english हिंदी मराठी తెలుగు മലയാളം தமிழ் Contact us ನಮ್ಮನ್ನು ಸಂಪರ್ಕಿಸಿ ಸ್ಪೋರ್ಟಿಫೈ ನ್ನು ಆಲಿಸಿರಿ ಸ್ಪೋರ್ಟಿಫೈ ನ್ನು ಆಲಿಸಿರಿ Download on the App StoreiOS ನಲ್ಲಿ ಆಪ್ ನ್ನು ಡೌನ್ಲೋಡ್ ಮಾಡಿ Get it on Google Play ಆಂಡ್ರಾಯ್ಡ್ ನಲ್ಲಿ ಆಪ್ ನ್ನು ಡೌನ್ಲೋಡ್ ಮಾಡಿ
 
ಲಾಗಿನ್
ಆನ್ಲೈನ್ ಮೂಲಕ ಕಾಣಿಕೆ ನೀಡಲು
ಲಾಗಿನ್
  • ಮೂಲತಾಣ
  • ಕಾರ್ಯಕ್ರಮಗಳು
  • ನೇರಪ್ರಸಾರ
  • ದೂರದರ್ಶನ
  • ನೋಹಾಟ್ಯೂಬ್
  • ಸ್ತೋತ್ರಗಳು
  • ಸುದ್ದಿಗಳು
  • ಮನ್ನಾ
  • ಪ್ರಾರ್ಥನೆಗಳು
  • ಅರಿಕೆಗಳು
  • ಕನಸುಗಳು
  • ವಿದ್ಯುನ್ಮಾನ -ಪುಸ್ತಕಗಳು
  • ವ್ಯಾಖ್ಯಾನ
  • ಶ್ರದ್ದಾಂಜಲಿ
  • ಓಯಸಿಸ್
  1. ಮೂಲತಾಣ
  2. ಅನುದಿನದ ಮನ್ನಾ
  3. ಹೆಚ್ಚು ಪರಿಣಾಮಕಾರಿ ಜನರ 9 ಅಭ್ಯಾಸ: ಅಭ್ಯಾಸ ಸಂಖ್ಯೆ 1
ಅನುದಿನದ ಮನ್ನಾ

ಹೆಚ್ಚು ಪರಿಣಾಮಕಾರಿ ಜನರ 9 ಅಭ್ಯಾಸ: ಅಭ್ಯಾಸ ಸಂಖ್ಯೆ 1

Saturday, 10th of January 2026
1 1 28
Categories : 9 Habits of Highly Effective People
ಇಷ್ಟು ವರ್ಷಗಳಲ್ಲಿ, ಉನ್ನತ ಹುದ್ದೆಗಳನ್ನು ಹೊಂದಿರುವ ಅನೇಕ ಉದ್ಯಮಿಗಳು, ಉದ್ಯಮಿ ಮಹಿಳೆಯರು ಮತ್ತು ಕಾರ್ಪೊರೇಟ್ ನಾಯಕರೊಂದಿಗೆ ಸಂವಹನ ನಡೆಸುವ ಸೌಭಾಗ್ಯ ನನಗೆ ಸಿಕ್ಕಿದೆ. ಅವರು ಹೇಗೆ ಬೆಳೆಯುತ್ತಾರೆ, ಉತ್ಕೃಷ್ಟರಾಗುತ್ತಾರೆ ಮತ್ತು ಅವರ ಪ್ರಭಾವವನ್ನು ಗಮನಾರ್ಹವಾಗಿ ವಿಸ್ತರಿಸುತ್ತಾರೆ ಎಂಬುದನ್ನು ನಾನು ಗಮನಿಸಿದ್ದೇನೆ. 

ಅವರ ಜೀವನವನ್ನು ನಾನು ಹತ್ತಿರದಿಂದ ಗಮನಿಸಿದಾಗ, ಅವರನ್ನು ನಿಜವಾಗಿಯೂ ಪ್ರತ್ಯೇಕಿಸಿದ್ದು ಪ್ರತಿಭೆ, ಶಿಕ್ಷಣ ಅಥವಾ ಅವಕಾಶ ಮಾತ್ರವಲ್ಲ - ಆದರೆ ಅವರು ಬಹುಕಾಲದಿಂದ ಬೆಳೆಸಿಕೊಂಡಿದ್ದ ಕೆಲವು ಅಭ್ಯಾಸಗಳು ಎಂಬುದನ್ನು ನಾನು ಗಮನಿಸಿದೆ. ಈ ಅಭ್ಯಾಸಗಳು ಅವರ ಚಿಂತನೆಯನ್ನು ರೂಪಿಸಿದವು, ಅವರ ದಿನನಿತ್ಯದ ನಿರ್ಧಾರಗಳಿಗೆ ಮಾರ್ಗದರ್ಶನ ನೀಡಿದವು ಮತ್ತು ಅವುಗಳ ಪರಿಣಾಮಕಾರಿತ್ವವನ್ನು ಉಳಿಸಿಕೊಂಡವು. 

ಮುಂದಿನ ಕೆಲವು ದಿನಗಳಲ್ಲಿ, ನನ್ನ ಸಂಶೋಧನೆಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ನಾನು ಬಯಸುತ್ತೇನೆ. ನೀವು ನಿಮ್ಮ ಸ್ವಂತ ಜೀವನದಲ್ಲಿ ಈ ಅಭ್ಯಾಸಗಳನ್ನು ಬೆಳೆಸಿಕೊಂಡರೆ, ನೀವು ಮಾಡುವ ಎಲ್ಲದರಲ್ಲೂ ನೀವು ಹೆಚ್ಚು ಫಲಪ್ರದ ಮತ್ತು ಪರಿಣಾಮಕಾರಿಯಾಗುತ್ತೀರಿ ಎಂದು ನಾನು ಬಲವಾಗಿ ನಂಬುತ್ತೇನೆ. ಮತ್ತು ಅಂತಿಮವಾಗಿ, ಅದು ನಿಜವಾಗಿಯೂ ತಂದೆಗೆ ಮಹಿಮೆಯನ್ನು ತರುತ್ತದೆ.

"ಹೀಗಿರುವದರಿಂದ, ನೀವು ಮೊದಲು ದೇವರ ರಾಜ್ಯಕ್ಕಾಗಿಯೂ ನೀತಿಗಾಗಿಯೂ ತವಕಪಡಿರಿ. ಇವುಗಳ ಕೂಡ ಅವೆಲ್ಲವೂ ನಿಮಗೆ ದೊರಕುವವು.(ಮತ್ತಾಯ 6:33) 

ಬೈಬಲ್‌ನ ದೃಷ್ಟಿಕೋನದಿಂದ ಹೆಚ್ಚು ಪರಿಣಾಮಕಾರಿಯಾಗಿರುವ ಜನರು ಉತ್ಪಾದಕತೆಯಿಂದ ತಮ್ಮ ಕಾರ್ಯಗಳನ್ನು ಪ್ರಾರಂಭಿಸುವುದಿಲ್ಲ - ಅವರು ಆದ್ಯತೆಯಿಂದ ಪ್ರಾರಂಭಿಸುತ್ತಾರೆ. ತಂತ್ರಗಳನ್ನು ರೂಪಿಸುವ ಮೊದಲು, ಯೋಜನೆಗಳನ್ನು ಕಾರ್ಯಗತಗೊಳಿಸುವ ಮೊದಲು, ನಿರ್ಧಾರಗಳನ್ನು ಸಮರ್ಥಿಸಿಕೊಳ್ಳುವ ಮೊದಲು, ಅವರು ಒಂದು ಮೂಲಭೂತ ಪ್ರಶ್ನೆಯನ್ನು ಪರಿಹರಿಸುತ್ತಾರೆ:ಅದುವೇ ಯಾರು ಮೊದಲು? ಎಂಬುದಾಗಿದೆ 

ಪರಿಣಾಮಕಾರಿತ್ವವು ಆಕಸ್ಮಿಕವಲ್ಲ; ಆದರೆ ಅದು ದೇವರ ಮುಂದೆ ಸರಿಯಾಗಿ ಆದೇಶಿಸಲಾದ ಜೀವನದ ಉಪಉತ್ಪನ್ನವಾಗಿದೆ ಎಂದು ಬೈಬಲ್ ಸ್ಥಿರವಾಗಿ ಪ್ರಕಟಪಡಿಸುತ್ತದೆ.

1. ಆದ್ಯತೆಯು ಶಕ್ತಿಯನ್ನು ನಿರ್ಧರಿಸುತ್ತದೆ 

ಆದಿಕಾಂಡದಲ್ಲಿ, ದೇವರವಾಕ್ಯದ ಮೊದಲ ವಾಕ್ಯ "ಆದಿಯಲ್ಲಿ, ದೇವರು..." (ಆದಿಕಾಂಡ 1:1) ಎಂದು ಘೋಷಿಸುತ್ತವೆ. ಇದು ದೈವಿಕ ತತ್ವ. ದೇವರು ಯಾವುದರಲ್ಲಿ ಮೊದಲಿಗನೋ, ಆಗ ಆತನು ಆಳ್ವಿಕೆ ನಡೆಸುತ್ತಾನೆ. ಆತನು ಯಾವುದನ್ನು ಆಳುತ್ತಾನೋ, ಅದನ್ನು ಆತನು ಆಶೀರ್ವದಿಸುತ್ತಾನೆ. 

ದೇವರು ಮೊದಲಿಗನಾಗಿ ಇಲ್ಲದಿರುವಾಗ, ಒಳ್ಳೆಯ ವಿಷಯಗಳು ಸಹ ಕುಸಿಯಲಾರಂಭಿಸುತ್ತವೆ. ಆದರೆ ಆತನು ಯಾವಾಗ ಮೊದಲಿಗನಾಗಿ ಇರುತ್ತಾನೋ, ಆಗ ಕಷ್ಟಕರವಾದ ಸಮಯವೂ ಸಹ ಫಲಪ್ರದ ವಾಗುತ್ತದೆ. ಕರ್ತನಾದ ಯೇಸು ಇತರ ವಿಷಯಗಳ ಜೊತೆಗೆ ದೇವರನ್ನು ಹುಡುಕಿ ಎಂದು ಹೇಳಲಿಲ್ಲ - ಆತನು ಹೇಳಿದ್ದೇನೆಂದರೆ, ಮೊದಲು ದೇವರನ್ನು ಹುಡುಕಿ ಎಂದೇ. ಜೀವನದಲ್ಲಿ ಪರಿಣಾಮಕಾರಿತ್ವವು ನಮ್ಮ ಯೋಜನೆಗಳಿಗೆ ದೇವರನ್ನು ಸೇರಿಸುವುದರ ಕುರಿತಾಗಿ ಅಲ್ಲ; ಅದು ನಮ್ಮ ಯೋಜನೆಗಳನ್ನು ದೇವರಿಗೆ ಒಪ್ಪಿಸಿಕೊಡುವುದರ ಕುರಿತದ್ದಾಗಿದೆ. 
ಅರಸನಾದ ದಾವೀದನು ಇದನ್ನು ಆಳವಾಗಿ 

ಅರ್ಥಮಾಡಿಕೊಂಡನು. ಅವನು ಒಬ್ಬ ಯೋಧನೂ, ಅರಸನೂ, 

ಕವಿಯೂ ಮತ್ತು ನಾಯಕನೂ ಆಗಿದ್ದರೂ, ಅವನು ಘೋಷಿಸಿದ್ದೇನೆಂದರೆ: 

 ನನ್ನ ಜೀವಮಾನದಲ್ಲೆಲ್ಲಾ ಯೆಹೋವನ ಮನೆಯಲ್ಲಿ ವಾಸಮಾಡುತ್ತಾ ಆತನ ಪ್ರಸನ್ನತೆಯನ್ನು ನೋಡುವದಕ್ಕೂ ಆತನ ಮಂದಿರದಲ್ಲಿ ಧ್ಯಾನಮಾಡುವದಕ್ಕೂ ನನಗೆ ಅಪ್ಪಣೆಯಾಗಬೇಕೆಂಬ ಒಂದೇ ವರವನ್ನು ಯೆಹೋವನಿಂದ ಕೇಳಿಕೊಂಡು ಅದನ್ನೇ ಎದುರುನೋಡುತ್ತಿರುವೆನು.
(ಕೀರ್ತನೆ 27:4). 

ಎಲ್ಲದರಲ್ಲೂ ದೇವರನ್ನು ಮೊದಲ ಸ್ಥಾನದಲ್ಲಿ ಇಡುವುದರಿಂದ ದಾವೀದನ ಪರಿಣಾಮಕಾರಿತ್ವವು  ಹರಿಯುತ್ತಲೇ ಇತ್ತು.


2. ಮೊದಲ ಪ್ರೀತಿ ಶಾಶ್ವತ ಶಕ್ತಿಯನ್ನು ನೀಡುತ್ತದೆ

"ಎಫೆಸದಲ್ಲಿರುವ ಸಭೆಯ ದೂತನಿಗೆ ಬರೆ - ಏಳು ನಕ್ಷತ್ರಗಳನ್ನು ಬಲಗೈಯಲ್ಲಿ ಹಿಡಿದುಕೊಂಡು ಏಳು ಚಿನ್ನದ ದೀಪಸ್ತಂಭಗಳ ಮಧ್ಯದಲ್ಲಿ ತಿರುಗಾಡುವಾತನು ಹೇಳುವದೇನಂದರೆ - 2ನಿನ್ನ ಕೃತ್ಯಗಳನ್ನೂ ಪ್ರಯಾಸವನ್ನೂ ತಾಳ್ಮೆಯನ್ನೂ ಬಲ್ಲೆನು; ನೀನು ದುಷ್ಟರನ್ನು ಸಹಿಸಲಾರಿ; ಅಪೊಸ್ತಲರಲ್ಲದಿದ್ದರೂ ತಮ್ಮನ್ನು ಅಪೊಸ್ತಲರೆಂದು ಹೇಳಿಕೊಳ್ಳುವವರನ್ನು ನೀನು ಪರೀಕ್ಷಿಸಿ ಅವರನ್ನು ಸುಳ್ಳುಗಾರರೆಂದು ಕಂಡುಕೊಂಡಿ; 3 ನೀನು ತಾಳ್ಮೆಯುಳ್ಳವನಾಗಿ ನನ್ನ ಹೆಸರಿನ ನಿವಿುತ್ತ ಬಾಧೆಯನ್ನು ಸೈರಿಸಿಕೊಂಡು ಬೇಸರಗೊಳ್ಳಲಿಲ್ಲ; ಇದನ್ನೆಲ್ಲಾ ಬಲ್ಲೆನು. 4 ಆದರೆ ಮೊದಲು ನಿನಗಿದ್ದ ಪ್ರೀತಿಯನ್ನು ನೀನು ಬಿಟ್ಟುಬಿಟ್ಟಿದ್ದೀಯೆಂದು ನಾನು ನಿನ್ನ ಮೇಲೆ ತಪ್ಪುಹೊರಿಸಬೇಕಾಗುತ್ತದೆ. (ಪ್ರಕಟನೆ 2:1-4) 

ಗಮನಿಸಿ—ಬೇರೆ ಯಾವುದನ್ನೂ ಇಲ್ಲಿ ಖಂಡಿಸಲಾಗಿಲ್ಲ. ಅವರ ಕೃತ್ಯಗಳು ಮುಂದುವರೆಯುತಿತ್ತು, ಅವರ  ಪ್ರಯಾಸವೂ ಉಳಿದಿತ್ತು, ಅವರ ಸಿದ್ಧಾಂತವು ಉತ್ತಮವಾಗಿತ್ತು—ಆದರೆ ಅನ್ಯೋನ್ಯತೆಯಿಲ್ಲದ ಪರಿಣಾಮಕಾರಿತ್ವವು ಖಾಲಿಯಾಗಿತ್ತು.

ಹೆಚ್ಚು ಪರಿಣಾಮಕಾರಿಯಾದ ವಿಶ್ವಾಸಿಗಳು ತಮ್ಮ ಮೊದಲ ಪ್ರೀತಿಯನ್ನು ಕಾಪಾಡಿಕೊಳ್ಳುತ್ತಾರೆ. ಅವರ ಪ್ರಾರ್ಥನೆಯು ಆತುರದಿಂದ ಕೂಡಿರುವುದಿಲ್ಲ. ದೇವರವಾಕ್ಯವನ್ನು ಅರ್ಧಂಬರ್ಧ ತಿಳಿದಿರುವುದಿಲ್ಲ. ಆರಾಧನೆಯು ಯಾಂತ್ರಿಕವಾಗಿರುವುದಿಲ್ಲ. ಬೆಥಾನಿಯ ಮರಿಯಾಳಂತೆ,ಯೇಸುವಿನ ಪಾದಗಳ ಬಳಿ ಕುಳಿತುಕೊಳ್ಳುವ ಉತ್ತಮ ಭಾಗವನ್ನು ಆರಿಸಿಕೊಂಡಿರುತ್ತಾರೆ. ಅನ್ಯೋನ್ಯತೆಯು ಯಾವಾಗಲೂ ಗಡಿಬಿಡಿಯ ಸೇವೆಯನ್ನು ಮೀರಿಸುತ್ತದೆ ಎಂಬುದನ್ನು ತಿಳಿದಿರುತ್ತಾರೆ (ಲೂಕ 10:38–42). 

ಯೆಹೋವನನ್ನು ನಿರೀಕ್ಷಿಸುವವರೋ ಹೊಸ ಬಲವನ್ನು ಹೊಂದುವರು; 

ಹದ್ದುಗಳಂತೆ ರೆಕ್ಕೆಗಳನ್ನು ಚಾಚಿಕೊಂಡು [ಏರುವರು]; ಓಡಿ ದಣಿಯರು, ನಡೆದು ಬಳಲರು." ಎಂದು ಪ್ರವಾದಿಯಾದ ಯೇಶಾಯನು ಹೇಳುತ್ತಾನೆ(ಯೆಶಾಯ 40:31).

ಇಲ್ಲಿ ನಿರೀಕ್ಷೆಸುವುದು ಎಂದರೆ ನಿಷ್ಕ್ರಿಯತೆ ಎಂದಲ್ಲ - ಇದರರ್ಥ ದೇವರನ್ನೆ ಕೇಂದ್ರಿಕೃತ ಮಾಡಿಕೊಂಡು ಆತನನ್ನೇ ಅವಲಂಭಿಸುವುದಾಗಿದೆ. ಅಧಿಕಾರವು ಪ್ರಯತ್ನದಿಂದಲ್ಲ, ಆದರೆ ಸರಿಯಾದ ಸ್ಥಾನೀಕರಣದಿಂದ ನವೀಕರಿಸಲ್ಪಡುತ್ತದೆ.

3. ಮೊದಲ ಅಭ್ಯಾಸವು ಇತರ ಎಲ್ಲಾ ಅಭ್ಯಾಸಗಳನ್ನು ರೂಪಿಸುತ್ತದೆ.

ಹಳೆಯ ಒಡಂಬಡಿಕೆಯಲ್ಲಿ, ದೇವರು ಪ್ರಥಮ ಫಲಗಳನ್ನು ತರಬೇಕೆಂದು ಆಜ್ಞಾಪಿಸಿದನೇ ಹೊರತು ಉಳಿದದ್ದು ಪಳಿದದ್ದನ್ನಲ್ಲ (ಜ್ಞಾನೋಕ್ತಿ 3:9). ಆ ಮೊದಲ ಭಾಗವು  ಮಿಕ್ಕ ಉಳಿದದ್ದನ್ನೆಲ್ಲಾ ಉದ್ಧರಿಸಿತು. ಈ ತತ್ವವು ಇನ್ನೂ ಅಸ್ತಿತ್ವದಲ್ಲಿದೆ. ದಿನದ ಮೊದಲ ಗಂಟೆ, ಹೃದಯದ ಮೊದಲ ವಾತ್ಸಲ್ಯ ಮತ್ತು ಇಚ್ಛೆಯ ಮೊದಲ ನಿಷ್ಠೆ ದೇವರಿಗೆ ಸಮರ್ಪಸಿದಾಗ, ಉಳಿದೆಲ್ಲವೂ ದೈವಿಕ ಕ್ರಮಕ್ಕೆ ಬರುತ್ತದೆ.

ಕರ್ತನಾದ ಯೇಸು ಸ್ವತಃ ಈ ಅಭ್ಯಾಸವನ್ನು ಮಾದರಿಯಾಗಿಟ್ಟುಕೊಂಡಿದ್ದನು. "ಬೆಳಿಗ್ಗೆ ... ಅವನು ನಿರ್ಜನ ಸ್ಥಳಕ್ಕೆ ಹೋಗಿ, ಆತನು ಪ್ರಾರ್ಥಿಸುತ್ತಿದ್ದನು" (ಮಾರ್ಕ್ 1:35). ಜನಸಂದಣಿ, ಪವಾಡಗಳು ಮತ್ತು ಬೇಡಿಕೆಗಳ ಎಲ್ಲಕ್ಕಿಂತ ಮೊದಲು - ಆತನ ಪ್ರಾಶಸ್ತ್ಯ ಅನ್ಯೋನ್ಯತೆ  ಮೇಲೆ ಇತ್ತು. ಅದಕ್ಕಾಗಿಯೇ ದೇವರವಾಕ್ಯದ ಪರಿಣಾಮಕಾರಿತ್ವವು ಎಂದಿಗೂ ಭಕ್ತಿಯಿಂದ ಬೇರ್ಪಡಿಸಲ್ಪಟ್ಟಿಲ್ಲ. ಯೆಹೋಶುವನ ಯಶಸ್ಸು ವಾಕ್ಯದ ಧ್ಯಾನದಿಂದಲೇ ಹರಿಯಲಾರಾಂಭಿಸಿತು (ಯೆಹೋಶುವ 1:8). 

ಯೋಸೇಫನ ಉದಯವು ದೇವರ ಸಾನಿಧ್ಯದಿಂದ ಹರಿಯಿತಿತ್ತು (ಆದಿಕಾಂಡ 39:2). ದಾನಿಯೇಲನ ಪ್ರಭಾವವು ಸ್ಥಿರವಾದ ಪ್ರಾರ್ಥನಾ ಜೀವನದಿಂದ ಹರಿಯಿತಿತ್ತು. (ದಾನಿಯೇಲ 6:10).

4.ಯಾವಾಗಲೂ ಪರಿಣಾಮಕಾರಿತ್ವವು ಬಲಿಪೀಠದಿಂದ ಪ್ರಾರಂಭವಾಗುತ್ತದೆ . 

ಆದದರಿಂದ ಸಹೋದರರೇ, ದೇವರ ಕನಿಕರವನ್ನು ನಿಮ್ಮ ನೆನಪಿಗೆ ತಂದು ನಿಮ್ಮನ್ನು ಬೇಡಿಕೊಳ್ಳುವದೇನಂದರೆ - ನೀವು ನಿಮ್ಮ ನಿಮ್ಮ ದೇಹಗಳನ್ನು ದೇವರಿಗೆ ಮೀಸಲಾಗಿಯೂ ಮೆಚ್ಚಿಗೆಯಾಗಿಯೂ ಇರುವ ಸಜೀವಯಜ್ಞವಾಗಿ ಅರ್ಪಿಸಿರಿ; ಇದೇ ನಿಮ್ಮ ವಿವೇಕಪೂರ್ವಕವಾದ ಆರಾಧನೆಯು. (ರೋಮ 12:1)

ಈ ದೇವರವಾಕ್ಯವು ಎಲ್ಲಾ ವಿಶ್ವಾಸಿಗಳು ತಮ್ಮನ್ನು ತಾವು ಜೀವಂತ ಯಜ್ಞಗಳಾಗಿ ಅರ್ಪಿಸಿಕೊಳ್ಳಬೇಕೆಂದು ಸ್ಪಷ್ಟವಾಗಿ ಕರೆ ನೀಡುತ್ತದೆ. ಯಜ್ಞವು ಯಾವಾಗಲೂ ಮೊದಲು ಯಜ್ಞವೇದಿಯ ಮೇಲೆ ಅರ್ಪಿಸಲ್ಪಡುತ್ತದೆ. ಪ್ರತಿದಿನ ಅರ್ಪಿಸಲ್ಪಟ್ಟ ಜೀವನವು ದೇವರಿಂದ ಮೇಲಕ್ಕೆತ್ತಲ್ಪಟ್ಟ ಜೀವನವಾಗುತ್ತದೆ. ಹೆಚ್ಚು ಪರಿಣಾಮಕಾರಿಯಾಗಿರುವ ಜನರು "ಯಾವುದು ಕೆಲಸ ಮಾಡುತ್ತದೆ?" 

ಎಂದು ಕೇಳುವುದಿಲ್ಲ. ಅವರು "ದೇವರನ್ನು ನಿಜವಾಗಿಯೂ ಗೌರವಿಸುವಂತದ್ದು ಯಾವುದು?" 

ಎಂದು ಕೇಳುತ್ತಾರೆ. ಮತ್ತು ಇದಕ್ಕೆ ದೇವರವಾಕ್ಯವು ಸ್ಪಷ್ಟವಾಗಿ ಉತ್ತರಿಸುವುದೇನೆಂದರೆ:

"ಯೆಹೋವನ ಭಯವೇ ಜ್ಞಾನಕ್ಕೆ ಮೂಲ"(ಜ್ಞಾನೋಕ್ತಿ 9:10). 

ದೇವರಿಗೆ ಆದ್ಯತೆ ಇರುವಲ್ಲಿ, ಜ್ಞಾನವು ಹರಿದುಬರುತ್ತದೆ. ಜ್ಞಾನವು ಹರಿಯುವ ಸ್ಥಳವನ್ನು, ಪರಿಣಾಮಕಾರಿತ್ವವು ಹಿಂಬಾಲಿಸುತ್ತದೆ. ಇದು ಮೊದಲ ಅಭ್ಯಾಸ - ಮತ್ತು ಅದಿಲ್ಲದೆ, ಬೇರೆ ಯಾವುದೇ ಅಭ್ಯಾಸವು ನಿಜವಾಗಿಯೂ ನಿಲ್ಲಲು ಸಾಧ್ಯವಿಲ್ಲ. 

Bible Reading: Genesis 30-31
ಪ್ರಾರ್ಥನೆಗಳು
ತಂದೆಯೇ, ನಾನು ನನ್ನ ಜೀವನವನ್ನು ನಿನ್ನ ಕ್ರಮಕ್ಕೆ ಮರಳಿ ತರುತ್ತೇನೆ. ಪ್ರತಿಯೊಂದು ತಪ್ಪು ಆದ್ಯತೆಯನ್ನು ಬೇರುಸಹಿತ ಕಿತ್ತುಹಾಕಿ ನನ್ನ ಜೀವನದಲ್ಲಿ ಮತ್ತೆ ಮೊದಲ ಸ್ಥಾನವನ್ನು ನೀನೇ ಪಡೆದುಕೊಂಡು, ನನ್ನ ವಿಧೇಯತೆಯನ್ನು ಬಲಪಡಿಸಿ ಮತ್ತು ನನ್ನ ಜೀವನವನ್ನು ನಿನ್ನ ರಾಜ್ಯಕ್ಕಾಗಿಯೂ ಮತ್ತು ನಿನ್ನ ಮಹಿಮೆಗಾಗಿಯೂ ಯೇಸುನಾಮದಲ್ಲಿ ಬಳಸಿಕೊ. ಆಮೆನ್!


Join our WhatsApp Channel


Most Read
● ಮತ್ತೊಬ್ಬರ ಪಾತ್ರೆಯನ್ನು ತುಂಬಿಸುವುದನ್ನು ಬಿಟ್ಟು ಬಿಡಬೇಡಿರಿ.
● ಐಕ್ಯತೆ ಮತ್ತು ವಿಧೇಯತೆಯ ಒಂದು ದರ್ಶನ
● ಕೃಪೆಯ ಮೇಲೆ ಕೃಪೆ
● ನಂಬಿಕೆ ಎಂದರೇನು ?
● ಇದು ಅಧಿಕಾರ ವರ್ಗಾವಣೆಯ ಸಮಯ
● ದೇವರ ರೀತಿಯ ನಂಬಿಕೆ
● ದೇವರ 7 ಆತ್ಮಗಳು: ಜ್ಞಾನದ ಆತ್ಮ
ಅನಿಸಿಕೆಗಳು
ನಮ್ಮನ್ನು ಸಂಪರ್ಕಿಸಿ
Phone: +91 8356956746
+91 9137395828
WhatsApp: +91 8356956746
ಇಮೇಲ್ ವಿಳಾಸ: [email protected]
ವಿಳಾಸ :
10/15, First Floor, Behind St. Roque Grotto, Kolivery Village, Kalina, Santacruz East, Mumbai, Maharashtra, 400098
ಸ್ಪೋರ್ಟಿಫೈ ನ್ನು ಆಲಿಸಿರಿ
Download on the App Store
Get it on Google Play
JOIN MAILING LIST
EXPLORE
ಕಾರ್ಯಕ್ರಮಗಳು
ನೇರಪ್ರಸಾರ
ನೋಹಾಟ್ಯೂಬ್
ದೂರದರ್ಶನ
Donation
ಮನ್ನಾ
ಸ್ತೋತ್ರಗಳು
ಅರಿಕೆಗಳು
ಕನಸುಗಳು
ಸಂಪರ್ಕ
© 2026 Karuna Sadan, India.
➤
ಲಾಗಿನ್
ಈ ಜಾಲದಲ್ಲಿರುವ ವಿಷಯದ ಕುರಿತು ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಿಳಿಸಲು ಲೈಕ್ ಮಾಡಲು ದಯಮಾಡಿ ನಿಮ್ಮ ನೋಹ ಖಾತೆಗೆ ಲಾಗಿನ್ ಆಗಿರಿ
ಲಾಗಿನ್