ಅನುದಿನದ ಮನ್ನಾ
ದಿನ 19:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ
Tuesday, 10th of December 2024
4
1
132
Categories :
ಉಪವಾಸ ಮತ್ತು ಪ್ರಾರ್ಥನೆ (Fasting and prayer)
ನಾಶಕರವಾದ ದುಶ್ಚಟಗಳ ಮೇಲೆ ಜಯ ಹೊಂದುವುದು
"ಸ್ವಾತಂತ್ರ್ಯ ಕೊಡುತ್ತೇವೆಂದು ಅವರಿಗೆ ವಾಗ್ದಾನಮಾಡುತ್ತಾರೆ, ಆದರೆ ತಾವೇ ಕೆಟ್ಟತನದ ದಾಸತ್ವದೊಳಗಿದ್ದಾರೆ. ಒಬ್ಬನು ಯಾವದಕ್ಕೆ ಸೋತು ಹೋಗಿರುವನೋ ಅದರ ದಾಸತ್ವದೊಳಗಿರುವನಷ್ಟೆ."(2 ಪೇತ್ರನು 2:19).
ಅಭ್ಯಾಸಗಳು ತಟಸ್ಥ ಸ್ಥಿತಿಯಲ್ಲಿದೆ. ಅವುಗಳು ಒಳ್ಳೆಯದು ಆಗಿರಬಹುದು, ಕೆಟ್ಟದ್ದು ಆಗಿರಬಹುದು. ಒಳ್ಳೆಯ ಅಭ್ಯಾಸಗಳು ನಾವು ನಿರೀಕ್ಷಿಸಿದ ಮತ್ತು ನಿಯಮಿತವಾದ ಸಾಧನೆಗಳನ್ನು ಮಾಡಲು ಸಹಕಾರಿಗಳಾಗಬಹುದು. ಹಾಗೆಯೇ ದುರಭ್ಯಾಸಗಳು ನಮ್ಮ ಸಾಮರ್ಥ್ಯಗಳನ್ನು ಕುಂಠಿತಗೊಳಿಸಿ ನಮ್ಮನ್ನು ನಾಶನಕ್ಕೆ ಕೊಂಡೊಯ್ಯಬಹುದು.
"ಈ ದುರಾಭ್ಯಾಸವನ್ನು ನಾನು ಬಿಡುವುದು ಹೇಗೆ?"
"ನನ್ನ ಕೈಯಲ್ಲಿ ಇದನ್ನು ಬಿಡುವುದಕ್ಕೆ ಸಾಧ್ಯವಾಗುತ್ತಿಲ್ಲ" "ನಾನು ಈ ಕಾರ್ಯವನ್ನು ಮತ್ತೆ ಮತ್ತೆ ಮಾಡಬಾರದು ಎಂದು ಅಂದುಕೊಳ್ಳುತ್ತೇನೆ ಆದರೂ ಅದೇ ಸೆಳೆತಕ್ಕೆ ಸಿಕ್ಕಿ ಮತ್ತದೆ ಕೆಲಸವನ್ನೇ ಮಾಡುತ್ತೇನೆ"ಎಂಬ ಈ ಕೆಲವು ಮಾತುಗಳು ದುರಭ್ಯಾಸದ ಚಟಕ್ಕೆ ದಾಸರಾದಂತಹ ಜನರು ತಾವು ಪಡುತ್ತಿರುವಕಷ್ಟಗಳನ್ನು ಹೇಳಿಕೊಳ್ಳುವಂತಹ ರೀತಿಗಳಾಗಿವೆ. ಇಂದು ದೇವರು ಈ ರೀತಿಯ ದುಶ್ಚಟಗಳ ಮೇಲೆ ಯೇಸು ನಾಮದಲ್ಲಿ ನಿಮಗೆ ಜಯ ನೀಡಲಿ.
ನಾಶಕರವಾದಂತ ದುಶ್ಚಟಗಳೆಲ್ಲವೂ
- ಸಂಸಾರಗಳನ್ನು ಚಿದ್ರಗೊಳಿಸುತ್ತಾ.
- ಅರ್ಧಾಯುಷ್ಯಾದಲ್ಲಿಯೇ ಸಾಯುವಂತದ್ದಕ್ಕೋ
- ಮಾದಕ ದ್ರವ್ಯಗಳಿಗೆ ದಾಸತ್ವರಾಗುವುದಕ್ಕೂ
- ದರೋಡೆಯನ್ನು ಮಾಡುವಂಥದ್ದಕ್ಕೋ
- ಅನಾರೋಗ್ಯಕ್ಕೂ
- ಸೆರೆಮನೆ ವಾಸಕ್ಕೂ
- ದುಃಖ ಸಂಕಟಗಳಿಗೂ
- ವಿಕೃತ ಲೈಂಗಿಕ ಕಾರ್ಯಗಳಿಗೊ ದೂಡುತ್ತವೆ.
ಸೈತಾನನು ಜನರು ದೇವರು ತಮಗೆ ನೀಡಿದ ಕರೆಯನ್ನು ಪೂರ್ಣಗೊಳಿಸಬಾರದೆಂದು ತನ್ನಲ್ಲೇ ನಿಶ್ಚಯಿಸಿಕೊಂಡು ಅದಕ್ಕೆ ಬೇಕಾದುದ್ದನ್ನೆಲ್ಲ ಮಾಡುತ್ತಾನೆ. ಆದರೆ ನಿಮಗೆ ಇದಕ್ಕಾಗಿ ಪವಿತ್ರಾತ್ಮನ ಸಹಾಯ ಅವಶ್ಯಕ. ಶಾರೀರಿಕ ಇಚ್ಛೆಗಳನ್ನು ಪೂರೈಸಿಕೊಳ್ಳಲು ಏನೋ ಒಂದು ಬಾರಿ ತಪ್ಪುಗಳು ಕೆಲವೊಮ್ಮೆ ನಡೆದು ಬಿಡುತ್ತದೆ. ಆದರೆ ಆ ತಪ್ಪುಗಳನ್ನೇ ಪದೇ ಪದೇ ಮಾಡುವ ಅಭ್ಯಾಸ ಮಾಡಿಕೊಂಡರೆ ಅದು ದುರಾತ್ಮನಿಗೆ ಬಾಗಿಲು ತೆರೆದು ಕೊಟ್ಟಂತೆಯೇ ಸರಿ. ಶರೀರದ ಇಚ್ಛೆಗಳನ್ನ ತೋರಿಸಿಯೇ ಬಹಳ ಸುಲಭವಾಗಿ ದುರಾತ್ಮಗಳು ತಮ್ಮ ಕಾರ್ಯಗಳನ್ನು ಸಾಧಿಸಿಕೊಳ್ಳುತ್ತವೆ. ಆದದರಿಂದಲೇ ನೀವು ಈ ವಿಚಾರಗಳಲ್ಲಿ ಬಹು ಜಾಗರೂಕತೆಯಿಂದ ಇರಬೇಕು.
ನಾಶಕರವಾದ ದುಶ್ಚಟಗಳಿಗೆ ಕೆಲವು ಉದಾಹರಣೆಗಳು.
1. ಅತಿಯಾದ ಕೋಪ (ರೋಷ).
ಕೆಲವು ಜನರು ತಾವು ಕೋಪಗೊಂಡಾಗ ವಸ್ತುಗಳನ್ನು ಮುರಿದು ಬಿಸಾಡುತ್ತಾರೆ. ಕೋಪ ತಣ್ಣಗಾದ ಮೇಲೆ ಒಡೆದು ಹೋದುದನ್ನು ಹೊಸದಾಗಿ ಖರೀದಿಸುವುದು ಇಲ್ಲವೇ ರಿಪೇರಿ ಮಾಡಿಸುವುದು ಮಾಡುತ್ತಾರೆ. ಟಿವಿಯನ್ನು ಅಥವಾ ಕೈಗೆ ಸಿಕ್ಕದ್ದನ್ನೆಲ್ಲಾ ಅವರು ಒಡೆದು ಬಿಸಾಡುತ್ತಿರುತ್ತಾರೆ. ದುರಾತ್ಮ ಪೀಡಿತ ನಾಶಕರವಾದ ದುಶ್ಚಟವು ಪವಿತ್ರಾತ್ಮನ ಸಹಾಯವಿಲ್ಲದೆ ಸರಿಹೋಗಲು ಸಾಧ್ಯವೇ ಇಲ್ಲ.
2. ಅತಿಯಾದ ಕಾಮದ ಆಲೋಚನೆಗಳು.
ಕೆಲವು ಜನರು ದಿನವಿಡೀ ಕೇವಲ ಕಾಮದ ಕುರಿತಾದ ಅನೈತಿಕ ಆಲೋಚನೆಯಲ್ಲಿ ಕಳೆಯುವ ದುರಭ್ಯಾಸ ಪೀಡಿತರಾಗಿರುತ್ತಾರೆ. ಇವರುಗಳು ರಾತ್ರಿಯಲ್ಲಿಯೂ ಸಹ ಈ ರೀತಿ ಅನೈತಿಕ ಕನಸುಗಳ ದಾಳಿಗೆ ಈಡಾಗುತ್ತಾರೆ. ಇದು ನಿಶ್ಚಯವಾಗಿಯೂ ದುರಾತ್ಮನ ಕಾರ್ಯವೇ. ಇಂಥ ದುರಾತ್ಮಗಳು ಆ ವ್ಯಕ್ತಿಗಳನ್ನು ಅವರ ಭಾವನೆ ಮತ್ತು ಶರೀರದ ಮೇಲೆ ಆಳ್ವಿಕೆ ಮಾಡುತ್ತಾ ಅವರನ್ನು ಅದೇ ನಾಶನದ ಹಾದಿಯಲ್ಲಿ ನಡೆಸಿ ಆ ವ್ಯಕ್ತಿಯ ಜೀವನ ಸೆರೆಮನೆಯಲ್ಲಿಯೋ ಶವಗಾರದಲ್ಲಿಯೋ ಮುಗಿಯುವಂತೆ ಮಾಡುತ್ತವೆ.
ಈ ಪೀಡೆಯಿಂದ ಹೊರಬರಲು ಅವರಿಗೆ ಬಯಕೆ ಇದೆ ಆದರೆ ಅವರು ಇಂತಹ ಭಾವನೆಗಳಿಗೆ ದಾಸರಾಗಿ ಬಿಟ್ಟಿರುತ್ತಾರೆ. ಈ ಎಲ್ಲಾ ಭಾವನೆಗಳಿಂದಲೂ ಸೈತಾನನ ಕಟ್ಟುಗಳಿಂದಲೂ ಹೊರಬರಲು ಅವರಿಗೆ ದೇವರ ಬಲದ ಅಗತ್ಯವಿದೆ
3.ಧೂಮಪಾನ.
ನೀವು ಟಿವಿಯಲ್ಲಿ ಜಾಹೀರಾತುಗಳನ್ನು ನೋಡುವಾಗ ಧೂಮಪಾನ ಮೃತ್ಯುಗೆ ಆಹ್ವಾನ ಅದು ಆರೋಗ್ಯಕ್ಕೆ ಹಾನಿಕರ ಎನ್ನುವ ಎಚ್ಚರಿಕೆಯನ್ನು ಕೂಡ ನೀವು ಗಮನಿಸಿರಬಹುದು. ಆದರೂ ಸಹ ಜನರು ಅದನ್ನು ಕೊಂಡುಕೊಂಡು ಸೇದುತ್ತಾರೆ. ಅವರು ಅದಕ್ಕೆ ದಾಸರಾಗಿರುವುದರಿಂದ ಅದನ್ನು ಬಿಡಲು ಅವರಿಗೆ ಸಾಧ್ಯವಾಗುವುದಿಲ್ಲ. ನಾವು ದೇವರಿಗೆ ದಾಸರಾಗಿ ಇರಬೇಕೇ ಹೊರತು ಮತ್ತಾವುದಕ್ಕೂ ಅಲ್ಲ. ಚಟಗಳಿಗೆ ನಮ್ಮದೇ ಆದ ಅನೇಕ ಸಬೂಬುಗಳನ್ನು ನಾವು ಕೊಟ್ಟುಕೊಳ್ಳುತ್ತೇವೆ.
ಕುಡಿತ ಮತ್ತು ಮಾದಕ ದ್ರವ್ಯಗಳು ತಕ್ಷಣವೇ ಮನಸ್ಸನ್ನು ಮಂಕು ಮಾಡಿ ವಿಚಾರ ಶಕ್ತಿಯನ್ನೇ ಕುಂಠಿತಗೊಳಿಸಿ ಆ ವ್ಯಕ್ತಿ ವಿಚಾರವಿಹೀನ ಕಾರ್ಯಗಳನ್ನು ಮಾಡುವಂತೆ ಮಾಡುತ್ತದೆ. ಯಾವಾಗ ವ್ಯಕ್ತಿಯ ಮನಸ್ಸು ಮಂಕಾಗುತ್ತದೆಯೋ ಆ ತಕ್ಷಣವೇ ದುರಾತ್ಮಗಳು ಆ ವ್ಯಕ್ತಿಯ ದೇಹವನ್ನು ವಶೀಕರಿಸಿಕೊಂಡು ಆ ವ್ಯಕ್ತಿಯು ದುಷ್ಕೃತ್ಯಗಳನ್ನು ಮಾಡುವಂತೆ ಮಾಡುತ್ತದೆ. ಆ ಕುಡಿತದ ಅಮಲು ಇಳಿದ ಮೇಲೆ ಆ ವ್ಯಕ್ತಿಗೆ ಜ್ಞಾನೋದಯವಾಗಿ ದಯೆಗಾಗಿ ಅಂಗಲಾಚಿಸಲು ಆರಂಭಿಸುತ್ತಾನೆ. ದೆವ್ವಗಳು ಹಿಡಿದವನಾಗಿ ಈ ತಪ್ಪು ಮಾಡಿದೆ ಎಂದು ಬೇಡಾಡುತ್ತಾನೆ.
ಪ್ರಸ್ತುತದಲ್ಲಿಯಾಗಲಿ ಭವಿಷ್ಯದಲ್ಲಿಯಾಗಲಿ ದೇವರು ನಿಮಗೆ ಕೊಟ್ಟಿರುವ ಕರೆಯನ್ನು ಅಡ್ಡಿಪಡಿಸುವ ಯಾವುದಾದರೂ ಚಟಗಳು ನಿಮ್ಮಲ್ಲಿವೆಯೇ ಎಂದು ನಿಮ್ಮ ಜೀವಿತವನ್ನು ಒಂದು ಬಾರಿ ಪರಿಶೋಧಿಸಿಕೊಳ್ಳಿ.
ಪದೇ ಪದೇ ಮಾಡುವ ಅಭ್ಯಾಸಗಳೇ ಚಟಗಳಾಗಿ ಮಾರ್ಪಡುತ್ತವೆ. ನಾವು ಪ್ರತಿದಿನ ಅವುಗಳ ಬಗ್ಗೆ ಲಕ್ಷ್ಯ ಕೊಡದೆ ಹೋದರೆ ಮುಂದೊಂದು ದಿನ ಅವೇ ನಮಗರಿವೇ ಇಲ್ಲದೆ ಹೆಮ್ಮರವಾಗಿ ಬೆಳೆದು ದುಶ್ಚಟಗಳಾಗಿ ಪರಿಣಮಿಸಿ ಬಿಡುತ್ತವೆ.
ದುಶ್ಚಟಗಳ ಬಂಧನವನ್ನು ಮುರಿಯುವುದು ಹೇಗೆ?
1. ನಿಮಗೆ ಇದಕ್ಕಾಗಿ ದೇವರ ಆತ್ಮನ ಸಹಾಯ ಬೇಕು.
" ಆದರೆ ಆ ಸಹಾಯಕನು ಅಂದರೆ ನನ್ನ ಹೆಸರಿನಲ್ಲಿ ತಂದೆಯು ಕಳುಹಿಸಿಕೊಡುವ ಪವಿತ್ರಾತ್ಮನೇ ನಿಮಗೆ ಎಲ್ಲವನ್ನು ಉಪದೇಶಿಸಿ ನಾನು ನಿಮಗೆ ಹೇಳಿದ್ದನ್ನೆಲ್ಲಾ ನಿಮ್ಮ ನೆನಪಿಗೆ ತರುವನು."(ಯೋಹಾನ14:26).
ನಮ್ಮ ಸಹಾಯಕನಾದ ಪವಿತ್ರಾತ್ಮನು ನಿಮಗೆ ಈ ದುಶ್ಚಟಗಳಿಂದ ಹೊರಬರಲು ಸಹಾಯ ಮಾಡಬಲ್ಲನು. ನೀವು ಮಾಡಬೇಕಾದ ಕಾರ್ಯವೇನೆಂದರೆ ನೀವು ಪವಿತ್ರಾತ್ಮ ಪ್ರೇರಿತರಾಗಿ ಪ್ರಾರ್ಥಿಸಬೇಕು. ಅನ್ಯ ಭಾಷೆಯಲ್ಲಿ ಪ್ರಾರ್ಥಿಸುವಂಥದ್ದು ಪವಿತ್ರಾತ್ಮನು ನಿಮ್ಮ ಪರಿಸ್ಥಿತಿ ಮೇಲೆ ಕಾರ್ಯ ಮಾಡಲು ಅನುವು ಮಾಡಿಕೊಡುತ್ತದೆ.
2. ಪ್ರಾರ್ಥನೆಯಲ್ಲಿ ಈ ಅಭ್ಯಾಸಗಳ ಬಲವನ್ನು ಮುರಿಯಬೇಕು.
"ಬೇಡಿಕೊಳ್ಳಿರಿ, ನಿಮಗೆ ದೊರೆಯುವದು; ಹುಡುಕಿರಿ, ನಿಮಗೆ ಸಿಕ್ಕುವದು; ತಟ್ಟಿರಿ, ನಿಮಗೆ ತೆರೆಯುವದು; [8] ಯಾಕಂದರೆ ಬೇಡಿಕೊಳ್ಳುವ ಪ್ರತಿಯೊಬ್ಬನು ಹೊಂದುವನು, ಹುಡುಕುವವನಿಗೆ ಸಿಕ್ಕುವದು, ತಟ್ಟುವವನಿಗೆ ತೆರೆಯುವದು."(ಮತ್ತಾಯ 7:7-8).
3. ಈ ದುಷ್ಟದ ಹಿಂದೆ ಇರುವ ಆತ್ಮವನ್ನು ಹೆಸರಿಡಿದು ಗದರಿಸಬೇಕು.
"ಹೀಗೆ ಅನೇಕ ದಿವಸ ಮಾಡಿದ್ದರಿಂದ ಪೌಲನು ಬಹಳವಾಗಿ ಬೇಸರಗೊಂಡು ಹಿಂತಿರುಗಿ ಆ ದೆವ್ವಕ್ಕೆ - ಅವಳನ್ನು ಬಿಟ್ಟುಹೋಗು ಎಂದು ಯೇಸು ಕ್ರಿಸ್ತನ ಹೆಸರಿನಲ್ಲಿ ನಿನಗೆ ಅಪ್ಪಣೆಕೊಡುತ್ತೇನೆ ಎಂದು ಹೇಳಿದನು. ಅದೇ ಗಳಿಗೆಯಲ್ಲಿಯೇ ಅದು ಬಿಟ್ಟುಹೋಯಿತು."(ಅಪೊಸ್ತಲರ ಕೃತ್ಯಗಳು 16:18).
ಅನೇಕ ಮಂದಿ ವಿಶ್ವಾಸಿಗಳು ತಮ್ಮ ದುಶ್ಚಟಗಳನ್ನು ಗೌಪ್ಯವಾಗಿಡಲು ಪ್ರಯತ್ನಿಸುತ್ತಾರೆ. ಮತ್ತೆ ಕೆಲವರು ಕನಿಷ್ಠ ಪಕ್ಷ ಅದನ್ನು ಒಪ್ಪಿ ಕೊಳ್ಳುವ ಪ್ರಯತ್ನವನ್ನಾದರೂ ಮಾಡಿ ತಮ್ಮ ಕಷ್ಟಗಳನ್ನು ತೋಡಿಕೊಳ್ಳುತ್ತಾರೆ.
4. ನಿಮ್ಮ ನೂತನ ಸ್ಥಿತಿಯನ್ನು ಅರಿಕೆ ಮಾಡಿರಿ.
ಬಾಯಿಂದ ಅರಿಕೆ ಮಾಡುವಂಥದ್ದು ಸಾಕ್ಷಾತ್ಕಾರವನ್ನು ತರುತ್ತದೆ. ನಿಮ್ಮ ಬಾಯಿಂದ ಮಾಡುವ ಅರಿಕೆಗಳನ್ನು ಬದಲಾಯಿಸಿದರೆ ನೂತನವಾದ ಪ್ರತಿಫಲವನ್ನು ನಿಮ್ಮ ಜೀವಿತ ಆಕರ್ಷಿಸುತ್ತದೆ. ನಿಮ್ಮ ಬಾಯಿ ಮಾತುಗಳಲ್ಲಿಯೇ ಜೀವನ ಮರಣ ಅಡಗಿದೆ.
"ಯಾವದನ್ನು ಸಂಕಲ್ಪಿಸಿಕೊಳ್ಳುವಿಯೋ ಅದು ನಿನಗೆ ನೆರವೇರುವದು, ಬೆಳಕು ನಿನ್ನ ಮಾರ್ಗಗಳಲ್ಲಿ ಪ್ರಕಾಶಿಸುವದು"(ಯೋಬನು 22:28)
"ಜೀವನಮರಣಗಳು ನಾಲಿಗೆಯ ವಶ, ವಚನಪ್ರಿಯರು ಅದರ ಫಲವನ್ನು ಅನುಭವಿಸುವರು."(ಜ್ಞಾನೋಕ್ತಿಗಳು 18:21).
5. ನೀವು ಯೋಚಿಸುವ ರೀತಿಯನ್ನು ಬದಲಾಯಿಸಿಕೊಳ್ಳಿ.
"ಇಹಲೋಕದ ನಡವಳಿಕೆಯನ್ನು ಅನುಸರಿಸದೆ ನೂತನಮನಸ್ಸನ್ನು ಹೊಂದಿಕೊಂಡು ಪರಲೋಕಭಾವದವರಾಗಿರಿ. ಹೀಗಾದರೆ ದೇವರ ಚಿತ್ತಕ್ಕನುಸಾರವಾದದ್ದು ಅಂದರೆ ಉತ್ತಮವಾದದ್ದೂ ಮೆಚ್ಚಿಕೆಯಾದದ್ದೂ ದೋಷವಿಲ್ಲದ್ದೂ ಯಾವ ಯಾವದೆಂದು ವಿವೇಚಿಸಿ ತಿಳುಕೊಳ್ಳುವಿರಿ."(ರೋಮಾಪುರದವರಿಗೆ 12:2)
ನಿಮ್ಮ ಯೋಚನಾ ರೀತಿಯನ್ನು ಬದಲಾಯಿಸಿಕೊಳ್ಳಲು ನಿಮ್ಮ ಮೊದಲ ಆದ್ಯತೆಯನ್ನು ನೀಡುವ ಮೂಲಕ ಈ ಕಾರ್ಯವನ್ನು ಆರಂಭಿಸಿ. ನಿಮ್ಮ ಮನಸ್ಸು ಸರಿಯಾದ ಜ್ಞಾನದಿಂದ ಬಲಗೊಳ್ಳದಿದ್ದರೆ ಅದು ನಿಮ್ಮ ಬಾಯಿ ಅರಿಕೆಗಳನ್ನು ಮತ್ತು ನಡವಳಿಕೆಯನ್ನು ಬಾಧಿಸುತ್ತದೆ. ನಿಮ್ಮ ಮನಸ್ಸನ್ನು ದೇವರ ವಾಕ್ಯದಿಂದ ನೂತನ ಪಡಿಸಿಕೊಳ್ಳಿ ಆಗ ನೀವು ಜಯ ಹೊಂದಲು ಬಲಹೊದುವಿರಿ.
6. ಹೊಸದಾದ ಹವ್ಯಾಸಗಳನ್ನು ಆಯ್ಕೆ ಮಾಡಿ ಅದರಲ್ಲಿ ಬೆಳೆಯುತ್ತಾ ಹೋಗಿರಿ.
ಕೆಲವು ಬಾರಿ ಬದಲಾವಣೆಗಳು ಒಂದೇ ರಾತ್ರಿಯಲ್ಲಿ ನಡೆದುಬಿಡುತ್ತವೆ ಆದರೆ ಕೆಲವೊಮ್ಮೆ ತುಂಬಾ ಸಮಯ ಹಿಡಿಯಬಹುದು. ಆದರೆ ನಾನು ನಿಮಗೆ ಶಿಫಾರಸು ಮಾಡುವ ಕ್ರಮಗಳನ್ನು ನಿಯಮಿತವಾಗಿ ನೀವು ಪಾಲಿಸುತ್ತಾ ಬಂದರೆ ನಿಶ್ಚಯವಾಗಿಯೂ ನಿಮ್ಮ ಜೀವಿತದಲ್ಲಿ ಬದಲಾವಣೆ ಖಂಡಿತ ಕಾಣುತ್ತೀರಿ.
" ಹಾಗೆಯೇ ಒಳ್ಳೇ ಮರಗಳೆಲ್ಲಾ ಒಳ್ಳೇ ಫಲವನ್ನು ಕೊಡುವವು; ಹುಳುಕು ಮರವು ಕೆಟ್ಟ ಫಲವನ್ನು ಕೊಡುವದು. 18ಒಳ್ಳೇ ಮರವು ಕೆಟ್ಟ ಫಲವನ್ನು ಕೊಡಲಾರದು; ಹುಳುಕು ಮರವು ಒಳ್ಳೇ ಫಲವನ್ನು ಕೊಡಲಾರದು."(ಮತ್ತಾಯ 7:17-18)
Bible Reading Plan : Act 5-9
ಪ್ರಾರ್ಥನೆಗಳು
1. ನನ್ನ ಜೀವಿತವನ್ನು ಹಾಳು ಮಾಡಲು ಯತ್ನಿಸುವ ನಾಶಕರವಾದ ದುಶ್ಚಟಗಳ ಬಲವನ್ನು ಯೇಸು ರಕ್ತದ ಮೂಲಕ ಯೇಸು ನಾಮದಲ್ಲಿ ಮುರಿಯುತ್ತೇನೆ (ಇಬ್ರಿಯ 12:1-2)
2. ನನ್ನನ್ನು ಅರ್ಧಾಯುಷ್ಯದಲ್ಲಿಯೇ ಕೊಲ್ಲಲು ಬಯಸುವ ಯಾವುದೇ ದುಶ್ಚಟಗಳಾಗಲಿ ಯೇಸು ನಾಮದಲ್ಲಿ ನಾಶವಾಗಿಹೋಗಲಿ. (ಕೀರ್ತನೆ 118:17).
3. ದೇವರ ಬಲವೇ ನನ್ನನ್ನು ಎಲ್ಲಾ ನಾಶಕರವಾದ ದುಶ್ಚಟದಿಂದ ಯೇಸುನಾಮದಲ್ಲಿ ಬಿಡಿಸು. (ರೋಮ 6:14).
4. ಪವಿತ್ರಾತ್ಮನೇ ನಿನ್ನ ಬೆಂಕಿಯನ್ನು ನನ್ನ ಪ್ರಾಣಾತ್ಮ ಶರೀರಗಳಲ್ಲಿ ಹರಿಯ ಮಾಡಿ ನನ್ನೊಳಗಿರುವ ದುರಾತ್ಮನ ಸಂಚಯಗಳನ್ನು ಯೇಸುನಾಮದಲ್ಲಿ ಹೊರದೂಡಿ(1ಕೊರಿಯಂತೆ 6:19-20)
5. ನನ್ನ ಮನಸ್ಸನ್ನು ಆವರಿಸಿರುವ ಯಾವುದೇ ದುಷ್ಟ ಬಲವಾಗಲಿ ಯೇಸು ನಾಮದಲ್ಲಿ ಮುರಿದು ಬೀಳಲಿ. (2ಕೊರಿಯಂತೆ 10:4-5).
6. ನನ್ನ ಜೀವಿತದಲ್ಲಿರುವ ಅಂಧಕಾರಕ್ಕೆ ಸಂಬಂಧಿಸಿದ ಯಾವುದೇ ಅಸ್ತಿವಾರಗಳಾಗಲಿ ಯೇಸು ನಾಮದಲ್ಲಿ ಬುಡಮೇಲಾಗಲಿ. (ಮತ್ತಾಯ 15:13).
7. ತಂದೆಯೇ ನನ್ನ ಜೀವತದ ಅಸ್ತಿವಾರಗಳನ್ನು ಯೇಸು ನಾಮದಲ್ಲಿ ದುರಸ್ತಿಪಡಿಸಿ.(ಕೀರ್ತನೆ 11:3)
8. ನನ್ನ ರಕ್ತದಲ್ಲಿರುವ ಯಾವುದೇ ಮಲಿನತೆಗಳು ಯೇಸುವಿನ ರಕ್ತವು ನನ್ನಲ್ಲಿ ಹರಿವುದರ ಮೂಲಕ ಹೊರದೂಡಲ್ಪಡಲಿ. (1ಯೋಹಾನ 1:7).
9. ನನ್ನ ಜೀವನದಲ್ಲಿರುವ ಯಾವುದೇ ನಕಾರಾತ್ಮಕ ನಡತೆಗಳು ಭಾವನೆಗಳನ್ನು ಸರಿಪಡಿಸಿಕೊಳ್ಳಲು ದೇವರ ಕೃಪೆಯನ್ನು ಯೇಸು ನಾಮದಲ್ಲಿ ನಾನು ಹೊಂದಿದ್ದೇನೆ. (ತೀತ 2:11-17).
10. ನನ್ನ ಜೀವಿತದಲ್ಲಿ ನನ್ನನ್ನು ನನ್ನ ಕರೆಯಿಂದ ಎಳೆದು ಬೀಳಿಸಲು ನನ್ನನ್ನು ದುಷ್ಟ ಚಟಗಳ ಮೂಲಕ ನಾಶನದ ಗುಂಡಿಗೆ ತಳ್ಳುವ ಎಲ್ಲಾ ದುರಾತ್ಮನ ಸರಪಳಿಯಿಂದ ಯೇಸು ನಾಮದಲ್ಲಿ ಬಿಡಿಸಿಕೊಳ್ಳುತ್ತೇನೆ. (ಗಲಾತ್ಯ 5:1)
Join our WhatsApp Channel
Most Read
● ಯಹೂದವು ಮುಂದಾಗಿ ಹೊರಡಲಿ● ಕೊಡುವ ಕೃಪೆ -3
● ಕರ್ತನ ಆಲೋಚನೆಯನ್ನು ಕೇಳಬೇಕಾದ ಅಗತ್ಯತೆ
● ಪುರುಷರು ಏಕೆ ಪತನಗೊಳ್ಳುವರು -3
● "ಆತನಿಗೆ ಎಲ್ಲವನ್ನೂ ತಿಳಿಸಿರಿ"
● ಶಾಂತಿಯು ನಮ್ಮ ಬಾಧ್ಯತೆಯಾಗಿದೆ.
● ಮತ್ತೊಬ್ಬ ಯೇಸು, ಬೇರೊಂದು ಆತ್ಮ, ಮತ್ತು ಬೇರೊಂದು ಸುವಾರ್ತೆ-1
ಅನಿಸಿಕೆಗಳು