುವ ದೇವರ ದರ್ಶನವನ್ನು ಬೇಡಿಕೊಳ್ಳಿ “ ಸ್ವಬುದ್ಧಿಯನ್ನೇ ಆಧಾರಮಾಡಿಕೊಳ್ಳದೆ ಪೂರ್ಣಮನಸ್ಸಿನಿಂದ ಯೆಹೋವನಲ್ಲಿ ಭರವಸವಿಡು. ನಿನ್ನ ಎಲ್ಲಾ ನಡವಳಿಕೆಯಲ್ಲಿ ಆತನ ಚಿತ್ತಕ್ಕೆ ವಿಧೇಯನಾಗಿರು; ಆತನೇ ನಿನ್ನ ಮಾರ್ಗಗಳನ್ನು ಸರಾಗಮಾಡುವನು." ಎಂದು ಜ್ಞಾನೋಕ್ತಿಗಳು 3:5-6ನಮಗೆ ನೆನಪಿಸುತ್ತದೆ.
2.ನಿಮ್ಮ ಯೋಜನೆಯನ್ನು ಬರೆಯಿರಿ
“ನಿನಗಾದ ದರ್ಶನವನ್ನು ಬರೆದಿಡು; ಓದುವವರು ಸುಲಭವಾಗಿ ಶೀಘ್ರವಾಗಿ ಓದಲು ಅನುಕೂಲವಾಗುವಂತೆ ಹಲಿಗೆಗಳ ಮೇಲೆ ಅದನ್ನು ಕೆತ್ತಿಡು!" ಹಬಕ್ಕುಕ 2: 2 ಹೇಳುತ್ತದೆ.
ಬರವಣಿಗೆಯು ನಿಮ್ಮ ಗುರಿಗಳನ್ನು ಸ್ಪಷ್ಟಪಡಿಸುತ್ತದೆ ಮತ್ತು ನಿಮ್ಮನ್ನು ಹೊಣೆಗಾರರನ್ನಾಗಿ ಮಾಡುತ್ತದೆ.ಅವುಗಳಿಗಾಗಿ ಸಮಾಲೋಚನೆ ಕಂಡುಕೊಳ್ಳುವುದು ಒಳ್ಳೆಯದು.
3.ಸಲಹೆಯನ್ನು ಹುಡುಕುವುದು
"ಆಲೋಚನೆ ಹೇಳುವವರಿಲ್ಲದೆ ಉದ್ದೇಶಗಳು ನೆರವೇರವು, ಬಹು ಮಂದಿ ಆಲೋಚನಾಪರರು ಇರುವಲ್ಲಿ ಅವು ನೆರವೇರುವವು." ಎಂದು ಜ್ಞಾನೋಕ್ತಿ 15:22 ಸಲಹೆ ನೀಡುತ್ತದೆ.,ದೈವಿಕ ಮಾರ್ಗದರ್ಶಕರು ಮತ್ತು ಸಲಹೆಗಾರರನ್ನು ನಿಮ್ಮ ಸುತ್ತಲೂ ಏರ್ಪಡಿಸಿಕೊಳ್ಳಿ.
4.ಕ್ರಮ ಕೈಗೊಳ್ಳಿ
ತಂತ್ರಗಾರಿಕೆಯನ್ನು ಕಾರ್ಯಗತಗೊಳಿಸಲು ನೀವು ಕ್ರಮಗಳನ್ನು ಅಷ್ಟೇ ಪರಿಣಾಮಕಾರಿಯಾಗಿ ಕೈಗೊಳ್ಳಬೇಕು.
"ಹಾಗೆಯೇ ಕ್ರಿಯೆಗಳಿಲ್ಲದ ನಂಬಿಕೆಯು ನಿರ್ಜೀವವಾದದು."ಎಂದು ಯಾಕೋಬ 2:17 ಹೇಳುತ್ತದೆ. ನೀವು ವಿಧೇಯತೆಯಲ್ಲಿ ಮುಂದುವರಿಯುತ್ತಿರುವಾಗ ನಿಮ್ಮ ಪ್ರಯತ್ನಗಳನ್ನು ದೇವರು ಆಶೀರ್ವದಿಸುತ್ತಾನೆ ಎಂದು ದೇವರನ್ನು ನಂಬಿರಿ.
5.ಹೊಂದಿಕೊಳ್ಳುವವರಾಗಿರಿ
ಕೆಲವೊಮ್ಮೆ, ದೇವರು ನಮ್ಮ ಯೋಜನೆಗಳನ್ನು ಸರಿಹೊಂದಿಸುತ್ತಿರುತ್ತಾನೆ. ಆತನ ತಂತ್ರಗಾರಿಕೆಯು ಯಾವಾಗಲೂ ಪರಿಪೂರ್ಣವಾಗಿದೆ ಎಂದು ತಿಳಿದುಕೊಂಡು ಆತನ ಮರುನಿರ್ದೇಶನಕ್ಕೆ ಮುಕ್ತವಾಗಿ ಸ್ಪಂಧಿಸಿರಿ (ಯೆಶಾಯ 55:8-9)
ನಿಮ್ಮನ್ನು ನೀವೇ ಕೇಳಿಕೊಳ್ಳಿ
- ನನ್ನ ಜೀವನದಲ್ಲಿ ನಾನು ಸ್ಪಷ್ಟವಾದ ತಂತ್ರಗಾರಿಕೆಯಿಲ್ಲದೆ ಕಾರ್ಯಮಾಡದೇ ಕ್ಷೇತ್ರಗಳಿವೆಯೇ?
- ನನ್ನ ಯೋಜನಾ ಪ್ರಕ್ರಿಯೆಗೆ ನಾನು ಪವಿತ್ರಾತ್ಮನನ್ನು ಹೇಗೆ ಆಹ್ವಾನಿಸಬಹುದು?
- ದೇವರು ನನಗಾಗಿ ಹೊಂದಿರುವ ಭವಿಷ್ಯಕ್ಕಾಗಿ ತಯಾರಿ ಮಾಡಲು ನಾನು ಇಂದು ಯಾವ ಕ್ರಮಗಳನ್ನು ತೆಗೆದುಕೊಳ್ಳಬಹುದು?
Bible Reading - Genesis 22 - 24
ಪ್ರಾರ್ಥನೆಗಳು
ತಂದೆಯೇ, ನೀವು ಅಂತಿಮ ತಂತ್ರಗಾರರಾಗಿರುವುದ್ದಕ್ಕಾಗಿ ಸ್ತೋತ್ರ. ಜ್ಞಾನದೊಂದಿಗೆ ಯೋಜಿಸಲು ಮತ್ತು ನಿಮ್ಮ ಇಚ್ಛೆಯೊಂದಿಗೆ ನನ್ನ ಜೀವನವನ್ನು ಹೊಂದಿಸಿಕೊಳ್ಳುವುದನ್ನು ನನಗೆ ಕಲಿಸು.
ಪವಿತ್ರಾತ್ಮನೇ, ನನ್ನನ್ನು ಸಕಲ ಸತ್ಯಕ್ಕೆ ನಡೆಸುವಂತ ಮಾರ್ಗದರ್ಶನ ನೀಡಿ ಮತ್ತು ಕೈಗೊಳ್ಳುವಂತಾ ಪ್ರತಿ ನಿರ್ಧಾರದಲ್ಲಿ ನನಗೆ ಜ್ಞಾನವನ್ನು ಅನುಗ್ರಹಿಸಿ.
ನಿಮ್ಮ ಯೋಜನೆಗಳು ಯಾವಾಗಲೂ ನನ್ನ ಒಳಿತಿಗಾಗಿಯೂ ಮತ್ತು ನನ್ನ ಜೀವಿತದಲ್ಲಿ ನಿಮ್ಮ ನಾಮ ಮಹಿಮೆಗಾಗಿಯೇ ಎಂದು ನಾನು ನಂಬಿ, ನನಗಾಗಿ ನೀವು ಹೊಂದಿರುವ ಭವಿಷ್ಯಕ್ಕಾಗಿ ಸಿದ್ದವಾಗಲು ಯೇಸುನಾಮದಲ್ಲಿ ನನಗೆ ಸಹಾಯ ಮಾಡಿ. , ಆಮೆನ್.
Join our WhatsApp Channel
Most Read
● ಲಂಬಕೋನ ಹಾಗೂ ಸಮತಲದ ಕ್ಷಮಾಪಣೆ.● ನಿಮ್ಮ ಕೆಲಸದ ಕುರಿತ ಒಂದು ರಹಸ್ಯ
● ದೇವರ ರೀತಿಯ ನಂಬಿಕೆ
● ನಿಮ್ಮ ಆತ್ಮಿಕ ಶಕ್ತಿಯನ್ನು ನವೀಕರಿಸಿಕೊಳ್ಳುವುದು ಹೇಗೆ -3
● ಸಮಾಧಾನದ ಮೂಲ :ಕರ್ತನಾದ ಯೇಸು
● ದಿನ 01 : 40 ದಿನಗಳ ಉಪವಾಸ ಮತ್ತು ಪ್ರಾರ್ಥನೆ
● ಯಾವಾಗ ಸುಮ್ಮನಿರಬೇಕು ಮತ್ತು ಯಾವಾಗ ಮಾತನಾಡಬೇಕು
ಅನಿಸಿಕೆಗಳು