english हिंदी मराठी తెలుగు മലയാളം தமிழ் Contact us ನಮ್ಮನ್ನು ಸಂಪರ್ಕಿಸಿ ಸ್ಪೋರ್ಟಿಫೈ ನ್ನು ಆಲಿಸಿರಿ ಸ್ಪೋರ್ಟಿಫೈ ನ್ನು ಆಲಿಸಿರಿ Download on the App StoreiOS ನಲ್ಲಿ ಆಪ್ ನ್ನು ಡೌನ್ಲೋಡ್ ಮಾಡಿ Get it on Google Play ಆಂಡ್ರಾಯ್ಡ್ ನಲ್ಲಿ ಆಪ್ ನ್ನು ಡೌನ್ಲೋಡ್ ಮಾಡಿ
 
ಲಾಗಿನ್
ಆನ್ಲೈನ್ ಮೂಲಕ ಕಾಣಿಕೆ ನೀಡಲು
ಲಾಗಿನ್
  • ಮೂಲತಾಣ
  • ಕಾರ್ಯಕ್ರಮಗಳು
  • ನೇರಪ್ರಸಾರ
  • ದೂರದರ್ಶನ
  • ನೋಹಾಟ್ಯೂಬ್
  • ಸ್ತೋತ್ರಗಳು
  • ಸುದ್ದಿಗಳು
  • ಮನ್ನಾ
  • ಪ್ರಾರ್ಥನೆಗಳು
  • ಅರಿಕೆಗಳು
  • ಕನಸುಗಳು
  • ವಿದ್ಯುನ್ಮಾನ -ಪುಸ್ತಕಗಳು
  • ವ್ಯಾಖ್ಯಾನ
  • ಶ್ರದ್ದಾಂಜಲಿ
  • ಓಯಸಿಸ್
  1. ಮೂಲತಾಣ
  2. ಅನುದಿನದ ಮನ್ನಾ
  3. ನೀವು ಆತ್ಮಿಕವಾಗಿ ಸದೃಢರಾಗಿದ್ದೀರಾ?
ಅನುದಿನದ ಮನ್ನಾ

ನೀವು ಆತ್ಮಿಕವಾಗಿ ಸದೃಢರಾಗಿದ್ದೀರಾ?

Sunday, 29th of June 2025
2 0 76
Categories : Spiritual Fitness
ನಮ್ಮಲ್ಲಿ ಬಹುತೇಕರು ನಮ್ಮ ದೈಹಿಕ ಆರೋಗ್ಯದ ಕುರಿತು ಕಾಳಜಿ ವಹಿಸುವವರಾಗಿದ್ದೇವೆ ಮತ್ತು ಅದು ಒಳ್ಳೆಯದೇ. ಅದಕ್ಕಾಗಿ ನಾವು ಜೀವಸತ್ವಗಳನ್ನು ಸೇವಿಸುತ್ತೇವೆ, ಎಲೆ ತರಕಾರಿಗಳನ್ನು ತಿನ್ನುತ್ತೇವೆ, ಹೆಚ್ಚು ನೀರು ಕುಡಿಯುತ್ತೇವೆ, ಮೆಟ್ಟಿಲುಗಳನ್ನು ಹತ್ತುತ್ತೇವೆ. ನಾವು ಅಷ್ಟೊಂದು ಉತ್ತಮವಾಗಿಲ್ಲದಿದ್ದರೂ ಸಹ, ಅದರಲ್ಲಿ ಉತ್ತಮರಾಗಲು ಮಾರ್ಗಗಳು ಮತ್ತು ವಿಧಾನಗಳನ್ನು ಹುಡುಕಿಕೊಳ್ಳುತ್ತೇವೆ.ಆದರೆ ನಾವು ನಮ್ಮ ಆತ್ಮೀಕ ಆರೋಗ್ಯವನ್ನು ಎಷ್ಟರ ಮಟ್ಟಿಗೆ ಪರಿಗಣಿಸುವವರಾಗಿದ್ದೇವೆ? 

ನಮ್ಮ ಆತ್ಮೀಕ ಸಧೃಡತೆ ಕುರಿತೇನು? ಈ ಕುರಿತು ಸ್ವಯಂ ಆತ್ಮೀಕ ಪರಿಶೋಧನೆಯನ್ನು ತೆಗೆದುಕೊಳ್ಳುವುದು ಮುಖ್ಯ 
ಆದ್ದರಿಂದ ನಾವು ಈ ಕೆಳಕಂಡಂತೆ ಆಗಿದ್ದೇವ ಎಂದು ಗಮನಿಸಿಕೊಳ್ಳಬೇಕು: 

1. ಕರ್ತನಲ್ಲಿ ಬಲವನ್ನು ಕಳೆದುಕೊಳ್ಳುವುದು 

2. ವ್ಯರ್ಥವಾಗಿ, ಲೋಕದೊಂದಿಗೆ ನಮ್ಮನ್ನು ನಾವು ಒಟ್ಟುಗೂಡಿಸಿಕೊಳ್ಳುವುದು

3. ಅನಪೇಕ್ಷಿತವಾದ ನಾವು  ಹೊರಬಾರದಂತ ಉದ್ದೇಶಿಸವಿಲ್ಲದ  ಹೊರೆಹೊತ್ತುಕೊಳ್ಳುವುದು

4. ನಮ್ಮ ಹೃದಯಗಳನ್ನು (ಆತ್ಮಗಳನ್ನು) ಅನಾರೋಗ್ಯಕರವಾದ ಪರಿಸ್ಥಿತಿಗಳಿಗೆ ಒಡ್ದುವುದು.

ಪ್ರಾಪಂಚಿಕ ಹಾಗೂ ತಿರುಳಿಲ್ಲದ ಕಟ್ಟುಕತೆಗಳನ್ನು ತಳ್ಳಿಬಿಟ್ಟು, ನಿನ್ನ ಭಕ್ತಿಯನ್ನು ವೃದ್ಧಿಮಾಡಿಕೋ.( ಆತ್ಮೀಕವಾಗಿ ಸಧೃಡನಾಗು) (1 ತಿಮೊಥೆಯ 4:7 ವರ್ಧಿತ) 

ಆತ್ಮಿಕವಾಗಿ ಸದೃಢರಾಗಲು ಆತ್ಮೀಕ ತರಬೇತಿ ಅಗತ್ಯ. ಆತ್ಮೀಕ ವಿಷಯಗಳಲ್ಲಿ ನಮ್ಮನ್ನು ನಾವು ತರಬೇತಿ ಮಾಡಿಕೊಳ್ಳಬೇಕೆಂದು ಸತ್ಯವೇದ ನಮ್ಮನ್ನು ಪ್ರೋತ್ಸಾಹಿಸುತ್ತದೆ. ಈಗ, ತರಬೇತಿಯನ್ನು ಕಾರ್ಯಕ್ರಮಕ್ಕೆ ಬಹಳ ಮೊದಲೇ ಮಾಡಲಾಗುತ್ತದೆ ಹೊರತು ಕಾರ್ಯಕ್ರಮದ ದಿನದಂದು ಅಲ್ಲ.

ಗೋಲಿಯಾತನನ್ನು ಸೋಲಿಸಲು ದಾವೀದನು ಆ ದಿನ ಬೆಳಿಗ್ಗೆ ತರಬೇತಿಯನ್ನು ಪ್ರಾರಂಭಿಸಲಿಲ್ಲ. ಆದರೆ ಇಂದು ಅನೇಕ ಕ್ರೈಸ್ತರು ಸಮಸ್ಯೆಗಳನ್ನು ಎದುರಿಸುವಾಗ ತರಬೇತಿ ಪಡೆಯುತ್ತಿದ್ದಾರೆ. ನಿಮ್ಮ ಮುಂದೆ ಸಂಗತಿಗಳು ಘಟನೆಗಳು ಜರುಗುವಾಗ, ಆ ವಿಚಾರಗಳನ್ನು ನಿಭಾಯಿಸಲು ನೀವು ಆಗಲೇ ಸಜ್ಜಾಗಿರುವಂತೆ ಮುಂಚಿತವಾಗಿಯೇ ತರಬೇತಿ ಹೊಂದಿಕೊಳ್ಳಿ. ಇದು ಬಹಳ ಮುಖ್ಯ, ಮತ್ತು ನಾನು ಆತ್ಮನ ಮೂಲಕ ನಿಮಗೆ ಬೋದಿಸುತ್ತಿರುವುದನ್ನು ನೀವು ನಿರ್ಲಕ್ಷಿಸಲು ಸಾಧ್ಯವಿಲ್ಲ.

ದೈಹಿಕ ತರಬೇತಿಯು ಸ್ವಲ್ಪ ಮೌಲ್ಯಯುತವಾಗಿದೆ (ಸ್ವಲ್ಪ ಮಟ್ಟಿಗೆ ಉಪಯುಕ್ತವಾಗಿದೆ), ಆದರೆ ದೈವಭಕ್ತಿಯೋ (ಆತ್ಮೀಕ ತರಬೇತಿ) ಎಲ್ಲದರಲ್ಲೂ ಮತ್ತು ಎಲ್ಲಾ ರೀತಿಯಲ್ಲೂ ಉಪಯುಕ್ತವಾಗಿದೆ ಮತ್ತು ಮೌಲ್ಯಯುತವಾಗಿದೆ, ಏಕೆಂದರೆ ಅದು ಪ್ರಸ್ತುತ ಜೀವನಕ್ಕೂ ಮತ್ತು ಮುಂಬರುವ ಜೀವನಕ್ಕೂ ಬೇಕಾದಾದರ ವಾಗ್ದಾನವನ್ನು ಹೊಂದಿದೆ. (1 ತಿಮೊಥೆಯ 4:8 ವರ್ಧಿತ)

ಈಗ ನೀವು ನಿಮ್ಮನ್ನು ಹೇಗೆ ತರಬೇತಿ ಮಾಡಿಕೊಳ್ಳಬೇಕು ಎಂಬುದರ ಹಂತಕ್ಕೆ  ನಿಮ್ಮನ್ನು ಕರೆದೊಯ್ಯುತ್ತೇನೆ 

1. ಆತ್ಮೀಕ ಆರೋಗ್ಯವು ಸರಿಯಾದ ಆತ್ಮೀಕ ಆಹಾರ ಸೇವನೆಯಿಂದ ಪ್ರಾರಂಭವಾಗುತ್ತದೆ 

"ಹೊಸದಾಗಿ ಹುಟ್ಟಿದ ಶಿಶುಗಳಂತಿರುವ ನೀವು ರಕ್ಷಣೆಯಲ್ಲಿ ಬೆಳೆಯುವ ಹಾಗೆ ಆತ್ಮಿಕವಾದ ಶುದ್ಧಹಾಲನ್ನು ಬಯಸಿರಿ."
(1 ಪೇತ್ರ 2:2) 

ಸರಿಯಾದ ಆಹಾರವನ್ನು ಪಡೆಯಲು, ನೀವು ದೇವರ ವಾಕ್ಯವನ್ನು ನಿಯಮಿತವಾಗಿ ಓದಬೇಕು. ಅಲ್ಲದೆ, ನೀವು ಪೂರ್ಣ ಸುವಾರ್ತೆ-ಕೇಂದ್ರಿತ ಸಭೆಗೆ ನಿಯಮಿತವಾಗಿ ಹಾಜರಾಗಬೇಕು, ಆತ್ಮೀಕವಾದ ಉತ್ತಮ ಆಹಾರವನ್ನು ಸೇವಿಸಬೇಕು. 

ಇತ್ತೀಚಿನ ದಿನಗಳಲ್ಲಿ ಅನೇಕರು ಸುವಾರ್ತೆ-ಕೇಂದ್ರಿತ ಸಭೆಗೆ ಹಾಜರಾಗುವುದನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ ಎಂಬುದನ್ನು ನಾನು ನೋಡುತ್ತೇನೆ. ಅವರಿಗೆ ಬೇಕಾದಾಗ ಅಥವಾ ಅವರಿಗೆ ಸಮಯ ಸಿಕ್ಕಾಗ ಸಭೆಗೆ ಹೋಗುತ್ತಾರೆ. ಅಂತಹವರು ದೇವರ ವಿಷಯಗಳಲ್ಲಿ ಹೆಚ್ಚು ದೂರ ಸಾಗಲು ಸಾಧ್ಯವಾಗದೆ ಆಗಾಗ್ಗೆ ಆತ್ಮೀಕವಾಗಿ ತಣ್ಣಗಾಗುತ್ತಾರೆ. ನೀವು ಆತ್ಮೀಕವಾಗಿ ಸದೃಢರಾಗಲು ಬಯಸಿದರೆ ಹೀಗೇ ಇರಬೇಡಿ. 

2. ಆತ್ಮೀಕ ಆರೋಗ್ಯಕ್ಕೆ ಸ್ಥಿರವಾದ ಶಿಸ್ತಿನ ಅಗತ್ಯವಿದೆ
"ಶಿಷ್ಯನಾಗಲು ಶಿಸ್ತು ಬೇಕು" ಎಂದು ಯಾರೋ ಒಬ್ಬರು ಹೇಳಿದ್ದಾರೆ. ನಿಮ್ಮ ಸ್ನೇಹಿತ ರಸಭರಿತವಾದ ಬರ್ಗರ್ ತಿನ್ನುವಾಗ ಯಾರೂ ಸಲಾಡ್ ತಿನ್ನಲು ಇಷ್ಟಪಡುವುದಿಲ್ಲ - ನಿಮಗೆ ಅದು ಇಷ್ಟವಾಗುವುದಿಲ್ಲ.


"ನೀವು ನನ್ನಿಂದ ಯಾವುದನ್ನು ಕಲಿತುಕೊಂಡಿರೋ, ಸ್ವೀಕರಿಸಿಸಿದಿರೋ ಕೇಳಿದಿರೋ ಮತ್ತು ನೋಡಿದಿರೋ ಅವುಗಳನ್ನು ಅಭ್ಯಾಸ ಮಾಡಿರಿ ಮತ್ತು ಅದರ ಪ್ರಕಾರ ನಿಮ್ಮ ಜೀವನ ವಿಧಾನವನ್ನು ರೂಪಿಸಿಕೊಳ್ಳಿರಿ, ಆಗ ಶಾಂತಿದಾಯಕ ದೇವರು ( ತೊಂದರೆಯಿಲ್ಲದಂತ  ಗೊಂದಲಗಳಿಲ್ಲದಂತ ಯೋಗಕ್ಷೇಮವನ್ನು ಕೊಡುವವನು) ನಿಮ್ಮೊಂದಿಗಿರುತ್ತಾನೆ. (ಫಿಲಿಪ್ಪಿ 4:9 ವರ್ಧಿತ)

ಅಭ್ಯಾಸ ಮಾಡಿರಿ 
1. ನೀವು ಕಲಿತದ್ದನ್ನು
 2. ಸ್ವೀಕರಿಸಿದ್ದು (ಹಂಚಿಕೆ) 
 3. ಕೇಳಿದದ್ದು 
 4. ಮತ್ತು ನನ್ನಲ್ಲಿ ನೋಡಿದ್ದನ್ನು 
 5. ಅದರ ಮೇಲೆ ನಿಮ್ಮ ಜೀವನ ವಿಧಾನವನ್ನು ರೂಪಿಸಿಕೊಳ್ಳಿರಿ, ಆಗ ಶಾಂತಿದಾಯಕ  (ಸಮಸ್ಯೆಯಿಲ್ಲದ, ಗೊಂದಲಗಳಿಲ್ಲದಂತ ಯೋಗಕ್ಷೇಮಕೊಡುವ)ದೇವರು ನಿಮ್ಮೊಂದಿಗಿರುತ್ತಾನೆ.

ನೀವು ಆತ್ಮೀಕವಾಗಿ ಚುರುಕಾಗಲು ಈ ಐದು ವಿಷಯಗಳನ್ನು ಆಚರಣೆಯಲ್ಲಿ ತರಬೇಕು

3.ಆತ್ಮೀಕ ಟ್ರೆಡ್‌ಮಿಲ್ 
"ಪ್ರಿಯರೇ, ನೀವಾದರೋ ನಿಮಗಿರುವ ಅತಿ ಪರಿಶುದ್ಧವಾದ ಕ್ರಿಸ್ತ ನಂಬಿಕೆಯನ್ನು ಆಧಾರವಾಗಿಟ್ಟುಕೊಂಡು ಅಭಿವೃದ್ಧಿಹೊಂದುತ್ತಾ, ಪವಿತ್ರಾತ್ಮಪ್ರೇರಿತರಾಗಿ ಪ್ರಾರ್ಥನೆ ಮಾಡಿರಿ". (ಯೂದ 20)

ನೀವು ಸಾಧ್ಯವಾದಷ್ಟು ಮತ್ತು ಎಲ್ಲಿ ಸಾಧ್ಯವೋ ಅಲ್ಲೆಲ್ಲವೂ ಅನ್ಯಭಾಷೆಗಳಲ್ಲಿ ಮಾತನಾಡಿ. ಆಗ ನಿಮ್ಮ ಆತ್ಮೀಕ ಮನುಷ್ಯನು ಚುರುಕಾಗಿ ಮತ್ತು ತೀಕ್ಷ್ಣವಾಗಿರುತ್ತಾನೆ 

Bible Reading: Psalms 40-47
ಪ್ರಾರ್ಥನೆಗಳು
ನಾನು ವಾಕ್ಯ ಕೇಳಿ ಆದರಂತೆ ನಡೆಯುವವನೇ ಹೊರತು ಮರೆತುಬಿಡುವವನಲ್ಲ. ಆದರಿಂದ ನಾನು ಊಹಿಸಿರದ ಸಕಾರಾತ್ಮಕ ಫಲಿತಾಂಶಗಳನ್ನು ನಾನುಯೇಸುನಾಮದಲ್ಲಿ ಕಾಣುತ್ತೇನೆ.


Join our WhatsApp Channel


Most Read
● ಭಯದ ಆತ್ಮ
● ದಿನ 10:40 ದಿನಗಳ ಉಪವಾಸ ಪ್ರಾರ್ಥನೆ.
● ದಿನ 01:40 ದಿನಗಳ ಉಪವಾಸ ಹಾಗೂ ಪ್ರಾರ್ಥನೆ
● ವಾಕ್ಯದಲ್ಲಿರುವ ಜ್ಞಾನ
● ಅತ್ಯುತ್ತಮ ದೇವರು ನೀಡಿದ ಸಂಪನ್ಮೂಲ
● ಅಧರ್ಮದ ಆಳ್ವಿಕೆಯ ಬಲವನ್ನು ಮುರಿಯುವುದು-II
● ದಿನ 13:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ.
ಅನಿಸಿಕೆಗಳು
ನಮ್ಮನ್ನು ಸಂಪರ್ಕಿಸಿ
Phone: +91 8356956746
+91 9137395828
WhatsApp: +91 8356956746
ಇಮೇಲ್ ವಿಳಾಸ: [email protected]
ವಿಳಾಸ :
10/15, First Floor, Behind St. Roque Grotto, Kolivery Village, Kalina, Santacruz East, Mumbai, Maharashtra, 400098
ಸ್ಪೋರ್ಟಿಫೈ ನ್ನು ಆಲಿಸಿರಿ
Download on the App Store
Get it on Google Play
JOIN MAILING LIST
EXPLORE
ಕಾರ್ಯಕ್ರಮಗಳು
ನೇರಪ್ರಸಾರ
ನೋಹಾಟ್ಯೂಬ್
ದೂರದರ್ಶನ
Donation
ಮನ್ನಾ
ಸ್ತೋತ್ರಗಳು
ಅರಿಕೆಗಳು
ಕನಸುಗಳು
ಸಂಪರ್ಕ
© 2025 Karuna Sadan, India.
➤
ಲಾಗಿನ್
ಈ ಜಾಲದಲ್ಲಿರುವ ವಿಷಯದ ಕುರಿತು ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಿಳಿಸಲು ಲೈಕ್ ಮಾಡಲು ದಯಮಾಡಿ ನಿಮ್ಮ ನೋಹ ಖಾತೆಗೆ ಲಾಗಿನ್ ಆಗಿರಿ
ಲಾಗಿನ್